Monday, April 26, 2010

ಸಾನಿಯಾ ಕಾಲಿಟ್ಟೊಡನೆ ಪವರ್ ಕಟ್.., ಗುಟ್ಕಾ ಔಟ್..

ಅಯ್ಯೋ ಪಾಪಾ. ಮೂಗುತಿ ಸುಂದರಿಗೆ ಇಂತಹ ಪಾಡು ಬರಬಾರದಿತ್ತು. ಮೊನ್ನೆಯಷ್ಟೇ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ನನ್ನು ಮದುವೆಯಾಗಿ ಭಾರತಕ್ಕೆ ಬಾಯ್ ಬಾಯ್ ಹೇಳಿದ ಈಕೆಗೆ ಪಾಕಿಸ್ತಾನದಲ್ಲಿ ದೊರಕಿದ್ದು ಭವ್ಯ ಸ್ವಾಗತ. ಆದರೆ ಅದಾದ ಕೆಲವೇ ದಿನಗಳಲ್ಲಿ ಆಕೆಗೆ ಪಾಕಿಸ್ತಾನದ ಜನರ ಅಸಲಿ ಮುಖದ ಪರಿಚಯವಾಗತೊಡಗಿದೆ.
ಮದುವೆಯ ಔತಣಕೂಟ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನದಲ್ಲಿ ಅದ್ದೂರಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದ ಶೋಯೆಬ್ ಕುಟುಂಬಕ್ಕೆ ಮೊದಲನೆಯದಾಗಿ ಶಾಕ್ ನೀಡಿದ್ದು ಅಲ್ಲಿನ ವಿದ್ಯುತ್ ಇಲಾಖೆ. ಈ ಕಾರ್ಯಕ್ರಮದಲ್ಲಿ ಅತಿಯಾಗಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದರ ಬಗ್ಗೆ ನೋಟಿಸ್ ನೀಡಿದ ಪಾಕ್ ವಿದ್ಯುತ್ ಮಂಡಳಿ ಶೋಯೆಬ್ ಮನೆಯ `ಪವರ್ ಕಟ್' ಮಾಡಿಬಿಟ್ಟಿತು. ಇದರಿಂದ ಪಾಪಾ ಸಾನಿಯಾಗೆ ಅದೆಷ್ಟು ನೋವಾಗಿರಬೇಡ..?
ಪಾಕಿಸ್ತಾನಿಯನನ್ನು ಮನಮೆಚ್ಚಿ ಮದುವೆಯಾಗಿದ್ದಾಗಿದೆ. ಇನ್ನು ಆತನ ಜೊತೆ ಪಾಕಿಸ್ತಾನದಲ್ಲಿ ಆರಾಮವಾಗಿ ಬದುಕಿ ಜೀವಿಸಬಹುದು ಎಂದು ಕನಸು ಕಂಡಿದ್ದ ಆಕೆಗೆ ಈ ಪವರ್ ಕಟ್ ಅಲ್ಲಿನ ವಾಸ್ತವತೆಯ ಪರಿಚಯ ಮಾಡಿಕೊಟ್ಟಿರಬೇಕು.
ಪಾಪ ಇಷ್ಟೇ ಆಗಿದ್ದರೆ ಚೆನ್ನಾಗಿತ್ತು. ಈಗ ಪಾಕ್ನಲ್ಲಿ ಅವಳ ಹೆಸರಿನಲ್ಲಿ ಗುಟ್ಕಾವೊಂದು ತಯಾರಾಗಿ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಆ ಗುಟ್ಕಾದ ಹೆಸರು `ಸಾನಿಯಾ ಭಾಭಿ '. ಅದರ ಜೊತೆಗೆ `72% ಎಕ್ಸ್ಟ್ರಾ ಸ್ಟ್ರಾಂಗ್' ಎಂಬ ಅಡಿಬರಹ ಬೇರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಆ ಗುಟ್ಕಾ ಕಂಪನಿ ಆ ಗುಟ್ಕಾ ಪ್ಯಾಕ್ ಮೇಲೆ `ತಾಜಗೀ ಬರ್ ಹೋ ಅಂಗ್ ಅಂಗ್.... ಜಬ್ ಹೋ ಸಾನಿಯಾ ಭಾಬಿ ಗುಟ್ಕಾ ಸಂಗ್' ಎಂಬ ಬರಹವನ್ನೂ ಮುದ್ರಿಸಿಬಿಟ್ಟಿದೆ.
ಇದರಿಂದ ಬಹಳ ಪರಿಶಾನ್ ಆಗಿರುವ ಸಾನಿಯಾ ಯಾಕಾದರೂ ಭಾರತ ಬಿಟ್ಟೆನೋ ಎಂದು ಕನವರಿಸುತ್ತಿರಬಹುದು...

Thursday, April 22, 2010

ಮಧ್ಯಮ ಶೂರರು...

ಟೆಸ್ಟ್ ಕ್ರಿಕೆಟ್ಗೆ ಅದರದೇ ಆದ ಖದರಿದೆ. ಎಷ್ಟೇ ಹೊಸ ನಮೂನೆಯ ಕ್ರಿಕೆಟ್ ಆಟಗಳು ಬಂದರೂ ಟೆಸ್ಟ್ನ ವೈಭವ ಎಲ್ಲೂ ಸಿಗಲಾರದು. ಟೆಸ್ಟ್ ಆಡುವ ಆಟಗಾರರೂ ಅಷ್ಟೇ. ಕ್ರಿಕೆಟ್ ಪುಸ್ತಕದಲ್ಲಿ ದಾಖಲಾಗಿರುವ ಎಲ್ಲ ರೀತಿಯ ಆಟದ ಶಾಟ್ಗಳನ್ನೂ ಪ್ರದರ್ಶಿಸಿ  ನೋಡುಗರಿಗೆ ಹಬ್ಬದೂಟವನ್ನು ನೀಡುತ್ತಾರೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದ ಟೆಸ್ಟ್ ಕ್ರಿಕೆಟ್ ಹೊಸತನವನ್ನೂ ಹೊಸ ಆಟಗಾರರನ್ನೂ ಹೊಂದಿ ಉತ್ತಮ ರೀತಿಯಲ್ಲಿ ಬದಲಾಗುತ್ತಾ ಬಂದಿದೆ. ಬ್ರಾಡಮನ್, ಗೂಚ್, ಹ್ಯಾಡ್ಲಿ, ಕಪಿಲ್ ದೇವ್, ಸೋಬರ್ರ್ಸ್ ತಹ ಆಟಗಾರರನ್ನು ಕಂಡ ಟೆಸ್ಟ್ ಲಾರಾ, ಸಚಿನ್, ಹೇಡನ್ರಂತಹ ಆಟಗಾರರನ್ನೂ ಕಂಡಿದೆ.
ಇಂದಿನ ದಿನಮಾನದಲ್ಲಿ ಟೆಸ್ಟ್ ಸಹ ಹೊಡೆಬಡೆಯ ಆಟಕ್ಕೆ ಮಾರುಹೋಗುತ್ತಿದೆ. ಸೆಹವಾಗ್, ಯುವರಾಜ್ರಂತಹ ಆಟಗಾರರು ಒಂದು ದಿನದ ಪಂದ್ಯದಂತೆ ಟೆಸ್ಟನಲ್ಲೂ ಹೊಡೆ ಬಡಿ ಆಟ ಆಡಲು ಪ್ರಾರಂಭಿಸಿದ್ದಾರೆ. ಕ್ಲಾಸಿಕ್ ಹಾಗೂ ಸುಂದರ ಆಟದ ಗೂಡು ಎಂದು ಹೆಸರಾಗಿದ್ದ ಟೆಸ್ಟ್ ಈಗ ಅಬ್ಬರದ ಆಟವಾಗಿ ಬದಲಾಗುತ್ತಿದೆ. ಇಂತಹ ಬದಲಾಗುತ್ತಿರುವ ಟೆಸ್ಟ್ ಆಟದಲ್ಲಿ ಕೆಲವರು ಆ ಆಟಗಾರರಿದ್ದಾರೆ. ಹಳೆಯ ಶೈಲಿ, ಬ್ಯಾಟ್ ಬೀಸುವಿಕೆಯನ್ನು ಹೊಂದಿರುವಂತಹ ಆಟಗಾರರು. ದ್ರಾವಿಡ್, ಲಕ್ಷ್ಮಣ್, ಕಾಲಿಸ್, ಪಾಂಟಿಂಗ್, ಚಂದ್ರಪಾಲ್, ಕಾಲಿಂಗ್ವುಡ್ ಮುಂತಾದವರೇ ಈ ಆಟಗಾರರು.
ಇವರ ಶೈಲಿ ಅದೇ ಹಳೆಯ ರೀತಿಯದು. ಬ್ಯಾಟಿಂಗಿಗೆ ಬಂದರಂತೂ ಮಿನಿಮಂ 100 ಗ್ಯಾರಂಟಿ. ಇವರ ಆಟವನ್ನು ನೋಡುವುದೆಂದರೆ ಸುಂದರ ಸಿನೆಮಾ ವೀಕ್ಷಿಸಿದಂತೆ. ಆಟವೂ ಅಷ್ಟೆ ಗಂಭೀರ ಹಾಗೂ ವೈಭವೋಪೇತ. ಈ ಆಟಗಾರರು ಸಾಮಾನ್ಯವಾಗಿ ಕ್ರೀಸಿಗೆ ಬರುವ ವೇಳೆಗೆ ತಂಡದಲ್ಲಿ 3-4 ವಿಕೆಟ್ಗಳು ಬಿದ್ದಿರುತ್ತವೆ. ತಂಡದ ಪಾಲಿಗೆ ಆಪದ್ಭಾಂದವರಂತೆ ಬರುವ ಇವರು ಸೋಲಿನತ್ತ ಸಾಗುವ ತಂಡವನ್ನು ಗೆಲುವಿನೆಡೆಗೆ ತಂದು ನಿಲ್ಲಿಸುತ್ತಾರೆ.
ಈ ಆಟಗಾರರು ಸೆಹವಾಗ್, ಅಫ್ರೀದಿಯಂತೆ ಗುಡುಗುವುದಿಲ್ಲ. ಬದಲಾಗಿ ಕ್ರೀಸಿಗೆ ಕಚ್ಚಿಕೊಂಡು ನಿಂತುಬಿಡುತ್ತಾರೆ. ಬೌಂಡರಿಗಳ ಮೇಲೆ ಬೌಂಡರಿ ಬಾರಿಸುತ್ತಾರೆ. ಬೌಲರ್ಗಳ ಬೆವರಿಳಿಸುತ್ತಾರೆ. ತಮ್ಮ ವಿಶಿಷ್ಟ ಬ್ಯಾಟಿಂಗ್ನಿಂದ ತಂಡದ ಭವಿಷ್ಯವನ್ನೇ ಬದಲಾಯಿಸುತ್ತಾರೆ.
ಸಾಮಾನ್ಯವಾಗಿ ಟೆಸ್ಟ್ ಆಡುವ ತಂಡಗಳಲ್ಲೆಲ್ಲ ಇಂತಹ ಒಬ್ಬಿಬ್ಬರು ಆಟಗರರು ಇದ್ದೇ ಇರುತ್ತಾರೆ. ದಕ್ಷಿಣ ಆಫ್ರಿಕಾದ ಪಾಲಿಗೆ ಕಾಲಿಸ್, ಆಮ್ಲಾ, ಶ್ರೀಲಂಕಾ ಪಾಲಿಗೆ ಜಯವರ್ಧನೆ, ಆಸ್ಟ್ರೇಲಿಯಾದಲ್ಲಿ ಪಾಂಟಿಂಗ್, ಮೈಕ್ ಹಸ್ಸಿ, ಕ್ಲಾರ್ಕ, ಇಂಗ್ಲೆಂಡ್ನಲ್ಲಿ ಕಾಲಿಂಗ್ವುಡ್, ಪಾಕಿಸ್ತಾನದಲ್ಲಿ ಮೊಹಮ್ಮದ್ ಯುಸುಫ್ ಹಾಗೂ ಮಿಸ್ಬಾ ಉಲ್ ಹಕ್, ವೆಸ್ಟ್ ಇಂಡಿಸ್ ಪಾಲಿಗೆ ಚಂದ್ರಪಾಲ್ ಹಾಗೂ ಭಾರತದ ಪಾಲಿಗೆ ದಿ ವಾಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಇಂತಹ ಆಟವನ್ನು ಆಡುತ್ತಾರೆ. ತಂಡದ ಹಾಗೂ ದೇಶದ ಪಾಲಿಗೆ ಇವರು ಬಹಳ ನಂಬಿಕಸ್ತ ಬ್ಯಾಟ್ಸ್ಮನ್ನುಗಳು. ಯಾರೇ ಔಟಾಗಲಿ, ಎಸ್ಟೇ ವಿಕೆಟ್ ಬೀಳಲಿ. ಇವರಿದ್ದಾರಲ್ಲ ಎಂಬ ಭಾವನೆ ಎಲ್ಲರ ಮನದಲ್ಲಿಯೂ ಅಚ್ಚೊತ್ತಿರುತ್ತದೆ. ಇವರು ಎಷ್ಟೇ ಬಾಲ್ಗಳನ್ನು ಹಾಳು ಮಾಡಲಿ, ಎಷ್ಟೇ ಕುಟುಕಲಿ ಅದರ ಹಿಂದೆ ಗೆಲುವಿನ ಉದ್ದೇಶ ಇದ್ದೇ ಇರುತ್ತದೆ.
ಈ ಬ್ಯಾಟ್ಸ್ಮನ್ಗಳ ಎದುರು ಬಾಲ್ ಮಾಡುವುದು ಎಂತಹ ಯಶಸ್ವಿ ಬೌಲರ್ಗೇ ಆದರೂ ಅದು ಬಹಳ ಕಷ್ಟ. ಯಾವುದೇ ರೀತಿಯ ಬೌಲ್ ಹಾಕಲಿ ಇವರದ್ದು ಒಂದೇ ಧ್ಯಾನ ಅದನ್ನು ಕಟ್ ಮಾಡುವುದು ಹಾಗೂ ಅದೇ ರೀತಿ ಬೌಂಡರಿ ಗಳಿಸುವುದು. ದಿನಗಟ್ಟಲೇ ಕ್ರೀಸಿನಲ್ಲಿ ನಿಂತುಬಿಡುವ ಇವರು ಬೌಲರ್ಗಳ ಸಹನೆಯನ್ನು ಪರೀಕ್ಷೆ ಮಾಡುತ್ತಾರೆ. ಆದರೆ ಬೌಲರ್ ಎಷ್ಟೇ ಒದ್ದಾಡಿದರೂ ಇವರ ವಿಕೆಟ್ ಪಡೆಯುವುದು ಮಾತ್ರ ಬಹಳ ಕಷ್ಟ.
ಭಾರತದ ಟೆಸ್ಟ್ ತಂಡವನ್ನೇ ತೆಗೆದುಕೊಂಡರೆ ಇಲ್ಲಿ ಸೆಹವಾಗ್ರನ್ನು ಬೇಗನೆ ಔಟ್ ಮಾಡಬಹುದು, ಸಚಿನ್ನ್ನು ಬೇಗನೆ ಔಟ್ ಮಾಡಬಹುದು, ಇನ್ನುಳಿದಂತೆ ಗಂಭೀರ್ ಯುವರಾಜ್, ಧೋನಿ ಅಂತವರನ್ನೂ ಔಟ್ ಮಾಡಬಹುದು ಆದರೆ ದ್ರಾವಿಡ್ ಹಾಗೂ ಲಕ್ಷ್ಮಣ್ ಒಮ್ಮೆ ಕ್ರೀಸಿನಲ್ಲಿ ಝಾಂಡಾ ಊರಿದರೆಂದರೆ ಊಹು ಯಾರೆಂದರೆ ಯಾರಬಳಿಯೂ ಅವರನ್ನು ಔಟ್ ಮಾಡಲು ಸಾಧ್ಯವೇ ಇಲ್ಲ. ಶತಕಗಳನ್ನು ಹೊಡೆದ ನಂತರವೇ ಅವರು ವಿಕೆಟ್ ಒಪ್ಪಿಸುವುದು. ಅಂತಹ ಆಟದ ವೈಖರಿ ಅವರದ್ದು. ತೀರಾ ಇತ್ತೀಚೆಗೆ ಈ ಇಬ್ಬರೂ ಆಟಗಾರರೂ ತಂಡದಲ್ಲಿ ಆಡದಿದ್ದರಿಂದ ದಕ್ಷಿಣ ಆಫ್ರಿಕಾದ ವಿರುದ್ಧ ಹೀನಾಯವಾಗಿ ಸೋತಿದ್ದು ನೆನಪಿನಲ್ಲಿ ಇರಬಹುದು. ಕೊನೆಗೆ ಮರು ಪಂದ್ಯದಲ್ಲಿ ಲಕ್ಷ್ಮಣ್ ಶತಕ ಹೊಡೆದು ಮ್ಯಾಚ್ ಗೆದ್ದಿದ್ದು ಯಾವಾಗಲೂ ನೆನಪಿರುತ್ತದೆ.
ಟೆಸ್ಟ್ ಇತಿಹಾಸವನ್ನು ಕೆದಕಿದಾಗ ಇಂತಹ ಆಟಗಾರರು ಬಹಳಷ್ಟು ಜನರಿದ್ದರು. ತಮ್ಮ ಮನಮೋಹಕ ಆಟದಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದ ಇವರು ಮ್ಯಾಚುಗಳನ್ನೂ ಸಲೀಸಾಗಿ ಗೆದ್ದುಬಿಡುತ್ತಿದ್ದರು. ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ಬ್ರಾಡಮನ್ ಹಾಗೆಯೇ ಬ್ರಿಯಾನ್ ಲಾರಾ, ಇಂಜಮಾಮ್-ಉಲ್-ಹಕ್, ಅಜರ್ುನ ರಣತುಂಗಾ, ಸ್ಟೀವ್ ವಾ ಇಂತವರೆಲ್ಲ ಹೊಡೆ ಬಡಿ ಆಟಕ್ಕಿಂತ ಭಿನ್ನವಾದ ಕ್ರಿಕೆಟ್ ಆಡಿ ಜನಮಾನಸದಲ್ಲಿ ಅಜರಾಮರವಾಗಿ ಉಳಿದವರು. ಎಷ್ಟೇ ಸೆಹವಾಗ್, ಅಫ್ರೀದಿ, ಪೀಟರ್ಸನ್, ಸ್ಮಿತ್ರಂತಹ ಆಟಗಾರರು ಬಂದರೂ ಟೆಸ್ಟ್ ಅಂದಕೂಡಲೇ ಇವರು ಪದೆ ಪದೆ ನೆನಪಾಗುತ್ತಾರೆ. ಬಹುಶಃ ಇಂತಹ ಆಟಗಾರರಿಲ್ಲದ ಟೆಸ್ಟ್ ಕ್ರಿಕೆಟ್ನ್ನು ನೋಡಿದರೆ ಮೊದಲಿನ ಖುಷಿ ದಕ್ಕಲಾರದು.


Thursday, April 15, 2010

ಒಂದಷ್ಟು ಹನಿಗಳು...

ಹಿಂದೆ ಯಾವಾಗಲೋ ಬರೆದ ಒಂದೆರಡು ಹನಿ ಕವನಗಳನ್ನು ನಿಮ್ಮ ಮುಂದೆ ಬರೆದು ಇಡುತ್ತಿದ್ದೇನೆ..


9)ಪ್ರೀತಿಗೆ ಕಾರಣ

ಪ್ರಿಯಾ,
ನೀನು 
ನಿನ್ನ ಕೈಯಲ್ಲಿ 
ಫಳ ಫಳನೆ 
ಹೊಳೆಯುತ್ತಿರುವ 
ಚಿನ್ನದ ನೆಕ್ಲೆಸ್ ನಷ್ಟೇ 
ಸುಂದರ......!!!!


10)ಧನ್ವಂತರಿ...!!!

ಧನ್ವಂತರಿ ಧನ್ವಂತರಿ
ರೋಗಗಳೆಲ್ಲ ಓಡಿಹೊಯಿತ್ರಿ..
ಆದ್ರೂ ಮೈ ಮರಿಬ್ಯಾದ್ರಿ,
ಆಗಾಗ್ ಇಲ್ಲಿಗೆ ಬರ್ತಾ ಇರ್ರಿ...!!!

Monday, April 12, 2010

ಅರ್ಜಿಗಿರಿ



ಅರ್ಜಿ ಗಿರಿ

ನಿಮಗೆ ನಮ್ಮೂರಿನಲ್ಲಿರುವ ಅನೇಕ ವಿಶೇಷತೆಗಳ ಬಗ್ಗೆ ಹೇಳಲೇಬೇಕು. ಹಲವು ವೈಶಿಷ್ಟ್ಯ ಹಾಗೂ ವೈಚಿತ್ರ್ಯಗಳು ಇಲ್ಲಿ ತುಂಬಿ ಕಣ್ಣಿಗೆ ರಾಚುತ್ತವೆಯಾದರೂ ಎದ್ದು ಕಾಣುವುದು ಇಲ್ಲಿನ `ಅರ್ಜಿ ಗಿರಿ'.
ಹಲೋ ಒಂದು ನಿಮಿಷ. ನೀವೇನು ಅರ್ಜಿ ಗಿರಿ ಹೆಸರು ಕೇಳಿದ ಕೂಡ್ಲೇ ಇದೇನೋ ಗೂಂಡಾಗಿರಿ, ಗಾಂಧಿಗಿರಿ ಇಂಥವುಗಳ ಸಾಲಿಗೆ ಸೇರುವಂಥದ್ದು ಅಂದ್ಕೊಂಡ್ರಾ? ಅಲ್ಲ.. ಈ ಅರ್ಜಿ ಗಿರಿ ಇವೆಲ್ಲಕ್ಕಿಂತ ಡಿಫರೆಂಟು..
ನಮ್ಮೂರಿನ ಈ ಅರ್ಜಿ ಗಿರಿಯ ಬಗ್ಗೆ ಹೇಳಬೇಕಂದ್ರೆ ರಾಮಾಯಣದ ಹಾಗೇ ಅರ್ಜಿಯಾಯಣ ಎಂಬ ಇನ್ನೊಂದು ಭಾರಿ ಗೃಂಥವನ್ನೆ ಬರೆಯಬೇಕಾಗಲೂ ಬಹುದು. ಅಷ್ಟು ದೊಡ್ಡದು ಅದು..
ಹಿಂದೆ ಎಲ್ಲೋ ಎರಡು ಶತಮಾನಗಳ ಹಿಂದೆ ಊರಿಗೆ ರಸ್ತೆ ಮಾಡಿಸುವ ಮಹದುದ್ದೇಶದಿಂದ ಯಾವುದೋ ಹಿರಿ ತಲೆ ಬ್ರಿಟೀಷ್ ಸಕರ್ಾರಕ್ಕೆ ಕೊಟ್ಟ ಅರ್ಜಿಯಿಂದಲೇ ಈ ಅರ್ಜಿ ಗಿರಿಕಾಂಡ ಪ್ರಾರಂಭವಾಗುತ್ತದೆ. ಈಗಂತೂ ಈ ಅರ್ಜಿ ಗಿರಿಗೆ ಕೈಹಾಕದ ವ್ಯಕ್ತಿಯೇ ಇಲ್ಲ ನಮ್ಮೂರಲ್ಲಿ ಅಂದರೆ ಅದರ ತೀವ್ರಗತಿ ನಿಮಗರ್ಥವಾದೀತು.!!
ಅರ್ಜಿ ಗಿರಿಎಂದರೆ ಬೇರೇನೂ ಅಲ್ಲ.  ಊರಿಗೆ ಯಾವುದೇ ಕೆಲಸವಾಗಬೇಕಾದರಾಗಲಿ, ಕಾರ್ಯಗಳು ಆಗಬೇಕಾದರಾಗಲೀ, ಯಾವುದೋ ಜನಪ್ರತಿನಿಧಿಗೋ, ಅಧಿಕಾರಿಗೋ, ಜಿಲ್ಲಾ ಕಲೆಕ್ಟರಿಗೊ ಗ್ರಾಮ ಪಂಚಾಯತಿ ಮೇಂಬರ್ರಿಗೋ ಅರ್ಜಿ ಗುಜರಾಯಿಸೋದೆ ಆಗಿದೆ.
ಇವರು ಉಳಿದೆಲ್ಲ ವಿಷಯಗಳಲ್ಲಿ ಹೇಗೆಯೆ ಇರಲಿ, ಅರ್ಜಿ ಗಿರಿಯ ವಿಷಯ ಬಂದಾಗ ಪಕ್ಕಾ ಅಹಿಂಸಾ ವೃತಸ್ಥರು. ಮಂದಗಾಮಿಗಳು.. ಇಲ್ಲಿಯವರಿಗೆ ಏನು ಗೊತ್ತಿಲ್ಲದಿದ್ದರೂ ಯಾರ್ಯಾರಿಗೆ ಅರ್ಜಿ ಕೊಟ್ಟರೆ ಹೇಗೆ ಎಂಬ ಸುದ್ದಿ ಗೊತ್ತಿದೆ. ವಿದ್ಯುತ್ ತೊಂದರೆಗೆ ಸೆಕ್ಷನ್ ಆಫೀಸರು, ಬಸ್ಸಿಗೆ ಡಿಪೊ ಮ್ಯಾನೇಜರು, ರಸ್ತೆಗೆ ರಾಜಕಾರಣಿ, ಬರ-ನೆರೆ ಬಂದರೆ ಕಂದಾಯ ಇಲಾಖೆ ಈ ಮುಂತಾದ ಕೆಲವು ವಿಭಾಗದವರಿಗೆ ನಮ್ಮೂರಿಗರ ಹ್ಯಾಂಡ್ ರೈಟಿಂಗಿನ ಪರಿಚಯ ಅದ್ಯಾವಾಗಲೂ ಆಗಿ ಹೋಗಿದೆಯಂತೆ.
ನಿಮಗೆ ಗೊತ್ತಿಲ್ಲ. ಯಾವುದೆ ಊರಿನಲ್ಲಾದರೂ ಎಲ್ಲರಿಗೂ ಸಂಬಂದಿಸಿದಂತೆ ಏನಾದರೊಂದು ಕಾಮನ್ ಸುದ್ದಿ ಇರಲಿಕ್ಕಿಲ್ಲ. ಆದರೆ ಇಲ್ಲಿ ತೊಂಭತ್ತರ ಹಿರಿಯರಾದಿಯಾಗಿ ಒಂಭತ್ತರ ಕಿರಿಯರವರೆಗೂ ಅರ್ಜಿಯೆಂಬ ಕಾಮನ್ ಸಂಗತಿ ಗೊತ್ತೇ ಇದ್ದು ಬಿಟ್ಟಿದೆ. ಪರೀಕ್ಷಿಸಿ ನೋಡಿ ಬೇಕಾದರೆ, ಇಲ್ಲಿಯವರೆಗೂ ನಮ್ಮೂರಿಗರು ಕೊಟ್ಟ ಅರ್ಜಿಗಳನ್ನು ಲೆಖ್ಖ ಹಾಕಿದರೆ, ಗಿನ್ನಿಸ್ಸು ಬುಕ್ಕಿನಲ್ಲಿ ಮೊದಲ ಸ್ಥಾನ ಯಾರ ಪೈಪೋಟಿಯೂ ಇಲ್ಲದೆಯೇ ಇಲ್ಲಿಗರಿಗೆ ದಕ್ಕಿಬಿಡುತ್ತದೆ.
ಇಲ್ಲಿ ಯಾರಾದರೂ ಹಿರಿಯರು ಕಿರಿಯರ ಬಳಿ `ತಮಾ, ಪೆನ್ನು  ಪಟ್ಟಿ ತಗೊಂಡು ಬಾ' ಅಂದಕೂಡಲೇ ಊರಿಗರು ಯಾವುದಕ್ಕೋ ಅರ್ಜಿ ಬಿತ್ತು ಎಂದುಕೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಕಿರಿಯರು `ಶುರುವಾಯ್ತು ಅರ್ಜಿ ಕಾಟ' ಎಂದು ಗೊಣಗಲು ಮೊದಲಾಗುತ್ತಾರೆ. ಹಾಗೆಯೇ ಇಲ್ಲಿಯ ಕಿರಿಯರು, ಮಕ್ಕಳು ಸಂಜೆಯ ವೇಳೆ ಬಾಯಿಪಾಠ ಹೇಳಿ ಹೋಂ ವರ್ಕರ್  ಮಾಡದಿದ್ದರೂ ಅರ್ಜಿ ಬರೆಯುವ ಕೆಲಸ ಮಾಡೆಮಾಡುತ್ತವೆ.
ಇಲ್ಲಿಯ ಹೆಂಗಸರೂ ಕೂಡ ಅರ್ಜಿ ಗಿರಿಯ ವಿಷಯದಲ್ಲಿ ಹಿಂದೆ ಬಿದ್ದವರಲ್ಲ. ಅಂತ-ಇಂತ ಯಾವುದೇ ಸ್ತ್ರೀವಾದಿ ಸಂಘಟನೆಗಳು ಇಲ್ಲಿ ಇಲ್ಲದಿದ್ದರೂ ಅವರು ಅರ್ಜಿ ಕೊಡುವ ಕೈಂಕರ್ಯ ಮರೆತಿಲ್ಲ. ಇಲ್ಲಿ ಪುರುಷರು ಅರ್ಜಿ ಕೊಡುವ ಇಲಾಖೆಗಳೇ ಬೇರೆ.. ಅದೇ ರೀತಿ ಸ್ತ್ರೀಯರ ರೂಟೇ ಬೇರೆ. ಪುರುಷರದ್ದು ಬಹುತೇಕ ವ್ಯಾವಹಾರಿಕವಾದರೆ ಸ್ತ್ರೀಮಣಿಗಳು ಸ್ಥಳಿಯ ಶಾಲೆಗೆ, ಆಸ್ಪತ್ರೆಗೆ, ಪತ್ರಿಕೆಗಳಿಗೆಲ್ಲ ಅರ್ಜಿ  ಕೊಡುವ ಕಾರ್ಯವನ್ನು ಮದುವೆ ಮನೆಯಲ್ಲಿ ಕೇರಿ ಕರೆಯುವ ಹಾಗೇ ಹಲವರ ಜೊತೆಗೆ ಸೇರಿ ಕೈಗೊಳ್ಳುತ್ತಾರೆ.
ನಮ್ಮೂರಲ್ಲಿ ಅರ್ಜಿ ಕೊಡುವವರದ್ದು ಒಂದು ಗುಂಪಾದರೆ ಅರ್ಜಿ  ಜಡಿಯುವವರದ್ದು ಮತ್ತೊಂದು ಗುಂಪು. ಇಲ್ಲಿ ಅರ್ಜಿ ಕೊಡುವವರು ಸಮಾಜಸೇವಕರು. ಸ್ವಾರಥರು ಹಾಗೂ ಲೋಕ ಕಲ್ಯಾಣಾರ್ಥವಾಗಿ ಕೆಲಸ ಮಾಡುವಂಥವರು. ಆದರೆ ಈ ಅರ್ಜಿ  ಜಡಿಯುವವರು ಇದ್ದಾರಲ್ಲ ಇವರು ಮಾತ್ರ ಪಕ್ಕಾ ಅಡ್ಡ ಪಿಕರ್ಿಗಳು. ಇವರಿಗೆ ಮಾಡಲು ಬೇರೆ ಕೆಲಸವೇ ಇಲ್ಲವೇನೋ ಎಂಬಂತೆ ಇದ್ದು, ಆಗಾಗ ಏನಾದರೂ ಅಡ್ಡ ಅರ್ಜಿ ಗಳನ್ನು ಜಡಿಯುತ್ತಿರುತ್ತಾರೆ. ಇವರ ಕೆಲಸ ಮತ್ತೇನಲ್ಲ, ಏನಾದರೂ ಆಗುವಂಥ ಕೆಲಸಗಳಿದ್ದರೆ ಅವು ಆಗದಂತೆ ಮಾಡಿ ಮಜಾ ತೆಗೆದುಕೊಳ್ಳುವುದು.  ಯಾವುದೇ ರಸ್ತೆ ಕಾರ್ಯಗಳಿದ್ದರೆ ಅವನ್ನು ತಡೆಯುವುದು. ಪಕ್ಕದ ಮನೆಯ ಹಸುಗೂಸು ಅಳುತ್ತದೆಂದು ಶಬ್ದಮಾಲಿನ್ಯದ ಕಾರಣ ನೀಡಿ ಗ್ರಾಮ ಪಂಚಾಯ್ತಿಗೆ ತಳ್ಳಿ ಅರ್ಜಿ ಕೊಡುವುದು. ಇಂಥದ್ದೇ ಈ ಮಂದಿಗಳು ನಡೆಸುವ ಪುಂಡರಪೂಟಿಗೆ ಉದಾಹರಣೆಗಳು.
ನಮ್ಮೂರಿನ ಈ ಅರ್ಜಿ ಗಿರಿಯ ಸುದ್ದಿ ಕೇಳಿದ ಯಾವುದೋ ಬುದ್ಧಿಜೀವಿ ಈ ಬಗ್ಗೆ ಅಧ್ಯಯನ ನಡೆಸಲು ಬರುವವರಿದ್ದಾರೆಂಬ ಗಾಳಿ ಸುದ್ದಿ ಬಂದಿದೆ. ಅವರು ಹಾಗೆ ಬಂದರೆಂದರೆ ಖಂಡಿತ ಒಂದು ಪಿ.ಎಚ್.ಡಿ ಸಿಕ್ಕೇ ಸಿಗುತ್ತದೆಂಬುದು ಎಲ್ಲರ ವಾದ.
ನಮ್ಮೂರಿನಲ್ಲಿರುವ ಸೂರಕ್ಕಿ ಸೀತಾರಾಮ ಅಲಿಯಾಸ್ ಶೀತೂಭಾವ, ಉಳಿದ ಎಲ್ಲ ಕೆಲಸಗಳಲ್ಲಿ ಹಿಂದುಳಿದಿದ್ದರೂ ಅರ್ಜಿ  ಕೊಡುವುದರಲ್ಲಿ ಫೇಮಸ್ಸು. ಆದರೆ ಈತ ಇಲ್ಲಿಯವರೆಗೆ ಕೊಟ್ಟ ಅರ್ಜಿ ಯಿಂದ ಒಂದೇ ಒಂದು ಉಪಯೋಗವೂ ಆಗದೆ ಇರುವುದು ವಿಧಿ ವಿಲಾಸವೋ, ದುರಂತವೂ ಗೊತ್ತಾಗದು. ಅಲ್ಲದೇ ಈ ಶೀತೂಭಾವ ಅರ್ಜಿ ಯ ಕುರಿತಾಗಿ `ಅರ್ಜಿ ನಿನ್ನೆ ಇಂದು ನಾಳೆ' ಎಂಬ ಮಹಾನ್ ಪುಸ್ತಕವೊಂದನ್ನೂ ಬರೆಯುತ್ತಿದ್ದಾರೆ. ಇದು ಅರ್ಜಿ ಟ್ರೇನಿಂಗ್ ಕೋರ್ಸ್ಗೆ ಒಳ್ಳೆಯ ಹ್ಯಾಂಡ್ಬುಕ್ ಆದೀತು ಎಂಬುದು ಎಲ್ಲರ ಅನಿಸಿಕೆ. ಇನ್ನೂ ವಿಚಿತ್ರವೆಂದರೆ ಬೆಂಗಳೂರಿನ ಯಾವುದೋ ದೇಸಾಯಿ, ಬಾಬೂ ಮುಂತಾದ ನಿದರ್ೇಶಕರು `ನಮ್ಮ ಪ್ರೀತಿಯ ಅರ್ಜಿ ' ಎಂಬ ಚಲನಚಿತ್ರ ಮಾಡಲು ಮುಂದಾಗಿದ್ದಾರಂತೆ.
ಇಷ್ಟಕ್ಕೇ ನಿಲ್ಲುವುದಿಲ್ಲ ಈ ಅರ್ಜಿ ಗಿರಿಯ ಪ್ರತಾಪ.. ಪ್ರತಿ ಸಲ ಚುನಾವಣೆ ಬಂದಾಗ ಊರೂರಿಗೆ ತೆರಳುವ ಜನಪ್ರತಿನಿಧಿಗಳು ಈ ಊರಿಗೆ ಬರುವುದೇ ಇಲ್ಲ. ಯಾಕಂದರೆ ನಮ್ಮೂರಿನಲ್ಲಿ ತುಂಬಾ ಅರ್ಜಿ ಗಿರಿಯ ಘಾಟಿದೆಯಂತೆ. ಇದು ನಮ್ಮೂರಿನ ಅರ್ಜಿ ಗಿರಿಯ ಪುಂಡರಪೂಟು. ಈಗಿನ ನಮ್ಮೂರಿನಲ್ಲಿ ಅದರ ಘಮಲು ನೋಡಿದರೆ ಕನಿಷ್ಟ ಒಂದೆರಡು ಶತಮಾನಗಳಷ್ಟಾದರೂ ಗಟ್ಟಿಯಾಗಿ ಇಲ್ಲಿ ಅರ್ಜಿ ಗಿರಿ ನಿಲ್ಲಬಹುದೆಂಬ ಗುಮಾನಿಯಿದೆ.
ಅಂದ ಹಾಗೆ ಲೇಟೆಸ್ಟಾದ ಬ್ರೆಕಿಂಗ್ ನ್ಯೂಸ್ ಏನಂದ್ರೆ ನಮ್ಮೂರಿಗರು ಅರ್ಜಿ ಗಿರಿಯ ಟ್ರೇನಿಂಗ್ ಕೋರ್ಸನ್ನು ಪ್ರಾರಂಭಿಸಲು ಮುಂದಾಗಿದ್ದಾರಂತೆ. ಆ ಟ್ರೇನಿಂಗು ಪ್ರಾಕ್ಟಿಕಲ್ಲು ಹಾಗೂ ಥಿಯರಿ ಎರಡೂ ಪ್ರಕಾರಗಳಲ್ಲಿ ಇದೆಯಂತೆ ಎಂಬುದು ಅಚ್ಚರಿ. ಜೊತೆಗೆ ಪೋಸ್ಟಲ್ ಕೋರ್ಸ್ ಕೂಡ  ಇದೆ ಎಂಬುದು ಹುಬ್ಬೇರುವ ಸಂಗತಿ.
ಆದರೆ ನಮ್ಮೂರಿನ ಅರ್ಜಿ ಗಿರಿಯಲ್ಲಿ ದೊಡ್ಡದೊಂದು ದೋಷವಿರುವುದು ನಾಡಿನ ಹೆಮ್ಮೆಯ ಟಿವಿಯೊಂದರ ಲೈವ್ ಆಪರೇಷನ್ನಿನಿಂದ ಬೆಳಕಿಗೆ ಬಂದು ಎಲ್ಲರ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ನಮ್ಮೂರಿಗರು ಬರೆಯುತ್ತಿರುವ ಅರ್ಜಿ ಗಳಲ್ಲಿ ಸರಿಯಾದ ರೀತಿ, ನೀತಿ, ರಿವಾಜು ಇಲ್ಲದಿರುವುದು ಆ ಆಪರೇಷನ್ ಟೀವಿಯಿಂದ ತಿಳಿದುಬಂದಿದೆ. ಅಂದರೆ, ನಮ್ಮೂರಿಗರು ಕೊಡುವ ಅರ್ಜಿಯ ಫಾರಮೆಟು ಉಲ್ಟಾ-ಪಲ್ಟಾ ಆಗಿರುತ್ತದಂತೆ. ಅಲ್ಲದೇ ಅರ್ಜಿ ಗೆ ಉದ್ದನೆಯ ಹಾಳೆಯೂ ಬಳಕೆಯಾಗುತ್ತಿಲ್ಲವಂತೆ.... ಎಂಬುದನ್ನು ನಾನು ಯಾವುದೋ ಇಲಾಖೆಯ ಮುಖ್ಯಸ್ಥರ ಮೂಲಕ ತಿಳಿದೆ.
ನನಗೂ ಒಮ್ಮೆ ಈ ಅರ್ಜಿ ಗಿರಿಯ ರೋಗ ಹಿಡಿದಿತ್ತು.. ಯಾರ್ಯಾರೋ ಕೆಳಿಕೊಂಡರೆಂದು ಅರ್ಜಿ  ಬರೆದೂ ಬರೆದೂ ಬೆವರು ಸುರಿಸಿದ್ದೆ.,. ಕೊನೆಗೊಮ್ಮೆ ಅರ್ಜಿ ಬರೆಯುವುದರ ವಿರುದ್ಧ ಒಂದು ದಿನ ಟ್ಯೂಬ್ಲೈಟ್ ಬೆಳಕಿನಲ್ಲಿ ಇದ್ದಕ್ಕಿದ್ದಂತೆ ಜ್ಞಾನೋದಯವಾದ ಮೇಲೆ ಬಿಟ್ಟುಬಿಟ್ಟೆ.!!!
ಇಂತಿಪ್ಪ ಅರ್ಜಿ ಗಿರಿ ನಿಮ್ಮಲ್ಲಿಗೂ ಬಂದು ಕಾಲಿಟ್ಟೀತು.. ಅಂದಹಾಗೆ ಅಜಿ ಬರೆಯುವುದಕ್ಕೆ ನೀವೂ ಉತ್ಸುಕರಾಗಿದ್ದೀರಾ? ನಿಮಗೆ ಅರ್ಜಿ ಬರೆಯಲು ಟ್ರೇನಿಂಗು ಬೇಕಾ? ಹಾಗಾದ್ರೆ ಯಾಕೆ ತಡ? ಈಗಲೇ ಅರ್ಜಿ ಗಿರಿಯ ಪೋಸ್ಟಲ್ ಟ್ರೇನಿಂಗ್ ಕೋರ್ಸ್ಗೆ ಸೇರ್ರಲಾ...

-ವಿನಯ್ ಹೆಗಡೆ

ಸಾನಿಯಾಗೊಂದು ಆತ್ಮೀಯ ಪತ್ರ


ಆತ್ಮೀಯ ಸಾನಿಯಾ..,
ನಿಜ, ಭಾರತದ ಟೆನ್ನಿಸ್ ಪಾಲಿಗೆ ನೀನು ಹೊಸತೊಂದು ಆಶಾಕಿರಣ. ಭಾರತೀಯ ನಾರಿಯರು ಕ್ರೀಡೆಯಲ್ಲಿ ಯಾವಾಗಲೂ ಹಿಂದುಳಿದವರು ಎಂಬ ಮಾತು ಹೆಚ್ಚಾಗಿ ಪ್ರಚಲಿತವಾಗಿದ್ದ ಕಾಲದಲ್ಲಿಯೇ ನೀನು ಹೊಸ ತಾರೆಯಾಗಿ ಉದಯಿಸಿದ್ದು. ಕ್ರಿಕೆಟ್ನ ಸವರ್ಾಧಿಕಾರದ ನಡುವೆ ಸೊರಗಿ ಹೋಗುತ್ತಿದ್ದ ಭಾರತೀಯರ ವಿವಿಧ ಕ್ರೀಡಾ ಪ್ರತಿಭೆಯನ್ನು ಎತ್ತಿಹಿಡಿದವರಲ್ಲಿ ನೀನೂ ಒಬ್ಬಾಕೆ. ಇಲ್ಲಿನ ಎಲ್ಲ ವರ್ಗದವರೂ ಕ್ರಿಕೆಟ್ ಭಜನೆ ಮಾಡುತ್ತಿದ್ದ ಕಾಲದಲ್ಲಿ ಟೆನ್ನಿಸ್ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿ ಕೋಟ್ಯಾಂತರ ಮಂದಿಯನ್ನು ಅಭಿಮಾನಿಗಳನ್ನಾಗಿ ಮಾಡಿಕೊಂಡಾಕೆ ನೀನು.
ನಿಜಕ್ಕೂ ನೀನು ಟೆನ್ನಿಸ್ಲೋಕಕ್ಕೆ ಕಾಲಿಟ್ಟಾಗ ಭಾರತದ ಟೆನ್ನಿಸ್ ಸೊರಗಿತ್ತು. ಎಲ್ಲೋ ಒಂದೆರಡು ಮಹಿಳೆಯರು ಆಗಾಗ ಗೆದ್ದು ದೀಪಾವಳಿಯ ಪಟಾಕಿಯಂತೆ ಸುದ್ದಿ ಮಾಡುತ್ತಿದ್ದರು. ಆದರೆ ಯಾರೂ ನಿನ್ನಷ್ಟು ಹೆಸರು ಮಾಡಲಿಲ್ಲ. ನಿಜಕ್ಕೂ ನೀನು ಟೆನ್ನಿಸ್ನಲ್ಲಿ ಉತ್ತಮ ಸಾಧಕಿ ಹೌದು. ಬಂದ ಹೊಸತರಲ್ಲಿಯೇ ಟೆನ್ನಿಸ್ ಲೋಕದಲ್ಲಿ ಭಾರೀ ಹೆಸರು ಮಾಡಿದ ಆಟಗಾತರ್ಿಯರಿಗೆ ಚಕ್ಕನೆ ಸೋಲುಣಿಸಿ ಶಾಕ್ ಕೊಟ್ಟವಳು ನೀನು. ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್, ಸನ್ಫೀಸ್ಟ್, ಮಿಯಾಮಿ ಓಪನ್ಗಳಂತಹ ಟೆನ್ನಿಸ್ನ ಹೆಸರಾಂತ ಟೂನರ್ಿಗಳಲ್ಲಿ ಭಾರತೀಯರಲ್ಲಿ ಇದುವರೆಗೆ ಯಾರೂ ಏರದಂತಹ ಎತ್ತರವನ್ನು ತಲುಪಿ ಸುದ್ದಿ ಮಾಡಿದಾಕೆ ನೀನು. ಅಷ್ಟೇ ಅಲ್ಲ ನೀನು ಮಾರಿಯಾ ಶರಪೋವಾ, ಸೆರೇನಾ ವಿಲಿಯಮ್ಸ್ರಂತಹ ಆಟಗಾತರ್ಿಯರ ಎದುರು ಕಾದಾಡಿ ಹೆಸರು ಮಾಡಿದವಳು.
ಕ್ರೀಡೆಗಳಲ್ಲಿ ಹಾಗೂ ಟೆನ್ನಿಸ್ನಲ್ಲಿ ಭಾರತೀಯ ನಾರಿಯರ ನಾಯಕಿಯಾಗಿ ನೀನು ರೂಪುಗೊಂಡಾಗ ಎಲ್ಲರೂ ಬಹಳ ಸಂತಸ ಪಟ್ಟಿದ್ದರು. ಹದಿ ಹರೆಯದಲ್ಲಿಯೇ ಟೆನ್ನಿಸ್ನಲ್ಲಿ ಒಳ್ಳೆಯ ಸಾಧನೆ ಮಾಡಿದಾಗ ಇಡೀ ಭಾರತೀಯರೆ ನಿನ್ನ ಬೆನ್ನಿಗೆ ನಿಂತು ಸಂತಸ ಪಟ್ಟರು. ನೂರರ ಆಚೀಚೆ ನಿನ್ನ ರ್ಯಾಂಕಿಂಗ್ಗಳಿದ್ದಾಗ ಈಕೆ ರ್ಯಾಂಕಿಂಗ್ನಲ್ಲಿ ಇನ್ನೂ ಮೇಲೆ ಬರಲಿ ಎಂದುಕೊಂಡರು. ನೀನು 100ರಿಂದ 75ಕ್ಕೆ ಬಂದೆ, 50ಕ್ಕೆ ಬಂದೆ ಕೊನೆಗೆ 40ರ ಆಸುಪಾಸಿಗೂ ಬಂದೆ. ಆಗೆಲ್ಲಾ ನಿನ್ನಷ್ಟೆ ಸಂತಸ ಪಟ್ಟವರು ನಮ್ಮ ಭಾರತೀಯರು.
ನೀನು ಸೋತಾಗ ತಾವೇ ಸೋತೆವೇನೋ ಎಂಬಷ್ಟು ದುಃಖಪಟ್ಟರು. `ಮುಂದಿನ ಟೂನರ್ಿಮೆಂಟ್ನಲ್ಲಿ ಸಾನಿಯಾ ಗೆಲ್ತಾಳೆ' ಅಂತ ತಮ್ಮಲ್ಲಿಯೇ ಸಮಾಧಾನ ಪಟ್ಟುಕೊಂಡರು. ನೀನು ಹೋದ ಟೂನರ್ಿಗೆ ತಾವೂ ಹೋಗಿ ನಿನ್ನನ್ನು ಹುರಿದುಂಬಿಸಿ ಸಂತಸಪಟ್ಟ ಮಂದಿ ಇನ್ನೂ ಬಹಳಷ್ಟು. 
ಇನ್ನು ಇಲ್ಲಿನ ಯುವಕರಂತೂ ನಿನ್ನ ಮೂಗುತಿ ಮುಖಕ್ಕೆ ಮರುಳಾಗಿ ಕನಸುಗಳ ಮೂಟೆಯನ್ನೇ ಕಟ್ಟಿಕೊಂಡರು. ಆಗೊಮ್ಮೆ ಪ್ರತಿದಿನ ಪೇಪರ್ಗಳಲ್ಲಿ ಬರುತ್ತಿದ್ದ ನಿನ್ನ ಪೋಟೋಗಳನ್ನು ಬೆಳಗಾಗುತ್ತಲೇ ನೋಡಿ ಆನಂದಪಟ್ಟರು. ಪೇಪರ್ನಲ್ಲಿ ಬರುತ್ತಿದ್ದ ನಿನ್ನ ಭಾವಚಿತ್ರಗಳನ್ನು ಕತ್ತರಿಸಿ ಇಟ್ಟುಕೊಂಡವರು ಹಲವರು. ಇನ್ನು ಕೆಲವರು ಇದ್ದರೆ ಇಂತವಳೊಬ್ಬಳು ಗೆಳತಿ ಇರಬೇಕು ಎಂದು ಕೊಂಡರು. ಬೆಳಗಿನ ಜಾವದ ಕನಸಿನಲ್ಲಿ ನಿನ್ನ ಕಂಡು ಖುಷಿಪಟ್ಟರು. ಸದಾ ಸಾನಿಯಾ ಸಾನಿಯಾ ಎಂದು ಕನವರಿಸಿದರು. ನಿನ್ನ ಮೋಡಿ ಅದೆಷ್ಟಿತ್ತೆಂದರೆ ಹಲವು ಭಾರತೀಯ ಹುಡುಗಿಯರೂ ನಿನ್ನ ಹಾಗೇ ಮೂಗುತಿ ಹಾಕಿಕೊಂಡು `ಮೂಗುತಿ ಸುಂದರಿ'ಯರಾಗಲಾರಂಭಿಸಿದರು. ಕಾಲೇಜುಗಳಲ್ಲಿ ನಿನ್ನಂತೆ ಕಾಣುವ ಹುಡುಗಿಯರನ್ನು `ಸಾನಿಯಾ' ಎಂಬ ಅಡ್ಡಹೆಸರನ್ನಿಟ್ಟು ಕರೆಯುವ ಪರಿಪಾಠವೂ ಬೆಳೆಯಿತು.
ಅದೆಂತಹ ಕ್ರೇಜé್ ಹುಟ್ಟುಹಾಕಿಬಿಟ್ಟಿದ್ದೀಯಾ ಮಾರಾಯ್ತಿ ನೀನು..? ಸುಂದರವಾಗಿರುವವರು ಬಾಲಿವುಡ್ಡಿನ ಹೀರೋಯಿನ್ಗಳು ಮಾತ್ರ ಎಂಬ ಮಾತೊಂದಿತ್ತು. ಹೆಸರಾಂತ ಜಾಹಿರಾತು ಕಂಪನಿಗಳೆಲ್ಲ ಅವರ ಬೆನ್ನಿಗೆ ಬಿದ್ದುಬಿಟ್ಟಿದ್ದರು. ಆದರೆ ನೀನು ಬಂದೆ ನೋಡು. ಆಮೇಲೆ ಎಲ್ಲವೂ ಬದಲಾಗಿಬಿಟ್ಟವು. ಅಷ್ಟೇ ಅಲ್ಲ ಸಾಲು ಸಾಲು ಜಾಹಿರಾತು ಕಂಪನಿಗಳು ನಿನ್ನ ಮನೆಯ ಬಾಗಿಲು ಬಡಿದರು. ಜಾಹಿರಾತು ಕಂಪನಿಗಳು ನಿನ್ನ ಮನೆಯ ಬಾಗಿಲು ಬಡಿದ ಹಾಗೆಲ್ಲಾ ನೀನು ಬದಲಾಗಲಾರಂಭಿಸಿದೆ. ಉತ್ತಮವಾಗಿ ಆಟವಾಡುತ್ತಿದ್ದ ನೀನು ಯಾರ್ಯಾರ ಕೈಯ್ಯಲ್ಲಿಯೋ ಸೋಲಲಾರಂಭಿಸಿದೆ.
ಉತ್ತಮ ಪ್ರತಿಭೆ ಇದ್ದ ನೀನು ಹಣ ಗಳಿಸಿದಂತೆಲ್ಲ ಕೇವಲ ಸುದ್ದಿ ಮಾಡುವ ವ್ಯಕ್ತಿಯಾದೆ. ನೀನು ಟೆನಿಸ್ ಮ್ಯಾಚ್ಗಳಲ್ಲಿ ಗೆಲ್ಲದೆ ಹೋದರೂ ನಿನ್ನ ಬಗ್ಗೆ ಬರೀ ಸುದ್ದಿಗಳಷ್ಟೇ ಬರಲಾರಂಭಿಸಿತು. ಅದಕ್ಕೂ ಮಿಗಿಲಾಗಿ ನೀನು ಮೊಣಕಾಲು ನೋವು, ಕೈ ನೋವು ಅಂತೆಲ್ಲ ನೆಪಗಳನ್ನು ಹೇಳಿ ಟೂನರ್ಿಯಿಂದ ಹಿಂದೆ ಸರಿದೆ. ಓಲಂಪಿಕ್, ಏಷ್ಯನ್ ಗೇಮ್ಸ್ಗಳಂತಹ ಕ್ರೀಡೆಗಳಲ್ಲಿ ನಿನ್ನ ಮೇಲೆ ನಿರೀಕ್ಷೆ ಇಟ್ಟವರೆಲ್ಲ ನೀನು ಸೋತ ಕೂಡಲೇ ನಿರಾಶರಾದರು. ಬಹುಶಃ ಆಗಲೇ ಇರಬೇಕು ಭಾರತೀಯರಿಗೆ ನಿನ್ನ ಮೇಲೆ ಮನಸ್ಸು ಮುರಿಯಲು.
ಇಷ್ಟರ ನಡುವೆಯೂ ನೀನು ಆಗೊಮ್ಮೆ ಈಗೊಮ್ಮೆ ಕನ್ನಡದ ಕುವರ ಮಹೇಶ್ ಭೂಪತಿ ಜೊತೆ ಮಿಕ್ಸೆಡ್ ಡಬಲ್ಸ್ ಆಡಿ ಗೆಲ್ತಾ ಇದ್ಯಲ್ಲಾ ಆಗಲೂ ನಾವು ಕುತೂಹಲದಿಂದ ನೋಡಿದ್ದಿದೆ. ಮತ್ತೆ ಗೆಲ್ತಾಳೆ ಅಂತ ಖುಷಿಪಟ್ಟಿದ್ದಿದೆ. ಆದರೆ ಆಗ ನೀನು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಅಂತಾಗಿಬಿಟ್ಟೆ. ಆಗ ಅಂದುಕೊಂಡೆವು ನಾವು `ಇವಳು ಇಷ್ಟೇ' ಅಂತ. ಅಲ್ಲಿಂದೀಚೆಗೆ ನೀನು ಗೆದ್ದರೂ ಸೋತರೂ ಭಾರತೀಯರು ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ.
ಈ ನಡುವೆ ಅದ್ಯಾರೋ ಇದ್ದಾನಲ್ಲ ನಿನ್ನ ಬಾಲ್ಯದ ಗೆಳೆಯ ಸೋಹ್ರಾಬ್ ಅವನ ಜೊತೆ ಮದುವೆ ಆಗ್ತೀಯಾ ಅನ್ನುವ ಸುದ್ದಿ ಬಂತು. ಕೆಲವರು ಖುಷಿ ಪಟ್ಟರೆ ಹಲವರು ಹೊಟ್ಟೆಉರಿ ಮಾಡಿಕೊಂಡರು. ಬಹು ದಿನಗಳ ಗೆಳತಿ ಯಾರನ್ನೋ ಮದುವೆ ಆಗಿ ಹೋಗ್ತಾ ಇದ್ದಾಳೆ ಎಂದು ಬೇಸರ ಪಟ್ಟುಕೊಂಡರು. ತಮ್ಮದೆ ಕುಟುಂಬದ ಹುಡುಗಿಯೊಬ್ಬಳು ಮದುವೆ ಆಗಿ ಹೋಗ್ತಾಳೆ ಅನ್ನುವಷ್ಟು ನೊಂದುಕೊಂಡರು.
ಆದರೆ ನೀನು ಆತನ ಜೊತೆ ಮದುವೆಯನ್ನು ಮುರಿದುಕೊಂಡೆ ನೋಡು ಆಗ ಮಾತ್ರ ನಿನ್ನ ಮೇಲೆ ಬಹಳ ಬೇಸರ ಹುಟ್ಟಿಬಿಟ್ಟಿತು. ಸ್ವಾರ್ಥಕ್ಕೋಸ್ಕರ ಬಾಲ್ಯದ ಮಿತ್ರನ ಜೊತೆ ಮದುವೆ ಆಗುವುದನ್ನು ತಪ್ಪಿಸಕೊಂಡೆ ನೋಡು ಆಗ ಬಹುತೇಕರು ನಿನ್ನನ್ನು ವಿರೋಧಿಸಿದರು. ಇವಳಿಗೂ ಬಾಲಿವುಡ್ಡಿನ ರೋಗ ಹಿಡಿಯಿತು, ದಿನಕ್ಕೊಬ್ಬರಂತೆ ಹುಡುಗರನ್ನು ಬದಲಾಯಿಸುವ ರೋಗ ಇವಳಿಗೆ ತಗುಲಿತು ಎಂದು ಹಲವರು ಮಾತಾಡಿಕೊಂಡರು. ದಿನಕ್ಕೊಬ್ಬ ಬಾಯ್ಫ್ರೆಂಡ್ಗಳನ್ನು ಬದಲಾಯಿಸುವ ಕರೀನಾ, ಕತ್ರಿನಾರ ಸಾಲಿಗೆ ನಿನ್ನನ್ನು ಸೇರಿಸಲಾರಂಭಿಸಿದರು.
ಅಷ್ಟೇ ಆದರೆ ಒಳ್ಳೆಯದಿತ್ತೇನೋ. ಆದರೆ ನೀನು ಪಾಕ್ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿದೆ ನೋಡು ಆಗ ಮಾತ್ರ ನಿನ್ನ ಮೇಲಿದ್ದ ಅಲ್ಪಸ್ವಲ್ಪ ಅಭಿಮಾನವೂ ಹೊರಟುಹೋಯಿತು. ಇಡಿಯ ಭಾರತೀಯ ಜನರು ನಿನ್ನ ಈ ಒಂದು ನಿಧರ್ಾರದಿಂದ ನೊಂದು ಕೊಂಡರು. ಅಷ್ಟೇ ಅಲ್ಲ ಅವರು ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲ ಕಣೆ, ಆ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ ನಿನಗೆ ಯಾವಾಗ ಪರಿಚಯವಾದ..? ಯಾವಾಗ ನಿನ್ನ ಜೊತೆ ಮಾತಾಡಿದ..? ಯಾವಾಗ ಪ್ರೇಮ ನಿವೇದನೆ ಮಾಡಿದ..? ಸಕಲ ಭಾರತೀಯ ಯುವಕರು ಅದೇ ಕುತೂಹಲದಲ್ಲಿದ್ದಾರೆ.
ನೀನು ಮಲ್ಲಿಕ್ ಜೊತೆ ಮದುವೆ ಆಗುವ ವಿಷಯವನ್ನು ಜಾಹಿರು ಪಡಿಸಿದಾಗ ಬಹಳಷ್ಟು ಮಂದಿ ಅದನ್ನು ನಂಬಲೇ ಇಲ್ಲ. ಭಾರತೀಯ ಹುಡುಗಿ ಓರ್ವ ಪಾಕಿಸ್ತಾನಿಯನ್ನು ಮದುವೆ ಆಗುತ್ತಾಳೆ ಎಂಬುದನ್ನು ಕನಸು ಮನಸಿನಲ್ಲಿಯೂ ಆಲೋಚಿಸದ ಇಲ್ಲಿನ ಜನರು ನೀನಂದುದನ್ನು ಒಂದು ಸುಳ್ಳು ಸುದ್ದಿ ಇರಬೇಕು ಅಂದುಕೊಂಡರು. ಆದರೆ ನೀನು ಆ ಬಗ್ಗೆ ಬಹಳ ಗಂಭೀರವಾಗಿ ಮಾತನಾಡಿದಾಗಲೇ ಎಲ್ಲರಿಗೂ ತಿಳಿದಿದ್ದು ಇದೊಂದು ನಿಜವಾದ ಸುದ್ದಿ ಎಂದು.
ಆ ಸುದ್ದಿಯನ್ನು ಪ್ರಕಟಿಸಿದ ನಂತರ ನೀನು ನೀಡುತ್ತಿರುವ ಹಲವು ಹೇಳಿಕೆಗಳು ಎಲ್ಲರನ್ನು ಬೆರಗುಗೊಳಿಸುತ್ತಿದೆ. ಮದುವೆ ಆಗಿ ನೀನು ದುಬೈನಲ್ಲಿ ವಾಸಿಸುತ್ತೀಯಂತೆ, ಪಾಕಿಸ್ತಾನಿಯನನ್ನು ಮದುವೆ ಆದ ಮೇಲೂ ನೀನು ಭಾರತದ ಪರವಾಗಿಯೇ ಆಟ ಆಡುತ್ತೀಯಂತೆ ಇದು ನಿಜವಾ..? ಭಾರತೀಯರು ಈ ಮಾತುಗಳನ್ನು ನಂಬಬಹುದಾ.? ಅರ್ಥವಾಗುತ್ತಿಲ್ಲ.
ಇಷ್ಟೆಲ್ಲ ಹೇಳಿದ ಮೇಲೆ ನಿನಗೆ ಇನ್ನೂ ಕೆಲವು ಮಾತುಗಳನ್ನು ಹೇಳೋಣ ಅನ್ನಿಸುತ್ತಿದೆ. ನಿಜಕ್ಕೂ ನೀನು ಪಾಕಿಸ್ತಾನಿಯನ್ನು ಮದುವೆ ಆಗ್ತಾ ಇದ್ದೀಯಲ್ಲಾ ನಿನಗೆ ಭಾರತೀಯರು ಯಾರೂ ಸಿಗಲಿಲ್ಲವಾ? ಭಾರತದಲ್ಲಿ ಸುಮಾರು 7-8 ಕೋಟಿ ಮುಸ್ಲಿಮ್ ಯುವಕರಿದ್ದರಲ್ಲ ಅವರ್ಯಾರೂ ನಿನಗೆ ಇಷ್ಟವಾಗಲಿಲ್ಲವಾ? ಮದುವೆ ಆಗಲು ನಿನಗೆ ಪಾಕಿಸ್ತಾನಿಯೇ ಬೇಕಾದನಾ? ಭಾರತೀಯಳಾಗಿದ್ದುಕೊಂಡು ಪಾಕಿಯನ್ನು ನೀನು ಮದುವೆ ಆಗುವುದು ಎಷ್ಟು ಸರಿ? ನೀನು ಮದುವೆ ವಿಷಯ ಬಹಿರಂಗಪಡಿಸಿದ ನಂತರ ಏನಾಯ್ತು ಗೊತ್ತಲ್ಲ. ಭಾರತೀಯರು ನಿನ್ನ ಪ್ರತಿಕೃತಿ ದಹನ ಮಾಡಿದರು. ವಿರೊಧಿಸಿದರು.. ಪ್ರತಿಭಟನೆ ಮಾಡಿದರು. ಆದರೆ ಅದೇ ಹೊತ್ತಿನಲ್ಲಿ ಪಾಕಿಯರೇನು ಮಾಡಿದರು ಗೊತ್ತಲ್ಲ. ಕುಣಿದರು, ಕುಪ್ಪಳಿಸಿದರು. ಹಬ್ಬ ಮಾಡಿರು. ಪಾಪ ಇಲ್ಲಿನ ಯುವಕರು ಬೇಸರ ಮಾಡಿಕೊಂಡರು. ಹೋಗ್ಲಿ ಬಿಡು.. ಇಲ್ಲಿಯ ಜನರು ನಿನ್ನನ್ನು ಸಂತಸದಿಂದ ಬೀಳ್ಕೊಡುತ್ತಾರೆ. ಖುಷಿಯಿಂದ ನಿನ್ನ ಕಳಿಸಿಕೊಡುತ್ತಾರೆ.
ಆದರೆ ನಿನ್ನಲ್ಲಿ ಒಂದೇ ಕೋರಿಕೆ. ಶೋಯೆಬ್ ಜೊತೆ ಮದುವೆ ಎಂಬ ಸುದ್ದಿಯನ್ನು ನೀನಾಗಲೇ ತಿಳಿಸಿಬಿಟ್ಟಿದ್ದೀಯಾ. ಯಾವುದೇ ಕಾರಣಕ್ಕೂ ಮತ್ತೆ ಆ ಸುದ್ದಿಯನ್ನು ಸುಳ್ಳಾಗಿಸಬೇಡ. ಸೊಹ್ರಾಬ್ಗೆ ಕೈ ಕೊಟ್ಟಂತೆ ಆತನಿಗೂ ಕೈ ಕೊಡಬೇಡ. ನೀನು ಭಾರತದ ಪರವಾಗಿ ಆಡದಿದ್ದರೂ ಬೇಜಾರಿಲ್ಲ. ಒಳ್ಳೆಯ ರೀತಿಯ ಜೀವನವನ್ನು ನಡೆಸಿಕೊಂಡು ಹೋಗು ಸಾಕು. ಆದರೆ ಒಂದು ಮಾತ್ರ ಸತ್ಯ. ನಿನಗೆ ಇದುವರೆಗಿದ್ದ ಕೋಟ್ಯಾಂತರ ಅಭಿಮಾನಿಗಳ ಆದರ, ಪ್ರೀತಿ ಎಲ್ಲ ನಿಂತುಹೋಗಿದೆ. ಮತ್ತೆ ನಿನ್ನನ್ನು ಅವರು ಅಭಿಮಾನದಿಂದ ನೋಡಲಾರರು. ಅಲ್ಲಾದರೂ ನೀನು ಉತ್ತಮವಾಗಿ ಬದುಕು. ಇನ್ನೂ ಹೆಚ್ಚಿನ ಸಾಧನೆ ಮಾಡು ಎಂಬುದೆ ಎಲ್ಲರ ಹಾರೈಕೆ.

ಇಂತಿ ನಿನ್ನ ಅಭಿಮಾನಿ
ಭಾರತೀಯ ಯುವಕ

Sunday, April 11, 2010

ಗೆಳತಿ ಯಾಕ್ಹಿಗೆ...?




ಗೆಳತಿ ಯಾಕ್ಹಿಗೆ...?

ಗೆಳತಿ ಯಾಕ್ಹಿಗೆ...?
ಮೊದ-ಮೊದಲು ಈ ಭೂರಮೆಯ 
ಚುಂಬಿಸಿ ತೃಪ್ತಿಪಡಿಸಿದ 
ವರ್ಷಧಾರೆಯಲ್ಲೊಮ್ದು ಕಂಪಿದೆಯಲ್ಲ,..!!

ಮಾಮರದ ತಳಿರೆಲೆಗಳ ಚಿಗುರ 
ನಡು-ನಡುವಲ್ಲಿ ಕುಳಿತು 
ಕಾಣದ ಕನಸನ್ನು ಕಟ್ಟುತ್ತ
ಉಲಿವ ಕೋಗಿಲೆಯ ಕಂಠದೊದಳಲ್ಲೂ 
ಝಾಲಕಿದೆಯಲ್ಲಾ...!!!

ಹಾಗೆ ಸಾಗಿದಾಗ.......
ಏನನ್ನೂ ಬಯಸದಿದ್ದ ಈ 
ಭಾವದಾಳ-ಬಾಳ ಬದುಕಲ್ಲಿ 
ನೀ-ನೆಂಬ ಭೃಂಗವೆದೆಯ 
ಗೂಡಿದೆ ಕಿಂಡಿಕೊರೆದು, ರಂಧ್ರ ಮಾಡಿ 
ನಿನ್ನ ನೆನಪನ್ನೇ ಭದ್ರವಾಗಿಸಿದೆಯಲ್ಲ...!!!

ಗೆಳತಿ ಯಾಕ್ಹಿಗೆ...?
ನಿನ್ನ ನೆನಪು-ಒನಪು 
ನನ್ನ ಸೆಳೆಯುತ್ತಿದೆಯಲ್ಲಾ...!!!