ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಆಟಗಾರನೋರ್ವನ ದುರಂತ ಬದುಕು ಅನಾವರಣಗೊಂಡಿದೆ. ಬಾಕ್ಸಿಿಂಗ್‌ನಲ್ಲಿ ದೇಶಕ್ಕೆ ಪದಕವನ್ನು ಗೆದ್ದುಕೊಟ್ಟ ಬಾಕ್ಸರ್ ಇದೀಗ ಬೀದಿ ಬರಿಯಲ್ಲಿ ವ್ಯಾಪಾರ ಮಾಡುವ ಮೂಲಕ ಜೀವನ ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾನೆ.
ಭಾರತದಲ್ಲಿ ಕ್ರಿಕೆಟ್ ಆಟಗಾರರ ಯಶಸ್ಸಿನ ಬಗ್ಗೆ ಕೇಳಿದ್ದೇವೆ. ಒಂದೆರಡು ಪಂದ್ಯಗಳಲ್ಲಿ ಮಿಂಚಿದ ಆಟಗಾರ ಕೂಡ ಯಾವ್ಯಾವುದೋ ವ್ಯಾಪಾರದಲ್ಲಿ ಕೈ ಹಾಕಿ, ದುಡ್ಡು ಮಾಡಿಕೊಳ್ಳುತ್ತಾಾನೆ. ಆದರೆ ಉಳಿದ ಕ್ರೀಡೆಗಳಲ್ಲಿ ಮಿಂಚಿದ ಕ್ರೀಡಾಪಟುಗಳ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ ಎಂಬಂತಾಗಿದೆ.
ಓಟದ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಆಟಗಾರನೋರ್ವ ತದನಂತರದಲ್ಲಿ ಡಕಾಯಿತರ ತಂದ ನಾಯಕನಾಗಿ, ದುರಂತ ಅಂತ್ಯಕಂಡ ನಿದರ್ಶನ ಕಣ್ಣೆದುರಿದೆ. ಓಟ, ಅಥ್ಲೆಟಿಕ್ಸ್ , ಹಾಕಿ ಹೀಗೆ ವಿವಿಧ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದವರು ತದನಂತರದ ತಮ್ಮ ಬದುಕಿನಲ್ಲಿ ತೀವ್ರ ತೊಂದರೆ ಎದುರಿಸಿದ ಸನ್ನಿವೇಶಗಳೂ ಹೆಚ್ಚಿದೆ. ಅಂತಹ ಸಾಲಿಗೆ ಹೊಸ ಸೇರ್ಪಡೆ ಬಾಕ್ಸರ್ ದಿನೇಶ್ ಕುಮಾರ್.
ಏಷ್ಯನ್ ಗೇಮ್ಸ್ ನಲ್ಲಿ ಬಾಕ್ಸಿಿಂಗ್ ವಿಭಾಗದಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟಿದ್ದ, ಅರ್ಜುನ ಪ್ರಶಸ್ತಿ ವಿಜೇತ ಹರಿಯಾಣದ ದಿನೇಶ್ ಕುಮಾರ್ ಇದೀಗ ಬೀದಿ ಬದಿಯಲ್ಲಿ ಕುಲ್ಫಿ ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುವ ಹಂತ ತಲುಪಿದ್ದಾರೆ.
ಬಾಕ್ಸಿಿಂಗ್‌ನಲ್ಲಿ ದಿನೇಶ್ ಕುಮಾರ್ ಗೆದ್ದ ಪದಕಗಳು ಒಂದೆರಡಲ್ಲ ಬಿಡಿ. ಬಾಕ್ಸಿಿಂಗ್‌ನಲ್ಲಿ ಅವರು ಬರೋಬ್ಬರಿ 17 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಗೆದ್ದಿದ್ದಾರೆ. ದಿನೇಶ್ ಕುಮಾರ್ ಅವರ ಸಾಧನೆಯನ್ನು ಗಮನಿಸಿದ ಸರ್ಕಾರ 2010ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆದರೆ ಇಂತಹ ಸಾಧಕ ದಿನೇಶ್ ಕುಮಾರ್ ಇದೀಗ ತನ್ನ ಬದುಕನ್ನು ಕಟ್ಟಿಕೊಳ್ಳಲು ಒದ್ದಾಟ ನಡೆಸುತ್ತಿದ್ದು, ಅದಕ್ಕಾಗಿ ಕುಲ್ಫಿ ಮಾರಾಟದ ಮಾರ್ಗ ಹಿಡಿದಿದ್ದಾರೆ.
ಹರಿಯಾಣದ ಭಿವಾನಿ ಪ್ರದೇಶದವರಾದ ದಿನೇಶ್ ಕುಮಾರ್ ದೇಶದ ಬಾಕ್ಸಿಿಂಗ್ ಲೋಕದ ಹೊಸ ದ್ರುವತಾರೆ ಎಂದು ಬಿಂಬಿತರಾಗಿದ್ದರು. ಆದರೆ 2014ರಲ್ಲಿ ಸಂಭವಿಸಿದ್ದ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರ ಚಿಕಿತ್ಸೆಗೆ ಕುಟುಂಬಸ್ಥರು ಅಪಾರ ಸಾಲ ಮಾಡಿದ್ದರು. ಅಪಘಾತದಿಂದಾಗಿ ದಿನೇಶ್ ಅವರ ಅದುವರೆಗಿನ ಬಾಕ್ಸಿಿಂಗ್ ವೃತ್ತಿಜೀವನಕ್ಕೆ ಅನಿರೀಕ್ಷಿತ ತೆರೆ ಬಿದ್ದಿತ್ತು.
ಇದೀಗ ದಿನೇಶ್ ಬಾಕ್ಸಿಿಂಗ್ ತರಬೇತಿಗಾಗಿಯೂ, ಅಪಘಾತದಿಂದ ಪಡೆದ ಚಿಕಿತ್ಸೆಗಾಗಿಯೂ ಮಾಡಿದ್ದ ಸಾ ಲವನ್ನು ತೀರಿಸಬೇಕಾಗಿ ಬಂದಿದೆ. ಸಾಲದ ವಿಷಯವನ್ನು ತಿಳಿದ ದಿನೇಶ್ ಕುಮಾರ್ ತಾವೂ ತಂದೆಗೆ ನೆರವಾಗಲು ರಸ್ತೆ ಬದಿಯಲ್ಲಿ ಕುಲ್ಫಿ ಮಾರಾಟಕ್ಕೆ ಇಳಿದಿದ್ದಾರೆ. ದಿನೇಶ್ ಅವರನ್ನು ಕಂಡ, ದಿನೇಶ್ ಅವರ ಬಾಕ್ಸಿಿಂಗ್ ಸಾಧನೆಯ ಮಾಹಿತಿ ಇರುವ ಪಾದಚಾರಿಗಳು, ಕಾರು, ಬೈಕ್ ಸವಾರರು ಅವರಲ್ಲಿ ಕುಲ್ಫಿ ಕರೀದಿಸಿ ಜತೆಯಲ್ಲೊಂದು ಸೆಲ್ಫೀ ತೆಗೆದುಕೊಂಡು ಹೋಗುತ್ತಿದ್ದಾರೆ.
ತಾವು ಕುಲ್ಫಿ ಮಾರಾಟಕ್ಕಿಳಿದ ಆರಂಭದ ದಿನಗಳಲ್ಲಿ ಸರ್ಕಾರ ತಮ್ಮ ಸಹಾಯಕ್ಕೆ ಬರುತ್ತದೆ ಎನ್ನುವ ಆಸೆಯನ್ನು ದಿನೇಶ್ ಕುಮಾರ್ ಹೊಂದಿದ್ದರು. ಆದರೆ ಯಾವುದೇ ಸರ್ಕಾರ ದಿನೇಶ್ ಕುಮಾರ್ ಅವರ ಸಹಾಯಕ್ಕೆ ಮುಂದಾಗಲಿಲ್ಲ. ಇದರಿಂದ ತೀವ್ರ ನಿರಾಸೆ ಹೊಂದಿದ ದಿನೇಶ್ ಕುಮಾರ್ ಜನಪ್ರತಿನಿಧಿಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.
ಕುಲ್ಫಿ ಮಾರಾಟ ಮಾಡುತ್ತಿದ್ದರೂ, ಅಪಘಾತದಿಂದಾಗಿ ಬಾಕ್ಸಿಿಂಗ್ ರಿಂಗ್‌ಗೆ ತಮಗೆ ಕಾಲಿರಿಸಲು ಅಸಾಧ್ಯವಾಗಿದ್ದರೂ ದಿನೇಶ್ ಕುಮಾರ್ ಎದೆಗುಂದಿಲ್ಲ. ಬದಲಾಗಿ ತಮ್ಮೊಳಗಿನ ಬಾಕ್ಸಿಿಂಗ್ ಜ್ಞಾನವನ್ನು ಕಿರಿಯರಿಗೆ ಧಾರೆ ಎರೆಯುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಬಾಕ್ಸಿಿಂಗ್ ತರಬೇತಿ ನೀಡುವ ಅವಕಾಶ ಸಿಕ್ಕಾಗಲೆಲ್ಲ ಅದನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮೊಳಗಿನ ಜ್ಞಾನವನ್ನು ಇತರರಿಗೆ ಹಂಚುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕ್ರಿಕೆಟ್ ಹಾಗೂ ಇತರ ಕೆಲವೇ ಕ್ರೀಡೆಗಳ ಕ್ರೀಡಾಪಟುಗಳಿಗೆ ಭಾರತದಲ್ಲಿ ಬೆಲೆ ಇದೆ ಎನ್ನುವುದು ಹಲವರ ಮಾತು. ಉಳಿದ ಕ್ರೀಡೆಗಳು ಸಾಲು ಸಾಲು ಪದಕಗಳನ್ನು ಗೆದ್ದು ಸಾಧನೆಯ ಶಿಖರವನ್ನು ಏರಿದರೂ ಅವರ ಕುರಿತು ಯಾರೂ ಗಮನ ಹರಿಸುವುದಿಲ್ಲ. ಪದಕಗಳನ್ನು ಗೆದ್ದು ತಂದರೂ ತಮ್ಮ ದೈನಂದಿನ ಜೀವನವನ್ನು ನಡೆಸಲು ಒದ್ದಾಾಡುತ್ತಿರುವ ದಿನೇಶ್ ಕುಮಾರ್ ಅವರಂತವರ ಬೆನ್ನಿಗೆ ಸರ್ಕಾರ, ಹಾಗೂ ಕ್ರೀಡಾ ಅಭಿಮಾನಿಗಳು ನಿಲ್ಲುವ ಜರೂರತ್ತಿದೆ. ಹೀಗಾದಾಗ ಮಾತ್ರ ಕ್ರೀಡಾಪಟುಗಳ ಬದುಕು ಹಸನಾಗಬಹುದಾಗಿದೆ.
---
ಯಾವ ರಾಜಕಾರಣಿಗಳ ಮೇಲೆ ವಿಶ್ವಾಸವೂ ಇಲ್ಲ. ಕುಟುಂಬವನ್ನು ಸಲಹಲಿಕ್ಕಾಗಿ ಕುಲ್ಫಿ ವ್ಯಾಪಾರ ನಡೆಸಿದ್ದೇನೆ. ನಾನು ಬಾಕ್ಸಿಿಂಗ್ ಜಗತ್ತಿನಲ್ಲಿ ದ್ರುವತಾರೆಯಾಗಬೇಕೆನ್ನುವ ಕನಸನ್ನು ನನ್ನ ತಂದೆ ಕಂಡಿದ್ದರು. ನನಗೆ ಅಪಘಾತವಾಗಿದ್ದು ವೃತ್ತಿ ಜೀವನ ಅಂತ್ಯವಾಗಿದೆ. ಆದರೆ ನನ್ನಲ್ಲಿನ ಬಾಕ್ಸಿಿಂಗ್ ಹಾಗೆಯೇ ಇದೆ. ನಾನೀಗಲೂ ಕಿರಿಯರಿಗೆ ಬಾಕ್ಸಿಿಂಗ್ ತರಬೇತಿ ನೀಡುತ್ತಿದ್ದೇನೆ. ಇನ್ನಾದರೂ ಸರ್ಕಾರದವರು ನನಗೆ ರಾಜ್ಯಮಟ್ಟದ ತರಬೇತುದಾರ ಹುದ್ದೆ ನೀಡಿದರೆ ನಿರ್ವಹಿಸಬಲ್ಲೆ .
ದಿನೇಶ್ ಕುಮಾರ್
ಬಾಕ್ಸರ್
( ಈ ಲೇಖನ ಹೊಸದಿಗಂತದ ಕ್ರೀಡಾ ಪುಟದಲ್ಲಿ ಪ್ರಕಟವಾಗಿದೆ )

No comments:
Post a Comment