Tuesday, September 29, 2009

ಎಲ್ಲ ಮರೆತಿರುವಾಗ (ಕಥೆ -ಭಾಗ 2)


( ಮೊದಲ ಭಾಗದಿಂದ)
...... ಯಾಕೋ ಆಕೆಗೆ ತುಂಬ ಕುತೂಹಲವಾಯಿತು..
ಆತ ಇನ್ನೂ ಹಾಡುತ್ತಲೇ ಇದ್ದ.. ಧ್ವನಿ ಮಧುರವಾಗಿತ್ತು..
ಏನೋ ಗುಂಗು.. ಈಕೆ ಬಸಿನಲ್ಲಿ ಕುಳಿತೆ ಆತ ಹಾಡುವುದನ್ನು ನೋಡುತ್ತಿದ್ದಳು..
ಆತ ಹಾಡುತ್ತಿದ್ದ, ಅಸ್ಟೇ ಅಲ್ಲ ಬೇಡುತ್ತಿದ್ದ..
ಹಲವು ಯುವಕರು ಅವನನ್ನು ಗೋಳು ಹೊಯ್ದುಕೊಳ್ಳುತ್ತಿದ್ದರು ..
ಈಕೆಗೆ ಪಾಪ ಅನ್ನಿಸಿತು. ಒಂದೆ ವಯಸ್ಸು ಮನಸ್ಸು ಮಾತ್ರ ಸರಿ ಇಲ್ಲ.
ಸರಿ ಇದ್ದಿದ್ದರೆ ಈತನೂ ಹಗೆ ಇತರರನ್ನು ಚುದಯಿಸುತ್ತಿದ್ದನೇನೋ..
ಬಲವಿಲ್ಲದವನು ಬದುಕಲಾರ ಎಂಬ ಚಿಂತಕನ ವಾಕ್ಯದಂತೆ.. ಈಗ ಈತ
ಪೆಟ್ಟು ಅನುಭವಿಸುವ ಸಂಗತಿ ಬಂದಿತ್ತು.
ಆಗಲೇ ರಚನಾ ಗೆ ಒಂದು ಸಂಗತಿ ತಲೆಯಲ್ಲಿ ಹೊಕ್ಕಿದ್ದು.
ಇವನನ್ನು ಯಾಕೆ ತಾನು ಸರಿ ಮಾಡಬಾರದು ಅಂತ..
ತನಗೆ ಉಂಟಾದ ಭಾವನೆಯನ್ನು ಕಂಡು ತಾನೆ ಒಮ್ಮೆ ನಕ್ಕಳು..
ತಕ್ಷಣವೇ ಇದು ಆಗು ಹೋಗದ ಕೆಲಸ ಅಂದು ಕೊಮ್ದ್ದು ಮನೆಯೆಡೆಗೆ ಹೊರಟಳು..
ಆದರು, ಮನದೊಳಗೆ ಆ ಭಾವ ಕೊರೆಯುತ್ತಲೇ ಇತ್ತು..
ಈಕೆಯಿದ್ದ ಬಸ್ಸು ಹೊರಟರು ಆತ ಹಾಡುತ್ತಲೇ ಇದ್ದ...

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹುಉಡಿ ಬರದಿರು ಮತ್ತೆ ಹಳೆಯ ನೆನಪೇ...

(ಮುಂದುವರಿಯುವುದು.....)

No comments:

Post a Comment