ಒಂದು ದಿನ ಪೇಟೆಯ ದನಗಳು
ಹಳ್ಳಿಯ ಕಡೆಗೆ ವಲಸೆ ಹೊರಟವು |
ಪೇಟೆ ಬೇಜಾರಾಗಿಬಿಟ್ಟಿದೆ
ಹಳ್ಳಿ ಬದುಕು ಮಜಾ ಮಾಡೋಣ
ಎಂದು ಧಾವಿಸಿದವು |
ಹಳ್ಳಿಗೇನೋ ಬಂದೇಬಿಟ್ಟವು
ಎಲ್ಲವೂ ಚಿತ್ರ ವಿಚಿತ್ರ |
ಹಳ್ಳಿಯಲ್ಲೂ ದನಗಳಿವೆ
ಬಡಕಲು ಶರೀರಿ ಸಾಧು |
ಪೊಗರು ಮಾಡೋದಿಲ್ಲ |
ಅಲ್ಲೆಲ್ಲೋ ವಾಹನ ಬಂದರೂ
ದೂರಕೆ ಓಡ್ತಾವಲ್ಲ ||
ನಮ್ಮಲ್ಲೆಲ್ಲೂ ಹಂಗೇನಿಲ್ಲ..
ಗಾಡಿಯ ಸದ್ದಿಗೆ ಹೆದರೋದಿಲ್ಲ
ಉಜ್ಜಿಕೊಂಡೇ ಸಾಗುವವರು ನಾವು |
ಬೇಕಾದ್ರೆ ಜೀವ
ಉಳಿಸ್ಕೋಬೇಕು ನೀವು ||
ಹಳ್ಳಿದನಗಳು ತಿಂತಾವಂತೆ
ಅದೇನೋ ಹಸಿರು ಹುಲ್ಲು |
ನಮ್ ಬಾಯಿಗೆ ಅದು ರುಚಿಸೋದಿಲ್ಲ
ಹುಲ್ಲಿನ ರುಚಿ ಗೊತ್ತೇ ಇಲ್ಲ |
ನಮ್ಮದೇನಿದ್ರೂ ಪ್ಲಾಸ್ಟೀಕ್ ಚೀಲ
ಗೋಡೆಮೇಲಿನ ಕಾಗದ ಎಲ್ಲೋ ||
ನಗರದ ಹಸುಗಳು ನಾವೇನಿದ್ದರು
ನೋಡಲು ದಷ್ಟಪುಷ್ಟ |
ಹಳ್ಳಿ ಹಸುಗಳು ಎಲುಬು ಚಕ್ಕಳ
ಪಾಪ ಕಷ್ಟ ಕಷ್ಟ ||
ನಗರದ ತುಂಬ ನಾವೇ ರಾಜರು
ಬಿಡಾಡಿ ದನಗಳು ನಾವು |
ಕೇಳೋರಿಲ್ಲ ಕಟ್ಟೋರಿಲ್ಲ
ಸ್ವರ್ವ ಸ್ವತಂತ್ರರ ತಾವು |
ಹಳ್ಳಿ ದನಗಳಿಗೆ ಹಗ್ಗದ ಬಂಧನ
ಬಿಚ್ಚಲೆ ಬೇಕು ಹಗ್ಗ |
ಕಟ್ಟ ಬೇಕು, ಅಟ್ಟಬೇಕು
ಸ್ವಾತಂತ್ರ್ಯವೇ ಇಲ್ಲ ||
ನಗರದ ಬೀದಿಯು ನಮಗೆ ಜಗತ್ತು
ನಮಗ್ಯಾರ ಹಂಗಿಲ್ಲ |
ಓಡಿದರೂನೂ ಕುಣಿದರೂನೂ
ನಮ್ಮನು ಕೇಳೋರಿಲ್ಲ ||
ರಸ್ತೆಯೇ ನಮ್ಮ ಮನೆ
ರಸ್ತೆಯೇ ಹಾಸಿಗೆ
ಹಳ್ಳೀಲಿ ಹೀಗೇನಿಲ್ಲ |
ಕೊಟ್ಟಿಗೆಯಂತೆ ಕಟ್ಟಿ ಹಾಕುವರು
ಕುತ್ತಿಗೆಗೊಂದು ಹಗ್ಗ ||
ಹೊಟ್ಟೆಗೆ ಅಷ್ಟು ಹುಲ್ಲು, ನೀರು
ಹಾಲಿನ ಬಯಕೆ ಪಕ್ಕಾ ||
ಹಳ್ಳಿ ದನಗಳು ಹಾಲನು ಕೊಡದಿರೆ
ಬೆನ್ನಿನ ಮೇಲೆ ಏಟು |
ಅಯ್ಯೋ ಪಾಪ ಅವರ ಪಾಡು
ರೂಪಾಯಿ ಲೆಕ್ಕದ ನೋಟು ||
ನಮ್ಮ ಬದುಕು ನಮಗೆ ಚೆಂದ
ಹಳ್ಳಿ ಬದುಕು ಕಷ್ಟ.
ವಯಸ್ಸಾದರೆ ಕಟುಕನ ಮನೆಗೆ
ಅಟ್ಟುವುದೇ ಪಕ್ಕ ||
ಬೇಡವೇ ಬೇಡ ಹಳ್ಳಿ ಬದುಕು
ಎಂದವು ನಗರದ ಹಸುಗಳು
ಹಳ್ಳಿಗಿಂತ ನಗರವೇ ವಾಸಿ
ಎನ್ನುತ ನಗರಕೆ ಮರಳಿದವು |
ಹಳ್ಳಿ ಬದುಕಿಗೆ ಹೆದರಿದವು |
ಮತ್ತೆ ನಗರಕೆ ಓಡಿದವು ||
ಹಳ್ಳಿಯ ಕಡೆಗೆ ವಲಸೆ ಹೊರಟವು |
ಪೇಟೆ ಬೇಜಾರಾಗಿಬಿಟ್ಟಿದೆ
ಹಳ್ಳಿ ಬದುಕು ಮಜಾ ಮಾಡೋಣ
ಎಂದು ಧಾವಿಸಿದವು |
ಹಳ್ಳಿಗೇನೋ ಬಂದೇಬಿಟ್ಟವು
ಎಲ್ಲವೂ ಚಿತ್ರ ವಿಚಿತ್ರ |
ಹಳ್ಳಿಯಲ್ಲೂ ದನಗಳಿವೆ
ಬಡಕಲು ಶರೀರಿ ಸಾಧು |
ಪೊಗರು ಮಾಡೋದಿಲ್ಲ |
ಅಲ್ಲೆಲ್ಲೋ ವಾಹನ ಬಂದರೂ
ದೂರಕೆ ಓಡ್ತಾವಲ್ಲ ||
ನಮ್ಮಲ್ಲೆಲ್ಲೂ ಹಂಗೇನಿಲ್ಲ..
ಗಾಡಿಯ ಸದ್ದಿಗೆ ಹೆದರೋದಿಲ್ಲ
ಉಜ್ಜಿಕೊಂಡೇ ಸಾಗುವವರು ನಾವು |
ಬೇಕಾದ್ರೆ ಜೀವ
ಉಳಿಸ್ಕೋಬೇಕು ನೀವು ||
ಹಳ್ಳಿದನಗಳು ತಿಂತಾವಂತೆ
ಅದೇನೋ ಹಸಿರು ಹುಲ್ಲು |
ನಮ್ ಬಾಯಿಗೆ ಅದು ರುಚಿಸೋದಿಲ್ಲ
ಹುಲ್ಲಿನ ರುಚಿ ಗೊತ್ತೇ ಇಲ್ಲ |
ನಮ್ಮದೇನಿದ್ರೂ ಪ್ಲಾಸ್ಟೀಕ್ ಚೀಲ
ಗೋಡೆಮೇಲಿನ ಕಾಗದ ಎಲ್ಲೋ ||
ನಗರದ ಹಸುಗಳು ನಾವೇನಿದ್ದರು
ನೋಡಲು ದಷ್ಟಪುಷ್ಟ |
ಹಳ್ಳಿ ಹಸುಗಳು ಎಲುಬು ಚಕ್ಕಳ
ಪಾಪ ಕಷ್ಟ ಕಷ್ಟ ||
ನಗರದ ತುಂಬ ನಾವೇ ರಾಜರು
ಬಿಡಾಡಿ ದನಗಳು ನಾವು |
ಕೇಳೋರಿಲ್ಲ ಕಟ್ಟೋರಿಲ್ಲ
ಸ್ವರ್ವ ಸ್ವತಂತ್ರರ ತಾವು |
ಹಳ್ಳಿ ದನಗಳಿಗೆ ಹಗ್ಗದ ಬಂಧನ
ಬಿಚ್ಚಲೆ ಬೇಕು ಹಗ್ಗ |
ಕಟ್ಟ ಬೇಕು, ಅಟ್ಟಬೇಕು
ಸ್ವಾತಂತ್ರ್ಯವೇ ಇಲ್ಲ ||
ನಗರದ ಬೀದಿಯು ನಮಗೆ ಜಗತ್ತು
ನಮಗ್ಯಾರ ಹಂಗಿಲ್ಲ |
ಓಡಿದರೂನೂ ಕುಣಿದರೂನೂ
ನಮ್ಮನು ಕೇಳೋರಿಲ್ಲ ||
ರಸ್ತೆಯೇ ನಮ್ಮ ಮನೆ
ರಸ್ತೆಯೇ ಹಾಸಿಗೆ
ಹಳ್ಳೀಲಿ ಹೀಗೇನಿಲ್ಲ |
ಕೊಟ್ಟಿಗೆಯಂತೆ ಕಟ್ಟಿ ಹಾಕುವರು
ಕುತ್ತಿಗೆಗೊಂದು ಹಗ್ಗ ||
ಹೊಟ್ಟೆಗೆ ಅಷ್ಟು ಹುಲ್ಲು, ನೀರು
ಹಾಲಿನ ಬಯಕೆ ಪಕ್ಕಾ ||
ಹಳ್ಳಿ ದನಗಳು ಹಾಲನು ಕೊಡದಿರೆ
ಬೆನ್ನಿನ ಮೇಲೆ ಏಟು |
ಅಯ್ಯೋ ಪಾಪ ಅವರ ಪಾಡು
ರೂಪಾಯಿ ಲೆಕ್ಕದ ನೋಟು ||
ನಮ್ಮ ಬದುಕು ನಮಗೆ ಚೆಂದ
ಹಳ್ಳಿ ಬದುಕು ಕಷ್ಟ.
ವಯಸ್ಸಾದರೆ ಕಟುಕನ ಮನೆಗೆ
ಅಟ್ಟುವುದೇ ಪಕ್ಕ ||
ಬೇಡವೇ ಬೇಡ ಹಳ್ಳಿ ಬದುಕು
ಎಂದವು ನಗರದ ಹಸುಗಳು
ಹಳ್ಳಿಗಿಂತ ನಗರವೇ ವಾಸಿ
ಎನ್ನುತ ನಗರಕೆ ಮರಳಿದವು |
ಹಳ್ಳಿ ಬದುಕಿಗೆ ಹೆದರಿದವು |
ಮತ್ತೆ ನಗರಕೆ ಓಡಿದವು ||
No comments:
Post a Comment