Tuesday, February 4, 2014

ನಕ್ಕು ಹಗುರಾಗಿ

ರೂಪದರ್ಶಿ : ಸಮನ್ವಯ ಸುದರ್ಶನ್
ನಕ್ಕು ಹಗುರಾಗಿ
ಕಮರುತಿಹ ಜೀವಗಳೇ..||


ನಗುವೆ ಹೃದಯದ ಚಿಲುಮೆ
ನಗುವೆ ಜೀವ ಸ್ಪೂರ್ತಿ |
ಇದುವೆ ಮಧುರ ಕ್ಷಣ
ಇದು ಪ್ರೀತಿ ಮೂರ್ತಿ ||

ನಗುವೆ ಕನಸಿನ ಕಿರಣ
ಹೊಸತು ಜೀವಸ್ಫುರಣ |
ನಗುವೆ ಮಾತಿನ ಮೂಲ
ಇದುವೆ ಸ್ನೇಹದ ಜಾಲ ||

ನಗುವೆ ದ್ವೇಷಕೆ ಕೊನೆಯು
ಹರ್ಷ ಪ್ರೀತಿಗೆ ಗೊನೆಯು |
ನಗುವೆ ಮೊಗದ ಚೆಲುವು
ಇದರಿಂದಲೇ ಭವ್ಯ ನಿಲುವು ||

ನಗುವ ನಲಿವಿನಿಂದಲೇ
ಜೀವ ಹಸಿರು ಆಗಿಸಿ |
ಎದೆಯಾಳದ ನೋವು, ದುಃಖ
ತೊರೆದು ದೂರಕೆ ಓಡಿಸಿ ||

**
(ಈ ಕವಿತೆಯನ್ನು ದಂಟಕಲ್ಲಿನಲ್ಲಿ 13.12.2006ರಲ್ಲಿ ಬರೆದಿದ್ದೇನೆ)

5 comments:

  1. ಕವನ ತುಂಬಾ ಚೆನ್ನಾಗಿ ಬಂದಿದೆ. ಶಬ್ದಗಳ ಜೋಡಣೆಗಿಂತ ಭಾವನೆಗಳಿಗೆ ಒತ್ತು ಕೊಡಿ, ಇನ್ನೂ ಚೆನ್ನಗಿರುತ್ತೆ.

    ReplyDelete
  2. ಕವನ ಚೊಲೋ ಇದ್ದೋ.....

    ReplyDelete
  3. ಸೈರ್ಯ ಹೆಗಡೆರೆ ಥ್ಯಾಂಕ್ಯೂ..
    ಸಮನ್ವಯಾ ಹಾಗೂ ನಿರಂಜನ್ ಅವರೆ ಧನ್ಯವಾದಗಳು..

    ReplyDelete