Friday, August 24, 2018

ಅದೃಷ್ಟದ ಬೆರಳಿಂದಲೇ ಸಮಸ್ಯೆಗಳ ಸರಮಾಲೆ

ಕೈ ಅಥವಾ ಕಾಲಿಗೆ ಆರು ಬೆರಳುಗಳಿದ್ದರೆ, ಅದನ್ನು ಅದೃಷ್ಟ ಎಂದು ಭಾವಿಸುವವರು ಹಲವರಿದ್ದಾರೆ. ಆದರೆ ಏಷ್ಯನ್ ಗೇಮ್‌ಸ್‌‌ನಲ್ಲಿ ಪಾಲ್ಗೊಂಡ  ಭಾರತದ ಆಟಗಾರ್ತಿಯೊಬ್ಬರು ಆರು ಬೆರಳಿನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
21 ವರ್ಷ ವಯಸ್ಸಿನ ಸ್ವಪ್ನ ಬರ್ಮನ್ ಹೆಪ್ಟಾಥ್ಲಾನ್ ಆಟಗಾರ್ತಿ. ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್‌ಸ್‌‌ನಲ್ಲಿ ಮುಂದಿನವಾರ ಹೆಪ್ಟಾಥ್ಲಾನ್ ಸ್ಪರ್ಧೆ ನಡೆಯಲಿದ್ದು, ಸ್ವಪ್ನ  ಭಾಗವಹಿಸುತ್ತಿದ್ದಾಳೆ. ಈಕೆಯ ಕಾಲಿನಲ್ಲಿ ಆರು ಬೆರಳುಗಳಿವೆ. ಈ ಆರು ಬೆರಳುಗಳು ಸ್ವಪ್ನಗೆ ತೀವ್ರ ಸಮಸ್ಯೆಯನ್ನು ಉಂಟುಮಾಡಿದೆ.
ಸ್ವಪ್ನ ಕಾಲಿನಲ್ಲಿಲ್ಲಿ ಆರು ಬೆರಳುಗಳಿರುವ ಕಾರಣ, ಆಕೆಗೆ ಅಗತ್ಯವಾದ ಶೂಗಳೇ ಸಿಗುತ್ತಿಲ್ಲ. ಇದರಿಂದ ಸ್ವಪ್ನ ಸಮಸ್ಯೆ ಎದುರಿಸುವಂತಾಗಿದೆ.  ಭಾರತದ ಒಲಂಪಿಕ್ ಸಮಿತಿ ನೀಡಿರುವ ಶೂಗಳು ಈಕೆಯ ಕಾಲಿಗೆ ಹಿಡಿಸುತ್ತಿಲ್ಲ. ಅಲ್ಲದೇ ಐದು ಬೆರಳುಗಳಿಗೆ ಸರಿ ಎನ್ನಿಸುವ ಶೂಗಳು, ಆರನೇ ಬೆರಳಿಗೆ ತೀವ್ರ ಸಮಸ್ಯೆಯನ್ನು ಉಂಟುಮಾಡುತ್ತಿದೆ. ತೀರಾ ಸಣ್ಣದಾದ ಶೂ ಧರಿಸುವುದರಿಂದ ಕಾಲು ನೋವು ಹಾಗೂ ಬೆರಳು ನೋವು ಸ್ವಪ್ನಾರಿಗೆ ಕಾಡುತ್ತಿದೆ. ಈ ನೋವಿನ ನಡುವೆಯೂ ಪದಕ ಗೆಲ್ಲುವ ಛಲ ಸ್ವಪ್ನಾದು.
ಜಲಪೈಗುರಿಯ ಬಡ ಕುಟುಂಬದಿಂದ ಬಂದ ಸ್ವಪ್ನ ಕ್ರೀಡಾ ಅನುದಾನದಿಂದಲೇ ಸಾಕಷ್ಟು ತರಬೇತಿ ಪಡೆದು ಏಷ್ಯನ್ ಗೇಮ್‌ಸ್‌‌ನಲ್ಲಿ  ಭಾಗವಹಿಸಿದ್ದಾಳೆ. ಹಿಂದೆ ಇಂಚೋನ್ ಏಷ್ಯನ್ ಗೇಮ್‌ಸ್‌‌ನಲ್ಲಿಯೂ  ಭಾಗವಹಿಸಿದ್ದ ಈಕೆ ಈ ಸಾರಿ ಪದಕದ ಭರವಸೆ ಮೂಡಿಸಿದ್ದಾರೆ. ಆದರೆ ಕಾಲಿಗೆ ಹೊಂದಿಕೆಯಾಗದ ಹೊಸ ಶೂಗಳ ಬದಲು ಅನಿವಾರ್ಯವಾಗಿ ಹಳೆಯ ಶೂಗಳನ್ನೇ ಬಳಕೆ ಮಾಡುವ ಸಂದರ್ಭ  ಎದುರಾಗಿದೆ.  ಭಾರತದಲ್ಲಿ ಆರು ಬೆರಳಿನ ವ್ಯಕ್ತಿಗಳು ಧರಿಸುವ ನಿಟ್ಟಿನಲ್ಲಿ ವಿಶೇಷ ಶೂಗಳನ್ನು ತಯಾರಿಸುವುದಿಲ್ಲ. ಈ ಕಾರಣದಿಂದ ಸಮಸ್ಯೆ ಹೆಚ್ಚುತ್ತಿದೆ. ಅದೃಷ್ಟದ ಬೆರಳು ಅಥ್ಲಿಟ್‌ಗೆ ಸಮಸ್ಯೆಯಾಗುತ್ತಿದ್ದುದು ಹೀಗೆ.

----

ಆರನೇ ಬೆರಳು ಅದೃಷ್ಟದ ಸಂಕೇತ ಎನ್ನುತ್ತಾರೆ. ಆದರೆ ನನಗೆ ಅದು ಸಮಸ್ಯೆಯನ್ನೇ ತಂದಿದೆ. ಹಲವರು ಶಸ್ತ್ರ  ಚಿಕಿತ್ಸೆ ಮೂಲಕ ಆರನೇ ಬೆರಳನ್ನು ತೆಗೆಸುವಂತೆ ಸಲಹೆ ನೀಡಿದ್ದರು. ಆದರೆ ನಾನು ಅದಕ್ಕೆ ಒಪ್ಪಿರಲಿಲ್ಲ. ಇದೀಗ ಆರನೇ ಬೆರಳಿನಿಂದ ನೋವು ಅನುಭವಿಸಬೇಕಾಗಿದೆ. ಆದರೂ ಪದಕ ಗೆಲ್ಲುವ ಛಲ ನನ್ನದು ಎಂದು ಸ್ವಪ್ನಾ ಹೇಳುತ್ತಾಳೆ.

No comments:

Post a Comment