(ಗ್ರೇಟ್ ಆಕ್) |
ಗ್ರೇಟ್ ಆಕ್
ಪೆಂಗ್ವಿನಸ್ ಇಂಪೆನ್ನಿಸ್ ಎಂಬ ವೈಜ್ಞಾನಿಕ ನಾಮಧೇಯವನ್ನು ಹೊಂದಿರುವ ಗ್ರೇಟ್ ಆಕ್ ೧೮ನೇ ಶತಮಾನದ ಉತ್ತರಾರ್ಧದಲ್ಲಿ ಅಳಿದು ಹೋಗಿದೆ. ಕೆನಡಾ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಸ್ಕಾಂಡಿನೇವಿಯಾ, ಬ್ರಿಟೀಷ್ ದ್ವೀಪಗಳು, ಉತ್ತರ ಅಟ್ಲಾಂಟಿಕ್ ಹಾಗೂ ರಾಕಿ ಐಲ್ಯಾಂಡ್‌ಗಳಲ್ಲಿ ವಾಸ ಮಾಡುತ್ತಿದ್ದ ಈ ಪಕ್ಷಿ ಸಾಧು ಸ್ವಭಾವದಿಂದ ಎಲ್ಲರನ್ನು ಸೆಳೆಯುತ್ತಿತ್ತು. ಕಪ್ಪು ಹಾಗೂ ಬಿಳಿ ಬಣ್ಣ ಮಿಶ್ರಣದ ೭೫ ರಿಂದ ೮೫ ಸೆಂ.ಮಿ ಎತ್ತರದ ಈ ಪಕ್ಷಿ ೫ ಕೆಜಿವರೆಗೆ ತೂಗುತ್ತಿತ್ತು. ೧೮ನೇ ಶತಮಾನದಲ್ಲಿ ಈ ಪಕ್ಷಿಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ಬೇಟೆಯಾಡಲಾಯಿತು. ೧೮೫೦ರ ದಶಕದ ವೇಳೆಗೆ ಇವುಗಳ ಸಂಖ್ಯೆ ಕಡಿಮೆಯಾದಂತೆಲ್ಲ ಈ ಪ್ರಾಣಿಗಳನ್ನು ಬೇಟೆಯಾಡಿ, ಅವನ್ನು ಸಂಗ್ರಹಿಸುವುದು ಪ್ರತಿಷ್ಠೆಯ ಪ್ರತೀಕವಾಯಿತು. ಸಿಗುರೌರ್ ಹಾಗೂ ಆತನ ಇಬ್ಬರು ಜೊತೆಗಾರರು ೧೮೪೪ರ ಜುಲೈ ೩ರಂದು ಕೊಟ್ಟಕೊನೆಯ ಗ್ರೇಟ್ ಆಕ್ ಜೋಡಿ ಹಕ್ಕಿಗಳನ್ನು ಬೇಟೆಯಾಡುವುದರೊಂದಿಗೆ ಈ ಸಂತತಿ ಭೂಮಿಯ ಮೇಲಿಂದ ನಶಿಸಿಹೋಯಿತು. ಈ ಹಕ್ಕಿಯನ್ನು ಇದೀಗ ಮ್ಯೂಸಿಯಂಗಳಲ್ಲಿ ಪಳೆಯುಳಿಕೆಗಳ ಹಾಗೂ ಪ್ರತಿಕೃತಿಗಳ ರೂಪದಲ್ಲಿ ಮಾತ್ರ ನೋಡಲು ಸಾಧ್ಯ.
(ಡೋಡೋ) |
ಪಾರಿವಾಳಗಳ ಕುಟುಂಬಕ್ಕೆ ಸೇರಿದ ಡೋಡೋ ಮಾರಿಷಸ್ ದ್ವೀಪಗಳಲ್ಲಿ ವಾಸಿಸುತ್ತಿತ್ತುಘಿ. ೧೫೯೮ರ ವೇಳೆಗೆ ಡಚ್ ನೌಕಾಯಾನಿಗಳು ಮಾರಿಷಸ್ಸಿನಲ್ಲಿ ಅಪರೂಪದ ಈ ಪಕ್ಷಿ ಸಂಕುಲವನ್ನು ಕಂಡರು. ಅದನ್ನು ನಂತರ ಹೊರ ಜಗತ್ತಿಗೆ ಪರಿಚಯಿಸಿದರು. ಈ ಪಕ್ಷಿಗಳು ವರ್ಷಕ್ಕೊಮ್ಮೆ ಮಾತ್ರ ಮೊಟ್ಟೆಯನ್ನಿಟ್ಟು ಮರಿ ಮಾಡುತ್ತಿದ್ದವು. ೧ ಮೀಟರ್ ಎತ್ತರದ ಈ ಪಕ್ಷಿಗಳು ಗರಿಷ್ಠ ೧೮ ಕೆಜಿ ತೂಕವನ್ನು ಹೊಂದಿದ್ದವು. ಡಚ್ಚರು ಮಾರಿಷಸ್‌ಗೆ ಭೇಟಿ ನೀಡುವುದಕ್ಕೂ ಮೊದಲು ಲಕ್ಷಾಂತರ ಸಂಖ್ಯೆಯಲ್ಲಿದ್ದ ಡೋಡೋಗಳು ನಂತರ ಕೆಲವೇ ವರ್ಷಗಳಲ್ಲಿ ಅಳಿವಿನ ಅಂಚು ತಲುಪಿದವು. ಮಾರಿಷಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಡೊಡೋಗಳನ್ನು ಬೇಟೆಯಾಡಲಾಯಿತು. ಅಷ್ಟೇ ಅಲ್ಲದೇ ಮಾರೀಷಸ್ ದ್ವೀಪಕ್ಕೆ ಡಚ್ಚರು ನಾಯಿ, ಬೆಕ್ಕುಘಿ, ಹಂದಿ, ಇಲಿ, ಏಡಿಗಳನ್ನು ತಿನ್ನುವ ಕೋತಿಗಳನ್ನು ಅಮದು ಮಾಡಿಕೊಂಡ ನಂತರ ಡೋಡೋಗಳ ನಾಶ ಇಮ್ಮಡಿಸಿತು. ೧೮೮೭ರಲ್ಲಿ ಕೊಟ್ಟ ಕೊನೆಯ ಡೋಡೋ ಸಾವನ್ನಪ್ಪಿತು. ಡೋಡೊಗಳು ಯಾವ ರೀತಿ ಸಾವನ್ನಪ್ಪಿದವೆಂದರೆ ಇವುಗಳ ಸಾವಿನ ಕುರಿತಂತೆಯೇ ಇಂಗ್ಲೀಷಿನಲ್ಲಿ ಡೆಡ್ ಆಸ್ ಡೋಡೋ ಹಾಗೂ ಟು ಗೋ ದ ವೇ ಆಫ್ ದ ಡೋಡೋ ಎನ್ನುವ ಎರಡು ರೂಪಕಗಳೇ ಹುಟ್ಟಿಕೊಂಡಿವೆ.
(ಎಲಿಫೆಂಟ್ ಬರ್ಡ್ ನ ಮೊಟ್ಟೆ) |
ಭೂಮಿಯ ಮೇಲಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಹೆಚ್ಚು ತೂಕವನ್ನು ಹೊಂದಿರುವ ಪಕ್ಷಿ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದ್ದ ಎಲಿಫೆಂಟ್ ಬರ್ಡ್ ಭೂಮಿಯ ಮೇಲಿಂದ ಅಳಿದು ಹೋಗಿದೆ. ೧೦ ಅಡಿ ಎತ್ತರ ಹಾಗೂ ೧೦೦೦ ಪೌಂಡ್ ತೂಕವನ್ನು ಹೊಂದಿದ್ದ ಈ ಬೃಹತ್ ಗಾತ್ರದ ಪಕ್ಷಿ ಮಡಗಾಸ್ಕರ್ ದ್ವೀಪದಲ್ಲಿ ವಾಸಿಸುತ್ತಿತ್ತುಘಿ. ಪ್ರಸ್ತುತ ಭೂಮಿಯ ಮೇಲಿನ ಅತ್ಯಂತ ದೊಡ್ಡ ಪಕ್ಷಿಗಳು ಎನ್ನುವ ಖ್ಯಾತಿ ಗಳಿಸಿಕೊಂಡಿರುವ ಆಸ್ಟ್ರಿಚ್ ಹಾಗೂ ಎಮುಗಳ ಜಾತಿಗೆ ಹತ್ತಿರದ ಪಕ್ಷಿ ಇದಾಗಿತ್ತು. ಇದೂ ಕೂಡ ಹಾರಲಾರದ ಪಕ್ಷಿಯಾಗಿತ್ತು. ವೇಗವಾಗಿ ಓಡಬಲ್ಲ ಈ ಪಕ್ಷಿ, ತನ್ನ ಬೃಹತ್ ಗಾತ್ರದ ಕಾರಣ ಹಾರಾಟ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಭೂಮಿಯ ಮೇಲೆ ಹಕ್ಕಿಗಳೇ ಬಹುಸಂಖ್ಯಾತವಾಗಿದ್ದ ಸಂದರ್ಭದಿಂದಲೂ ಅಂದರೆ ಕನಿಷ್ಟ ೬೦ ಸಾವಿರ ವರ್ಷಗಳಿಂದ ಜೀವಿಸಿದ್ದ ಎಲಿಫೆಂಟ್ ಬರ್ಡ್ ಮನುಷ್ಯನ ಬೇಟೆಯ ಚಪಲಕ್ಕೆ ಭೂಮಿಯಿಂದಲೇ ನಾಪತ್ತೆಯಾಯಿತು. ೧೭ನೇ ಶತಮಾನದ ಮೊದಲಾರ್ಧ ಭಾಗದಲ್ಲಿ ಎಲಿಫೆಂಟ್ ಬರ್ಡ್ ವಿನಾಶ ಹೊಂದಿತು.
(ಟಾಸ್ಮೇನಿಯನ್ ಟೈಗರ್) |
ಟಾಸ್ಮೇನಿಯನ್ ಟೈಗರ್ ಅಥವಾ ಟಾಸ್ಮೇನಿಯನ್ ತೋಳ ಎಂದು ಕರೆಸಿಕೊಳ್ಳುತ್ತಿದ್ದ ಥೈಲಸಿನ್ಸ್ ಆಸ್ಟ್ರೇಲಿಯಾ ಖಂಡದ ಟಾಸ್ಮೇನಿಯಾ ದ್ವೀಪದ ಅಪರೂಪದ ಪ್ರಾಣಿಗಳಲ್ಲಿ ಒಂದಾಗಿತ್ತು. ನ್ಯೂ ಗಿನಿಯಾ ಮುಂತಾದ ಪ್ರದೇಶಗಳೂ ಇವುಗಳ ಆವಾಸ ಸ್ಥಾನಗಳಾಗಿದ್ದವು. ಅತ್ಯಂತ ವಿಶಿಷ್ಟವಾದ ಪ್ರಾಣಿಗಳಲ್ಲಿ ಒಂದು ಎನ್ನಿಸಿಕೊಂಡಿದ್ದ ಥೈಲಸಿನ್ಸ್ ನಾಯಿಯ ತಲೆ ಹಾಗೂ ಕಾಂಗರೂಗಳಿಗೆ ಇರುವಂತೆ ಹೊಟ್ಟೆಯಲ್ಲಿ ಚೀಲವನ್ನು ಹೊಂದಿತ್ತು. ಟಾಸ್ಮೇನಿಯಾದಲ್ಲಿ ಜನವಸತಿ ಹೆಚ್ಚಿದಂತೆಲ್ಲ ಥೈಲಸಿನ್ಸ್‌ಗಳ ಬೇಟೆ ತೀವ್ರಗೊಂಡಿತು. ವ್ಯಾನ್ ಡೀಮನ್ಸ್ ಲ್ಯಾಂಡ್ ಕಂಪನಿ ಈ ಪ್ರಾಣಿಗಳ ತುಪ್ಪಳಕ್ಕಾಗಿ ವುಗಳನ್ನು ಬೇಟೆಯಾಡಿತು. ಬಹುಶಃ ಈ ಪ್ರಾಣೀಗಳು ಅಳಿದು ಹೋಗಲು ಈ ಕಂಪನಿಯ ಪಾತ್ರ ಪ್ರಮುಖವಾದುದು ಎಂದರೆ ತಪ್ಪಾಗಲಿಕ್ಕಿಲ್ಲ. ೧೯೩೬ರಲ್ಲಿ ಆಸ್ಟ್ರೇಲಿಯಾದ ಹೋಬರ್ಟ್ ಮೃಗಾಲಯದಲ್ಲಿದ್ದ ಬೆಂಜಮಿನ್ ಎಂಬ ಹೆಸರಿನ ಕೊಟ್ಟಕೊನೆಯ ಥೈಲಸಿನ್ಸ್ ಸಾವನ್ನಪ್ಪುವುದರೊಂದಿಗೆ ಈ ಪ್ರಾಣಿ ಸಂಕುಲ ವಿನಾಶ ಹೊಂದಿತು.
(ಮಸ್ಕಾಕ್ಸ್) |
ಆರ್ಕ್‌ಟಿಕ್ ಪ್ರದೇಶದಲ್ಲಿ ಸಹಸ್ರಾರು ವರ್ಷಗಳಿಂದ ವಾಸಿಸುತ್ತಿದ್ದ ಮಸ್‌ಕಾಕ್ಸ್‌ಗಳು ೧೯೦೦ ರಿಂದ ೧೯೩೦ರ ವೇಳೆಗೆ ಭೂಮಿಯಿಂದ ವಿನಾಶಹೊಂದಿತು. ಹಿಮಾವೃತ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದ ಉದ್ದ ಕೂದಲಿನ, ನೋಡಲು ಎಮ್ಮೆ ಹಾಗೂ ಕಾಡುಕೋಣದ ಗಾತ್ರದಲ್ಲಿದ್ದ ಮಸ್‌ಕಾಕ್ಸ್‌ಗಳು ಸಾಧುಪ್ರಾಣಿಗಳು. ಇವುಗಳು ಗರಿಷ್ಠ ೧.೫ ಮೀಟರ್ ಎತ್ತರವಾಗಿದ್ದವು ಹಾಗೂ ೨೮೦ ರಿಂದ ೪೧೦ ಕೆಜಿ ತೂಕವನ್ನು ಹೊಂದಿದ್ದವು. ಇವುಗಳ ತಲೆ, ಬಹುಮಾನ ಹಾಗೂ ಕಪ್‌ಗಳಿಗಾಗಿಯೇ ಇವುಗಳನ್ನು ಕೊಲ್ಲಲಾಯಿತು. ಇವುಗಳ ಮಾಂಸಕ್ಕೆ ಆ ದಿನಗಳಲ್ಲಿ ಒಂದು ಔನ್ಸ್‌ಗೆ ೪೦ರಿಂದ ೮೦ ಅಮೆರಿಕನ್ ಡಾಲರ್ ಬೆಲೆಯಿತ್ತು. ಈ ಪ್ರಾಣೀಗಳ ಕುಟುಂಬಕ್ಕೆ ಸೇರಿದ ಇತರ ಪ್ರಾಣಿಗಳ ಜೀವಕೋಶಗಳನ್ನು ಬಳಸಿ, ೧೯೦೦-೩೦ರ ದಶಕದಲ್ಲಿ ಹತ್ಯೆ ಮಾಡಲ್ಪಟ್ಟ ಮಸ್‌ಕಾಕ್ಸ್‌ಗಳ ಜೀವಕೋಶಗಳನ್ನು ಬಳಕೆ ಮಾಡಿ ಇವನ್ನು ಪುನರ್ ಸೃಷ್ಟಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ.
(ಮಾಂಕ್ ಸೀಲ್, ಮೆಡಟರೇನಿಯನ್) |
ಯಾಂತ್ರೀಕರಣ, ಕಾರ್ಖಾನೆಗಳ ಹೆಚ್ಚಳ, ಸಮುದ್ರವನ್ನು ಸೇರುತ್ತಿರುವ ತ್ಯಾಜ್ಯಗಳು ಇತ್ಯಾದಿ ಕಾರಣದಿಂದ ಮೆಡಟರೇನಿಯನ್ ಮಾಂಕ್ ಸೀಲ್‌ಗಳ ಅಂತ್ಯವಾಗಿದೆ. ಅಪರೂಪದ ಸಮುದ್ರ ಸಸ್ತನಿ ಜಾತಿಗಳಲ್ಲಿ ಒಂದು ಎನ್ನಿಸಿಕೊಂಡಿದ್ದ ಇವುಗಳು ಇತ್ತೀಚಿನ ದಿನಗಳಲ್ಲಿ ಅಳಿದಿವೆ. ಇವುಗಳು ಕನಿಷ್ಠ ೮೦ ಸೆಂ.ಮೀ. ಉದ್ದವಾಗಿ ಬೆಳೆಯುತ್ತಿದ್ದವು. ೧೫-೧೮ ಕೆ.ಜಿ. ತೂಕವನ್ನು ಹೊಂದಿದ್ದವು. ಮೆಡಟರೇನಿಯನ್ ಸಮುದ್ರ ಪ್ರದೇಶದಲ್ಲಿ ವಾಸಿಸುತ್ತಿದ್ದ ಈ ಪ್ರಾಣಿಗಳನ್ನು ಯೂರೋಪ್ ಹಾಗೂ ಆಪ್ರಿಕಾ ದೇಶಗಳ ಜನರು ಗುಂಡಿಟ್ಟು ಬೇಟೆ ಮಾಡಿದ ಕಾರಣ ವಿನಾಶವನ್ನು ಹೊಂದಿವೆ. ಇತ್ತೀಚೆಗೆ ಇವುಗಳನ್ನು ಅಲ್ಲೊಮ್ಮೆ-ಇಲ್ಲೊಮ್ಮೆ ನೋಡಿದ್ದಾಗಿ ವರದಿಗಳು ಬಿತ್ತರಗೊಂಡಿದ್ದರೂ, ೨೦೧೫ರ ವೇಳೆಗೆ ಇವುಗಳು ೧೦೦ಕ್ಕೂ ಕಡಿಮೆ ಸಂಖ್ಯೆಯಲ್ಲಿ ಇರಬಹುದು ಎನ್ನಲಾಗುತ್ತಿದೆ.
(ಬಾರ್ಬೇರಿಯನ್ ಸಿಂಹ) |
ಅಟ್ಲಾಸ್ ಲಯನ್ಸ್ ಅಥವಾ ಬಾರ್ಬೇರಿ ಲಯನ್ಸ್ ಎಂದು ಕರೆಯಲ್ಪಡುತ್ತಿದ್ದ ಈ ಪ್ರಾಣಿಗಳು ಉತ್ತರ ಆಪ್ರಿಕಾದ ಮೊರಾಕ್ಕೋದಿಂದ ಈಜಿಪ್ಟ್ ವರೆಗಿನ ಸಹಾರಾ ಮರುಭೂಮಿಯಲ್ಲಿನ ಗುಡ್ಡ ಬೆಟ್ಟಗಳಲ್ಲಿ ವಾಸ ಮಾಡುತ್ತಿದ್ದವು. ಸಿಂಹದ ಜಾತಿಗೆ ಸೇರಿದ ಈ ಪ್ರಾಣೀಗಳು ತಮ್ಮ ದೊಡ್ಡ ಗಾತ್ರದಿಂದ ಎಲ್ಲರನ್ನೂ ಸೆಳೆಯುತ್ತಿದ್ದವು. ಇವುಗಳ ಎತ್ತರ ಗರಿಷ್ಠ ೨.೮ ಮೀಟರ್‌ಗಳಷ್ಟಿದ್ದವು. ಅನಾಮತ್ತು ೨೭೦ರಿಂದ ೩೦೦ ಕೆ.ಜಿ. ತೂಕವನ್ನು ಹೊಂದಿದ್ದವು. ಆಫ್ರಿಕಾ ಮರುಭೂಮಿಯಲ್ಲಿ ಅವ್ಯಾಹತವಾದ ಬೇಟೆಯಿಂದಾಗಿ ಇವುಗಳು ವಿನಾಶ ಹೊಂದಿದವು. ದಾಖಲೆಗಳ ಪ್ರಕಾರ ೧೯೪೨ರಲ್ಲಿ ಕೊಟ್ಟ ಕೊನೆಯ ಬಾರ್ಬೇರಿ ಸಿಂಹವನ್ನು ಹತ್ಯೆ ಮಾಡಲಾಯಿತು ಎನ್ನಲಾಗಿದೆ. ಇನ್ನೂ ಕೆಲವರ ಪ್ರಕಾರ ೧೯೬೦ರಲ್ಲಿ ಕೊಟ್ಟ ಕೊನೆಯ ಬಾರ್ಬೇರಿ ಸಿಂಹವನ್ನು ಹತ್ಯೆ ಮಾಡಲಾಗಿದೆ.
(ವಾರ್ರಾಹ್) |
ಫಾಕ್‌ಲ್ಯಾಂಡ್ ಐಲ್ಯಾಂಡ್ ತೋಳ ಎನ್ನುವ ಹೆಸರಿನಿಂದಲೂ ಕರೆಸಿಕೊಳ್ಳುವ ವಾರ್ರಾಹ್‌ಗಳು ೧೭೬೦ರ ದಶಕದಲ್ಲಿ ಮನುಷ್ಯ ಫಾಕ್‌ಲ್ಯಾಂಡ್‌ಗೆ ಕಾಲಿರಿಸುವವರೆಗೂ ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಆದರೆ ಯಾವಾಗ ಮನುಷ್ಯ ಎಲ್ಲಿಗೆ ಹೋದನೋ, ಅಂದಿನಿಂದ ಇವುಗಳ ಅಳಿವು ಆರಂಭವಾಯಿತು. ದಕ್ಷಿಣ ಅಮೇರಿಕದ ತುತ್ತತುದಿಯಾದ ಚಿಲಿ ಹಾಗೂ ಅರ್ಜೆಂಟೇನಾದ ದ್ವೀಪಗಳು ಇವುಗಳ ವಾಸಸ್ಥಾನವಾಗಿದ್ದವು. ಆದರೆ ೧೮೭೬ರ ವೇಳೆಗೆ ಅಂದರೆ ಮನುಷ್ಯ ಕಾಲಿರಿಸಿದ ೧೧೬ ವರ್ಷಗಳಲ್ಲಿಯೇ ಇವುಗಳು ವಿನಾಶ ಹೊಂದಿದವು.
(ಸ್ಕೋಂಬಾರ್ಕ್ಸ್ ಜಿಂಕೆ) |
ಥೈಲ್ಯಾಂಡ್‌ನಲ್ಲಿ ಜೀವಿಸುತ್ತಿದ್ದ ಸ್ಕೋಂಬರ್ಕ್ ಜಿಂಕೆಯ ಕೊಂಬುಗಳು ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂಬುದು ಸ್ಥಳೀಯರ ನಂಬಿಕೆಯಾಗಿತ್ತು. ಥೈಲ್ಯಾಂಡಿನ ಮಾಂತ್ರಿಕರು ಇವುಗಳ ಕೊಂಬುಗಳನ್ನು ವಿಶೇಷವಾಗಿ ಬಳಕೆ ಮಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಭಾರಿ ಪ್ರಮಾಣದಲ್ಲಿ ಇವುಗಳನ್ನು ಬೇಟೆಯಾಡಲಾಯಿತು. ಕೊಟ್ಟ ಕೊನೆಯ ಸ್ಕೋಂಬರ್ಕ್ ಜಿಂಕೆಯನ್ನು ೧೯೩೨ರಂದು ಬೇಟೆಯಾಡಲಾಯಿತು. ಆದರೂ ಥೈಲ್ಯಾಂಡಿನಲ್ಲಿ ಸಾಕಲಾಗಿದ್ದ ಕೊನೆಯದು ಎನ್ನಲಾಗುವ ಸ್ಕೋಂಬರ್ಕ್ ಜಿಂಕೆಯು ೧೯೩೮ರಂದು ಸಾವನ್ನಪ್ಪುವ ಮೂಲಕ ಇನ್ನೊಂದು ಪ್ರಾಣಿ ಸಂಕುಲ ವಿನಾಶ ಹೊಂದಿತು.
(ಟೆಕೋಪಾ ಪಫಿಶ್) |
ಅಮೆರಿಕದ ಮೊಜಾವೆ ಮರುಭೂಮಿಯಲ್ಲಿದ್ದ ಓಯಸ್ಸಿಸ್‌ಗಳು ಹಾಗೂ ಇತರ ನೀರಿನ ಮೂಲಗಳಲ್ಲಿ ಬದುಕಿದ್ದ ಟೆಕೋಪಾ ಪಫೀಶ್ ಈಗಾಗಲೇ ವಿನಾಶವನ್ನು ಹೊಂದಿದೆ. ಅತ್ಯಂತ ಹೆಚ್ಚಿನ ಬಿಸಿ ನೀರನ್ನು ತಾಳಿಕೊಳ್ಳುವ ಶಕ್ತಿ ಹೊಂದಿದ್ದ ಟೆಕೋಪಾ ಪಫಿಶ್‌ಗಳ ಪೈಕಿ ಗಂಡು ಮೀನು ಗಾಢನೀಲಿ ಹಾಗೂ ಹೆಣ್ಣು ಮೀನು ತಿಳಿ ನೀಲಿ ಬಣ್ಣವನ್ನು ಹೊಂದಿದ್ದವು. ಮೊಜಾವೆ ಮರುಭೂಮಿಯ ನೀರಿನ ಮೂಲಗಳಲ್ಲಿ ೧೯೫೦ರ ದಶಕದಲ್ಲಿ ಈಜಲು ಬರುವವರ ಸಂಖ್ಯೆ ಜಾಸ್ತಿಯಾಯಿತು. ಅವರು ಈ ಮೀನುಗಳನ್ನು ಹಿಡಿದು ತಿನ್ನಲು ಆರಂಭಿಸಿದರು. ತದನಂತರ ಟೆಕೋಪಾ ಪಫಿಶ್‌ಗಳ ಅಳಿವು ಆರಂಭವಾಯಿತು. ೧೯೭೦ರ ಫೆಬ್ರವರಿ ೨ರಂದು ಕೊಟ್ಟ ಕೊನೆಯದಾಗಿ ಟೆಕೋಪಾ ಪಫಿಶ್‌ಗಳನ್ನು ನೋಡಿರುವ ಬಗ್ಗೆ ಉಲ್ಲೇಖಗಳಿವೆ.
(ಸೀ ಮಿಂಕ್) |
ಸೀ ಮಿಂಕ್
ಉತ್ತರ ಅಮೆರಿಕದ ಅಟ್ಲಾಂಟಿಕ್ ಸಮುದ್ರ ವ್ಯಾಪ್ತಿಯ ಗಲ್ ಆಫ್ ಮೈನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಸೀ ಮಿಂಕ್‌ಗಳು ಇತ್ತೀಚೆಗಷ್ಟೇ ವಿನಾಶ ಹೊಂದಿದೆ. ೧೮೬೦ರ ಸಂದ‘ರ್ದಲ್ಲಿ ಈ ಪ್ರಾಣಿಗಳನ್ನು ಬೇಟೆಯಾಡಿ ತಂದವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿತ್ತುಘಿ. ೧೮೦೦ ರಿಂದ ೧೯೦೦ರ ಅವಯಲ್ಲಿ ಇಂಗ್ಲೆಂಡ್ ಹಾಗೂ ಕೆನಡಾ ನಡುವಿನ ಅಟ್ಲಾಂಟಿಕ್ ಸಮುದ್ರದಲ್ಲಿ ಭಾರಿ ಸಂಖ್ಯೆಯಲ್ಲಿದ್ದ ಸೀ ಮಿಂಕ್‌ಗಳು ೨೦೦೦ದ ವೇಳೆಗೆ ಸಂಪೂರ್ಣವಾಗಿ ವಿನಾಶ ಹೊಂದಿವೆ.