ಗೆಳತಿ ಯಾಕ್ಹಿಗೆ...?
ಗೆಳತಿ ಯಾಕ್ಹಿಗೆ...?
ಮೊದ-ಮೊದಲು ಈ ಭೂರಮೆಯ
ಚುಂಬಿಸಿ ತೃಪ್ತಿಪಡಿಸಿದ
ವರ್ಷಧಾರೆಯಲ್ಲೊಮ್ದು ಕಂಪಿದೆಯಲ್ಲ,..!!
ಮಾಮರದ ತಳಿರೆಲೆಗಳ ಚಿಗುರ
ನಡು-ನಡುವಲ್ಲಿ ಕುಳಿತು
ಕಾಣದ ಕನಸನ್ನು ಕಟ್ಟುತ್ತ
ಉಲಿವ ಕೋಗಿಲೆಯ ಕಂಠದೊದಳಲ್ಲೂ
ಝಾಲಕಿದೆಯಲ್ಲಾ...!!!
ಹಾಗೆ ಸಾಗಿದಾಗ.......
ಏನನ್ನೂ ಬಯಸದಿದ್ದ ಈ
ಭಾವದಾಳ-ಬಾಳ ಬದುಕಲ್ಲಿ
ನೀ-ನೆಂಬ ಭೃಂಗವೆದೆಯ
ಗೂಡಿದೆ ಕಿಂಡಿಕೊರೆದು, ರಂಧ್ರ ಮಾಡಿ
ನಿನ್ನ ನೆನಪನ್ನೇ ಭದ್ರವಾಗಿಸಿದೆಯಲ್ಲ...!!!
ಗೆಳತಿ ಯಾಕ್ಹಿಗೆ...?
ನಿನ್ನ ನೆನಪು-ಒನಪು
ನನ್ನ ಸೆಳೆಯುತ್ತಿದೆಯಲ್ಲಾ...!!!
ಚನ್ನಾಗಿದೆ, ಯಾವ ಗೆಳತಿಯ ನೆನಪು ಹೀಗೆ ಕಾಡುತ್ತಿದೆ ಗೆಳೆಯಾ? ಅವಳ ಹೆಸರೇನು?
ReplyDeleteನಾನೂ ಆ ಗೆಳತಿಗಾಗಿ ಕಾಯುತ್ತಿದ್ದೇನೆ...
ReplyDelete