Thursday, October 1, 2009

ಎಲ್ಲ ಮರೆತಿರುವಾಗ (ಕಥೆ- ಭಾಗ - ೩)

(ಎರಡನೇ ಭಾಗದಿಂದ )
.....ಅವಳಿಗೆ ಮನೆಗೆ ಹೋದರು ಅದೇ ನೆನಪು.
ಅವನ್ಯಾರೋ... ಅವನೇಕೆ ಹಾಗೋ..ಅಂತ..
ಯಾಕೋ ಆಕೆಗೆ ಅಂದುಕೊಂಡ ಪ್ರಾಜೆಕ್ಟ್ ಕೆಲಸ ಮಾಡಲು
ಆಗಲೇ ಇಲ್ಲ..
ಮತ್ತೆ ಮರಳಿ ಶಿರಸಿಗೆ ಬಂದಳು.. ಊರಿನಿಂದ..
ಜೊತೆಗೆ ತನ್ನ ಗೆಳತಿ ಕವಿತಳನ್ನು ಕರೆದುಕೊಂಡು ಬಂದಿದ್ದಳು..
ಶಿರಸಿಗೆ ಬಂದವಳು ಮೊದಲು ಮಡಿದ ಕೆಲಸವೆಂದರೆ ಆ ಹಾಡುಗಾರ
ಹುಚ್ಚನನ್ನು ಹುಡುಕಿದ್ದು.. ಆದರೆ ಆತ ಆ ಬಸ್ ಸ್ಟ್ಯಾಂಡ್ ನಲ್ಲಿ ಸಿಗಲೇ ಇಲ್ಲ..
ಎಲ್ಲಿ ಹೋದನೋ ಅಂದುಕೊಂಡು ಮರಳಿದಳು..
ಯಾರೇ? ಎಂದು ಕೇಳಿದ ಕವಿತಾಳಿಗೆ ಏನೋ ಸಬೂಬು ಹೇಳಿದಳು ರಚನಾ .
................................................................................................
ರಚನ ಗೆ ಇತ್ತೀಚಿಗೆ ಅದೇ ಆಲೋಚನೆ.. ತಾನ್ಯಾಕೆ ಅವನ ಬಗ್ಗೆ ಆಲೋಚಿಸುತ್ತಿದ್ದೇನೆ..ಅಂತ..
ಹೀಗಿರಲು, ಒಮ್ಮೆ ಅವಳಿಗೆ ಬೋರಾಗಿದ್ದಾಗ ಸಿಕ್ಕ ಪ್ತ್ರಿಕೆಯೋಮ್ದರಲ್ಲಿ ಕನ್ನದಿಸುತ್ತಿದ್ದಾಗ
ಅವನ ಫೋಟೋ ಅಕಸ್ಮಾತ್ತಾಗಿ ಕಂಡಿತು. ಅಚ್ಚರಿಯಿಂದ ಓದಿದವಳಿಗೆ ಗೊತ್ತದದ್ದೇನೆಮದರೆ
ಆತ ಹಿಂದೊಮ್ಮೆ ರಾಜ್ಯ ಮಟ್ಟದ ಹಾಡುಗಾರ ಆಗಿದ್ದ ಎಂಬುದು..
ಯಾರೋ ವರದಿಗಾರ ಆತನ ಬಗ್ಗೆ ವರದಿ ಮಾಡಿದ್ದ.. ಈಗಂತೂ ಅವನೆಡೆಗಿದ್ದ ಕುತೂಹಲ
ಇಮ್ಮಡಿಸಿತು... ಅರೆ ರಾಜ್ಯ ಮಟ್ಟದ ಹಾಡುಗಾರ ಹುಚ್ಚನೇಕೆ ಆದ?
ಯಾಕೋ ಅವಳಿಗೆ ಕುಮಾರ ಗಂಧರ್ವ ನೆನಪಿಗೆ ಬಂದರು..
ಆತ ಹಾಗೆ ಆಗಲು ಇನ್ನೇನೋ ಕಾರಣವಿದೆ ಅನ್ನಿಸಿತು ಅವಳಿಗೆ...
ಮತ್ತೆ ಆತನನ್ನು ಹುಡುಕಲು ಹೊರಟಳು..
ಅಂತು ಶಿರಸಿ ಪೇಟೆಯ ಗಲ್ಲಿ ಗಲ್ಲಿಯನ್ನು ಹುಡುಕಿದ ಮೇಲೆ ಅಲ್ಲೆಲ್ಲೋ ಆತ ಸಿಕ್ಕ.

(ಮುಂದುವರಿಯುವುದು...............)

1 comment:

  1. ella maretiruvaaga..
    modalige svalpa eledaru..
    eega oodisikomdu hoguttde..

    ReplyDelete