Monday, June 16, 2014

ನಾವು ಹವ್ಯಕರು

(ಹವ್ಯಕರ ಜೀವನಾಧಾರ ಅಡಿಕೆ)
ನಾವು ಹವ್ಯಕರು ನಾವು ಹವ್ಯಕರು
ಪ್ರೀತಿಯ ಕರು. ಮನಸು ತೇರು ||

ಸಾಗರ, ಸಿರಸಿ ನೂರಾರ್ ಸೀಮೆ
ಉ.ಕ, ದ.ಕ ನಾನಾ ಜಮೆ
ಭಾಷೆ ಬೇರೆ, ವೇಷ ಬೇರೆ
ನಾವು ಹವ್ಯಕರು ನಾವು ಹವ್ಯಕರು ||

ತೋಟದ ಜೊತೆಗೆ ಪೌರೋಹಿತ್ಗೆ
ಪೇಟೆಲಂತೂ ಸಾಪ್ಟ್ ವೇರು
ಕೈತುಂಬ ಕೆಲಸ, ಬಾಯ್ತುಂಬಾ ಮಾತು
ನಾವು ಹವ್ಯಕರು ನಾವು ಹವ್ಯಕರು ||

ಸೊಟೈಟಿ ಸಾಲ, ತಲೆಯ ಮೇಲೆ ಶೂಲ
ಬಾಯಲ್ಲಿ ಕವಳ, ರಸಗವಳ
ಮಜ್ಜಿಗೆ ತಂಬುಳಿ, ಅಪ್ಪೆಹುಳಿ ಮೆಲ್ಲುವ
ನಾವು ಹವ್ಯಕರು ನಾವು ಹವ್ಯಕರು ||

ಯಮ್ಮೇಟಿ ಗಾಡಿ, ಅಡಿಕೆ ತೋಟ
ಮಳೆಗಾಲದಲ್ಲಿ ಕೊಳೆಯ ಕಾಟ
ಮನೆ ತುಂಬ ದನಕರು ಕಾಲ್ನಡೆ
ನಾವು ಹವ್ಯಕರು ನಾವು ಹವ್ಯಕರು ||

ಹಾಳೆಟೊಪ್ಪಿ, ಕೆಂಬಣ್ಣದ ಪಂಜಿ
ಕಟ್ ಬಾಕಿ ಸಾಲಕ್ಕೆ ಬಲು ಅಂಜಿ
ವಾರಕ್ಕೊಮ್ಮೆ ಪ್ಯಾಟೆ ಪಯಣ
ನಾವು ಹವ್ಯಕರು ನಾವು ಹವ್ಯಕರು ||


ಸತ್ಕಾರದಲ್ ಊಟ, ಮದುವೆ ಮುಂಜಿ
ಸೊಸೈಟಿಗಳಂತೂ ಬಲು ಹಿಂಜಿ
ಸಾಲಿದ್ರೂ ಸೋಲಿಲ್ಲ, ಮುಖದಲ್ಲಿ ಅಳುವಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

ಗುಡ್ಡದ ಬುಡದಲ್ಲಿ ಮನೆ, ಎದುರಲ್ಲಿ ತೋಟ
ಎಕರೆ, ಗುಂಟೆಯ ಜಮೀನು, ಮಂಗನ ಕಾಟ
ದುಡಿದಷ್ಟೂ ಕಡಿಮೆ, ಬೆವರಿಗೆ ಬೆಲೆಯಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

ಮನೆಯಲ್ಲಿಲ್ಲ ಮಕ್ಕಳು, ಊರು ಖಾಲಿ ಖಾಲಿ
ಹೆಸರಿಗೆ ಸಾಪ್ಟ್ ವೇರು, ಕೆಲಸ ಖಾಲಿಪಿಲಿ
ದೊಡ್ಡೂರಲ್ಲಿದ್ರೂ ನಮ್ಮೂರ ಮರೆತಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

ಹವ್ಯಕರೆಂದರೆ ಸುಮ್ಮನೆ ಅಲ್ಲ
ನಾವು ಯಾರಿಗೂ ಕಮ್ಮಿಯಿಲ್ಲ
ಸೋತುಕೊಂಡಿದ್ರೂ ತೋರಿಸ್ಕಳೋದಿಲ್ಲ
ನಾವು ಹವ್ಯಕರು ನಾವು ಹವ್ಯಕರು ||

***
(ಈ ಕವಿತೆಯನ್ನು ಹವ್ಯಕರ ಬಗ್ಗೆ ಸೊಖಾ ಸುಮ್ಮನೆ ಬರೆದಿದ್ದು.. ಮುಂದಿನ ದಿನಗಳಲ್ಲಿ ಈ ಕವಿತೆಯನ್ನು ಪಾರ್ಟ್ 2, ಪಾರ್ಟ್ 3 ರೂಪದಲ್ಲಿ ಹಿಗ್ಗಿಸುವ ಆಲೋಚನೆಯಿದೆ. ಅಲ್ಲೀವರೆಗೆ ಸುಧಾರಾಣಿ ಮಾಡಿಕೊಳ್ಳತಕ್ಕದ್ದು..)
(ಈ ಕವಿತೆ ಬರೆದಿದ್ದು ಶಿರಸಿಯಲ್ಲಿ ಜೂನ್ 16, 2014ರಂದು)

4 comments:

  1. ನಾವು ಹವ್ಯಕರು Ede tatti heluve Sakattaydu

    ReplyDelete
  2. ವಿನಾಯಕ ಭಾಗ್ವತರೆ.. ನಾನೂ ಹವ್ಯಕನೆಂದು ಎದೆತಟ್ಟಿ ಹೇಳುತ್ತೇನೆ..

    ReplyDelete
  3. ಕನಸು ಕಂಗಳ ಹುಡುಗ ಅವರೇ.. ಯಾರು ತೆಗೆದಿದ್ದು ಅಂತ ಗೊತ್ತಿಲ್ಲ.. ಒಂದು ವೇಳೆ ನಿಮಗೆ ಗೊತ್ತಿದ್ದರೆ ಹೇಳಿ.. ಚಿತ್ರ ಕೃಪೆ ಹೆಸರನ್ನು ಹಾಕುತ್ತೇನೆ..

    ReplyDelete