Monday, October 14, 2013

ಸಂಜೆ ಬಕುಲ


ಮೂಡಿತೊಂದು ಸಂಜೆ ಬಕುಲ
ಕಾವ್ಯಲೋಕ ಕಲ ಕಲ|
ನಿರ್ಧಾರವು ಅಚಲ ಅಚಲ
ಒಮ್ಮೆಗೆಲ್ಲಾ ತಳಮಳ ||

ಬಯಸಿತದು ಸರ್ವಸಕಲ
ಪರಿಸರಗಳ ನಿರ್ಮಲ |
ಪ್ರೇಮ ಛಾಯೆ, ಸರಳ, ಸುಜಲ
ಮರುಗು ಮನಸು ಮಮ್ಮಲ ||

ಕೊಂಚ ಕಠಿಣ, ಕೊಂಚ ವಿರಲ
ಜೀವ ಹೃದಯ ಶ್ಯಾಮಲ |
ಬಕುಲವಿದುವೆ ರಂಜಲ
ಎಂದೆಂದಿಗು ಕುಶಲ ||

ಅಂತರಂಗ ಶುಭ್ರ ಸಲಿಲ
ಆಗದದುವೆ ಚಂಚಲ |
ಸಂಜೆಬಕುಲ ವಿರಲ ಸರಲ
ಕಾವ್ಯಧಾರೆ ಫಲ ಫಳ ||


(ಕವಿಮಿತ್ರ, ಗೆಳೆಯ ಸಂಜೆಬಕುಲ/ಸಂಜಯ ಭಟ್ಟ ಬೆಣ್ಣೆ ಕುರಿತು ಹಾಗೆ ಸುಮ್ಮನೆ ಬರೆದ ಕವಿತೆ)
(ಬರೆದಿದ್ದು : 10-12-2005ರಂದು, ದಂಟಕಲ್ಲಿನಲ್ಲಿ )

1 comment:

  1. ಸಂಜಯ್ ಭಟ್ ಬೆಣ್ಣೆ, ಚಿತ್ರ ಬಿಡಿಸುತ್ತಾರೆ ಅನಿಸುತ್ತೆ ಅಲ್ವಾ.. ಎಲ್ಲೋ ಕೇಳಿದ್ದು ..

    ReplyDelete