(ಕತಾರ್) |
ದೇಶದ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡ ದೇಶಗಳು ಶ್ರೀಮಂತವಾಗಿವೆ. ಮಾನವ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ವಿಲವಾದ ರಾಷ್ಟ್ರಗಳು ಬಡವಾಗಿವೆ. ಭ್ರಷ್ಟಾಚಾರ, ಸದೃಢ ಆಡಳಿತ ಮುಂತಾದವುಗಳೂ ಕೂಡ ರಾಷ್ಟ್ರಗಳ ಅಭಿವೃದ್ಧಿಗೆ ಕಾರಣವಾಗಿವೆ.
ದೇಶದ ಶ್ರೀಮಂತಿಕೆಯನ್ನು ಅರಿಯಬೇಕಾದರೆ ಆಯಾಯಾ ದೇಶದ ಜಿಡಿಪಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ರಾಷ್ಟ್ರದ ಹಣಕಾಸಿನ ವೌಲ್ಯ, ಒಂದು ನಿಗದಿತ ವಸ್ತುವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಳ್ಳಬಹುದಾದ ಶಕ್ತಿ, ದೇಶಗಳು ಕೊಳ್ಳುವ ಶಕ್ತಿ ಇತ್ಯಾದಿಗಳ ಮೂಲಕ ದೇಶದ ಜಿಡಿಪಿಯನ್ನು ಅರಿಯಲಾಗುತ್ತದೆ. ಈ ಜಿಡಿಪಿಯನ್ನು ಆಧರಿಸಿಕೊಂಡು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜಾಗತಿಕವಾಗಿ ಯಾವ ದೇಶ ಶ್ರೀಮಂತ, ಯಾವ ದೇಶ ಬಡವಾಗಿದೆ ಎನ್ನುವುದನ್ನು ನಿರ್ಧರಿಸುತ್ತದೆ.
(ಲಕ್ಸೆಂಬರ್ಗ್) |
ಐಎಂಎಫ್ 2017ರ ಅಕ್ಟೋಬರ್ ತಿಂಗಳಿನಲ್ಲಿ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
1. ಕತಾರ್ (124,930 ಡಾಲರ್)
ಈ ವರ್ಷದ ಶ್ರೀಮಂತ ರಾಷ್ಟ್ರದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಕತಾರ್ ಕೇವಲ 22.7ಲಕ್ಷ ಜನಸಂಖ್ಯೆ ಹೊಂದಿದೆ. ಈ ವರ್ಷದ ಒಟ್ಟಾರೆ ಗಳಿಕೆಯನ್ನು ಹಂಚಿದರೆ ಪ್ರತಿ ನಾಗರಿಕನೂ 124,930 ರಷ್ಟು ಧನವನ್ನು ಪಡೆಯುತ್ತಾನೆ. ಈ ಮಾಹಿತಿಯೇ ಅಗ್ರಸ್ಥಾನ ಪಡೆಯಲು ನೆರವಾಗಿದೆ ಎಂದು ಐಎಂಎಫ್ ವರದಿ ಮಾಡಿದೆ. ತೈಲಬೆಲೆ ಇಳಿದಿದ್ದರೂ ಈ ದೇಶದ ಇನ್ನೊಂದು ಉತ್ಪನ್ನವಾದ, ಪರ್ಯಾಯ ಇಂಧನದ ರೂಪವಾದ ಹೈಡ್ರೋ ಕಾರ್ಬನ್ನುಗಳ ಮಾರಾಟ ಈ ದೇಶದ ಗಳಿಕೆಗೆ ನೆರವಾಗಿದೆ. ಜಿಡಿಪಿಯಲ್ಲಿ ಏರಿಕೆಯು ಈ ವರ್ಷವೂ ಮುಂದುವರೆಯಲಿದೆ ಎಂದು ಐಎಂಎಫ್ ಅಂದಾಜಿಸಿದೆ.
(ಸಿಂಗಾಪುರ) |
2. ಲಕ್ಸೆಂಬರ್ಗ್ (109,190 ಡಾಲರ್)
ಕೇವಲ ಆರು ಲಕ್ಷದಷ್ಟು ಜನಸಂಖ್ಯೆ ಇರುವ ಈ ರಾಷ್ಟ್ರ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಎರಡನೆಯ ಸ್ಥಾನ ಪಡೆಯಲು ಇದರ ನಾಗರಿಕರಲ್ಲಿ ಹೆಚ್ಚಿನವರು ಉದ್ಯೋಗಸ್ಥರಾಗಿರುವುದೇ ಕಾರಣವಾಗಿದೆ. 2016ರಲ್ಲಿ ಯೂರೋಪಿಯನ್ ಯೂನಿಯನ್ ನ ಒಟ್ಟಾರೆ ಏಳಿಗೆಗಿಂತಲೂ ಈ ದೇಶ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಶ್ರೀಮಂತಿಕೆ ತುಂಬಿ ತುಳುಕುತ್ತಿದೆ. ಆದರೆ ಬ್ರೆಕ್ಸಿಟ್ ಹಾಗೂ ಇತರ ಧೋರಣೆಗಳಲ್ಲಿ ಬದಲಾವಣೆಗಳಿಂದಾಗಿ ಅಮೇರಿಕಾಕ್ಕೆ ಎದುರಾದಂತೆಯೇ ಈ ದೇಶದ ಮೇಲೂ ಪ್ರಭಾವ ಬೀರಬಹುದೆಂದು ಐಎಂಎಫ್ ಅನುಮಾನ ವ್ಯಕ್ತಪಡಿಸಿದೆ.
(ಬ್ರೂನಿ) |
ವಿಶ್ವದ ಅತಿ ಶ್ರೀಮಂತ ರಾಷ್ಟವಾಗಲು ಈ 2017ರ ಮೊದಲ ಮೂರು ತಿಂಗಳಲ್ಲಿ ಜಿಡಿಪಿಯಲ್ಲಿ ಸಾಸಿದ 2.7% ರಷ್ಟು ಏರಿಕೆಯನ್ನು ಐಎಂಎಫ್ ಪರಿಗಣಿಸಿದೆ. ಅಜಮಾಸು ಐವತ್ತಾರು ಲಕ್ಷದ ಷ್ಟು ಜನಸಂಖ್ಯೆ ಹೊಂದಿರುವ ಈ ಪುಟ್ಟ ರಾಷ್ಟ್ರ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟದಿಂದ ಸತತ ಅಭಿವೃದ್ಧಿ ಸಾಸಿದ್ದರೂ ಕಳೆದ ವರ್ಷ ಕೊಂಚ ಹಿಂದೆ ಬಿದ್ದಿತ್ತು. ಆದರೆ ಈ ರಾಷ್ಟ್ರ ರ್ತುಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಕಾರಣ ಈ ಮೂಲಕ ಪಡೆಯುವ ಲಾಭ ದೇಶವನ್ನು ಶ್ರೀಮಂತವಾಗಿಸಲು ನೆರವಾಗಿದೆ.
4. ಬ್ರೂನಿ (76,740 ಡಾಲರ್)
2016ರಲ್ಲಿ ರಾಷ್ಟ್ರೀಯ ಆದಾಯದಲ್ಲಿ ಇಳಿಕೆ ಕಂಡಿದ್ದರೂ ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮವಾಗಿಯೇ ನಿರ್ವಹಿಸಿದೆ ಎಂದು ಜಾಗತಿಕ ಹಣಕಾಸು ನಿ ವರದಿ ಮಾಡಿದೆ. ಕೇವಲ ನಾಲ್ಕು ಲಕ್ಷ ನಾಗರಿಕರಿರುವ ಈ ದೇಶದ ಮುಖ್ಯ ಆದಾಯವಾದ ತೈಲದ ಬೆಲೆ ಕಳೆದ ಎರಡು ವರ್ಷಗಳಿಂದ ಇಳಿಕೆ ಕಂಡಿದೆ. ಆದರೆ ತೈಲ ರಪ್ತು ಇಳಿಕೆಯನ್ನು ಕಂಡಿದೆ. ಇದರಿಂದ ದೇಶದ ಶ್ರೀಮಂತಿಕೆ ಇಳಳಿಮುಖ ಕಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಶೇ. 90ರಷ್ಟು ಆದಾಯ ತೈಲ ಮತ್ತು ನೈಸರ್ಗಿಕ ಅನಿಲದ ಮಾರಾಟದಿಂದ ಬರುತ್ತಿದೆ. 2014ರಲ್ಲಿ ವಿಶ್ವದ ಅತಿ ಹೆಚ್ಚು ಆದಾಯವನ್ನು ಬ್ರೂನಿ ತೈಲ ಮಾರಾಟದಿಂದಲೇ ಗಳಿಸಿತ್ತು.
(ಐರ್ಲ್ಯಾಂಡ್) |
ಯೂರೋಪ್ ನಲ್ಲಿಯೇ ಅತಿ ಹೆಚ್ಚು ಶೀಘ್ರವಾಗಿ ಆರ್ಥಿಕ ಅಭಿವೃದ್ಧಿ ಸಾಸಿರುವ ದೇಶವಾಗಿರುವ ಐರ್ಲೆಂಡ್. ಇದು ಯೂರೋಪಿನ ಪ್ರಮುಖ ಐದು ಶ್ರೀಮಂತ ದೇಶಗಳಲ್ಲಿ ಒಂದು ಎನ್ನಿಸಿಕೊಂಡಿದೆ. 2016ರಲ್ಲಿ ಈ ದೇಶ ಹೂಡಿಕೆ, ಕಟ್ಟಡ ನಿರ್ಮಾಣ ಮುಂತಾದವುಗಳಿಗೆ ಆದ್ಯತೆ ನೀಡಿದೆ. ದೇಶದ ನೈಸರ್ಗಿಕ ಸಂಪತ್ತಿನ ಸದ್ಬಳಕೆಯಿಂದ ಜಿಡಿಪಿ ಏರಿಕೆಯನ್ನು ಕಂಡಿದೆ ಎಂದು ಐಎಂಎ್ ವರದಿ ಮಾಡಿದೆ.
6. ನಾರ್ವೆ (70,590 ಡಾಲರ್)
ಕೇವಲ ಐವತ್ತು ಲಕ್ಷದ ನಾಗರಿಕರಿರುವ ಈ ಸ್ಕಾಂಡಿನೀವಿಯನ್ ದೇಶ ಇದು. ಮ‘್ಯರಾತ್ರಿಯ ಸೂರ್ಯನ ನಾಡು ಎನ್ನುವ ಖ್ಯಾತಿಯೂ ನಾರ್ವೇಗೆ ಇದೆ. ವಿಶ್ವದ ಐದು ಶ್ರೀಮಂತ ರಾಷ್ಟ್ರಗಳ ಪಟ್ಟಿಯಿಂದ ಒಂದೇ ಹಂತ ದೂರದಲ್ಲಿದೆ. ಐಎಂಎ್ ಪ್ರಕಾರ ಕೆಳೆದ ಎರಡು ವರ್ಷಗಳಲ್ಲಿ ತೈಲಬೆಲೆ ಇಳಿಕೆಯಿಂದ ಪ್ರ‘ಾವಗೊಂಡಿತ್ತು. 2008 ಮತ್ತು 2009ರ ಆರ್ಥಿಕ ಹಿಂಜರಿತದಿಂದಲೂ ಈ ದೇಶ ನಲುಗಿತ್ತು. ಆದರೆ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಮತ್ತು ನಿರುದ್ಯೋಗ ಕಡಿಮೆ ಮಾಡಲು ಕೈಗೊಂಡ ಪ್ರಯತ್ನಗಳು ಈ ದೇಶವನ್ನು ಮತ್ತೊಮ್ಮೆ ಜಾಗತಿಕ ಶ್ರೀಮಂತ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದೆ.
(ನಾರ್ವೇ) |
ಅಜಮಾಸು ನಲವತ್ತು ಲಕ್ಷಗಳಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ದೇಶಕ್ಕೆ ತೈಲಮಾರಾಟವೇ ಪ್ರಮುಖ ಆದಾಯವಾಗಿತ್ತು. 2016ರಲ್ಲಿ ಇಳಿಕೆಯಾದ ತೈಲಬೆಲೆ ದೇಶದ ಆರ್ಥಿಕತೆಯ ಮೇಲೆ ಪ್ರ‘ಾವ ಬೀರಿತ್ತು ಎಂದು ಐಎಂಎ್ ವರದಿ ತಿಳಿಸುತ್ತದೆ. ಆದರೆ ತೈಲದ ಹೊರತಾಗಿ ಇತರ ಕ್ಷೇತ್ರಗಳಲ್ಲಿ ದೇಶ ಹೂಡಿದ ಹೂಡಿಕೆ ಈ ಹಿಂಜರಿಕೆಯಿಂದ ಹೊರಬರಲು ನೆರವಾಗಿದೆ ಹಾಗೂ ನೆರವಾಗುತ್ತಿದೆ.
8. ಸಂಯುಕ್ತ ಅರಬ್ ಸಂಸ್ಥಾನ (68,250 ಡಾಲರ್)
ತೈಲಬೆಲೆ ಹೆಚ್ಚಿದ್ದಾಗ ವಿಶ್ವದ ಶ್ರೀಮಂತ ರಾಷ್ಟ್ರವಾಗಿದ್ದ ಯು.ಎ.ಇ. ತೈಲಮಾರುಕಟ್ಟೆಯಲ್ಲಿ ಆಗಿರುವ ಇಳಿಕೆಯಿಂದ 2016ರಲ್ಲಿ ಪಟ್ಟಿಯಲ್ಲಿ ಕೆಳಗಿಳಿಯಬೇಕಿತ್ತು. ಆದರೆ ಈ ರಾಷ್ಟ್ರ ತೈಲದ ಮೇಲಿನ ಅವಲಂಬನೆಯಿಂದ ಹೊರಬರಲು 1994ರಲ್ಲಿ ಕೈಗೊಂಡಿದ್ದ ಕ್ರಮಗಳ ಪರಿಣಾಮವಾಗಿ ಇತರ ಕ್ಷೇತ್ರಗಳ ಮೇಲೆ ಹೂಡಿದ್ದ ಹೂಡಿಕೆಗಳು ಇಂದು ಲನೀಡುತ್ತಿದ್ದು ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಇಂದಿಗೂ ಸ್ಥಾನ ಪಡೆಯುವಂತಾಗಿದೆ. ಸುಮಾರು ಒಂದು ಕೋಟಿಯಷ್ಟು ನಾಗರಿಕರು ವಿಶ್ವದ ಅತ್ಯಂತ ಉನ್ನತ ಮಟ್ಟದ ಜೀವನವನ್ನು ನಡೆಸುತ್ತಿದ್ದಾರೆ. ಈ ಏರಿಕೆ 2017ರಲ್ಲಿ ಮುಂದುವರೆಯುತ್ತಾ ಸಾಗಿದೆ.
(ಕುವೈತ್) |
2015ರಲ್ಲಿ ಈ ದೇಶದ ಕೇಂದ್ರೀಯ ಬ್ಯಾಂಕ್ 52 ಬಿಲಿಯಲ್ ಡಾಲರುಗಳನ್ನು ಕಳೆದುಕೊಂಡ ಬಳಿಕ ಈಗ ಚೇತರಿಕೆಯ ಹಂತದಲ್ಲಿದೆ. 2016ರಲ್ಲಿ ನಿ‘ಾನವಾಗಿ ಚೇತರಿಸಿಕೊಳ್ಳುತ್ತಿರುವ ಈ ದೇಶ ಕಳೆದ ವರ್ಷ ಶೇ.1.5ನಷ್ಟು ಪ್ರಗತಿ ಸಾಸಿದೆ. ಅಲ್ಲದೇ ಈ ಹಿಂಜರಿತದಿಂದ ಹೊರಬರಲು ನಡೆಸುತ್ತಿರುವ ಪ್ರಯತ್ನಗಳು ಎಂಭತ್ತು ಲಕ್ಷ ಜನಸಂಖ್ಯೆಯ ಈ ದೇಶವನ್ನು ನಿಧಾನ ಹಿಂದಿನ ವೈಭವಕ್ಕೆ ಮರಳಿಸುತ್ತಿವೆ.
10. ಹಾಂಗ್‌ಕಾಂಗ್ (61,020 ಡಾಲರ್)
ಐಎಂಎ್ ನೀಡಿರುವ ವರದಿಯ ಪ್ರಕಾರ 2016ರಲ್ಲಿ ಈ ದೇಶದ ಪ್ರಗತಿಯ ಗತಿ ನಿ‘ಾನವಾಗಿತ್ತು. ಆದರೂ ಈ ದೇಶ ಪಟ್ಟಿಯಲ್ಲಿ ಕೊಂಚ ಕೆಳಕ್ಕೆ ಇಳಿದಿರಬಹುದೇ ಹೊರತು ಹೊರಬಿದ್ದಿಲ್ಲ. ಇಂದಿಗೂ ಈ ದೇಶ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿದೆ. ಕಳೆದ ವರ್ಷ ನೆರೆಯ ಚೀನಾದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಹಾಗೂ ದೇಶದ ಉತ್ಪನ್ನಗಳನ್ನು ಕೊಳ್ಳುವಿಕೆಯೂ ಕಡಿಮೆಯಾದ ಕಾರಣ ಹಿಂಜರಿತಕ್ಕೆ ಒಳಗಾಗಿತ್ತು. ಆದರೆ ಈ ವರ್ಷ ವಿವಿ‘ ಕ್ಷೇತ್ರಗಳಲ್ಲಿ ಹೂಡಿರುವ ಹೂಡಿಕೆಯ ಮೂಲಕ ಮತ್ತೊಮ್ಮೆ ಏರುಮುಖದತ್ತ ಸಾಗುತ್ತಿದೆ. ಪುಟ್ಟ ರಾಷ್ಟ್ರವಾಗಿದ್ದರೂ ಇದರ ಎಪ್ಪತ್ತು ಲಕ್ಷ ಜನರು ವಾಸವಾಗಿದ್ದು ಜಗತ್ತಿನ ಅತಿ ಹೆಚ್ಚಿನ ಜನಸಾಂದ್ರತೆ ಹೊಂದಿರುವ ದೇಶವಾಗಿದೆ.
(ಯುಎಇ) |
ಕೇವಲ ತೊಂ‘ತ್ತು ಲಕ್ಷ ಜನಸಂಖ್ಯೆ ಇರುವ ಈ ಪುಟ್ಟ ರಾಷ್ಟ್ರದಲ್ಲಿ ನಿರುದ್ಯೋಗ ನಿವಾರಣೆಗೆ ನೀಡಿರುವ ಹೆಚ್ಚಿನ ಒತ್ತು ಹಾಗೂ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ದೇಶದ ಏಳಿಗೆಗೆ ನೆರವಾಗಿದೆ. ಆರ್ಥಿಕ ಹಿಂಜರಿತದಿಂದ ನಲುಗಿದ್ದ ರಾಷ್ಟ್ರಕ್ಕೆ ಈ ಪ್ರಯತ್ನಗಳೇ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣವಾಗಿವೆ.
12. ಅಮೇರಿಕಾ ಸಂಯುಕ್ತ ಸಂಸ್ಥಾನ (59,500 ಡಾಲರ್) ಐಎಂಎ್ ಪ್ರಕಾರ, ಈ ವಿಶಾಲ ದೇಶದಲ್ಲಿ 32.5 ಕೋಟಿ ಜನರಿದ್ದು 1850ರಿಂದ ಈ ದೇಶ ಪಡೆದ ಅಗಾ‘ ಬೆಳವಣಿಗೆ ಹಾಗೂ ವಿಸ್ತರಣೆ ವಿಶ್ವದಲ್ಲಿಯೇ ಅಪ್ರತಿಮವಾಗಿದ್ದು ಈ ಬೆಳವಣಿಗೆ ಇಂದಿಗೂ ಮುಂದುವರೆಯುತ್ತಿದೆ. 2016ರ ಐಎಂಎ್ ವರದಿಯ ಪ್ರಕಾರ ಈ ದೇಶದಲ್ಲಿ ನಿರುದ್ಯೋಗ ಅತಿ ಕಡಿಮೆ ಇದ್ದು ವಿವಿ‘ ಕ್ಷೇತ್ರಗಳಲ್ಲಿ ಹೂಡಿರುವ ಬಂಡವಾಳ ಹಾಗೂ ಖರ್ಚು ಮಾಡುವ ಶಕ್ತಿ ಈ ದೇಶದ ಏಳ್ಗೆಗೆ ನೆರವಾಗುತ್ತಿವೆ.
(ಸ್ವಿಟ್ಜರ್ಲ್ಯೆಂಡ್) |
ಈ ದೇಶದ ಜಿಡಿಪಿ ಬಹುತೇಕವಾಗಿ ತೈಲದ ಮಾರಾಟವನ್ನೇ ಆಧರಿಸಿದೆ. ಇತ್ತೀಚಿನ ತೈಲಬೆಲೆಯಲ್ಲಿ ಕುಸಿತದ ಬಳಿಕ ಇತರ ಕ್ಷೇತ್ರಗಳಲ್ಲಿಯೂ ದೇಶ ಹೂಡಿರುವ ಹಣವನ್ನು ಪರಿಗಣಿಸಿ ಐಎಂಎಫ್ ಮುಂದಿನ ವರ್ಷಗಳಲ್ಲಿ ಪಡೆಯಬಹುದಾದ ಏಳಿಗೆಯನ್ನೂ ಮುಂಗಂಡು ಈ ಪಟ್ಟಿಯಲ್ಲಿ ಸ್ಥಾನ ನೀಡಿದೆ. 3.2 ಕೋಟಿ ಜನಸಂಖ್ಯೆಯ ಈ ದೇಶ ಈಗ ವಿಷನ್ 2030 ಅಥವಾ 2030ರಲ್ಲಿ ದೇಶ ಪಡೆಯಬೇಕಾದ ಏಳ್ಗೆಗಾಗಿ ಇಂದಿನ ಕ್ರಮಗಳನ್ನು ಹೊರಡಿಸಿದ್ದು ನಿ‘ಾನವಾಗಿ ತೈಲದ ಮೇಲಿನ ಅವಲಂಬನೆಯಿಂದ ಹೊರಬರುವ ಪ್ರಯತ್ನಗಳನ್ನು ನಡೆಸುತ್ತಿದೆ. ಇದೀಗ ದೇಶದ ಚುಕ್ಕಾಣಿ ಹಿಡಿದಿರುವವರ ಮನಸ್ಥಿತಿ ಆಧುನಿಕ ದೇಶ ನಿರ್ಮಾಣ ಮಾಡುವುದರತ್ತ ಒಲವು ಹೊಂದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸೌದಿ ಅರೆಬಿಯಾ ಇನ್ನಷ್ಟು ಆದಾಯ ಗಳಿಕೆ ಮಾಡಿಕೊಂಡು, ತನ್ನ ಸ್ಥಾನದಲ್ಲಿ ಏರಿಕೆಯನ್ನು ಕಂಡರೂ ಅಚ್ಚರಿ ಪಡಬೇಕಿಲ್ಲಘಿ.
14. ನೆದರ್ಲ್ಯಾಂಡ್ಸ್ (53,580 ಡಾಲರ್)
2016ರ ಅಂಕಿ ಅಂಶಗಳ ವರದಿಯನ್ನು ಗಮನಿಸಿದ ಐಎಂಎ್ ಹಿಂದಿನ ವರ್ಷಗಳಲ್ಲಿ ಎದುರಾಗಿದ್ದ ಆರ್ಥಿಕ ಹಿಂಜರಿತವನ್ನು ಎದುರಿಸಿ ಮುಂದೆ ಬರುವ ಪ್ರಯತ್ನ ಹಾಗೂ ಬ್ರೆಕ್ಸಿಟ್ ಒಪ್ಪಂದದ ಮೂಲಕ ದೇಶದ ಆರ್ಥಿಕತೆಗೆ ಎದುರಾಗಿದ್ದ ಕಂಟಕದಿಂದ ಪಾರಾಗುವ ಕ್ರಮಗಳನ್ನೂ ಪರಿಗಣಿಸಿದೆ. ನೆದರ್ಲ್ಯಾಂಡ್ಸ್ ವಾಸ್ತವವಾಗಿ ನೆದರ್ಲ್ಯಾಂಡ್ಸ್, ಅರೂಬಾ, ಕುರಾಕಾವೋ ಹಾಗೂ ಸೈಂಟ್ ಮಾರ್ಟೆನ್ ಎಂಬ ನಾಲ್ಕು ದೇಶಗಳನ್ನು ಸಂಯುಕ್ತವಾಗಿ ನೆದರ್ಲ್ಯಾಂಡ್ಸ್ ಅಪತ್ಯ ಎಂದು ಕರೆಯಲಾಗುತ್ತದೆ. ಡೆನ್ಮಾರ್ಕ್ ಎಂಬ ಹೆಸರೂ ಈ ದೇಶಕ್ಕಿದೆ. ಈ ದೇಶದ ಒಟ್ಟಾರೆ ಜನಸಂಖ್ಯೆ ಕೇವಲ 1.7 ಕೋಟಿ. ಇವರಲ್ಲಿ ಹೆಚ್ಚಿನವರು ನೆದರ್ಲ್ಯಾಂಡ್ಸ್‌ನ ಪ್ರಮುಖ ದ್ವೀಪದಲ್ಲಿಯೇ ನೆಲೆಸಿದ್ದಾರೆ.
(ಹಾಂಗ್ ಕಾಂಗ್) |
ಹೆಸರೇ ಸೂಚಿಸುವಂತೆ ಈ ರಾಷ್ಟ್ರ ಅತಿ ಶೀತಲವಾದ ಪ್ರದೇಶ ಹೊಂದಿದೆ. ದೇಶದ ಎತ್ತ ನೋಡಿದರೂ ಹಿಮವೇ ಆವೃತ್ತವಾಗಿದೆ. ದೇಶದಾದ್ಯಂತ ಇರುವ ಮಂಜೇ ಈ ದೇಶದ ಪ್ರಮುಖ ಆದಾಯ. ಈ ಹಿಮವನ್ನೇ ಪ್ರವಾಸೋದ್ಯಮಕ್ಕೆ ಬಳಸುವ ಮೂಲಕ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ದೇಶದ ಜಿಡಿಪಿ ಏರಲು ಬಳಸಿಕೊಂಡಿದೆ. ಈ ಪುಟ್ಟ ರಾಷ್ಟ್ರವನ್ನು ವೀಕ್ಷಣೆ ಮಾಡಲು ತೆರಳುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ತನ್ಮೂಲಕ ಆದಾಯ ಕೂಡ ಹೆಚ್ಚಳವಾಗುತ್ತಿದೆ. ಈ ಏಳಿಗೆಯನ್ನು ಗಮನಿಸಿದ ಐಎಂಎ್ ಅಂಕಿ ಅಂಶಗಳ ಆಧಾರದ ಮೇಲೆ ಈ ಬೆಳವಣಿಗೆ ಹೆಚ್ಚಿನ ಅವಯವರೆಗೆ ಮುಂದುವರೆಯಲಿದೆ ಎಂದು ಊಹಿಸಿ ಹದಿನೈದನೆಯ ಸ್ಥಾನವನ್ನು ನೀಡಿದೆ.
No comments:
Post a Comment