ಆತ್ಮೀಯ ಸಾನಿಯಾ..,
ನಿಜ, ಭಾರತದ ಟೆನ್ನಿಸ್ ಪಾಲಿಗೆ ನೀನು ಹೊಸತೊಂದು ಆಶಾಕಿರಣ. ಭಾರತೀಯ ನಾರಿಯರು ಕ್ರೀಡೆಯಲ್ಲಿ ಯಾವಾಗಲೂ ಹಿಂದುಳಿದವರು ಎಂಬ ಮಾತು ಹೆಚ್ಚಾಗಿ ಪ್ರಚಲಿತವಾಗಿದ್ದ ಕಾಲದಲ್ಲಿಯೇ ನೀನು ಹೊಸ ತಾರೆಯಾಗಿ ಉದಯಿಸಿದ್ದು. ಕ್ರಿಕೆಟ್ನ ಸವರ್ಾಧಿಕಾರದ ನಡುವೆ ಸೊರಗಿ ಹೋಗುತ್ತಿದ್ದ ಭಾರತೀಯರ ವಿವಿಧ ಕ್ರೀಡಾ ಪ್ರತಿಭೆಯನ್ನು ಎತ್ತಿಹಿಡಿದವರಲ್ಲಿ ನೀನೂ ಒಬ್ಬಾಕೆ. ಇಲ್ಲಿನ ಎಲ್ಲ ವರ್ಗದವರೂ ಕ್ರಿಕೆಟ್ ಭಜನೆ ಮಾಡುತ್ತಿದ್ದ ಕಾಲದಲ್ಲಿ ಟೆನ್ನಿಸ್ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿ ಕೋಟ್ಯಾಂತರ ಮಂದಿಯನ್ನು ಅಭಿಮಾನಿಗಳನ್ನಾಗಿ ಮಾಡಿಕೊಂಡಾಕೆ ನೀನು.
ನಿಜಕ್ಕೂ ನೀನು ಟೆನ್ನಿಸ್ಲೋಕಕ್ಕೆ ಕಾಲಿಟ್ಟಾಗ ಭಾರತದ ಟೆನ್ನಿಸ್ ಸೊರಗಿತ್ತು. ಎಲ್ಲೋ ಒಂದೆರಡು ಮಹಿಳೆಯರು ಆಗಾಗ ಗೆದ್ದು ದೀಪಾವಳಿಯ ಪಟಾಕಿಯಂತೆ ಸುದ್ದಿ ಮಾಡುತ್ತಿದ್ದರು. ಆದರೆ ಯಾರೂ ನಿನ್ನಷ್ಟು ಹೆಸರು ಮಾಡಲಿಲ್ಲ. ನಿಜಕ್ಕೂ ನೀನು ಟೆನ್ನಿಸ್ನಲ್ಲಿ ಉತ್ತಮ ಸಾಧಕಿ ಹೌದು. ಬಂದ ಹೊಸತರಲ್ಲಿಯೇ ಟೆನ್ನಿಸ್ ಲೋಕದಲ್ಲಿ ಭಾರೀ ಹೆಸರು ಮಾಡಿದ ಆಟಗಾತರ್ಿಯರಿಗೆ ಚಕ್ಕನೆ ಸೋಲುಣಿಸಿ ಶಾಕ್ ಕೊಟ್ಟವಳು ನೀನು. ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್, ಸನ್ಫೀಸ್ಟ್, ಮಿಯಾಮಿ ಓಪನ್ಗಳಂತಹ ಟೆನ್ನಿಸ್ನ ಹೆಸರಾಂತ ಟೂನರ್ಿಗಳಲ್ಲಿ ಭಾರತೀಯರಲ್ಲಿ ಇದುವರೆಗೆ ಯಾರೂ ಏರದಂತಹ ಎತ್ತರವನ್ನು ತಲುಪಿ ಸುದ್ದಿ ಮಾಡಿದಾಕೆ ನೀನು. ಅಷ್ಟೇ ಅಲ್ಲ ನೀನು ಮಾರಿಯಾ ಶರಪೋವಾ, ಸೆರೇನಾ ವಿಲಿಯಮ್ಸ್ರಂತಹ ಆಟಗಾತರ್ಿಯರ ಎದುರು ಕಾದಾಡಿ ಹೆಸರು ಮಾಡಿದವಳು.
ಕ್ರೀಡೆಗಳಲ್ಲಿ ಹಾಗೂ ಟೆನ್ನಿಸ್ನಲ್ಲಿ ಭಾರತೀಯ ನಾರಿಯರ ನಾಯಕಿಯಾಗಿ ನೀನು ರೂಪುಗೊಂಡಾಗ ಎಲ್ಲರೂ ಬಹಳ ಸಂತಸ ಪಟ್ಟಿದ್ದರು. ಹದಿ ಹರೆಯದಲ್ಲಿಯೇ ಟೆನ್ನಿಸ್ನಲ್ಲಿ ಒಳ್ಳೆಯ ಸಾಧನೆ ಮಾಡಿದಾಗ ಇಡೀ ಭಾರತೀಯರೆ ನಿನ್ನ ಬೆನ್ನಿಗೆ ನಿಂತು ಸಂತಸ ಪಟ್ಟರು. ನೂರರ ಆಚೀಚೆ ನಿನ್ನ ರ್ಯಾಂಕಿಂಗ್ಗಳಿದ್ದಾಗ ಈಕೆ ರ್ಯಾಂಕಿಂಗ್ನಲ್ಲಿ ಇನ್ನೂ ಮೇಲೆ ಬರಲಿ ಎಂದುಕೊಂಡರು. ನೀನು 100ರಿಂದ 75ಕ್ಕೆ ಬಂದೆ, 50ಕ್ಕೆ ಬಂದೆ ಕೊನೆಗೆ 40ರ ಆಸುಪಾಸಿಗೂ ಬಂದೆ. ಆಗೆಲ್ಲಾ ನಿನ್ನಷ್ಟೆ ಸಂತಸ ಪಟ್ಟವರು ನಮ್ಮ ಭಾರತೀಯರು.
ನೀನು ಸೋತಾಗ ತಾವೇ ಸೋತೆವೇನೋ ಎಂಬಷ್ಟು ದುಃಖಪಟ್ಟರು. `ಮುಂದಿನ ಟೂನರ್ಿಮೆಂಟ್ನಲ್ಲಿ ಸಾನಿಯಾ ಗೆಲ್ತಾಳೆ' ಅಂತ ತಮ್ಮಲ್ಲಿಯೇ ಸಮಾಧಾನ ಪಟ್ಟುಕೊಂಡರು. ನೀನು ಹೋದ ಟೂನರ್ಿಗೆ ತಾವೂ ಹೋಗಿ ನಿನ್ನನ್ನು ಹುರಿದುಂಬಿಸಿ ಸಂತಸಪಟ್ಟ ಮಂದಿ ಇನ್ನೂ ಬಹಳಷ್ಟು.
ಇನ್ನು ಇಲ್ಲಿನ ಯುವಕರಂತೂ ನಿನ್ನ ಮೂಗುತಿ ಮುಖಕ್ಕೆ ಮರುಳಾಗಿ ಕನಸುಗಳ ಮೂಟೆಯನ್ನೇ ಕಟ್ಟಿಕೊಂಡರು. ಆಗೊಮ್ಮೆ ಪ್ರತಿದಿನ ಪೇಪರ್ಗಳಲ್ಲಿ ಬರುತ್ತಿದ್ದ ನಿನ್ನ ಪೋಟೋಗಳನ್ನು ಬೆಳಗಾಗುತ್ತಲೇ ನೋಡಿ ಆನಂದಪಟ್ಟರು. ಪೇಪರ್ನಲ್ಲಿ ಬರುತ್ತಿದ್ದ ನಿನ್ನ ಭಾವಚಿತ್ರಗಳನ್ನು ಕತ್ತರಿಸಿ ಇಟ್ಟುಕೊಂಡವರು ಹಲವರು. ಇನ್ನು ಕೆಲವರು ಇದ್ದರೆ ಇಂತವಳೊಬ್ಬಳು ಗೆಳತಿ ಇರಬೇಕು ಎಂದು ಕೊಂಡರು. ಬೆಳಗಿನ ಜಾವದ ಕನಸಿನಲ್ಲಿ ನಿನ್ನ ಕಂಡು ಖುಷಿಪಟ್ಟರು. ಸದಾ ಸಾನಿಯಾ ಸಾನಿಯಾ ಎಂದು ಕನವರಿಸಿದರು. ನಿನ್ನ ಮೋಡಿ ಅದೆಷ್ಟಿತ್ತೆಂದರೆ ಹಲವು ಭಾರತೀಯ ಹುಡುಗಿಯರೂ ನಿನ್ನ ಹಾಗೇ ಮೂಗುತಿ ಹಾಕಿಕೊಂಡು `ಮೂಗುತಿ ಸುಂದರಿ'ಯರಾಗಲಾರಂಭಿಸಿದರು. ಕಾಲೇಜುಗಳಲ್ಲಿ ನಿನ್ನಂತೆ ಕಾಣುವ ಹುಡುಗಿಯರನ್ನು `ಸಾನಿಯಾ' ಎಂಬ ಅಡ್ಡಹೆಸರನ್ನಿಟ್ಟು ಕರೆಯುವ ಪರಿಪಾಠವೂ ಬೆಳೆಯಿತು.
ಅದೆಂತಹ ಕ್ರೇಜé್ ಹುಟ್ಟುಹಾಕಿಬಿಟ್ಟಿದ್ದೀಯಾ ಮಾರಾಯ್ತಿ ನೀನು..? ಸುಂದರವಾಗಿರುವವರು ಬಾಲಿವುಡ್ಡಿನ ಹೀರೋಯಿನ್ಗಳು ಮಾತ್ರ ಎಂಬ ಮಾತೊಂದಿತ್ತು. ಹೆಸರಾಂತ ಜಾಹಿರಾತು ಕಂಪನಿಗಳೆಲ್ಲ ಅವರ ಬೆನ್ನಿಗೆ ಬಿದ್ದುಬಿಟ್ಟಿದ್ದರು. ಆದರೆ ನೀನು ಬಂದೆ ನೋಡು. ಆಮೇಲೆ ಎಲ್ಲವೂ ಬದಲಾಗಿಬಿಟ್ಟವು. ಅಷ್ಟೇ ಅಲ್ಲ ಸಾಲು ಸಾಲು ಜಾಹಿರಾತು ಕಂಪನಿಗಳು ನಿನ್ನ ಮನೆಯ ಬಾಗಿಲು ಬಡಿದರು. ಜಾಹಿರಾತು ಕಂಪನಿಗಳು ನಿನ್ನ ಮನೆಯ ಬಾಗಿಲು ಬಡಿದ ಹಾಗೆಲ್ಲಾ ನೀನು ಬದಲಾಗಲಾರಂಭಿಸಿದೆ. ಉತ್ತಮವಾಗಿ ಆಟವಾಡುತ್ತಿದ್ದ ನೀನು ಯಾರ್ಯಾರ ಕೈಯ್ಯಲ್ಲಿಯೋ ಸೋಲಲಾರಂಭಿಸಿದೆ.
ಉತ್ತಮ ಪ್ರತಿಭೆ ಇದ್ದ ನೀನು ಹಣ ಗಳಿಸಿದಂತೆಲ್ಲ ಕೇವಲ ಸುದ್ದಿ ಮಾಡುವ ವ್ಯಕ್ತಿಯಾದೆ. ನೀನು ಟೆನಿಸ್ ಮ್ಯಾಚ್ಗಳಲ್ಲಿ ಗೆಲ್ಲದೆ ಹೋದರೂ ನಿನ್ನ ಬಗ್ಗೆ ಬರೀ ಸುದ್ದಿಗಳಷ್ಟೇ ಬರಲಾರಂಭಿಸಿತು. ಅದಕ್ಕೂ ಮಿಗಿಲಾಗಿ ನೀನು ಮೊಣಕಾಲು ನೋವು, ಕೈ ನೋವು ಅಂತೆಲ್ಲ ನೆಪಗಳನ್ನು ಹೇಳಿ ಟೂನರ್ಿಯಿಂದ ಹಿಂದೆ ಸರಿದೆ. ಓಲಂಪಿಕ್, ಏಷ್ಯನ್ ಗೇಮ್ಸ್ಗಳಂತಹ ಕ್ರೀಡೆಗಳಲ್ಲಿ ನಿನ್ನ ಮೇಲೆ ನಿರೀಕ್ಷೆ ಇಟ್ಟವರೆಲ್ಲ ನೀನು ಸೋತ ಕೂಡಲೇ ನಿರಾಶರಾದರು. ಬಹುಶಃ ಆಗಲೇ ಇರಬೇಕು ಭಾರತೀಯರಿಗೆ ನಿನ್ನ ಮೇಲೆ ಮನಸ್ಸು ಮುರಿಯಲು.
ಇಷ್ಟರ ನಡುವೆಯೂ ನೀನು ಆಗೊಮ್ಮೆ ಈಗೊಮ್ಮೆ ಕನ್ನಡದ ಕುವರ ಮಹೇಶ್ ಭೂಪತಿ ಜೊತೆ ಮಿಕ್ಸೆಡ್ ಡಬಲ್ಸ್ ಆಡಿ ಗೆಲ್ತಾ ಇದ್ಯಲ್ಲಾ ಆಗಲೂ ನಾವು ಕುತೂಹಲದಿಂದ ನೋಡಿದ್ದಿದೆ. ಮತ್ತೆ ಗೆಲ್ತಾಳೆ ಅಂತ ಖುಷಿಪಟ್ಟಿದ್ದಿದೆ. ಆದರೆ ಆಗ ನೀನು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಅಂತಾಗಿಬಿಟ್ಟೆ. ಆಗ ಅಂದುಕೊಂಡೆವು ನಾವು `ಇವಳು ಇಷ್ಟೇ' ಅಂತ. ಅಲ್ಲಿಂದೀಚೆಗೆ ನೀನು ಗೆದ್ದರೂ ಸೋತರೂ ಭಾರತೀಯರು ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ.
ಈ ನಡುವೆ ಅದ್ಯಾರೋ ಇದ್ದಾನಲ್ಲ ನಿನ್ನ ಬಾಲ್ಯದ ಗೆಳೆಯ ಸೋಹ್ರಾಬ್ ಅವನ ಜೊತೆ ಮದುವೆ ಆಗ್ತೀಯಾ ಅನ್ನುವ ಸುದ್ದಿ ಬಂತು. ಕೆಲವರು ಖುಷಿ ಪಟ್ಟರೆ ಹಲವರು ಹೊಟ್ಟೆಉರಿ ಮಾಡಿಕೊಂಡರು. ಬಹು ದಿನಗಳ ಗೆಳತಿ ಯಾರನ್ನೋ ಮದುವೆ ಆಗಿ ಹೋಗ್ತಾ ಇದ್ದಾಳೆ ಎಂದು ಬೇಸರ ಪಟ್ಟುಕೊಂಡರು. ತಮ್ಮದೆ ಕುಟುಂಬದ ಹುಡುಗಿಯೊಬ್ಬಳು ಮದುವೆ ಆಗಿ ಹೋಗ್ತಾಳೆ ಅನ್ನುವಷ್ಟು ನೊಂದುಕೊಂಡರು.
ಆದರೆ ನೀನು ಆತನ ಜೊತೆ ಮದುವೆಯನ್ನು ಮುರಿದುಕೊಂಡೆ ನೋಡು ಆಗ ಮಾತ್ರ ನಿನ್ನ ಮೇಲೆ ಬಹಳ ಬೇಸರ ಹುಟ್ಟಿಬಿಟ್ಟಿತು. ಸ್ವಾರ್ಥಕ್ಕೋಸ್ಕರ ಬಾಲ್ಯದ ಮಿತ್ರನ ಜೊತೆ ಮದುವೆ ಆಗುವುದನ್ನು ತಪ್ಪಿಸಕೊಂಡೆ ನೋಡು ಆಗ ಬಹುತೇಕರು ನಿನ್ನನ್ನು ವಿರೋಧಿಸಿದರು. ಇವಳಿಗೂ ಬಾಲಿವುಡ್ಡಿನ ರೋಗ ಹಿಡಿಯಿತು, ದಿನಕ್ಕೊಬ್ಬರಂತೆ ಹುಡುಗರನ್ನು ಬದಲಾಯಿಸುವ ರೋಗ ಇವಳಿಗೆ ತಗುಲಿತು ಎಂದು ಹಲವರು ಮಾತಾಡಿಕೊಂಡರು. ದಿನಕ್ಕೊಬ್ಬ ಬಾಯ್ಫ್ರೆಂಡ್ಗಳನ್ನು ಬದಲಾಯಿಸುವ ಕರೀನಾ, ಕತ್ರಿನಾರ ಸಾಲಿಗೆ ನಿನ್ನನ್ನು ಸೇರಿಸಲಾರಂಭಿಸಿದರು.
ಅಷ್ಟೇ ಆದರೆ ಒಳ್ಳೆಯದಿತ್ತೇನೋ. ಆದರೆ ನೀನು ಪಾಕ್ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿದೆ ನೋಡು ಆಗ ಮಾತ್ರ ನಿನ್ನ ಮೇಲಿದ್ದ ಅಲ್ಪಸ್ವಲ್ಪ ಅಭಿಮಾನವೂ ಹೊರಟುಹೋಯಿತು. ಇಡಿಯ ಭಾರತೀಯ ಜನರು ನಿನ್ನ ಈ ಒಂದು ನಿಧರ್ಾರದಿಂದ ನೊಂದು ಕೊಂಡರು. ಅಷ್ಟೇ ಅಲ್ಲ ಅವರು ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲ ಕಣೆ, ಆ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ ನಿನಗೆ ಯಾವಾಗ ಪರಿಚಯವಾದ..? ಯಾವಾಗ ನಿನ್ನ ಜೊತೆ ಮಾತಾಡಿದ..? ಯಾವಾಗ ಪ್ರೇಮ ನಿವೇದನೆ ಮಾಡಿದ..? ಸಕಲ ಭಾರತೀಯ ಯುವಕರು ಅದೇ ಕುತೂಹಲದಲ್ಲಿದ್ದಾರೆ.
ನೀನು ಮಲ್ಲಿಕ್ ಜೊತೆ ಮದುವೆ ಆಗುವ ವಿಷಯವನ್ನು ಜಾಹಿರು ಪಡಿಸಿದಾಗ ಬಹಳಷ್ಟು ಮಂದಿ ಅದನ್ನು ನಂಬಲೇ ಇಲ್ಲ. ಭಾರತೀಯ ಹುಡುಗಿ ಓರ್ವ ಪಾಕಿಸ್ತಾನಿಯನ್ನು ಮದುವೆ ಆಗುತ್ತಾಳೆ ಎಂಬುದನ್ನು ಕನಸು ಮನಸಿನಲ್ಲಿಯೂ ಆಲೋಚಿಸದ ಇಲ್ಲಿನ ಜನರು ನೀನಂದುದನ್ನು ಒಂದು ಸುಳ್ಳು ಸುದ್ದಿ ಇರಬೇಕು ಅಂದುಕೊಂಡರು. ಆದರೆ ನೀನು ಆ ಬಗ್ಗೆ ಬಹಳ ಗಂಭೀರವಾಗಿ ಮಾತನಾಡಿದಾಗಲೇ ಎಲ್ಲರಿಗೂ ತಿಳಿದಿದ್ದು ಇದೊಂದು ನಿಜವಾದ ಸುದ್ದಿ ಎಂದು.
ಆ ಸುದ್ದಿಯನ್ನು ಪ್ರಕಟಿಸಿದ ನಂತರ ನೀನು ನೀಡುತ್ತಿರುವ ಹಲವು ಹೇಳಿಕೆಗಳು ಎಲ್ಲರನ್ನು ಬೆರಗುಗೊಳಿಸುತ್ತಿದೆ. ಮದುವೆ ಆಗಿ ನೀನು ದುಬೈನಲ್ಲಿ ವಾಸಿಸುತ್ತೀಯಂತೆ, ಪಾಕಿಸ್ತಾನಿಯನನ್ನು ಮದುವೆ ಆದ ಮೇಲೂ ನೀನು ಭಾರತದ ಪರವಾಗಿಯೇ ಆಟ ಆಡುತ್ತೀಯಂತೆ ಇದು ನಿಜವಾ..? ಭಾರತೀಯರು ಈ ಮಾತುಗಳನ್ನು ನಂಬಬಹುದಾ.? ಅರ್ಥವಾಗುತ್ತಿಲ್ಲ.
ಇಷ್ಟೆಲ್ಲ ಹೇಳಿದ ಮೇಲೆ ನಿನಗೆ ಇನ್ನೂ ಕೆಲವು ಮಾತುಗಳನ್ನು ಹೇಳೋಣ ಅನ್ನಿಸುತ್ತಿದೆ. ನಿಜಕ್ಕೂ ನೀನು ಪಾಕಿಸ್ತಾನಿಯನ್ನು ಮದುವೆ ಆಗ್ತಾ ಇದ್ದೀಯಲ್ಲಾ ನಿನಗೆ ಭಾರತೀಯರು ಯಾರೂ ಸಿಗಲಿಲ್ಲವಾ? ಭಾರತದಲ್ಲಿ ಸುಮಾರು 7-8 ಕೋಟಿ ಮುಸ್ಲಿಮ್ ಯುವಕರಿದ್ದರಲ್ಲ ಅವರ್ಯಾರೂ ನಿನಗೆ ಇಷ್ಟವಾಗಲಿಲ್ಲವಾ? ಮದುವೆ ಆಗಲು ನಿನಗೆ ಪಾಕಿಸ್ತಾನಿಯೇ ಬೇಕಾದನಾ? ಭಾರತೀಯಳಾಗಿದ್ದುಕೊಂಡು ಪಾಕಿಯನ್ನು ನೀನು ಮದುವೆ ಆಗುವುದು ಎಷ್ಟು ಸರಿ? ನೀನು ಮದುವೆ ವಿಷಯ ಬಹಿರಂಗಪಡಿಸಿದ ನಂತರ ಏನಾಯ್ತು ಗೊತ್ತಲ್ಲ. ಭಾರತೀಯರು ನಿನ್ನ ಪ್ರತಿಕೃತಿ ದಹನ ಮಾಡಿದರು. ವಿರೊಧಿಸಿದರು.. ಪ್ರತಿಭಟನೆ ಮಾಡಿದರು. ಆದರೆ ಅದೇ ಹೊತ್ತಿನಲ್ಲಿ ಪಾಕಿಯರೇನು ಮಾಡಿದರು ಗೊತ್ತಲ್ಲ. ಕುಣಿದರು, ಕುಪ್ಪಳಿಸಿದರು. ಹಬ್ಬ ಮಾಡಿರು. ಪಾಪ ಇಲ್ಲಿನ ಯುವಕರು ಬೇಸರ ಮಾಡಿಕೊಂಡರು. ಹೋಗ್ಲಿ ಬಿಡು.. ಇಲ್ಲಿಯ ಜನರು ನಿನ್ನನ್ನು ಸಂತಸದಿಂದ ಬೀಳ್ಕೊಡುತ್ತಾರೆ. ಖುಷಿಯಿಂದ ನಿನ್ನ ಕಳಿಸಿಕೊಡುತ್ತಾರೆ.
ಆದರೆ ನಿನ್ನಲ್ಲಿ ಒಂದೇ ಕೋರಿಕೆ. ಶೋಯೆಬ್ ಜೊತೆ ಮದುವೆ ಎಂಬ ಸುದ್ದಿಯನ್ನು ನೀನಾಗಲೇ ತಿಳಿಸಿಬಿಟ್ಟಿದ್ದೀಯಾ. ಯಾವುದೇ ಕಾರಣಕ್ಕೂ ಮತ್ತೆ ಆ ಸುದ್ದಿಯನ್ನು ಸುಳ್ಳಾಗಿಸಬೇಡ. ಸೊಹ್ರಾಬ್ಗೆ ಕೈ ಕೊಟ್ಟಂತೆ ಆತನಿಗೂ ಕೈ ಕೊಡಬೇಡ. ನೀನು ಭಾರತದ ಪರವಾಗಿ ಆಡದಿದ್ದರೂ ಬೇಜಾರಿಲ್ಲ. ಒಳ್ಳೆಯ ರೀತಿಯ ಜೀವನವನ್ನು ನಡೆಸಿಕೊಂಡು ಹೋಗು ಸಾಕು. ಆದರೆ ಒಂದು ಮಾತ್ರ ಸತ್ಯ. ನಿನಗೆ ಇದುವರೆಗಿದ್ದ ಕೋಟ್ಯಾಂತರ ಅಭಿಮಾನಿಗಳ ಆದರ, ಪ್ರೀತಿ ಎಲ್ಲ ನಿಂತುಹೋಗಿದೆ. ಮತ್ತೆ ನಿನ್ನನ್ನು ಅವರು ಅಭಿಮಾನದಿಂದ ನೋಡಲಾರರು. ಅಲ್ಲಾದರೂ ನೀನು ಉತ್ತಮವಾಗಿ ಬದುಕು. ಇನ್ನೂ ಹೆಚ್ಚಿನ ಸಾಧನೆ ಮಾಡು ಎಂಬುದೆ ಎಲ್ಲರ ಹಾರೈಕೆ.
ಇಂತಿ ನಿನ್ನ ಅಭಿಮಾನಿ
ಭಾರತೀಯ ಯುವಕ
No comments:
Post a Comment