ಅಡಿಕೆಯಿದು ಮಲೆನಾಡ
ಕೃಷಿಕನ ಹೊನ್ನಿನ ಕುಡಿಕೆ |
ತೋಟಿಗರ ತಂಪಿನ ಮಡಿಕೆ,
ಸರ್ವರ ಹಿತಕ್ಕೊಂದು ಹಿಡಿಕೆ ||
ಅಡಿಕೆಯಿದು ದೇಶಿಗರ
ಬಯಸಿದ್ದನ್ನು ಕೊಡುವ ಸೂರ್ಯಪಾತ್ರೆ|
ಕವಳವೇ ಮನಕೆ ತಂಪೆರೆವ ಮಾತ್ರೆ,
ಕೃಷಿಕ ಈಶನ ತಲೆಗೆ ಇದೇ ಬಿಲ್ವಪತ್ರೆ ||
ಅಡಿಕೆಯಿದು ಸಕಲ ಜನರ
ಪ್ರಚ್ಛನ್ನ ಶಕ್ತಿ, ಮನದ ತುಡಿತ|
ಪ್ರತಿ ಎದೆಯಾಂತರಾಳದ ಮಿಡಿತ
ಸರ್ವಕಾಲವೂ ದುಡಿತವೇ ದುಡಿತ ||
ಅಡಿಕೆಯಿದು ತೋಟಿಗರ
ಮನದ ಬೇಟ, ದೇವರಾಟ|
ಜೊತೆಗೆ ಅಷ್ಟು-ಇಷ್ಟು ಕೊಳೆಯ ಕಾಟ
ವರ್ಷದ ಫಸಲಿಗೆ ಕತ್ತರಿಯ ಆಟ ||
ಅಡಿಕೆಯಿದು ಮಲೆನಾಡಿಗರ
ಜೀವ ನೀಡ್ವ ಅಮೃತ|
ಸಕಲ ಕಾಲವೂ ಕವಳವೇ ಹಿತ
ಕವಳವೇ ಬಾಳಿಗೆ ನವನೀತ ||
**
(ಇದನ್ನು 07-04-2006ರಲ್ಲಿ ದಂಟಕಲ್ಲಿನಲ್ಲಿ)
(ಅಡಿಕೆಗೂ ಒಂದು ಕವಿತೆಯೇ ಎಂದು ಹುಬ್ಬೇರಿಸಬಹುದು.. ಅಡಿಕೆ ನಿಷೇಧ, ಪರಿಹಾರ, ಅಡಿಕೆ ಬೆಳೆಗಾರರ ಮನೆಯ ಜಪ್ತಿ, ಸಾಲಮನ್ನಾ, ರಾಜಕಾರಣಿಗಳ ಜೂಟಾಟ, ಇತ್ಯಾದಿ ಇತ್ಯಾದಿಗಳ ಜೊತೆ ಜೊತೆಯಲ್ಲಿ ಅಡಿಕೆ ಹೇಗೆ ಮಲೆನಾಡಿಗರಿಗೆ ಪ್ರೀತಿಪಾತ್ರ, ಆರ್ಥಿಕ ಶಕ್ತಿ, ಆದಾಯದ ಮೂಲವಾಗುತ್ತದೆ ಎನ್ನುವುದರ ಕುರಿತು ಬರೆದ ಒಂದು ಕವಿತೆ. ಏಳು ವರ್ಷಗಳ ಹಿಂದಿನ ಕವಿತೆ ಇಂದಿನ ದಿನಕ್ಕೆ ಪ್ರಸ್ತುತ ಎನ್ನಿಸಬಹುದೇನೋ..)
ತುಂಬಾ ಚೆನ್ನಾಗಿದೆ. ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದೇನೆ.
ReplyDeleteಅಂದವಾಗಿದೆ.......
ReplyDelete