Thursday, January 4, 2018

ಕೊನೆ ಗೌಡ ಬರ್ತ್ನೋ ಇಲ್ಯೋ


ಅಡಿಕೆಯೆಲ್ಲ ಹಣ್ಣಾತು
ಗೋಟಾಗಿ ಉದುರಿ ಹೋತು
ಇವತ್ತಾದ್ರೂ
ಕೊನೆ ಗೌಡ ಬರ್ತ್ನೋ ಇಲ್ಯೋ |

ಮುಂಗಡ ದುಡ್ ಕೊಟ್ಟಿದ್ದಿದ್ದು
ಅಡಕೆ ಹೆಕ್ಕವ್ ಬಂದದ್ದಿದ್ದು
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಕೊನೆ ಹಿಡಿಯಂವ್ ತಯಾರಿದ್ದ
ಅಡಿಗೆ ಮಾಡವ್ವೂ ಗಟ್ಯಾಗಿದ್ದ
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಎಂಟು ನೂರು ರೂಪಾಯ್ ಕೊಡಂವ್ ಇದ್ದಿ
ಮೆಹರುಬಾನಿಕೆ ಮಾಡಂವ್ ಇದ್ದಿ
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಎಲ್ಲಾ ಅಡಿಕೆ ಉದುರ್ತಾ ಇದ್ದು
ಮಂಡಗಾದಿಗೆಲ್ ತೇಲ್ತಾ ಇದ್ದು
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಅಡಿಕೆಗೆ ರೇಟು ಚೊಲೋ ಬಂಜು
ಕೆಜಿಗೆ ಸಾವಿರ ದಾಟಿ ಹೋಜು
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

-------------

(ಈ ಕವಿತೆ ಬರೆದಿದ್ದು ಜ.4, 2018ರಂದು, ಬೆಂಗಳೂರಿನಲ್ಲಿ)



1 comment:

  1. ಚೆನ್ನಾಗಿದೆ ಇನ್ನೂ ಹೆಚ್ಚು ಹಿಗೆ ಹವ್ಯಕ ಭಾಷೆಲಿ ಲೇಖನಗಳು ಮೂಡಿ ಬರಲಿ ನಿಮ್ಮಿಂದ

    ReplyDelete