ಮಾರಕ ರೋಗ ಸಾಧ್ಯತೆ/ಮನುಷ್ಯರಿಗೂ ತಗುಲಬಹುದೇ?
ಪ್ರಕರಣ
ಮುಚ್ಚಿಡಲು ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆ
ಕಾಡುಕೋಣಗಳ
ಮೃತದೇಹ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಅಂಗಾಂಗಗಳ ರವಾನೆ
ಹೊಟ್ಟೆ
ಹಾಗೂ ಬಾಯಿ ಹುಣ್ಣಿನಿಂದ ಕಾಡುಕೋಣಗಳು ಮೃತಪಟ್ಟಿರುವ ಶಂಕೆ
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ
ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡುಕೋಣಗಳು ಸರಣಿ ರೂಪದಲ್ಲಿ ಮೃತಪಡುತ್ತಿರುದು ಆತಂಕಕ್ಕೆ ಕಾರಣವಾಗಿದೆ. ಕಾಡುಕೋಣಗಳ
ಸರಣಿ ಸಾವು ಮಾರಕ ರೋಗದ ಸಾಧ್ಯತೆಯನ್ನು ಹುಟ್ಟು ಹಾಕಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ಅರಣ್ಯ
ಇಲಾಖೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ 16ಕ್ಕೂ ಅಧಿಕ ಕಾಡುಕೋಣಗಳು
ನಿಘೂಡ ರೋಗಕ್ಕೆ ಬಲಿಯಾಗಿವೆ. ಅಣಶಿ, ಕ್ಯಾಸಲ್‌ರಾಕ್ ಮುಂತಾದ ಪ್ರದೇಶಗಳಲ್ಲಿ ಕಾಡುಕೋಣಗಳು ಮೃತಪಟ್ಟಿವೆ.
ಅಜಮಾಸು 10ರಿಮದ 12 ವರ್ಷ ಪ್ರಾಯದ ಕಾಡುಕೋಣಗಳು ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಮೃತಪಟ್ಟಿವೆ.
ನಿಘೂಡ ರೋಗ?
ಮಲೆನಾಡಿನ ಅನೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಂಗಗಳು
ಮೃತಪಟ್ಟ ಘಟನೆ ಹಸಿಯಾಗಿದೆ. ಈ ಮಂಗಗಳಿಂದಾಗಿ ಮನುಷ್ಯನಿಗೂ ಮಂಗನ ಖಾಯಿಲೆ ಬಂದು ಅನೇಕರನ್ನು ಬಲಿ
ತೆಗೆದುಕೊಂಡ ಘಟನೆಗಳು ಜನರ ಮನಸ್ಸಿನಲ್ಲಿ ಭೀತಿಯನ್ನು
ಹೆಚ್ಚಿಸಿರುವ ಬೆನ್ನಲ್ಲೇ ಕಾಡುಕೋಣಗಳ ಸರಣಿ ಸಾವು ಆತಂಕ ತಂದಿದೆ. ಮೃತಪಟ್ಟಿರುವ ಕಾಡುಕೋಣಗಳಿಂದ
ಮನುಷ್ಯನಿಗೂ ನಿಘೂಡ ಖಾಯಿಲೆಗಳು ಬರಬಹುದೇ ಎನ್ನುವ ಪ್ರಶ್ನೆಗಳು ಮೂಡಿವೆ.
ಮುಚ್ಚಿಟ್ಟ ಅರಣ್ಯ ಇಲಾಖೆ
ಜೋಯಿಡಾ ಕಾಡಿನಲ್ಲಿ ಸಾಲು ಸಾಲು ಕಾಡುಕೋಣಗಳು ಸತ್ತಿದ್ದರೂ
ಅರಣ್ಯ ಇಲಾಖೆ ಅದನ್ನು ಮುಚ್ಚಿಡಲು ಮುಂದಾಗಿದೆ. ಇದುವರೆಗೂ 16ಕ್ಕೂ ಹೆಚ್ಚಿನ ಕಾಡುಕೋಣಗಳು ಬಲಿಯಾಗಿದ್ದರೂ
ಅರಣ್ಯ ಇಲಾಖೆ ಕೇವಲ 4 ಕಾಡುಕೋಣ ಮಾತ್ರ ಸತ್ತಿದೆ ಎನ್ನುವ ಮೂಲಕ ಗಂಭೀರ ವಿಷಯವನ್ನು ಮುಚ್ಚಿ ಹಾಕುವ
ಪ್ರಯತ್ನ ಮಾಡುತ್ತಿದೆ.
ಅರಣ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಕಟ್ಟೆಘಿ,
ಕೋಡುಗಾಳಿ, ಕಡಗರ್ಣಿ ಹಾಗೂ ದಿಗಾಳಿಗಳಲ್ಲಿ ಕಾಡುಕೋಣಗಳು ಮೃತಪಟ್ಟಿವೆ. ಇದಲ್ಲದೇ ಅಣಶಿ ಸಂರಕ್ಷಿತ
ಅರಣ್ಯ ವ್ಯಾಪ್ತಿಯ ಅನೇಕ ಕಡೆಗಳಲ್ಲಿಯೂ ಕಾಡುಕೋಣಗಳು ಅಸಹಜವಾಗಿ ಸತ್ತಿವೆ ಎನ್ನುವ ಮಾಹಿತಿಯನ್ನು ಸ್ಥಳೀಯ ಮಟ್ಟದ ಅರಣ್ಯ ಅಧಿಕಾರಿಗಳೇ ನೀಡಿದ್ದಾರೆ.
ಸತ್ತಿರು ಕಾಡುಕೋಣಗಳ ಕಳೆಬರಗಳ ಮರಣೋತ್ತರ ಪರೀಕ್ಷೆಗಾಗಿ
ಕಾಡುಕೋಣಗಳ ಅಂಗಾಂಗಗಳನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ.
ಪ್ರಾಥಮಿಕ ವರದಿಯ ಪ್ರಕಾರ ಈ ಕಾಡುಕೋಣಗಳು ಹೊಟ್ಟೆ ಹಾಗೂ ಗಂಟಲು ಹುಣ್ಣಿನಿಂದ ಮೃತಪಟ್ಟಿವೆ ಎಂದು
ಹೇಳಲಾಗುತ್ತಿದೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿಗಳು ಹೊರಬರಬೇಕಿದೆ.
ಕುಡಿಯುವ ನೀರು ಹಾಗೂ ಆಹಾರದ ಸಮಸ್ಯೆ ಈ ಸಾರಿ ಎಲ್ಲ
ಕಡೆಗಳಲ್ಲಿಯೂ ತಲೆದೋರಿದೆ. ಈ ಸಮಸ್ಯೆ ಕಾಳಿ ಸಂರಕ್ಷಿತ ಅರಣ್ಯ ಪ್ರದೇಶವನ್ನೂ ಬಿಟ್ಟಿಲ್ಲಘಿ. ಆದರೆ
ಕಾಡುಕೋಣಗಳು ಮೃತಪಟ್ಟ ಸ್ಥಳಗಳ ಸುತ್ತಮುತ್ತ ಕುಡಿಯುವ ನೀರು ಹಾಗೂ ಆಹಾರದ ಸಮಸ್ಯೆ ತಲೆದೋರದಂತೆ ಅರಣ್ಯ
ಇಲಾಖೆ ಕ್ರಮ ಕೈಗೊಂಡಿದೆ. ಹೀಗಿದ್ದರೂ ಕಾಡುಕೋಣಗಳ
ಸರಣಿ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಅರಣ್ಯ ಇಲಾಖೆ ಕಾಡುಕೋಣಗಳ ಸಾವಿಗೆ ಸಂಬಂಧಿಸಿದಂತೆ
ತುರ್ತು ಕ್ರಮ ಕೈಗೊಳ್ಳಬೇಕಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಎಚ್ಚೆತ್ತುಕೊಂಡು ಸರಣಿ ಸಾವು ತಪ್ಪಿಸಬೇಕಿದೆ.
ಈ ಕಾಡುಕೋಣಗಳಿಗೆ ತಗುಲಿರುವ ಸೋಂಕು ಮನುಷ್ಯನಿಗೂ ತಗುಲಬಹುದೇ ಅಥವಾ ಇನ್ನಿತರ ಖಾಯಿಲೆಗಳಿಗೆ ಕಾರಣವಾಗಬಹುದೇ
ಎನ್ನುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸುವ ಅಗತ್ಯವಿದೆ. ಪ್ರಕರಣ ಮುಚ್ಚಿ ಹಾಕುವ ಬದಲು ಅರಣ್ಯ
ಇಲಾಖೆ ಕ್ರಿಯಾಶೀಲವಾಗಿ ಕೆಲಸ ಮಾಡುವ ಜರೂರತ್ತಿದೆ.
No comments:
Post a Comment