Tuesday, January 9, 2018

ಮಲ ಹೊರುವ ಪದ್ಧತಿ ಇನ್ನೂ ಜೀವಂತ

               ಭಾರತದಲ್ಲಿ ಮಲ ಹೊರುವ ಪದ್ಧತಿಯನ್ನು ಈಗಾಗಲೇ ನಿಷೇಸಲಾಗಿದೆ. ಮಲಹೊರುವ ಪದ್ಧತಿಯ ವಿರುದ್ಧ ಸರ್ಕಾರಗಳು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೂ ಕೂಡ ಪದೇ ಪದೆ ಇದರಿಂದ ದುರ್ಘಟನೆಗಳು ಜರುಗುತ್ತಲೇ ಇವೆ. ಕರ್ನಾಟಕದಾದ್ಯಂತ ಈ ಪದ್ಧತಿ ಸಂಪೂರ್ಣವಾಗಿ ನಿಷೇಧವಾಗಿದೆ ಎನ್ನುವುದು ಸರ್ಕಾರ ನೀಡುವ ಮಾಹಿತಿ. ಆದರೆ ಇದರಿಂದಾಗಿ ಆಗೀಗ ಕಾರ್ಮಿಕರು ಸಾಯುತ್ತಿರುವ ನಿದರ್ಶನಗಳು ನಡೆಯುತ್ತಲೇ ಇದೆ. ಶಿಕ್ಷಾರ್ಹವಾಗಿದ್ದರೂ ಮಲದ ಗುಂಡಿಯೊಳಕ್ಕೆ ಇಳಿಸುವ ಕಾರ್ಯಗಳು ನಡೆಯುತ್ತಲೇ ಇದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದ್ದ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ.
                  ಮಲ ಹೊರುವ ಪದ್ಧತಿ ಜೀವಂತ ಇರುವ ಪೈಕಿ ದೇಶದಲ್ಲಿಯೇ ಬಿಹಾರ ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ನಂತರ ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ ಇದೆ. ವಿವಿಧ ದಾಖಲೆಗಳ ಪ್ರಕಾರ ಕರ್ನಾಟಕದಲ್ಲಿ 15400 ಜನರು ಇಂದಿಗೂ ಮಲಹೊರುವ ಪದ್ಧತಿಯಿಂದಲೇ ಬದುಕು ನಡೆಸುತ್ತಿದ್ದಾರೆ. ಇದೀಗ ಮ್ಯಾನ್‌ಹೋಲ್‌ಗೆ ಇಳಿದು ಕಾರ್ಮಿಕರು ಮೃತಪಟ್ಟ ದುರಂತ ಘಟನೆ ಮರುಕಳಿಸಿದೆ. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಒಂದರ ತ್ಯಾಜ್ಯ ಶುದ್ಧೀಕರಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮೂವರು ‘ಾನುವಾರ ಮೃತಪಟ್ಟಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಸಮೀಪದ ಬಂಡೇಪಾಳ್ಯದ ಎನ್. ಡಿ. ಸೆಲ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ದುರಂತದಲ್ಲಿ ಮ್ಯಾನ್‌ಹೋಲ್‌ನಲ್ಲಿ ಇಳಿದಿದ್ದ ಸರ್ಜಾಪುರದ ನಿವಾಸಿ  ಕೋಲಾರದ ನಾರಾಯಣ ಸ್ವಾಮಿ (40), ತುಮಕೂರಿನ ನಿಟ್ಟೂರಿನ ಶ್ರೀನಿವಾಸ್ (38), ಚಿಕ್ಕಮಗಳೂರಿನ ಮಹದೇವಪ್ಪ (35) ಮೃತಪಟ್ಟಿದ್ದು ಮಲ ಹೊರುವ ಪದ್ಧತಿಯ ದುರಂತಗ್ಳ ಸಾಲಿಗೆ ಇನ್ನೊಂದು ಸೇರ್ಪಡೆಯಾದಂತಾಗಿದೆ.


ಏನಿದು ಮಲ ಹೊರುವ ಪದ್ಧತಿ?
ಕಟ್ಟಿಕೊಂಡಿರುವ ಶೌಚಾಲಯ ಗುಂಡಿಗಳನ್ನು ಕಾರ್ಮಿಕರು  ಸ್ವಚ್ಛಗೊಳಿಸುವುದು, ಸೆಪ್ಟಿಕ್ ಟ್ಯಾಂಕುಗಳ ತ್ಯಾಜ್ಯಗಳನ್ನು ಬಕೆಟ್ ಅಥವಾ ಇನ್ಯಾವುದೇ ರೀತಿಯ ವಸ್ತುಗಳ ಮೂಲಕ ತಲೆಯ ಮೇಲೆ ಹೊತ್ತು ಬೇರೆಡೆಗೆ ಸಾಗಿಸುವುದನ್ನೇ ಮಲ ಹೊರುವ ಪದ್ಧತಿ ಎನ್ನಲಾಗುತ್ತದೆ. ಹಾಳಾಗಿರುವ ಶೌಚಾಲಯದ ಗುಂಡಿಗಳನ್ನು ಸ್ವಚ್ಛಗೊಳಿಸುವುದೂ ಕೂಡ ಮಲಹೊರುವ ಪದ್ಧತಿಯ ವ್ಯಾಪ್ತಿಯಲ್ಲಿಯೇ ಬರುತ್ತದೆ. ಮಲವನ್ನು ಹೊರುವುದಕ್ಕೇ ಪ್ರತ್ಯೇಕ ವ್ಯಕ್ತಿಗಳಿದ್ದು, ಶೌಚಾಲಯದ ಟ್ಯಾಂಕ್‌ಗಳಿಗೆ ಇಳಿದು ಸ್ವಚ್ಛಗೊಳಿಸುತ್ತಾರೆ. ಮಲಹೊರುವ ಪದ್ಧತಿಯನ್ನೇ ಜೀವನಾಧಾರ ಮಾಡಿಕೊಂಡಿರುವ ವರ್ಗವೊಂದಿದ್ದುಘಿ, ಮಲ ಹೊರುವ ಮೂಲಕ ಬರುವ ಆದಾಯವನ್ನು ಜೀವನ ನಿರ್ವಹಣೆಗೆ ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ಕಾರ್ಮಿಕರನ್ನು ಮಲ ಹೊರುವ ಪದ್ಧತಿಗೆ ಬಲವಂತವಾಗಿಯೂ ತಳ್ಳಲಾಗುತ್ತಿದೆ. ಜೊತೆಗೆ ವಿವಿಧ ಆಮಿಷಗಳನ್ನು ಒಡ್ಡುವ ಮೂಲಕ ಮಲ ಹೊರುವ ಪದ್ಧತಿಯ ಕಡೆಗೆ ತಳ್ಳಲಾಗುತ್ತಿದೆ.

ಇತಿಹಾಸ
ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹರಪ್ಪ-ಮೊಹೆಂಜೋದಾರೋ ನಾಗರೀಕತೆಯ ಕಾಲದಿಂದಲೂ ಮಲ ಹೊರುವ ಪದ್ಧತಿ ಅಸ್ತಿತ್ವದಲ್ಲಿ ಇರುವುದು ಗಮನಕ್ಕೆ ಬರುತ್ತದೆ. ತದನಂತರದಲ್ಲಿ ಇದೊಂದು ಜಾತಿ ಆಧಾರಿತ ಕಸುಬಾಗಿ ಬೆಳೆದು ಬಂದಿದೆ. ಮಧ್ಯ ಕಾಲೀನ ಭಾರತದಲ್ಲಿ ಮಲ ಹೊರಲು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನೇ ಬಳಕೆ ಮಾಡಲಾಗುತ್ತಿತ್ತು. ಅಲ್ಲದೇ ವ್ಯಾಪಕವಾಗಿ ಜಾರಿಯಲ್ಲಿತ್ತು ಎನ್ನುವುದನ್ನು ಆ ಸಂದ‘ರ್ಗಳ ಸಾಹಿತ್ಯ ಕೃತಿಗಳು ಪುಷ್ಠಿ ನೀಡುತ್ತವೆ. ಬೌದ್ಧರ ಕಾಲದಲ್ಲಿ ಹಾಗೂ ವೌರ್ಯರ ಕಾಲದಲ್ಲಿಯೂ ಮಲ ಹೊರುವ ಪದ್ಧತಿ ಜಾರಿಯಲ್ಲಿತ್ತು. 1556ರಲ್ಲಿ ಜುನಾಘಡದಲ್ಲಿ 100ಕ್ಕೂ ಅಕ ಮಲಹೊರುವ ಕುಟುಂಬಗಳಿದ್ದವು ಎಂಬುದು ದಾಖಲೆಗಳಲ್ಲಿ ಉಲ್ಲೇಖಗೊಂಡಿದೆ. ಮೊಘಲರು ಹಾಗೂ ರಜಪೂತರ ಕಾಲದಲ್ಲಿ ಮಲ ಹೊರುವವರನ್ನು ಭಂಗಿಗಳು ಎಂದು ಕರೆದ ಉಲ್ಲೇಖ ಕೂಡ ಇದೆ. ಬ್ರಿಟೀಷ್ ಆಡಳಿತದ ಸಂದರ್ಭದಲ್ಲಿ ನಗರ ಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಲ ಹೊರುವ ಕಾರ್ಮಿಕರನ್ನು ನೇಮಕ ಮಾಡಿಕೊಂಡ ನಿದರ್ಶನಗಳಿವೆ.
ಭಾರತದಲ್ಲಿ ಮಾತ್ರವಲ್ಲ ಯೂರೋಪ್ ರಾಷ್ಟ್ರಗಳು ಮಲಹೊರುವ ಪದ್ಧತಿ ಇದೆ. ಮಲಹೊರುವ ಪ್ರತ್ಯೇಕ ಜಾತಿಯೂ ಕೂಡ ಯೂರೋಪ್ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದೆ. ಯೂರೋಪ್ ರಾಷ್ಟ್ರಗಳಲ್ಲಿ ಮಲ ಹೊರುವವರನ್ನು ನೈಟ್ ಸಾಯಿಲ್ ಕಲೆಕ್ಟರ್ಸ್‌ ಎಂದು ಕರೆಯಲಾಗುತ್ತದೆ. ಅಥವಾ ನೈಟ್‌ಮೆನ್ಸ್ ಹಾಗೂ ಗಾಂಗ್ ಫಾರ್ಮರ್ಸ್ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ 20ನೇ ಶತಮಾನದ ಉತ್ತರಾ‘ರ್ದ ವರೆಗೂ ಮಲಹೊರುವ ಪದ್ಧತಿ ಜೀವಂತ ಇತ್ತುಘಿ. ಆಸ್ಟ್ರೇಲಿಯಾದಲ್ಲಿ ಮಲ ಹೊರುವವರನ್ನು ಡನ್ನೀ ಮ್ಯಾನ್ಸ್ ಎಂದೂ ಮಲ ಹೊರುವ ಪದ್ಧತಿಗೆ ಡನ್ನೀಸ್ ಎಂದೂ ಕರೆಯಲಾಗುತ್ತಿತ್ತುಘಿ. ಹೈಟಿ ಗಣರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇಂದಿಗೂ ಜಾರಿಯಲ್ಲಿದ್ದು ಇವರನ್ನು ಬೈಹೋಕು ಎಂದು ಕರೆಯಲಾಗುತ್ತದೆ.

ಮಲ ಹೊರುವ ಪದ್ಧತಿ ನಿಷೇ
ಭಾರತದಲ್ಲಿ ಮಲ ಹೊರುವ ಪದ್ಧತಿಯನ್ನು ನಿಷೇಸಲಾಗಿದೆ. 1950ರ ದಶಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಜಿ. ಎಸ್. ಲಕ್ಷ್ಮಣ ಅಯ್ಯರ್ ಅವರು ಗೋಬಿಚೆಟ್ಟಿಪಾಳ್ಯಂ ಮುನ್ಸಿಪಾಲ್ಟಿಯಲ್ಲಿ ಮಲಹೊರುವ ಪದ್ಧತಿಯನ್ನು ಮೊಟ್ಟ ಮೊದಲ ಬಾರಿಗೆ ನಿಷೇ‘ ಮಾಡಿದರು. ನಂತರ ವಿವಿಧ ನಗರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಮಲ ಹೊರುವ ಪದ್ಧತಿ ನಿಷೇಸಲಾಯಿತು.

1993ರಲ್ಲಿ ಪ್ರತ್ಯೇಕ ಕಾಯ್ದೆ :
1993ರಲ್ಲಿ ಮಲ ಹೊರುವುದನ್ನು ನಿಷೇಸುವ ಸಲುವಾಗಿಯೇ ದಿ ಎಂಪ್ಲಾಯ್‌ಮೆಂಟ್ ಆ್ ಮ್ಯಾನುವಲ್ ಸ್ಕೇವೇಜಿಂಗ್ ಆ್ಯಂಡ್ ಕನ್ಸ್‌ಟ್ರಕ್ಷನ್ ಆ್ ಡ್ರೈ ಲ್ಯಾಟ್ರೀನ್ಸ್ (ನಿಷೇ‘) ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಅನ್ವಯ ಮಲ ಹೊರುವ ಪದ್ಧತಿ ಶಿಕ್ಷಾರ್ಹ ಎಂದು ಘೋಷಿಸಲಾಯಿತಲ್ಲದೇ ದೇಶಾದ್ಯಂತ ಮಲ ಹೊರುವ ಪದ್ಧತಿಯನ್ನು ನಿಷೇಸಲಾಯಿತು. ಪ್ರ‘ಾನ ಮಂತ್ರಿ ನರಸಿಂಹರಾವ್ ಸರ್ಕಾರದ ಆಡಳಿತಾವಯಲ್ಲಿ ಈ ಕಾನೂನನ್ನು ಜಾರಿಗೆ ತರಲಾಯಿತು. ಈ ಕಾನೂನಿನ ಪ್ರಕಾರ ಒಣಗಿದ ಶೌಚಾಲಯ ಟ್ಯಾಂಕ್ ಸ್ವಚ್ಛಗೊಳಿಸಲು ನೇರವಾಗಿ ಅಥವಾ ಪರೋಕ್ಷವಾಗಿ ನೇಮಕ ಮಾಡಿಕೊಂಡರೆ ಅಥವಾ ಬಳಕೆ ಮಾಡಿಕೊಂಡರೆ 1 ವರ್ಷ ಜೈಲು ಶಿಕ್ಷೆ ಹಾಗೂ 2000 ರೂಪಾಯಿ ದಂಡ ವಿಸುವುದು ಹಾಗೂ ಮಲ ಹೊರುವುದಕ್ಕೆ ಒತ್ತಾಯ ಮಾಡಿದರೆ ಅಥವಾ ಬಲವಂತವಾಗಿ ಮಲ ಹೊರಿಸಿದರೆ ಕನಿಷ್ಟ 20 ವರ್ಷ ಜೈಲುಶಿಕ್ಷೆಯ ವಿಧಿಸಲಾಗುತ್ತದೆ.

2013ರ ಎಂ. ಎಸ್ ಕಾಯ್ದೆ (ದಿ ಪ್ರಾಹಿಬಿಷನ್ ಆ್ ಎಂಪ್ಲಾಯ್‌ಮೆಂಟ್ ಆಸ್ ಮ್ಯಾನ್ಯುಯಲ್ ಸ್ಕೇವೇಜರ್ಸ್ ಆ್ಯಂಡ್ ದೇರ್ ರಿಹ್ಯಾಬಿಲಿಯೇಶನ್ ಆಕ್ಟ್ )
2013ರ ಸೆಪ್ಟೆಂಬರ್ ತಿಂಗಳಿನಲಲ್ಲಿ ಮಲ ಹೊರುವ ಪದ್ಧತಿ ನಿಷೇ‘ ಹಾಗೂ ಮಲ ಹೊರುವವರಿಗೆ ಪುನರ್ವಸತಿ ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಪ್ರಕಾರ ಮಲ ಹೊರುವುದನ್ನು ದೇಶಾದ್ಯಂತ ನಿಷೇಸುವುದಲ್ಲದೇ, ಮಲ ಹೊರುವವರಿಗೆ ವಸತಿ, ಜಮೀನು ಸೇರಿದಂತೆ ಸಕಲ ರೀತಿಯ ಸರ್ಕಾರಿ ಸೌಲ‘್ಯಗಳನ್ನು ಒದಗಿಸುವ ನಿರ್ಣಯ ಕೈಗೊಳ್ಳಲಾಯಿತು. ಸುಪ್ರಿಂ ಕೋರ್ಟ್ ಕೂಡ ಮಲ ಹೊರುವ ಪದ್ಧತಿಯನ್ನು ನಿಷೇಸಿದ್ದಲ್ಲದೇ ಶಿಕ್ಷಾರ್ಹ ಎಂದು ಘೊಷಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಲ ಹೊರುವ ಪದ್ಧತಿಯನ್ನು ತಡೆಯುವ ನಿಟ್ಟಿನಲ್ಲಿ ಕಾಯ್ದೆಯನ್ನು ರೂಪಿಸಿತು. ಪ್ರಸ್ತುತ ಈ ಕಾಯ್ದೆಯನ್ನು ಉಲ್ಲಂಘಿಸಿದರೆ 2 ಲಕ್ಷ ರೂಪಾಯಿಗಳಷ್ಟು ದಂಡ ಹಾಗೂ 6 ತಿಂಗಳ ವರೆಗೆ ಜಾಮೀನುರಹಿತ ಶಿಕ್ಷೆಯನ್ನು ವಿಸಲಾಗುತ್ತದೆ.

ಪ್ರಸ್ತುತ ಪರಿಸ್ಥಿತಿ
ವಿವಿ‘ ಖಾಸಗಿ ಸಂಸ್ಥೆಗಳು ನಡೆಸಿದ ಅ‘್ಯಯನದ ಪ್ರಕಾರ ಭಾರತದಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ. ಭಾರತದ ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತ್ರಿಪುರ, ಗುಜರಾತ್ ಈ ಮುಂತಾದ ರಾಜ್ಯಗಳಲ್ಲಿ ಮಲ ಹೊರುವ ಪದ್ಧತಿ ಹೆಚ್ಚಿನ ಸಂಖ್ಯೆಯಲ್ಲಿದೆ. ದಾಖಲೆಯೊಂದರ ಪ್ರಕಾರ ದೇಶದ 9 ರಾಜ್ಯಗಳಲ್ಲಿ ಮಲ ಹೊರುವ ಪದ್ಧತಿ ಜೀವಂತವಾಗಿದೆ. ಅದರಲ್ಲಿ ಕರ್ನಾಟಕವೂ ಒಂದು ಎನ್ನುವ ಕುಖ್ಯಾತಿಯಿದೆ. 2011ರ ಜನಗಣತಿಯ ಪ್ರಕಾರ ದೇಶದಾದ್ಯಂತ 7,94,000 ಪ್ರಕರಣಗಳು ದಾಖಲಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 13 ಸಾವಿರಕ್ಕೂ ಅಕ ಮಲಹೊರುವವರನ್ನು ಗುರುತಿಸಲಾಗಿದೆ. ಅಲ್ಲದೇ 2013ರಲ್ಲಿ ಸಾಯಿ ಕರ್ಮಚಾರಿ ಆಯೋಹವು ಮನೆ ಮನೆಗೂ ತೆರಳಿ ಮಲ ಹೊರುವ ಕಾರ್ಯದಲ್ಲಿ ತೊಡಗಿರುವವರನ್ನು ಗುರುತಿಸಿದ್ದಾರೆ. ಆ ಪ್ರಕಾರವಾಗಿ ಬೆಂಗಳೂರಿನಲ್ಲಿ ಇಂದಿಗೂ 202 ಜನರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ಗ್ರಾಮೀಣ ‘ಾಗಗಳಲ್ಲಿ 470 ಹಾಗೂ ನಗರ ಪ್ರದೇಶಗಳಲ್ಲಿ 302 ಜನರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯದ ವಿವಿ‘ ಜಿಲ್ಲೆಗಳಲ್ಲಿ ಮಲ ಹೊರುವ ಪದ್ಧತಿ ಆಗಾಗ ಬೆಳಕಿಗೆ ಬರುತ್ತಲೇ ಇದೆ. 6 ತಿಂಗಳ ಹಿಂದೆ ಮೈಸೂರಿನಲ್ಲಿ ಗ್ರಾಘಿ.ಪಂ ಅ‘್ಯಕ್ಷೆಯೋರ್ವರು ಬಲವಂತವಾಗಿ ಕಾರ್ಮಿಕನೋರ್ವನನ್ನು ಮಲದ ಗುಂಡಿಗೆ ಇಳಿಸಿದ್ದು ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತುಘಿ.

ರಾಜ್ಯದಲ್ಲಿ ಮ್ಯಾನ್‌ಹೋಲ್‌ನಲ್ಲಿ ಸತ್ತವರು
2008ರ ನವೆಂಬರ್ 14ರಂದು ಯಲಹಂಕ ನ್ಯೂಟೌನ್‌ನಲ್ಲಿ ಮೃತಪಟ್ಟವರ ಸಂಕ್ಯೆ 3
2009ರ ಮೇ 9ರಂದು ಪೀಣ್ಯ 2ನೇ ಹಂತದಲ್ಲಿ ಮೃತಪಟ್ಟವರ ಸಂಕ್ಯೆ 3
2012ರ ಜುಲೈ 14ರಂದು ಅರಕೆರೆಯಲ್ಲಿ ಮೃತಪಟ್ಟವರ ಸಂಕ್ಯೆ 2
2014ರ ಜನವರಿ 18ರಂದು ಕೆ. ಪಿ. ಅಗ್ರಹಾರದಲ್ಲಿ ಮೃತಪಟ್ಟವರ ಸಂಖ್ಯೆ 2
2014ರ ಆಗಸ್ಟ್ 30ರಂದು ಮಹದೇವಪುರದಲ್ಲಿ ಮೃತಪಟ್ಟವರ ಸಂಖ್ಯೆ 1
2014ರ ಸೆಪ್ಟೆಂಬರ್ 24ರಂದು ನಾಗವಾರದಲ್ಲಿ ಮೃತಪಟ್ಟವರ ಸಂಖ್ಯೆ 2
2015ರ ಜುಲೈ 15ರಂದು ಯಲಹಂಕದಲ್ಲಿ ಸತ್ತವರ ಸಂಕ್ಯೆ 2
2015ರ ಆಗಸ್ಟ್ 18ರಂದು ಜಯಮಹಲ್‌ನಲ್ಲಿ ಸತ್ತವರ ಸಂಕ್ಯೆ 2
2015ರ ಆಗಸ್ಟ್ 19ರಂದು ಗೋರಗುಂಟೆ ಪಾಳ್ಯದಲ್ಲಿ ಸತ್ತವರ ಸಂಕ್ಯೆ 2
2016ರ ಮಾರ್ಚ್ 7ರಂದು ಕಗ್ಗದಾಸಪುರದಲ್ಲಿ ಸತ್ತವರ ಸಂಕ್ಯೆ 3
2008ರಿಂದ 10 ವರ್ಷಗಳ ಅವಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮ್ಯಾನ್‌ಹೋಲ್ ಮತ್ತು ಎಸ್‌ಟಿಪಿ ದುರಸ್ತಿ ವೇಳೆ ಒಟ್ಟೂ 31 ಜನರು ಮೃತಪಟ್ಟಿದ್ದಾರೆ.

ನಿಯಮಗಳು
ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳ ಒಳಚರಂಡಿ ಸುರಕ್ಷತಾ ಕೈಪಿಡಿ ಕರಡು 2012ರ ನಿಯಮಗಳ ಪ್ರಕಾರ ಪರ್ಯಾಯ ಮಾರ್ಗಗಳಿಲ್ಲದ ಸಂದ‘ರ್ದಲ್ಲಿ ಅಗತ್ಯದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಅಥವಾ ಎಸ್‌ಟಿಪಿಗೆ ಇಳಿಸಬಹುದು. ಆದರೆ ಒಳಗೆ ಇಳಿದ ಸಂದ‘ರ್ಗಳಲ್ಲಿ ಅವರಿಗೆ ಆಮ್ಲಜನಕ ಪೂರೈಸುವುದು ಸೇರಿದಂತೆ ಅಗತ್ಯ ಸುರಕ್ಷತೆಗಳನ್ನು ಒದಗಿಸಬೇಕು.
ಮ್ಯಾನ್‌ಹೋಲ್‌ನಲ್ಲಿ ಹಾಗೂ ಎಸ್‌ಟಿಪಿಗಳಲ್ಲಿ ಮೀಥೇನ್, ಕಾರ್ಬನ್ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲಗಳಿರುತ್ತವೆ. ಹೀಗಾಗಿ ಇಳಿಯುವುದಕ್ಕೂ ಮೊದಲು ಕನಿಷ್ಠ ಒಂದು ತಾಸುಗಳ ಕಾಲ ಮುಚ್ಚಳವನ್ನು ತೆರೆದಿಡಬೇಕು. ಇಳಿಯುವುದಕ್ಕೂ ಮೊದಲು ಮೈಗೆ ಕೊಬ್ಬರಿ ಎಣ್ಣೆ ಸವರಿಕೊಂಡು, ಮಾಸ್ಕ್‌, ಕೈಗವಸು ಹಾಗೂ ಬೂಟು ಧರಿಸಿ ಗುಂಡಿಗೆ ಇಳಿಯಬೇಕು.
ನಂತರ ಪ್ರತಿ ಮೂರು ನಿಮಿಷಕ್ಕೊಮ್ಮೆ ಸಹಾಯಕರು ಅನಿಲ ಪರೀಕ್ಷೆ ಮಾಡುತ್ತಿರಬೇಕು. ಗುಂಡಿಯೊಳಗಿನ ವಿಷ ಅನಿಲದಿಂದ ರಕ್ಷಣೆ ನೀಡಲು ಹೊರಗಿನ ಗಾಳಿಯನ್ನು ಬ್ಲೋವರ್ಸ್ ಮೂಲಕ ಒಳಗೆ ಹಾಯಿಸಬೇಕು. ಜೊತೆಗೆ ಗುಂಡಿಯೊಳಕ್ಕೆ ಇಳಿದ ಕಾರ್ಮಿಕರ ಜೊತೆ ಸದಾ ಮಾತನಾಡುತ್ತಿರಬೇಕು.

ಮಲ ಹೊರುವ ಪದ್ಧತಿ ವಿರುದ್ಧ ಜಾಗೃತಿ
ಬೆಜವಾಡ ವಿಲ್ಸನ್‌ಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ
ಕೆಜಿಎ್ನ ಬೆಜವಾಡ ವಿಲ್ಸನ್ ಅವರು ಮಲ ಹೊರುವ ಪದ್ಧತಿಯ ವಿರುದ್ಧ ಜನಜಾಗೃತಿ ಕಾರ್ಯಗಳನ್ನು ಕೈಗೊಂಡವರು. ರಾಷ್ಟ್ರೀಯ ಸಾಯಿ ಕರ್ಮಚಾರಿ ಆಂದೋಲನದ ಸಂಚಾಲಕರು. 1986ರಿಂದ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿಯ ವಿರುದ್ಧ ಮಲ ಹೊರುವ ಕಾರ್ಮಿಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳುತ್ತ ಬಂದಿದ್ದಾರೆ. ಕೋಲಾರದ ಕೆಜಿಎ್ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಆಂದೋಲನ ಕೈಗೊಂಡರು. ಮಲ ಹೊರುವ ಪದ್ಧತಿ ನಿಷೇಸುವಂತೆ ರಾಷ್ಟ್ರಪತಿ, ಪ್ರ‘ಾನ ಮಂತ್ರಿ ಹಾಗೂ ಇತರ ಜನಪ್ರತಿನಿಗಳಿಗೆ ಪತ್ರ ಚಳುವಳಿ ಮೂಲಕ ತ್ತಡ ಹೇರಿದರು. ಇವರಿಗೆ 2017ರ ಜುಲೈ 27ರಂದು ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿದೆ.

ಆಗಬೇಕಿದೆ ಕಟ್ಟುನಿಟ್ಟಿನ ಕ್ರಮ :
ಮಲ ಹೊರುವ ಪದ್ಧತಿ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ನಿಷೇ‘ವಾಗಬೇಕಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಈ ಪದ್ಧತಿಯಿಂದಾಗಿ ಕಾರ್ಮಿಕರು ಸಾಯುತ್ತಿದ್ದರೂ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಮಲ ಹೊರುವವರಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಮಲ ಹೊರಲು ಒತ್ತಾಯಿಸುವವರ ಹಾಗೂ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಾಗ ಮಾತ್ರ ಮಲ ಹೊರುವ ಪದ್ಧತಿಯನ್ನು ಅಂತ್ಯಗೊಳಿಸಬಹುದಾಗಿದೆ.

No comments:

Post a Comment