Tuesday, September 8, 2009

ಅತ್ರಿಯ ನೆನಪಿನಲ್ಲಿ

ಯಾಕೋ ಗೊತ್ತಿಲ್ಲ ಹಾಡು ಅಂದ ತಕ್ಷಣ ಬಿಟ್ಟು ಬಿಡದಂತೆ ಅತ್ರಿ ನೆನಪಾಗುತ್ತಾನೆ.
ಭಾವಗೀತೆಗಳ ಸರದಾರ ಅತ್ರಿಯ ಒಂದೊಂದು ಹಾಡು ಸುಕೋಮಲ. ಸುಂದರ.
ಆತನ
ಏಳೆನ್ನ ಮನದನ್ನೆ,
ಹಾಡು ಹಳೆಯದಾದರೇನು,
ಪ್ರೀತಿ ಇಲ್ಲದ ಮೇಲೆ
ಈ ಮುಂತಾದ ಹಾಡುಗಳಿವೆಯಲ್ಲ ಅವನ್ನು ಕೇಳುತ್ತಿದ್ದರೆ ಆಗುವ ಅನುಭವವೇ ಅದ್ಬುತ ..
ಅವು ಒಂದು ಸುಂದರ ಲೋಖಕ್ಕೆ ಸರ್ರನೆ ಒಯ್ದು ಬಿಡುತ್ತವೆ.
ಗಣೇಶ್ ವಿಜಯಕುಮಾರ ಅತ್ರಿ ಎಲ್ಲೋ ಒಂದೊಂದು ಸಲ ಪಿ ಬಿ ಯಂತೆ ಹಾಡುತ್ತಿದ್ದ ... ಆತನ ಹಾಡುಗಳನ್ನು ಕೇಳಿದರೆ ಪಿ. ಬಿ.ಯನ್ನು ಕೇಳಿದಂತಾಗುತ್ತಿತ್ತು. ಮತ್ತೊಮ್ಮೆಇಲ್ಲ ಹಾಗಲ್ಲ ಅನ್ನಿಸಿಬಿಡುತ್ತಿದ್ದ..
ಪಿ. ಬಿ.ಯ ಹಲವಾರು ಜನಪ್ರಿಯ ಹಾಡುಗಳನ್ನು ರಿಮೇಕ್ ಮಾಡಿದ್ದ ಅತ್ರಿ ಅವನಂತೆ ಹಾಡಲು ಯತ್ನಿಸಿದ್ದ.
ಹಳೆಯ ಮಧುರ ಹಾಡುಗಳನ್ನು ಹಾಡಲು ಯತ್ನಸಿ ಕೆಲವೊಮ್ಮೆ ಯಶಸ್ವಿಯೂ ಆಗಿದ್ದ.
ಪಿ.ಬಿ.ಯಂತೆ ಹಾಡುವಾಗ ಕೆಲವೊಮ್ಮೆ ಸೋತಿದ್ದೂ ಇದೆ. ಒಳ್ಳೆಯ ಹಾಡುಗಳನ್ನು ಹಾಳು ಮಾಡಿದ್ದೂ ಇದೆ.
ಪಿ.ಬಿಯಂತೆ `ರ'ಉಚ್ಛಾರದ ಬದಲು `ದ'ಉಚ್ಛಾರ ಮಾಡಿದ್ದೂ ಇದೆ.
ಆದರೆ ಭಾವಗೀತೆಗಳೆಂದರೆ ಅವನದ್ದೇ ಖದರು.

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ..?
ಇರಬಹುದು
ಏಳೆನ್ನ ಮನದನ್ನೆ.. ಏಳು ಮುದ್ದಿನ ಕನ್ನೆ ಇರಬಹುದು..
ಆತನ ನಂತರ ಅದೆಷ್ಟೇ ಮಂದಿ ಈ ಹಾಡನ್ನು ಹಾಡಿದ್ದರೂ ಕೂಡ ಅತ್ರಿ ಹಾಡಿದ ಧಾಟಿಯೇ ನೆನಪಾಗುತ್ತವೆ.

ಆದರೆ ವಿಧಿಯಾಟವೇ ಬೇರೆ ಇದೆ ನೋಡಿ....
ಸೌಮ್ಯನದಿ ತುಂಗೆ ಆತನನ್ನು ಬಲಿತೆಗೆದುಕೊಂಡಿದೆ.
ಮಗನ ಆಟದ ಚೆಂಡು ಹೆಕ್ಕಲು ಹೋಗಿ ಅತ್ರಿಯೊಡನೆ ಕುಟುಂಬವೇ ಜಲಸಮಾಧಿಯಾದಾಗ ಆತನ ಫ್ಯಾನ್ಸ್ಗಳಿಗೆಲ್ಲ ಒಮ್ಮೆ ಅದೆಷ್ಟು ಶಾಕ್ ಆಗಿರಬೇಡ..?

ಆ ಮೋಡಿಗಾರ ಬದುಕಿದ್ದಿದ್ದರೆ ಇನ್ನೆಸ್ಟು ಸಹಸ್ರ ಹಾಡು ಹಾಡುತ್ತಿದ್ದನೋ..
ವಿಧಿ ಯಾಕೋ ಅವನ ಮೇಲೆ ಮುನಿದಿತ್ತು. ತುಂಗೆಯ ತೀರದಲ್ಲಿ ಹಾಡಲು ಹೋದ ಅತ್ರಿ ಮತ್ತೆ ಮರಳಲಿಲ್ಲ.
ಯಾವಾಗಲೋ ಹಾಡಲ್ಲಿ ಆತ ಹಾಡಿದ್ದ
ವೀರ ಖಡುಗವ ಝಾಳಪಿಸುವ ವೀರ ನಾನಾದೊಡೆ 
ಕಾವೇರಿ ತುಂಗೆಯರ ಮಡಿಲಲ್ಲಿ ಮಡಿವೆ ಅಂತ.. 
 ಎಂಥ ವಿಪರ್ಯಾಸ ಅಲ್ಲವಾ .. ಆತ ಗತಪ್ರಾಣನಾಗಿದ್ದು ಅಲ್ಲೇ..

ಗೆಳತಿ ದಿವ್ಯ ಹೇಳುತ್ತಾಳೆ- ' ವಿನು' ಅತ್ರಿ ಇದ್ದಿದ್ದರೆ ಮನೆಗೆ ಕರೆದುಕೊಂಡು ಬಂದು ಹಾಡಿಸುತ್ತಿದ್ದೆ..
ಅವ ಅಂದ್ರೆ ಅಷ್ಟು ಇಷ್ಟ. ಅವ ಸಾಯುವಾಗ ನಾನು ೧೦ ತರಗತಿ..
ಸತ್ತದ್ದು ಕೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದೆ' ಅಂತ..

ಅವನಂತೆ ಹಾಡುವ ಅಣ್ಣ ಗಿರೀಶ ಕೂಡ ಅಷ್ಟೆ ಆತನ ಸಾವಿನಿಂದ ಮಂಕಾಗಿ ಕೂತಿದ್ದ.
ಅತ್ರಿಯನ್ನು ಪದೆ ಪದೆ ಆತ ಮಿಸ್ ಮಾಡಿಕೊಂಡಿದ್ದ ಸಂದರ್ಭಗಳನ್ನು ನಾನು ಕಂಡಿದ್ದೇನೆ.

ಅತ್ರಿ ಹಾಡಿದ 
ಎದ್ದೇಳು ಮಂಜುನಾಥ 
ಏಳು ಬೆಳಗಾಯಿತು 
ಅನ್ನೋ ಹಾಡು ಕೇಳಿರಬೇಕಲ್ಲಾ... ಕೇಳಿಯೇ ಇರ್ತೀರಾ..
ಅಷ್ಟು ಚನ್ನಾಗಿದೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನು ತನ್ನ ಸುಮಧುರ ಕಂಠದ ಮೂಲಕ ಏಳಿಸುವ ಹಾಡು ಇಂದಿಗೂ ಕೇಳುತ್ತಲೇ ಇದೆ.
ಅತ್ರಿಯೊಂಥರಾ ಕನ್ನಡದ ಸುಬ್ಬುಲಕ್ಷ್ಮಿ ಇದ್ದಹಾಗೆ ಅಂದರೆ ತಪ್ಪಿಲ್ಲ.
ಸುಬ್ಬುಲಕ್ಷ್ಮಿಯ ಸುಪ್ರಭಾತ ಎಷ್ಟು ಫೇಮಸ್ಸೋ ಕನ್ನಡದ ಅದ್ದೇಳು ಮಂಜುನಾಥ ಕೂಡ ಅಷ್ಟೇ ಫೇಮಸ್ಸು..
ಆ ಹಾಡು ಅದೆಷ್ಟು ಉತ್ಸಾಹದ ಸಂಕೇತ ಗೊತ್ತಾ.. ಕೇಳಲು ಅದು ಭಕ್ತಿಗೀತೆ.. ಆದರೆ ಚಿಂತನೆಗೆ ಬಿದ್ದರೆ ಅದು
ಅಲೌಕಿಕ ಅನುಭೂತಿ ಕೊಡುತ್ತದೆ. 

ಶಿವರುದ್ರಪ್ಪ, ಕುವೆಂಪು, ನಿಸ್ಸಾರರಂತಹ ಕನ್ನಡದ ಮೇರು ಕವಿಗಳ ಭಾವಗೀತೆಗಳಿಗೆ ಜೀವ ಕೊಟ್ಟ ಸಾಧಕ ಈತ.
ಅವರ ಅದೆಷ್ಟೋ ಕವನವನ್ನು ಹಾಡಿ ಅಮರಗೊಳಿಸಿದ ಖ್ಯಾತಿ ಇವನದ್ದು. 

ಕನ್ನಡದ ಗೌರಿ ಗಣೇಶ ಎನ್ನುವ ಸಿನೆಮಾದಲ್ಲೂ ಹಾಡಿದ್ದಾನೆ.


ಅಂತಹವನು ಅಕಾಲಿಕವಾಗಿ ಸತ್ತನಲ್ಲ.... ಛೆ..ಈಗಲೂ ... ಮರೆಯಲಾರೆ...
ಆತನ ಹಾಡುಗಳಷ್ಟೇ ಆತನ ಅಕಾಲಿಕ ಮರಣವೂ ಕಾಡುತ್ತಿದೆ. ಕಾಡುತ್ತದೆ..

ಅತ್ರಿ ಮತ್ತೆ ಹುಟ್ಟಿ ಬಾ...
ಗಿರೀಶ್ , ದಿವ್ಯ, ನಾನು ಎಲ್ಲರು ನಿನ್ನ ತುಂಬ ಮಿಸ್ ಮಾಡ್ಕೋತಿದ್ದಿವಿ...
ನಾವಷ್ಟೇ ಅಲ್ಲ... ನಮ್ಮಂತಹ ಅದೆಷ್ಟೋ ಅತ್ರಿ ಭಕ್ತರು ಕಾಯ್ತಾ ಇದ್ದೀವಿ..
ಮತ್ತೆ ಬಾ ಅಭಿನವ ಪಿ...ಬಿ...


3 comments: