ಬದುಕು ಹಲವು ವರ್ಣಗಳ ಕೊಲಾಜ್. ಬದುಕಿನಲ್ಲಿ ನೂರಾರು ಬಣ್ಣಗಳನ್ನು ಕಾಣಬಹುದು. ಹಲವು ಸೆಳೆಯುವಂತದ್ದಾದರೆ ಹಲವು ಕಾಡುವಂತವುಗಳು.. ಹೀಗೆ. ಬದುಕಿನ ಹಲವು ಚಿತ್ರಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಇದಷ್ಟೇ.
**
|
ರೂಪದರ್ಶಿ : ಶೃತಿ ರಾವ್ | |
ಬದಕಿನಲ್ಲಿ ಭಾವನೆಗಳಿಗೆ ಮಹತ್ವ ಹೆಚ್ಚು. ಭಾವನೆಗಳು ಮತ್ತೆ ಮತ್ತೆ ಸೆಳೆಯುತ್ತವೆ. ಕಾಡುತ್ತವೆ. ನಾಮ್ಮ ಪ್ರತಿ ನಡೆ ನುಡಿಯಲ್ಲಿಯೂ ಭಾವನೆಗಳು ಕಾಣುತ್ತವೆ. ಇಂತಹ ಒಂದು ಭಾವನಾತ್ಮಕ ಚಿತ್ರ-ಚಿತ್ರಣ.
****
|
ಉಂಚಳ್ಳಿ ಜಲಪಾತದ ಬಿಳಿಜಲಧಾರೆ |
ಬಿಳಿಯ ಬಣ್ಣ ಶಾಂತಿಯ ಸಂಕೇತ. ಬಿಳಿಯಬಣ್ಣದ ಮೇಲೆ ಕಾಮನಬಿಲ್ಲಿನ ಬಣ್ಣ ಮೂಡಿದಾಗ ಬದುಕು ಸಹಜ-ಸುಂದರ. ಸುಂದರ ಕಾಮನಬಿಲ್ಲಿಗೆ ಬಿಳಿ ಬಣ್ಣದ ಹಿನ್ನೆಲೆ ವಿಶೇಷ ಮೆರಗನ್ನು ನೀಡುತ್ತದೆ
***
|
ಸೃಜನ ಸುಂದರಿ |
|
|
ಸಹಜವಾಗಿದ್ದರೆ ಚನ್ನಾಗಿ ಕಾಣುತ್ತದೆ. ಮೇಕಪ್ ಮಾಡಿದರೆ ಆ ಸೆಳೆತ ಕಡಿಮೆ. ಬದುಕಿನ ಕುಲುಮೆಯ ಕೆಲಸದಲ್ಲಿ ಬೆಂದು-ಬಸವಳಿದಾಗ ಜೀವನ ಹಣ್ಣಾಗುತ್ತದೆ.
****
|
ನಗರಿಯಲ್ಲಿ ನಡೆದ ಹೋರಾಟ |
ಹೋರಾಟ ಬದುಕಿನ ಒಂದು ಮುಖ. ಹುಟ್ಟಿದ ತಕ್ಷಣ ಹೋರಾಟ ಶುರು. ಜಗತ್ತಿನ ಜೊತೆಗೆ ಸಂಘರ್ಷ ಮಾಡುತ್ತ ಬದುಕಬೇಕಾಗುತ್ತದೆ. ಒಂದು ಹೋರಾಟದ ಚಿತ್ರ. ಮಾನವ ಸರಪಳಿಯ ಮೂಲಕ ನಡೆಯುವ ಹೋರಾಟ ಜೀವಗಳನ್ನು ಬೆಸೆಯುತ್ತದೆ..!!
**
(ಹಾಗೆ ಸುಮ್ಮನೆ ವೃತ್ತಿಯ ಮದ್ಯ ತೆಗೆದ ಈ ನಾಲ್ಕು ಪೋಟೋಗಳನ್ನು ಒಂದೆ ಸೇರಿಸಿ ಚಿತ್ರ ಸಂಪುಟವಾಗಿ ಮಾಡಿದ್ದೇನೆ. ಹಾಗೆ ಸುಮ್ಮನೆ ನೋಡಿ.. ಕಮೆಂಟ್ ಮಾಡಿ)
No comments:
Post a Comment