ಎಲ್ಲ ಮರೆತಿರುವಾಗ
ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ..
ಎಂಬ ಹಾಡು ಸನಿಹದಲ್ಲಿ ಎಲ್ಲೋ ರಚನಾ ಗೆ ಕೇಳಿದಂತೆ ಆಗಿ ಎಚ್ಚೆತ್ತಳು.
ತನ್ನ ಕಂಪನಿಯ ಪ್ರಾಜೆಕ್ಟ್ ಕೆಲಸಕ್ಕಾಗಿ ಶಿರಸಿಗೆ ಹೊರಟವಳಿಗೆ ಅದ್ಯಾವಗಲೋ ನಿದ್ದೆ ಆವರಿಸಿ ಬಿಟ್ಟಿತ್ತು.
ಹಾಡಿನಿಂದ ಎಚ್ಹ್ಚ್ರದಾಗಲೇ ಆಕೆಗೆ ತಿಳಿದದ್ದು ತಾನು ಶಿರಸಿಯಲ್ಲಿ ಇದ್ದೇನೆ ಎಂಬುದು.
ಹಾಡು ಕೇಳಿದ ಕಡೆಗೆ ತಿರುಗಿದರೆ ಅಲ್ಲೊಬ್ಬ ಹುಚ್ಚ. ನೋಡಿದರೆ ಭಯಂಕರ ರೂಪ. ಆದರೆ ಧ್ವನಿ ಮಾತ್ರ ಇಂಪು..
ಚಿಂದಿ ಅಂಗಿ.. ಹರಿದ ಪ್ಯಾಂಟು .. ಸ್ನಾನ ಕಾಣದ ದೇಹ.. ಗಬ್ಬು ವಾಸನೆ.. ಇನ್ನು ಆತ ಊಟ ಮಾಡಿ ಅದೆಸ್ತು
ದಿನಗಳದವೋ.. ಬೆನ್ನಿನ ಒಳಗೆ ಹುತು ಹೋದಂತಿದ್ದ ಹೊಟ್ಟೆ. ಮೇಲ್ನೋಟಕ್ಕೆ ರಚನಾ ಳಿಗೆ ಕಂಡದ್ದು ಇದಿಷ್ಟು.
ಆತನ ರೂಪದಲ್ಲಿ ಅಂಥ ವಿಶೇಷ ಏನು ಇರ್ಲಿಲ್ಲ. ಆದರೆ ಆತನ ಧ್ವನಿ ಇತ್ತಲ್ಲ ಅದರಲ್ಲಿ ಏನೋ ಆಕರ್ಷಣೆ ..
ಹಾಡಿದ ಹಾಡಿನಲ್ಲಿ ಏನೋ ಒಂದು ಭಾವ. ಅದನ್ನು ಹಾಡಿದ ರೀತಿಯಮ್ತು ಪಕ್ಕ ಕ್ಲಾಸಿಕಲ್ .. ಒಮ್ಮೆ ಕೇಳಿದರೆ
ಮತ್ತೊಮ್ಮೆ ಕೇಳಬೇಕು ಅನ್ನಿಸುವಂಥದ್ದು..
ಅವ ಬಹುಶಃ ಹೊಟ್ಟೆಪಾಡಿಗಾಗಿ ಹಾಡುತ್ತಿರಬೇಕು.. ಎನ್ನಿಸಿತು ಅವಳಿಗೆ.. ಪಾಪದ ವ್ಯಕ್ತಿ ಎಂಬ ಭಾವ.. ವ್ಯಸ್ಸಿನ್ನು ೨೫ ಅಷ್ಟೆ.
ಅರೆ ಇಷ್ಟು ಚೆನ್ನಾಗಿ ಹಾಡುವ ಈತನಿಗೆ ಹುಚ್ಚೆ? ವಯಸ್ಸಿನ್ನೂ ಚಿಕ್ಕದು .. ಯಾಕೆ ಈತನಿಗೆ ಹುಚ್ಚು? ಅವಳಿಗೆ ಕುತೂಹಲವಾಯಿತು....
(ಮುಂದುವರಿಯುವುದು..)

No comments:
Post a Comment