Monday, January 22, 2018

ದೇಶದ ಅತ್ಯಂತ ಶ್ರೀಮಂತ ಸ್ಟಾರ್ಟ್‌ಅಪ್ ಸ್ಥಾಪಕರು

ಕೆಲವು ವರ್ಷಗಳವರೆಗೂ ಭಾರತದಲ್ಲಿ ಸ್ಟಾರ್ಟ್‌ಅಪ್ ವಲಯ ಎನ್ನುವುದು ಬಾಲ್ಯಾವಸ್ಥೆಯಲ್ಲಿತ್ತು. ಆಗೊಬ್ಬರು, ಈಗೊಬ್ಬರು ಸ್ಟಾರ್ಟ್‌ಅಪ್ ಮೂಲಕ ಯಶಸ್ಸನ್ನು ಸಾಸಿದ್ದರು ಅಷ್ಟೇ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಸ್ಟಾರ್ಟ್‌ಅಪ್ ರಂಗ ತೀವ್ರ ಅಭಿವೃದ್ಧಿ ಹೊಂದುತ್ತಿದೆ. ಬೆಂಗಳೂರು ಭಾರತದಲ್ಲಿ ಹಾಗೂ ಜಾಗತಿಕವಾಗಿ ದೊಡ್ಡ ಸ್ಟಾರ್ಟ್‌ಅಪ್ ಹಬ್ ಆಗಿ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿಮಂಗಳೂರಿನಲ್ಲಿಯೂ ಕೂಡ ಸ್ಟಾರ್ಟ್‌ಅಪ್ ಹಬ್ ನಿರ್ಮಾಣಕ್ಕೆ ಎಲ್ಲ ಅವಕಾಶಗಳೂ ಇವೆ. ಭಾರತದಲ್ಲಿ ಹಲವರು ಸ್ಟಾರ್ಟ್‌ಅಪ್‌ಗಳ ಮೂಲಕವೇ ಕೋಟ್ಯಂತರ ರೂ.ಗಳಷ್ಟು ಆದಾಯ ಮಾಡಿಕೊಂಡಿದ್ದಾರೆ. ಘಟಾನುಘಟಿ ಕಂಪನಿಗಳೇ ಆದಾಯ ಗಳಿಕೆಯಲ್ಲಿ ಎಡವಿ ಬೀಳುತ್ತಿರುವ ಸಂದ‘ರ್ದಲ್ಲಿ ಸಣ್ಣ ಪ್ರಮಾಣದಲ್ಲಿ ಹುಟ್ಟಿಕೊಂಡ ಸ್ಟಾರ್ಟ್ ಅಪ್‌ಗಳು ಕೋಟ್ಯಂತರ ರೂ.ಗಳ ವಹಿವಾಟನ್ನು ನಡೆಸುತ್ತಿರುವ ನಿದರ್ಶನಗಳಿವೆ. ಭಾರತದಲ್ಲಿ ಸ್ಟಾರ್ಟ್ ಅಪ್‌ಗಳ ಮೂಲಕವೇ ಹೇರಳ ಆದಾಯ ಗಳಿಸಿಕೊಂಡವರ ಕಿರು ಯಾದಿಯನ್ನು ಇಲ್ಲಿ ನೀಡಲಾಗಿದೆ.


ಕಳೆದ ಕೆಲವು ವರ್ಷಗಳಿಂದ ಫಂಡಿಂಗ್ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ಅನೇಕ ದೊಡ್ಡ ದೊಡ್ಡ ಕಂಪನಿಗಳು ಫಂಡಿಂಗ್ ಪಡೆದುಕೊಳ್ಳಲಾಗದೇ ಒದ್ದಾಡಿ ಹೋಗಿವೆ. ಅದರೆ ಭಾರತದ ಸ್ಟಾರ್ಟ್‌ಅಪ್ ಉದ್ಯಮಿಗಳು ಯಶಸ್ವಿ ಉದ್ಯಮವನ್ನು ನಿರ್ಮಿಸುತ್ತಿದ್ದಾರೆ. ಈ ಉದ್ಯಮದಿಂದ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಅಕರ್ಷಕ ಮೊತ್ತದ ಹಣವನ್ನು ಹೊಂದಿದ್ದಾರೆ. ಪ್ರತಿ ವರ್ಷ ಈ ಸ್ಟಾರ್ಟ್ ಅಪ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಆದಾಯ ಗಳಿಕೆ ಕೂಡ ಜಾಸ್ತಿಯಾಗುತ್ತಿರುವುದು ವಿಶೇಷ. ಭಾರತವೊಂದರಲ್ಲಿಯೇ ಪ್ರತಿ ವರ್ಷ ನೂರಾರು ಸಂಖ್ಯೆಯ ಸ್ಟಾರ್ಟ್‌ಅಪ್ ಗಳು ಜನ್ಮ ತಾಳುತ್ತಿವೆ. ಪ್ರತಿ ವರ್ಷವೂ ಸ್ಟಾರ್ಟ್‌ಅಪ್‌ಗಳ ಮೂಲಕ ಅತ್ಯಂತ ಹೆಚ್ಚಿನ ಪ್ರಮಾಣದ ಆದಾಯ ಗಳಿಸಿಕೊಂಡವರ ಯಾದಿಯನ್ನು ತಯಾರಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಇವು ಏರಿಳಿತವಾಗುತ್ತಲೂ ಇರುತ್ತದೆ. 2017ರಲ್ಲಿ ಕೂಡ ಭಾರತದ ಸ್ಟಾರ್ಟ್ ಅಪ್ ಸಾಧಕರ ಯಾದಿಯನ್ನು ತಯಾರಿಸಲಾಗಿದ್ದು, ಭುವನ್ ತುರಾಕಿಯಾ ಅವರು ಮೊದಲ ಸ್ಥಾನದಲ್ಲಿದ್ದಾರೆ.

ಏನಿದು ಸ್ಟಾರ್ಟ್‌ಅಪ್ ?
ಸ್ಟಾರ್ಟ್‌ಅಪ್ ಎನ್ನುವುದು ಅಂತರ್ಜಾಲದ ಕಂಪನಿ. ಇದು ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವುದರ ಜೊತೆಗೆ ಪ್ರಮುಖ ವಸ್ತುಗಳಿಗೆ ಮಾರುಕಟ್ಟೆಯನ್ನೂ ಒದಗಿಸುವ ಕೆಲಸ ಮಾಡುತ್ತದೆ. ವಸ್ತುಗಳನ್ನು ಕೊಳ್ಳುವುದು ಹಾಗೂ ಮಾರಾಟ ಮಾಡಲು ಇದೊಂದು ವೇದಿಕೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಸ್ತುಗಳನ್ನುಪೂರೈಸುವ ಅಂತರ್ಜಾಲ ಕಂಪನಿಗಳಿವು. ವಿಶಿಷ್ಟ ಬಗೆಯ, ಕ್ರಿಯಾಶೀಲ ಮನಸ್ಸಿನ ವ್ಯಕ್ತಿಗಳು ವಿಶಿಷ್ಟ ರೀತಿಯ ಸ್ಟಾರ್ಟ್ ಅಪ್ ತಯಾರಿಸಿ ಅದರಲ್ಲಿ ಯಶಸ್ಸನ್ನು ಗಳಿಸಿಕೊಂಡಿದ್ದಾರೆ. ಜಗತ್ತಿನ ಅತ್ಯಂತ ವೇಗದ ಮಾರುಕಟ್ಟೆ ಇದು ಎನ್ನುವ ಖ್ಯಾತಿ ಕೂಡ ಇದೆ.

ಪ್ರಧಾನಿ ಮೋದಿ ಉತ್ತೇಜನ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಸ್ಟಾರ್ಟ್ ಅಪ್‌ಗಳ ಬೆಳವಣಿಗೆಗೆ ಸಾಕಷ್ಟು ಉತ್ತೇಜನಗಳನ್ನು ನೀಡಿದಾರೆ. 2015ರ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಸ್ಟಾರ್ಟ್‌ಅಪ್ ಇಂಡಿಯಾವನ್ನು ಘೋಷಣೆ ಮಾಡಿದರು. ‘ಾರತದಲ್ಲಿ ಸ್ಟಾರ್ಟ್‌ಅಪ್ ಉತ್ತೇಜನಕ್ಕಾಗಿ ಲೈಸನ್ಸ್ ಪ್ರಕ್ರಿಯೆಯನ್ನು ಸರಳಗೊಳಿಸಿದರು. ಅಲ್ಲದೇ ಮುದ್ರಾ ಯೋಜನೆ, ಪಿಎಂಎಂವೈ ಮೂಲಕ ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ತೆರಿಗೆ ಪ್ರಮಾಣದಲ್ಲಿಯೂ ಇಳಿಕೆ ಮಾಡಿದರು. ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಂಡರು. ಪರಿಣಾಮವಾಗಿ 2015ರಿಂದೀಚೆಗೆ ದೇಶದಾದ್ಯಂತ 10 ಸಾವಿರಕ್ಕೂ ಸ್ಟಾರ್ಟ್‌ಅಪ್‌ಗಳು ಹುಟ್ಟಿಕೊಂಡು ಯಶಸ್ಸು ಪಡೆಯಲಾರಂಭಿಸಿವೆ.

2017ರಲ್ಲಿ ಭಾರತದ ಟೆಕ್ ಉದ್ಯಮಿಗಳ ಪಟ್ಟಿಯಲ್ಲಿ ಇನ್ನೂ ಅನೇಕ ಪರಿಚಿತ ಹೆಸರುಗಳಿವೆ. ಅದರೆ ಕೆಲವರ ಹೆಸರು ಈ ಪಟ್ಟಿಯಿಂದ ಜಾರಿ ಹೋಗಿದೆ. ಸ್ನ್ಯಾಪ್‌ಡೀಲ್ ಕುನಾಲ್ ಬಹಾಲ್ ಮತ್ತು ಓಲಾ ಸಂಸ್ಥೆಯ ಭವಿಷ್ ಅಗರ್ವಾಲ್ ಅವರು ಭಾರತದ 15 ಶ್ರೀಮಂತರ ಉದ್ಯಮಿಗಳ ಪಟ್ಟಿಯಲ್ಲಿದ್ದಾರೆ. ಅಂದ ಹಾಗೆ ಈ ಸ್ಟಾರ್ಟ್ ಅಪ್ ರಂಗದಲ್ಲಿ ಭಾರೀ ನಷ್ಟವನ್ನು ಅನುಭವಿಸಿದವರೂ ಇದ್ದಾರೆ. ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದವರೂ ಇದ್ದಾರೆ. ಅದೇ ರೀತಿ ಅಪಾರ ಹಣ ಗಳಿಸಿ ಬದುಕು ಹಸನು ಮಾಡಿಕೊಂಡವರಿದ್ದಾರೆ. ಭಾರತದಲ್ಲಿ ಕಳೆದ ಒಂದು ವರ್ಷದ ಅವಯಲ್ಲಿ ಅತ್ಯಂತ ಹೆಚ್ಚಿನ ಆದಾಯ ಗಳಿಸಿಕೊಂಡ ಭಾರತದ ಸ್ಟಾರ್ಟ್‌ಅಪ್ ಸಾಧಕರ ಯಾದಿ ಇಲ್ಲಿದೆ.

1. ಭುವಿನ್ ತುರಾಖಿಯ, ಡೈರೆಕ್ಟಿ/ಮೀಡಿಯಾ.ನೆಟ್ (ರೂ. 11,500 ಕೋಟಿ)
2016ರ ಅಂತ್ಯದ ವೇಳೆಗೆ ತುರಾಖಿಯ ತಮ್ಮ ಸಹೋದರ ದಿವ್ಯಾಂಕ್ ತುರಾಖಿಯ ಅವರೊಂದಿಗೆ ತಮ್ಮ ಮೀಡಿಯಾ.ನೆಟ್ ವ್ಯವಹಾರವನ್ನು 900 ದಶಲಕ್ಷ ಡಾಲರ್‌ಗೆ ಚೀನಾದ ಕಂಪನಿಗೆ ಮಾರಾಟ ಮಾಡಿದರು. ಮೀಡಿಯಾ.ನೆಟ್ ಪೂರ್ತಿಯಾಗಿ ಬೂಟ್ ಸ್ಟ್ರಾಪ್ ಮಾಡಲ್ಪಟ್ಟಿತು. ಇದರಿಂದಾಗಿ ಇಬ್ಬರು ಸಹೋದರರು ಶತಕೋಟ್ಯಾಪತಿಗಳಾದರು. ಪ್ರಸ್ತುತ ರೂ. 11,500 ಕೋಟಿ ಮೌಲ್ಯದ ಸಂಪತ್ತನ್ನು ಹೊಂದಿರುವ ‘ವಿನ್ ತುರಾಖಿಯ ಈಗ ‘ಾರತದ ಅತ್ಯಂತ ಶ್ರೀಮಂತ ಟೆಕ್ ಉದ್ಯಮಿ ಎನಿಸಿದ್ದಾರೆ. 2017ರಲ್ಲಿ ಇವರ ಸಂಪತ್ತು ನಾಲ್ಕು ಪಟ್ಟು ಹೆಚ್ಚಾಗಿದ್ದರಿಂದ ‘ವಿನ್ ತುರಾಖಿಯ ಮೊದಲ ಸ್ಥಾನಕ್ಕೆ ಏರಿದರು. 38 ವರ್ಷ ವಯಸ್ಸಿನ ಇವರು 2016ರಲ್ಲಿ ೆರ್ಬ್ಸ್ ಪ್ರಕಟಿಸಿದ ಶ್ರೀಮಂತರ ಯಾದಿಯಲ್ಲಿಯೂ ಸ್ಥಾನ ಗಳಿಸಿದ್ದರು.

2. ವಿಜಯ್ ಶೇಖರ್ ಶರ್ಮಾ, ಪೇಟಿಎಂ (ರೂ. 9000 ಕೋಟಿ)
2017ರಲ್ಲಿ ಪೇಟಿಎಂನ ವಿಜಯ್ ಶೇಖರ್ ಶರ್ಮಾ ಸ್ಟಾರ್ಟ್‌ಅಪ್ ಕ್ಷೇತ್ರದ ಹೊಸ ತಾರೆಯಾಗಿ ಹೊರಹೊಮ್ಮಿದ್ದಾರೆ. ಗರಿಷ್ಠ ಮೊತ್ತದ ನೋಟುಗಳ ಅಪಮೌಲ್ಯೀಕರಣದ ಸಮಯ ಅಂದರೆ 2016 ರ ಅಂತ್ಯದ ವೇಳೆಗೆ ಪೇಟಿಎಂನ ಅಲೆ ಆರಂ‘ವಾಯಿತು. ಇದು ಪೇಟಿಎಂ ಬ್ಯಾಂಕ್‌ನ್ನು ಕೂಡ ಲಾಂಚ್ ಮಾಡಿದೆ. ಅದು 2017 ರ ಆಯವ್ಯಯದಲ್ಲೂ ತನ್ನ ಸ್ಥಾನ ಬಿಡಲಿಲ್ಲ. ಕಂಪನಿಯು ಸ್ಟ್‌ಾ ಬ್ಯಾಂಕ್ ಕಡೆಯಿಂದ 1.4 ಶತಕೋಟಿ ಡಾಲರ್‌ಗೆ ಪಡೆದುಕೊಂಡಿತು. ಅಲ್ಲದೆ ತನ್ನ ಮೌಲ್ಯವನ್ನು ಎಂಟು ಬಿಲಿಯನ್ ಡಾಲರ್‌ಗೆ ಹೆಚ್ಚಿಸಿಕೊಂಡಿತು. ಶರ್ಮಾರವರು ಪ್ರಸ್ತುತ ರೂ. 9000 ಕೋಟಿ ಮೊತ್ತದ ಸಂಪತ್ತನ್ನು ಹೊಂದಿದ್ದಾರೆ. ಇವರು ಜಿಕ್ಯೂ ಇಂಡಿಯಾದ ಅತ್ಯಂತ ಪ್ರ‘ಾವಿ ಯುವಕರಲ್ಲಿ ಒಬ್ಬರು ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿದ್ದಾರೆ.

3. ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್, ಫ್ಲ್‌ಿ ಕಾರ್ಟ್ (ರೂ. 5400 ಕೋಟಿ)
‘ಾರತದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಫ್ಲ್ಿಕಾರ್ಟ್ ಸಂಸ್ಥಾಪಕ ಜೋಡಿಯು ಮೂರನೇ ಸ್ಥಾನದಲ್ಲಿದೆ. ಬನ್ಸಾಲ್ ಸಹೋದರರು ಕಳೆದ ಕೆಲವು ವರ್ಷಗಳಿಂದ ತಮ್ಮ ನಿವ್ವಳ ಮೌಲ್ಯದಲ್ಲಿ ಇಳಿಕೆಯನ್ನು ಕಂಡಿದ್ದಾರೆ. 2015 ರಲ್ಲಿ ಕಂಪನಿಯ ಮೌಲ್ಯ 9,010 ಕೋಟಿಯಷ್ಟಿತ್ತು. ಪ್ರಸ್ತುತ ಕಂಪನಿಯ ನಿವ್ವಳ ಮೌಲ್ಯ 5,400 ಕೋಟಿ ರೂ. ನಷ್ಟಿದೆ. 2015ರಲ್ಲಿ ಇವರು ‘ಾರತದ ಶ್ರೀಮಂತ ವ್ಯಕ್ತಿಗಳ ಯಾದಿಯಲ್ಲೂ ಸ್ಥಾನ ಪಡೆದಿದ್ದರು.

4. ಗಣೇಶ್ ಕೃಷ್ಣನ್, ಪೋರ್ಟಿಯಾ ಮೆಡಿಕಲ್ (ರೂ. 5,100 ಕೋಟಿ)
ಉದ್ಯಮಿ ಗಣೇಶ್ ಕೃಷ್ಣನ್ ರೂ. 5,100 ಕೋಟಿ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಕೃಷ್ಣನ್ ಅವರು ಪೋರ್ಟಿಯಾ ಮೆಡಿಕಲ್ ಮತ್ತು ಟುಟೋರ್ ವಿಸ್ತಾದ ಸಂಸ್ಥಾಪಕರಾಗಿದ್ದಾರೆ. ಅಲ್ಲದೆ ಬಿಗ್ ಬಾಸ್ಕೆಟ್, ಬ್ಲೂಸ್ಟೋನ್.ಕಾಮ್ ಮತ್ತು ಹೋಮ್ಲೋನ್.ಕಾಮ್ ಗಳ ಪ್ರಾಯೋಜಕರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರ ಒಡೆತನದ ಬಿಗ್ ಬಾಸ್ಕೆಟ್ ‘ಾರಿ ಯಶಸ್ಸಿನತ್ತ ಮುಖ ಮಾಡಿದೆ.

5. ಸಂಜೀವ್ ಬಿಕ್ಚಂದಾನಿ, ಇನೋ ಎಡ್ಜ್ (ರೂ.4,800 ಕೋಟಿ)
ನೌಕರಿ.ಕಾಮ್, ಜೀವನ್ ಸಾಥಿ, ಮತ್ತು 99ಏಕರ್ಸ್.ಕಾಮ್ ನಂತಹ ಜನಪ್ರಿಯ ಪೋರ್ಟಲ್‌ಗಳನ್ನು ನಡೆಸುತ್ತಿರುವ ಇನೋ ಎಡ್ಜ್ ‘ಾರತದ ಅತ್ಯಂತ ಪ್ರಮುಖ ಅಂತರ್ಜಾಲ ಸಂಘಟಿತ ಸಂಸ್ಥೆಯಾಗಿದೆ. ಇದು ಝೊಮ್ಯಾಟೋದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಸ್ಥಾಪಕ ಸಂಜೀವ್ ಅವರು 1997 ರಲ್ಲಿ ನೌಕರಿ.ಕಾಮ್ ಅನ್ನು ಆರಂಭಿಸಿದರು. ಈಗ ಅವರು ರೂ. 4,800 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ‘ಾರತದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಿದ ಮೊದಲಿಗರಲ್ಲಿ ಇವರೂ ಒಬ್ಬರು ಎನ್ನುವ ಖ್ಯಾತಿ ಗಳಿಸಿಕೊಂಡಿದ್ದಾರೆ.

6. ವಿಶಾಲ್ ಮೆಹ್ತಾ, ಇನೀಬೀಮ್.ಕಾಮ್ (ರೂ. 3,500 ಕೋಟಿ)
ಅಮೆಜಾನ್ ವಿರುದ್ಧ ಹೆಚ್ಚಿನ ಂಡ್ ಇರುವ ಇ-ಕಾಮರ್ಸ್ ಕಂಪನಿಗಳು ಹೋರಾಡಿ ಮಣ್ಣು ಮುಕ್ಕುತ್ತಿದ್ದರೂ ಇನೀಬೀಮ್.ಕಾಮ್ ಬಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತಿದೆ. 2007ರಲ್ಲಿ ಆರಂ‘ಗೊಂಡ ಈ ಕಂಪನಿಯು ಈಗ ಲಾ‘ದಾಯಕವಾಗಿದೆ. ಕಳೆದ ವರ್ಷ ಸಾರ್ವಜನಿಕವಾಗಿ ಲ‘್ಯವಾಗಲು ಆರಂಭಿಸಿದ ದಿನದಿಂದ ಅದರ ಸ್ಟಾಕ್ ಗಣನೀಯವಾಗಿ ಹೆಚ್ಚಿದೆ. ಸಂಸ್ಥಾಪಕ ವಿಶಾಲ್ ಮೆಹ್ತಾರವರ ವೈಯಕ್ತಿಕವಾಗಿ ರೂ. 3,500 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಐಪಿಒದಲ್ಲಿ ಸ್ಥಾನ ಪಡೆದ ‘ಾರತದ ಮೊಟ್ಟಮೊದಲ ಇ-ಕಾಮರ್ಸ್ ಕಂಪನಿ ಎಂಬ ಹೆಮ್ಮೆಯೂ ಇನೀಬೀಮ್.ಕಾಮ್‌ಗೆ ಇದೆ.

7. ೀರಜ್ ರಾಜರಾಮ್/ಅಂಬಿಗ ಸುಬ್ರಹ್ಮಣಿಯನ್, ಮೂ ಸಿಗ್ಮಾ (ರೂ. 2,500 ಕೋಟಿ)
ೀರಜ್ ರಾಜರಾಮ್ 2015 ರಲ್ಲಿ ‘ಾರತದ ಅತ್ಯಂತ ಶ್ರೀಮಂತ ಟೆಕ್ ಉದ್ಯಮಿಯಾಗಿದ್ದು, ಕಂಪನಿಯ ಮೌಲ್ಯ ರೂ. ರೂ. 17,000 ಕೋಟಿ ಆಗಿತ್ತು. ಅವರ ಕಂಪೆನಿಯು ಅವರ ಪತ್ನಿಯ ವಿಚ್ಛೇದನ ಮತ್ತು ಸಹೋದ್ಯೋಗಿ ಅಂಬಿಗ ಸುಬ್ರಹ್ಮಣಿಯನ್ ಬಿಟ್ಟು ಹೋದ ನಂತರ ಅಲ್ಲಿಂದ ಹೆಣಗಾಡಬೇಕಾಯಿತು. ರಾಜರಾಮ್ ಈಗ ಸುಬ್ರಹ್ಮಣಿಯನ್ ಪಾಲನ್ನು ಖರೀದಿಸಿ, ಕಂಪನಿಯನ್ನು ಮೊದಲಿನ ಹಂತಕ್ಕೆ ಕರೆದೊಯ್ಯಲು ಯೋಜಿಸುತ್ತಿದ್ದಾರೆ. ಮಾಜಿ ಪತಿ-ಪತ್ನಿ ಜೋಡಿ ರೂ. 2,500 ಕೋಟಿ ನಿವ್ವಳ ಮೌಲ್ಯದೊಂದಿಗೆ 7 ನೇ ಶ್ರೀಮಂತ ‘ಾರತೀಯ ಸ್ಟಾರ್ಟ್‌ಅಪ್ ಸಂಸ್ಥಾಪಕರಾಗಿದ್ದಾರೆ. ಮು ಸಿಗ್ಮಾ ‘ಾರತದಲ್ಲಿನ ಹೆಸರಾಂತ ಡಾಟಾ ಅನಾಲಿಸ್ಟ್ ಕಂಪನಿಗಳಲ್ಲಿ ಒಂದು ಎನ್ನಿಸಿಕೊಂಡಿದೆ. ಅಮೆರಿಕದ ಚಿಕಾಗೋ ಹಾಗೂ ಬೆಂಗಳೂರಿನ ಪಟ್ಟಂದೂರು ಅಗ್ರಹಾರಗಳಲ್ಲಿ ತನ್ನ ಪ್ರ‘ಾನ ಕಚೇರಿಗಳನ್ನು ಹೊಂದಿದೆ.

8. ರಾಹುಲ್ ಶರ್ಮಾ/ಸುಮೀತ್ ಕುರ್ಮಾ/ವಿಕಾಸ್ ಜೈನ್/ ರಾಜೇಶ್ ಅಗರ್ವಾಲ್, ಮೈಕ್ರೋಮ್ಯಾಕ್ಸೃ್‌ (ರೂ. 1,400 ಕೋಟಿ)
ಇತ್ತೀಚಿನ ವರ್ಷದಲ್ಲಿ ‘ಾರತದ ಮಾರುಕಟ್ಟೆಯಲ್ಲಿ ಪ್ರವಾಹ ಎಬ್ಬಿಸಿರುವ ಓಪ್ಪೋ ಮತ್ತು ವಿವೋ ಗಳಂತಹ ಚೀನಿ ಸಂಸ್ಥೆಗಳ ಜೊತೆ ಮೈಕ್ರೋಮ್ಯಾಕ್ಸೃ್‌ ತನ್ನ ಸ್ಪರ್‘ೆಯನ್ನು ಹೆಚ್ಚಿಸಿದೆ. ಅದರ ನಾಲ್ಕು ಸಂಸ್ಥಾಪಕರು ರಾಹುಲ್ ಶರ್ಮಾ, ಸುಮೀತ್ ಕುರ್ಮಾ, ವಿಕಾಸ್ ಜೈನ್ ಮತ್ತು ರಾಜೇಶ್ ಅಗರ್ವಾಲ್ ಪ್ರತಿಯೊಬ್ಬರು 1,400 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಮೊಬೈಲ್ ಪೋನ್‌ಗಳು, ಸ್ಮಾರ್ಟ್ ೆನ್‌ಗಳು, ಲ್ಯಾಪ್‌ಟ್ಯಾಪ್, ಟ್ಯಾಬ್‌ಗಳು, ಎಲ್‌ಇಡಿ ಟಿವಿ, ಪವರ್ ಬ್ಯಾಂಕ್‌ಗಳು, ಏರ್ ಕಂಡಿಷನರ್‌ಗಳು ಈ ಮುಂತಾದವುಗಳ ಮೂಲಕ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ.

9. ವಿ. ಎಸ್. ಎಸ್ ಮಣಿ, ಜಸ್ಟ್ ಡಯಲ್ (ರೂ.1,100 ಕೋಟಿ)
ಜಸ್ಟ್ ಡಯಲ್ ತನ್ನ 21 ವರ್ಷದ ಪ್ರಯಾಣದ ಅವಯಲ್ಲಿ ಅನೇಕ ಏರುಪೇರುಗಳು ಹಾದುಹೋಗಿವೆ. ಆದರೆ ಈಗಲೂ ಮುಂದುವರಿಯುತ್ತ ಸಾಗಿದೆ. ಅದರ ಹೊಸ ರ್ಸ್ಪಗಳನ್ನು ಸ್ಪರ್‘ಾತ್ಮಕವಾಗಿ ತೆಗೆದುಕೊಳ್ಳುತ್ತಿದೆ. ಸಂಸ್ಥಾಪಕ ವಿ. ಎಸ್. ಎಸ್. ಮಣಿ ಅವರ ನಿವ್ವಳ ಮೌಲ್ಯವು ಈ ವರ್ಷ ರೂ. 1,100 ಕೋಟಿ ಆಗಿದೆ. ವೆಂಕಟಾಚಲಂ ಸ್ಥಾಣು ಸುಬ್ರಮಣಿ ಮಣಿ ಎಂಬ ಪೂರ್ಣ ಹೆಸರಿನ ವಿ. ಎಸ್. ಎಸ್. ಮಣಿ ಅವರು 1996ರಲ್ಲಿ ಆರಂಭಿಸಿದರು. ಜಸ್ಟ್ ಡಯಲ್ ಕೂಡ ‘ಾರತದ ಮೊದಲ ಸ್ಟಾರ್ಟ್ ಅಪ್‌ಗಳಲ್ಲಿ ಒಂದು ಎನ್ನಿಸಿಕೊಂಡಿದೆ.

10. ಬೈಜು ರವೀಂದ್ರನ್, ಬೈಜುಸ್ (ರೂ. 1,000 ಕೋಟಿ)
ಬೈಜುಸ್ ಈ ವರ್ಷ ತನ್ನ ಬೆಳವಣಿಗೆಯ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತಿದೆ. ಚಾನ್ ಜ್ಯೂಕರ್ ಬರ್ಗ್ ರಂತಹ ಹೂಡಿಕೆದಾರರಿಂದ ಬೃಹತ್ ಪ್ರಮಾಣದ ಹಣವನ್ನು ಸಂಗ್ರಹಿಸಿ ಅಂತಾರಾಷ್ಟ್ರೀಯವಾಗಿ ವಿಸ್ತರಿಸಲು ಯೋಜಿಸುತ್ತಿದೆ. ಕಂಪೆನಿಯು ಈ ವರ್ಷದ ಮಾರಾಟದಲ್ಲಿ ರೂ. 400 ಕೋಟಿ ಮೊತ್ತವನ್ನು ಗಳಿಸಿದೆ. ಸಂಸ್ಥಾಪಕ ಬೈಜು ರವೀಂದ್ರನ್ ರವರು 1,000 ಕೋಟಿ ರೂ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಬೈಜೂಸ್ ಎಂಬುದೊಂದು ಅಂತರ್ಜಾಲ ಶಿಕ್ಷಣ ತರಬೇತಿ ಸ್ಟಾರ್ಟ್ ಅಪ್ ಆಗಿದೆ. ಶಿಕ್ಷಣ ಸಂಬಂ ಆ್ಯಪ್‌ಗಳ ಮೂಲಕ ಎಲ್ಲರನ್ನೂಘಿ, ವಿಶೇಷವಾಗಿ ವಿದ್ಯಾರ್ಥಿ ಹಾಗೂ ಯುವ ಜನರ ಮನಸ್ಸು ಸೆಳೆಯಲು ಯತ್ನಿಸುತ್ತಿದೆ. ಬೈಜೂಸ್ ಮೂಲಕ ಅಂತರ್ಜಾಲ ಶಿಕ್ಷಣ ಪಡೆದವರು ಐಐಟಿ-ಜೆಇಇ, ನೀಟ್, ಕ್ಯಾಟ್ ಹಾಗೂ ಐಎಎಸ್‌ನಂತಹ ಹಲವಾರು ಸ್ಪರ್‘ಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಿಕೊಂಡಿದ್ದಾರೆ.

ಪ್ರತಿ ವರ್ಷ ನೂರಾರು ಸ್ಟಾರ್ಟ್ ಅಪ್ ಆರಂ‘ಗೊಂಡರೂ, ಸ್ಪರ್‘ಾತ್ಮಕ ಜಗತ್ತಿನಲ್ಲಿ ದೀರ್ಘ ಕಾಲ ಬಾಳುವ ಸ್ಟಾರ್ಟ್ ಅಪ್‌ಗಳು ಕೆಲವೇ ಕೆಲವು. ಇಂತಹ ಸ್ಟಾರ್ಟ್ ಅಪ್‌ಗಳ ಪೈಕಿ ‘ಾರೀ ಲಾ‘ ಮಾಡಿಕೊಳ್ಳುವಂತಹ ಸ್ಟಾರ್ಟ್ ಅಪ್‌ಗಳು ಇನ್ನೂ ಹಲವಾರು. ಸ್ಟಾರ್ಟ್ ಅಪ್‌ಗಳ ಮೂಲಕವೂ ಕೋಟ್ಯಂತರ ರೂಪಾಯಿಗಳ ಆದಾಯವನ್ನು ಗಳಿಸಿಕೊಳ್ಳಬಹುದು ಎನ್ನುವುದಕ್ಕೆ ‘ಾರತದ ಈ ಸಾ‘ಕರೇ ಸಾಕ್ಷಿಯಾಗಿದ್ದಾರೆ.

Tuesday, January 16, 2018

ಪಾಕಿಸ್ತಾನದ ಪುಂಡಾಟಕ್ಕೆ ಮದ್ದರೆಯುತ್ತಿದೆ ಭಾರತ

ಕಾಲು ಕೆರೆದುಕೊಂಡು ಜಗಳಕ್ಕೆ ಬದುವುದು ಪಾಕಿಸ್ತಾನದ ಜಾಯಮಾನ. ಸುಮ್ಮನೆ ಇದ್ದರೂ ಕಾರಣವಿಲ್ಲದೇ ಗಡಿಯಲ್ಲಿ ಗುಂಡಿನ ದಾಳಿ ನಡೆಸುವುದು, ಭಾರತದ ಯೋಧರನ್ನು ಹತ್ಯೆ ಮಾಡುವುದು ಪಾಕಿಸ್ತಾನಕ್ಕೆ ಆಟದಂತೆ ಆಗಿದೆ. ಇಂತಹ ಪಾಪಿ ಪಾಕಿಗೆ ಬುದ್ಧಿ ಕಲಿಸಲು ಭಾರತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಹಲವಾರು ರೀತಿಯಿಂದ ಪಾಕಿಸ್ತಾನದ ಸದ್ದು ಅಡಗಿಸುವ ಕಾರ್ಯವನ್ನು ಭಾರತ ಮಾಡುತ್ತಿದೆ. ಭಾರತದ ಕಠಿಣ ಕ್ರಮದಿಂದಾಗಿ ಪಾಕಿಸ್ತಾನ ಬಾಲ ಮುದುರಿ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

1947ರಲ್ಲಿ ಭಾರತದಿಂದ ಪಾಕಿಸ್ತಾನ ವಿ‘ಜನೆಯಾದಾಗಿನಿಂದಲೇ ಪಾಕ್ ಗಡಿಯಲ್ಲಿ ಪುಂಡಾಟವನ್ನು ಶುರು ಹಚ್ಚಿಕೊಂಡಿದೆ. ಕಳೆದೆರಡು ದಶಕದಲ್ಲಂತೂ ಪಾಕಿಸ್ತಾನದ ಪುಂಡಾಟ ತೀವ್ರ ಪ್ರಮಾಣದಲ್ಲಿ ಹೆಚ್ಚಿದೆ. ಭಾರತದ ಗಡಿಗುಂಟ, ಅದರಲ್ಲಿಯೂ ಪ್ರಮುಖವಾಗಿ ಜಮ್ಮು-ಕಾಶ್ಮೀರದ ಎಲ್‌ಒಸಿಯಲ್ಲಿ ಪಾಕಿಸ್ತಾನ ನಡೆಸುವ ಪುಂಡಾಟಕ್ಕೆ ಮಿತಿಯೇ ಇರಲಿಲ್ಲ ಎನ್ನುವಂತಾಗಿತ್ತುಘಿ. ಕಾರಣವಿಲ್ಲದೆಯೇ ‘ಾರತದ ಯೋಧರ ಮೇಲೆ ಗುಂಡಿನ ದಾಳಿಯನ್ನು ನಡೆಸುವುದು, ಉಗ್ರರನ್ನು ಗಡಿಯೊಳಕ್ಕೆ ನುಸುಳಲು ಅವಕಾಶ ಕಲ್ಪಿಸುವುದು, ಗಡಿ ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಾಗರಿಕರ ನಿವಾಸಗಳ ಮೇಲೆ ಶೆಲ್ ದಾಳಿ ನಡೆಸುವುದು, ಮುಗ್ಧ ನಾಗರಿಕರನ್ನು ಹತ್ಯೆ ಮಾಡುವುದು ಹೀಗೆ ಹಲವಾರು ಕೀಟಲೆಗಳನ್ನು ಕೊಡುವ ಕಾರ್ಯ ಪಾಕಿಸ್ತಾನದಿಂದ ಸದಾ ನಡೆಯುತ್ತಲೇ ಇತ್ತುಘಿ. ಪಾಕಿಸ್ತಾನದ ದಾಳಿಗೆ ‘ಾರತ ಶಾಂತಿಯ, ಮಾತುಕತೆಯ ಉತ್ತರವನ್ನು ನೀಡುತ್ತಲೇ ಇತ್ತುಘಿ. ಪಾಕಿಸ್ತಾನ ಗುಂಡಿನ ದಾಳಿಯನ್ನು ನಡೆಸಿ ‘ಾರತದ ನಾಗರಿಕರನ್ನು, ಯೋ‘ರನ್ನು ಹತ್ಯೆ ಮಾಡುವುದು, ಅದಕ್ಕೆ ಪ್ರತಿಯಾಗಿ ‘ಾರತದ ರಾಜತಾಂತ್ರಿಕರು, ಅಕಾರಿಗಳು ಶಾಂತಿ ಮಾತುಕತೆ-ಸ‘ೆಗಳನ್ನು ನಡೆಸುವುದು ನಡೆದೇ ಇತ್ತುಘಿ. ‘ಾರತ ಹಾಗೂ ಪಾಕಿಸ್ತಾನದ ನಡುವಿನ 2400 ಕಿಲೋಮೀಟರ್ ಉದ್ದದ ಗಡಿಯಲ್ಲಿ, ಪ್ರಮುಖವಾಗಿ ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನದ ಹಾರಾಟ ತೀರಾ ಹೆಚ್ಚಿತ್ತುಘಿ. ಆದರೆ ‘ಾರತದ ‘ಲಿಷ್ಠ ನಡೆ ಪಾಕಿಸ್ತಾನವನ್ನು ಕಂಗೆಡಿಸಿದೆ.
2014ರಿಂದೀಚೆಗೆ ‘ಾರತದಲ್ಲಿ ಅಕಾರದ ಚುಕ್ಕಾಣಿ ಹಿಡಿದ ಪ್ರ‘ಾನಿ ನರೇಂದ್ರ ಮೋದಿ ಅವರ ಎನ್‌ಡಿಎ ಸರ್ಕಾರದ ಆಡಳಿತದ ಅವಯಿಂದ ‘ಾರತ-ಪಾಕ್ ಗಡಿಯಲ್ಲಿನ ಪರಿಸ್ಥಿತಿ ಬದಲಾವಣೆಯಾಗಿದೆ. ಪಾಕಿಸ್ತಾನದ ಪುಂಡಾಟಕ್ಕೆ ನಿ‘ಾನವಾಗಿ ಕಡಿವಾಣ ಬೀಳುತ್ತಿದೆ. ಮೊದಲೆಲ್ಲ ತೀವ್ರಗೊಂಡಿದ್ದ ಕದನವಿರಾಮ ಉಲ್ಲಂಘನೆ ಪ್ರಕರಣಗಳು ಇದೀಗ ಬೆರಳೆಣಿಕೆಯಷ್ಟು ಸಂಖ್ಯೆಗೆ ಇಳಿಕೆಯಾಗಿದೆ. ‘ಾರತ ಕೈಗೊಂಡ ರಾಜತಾಂತ್ರಿಕ ಕ್ರಮಗಳು, ಸರ್ಕಾರದ ಮಟ್ಟದಲ್ಲಿನ ಕಾರ್ಯಗಳು ಹಾಗೂ ಸೈನಿಕ ಕಾರ್ಯಾಚರಣೆಯ ಕ್ರಮಗಳ ಮೂಲಕ ಪಾಕಿಸ್ತಾನದ ಪುಂಡಾಟಕ್ಕೆ ಹಗ್ಗ ಹಾಕಲಾಗುತ್ತಿದೆ. ಶಾಂತಿ ಮಂತ್ರದ ಜೊತೆ ಜೊತೆಯಲ್ಲಿಯೇ ಪಾಕಿಸ್ತಾನದ ನಿಜವಾದ ಬುದ್ಧಿಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕುವ ಮೂಲಕ ‘ಾರತ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನೇ ಕಲಿಸುತ್ತಿದೆ. ‘ಾರತದ ಕ್ರಮಗಳು ಪಾಕಿಸ್ತಾನದ ನಿದ್ದೆಯನ್ನು ಕೆಡಿಸುತ್ತಿವೆ. ಅಸಮ‘ಾನದ ಬೆಂಕಿಯಲ್ಲಿ ತನ್ನನ್ನೇ ತಾನು ಸುಟ್ಟುಕೊಳ್ಳುತ್ತಿರುವ ಪಾಕಿಸ್ತಾನ ಏನಾದರೂ ನೆಪವನ್ನು ಹೂಡಿ ‘ಾರತದ ಮಾನ ಹರಾಜು ಹಾಕಬೇಕೆಂಬ ವಿಲ ಯತ್ನದಲ್ಲಿ ತೊಡಗಿಕೊಂಡಿದೆ. ಪಾಕಿಸ್ತಾನದ ಸರ್ವಪ್ರಯತ್ನಗಳೂ ‘ಾರತದ ರಾಜತಾಂತ್ರಿಕರ ಬುದ್ಧಿವಂತಿಕೆಯ ಎದುರು ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.

ಸೈನಿಕ ಕಾರ್ಯಾಚರಣೆ, ಕ್ರಮಗಳು
ಉಗ್ರರನ್ನು ‘ಾರತದ ಗಡಿಯೊಳಕ್ಕೆ ನುಸುಳಲು ಪ್ರೇರೇಪಿಸುವುದು, ಜಮ್ಮು-ಕಾಶ್ಮೀರದಲ್ಲಿ ಅಶಾಂತಿಯನ್ನು ಹುಟ್ಟು ಹಾಕುವುದು, ‘ಾರತದ ಸೈನಿಕರ ಮೇಲೆ ಕಲ್ಲು ಹೊಡೆಯಲು ಕಾಶ್ಮೀರ ಕಣಿವೆಯ ಯುವಕರಿಗೆ ‘ನಸಹಾಯ ಮಾಡುವುದು, ‘ಾರತದ ಸೈನಿಕರು ಹಾಗೂ ನಾಗರಿಕರ ಮೇಲೆ ವಿನಾಕಾರಣ ಗುಂಡು ಹಾರಿಸುವುದು, ‘ಾರತದ ಸೈನಿಕ ಠಾಣೆಗಳ ಮೇಲೆ, ಗಡಿ ‘ದ್ರತಾ ಪಡೆಗಳ ಬಂಕರ್ ಮೇಲೆ, ನಾಗರಿಕರ ನಿವಾಸಗಳ ಮೇಲೆ ಪಾಕಿಸ್ತಾನ ‘ಾಳಿ ನಡೆಸುವುದು ಇಂದು ನಿನ್ನೆಯದಲ್ಲಘಿ. ಜಮ್ಮು-ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಅಥವಾ ಜಮ್ಮು-ಕಾಶ್ಮೀರವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವ ಪರಮೋದ್ಧೇಶದಿಂದ ‘ಾರತದ ವಿರುದ್ಧ ಸದಾ ಗುರ್ರೆನ್ನುವ ಪಾಕಿಸ್ತಾನ ದಿನನಿತ್ಯ ಲೈನ್ ಆ್ ಕಂಟ್ರೂಲ್ ವಲಯದಲ್ಲಿ ‘ಾರತದ ಪಾಳೆಯದ ಮೇಲೆ ಗುಂಡು ಹಾರಿಸುವ ಕೆಲಸ ಮಾಡುತ್ತದೆ. ಯಾವುದೇ ಕಾರಣವೇ ಇಲ್ಲದೆಯೇ ‘ಾರತದ ಸೈನಿಕರ ಮೇಲೆ ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡುವ ಕೆಲಸದಲ್ಲಿ ಪಾಕಿಸ್ತಾನ ನಿರತವಾಗಿದೆ.
ತೀರಾ ಇತ್ತೀಚಿನ ವರೆಗೂ, ಅಂದರೆ 2015-16ರ ವರೆಗೂ ‘ಾರತವು ಶಾಂತಿ ಮಂತ್ರವನ್ನು ಪಠಿಸುತ್ತಲೇ ಇತ್ತುಘಿ. ಪಾಕಿಸ್ತಾನ ಗುಂಡು ಹಾರಿಸುತ್ತಿದ್ದರೆ ‘ಾರತ ಮಾತುಕತೆಯ ಮೂಲಕ ಸಮಸ್ಯೆ ಪರಿಹಾರ ಮಾಡೋಣ ಎನ್ನುತ್ತಲೇ ಇತ್ತುಘಿ. ಆದರೆ ‘ಾರತದ ಮಾತುಕತೆಯ ಪ್ರಸ್ತಾಪವನ್ನೇಘಿ, ‘ಾರತದ ಅಸಾಮರ್ಥ್ಯ ಎಂದುಕೊಂಡ ಪಾಕಿಸ್ತಾನ ತನ್ನ ಪುಂಡಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತಲೇ ಸಾಗಿತು. ಪಾಕ್‌ನ ಈ ಕ್ರಮಕ್ಕೆ ‘ಾರತ ಇದೀಗ ದಿಟ್ಟ ಉತ್ತರವನ್ನೇ ನೀಡಲು ಆರಂಭಿಸಿದೆ.
ಶಾಂತಿಮಂತ್ರದ ಜಾಗದಲ್ಲಿ ಈಗ ಸೈನ್ಯಶಕ್ತಿಘಿ, ರಾಜತಾಂತ್ರಿಕ ಕ್ರಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕಣ್ಣಿಗೆ ಕಣ್ಣುಘಿ, ಹಲ್ಲಿಗೆ ಹಲ್ಲು ಎನ್ನುವ ತತ್ವವನ್ನು ಅಳವಡಿಸಿಕೊಂಡಿರುವ ‘ಾರತ ಪಾಕಿಸ್ತಾನದ ಮಗ್ಗುಲು ಮುರಿಯುತ್ತಿದೆ.
‘ಾರತದ ಓರ್ವ ಉಗ್ರನನ್ನು ಹತ್ಯೆ ಮಾಡಿದರೆ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಐವರು ಉಗ್ರರನ್ನು ಕೊಲ್ಲಲಾಗುತ್ತಿದೆ. ಜೊತೆ ಜೊತೆಯಲ್ಲಿಯೇ ಲೈನ್ ಆ್ ಕಂಟ್ರೂಲ್‌ಗುಂಟ ಸೈನಿಕ ಪಹರೆ ಹೆಚ್ಚುತ್ತಿದೆ. ಸೇನಾ ನೆಲೆಗಳು ಜಾಸ್ತಿ ಆಗುತ್ತಿವೆ. ಸರ್ಜಿಕಲ್ ಸ್ಟ್ರೈಕ್‌ಗಳ ಮೂಲಕ ಉಗ್ರರ ಮೂಲ ನೆಲೆಗೆ ತೆರಳಿ ಅವರನ್ನು ಹನನ ಮಾಡಿರುವುದು ‘ಾರತದ ಸೈನಿಕರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. 2016-17ರಲ್ಲಂತೂ ‘ಾರತದ ನಿಲುವು ಇನ್ನಷ್ಟು ಕಠಿಣವಾಗಿದೆ. ‘ಾರತದ ಓರ್ವ ಸೈನಿಕನನ್ನು ಪಾಕಿಸ್ತಾನ ಹತ್ಯೆ ಮಾಡಿದಾಗಲೂ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ನಾಲ್ವರೋ-ಐವರೋ ಸೈನಿಕರನ್ನು ಕೊಂದು ಹಾಕುತ್ತಿದೆ. ಅಲ್ಲದೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಿಸಲಾದ ಸೈನಿಕರ ಠಾಣೆಗಳು, ಉಗ್ರರ ತಾಣಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಿರ್ನಾಮ ಮಾಡಲಾಗುತ್ತಿದೆ. ಇದರಿಂದ ಪಾಕಿಸ್ತಾನ ಎಷ್ಟು ಕಂಗೆಟ್ಟಿದೆಯೆಂದರೆ ‘ಾರತವೇ ತನ್ನ ಮೇಲೆ ದಾಳಿ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯ ಅಂಗಳದಲ್ಲಿ ನಕಲಿ ಪೋಟೋಗಳನ್ನು ಹಂಚುವ ಮೂಲಕ ಗೂಬೆ ಕೂರಿಸುವ ಯತ್ನ ಮಾಡುತ್ತಿದೆ. ಅದರಲ್ಲಿಯೂ ಸೋಲನ್ನು ಉಣ್ಣುವ ಮೂಲಕ ಜಾಗತಿಕವಾಗಿ ಪಾಕಿಸ್ತಾನ ಮಾನ ಹರಾಜು ಮಾಡಿಕೊಂಡಿದೆ.
‘ಾರತ ಹಾಗೂ ಪಾಕಿಸ್ತಾನಗಳು ಪ್ರತಿವರ್ಷ ಸಾವನ್ನಪ್ಪಿದ ಸೈನಿಕರ ಸಂಖ್ಯೆಯನ್ನು ವಿನಿಮಯ ಮಾಡಿಕೊಳ್ಳುತ್ತವೆ. ಈ ಮಾಹಿತಿಯ ಪ್ರಕಾರ 2016 ಹಾಗೂ 2017ರಲ್ಲಿ  ತಲಾ 76 ಹಾಗೂ 138ಪಾಕ್ ಸೈನಿಕರನ್ನು ಭಾರತವು ಹತ್ಯೆ ಮಾಡಿದೆ. ಇನ್ನು ‘ಾರತದ ಸೈನಿಕರ ಗುಂಡಿನ ದಾಳಿಗೆ ಬಲಿಯಾದ ಉಗ್ರರ ಸಂಖ್ಯೆ ಸೈನಿಕರ ಸಂಖ್ಯೆಗಿಂತ ದುಪ್ಪಟ್ಟಾಗಿದೆ. ಇಷ್ಟಾದರೂ ಕೂಡ, ಅಡಿಗೆ ಬಿದ್ದರೂ ಜಟ್ಟಿಯ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಪಾಕಿಸ್ತಾನದ ವರ್ತನೆ. ಭಾರತ ದಾಖಲೆಯ ಸಮೇತ ಪಾಕ್ ಸೈನಿಕರ ಹತ್ಯೆಯ ಚಿತ್ರಣವನ್ನು ಕಣ್ಣೆದುರಿಗೆ ಇಟ್ಟರೂ ಪಾಕ್ ಅದನ್ನು ಅಲ್ಲಗಳೆಯುವ ಮೂಲಕ ತನ್ನ ನರಿ ಬುದ್ದಿಯನ್ನು ಪ್ರದರ್ಶಿಸುತ್ತಿದೆ.

ರಾಜತಾಂತ್ರಿಕ ಕ್ರಮಗಳು :
ಪಾಕಿಸ್ತಾನದ ಬಾಲ ಕತ್ತರಿಸಲು ಕೇವಲ ಮಿಲಿಟರಿ ಕಾರ್ಯಾಚರಣೆ ಮಾತ್ರ ಸಹಕಾರಿಯಾಗಿಲ್ಲ. ಬದಲಾಗಿ ಭಾರತದ ರಾಜತಾಂತ್ರಿಕರು ಕೈಗೊಂಡಂತಹ ಕ್ರಮಗಳೂ ಸಹಕಾರಿಯಾಗಿದೆ. ವಾಗ್ದಾಳಿ, ಎಚ್ಚರಿಕೆ, ಒತ್ತಡ ತಂತ್ರ ಹೀಗೆ ಹಲವಾರು ರೀತಿಯಲ್ಲಿ ಪಾಕಿಸ್ತಾನವನ್ನು ಹಣಿಯುವ ಪ್ರಯತ್ನ ಭಾರತದ್ದು.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ‘ಾರತ ತೀಕ್ಷ್ಣ ಮಾತುಗಳ ಮೂಲಕ ಜಗತ್ತಿನ ಎದುರು ಬಣ್ಣ ಬಯಲು ಮಾಡಿದೆ. ಪಾಕಿಸ್ತಾನದ ದಿನನಿತ್ಯ ಗಡಿಯಲ್ಲಿ ಮಾಡುವಂತಹ ಕ್ರಮಗಳನ್ನು ದಾಖಲೆಗಳ ಸಮೇತ ಜಾಗತಿಕ ವೇದಿಕೆಯಲ್ಲಿ ಅನಾವರಣ ಮಾಡಿದೆ. ಜಗತ್ತಿನ ರಾಷ್ಟ್ರಗಳು ಪಾಕಿಸ್ತಾನವನ್ನು ಹಳಿಯಲು ಆರಂಭಿಸಿವೆ. ಅಷ್ಟೇ ಏಕೆ ಪಾಕಿಸ್ತಾನದ ಉಗ್ರ ರಕ್ಷಣೆಯ ವಿರುದ್ಧ ಜಗತ್ತಿನ ರಾಷ್ಟ್ರಗಳು ಕಿಡಿಕಾರಿವೆ. ವಿಶ್ವಸಂಸ್ಥೆಯಲ್ಲಿ ‘ಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಆಡಿದ ಮಾತುಗಳಂತೂ ಪಾಕಿಸ್ತಾನ ಜನ್ಮದಲ್ಲಿ ಮರೆಯುವುದಿಲ್ಲಘಿ. ಅಷ್ಟು ತೀಕ್ಷ್ಣವಾಗಿದ್ದವು.

ಉಗ್ರ ನಿಗ್ರಹದ ವಿರುದ್ಧ ಕಟ್ಟು ನಿಟ್ಟಿನ ಕ್ರಮ
ಪಾಕಿಸ್ತಾನವು ಉಗ್ರರನ್ನು ಪೋಷಿಸುತ್ತಿರುವುದು ಜಗತ್ತಿಗೆ ಗೊತ್ತಿದೆ. ತನ್ನ ನೆಲದಲ್ಲಿ ಉಗ್ರರಿಗೆ ತರಬೇತಿ ನೀಡಿ ಅವರನ್ನು ಕಾಶ್ಮೀರಕ್ಕೋ ಅಥವಾ ಇನ್ಯಾವುದೇ ಪ್ರದೇಶಕ್ಕೋ ರವಾನೆ ಮಾಡುವುದರಲ್ಲಿ ಪಾಕಿಸ್ತಾನದ ಸೇನೆ ಹಾಗೂ ಪಾಕ್ ಗುಪ್ತಚರ ಇಲಾಖೆ ಐಎಸ್‌ಐನದ್ದು ಎತ್ತಿದ ಕೈಘಿ. ಉಗ್ರರನ್ನು ರ್ತು ಮಾಡುವ ಮೂಲಕ ‘ಾರತದಲ್ಲಿ ಹಾಗೂ ಸುತ್ತಲಿನ ರಾಷ್ಟ್ರಗಳಲ್ಲಿ ಅಶಾಂತಿ ಸೃಷ್ಟಿಸುವ ಕಾರ್ಯದಲ್ಲಿ ನಿರತವಾಗಿರುವ ಪಾಕಿಸ್ತಾನಕ್ಕೆ ‘ಾರತ ಅಂತರಾಷ್ಟ್ರೀಯ ಮಟ್ಟದಿಂದ ಒತ್ತಡವನ್ನು ಹೇರಿದೆ. ಪಾಕಿಸ್ತಾನದ ಬೆನ್ನಿಗೆ ಆರ್ಥಿಕ ಸಜಾಯದ ಮೂಲಕ ಕೆಲವು ದಶಕಗಳಿಂದ ನಿಂತಿದ್ದ ಅಮೆರಿಕಕ್ಕೆ ಪಾಕ್‌ನ ನಿಜಬುದ್ಧಿಯನ್ನು ಪರಿಚಯಿಸಿ, ಅನುದಾನ ತಡೆಹಿಡಿಯುವಲ್ಲಿ ‘ಾರತ ಕೈಗೊಂಡ ಪಾತ್ರ ನಿಜಕ್ಕೂ ಶ್ಲಾಘನೀಯ. ಅಮೆರಿಕ ನೀಡುವ ಅನುದಾನಗಳನ್ನು ಪಾಕಿಸ್ತಾನ ಹೇಗೆ ಉಗ್ರರ ಪೋಷಣೆಗೆ ಬಳಕೆ ಮಾಡುತ್ತಿದೆ ಎನ್ನುವುದನ್ನು ದಾಖಲೆಗಳ ಪ್ರಕಾರ ಅಮೆರಿಕಕ್ಕೆ ಅರಿವು ಮಾಡಿಕೊಟ್ಟಿದೆ. ಇದರಿಂದಾಗಿ ಅಮೆರಿಕ ಅ‘್ಯಕ್ಷ ಡೋನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ನೀಡಬೇಕಿದ್ದ ಅನುದಾನಕ್ಕೆ ತಡೆಯನ್ನು ಒಡ್ಡಿದ್ದಾರೆ. ಅಷ್ಟೇ ಅಲ್ಲದೇ ಉಗ್ರರನ್ನು ಮಟ್ಟ ಹಾಕಿ. ನಂತರ ಅನುದಾನ ನೀಡುವ ನಿಟ್ಟಿನಲ್ಲಿ ಆಲೋಚಿಸೋಣ ಎಂದು ಗುಡುಗಿದ್ದಾರೆ. ಇದರಿಂದಾಗಿ ಬೆದರಿದ ಪಾಕಿಸ್ತಾನ ಅನಿವಾರ್ಯವಾಗಿ ತನ್ನ ನೆಲದಲ್ಲಿದ್ದ ಉಗ್ರರ ತಾಣಗಳನ್ನು ಮಟ್ಟ ಹಾಕುವ ಕಾರ್ಯಕ್ಕೆ ಇಳಿದಿದೆ.
ಭಾರತದ ಒತ್ತಡ ತಂತ್ರ ಇಷ್ಟಕ್ಕೇ ನಿಂತಿಲ್ಲಘಿ. ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಜಮಾತ್-ಉದ್-ದವಾದ ಮುಖ್ಯಸ್ಥ ಉಗ್ರ ಹಫೀಜ್ ಸಯೀದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ನಿಟ್ಟಿನಲ್ಲಿಯೂ ಭಾರತ ಕೈಗೊಂಡ ರಾಜತಾಂತ್ರಿಕ ಕ್ರಮಗಳು ಅಮೋಘವಾದುದು. ಹಫೀಜ್ ಸಯೀದ್ ಹಾಗೂ ಪಾಕಿಸ್ತಾನದ ಪರವಾಗಿ ಭಾರತದ ಇನ್ನೊಂದು ವೈರಿ ರಾಷ್ಟ್ರ ಚೀನಾ ನಿಂತಿದ್ದರೂ ಕೂಡ, ಭಾರತದ ರಾಜತಾಂತ್ರಿಕ ನಿಪುಣರು ವಿಶ್ವಸಂಸ್ಥೆ, ಆಸೀಯಾನ್ ಸೇರಿದಂತೆ ವಿವಿಧ ಒಕ್ಕೂಟಗಳ ವಲಯದಲ್ಲಿ ಕೈಗೊಂಡ ಕ್ರಮಗಳು ವಿಶಿಷ್ಟವಾದುದು.


ಗಡಿಯಲ್ಲಿ ಹೆಚ್ಚಿದ ‘ಾರತದ ಕಟ್ಟುನಿಟ್ಟು :
‘ಾರತ-ಪಾಕ್ ಗಡಿಯಲ್ಲಿ ಪಾಕಿಸ್ತಾನದ ಉದ್ಧಟತನವನ್ನು ತಡೆಯುವ ಸಲುವಾಗಿ ‘ಾರತವು 1400 ಸೇನಾ ಠಾಣೆಗಳನ್ನು ತೆರೆಯಲು ಮುಂದಾಗಿದೆ. ಅಲ್ಲದೇ ಗಡಿಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಗಳೂ ನಡೆಯುತ್ತಿವೆ. ತ್ವರಿತಗತಿಯಲ್ಲಿ ಸೈನಿಕರನ್ನು ರವಾನೆ ಮಾಡುವುದು, ಶಸಾಸಗಳನ್ನು ಕಳಿಸುವುದು, ಆಹಾರ ಸೇರಿದಂತೆ ಅಗತ್ಯದ ವಸ್ತುಗಳನ್ನು ರವಾನಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಇದು ಪಾಕಿಸ್ತಾನದ ಸೈನಿಕರಲ್ಲಿ ನಡುಕ ಹುಟ್ಟಿಸಿರುವುದು ಸುಳ್ಳಲ್ಲಘಿ.
ಇದರ ಜೊತೆಗೆ ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯ ಅವ್ಯಾಹತವಾಗಿ ನಡೆದಿದೆ. ಕುಖ್ಯಾತ ಉಗ್ರ ಸಂಘಟನೆಗಳಿಗೆ ಸೇರಿದ ಸದಸ್ಯರುಗಳನ್ನು ‘ಾರತೀಯ ಸೇನೆಯು ಹುಡುಕಿ ಹುಡುಕಿ ಕೊಲ್ಲುತ್ತಿದೆ. ಅಲ್ಲದೇ ಕಾಶ್ಮೀರ ಕಣಿವೆಯಲ್ಲಿ ಹೆಚ್ಚಿದ್ದ ಕಲ್ಲು ತೂರಾಟ ಪ್ರಕರಣಗಳನ್ನೂ ಕೂಡ ತಹಬಂದಿಗೆ ತಂದಿದೆ. ಇದರಿಂದಾಗಿ ಕಾಶ್ಮೀರ ಕಣಿವೆ ನಿ‘ಾನವಾಗಿ ಶಾಂತಿಯತ್ತ ಮುಖ ಮಾಡಿದೆ.

ಪ್ರಸ್ತುತ ಸ್ಥಿತಿಗತಿ
‘ಾರತ ಹಾಗೂ ಪಾಕಿಸ್ತಾನದ ನಡುವೆ ಲೈನ್ ಆ್ ಕಂಟ್ರೂಲ್ ನಲ್ಲಿ ಪ್ರಸ್ತುತ ತ್ವೇಷಮಯ ವಾತಾವರಣವಿದೆ. ಪಾಕಿಸ್ತಾನ ಪದೇ ಪದೆ ‘ಾರತದ ಮೇಲೆ ಗುಂಡಿನ ದಾಳಿಯನ್ನು ಅಪ್ರಚೋದಿತವಾಗಿ ನಡೆಸುತ್ತ ಬಂದಿದೆ. ‘ಾರತ ಇದಕ್ಕೆ ತಕ್ಕ ಉತ್ತರವನ್ನೂ ನೀಡುತ್ತಿದೆ. ಪಾಕಿಸ್ತಾನಕ್ಕೆ ತಾನು ದಾಳಿ ಮಾಡಿದರೆ ಅದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾದೀತು ಎನ್ನುವುದು ಸ್ಪಷ್ಟವಾಗಿ ಅರ್ಥವಾಗಿದೆ. ಮೊದಲಿನ ಹುಚ್ಚಾಟಗಳನ್ನು ಪಾಕ್ ಕಡಿಮೆ ಮಾಡಲು ಪ್ರಾರಂಭಿಸಿದೆ.

2016ರಿಂದೀಚೆಗೆ ಭಾರತ ನಡೆಸಿರುವ ಪ್ರಮುಖ ದಾಳಿಗಳು
2016ರ ಸೆಪ್ಟೆಂಬರ್ 28-29ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪಾಕಿಸ್ತಾನದ ಸೇನಾ ನೆಲೆಗಳು ಹಾಗೂ ಉಗ್ರರ ತರಬೇತಿ ಶಿಬಿರ, ನೆಲಗಳ ಮೇಲೆ ‘ಾರತದ ಸೇನೆ ನಿರ್ದಿಷ್ಠ ದಾಳಿ ನಡೆಸಿತು. ಇದರಿಂದಾಗಿ ಕನಿಷ್ಠ 35-40 ಪಾಕ್ ಸೈನಿಕರು-ಉಗ್ರರು ಸಾವನ್ನಪ್ಪಿದರು.
2017ರ ಸೆಪ್ಟೆಂಬರ್ 22ರಂದು ‘ಾರತದ ಸೇನೆಯು ಚರ್ವಾಹ್ ಹಾಗೂ ಹರ್ಪಾಲ್ ವಲಯಗಳ ಮೇಲೆ ದಾಳಿ ನಡೆಸಿದ ಪರಿಣಾಮ ಪಾಕಿಸ್ತಾನದ ಸೇನೆಯ 20ಕ್ಕೂ ಅಕ ಯೋ‘ರು ಸಾವನ್ನಪ್ಪಿದರು.
2018ರ ಜನವರಿ 3ರಂದು ‘ಾರತದ ಯೋ‘ನನ್ನು ಕೊಂದಿದ್ದ ಪಾಕಿಸ್ತಾನದ ಮೇಲೆ ಜ.4ರಂದು ‘ಾರತ ಪ್ರತಿದಾಳಿ ನಡೆಸಿತು. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯ 10ಕ್ಕೂ ಹೆಚ್ಚಿನ ಸೈನಿಕರು ಮೃತಪಟ್ಟರು. ತನ್ಮೂಲಕ ‘ಾರತ ತನ್ನ ಒಂದು ಸೈನಿಕನನ್ನು ಕೊಂದರೆ ಪ್ರತಿಯಾಗಿ 10 ಸೈನಿಕರನ್ನು ಹತ್ಯೆ ಮಾಡುತ್ತೇನೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿತು.

Sunday, January 14, 2018

ಅಂ-ಕಣ -10

ಫಲಿತಾಂಶ

ದೀಪಾವಳಿ ರಾಕೇಟ್
ಫೇಲ್ ಆಗಬಹುದು...
ಇಸ್ರೋ ರಾಕೇಟ್
ಫೇಲ್ ಆಗೋಲ್ಲ....!

ವಿಭಿನ್ನ

ಎಲ್ಲರೂ ಚೆಂಡು
ವಿರೂಪ ಅಂತಾರೆ...
ಆದರೆ ಯಾರೊಬ್ಬರೂ
ಬ್ಯಾಟು ವಿರೂಪ
ಅಂದಿದ್ದನ್ನ ಕೇಳೇ ಇಲ್ಲ..!

ಬ್ರಿಗೇಡ್ ಬಾತ್

ಇವತ್ತು ಹಲವರಿಗೆ
ಬ್ರಿಗೇ'ಡಿಯರ್'
ರೋಡ್...!
ಇನ್ನೂ ಹಲವರಿಗೆ
ಬ್ಯಾರಿಕೇಡ್ ರೋಡ್ !!

ವಿಪರ್ಯಾಸ

ಎಲ್ರೂ ಅದನ್ನ
ಎಣ್ಣೆ ಎಣ್ಣೆ ಅಂತಾರೆ...
ಆದರೆ ಯಾರೊಬ್ನೂ
ಕೂಡ ಆ ಎಣ್ಣೆಯಲ್ಲಿ
 ಒಂದೇ ಒಂದ್ ವಡಾ
ಕರಿದಿದ್ದನ್ನ ನೋಡಿಲ್ಲ...!

ರೆಕಮಂಡ್

ಬೆಂಗಳೂರಲ್ ಸನ್ನಿ ನೈಟ್ಸ್
ಮಾಡಬಾರದು ಅಂತ
'ಗುಪ್ತ'ಚರ ಇಲಾಖೆ
ಸರ್ಕಾರಕ್ಕೆ ರೆಕಮಂಡ್
ಮಾಡಿದೆಯಂತೆ...!


(ಸುಮ್ನೆ ತಮಾಷೆಗಂತ ಆಗೀಗ ಬರೆದಿದ್ದು ಇವು. ನಿಮಗೆ ಇಷ್ಟವಾಗಬಹುದು.. ಹನಿ ಚುಟುಕಗಳಂತಿವೆ.. ಓದಿ.. ಹೇಳಿ)

Tuesday, January 9, 2018

ಮಲ ಹೊರುವ ಪದ್ಧತಿ ಇನ್ನೂ ಜೀವಂತ

               ಭಾರತದಲ್ಲಿ ಮಲ ಹೊರುವ ಪದ್ಧತಿಯನ್ನು ಈಗಾಗಲೇ ನಿಷೇಸಲಾಗಿದೆ. ಮಲಹೊರುವ ಪದ್ಧತಿಯ ವಿರುದ್ಧ ಸರ್ಕಾರಗಳು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೂ ಕೂಡ ಪದೇ ಪದೆ ಇದರಿಂದ ದುರ್ಘಟನೆಗಳು ಜರುಗುತ್ತಲೇ ಇವೆ. ಕರ್ನಾಟಕದಾದ್ಯಂತ ಈ ಪದ್ಧತಿ ಸಂಪೂರ್ಣವಾಗಿ ನಿಷೇಧವಾಗಿದೆ ಎನ್ನುವುದು ಸರ್ಕಾರ ನೀಡುವ ಮಾಹಿತಿ. ಆದರೆ ಇದರಿಂದಾಗಿ ಆಗೀಗ ಕಾರ್ಮಿಕರು ಸಾಯುತ್ತಿರುವ ನಿದರ್ಶನಗಳು ನಡೆಯುತ್ತಲೇ ಇದೆ. ಶಿಕ್ಷಾರ್ಹವಾಗಿದ್ದರೂ ಮಲದ ಗುಂಡಿಯೊಳಕ್ಕೆ ಇಳಿಸುವ ಕಾರ್ಯಗಳು ನಡೆಯುತ್ತಲೇ ಇದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದ್ದ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ.
                  ಮಲ ಹೊರುವ ಪದ್ಧತಿ ಜೀವಂತ ಇರುವ ಪೈಕಿ ದೇಶದಲ್ಲಿಯೇ ಬಿಹಾರ ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ನಂತರ ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ ಇದೆ. ವಿವಿಧ ದಾಖಲೆಗಳ ಪ್ರಕಾರ ಕರ್ನಾಟಕದಲ್ಲಿ 15400 ಜನರು ಇಂದಿಗೂ ಮಲಹೊರುವ ಪದ್ಧತಿಯಿಂದಲೇ ಬದುಕು ನಡೆಸುತ್ತಿದ್ದಾರೆ. ಇದೀಗ ಮ್ಯಾನ್‌ಹೋಲ್‌ಗೆ ಇಳಿದು ಕಾರ್ಮಿಕರು ಮೃತಪಟ್ಟ ದುರಂತ ಘಟನೆ ಮರುಕಳಿಸಿದೆ. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಒಂದರ ತ್ಯಾಜ್ಯ ಶುದ್ಧೀಕರಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮೂವರು ‘ಾನುವಾರ ಮೃತಪಟ್ಟಿದ್ದಾರೆ. ಎಚ್‌ಎಸ್‌ಆರ್ ಲೇಔಟ್ ಸಮೀಪದ ಬಂಡೇಪಾಳ್ಯದ ಎನ್. ಡಿ. ಸೆಲ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ದುರಂತದಲ್ಲಿ ಮ್ಯಾನ್‌ಹೋಲ್‌ನಲ್ಲಿ ಇಳಿದಿದ್ದ ಸರ್ಜಾಪುರದ ನಿವಾಸಿ  ಕೋಲಾರದ ನಾರಾಯಣ ಸ್ವಾಮಿ (40), ತುಮಕೂರಿನ ನಿಟ್ಟೂರಿನ ಶ್ರೀನಿವಾಸ್ (38), ಚಿಕ್ಕಮಗಳೂರಿನ ಮಹದೇವಪ್ಪ (35) ಮೃತಪಟ್ಟಿದ್ದು ಮಲ ಹೊರುವ ಪದ್ಧತಿಯ ದುರಂತಗ್ಳ ಸಾಲಿಗೆ ಇನ್ನೊಂದು ಸೇರ್ಪಡೆಯಾದಂತಾಗಿದೆ.


ಏನಿದು ಮಲ ಹೊರುವ ಪದ್ಧತಿ?
ಕಟ್ಟಿಕೊಂಡಿರುವ ಶೌಚಾಲಯ ಗುಂಡಿಗಳನ್ನು ಕಾರ್ಮಿಕರು  ಸ್ವಚ್ಛಗೊಳಿಸುವುದು, ಸೆಪ್ಟಿಕ್ ಟ್ಯಾಂಕುಗಳ ತ್ಯಾಜ್ಯಗಳನ್ನು ಬಕೆಟ್ ಅಥವಾ ಇನ್ಯಾವುದೇ ರೀತಿಯ ವಸ್ತುಗಳ ಮೂಲಕ ತಲೆಯ ಮೇಲೆ ಹೊತ್ತು ಬೇರೆಡೆಗೆ ಸಾಗಿಸುವುದನ್ನೇ ಮಲ ಹೊರುವ ಪದ್ಧತಿ ಎನ್ನಲಾಗುತ್ತದೆ. ಹಾಳಾಗಿರುವ ಶೌಚಾಲಯದ ಗುಂಡಿಗಳನ್ನು ಸ್ವಚ್ಛಗೊಳಿಸುವುದೂ ಕೂಡ ಮಲಹೊರುವ ಪದ್ಧತಿಯ ವ್ಯಾಪ್ತಿಯಲ್ಲಿಯೇ ಬರುತ್ತದೆ. ಮಲವನ್ನು ಹೊರುವುದಕ್ಕೇ ಪ್ರತ್ಯೇಕ ವ್ಯಕ್ತಿಗಳಿದ್ದು, ಶೌಚಾಲಯದ ಟ್ಯಾಂಕ್‌ಗಳಿಗೆ ಇಳಿದು ಸ್ವಚ್ಛಗೊಳಿಸುತ್ತಾರೆ. ಮಲಹೊರುವ ಪದ್ಧತಿಯನ್ನೇ ಜೀವನಾಧಾರ ಮಾಡಿಕೊಂಡಿರುವ ವರ್ಗವೊಂದಿದ್ದುಘಿ, ಮಲ ಹೊರುವ ಮೂಲಕ ಬರುವ ಆದಾಯವನ್ನು ಜೀವನ ನಿರ್ವಹಣೆಗೆ ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ಕಾರ್ಮಿಕರನ್ನು ಮಲ ಹೊರುವ ಪದ್ಧತಿಗೆ ಬಲವಂತವಾಗಿಯೂ ತಳ್ಳಲಾಗುತ್ತಿದೆ. ಜೊತೆಗೆ ವಿವಿಧ ಆಮಿಷಗಳನ್ನು ಒಡ್ಡುವ ಮೂಲಕ ಮಲ ಹೊರುವ ಪದ್ಧತಿಯ ಕಡೆಗೆ ತಳ್ಳಲಾಗುತ್ತಿದೆ.

ಇತಿಹಾಸ
ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹರಪ್ಪ-ಮೊಹೆಂಜೋದಾರೋ ನಾಗರೀಕತೆಯ ಕಾಲದಿಂದಲೂ ಮಲ ಹೊರುವ ಪದ್ಧತಿ ಅಸ್ತಿತ್ವದಲ್ಲಿ ಇರುವುದು ಗಮನಕ್ಕೆ ಬರುತ್ತದೆ. ತದನಂತರದಲ್ಲಿ ಇದೊಂದು ಜಾತಿ ಆಧಾರಿತ ಕಸುಬಾಗಿ ಬೆಳೆದು ಬಂದಿದೆ. ಮಧ್ಯ ಕಾಲೀನ ಭಾರತದಲ್ಲಿ ಮಲ ಹೊರಲು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನೇ ಬಳಕೆ ಮಾಡಲಾಗುತ್ತಿತ್ತು. ಅಲ್ಲದೇ ವ್ಯಾಪಕವಾಗಿ ಜಾರಿಯಲ್ಲಿತ್ತು ಎನ್ನುವುದನ್ನು ಆ ಸಂದ‘ರ್ಗಳ ಸಾಹಿತ್ಯ ಕೃತಿಗಳು ಪುಷ್ಠಿ ನೀಡುತ್ತವೆ. ಬೌದ್ಧರ ಕಾಲದಲ್ಲಿ ಹಾಗೂ ವೌರ್ಯರ ಕಾಲದಲ್ಲಿಯೂ ಮಲ ಹೊರುವ ಪದ್ಧತಿ ಜಾರಿಯಲ್ಲಿತ್ತು. 1556ರಲ್ಲಿ ಜುನಾಘಡದಲ್ಲಿ 100ಕ್ಕೂ ಅಕ ಮಲಹೊರುವ ಕುಟುಂಬಗಳಿದ್ದವು ಎಂಬುದು ದಾಖಲೆಗಳಲ್ಲಿ ಉಲ್ಲೇಖಗೊಂಡಿದೆ. ಮೊಘಲರು ಹಾಗೂ ರಜಪೂತರ ಕಾಲದಲ್ಲಿ ಮಲ ಹೊರುವವರನ್ನು ಭಂಗಿಗಳು ಎಂದು ಕರೆದ ಉಲ್ಲೇಖ ಕೂಡ ಇದೆ. ಬ್ರಿಟೀಷ್ ಆಡಳಿತದ ಸಂದರ್ಭದಲ್ಲಿ ನಗರ ಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಲ ಹೊರುವ ಕಾರ್ಮಿಕರನ್ನು ನೇಮಕ ಮಾಡಿಕೊಂಡ ನಿದರ್ಶನಗಳಿವೆ.
ಭಾರತದಲ್ಲಿ ಮಾತ್ರವಲ್ಲ ಯೂರೋಪ್ ರಾಷ್ಟ್ರಗಳು ಮಲಹೊರುವ ಪದ್ಧತಿ ಇದೆ. ಮಲಹೊರುವ ಪ್ರತ್ಯೇಕ ಜಾತಿಯೂ ಕೂಡ ಯೂರೋಪ್ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದೆ. ಯೂರೋಪ್ ರಾಷ್ಟ್ರಗಳಲ್ಲಿ ಮಲ ಹೊರುವವರನ್ನು ನೈಟ್ ಸಾಯಿಲ್ ಕಲೆಕ್ಟರ್ಸ್‌ ಎಂದು ಕರೆಯಲಾಗುತ್ತದೆ. ಅಥವಾ ನೈಟ್‌ಮೆನ್ಸ್ ಹಾಗೂ ಗಾಂಗ್ ಫಾರ್ಮರ್ಸ್ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ 20ನೇ ಶತಮಾನದ ಉತ್ತರಾ‘ರ್ದ ವರೆಗೂ ಮಲಹೊರುವ ಪದ್ಧತಿ ಜೀವಂತ ಇತ್ತುಘಿ. ಆಸ್ಟ್ರೇಲಿಯಾದಲ್ಲಿ ಮಲ ಹೊರುವವರನ್ನು ಡನ್ನೀ ಮ್ಯಾನ್ಸ್ ಎಂದೂ ಮಲ ಹೊರುವ ಪದ್ಧತಿಗೆ ಡನ್ನೀಸ್ ಎಂದೂ ಕರೆಯಲಾಗುತ್ತಿತ್ತುಘಿ. ಹೈಟಿ ಗಣರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇಂದಿಗೂ ಜಾರಿಯಲ್ಲಿದ್ದು ಇವರನ್ನು ಬೈಹೋಕು ಎಂದು ಕರೆಯಲಾಗುತ್ತದೆ.

ಮಲ ಹೊರುವ ಪದ್ಧತಿ ನಿಷೇ
ಭಾರತದಲ್ಲಿ ಮಲ ಹೊರುವ ಪದ್ಧತಿಯನ್ನು ನಿಷೇಸಲಾಗಿದೆ. 1950ರ ದಶಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಜಿ. ಎಸ್. ಲಕ್ಷ್ಮಣ ಅಯ್ಯರ್ ಅವರು ಗೋಬಿಚೆಟ್ಟಿಪಾಳ್ಯಂ ಮುನ್ಸಿಪಾಲ್ಟಿಯಲ್ಲಿ ಮಲಹೊರುವ ಪದ್ಧತಿಯನ್ನು ಮೊಟ್ಟ ಮೊದಲ ಬಾರಿಗೆ ನಿಷೇ‘ ಮಾಡಿದರು. ನಂತರ ವಿವಿಧ ನಗರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಮಲ ಹೊರುವ ಪದ್ಧತಿ ನಿಷೇಸಲಾಯಿತು.

1993ರಲ್ಲಿ ಪ್ರತ್ಯೇಕ ಕಾಯ್ದೆ :
1993ರಲ್ಲಿ ಮಲ ಹೊರುವುದನ್ನು ನಿಷೇಸುವ ಸಲುವಾಗಿಯೇ ದಿ ಎಂಪ್ಲಾಯ್‌ಮೆಂಟ್ ಆ್ ಮ್ಯಾನುವಲ್ ಸ್ಕೇವೇಜಿಂಗ್ ಆ್ಯಂಡ್ ಕನ್ಸ್‌ಟ್ರಕ್ಷನ್ ಆ್ ಡ್ರೈ ಲ್ಯಾಟ್ರೀನ್ಸ್ (ನಿಷೇ‘) ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಅನ್ವಯ ಮಲ ಹೊರುವ ಪದ್ಧತಿ ಶಿಕ್ಷಾರ್ಹ ಎಂದು ಘೋಷಿಸಲಾಯಿತಲ್ಲದೇ ದೇಶಾದ್ಯಂತ ಮಲ ಹೊರುವ ಪದ್ಧತಿಯನ್ನು ನಿಷೇಸಲಾಯಿತು. ಪ್ರ‘ಾನ ಮಂತ್ರಿ ನರಸಿಂಹರಾವ್ ಸರ್ಕಾರದ ಆಡಳಿತಾವಯಲ್ಲಿ ಈ ಕಾನೂನನ್ನು ಜಾರಿಗೆ ತರಲಾಯಿತು. ಈ ಕಾನೂನಿನ ಪ್ರಕಾರ ಒಣಗಿದ ಶೌಚಾಲಯ ಟ್ಯಾಂಕ್ ಸ್ವಚ್ಛಗೊಳಿಸಲು ನೇರವಾಗಿ ಅಥವಾ ಪರೋಕ್ಷವಾಗಿ ನೇಮಕ ಮಾಡಿಕೊಂಡರೆ ಅಥವಾ ಬಳಕೆ ಮಾಡಿಕೊಂಡರೆ 1 ವರ್ಷ ಜೈಲು ಶಿಕ್ಷೆ ಹಾಗೂ 2000 ರೂಪಾಯಿ ದಂಡ ವಿಸುವುದು ಹಾಗೂ ಮಲ ಹೊರುವುದಕ್ಕೆ ಒತ್ತಾಯ ಮಾಡಿದರೆ ಅಥವಾ ಬಲವಂತವಾಗಿ ಮಲ ಹೊರಿಸಿದರೆ ಕನಿಷ್ಟ 20 ವರ್ಷ ಜೈಲುಶಿಕ್ಷೆಯ ವಿಧಿಸಲಾಗುತ್ತದೆ.

2013ರ ಎಂ. ಎಸ್ ಕಾಯ್ದೆ (ದಿ ಪ್ರಾಹಿಬಿಷನ್ ಆ್ ಎಂಪ್ಲಾಯ್‌ಮೆಂಟ್ ಆಸ್ ಮ್ಯಾನ್ಯುಯಲ್ ಸ್ಕೇವೇಜರ್ಸ್ ಆ್ಯಂಡ್ ದೇರ್ ರಿಹ್ಯಾಬಿಲಿಯೇಶನ್ ಆಕ್ಟ್ )
2013ರ ಸೆಪ್ಟೆಂಬರ್ ತಿಂಗಳಿನಲಲ್ಲಿ ಮಲ ಹೊರುವ ಪದ್ಧತಿ ನಿಷೇ‘ ಹಾಗೂ ಮಲ ಹೊರುವವರಿಗೆ ಪುನರ್ವಸತಿ ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಪ್ರಕಾರ ಮಲ ಹೊರುವುದನ್ನು ದೇಶಾದ್ಯಂತ ನಿಷೇಸುವುದಲ್ಲದೇ, ಮಲ ಹೊರುವವರಿಗೆ ವಸತಿ, ಜಮೀನು ಸೇರಿದಂತೆ ಸಕಲ ರೀತಿಯ ಸರ್ಕಾರಿ ಸೌಲ‘್ಯಗಳನ್ನು ಒದಗಿಸುವ ನಿರ್ಣಯ ಕೈಗೊಳ್ಳಲಾಯಿತು. ಸುಪ್ರಿಂ ಕೋರ್ಟ್ ಕೂಡ ಮಲ ಹೊರುವ ಪದ್ಧತಿಯನ್ನು ನಿಷೇಸಿದ್ದಲ್ಲದೇ ಶಿಕ್ಷಾರ್ಹ ಎಂದು ಘೊಷಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಲ ಹೊರುವ ಪದ್ಧತಿಯನ್ನು ತಡೆಯುವ ನಿಟ್ಟಿನಲ್ಲಿ ಕಾಯ್ದೆಯನ್ನು ರೂಪಿಸಿತು. ಪ್ರಸ್ತುತ ಈ ಕಾಯ್ದೆಯನ್ನು ಉಲ್ಲಂಘಿಸಿದರೆ 2 ಲಕ್ಷ ರೂಪಾಯಿಗಳಷ್ಟು ದಂಡ ಹಾಗೂ 6 ತಿಂಗಳ ವರೆಗೆ ಜಾಮೀನುರಹಿತ ಶಿಕ್ಷೆಯನ್ನು ವಿಸಲಾಗುತ್ತದೆ.

ಪ್ರಸ್ತುತ ಪರಿಸ್ಥಿತಿ
ವಿವಿ‘ ಖಾಸಗಿ ಸಂಸ್ಥೆಗಳು ನಡೆಸಿದ ಅ‘್ಯಯನದ ಪ್ರಕಾರ ಭಾರತದಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ. ಭಾರತದ ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತ್ರಿಪುರ, ಗುಜರಾತ್ ಈ ಮುಂತಾದ ರಾಜ್ಯಗಳಲ್ಲಿ ಮಲ ಹೊರುವ ಪದ್ಧತಿ ಹೆಚ್ಚಿನ ಸಂಖ್ಯೆಯಲ್ಲಿದೆ. ದಾಖಲೆಯೊಂದರ ಪ್ರಕಾರ ದೇಶದ 9 ರಾಜ್ಯಗಳಲ್ಲಿ ಮಲ ಹೊರುವ ಪದ್ಧತಿ ಜೀವಂತವಾಗಿದೆ. ಅದರಲ್ಲಿ ಕರ್ನಾಟಕವೂ ಒಂದು ಎನ್ನುವ ಕುಖ್ಯಾತಿಯಿದೆ. 2011ರ ಜನಗಣತಿಯ ಪ್ರಕಾರ ದೇಶದಾದ್ಯಂತ 7,94,000 ಪ್ರಕರಣಗಳು ದಾಖಲಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 13 ಸಾವಿರಕ್ಕೂ ಅಕ ಮಲಹೊರುವವರನ್ನು ಗುರುತಿಸಲಾಗಿದೆ. ಅಲ್ಲದೇ 2013ರಲ್ಲಿ ಸಾಯಿ ಕರ್ಮಚಾರಿ ಆಯೋಹವು ಮನೆ ಮನೆಗೂ ತೆರಳಿ ಮಲ ಹೊರುವ ಕಾರ್ಯದಲ್ಲಿ ತೊಡಗಿರುವವರನ್ನು ಗುರುತಿಸಿದ್ದಾರೆ. ಆ ಪ್ರಕಾರವಾಗಿ ಬೆಂಗಳೂರಿನಲ್ಲಿ ಇಂದಿಗೂ 202 ಜನರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ಗ್ರಾಮೀಣ ‘ಾಗಗಳಲ್ಲಿ 470 ಹಾಗೂ ನಗರ ಪ್ರದೇಶಗಳಲ್ಲಿ 302 ಜನರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯದ ವಿವಿ‘ ಜಿಲ್ಲೆಗಳಲ್ಲಿ ಮಲ ಹೊರುವ ಪದ್ಧತಿ ಆಗಾಗ ಬೆಳಕಿಗೆ ಬರುತ್ತಲೇ ಇದೆ. 6 ತಿಂಗಳ ಹಿಂದೆ ಮೈಸೂರಿನಲ್ಲಿ ಗ್ರಾಘಿ.ಪಂ ಅ‘್ಯಕ್ಷೆಯೋರ್ವರು ಬಲವಂತವಾಗಿ ಕಾರ್ಮಿಕನೋರ್ವನನ್ನು ಮಲದ ಗುಂಡಿಗೆ ಇಳಿಸಿದ್ದು ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತುಘಿ.

ರಾಜ್ಯದಲ್ಲಿ ಮ್ಯಾನ್‌ಹೋಲ್‌ನಲ್ಲಿ ಸತ್ತವರು
2008ರ ನವೆಂಬರ್ 14ರಂದು ಯಲಹಂಕ ನ್ಯೂಟೌನ್‌ನಲ್ಲಿ ಮೃತಪಟ್ಟವರ ಸಂಕ್ಯೆ 3
2009ರ ಮೇ 9ರಂದು ಪೀಣ್ಯ 2ನೇ ಹಂತದಲ್ಲಿ ಮೃತಪಟ್ಟವರ ಸಂಕ್ಯೆ 3
2012ರ ಜುಲೈ 14ರಂದು ಅರಕೆರೆಯಲ್ಲಿ ಮೃತಪಟ್ಟವರ ಸಂಕ್ಯೆ 2
2014ರ ಜನವರಿ 18ರಂದು ಕೆ. ಪಿ. ಅಗ್ರಹಾರದಲ್ಲಿ ಮೃತಪಟ್ಟವರ ಸಂಖ್ಯೆ 2
2014ರ ಆಗಸ್ಟ್ 30ರಂದು ಮಹದೇವಪುರದಲ್ಲಿ ಮೃತಪಟ್ಟವರ ಸಂಖ್ಯೆ 1
2014ರ ಸೆಪ್ಟೆಂಬರ್ 24ರಂದು ನಾಗವಾರದಲ್ಲಿ ಮೃತಪಟ್ಟವರ ಸಂಖ್ಯೆ 2
2015ರ ಜುಲೈ 15ರಂದು ಯಲಹಂಕದಲ್ಲಿ ಸತ್ತವರ ಸಂಕ್ಯೆ 2
2015ರ ಆಗಸ್ಟ್ 18ರಂದು ಜಯಮಹಲ್‌ನಲ್ಲಿ ಸತ್ತವರ ಸಂಕ್ಯೆ 2
2015ರ ಆಗಸ್ಟ್ 19ರಂದು ಗೋರಗುಂಟೆ ಪಾಳ್ಯದಲ್ಲಿ ಸತ್ತವರ ಸಂಕ್ಯೆ 2
2016ರ ಮಾರ್ಚ್ 7ರಂದು ಕಗ್ಗದಾಸಪುರದಲ್ಲಿ ಸತ್ತವರ ಸಂಕ್ಯೆ 3
2008ರಿಂದ 10 ವರ್ಷಗಳ ಅವಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮ್ಯಾನ್‌ಹೋಲ್ ಮತ್ತು ಎಸ್‌ಟಿಪಿ ದುರಸ್ತಿ ವೇಳೆ ಒಟ್ಟೂ 31 ಜನರು ಮೃತಪಟ್ಟಿದ್ದಾರೆ.

ನಿಯಮಗಳು
ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳ ಒಳಚರಂಡಿ ಸುರಕ್ಷತಾ ಕೈಪಿಡಿ ಕರಡು 2012ರ ನಿಯಮಗಳ ಪ್ರಕಾರ ಪರ್ಯಾಯ ಮಾರ್ಗಗಳಿಲ್ಲದ ಸಂದ‘ರ್ದಲ್ಲಿ ಅಗತ್ಯದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಅಥವಾ ಎಸ್‌ಟಿಪಿಗೆ ಇಳಿಸಬಹುದು. ಆದರೆ ಒಳಗೆ ಇಳಿದ ಸಂದ‘ರ್ಗಳಲ್ಲಿ ಅವರಿಗೆ ಆಮ್ಲಜನಕ ಪೂರೈಸುವುದು ಸೇರಿದಂತೆ ಅಗತ್ಯ ಸುರಕ್ಷತೆಗಳನ್ನು ಒದಗಿಸಬೇಕು.
ಮ್ಯಾನ್‌ಹೋಲ್‌ನಲ್ಲಿ ಹಾಗೂ ಎಸ್‌ಟಿಪಿಗಳಲ್ಲಿ ಮೀಥೇನ್, ಕಾರ್ಬನ್ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲಗಳಿರುತ್ತವೆ. ಹೀಗಾಗಿ ಇಳಿಯುವುದಕ್ಕೂ ಮೊದಲು ಕನಿಷ್ಠ ಒಂದು ತಾಸುಗಳ ಕಾಲ ಮುಚ್ಚಳವನ್ನು ತೆರೆದಿಡಬೇಕು. ಇಳಿಯುವುದಕ್ಕೂ ಮೊದಲು ಮೈಗೆ ಕೊಬ್ಬರಿ ಎಣ್ಣೆ ಸವರಿಕೊಂಡು, ಮಾಸ್ಕ್‌, ಕೈಗವಸು ಹಾಗೂ ಬೂಟು ಧರಿಸಿ ಗುಂಡಿಗೆ ಇಳಿಯಬೇಕು.
ನಂತರ ಪ್ರತಿ ಮೂರು ನಿಮಿಷಕ್ಕೊಮ್ಮೆ ಸಹಾಯಕರು ಅನಿಲ ಪರೀಕ್ಷೆ ಮಾಡುತ್ತಿರಬೇಕು. ಗುಂಡಿಯೊಳಗಿನ ವಿಷ ಅನಿಲದಿಂದ ರಕ್ಷಣೆ ನೀಡಲು ಹೊರಗಿನ ಗಾಳಿಯನ್ನು ಬ್ಲೋವರ್ಸ್ ಮೂಲಕ ಒಳಗೆ ಹಾಯಿಸಬೇಕು. ಜೊತೆಗೆ ಗುಂಡಿಯೊಳಕ್ಕೆ ಇಳಿದ ಕಾರ್ಮಿಕರ ಜೊತೆ ಸದಾ ಮಾತನಾಡುತ್ತಿರಬೇಕು.

ಮಲ ಹೊರುವ ಪದ್ಧತಿ ವಿರುದ್ಧ ಜಾಗೃತಿ
ಬೆಜವಾಡ ವಿಲ್ಸನ್‌ಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ
ಕೆಜಿಎ್ನ ಬೆಜವಾಡ ವಿಲ್ಸನ್ ಅವರು ಮಲ ಹೊರುವ ಪದ್ಧತಿಯ ವಿರುದ್ಧ ಜನಜಾಗೃತಿ ಕಾರ್ಯಗಳನ್ನು ಕೈಗೊಂಡವರು. ರಾಷ್ಟ್ರೀಯ ಸಾಯಿ ಕರ್ಮಚಾರಿ ಆಂದೋಲನದ ಸಂಚಾಲಕರು. 1986ರಿಂದ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿಯ ವಿರುದ್ಧ ಮಲ ಹೊರುವ ಕಾರ್ಮಿಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳುತ್ತ ಬಂದಿದ್ದಾರೆ. ಕೋಲಾರದ ಕೆಜಿಎ್ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಆಂದೋಲನ ಕೈಗೊಂಡರು. ಮಲ ಹೊರುವ ಪದ್ಧತಿ ನಿಷೇಸುವಂತೆ ರಾಷ್ಟ್ರಪತಿ, ಪ್ರ‘ಾನ ಮಂತ್ರಿ ಹಾಗೂ ಇತರ ಜನಪ್ರತಿನಿಗಳಿಗೆ ಪತ್ರ ಚಳುವಳಿ ಮೂಲಕ ತ್ತಡ ಹೇರಿದರು. ಇವರಿಗೆ 2017ರ ಜುಲೈ 27ರಂದು ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿದೆ.

ಆಗಬೇಕಿದೆ ಕಟ್ಟುನಿಟ್ಟಿನ ಕ್ರಮ :
ಮಲ ಹೊರುವ ಪದ್ಧತಿ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ನಿಷೇ‘ವಾಗಬೇಕಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಈ ಪದ್ಧತಿಯಿಂದಾಗಿ ಕಾರ್ಮಿಕರು ಸಾಯುತ್ತಿದ್ದರೂ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಮಲ ಹೊರುವವರಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಮಲ ಹೊರಲು ಒತ್ತಾಯಿಸುವವರ ಹಾಗೂ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಾಗ ಮಾತ್ರ ಮಲ ಹೊರುವ ಪದ್ಧತಿಯನ್ನು ಅಂತ್ಯಗೊಳಿಸಬಹುದಾಗಿದೆ.

Thursday, January 4, 2018

ಕೊನೆ ಗೌಡ ಬರ್ತ್ನೋ ಇಲ್ಯೋ


ಅಡಿಕೆಯೆಲ್ಲ ಹಣ್ಣಾತು
ಗೋಟಾಗಿ ಉದುರಿ ಹೋತು
ಇವತ್ತಾದ್ರೂ
ಕೊನೆ ಗೌಡ ಬರ್ತ್ನೋ ಇಲ್ಯೋ |

ಮುಂಗಡ ದುಡ್ ಕೊಟ್ಟಿದ್ದಿದ್ದು
ಅಡಕೆ ಹೆಕ್ಕವ್ ಬಂದದ್ದಿದ್ದು
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಕೊನೆ ಹಿಡಿಯಂವ್ ತಯಾರಿದ್ದ
ಅಡಿಗೆ ಮಾಡವ್ವೂ ಗಟ್ಯಾಗಿದ್ದ
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಎಂಟು ನೂರು ರೂಪಾಯ್ ಕೊಡಂವ್ ಇದ್ದಿ
ಮೆಹರುಬಾನಿಕೆ ಮಾಡಂವ್ ಇದ್ದಿ
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಎಲ್ಲಾ ಅಡಿಕೆ ಉದುರ್ತಾ ಇದ್ದು
ಮಂಡಗಾದಿಗೆಲ್ ತೇಲ್ತಾ ಇದ್ದು
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

ಅಡಿಕೆಗೆ ರೇಟು ಚೊಲೋ ಬಂಜು
ಕೆಜಿಗೆ ಸಾವಿರ ದಾಟಿ ಹೋಜು
ಇವತ್ತಾದ್ರೂ
ಕೊನೆಗೌಡ ಬರ್ತ್ನೋ ಇಲ್ಯೋ|

-------------

(ಈ ಕವಿತೆ ಬರೆದಿದ್ದು ಜ.4, 2018ರಂದು, ಬೆಂಗಳೂರಿನಲ್ಲಿ)



Tuesday, January 2, 2018

ಕೆಚ್ಚಲು ಬಾವಿಗೆ ಇಲ್ಲಿದೆ ಮದ್ದು

       ಕೆಚ್ಚಲು ಬಾವು ಅಥವಾ ರಾಸುಗಳ ಕೆಚ್ಚಲಿನಲ್ಲಿ ಗಡ್ಡೆಗಳು ಉಂಟಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ.  ಎಲ್ಲಾ ಋತುಗಳ ಪ್ರಾರಂಭದಲ್ಲಿಯೂ ಕಾಣಿಸಿಕೊಳ್ಳುವ ಕೆಚ್ಚಲುಬಾವು ಹಸುಗಳು, ಎಮ್ಮೆಗಳನ್ನು ಬಾಧಿಸುತ್ತವೆ. ಇಂತಹ ಕೆಚ್ಚಲು ಬಾವಿಗೆ ಪರಿಣಾಮಕಾರಿಯಾಗಿ ಔಷಧಿ ನೀಡುವವರೊಬ್ಬರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿದ್ದಾರೆ. ನಾಟಿ ಔಷಧಿ ಮೂಲಕ ಕೆಚ್ಚಲು ಬಾವನ್ನು ಸಂಪೂರ್ಣವಾಗಿ ಗುಣಪಡಿಸುತ್ತಾರೆ.

ಏನಿದು ಕೆಚ್ಚಲು ಬಾವು ?
ವಾತಾವರಣದ ವೈಪರಿತ್ಯ ಹಾಗೂ ಆಹಾರದ ಬದಲಾವಣೆಯಿಂದಾಗಿ ಸಾಮಾನ್ಯವಾಗಿ ಕೆಚ್ಚಲುಬಾವು ಉಂಟಾಗುತ್ತದೆ. ಬ್ಯಾಕ್ಟೀರಿಯಾದ ಸೋಂಕಿನಿಂದಲೂ ಇದು ಉಂಟಾಗುತ್ತದೆ ಎನ್ನಲಾಗುತ್ತದೆ. ಹಾಲು ನೀಡುವ ರಾಸುಗಳ ಕೆಚ್ಚಲಿನಲ್ಲಿ ಬಾವು ಉಂಟಾಗುತ್ತದೆ. ಒಂದೆರಡು ದಿನಗಳಲ್ಲಿಯೇ ಇದು ಗಡ್ಡೆಗಟ್ಟುತ್ತದೆ. ತೀರಾ ವಿಳಂಬ ಮಾಡಿದರೆ ಕೆಲವೊಮ್ಮೆ ಕೆಚ್ಚಲುಗಳು ಕೆಂಪು ಬಣ್ಣಕ್ಕೆ ತಿರುಗುವುದೂ ಇದೆ. ಸಾಮಾನ್ಯವಾಗಿ ಕೆಚ್ಚಲುಬಾವಿಗೆ ಪರಿಣಾಮಕಾರಿಯಾಗಿ ಮದ್ದು ಮಾಡದೇ ಇದ್ದಲ್ಲಿ ರಾಸುಗಳು ಹಾಲು ಕೊಡುವುದನ್ನೇ ನಿಲ್ಲಿಸಬಹುದು.
ಇಂತಹ ಕೆಚ್ಚಲುಬಾವಿಗೆ ಆಂಗ್ಲ ವೈದ್ಯ ಪದ್ಧತಿಯಲ್ಲಿ ಕೆಲವು ಮಾತ್ರೆಗಳೂ ಇವೆ. ಪಶುವೈದ್ಯರು ಮೊಲೆಗಳ ರಂಧ್ರಕ್ಕೆ ಟ್ಯೂಬನ್ನು ಏರಿಸಿ ಕೆಚ್ಚಲು ಬಾವಿನಿಂದ ಹಾಲು ನಿಲ್ಲುವ ಸಮಸ್ಯೆಗೆ ಪರಿಹಾರ ಮಾಡುತ್ತಾರೆ. ಆದರೆ ಈ ಪದ್ಧತಿ ಕೂಡ ಪರಿಣಾಮಕಾರಿಯಲ್ಲ ಎನ್ನುವ ಭಾವನೆಗಳಿವೆ. ಅಲ್ಲದೇ ಟ್ಯೂಬ್ ಏರಿಸಿದ ನಂತರದಲ್ಲಿ ರಾಸುಗಳ ಕೆಚ್ಚಲಿನಿಂದ ಹಾಲು ಸುರಿಯುವುದು ನಿಲ್ಲುವುದೇ ಇಲ್ಲ ಎಂದೋ ಅಥವಾ ಮೊಲೆಗಳ ರಂಧ್ರ ದೊಡ್ಡದಾಗಿ ಸಮಸ್ಯೆಗಳು ಉಂಟಾದ ಸಂದರ್ಭಗಳಿವೆ.
ಹೋಮಿಯೋಪತಿ ವೈದ್ಯಪದ್ಧತಿಯಲ್ಲಿಯೂ ಕೂಡ ಕೆಚ್ಚಲುಬಾವಿಗೆ ಔಷಧ ಇದೆಯಾದರೂ ಕೆಚ್ಚಲಿನಲ್ಲಿ ಉಂಟಾಗಿರುವ ಗಡ್ಡೆಗಳು ಕರಗುವುದೇ ಇಲ್ಲ ಎನ್ನುವ ಮಾತುಗಳು ಹಲವರಿಂದ ಕೇಳಿ ಬಂದಿವೆ. ಕೆಚ್ಚಲುಬಾವಿಗೆ ಇತ್ತೀಚಿನ ದಿನಗಳಲ್ಲಿ ಔಷಧಿ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಸಂಪೂರ್ಣವಾಗಿ ಅವು ಫಲಪ್ರದವಾಗಿಲ್ಲ.

ಪರಿಣಾಮಕಾರಿ ಔಷಧಿ ನೀಡುವ ಸುಬ್ಬಣ್ಣ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ದಂಟಕಲ್ಲಿನ ಸುಬ್ರಾಯ ಹೆಗಡೆ ಅವರು ಕೆಚ್ಚಲು ಬಾವಿಗೆ ಪರಿಣಾಮಕಾರಿಯಾದ ಔಷಧಿಯನ್ನು ನೀಡುತ್ತಾರೆ. ನಾಟಿ ಪದ್ಧತಿಯ ಮೂಲಕ ಔಷಧಿಯನ್ನು ನೀಡುವ ಇವರು ಅದಕ್ಕೆ ಪ್ರತಿಯಾಗಿ ಕೇವಲ ಒಂದು ಅಥವಾ ಎರಡು ತೆಂಗಿನಕಾಯಿಗಳನ್ನು ಪ್ರತಿಫಲದ ರೂಪದಲ್ಲಿ ಪಡೆಯುತ್ತಾರೆ. ಸುಬ್ರಾಯ ಹೆಗಡೆ ಅವರು ನೀಡುವ ಔಷಧದಿಂದ ಇದುವರೆಗೂ ಕೆಚ್ಚಲು ಬಾವು ಕಡಿಮೆಯಾಗಿಲ್ಲ ಎನ್ನುವ ಆರೋಪಗಳು ಬಂದೇ ಇಲ್ಲ. ಸಹಸ್ರ ಸಹಸ್ರ ಸಂಖ್ಯೆಯ ಜನರು ಬಂದು ತಮ್ಮ ಮನೆಯ ರಾಸುಗಳಿಗೆ ಔಷಧಿ ತೆಗೆದುಕೊಂಡು ಹೋಗಿದ್ದಾರೆ. ಕೆಚ್ಚಲು ಬಾವು ಸಮಸ್ಯೆ ಪರಿಹಾರಕ್ಕಾಗಿ ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದವರೂ ಕೂಡ ದಂಟಕಲ್ಲಿಗೆ ಆಗಮಿಸಿ ಔಷಧಿ ಪಡೆದು ಹೋಗಿದ್ದಾರೆ. ಎಲ್ಲ ವೈದ್ಯ ಪದ್ಧತಿ ಪ್ರಯೋಗ ಮಾಡಿಯೂ, ಇನ್ನೇನೂ ಸಾಧ್ಯವಿಲ್ಲ ಎನ್ನುವಂತವರು ಕೂಡ ಬಂದು ಔಷಧಿ ಪಡೆದು ಹೋಗಿದ್ದಾರೆ. ಈ ಔಷಧಿಯಿಂದ ಕೆಚ್ಚಲು ಬಾವು ಸಂಪೂರ್ಣವಾಗಿ ಕಡಿಮೆಯಾದಾಗ ಮತ್ತೊಮ್ಮೆ ಬಂದು ಸಂತಸವನ್ನು ಹಂಚಿಕೊಂಡು ಹೋಗಿದ್ದಾರೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಈ ಮುಂತಾದ ತಾಲೂಕುಗಳ ಜನರು ಇಂದಿಗೂ ಸುಬ್ರಾಯ ಹೆಗಡೆಯವರ ಬಳಿ ಬರುತ್ತಾರೆ. ಶಿರಸಿ, ಸಿದ್ದಾಪುರ ಸೇರಿದಂತೆ ಕೆಲವು ಕಡೆಗಳ ಪಶು ವೈದ್ಯರೂ ಕೂಡ ಸುಬ್ರಾಯ ಹೆಗಡೆ ಅವರು ನೀಡುವ ಔಷಧಿಯ ಕುರಿತು ಪಶುಪಾಲಕರಿಗೆ ತಿಳಿ ಹೇಳಿ ಔಷಧಿಗಾಗಿ ಕಳುಹಿಸಿದ ನಿದರ್ಶನಗಳಿವೆ. ಇತ್ತೀಚೆಗಷ್ಟೇ ಹೆಸರಾಂತ ವೈದ್ಯರೋರ್ವರು ಔಷಧಿಯ ಬಗ್ಗೆ ಕೇಳಿ, ದಂಟಕಲ್ಲಿಗೆ ಆಗಮಿಸಿ, ವನಸ್ಪತಿ ಸೊಪ್ಪುಗಳನ್ನು ಪಡೆದು, ಅಧ್ಯಯನಕ್ಕಾಗಿ ತೆರಳಿದ್ದಾರೆ ಎಂಬುದು ಸುಬ್ರಾಯ ಹೆಗಡೆ ಅವರ ಮಾತು.
ಸುಬ್ರಾಯ ಹೆಗಡೆಯವರು ವನಸ್ಪತಿ ಔಷಧಿಗೆ ಯಾವುದೇ ಛಾರ್ಜು ಮಾಡುವುದಿಲ್ಲ. ಅಲ್ಲದೇ ಇದು ಯಾವುದೇ ಅಡ್ಡ ಪರಿಣಾಮಗಳನ್ನೂ ಬೀರುವುದಿಲ್ಲ. ಹಾಲೂ ಕೂಡ ಅಲ್ಪ ಪ್ರಮಾಣದಲ್ಲಿ ಹೆಚ್ಚುತ್ತದೆ. ಕೆಚ್ಚಲು ಬಾವಿನ ಗಡ್ಡೆಗಳು ಸಂಪೂರ್ಣ ಕರಗುವುದರ ಜೊತೆಗೆ ಮೊಲೆಗಳು ಹಾಳಾಗುವುದಿಲ್ಲ ಎನ್ನುವುದು ಔಷಧಿ ಬಳಕೆ ಮಾಡಿದವರ ಅಂಬೋಣ.

ಸುಬ್ರಾಯ ಹೆಗಡೆಯವರನ್ನು 08389-295430, 9901343504 ಈ ದೂರವಾಣಿಯ ಮೂಲಕ ಸಂಪರ್ಕಿಸಬಹುದಾಗಿದೆ. ಇಲ್ಲವಾದಲ್ಲಿ ಶಿರಸಿಯಿಂದ ಸಿದ್ದಾಪುರ ರಸ್ತೆಯಲ್ಲಿ 14 ಕಿಮಿ ದೂರವಿರುವ ದಂಟಕಲ್ ಗೆ ತೆರಳಿ ಖುದ್ದಾಗಿ ಭೇಟಿ ಮಾಡಬಹುದಾಗಿದೆ. ವಾರದಲ್ಲಿ ಯಾವುದೇ ದಿನ ಹಾಗೂ ದಿನದ ಯಾವುದೇ ಸಮಯದಲ್ಲಿಯೂ ವನಸ್ಪತಿಗಳನ್ನು ಪಡೆದುಕೊಳ್ಳಬಹುದು. (ಭೇಟಿ ಮಾಡುವವರು ಮೊದಲೇ ದೂರವಾಣಿಯ ಮೂಲಕ ತಿಳಿಸಿದ್ದರೆ ಉತ್ತಮ.)

ಭೇಟಿಗೆ ಹೋಗುವ ಬಗೆ : ಶಿರಸಿ-ಸಿದ್ದಾಪುರ ಮಾರ್ಗದಲ್ಲಿ 12 ಕಿಮಿ ಪ್ರಯಾಣ ಮಾಡಿ-ಅಡಕಳ್ಳಿ ಕ್ರಾಸ್ ಬಳಿ ಬಲಕ್ಕೆ ತಿರುಗಿ 2 ಕಿಮಿ ಪ್ರಯಾಣಿಸಿ ಅಡಕಳ್ಳಿ ಶಾಲೆಯಿಂದ ಎಡಕ್ಕೆ ಹೊರಳಿ ದಂಟಕಲ್ ತಲುಪಬಹುದು. ಸಿದ್ದಾಪುರದಿಂದ ಬರುವವರು ಕಾನಸೂರಿನ ನಂತರ ಅಡಕಳ್ಳಿ ಕ್ರಾಸ್ ತಲುಪಿ ಅಲ್ಲಿಂದ ಸೀದಾ ಬರಬಹುದು.

ಸಿನಿ ತಾರಾಜಕೀಯ

ಚಿತ್ರನಟರುಗಳು ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸಿದ ನಿದರ್ಶನಗಳು ಹಲವಿದೆ. ಭಾರತದಲ್ಲಿ ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಲನಚಿತ್ರ ನಟರುಗಳೇ ಹೊಸ ಪಕ್ಷವನ್ನು ನಕಟ್ಟಿ ಅಕಾರದ ಚುಕ್ಕಾಣಿ ಹಿಡಿದು, ಮುಖ್ಯಮಂತ್ರಿಯೂ ಆಗಿದ್ದಾರೆ. ಇನ್ನೂ ಹಲವು ನಟರುಗಳು ಪಕ್ಷ ಕಟ್ಟಿದರೂ ಆರಕ್ಕೇರದೇ, ಮೂರಕ್ಕಿಳಿಯದೇ ತೊಳಲಾಡಿದ ಸಂದರ್ಭಗಳೂ ಇದೆ. ಕೆಲವು ಚಿತ್ರನಟರುಗಳು, ನಟಿಯರುಗಳು ಯಾವುದಾದರೂ ಒಂದು ರಾಜಕೀಯ ಪಕ್ಷವನ್ನು ಸೇರಿ, ಶಾಸಕರಾಗಿಯೋ, ವಿಧಾನ ಪರಿಷತ್ ಸದಸ್ಯರಾಗಿಯೋ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ಕೆಲವರು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ತಮಿಳುನಾಡು, ಕರ್ನಾಟಕ, ಆಂದ್ರಪ್ರದೇಶ, ಕೇರಳ, ತೆಲಂಗಾಣಗಳಲ್ಲಿ ಚಿತ್ರನಟರು ರಾಜಕೀಯ ರಂಗಕ್ಕೆ ಕಾಲಿರಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಚಿತ್ರ ರಂಗಕ್ಕೆ ಕಾಲಿರಿಸಿದ ನಟರುಗಳ ಸಾಲಿಗೆ ತಮಿಳುನಾಡಿನ ಸೂಪರ್‌ಸ್ಟಾರ್ ರಜನೀಕಾಂತ್ ಸೇರ್ಪಡೆಯಾಗಿದ್ದಾರೆ. ಡಿ.31ರಂದು ರಜನೀಕಾಂತ್ ತಾವು ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ತಿಳಿಸಿದ್ದಾರೆ. ಇದು ತಮಿಳುನಾಡಿನಲ್ಲಿ ಸಂಚಲನಕ್ಕೂ ಕಾರಣವಾಗಿದೆ.

ಪಕ್ಷ ಕಟ್ಟಿ ಗೆದ್ದವರು
ದಕ್ಷಿಣ ಭಾರತದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಹಲವಾರು ಚಿತ್ರ ನಟರು ಪಕ್ಷವನ್ನು ಕಟ್ಟಿ ರಾಜ್ಯದ ಚುಕ್ಕಾಣಿ ಹಿಡಿದ ನಿದರ್ಶನಗಳಿವೆ. ಆಂದ್ರ ಪ್ರದೇಶದಲ್ಲಿ ಎನ್. ಟಿ. ರಾಮರಾವ್, ತಮಿಳುನಾಡಿನಲ್ಲಿ ಎಂ. ಜಿ. ರಾಮಚಂದ್ರನ್ ಇವರಲ್ಲಿ ಪ್ರಮುಖರು. ಇವರಲ್ಲದೇ ಆಂದ್ರ ಪ್ರದೇಶದಲ್ಲಿ ಚಿರಂಜೀವಿ, ಪವನ್ ಕಲ್ಯಾಣ್, ತಮಿಳುನಾಡಿನಲ್ಲಿ ವಿಜಯಕಾಂತ್ ಮತ್ತಿತರರು ಹೊಸ ಪಕ್ಷ ಕಟ್ಟಿ ಅದೃಷ್ಟ ಪರೀಕ್ಷೆ ನಡೆಸಿಕೊಂಡಿದ್ದಾರೆ. ಹಿಂದೆ  ಶಿವಾಜಿ ಗಣೇಶನ್ ಮತ್ತಿತರ ನಟರುಗಳೂ ಕೂಡ ರಾಜಕೀಯ ಪಕ್ಷ ಕಟ್ಟಿದ್ದರು. ಇದೀಗ ತಮಿಳುನಾಡಿನಲ್ಲಿ ಕಮಲ್ ಹಾಸನ್, ರಜನೀಕಾಂತ್, ಕನ್ನಡದಲ್ಲಿ ಉಪೇಂದ್ರ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಅಭಿಮಾನಿಗಳು ಈ ನಟರುಗಳ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತು ಗೆಲುವಿನ ಸವಿಯನ್ನು ಉಣಿಸುತ್ತಾರೋ ಕಾದು ನೋಡಬೇಕಿದೆ.
ಎಐಎಡಿಎಂಕೆ ಕಟ್ಟಿದ ಎಂ. ಜಿ. ರಾಮಚಂದ್ರನ್
ತಮಿಳುನಾಡಿನಲ್ಲಿ ಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳೇ ಪ್ರಾಬಲ್ಯ ಮೆರೆಯುತ್ತಿದ್ದ ಸಂದ‘ರ್ದಲ್ಲಿ ಹೊಸ ಪಕ್ಷ ಕಟ್ಟಿ ಅದೃಷ್ಟ ಪರೀಕ್ಷೆಗೆ ಮುಂದಾದವರು ತಮಿಳುನಾಡಿನ ಮೇರು ನಟ ಎಂ. ಜಿ. ರಾಮಚಂದ್ರನ್ ಅವರು. 1972ರ ಅಕ್ಟೋಬರ್ 7ರಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೆಟ್ರ ಕಳಗಂ ಎಂಬ ಪಕ್ಷವನ್ನು ರಚನೆ ಮಾಡಿದರು. ಚಿತ್ರನಟರೋರ್ವರು ಹೊಸ ಪಕ್ಷವನ್ನು ಕಟ್ಟಿದ ಮೊದಲ ನಿದರ್ಶನ ಇದಾಗಿತ್ತುಘಿ. ಎಂಜಿಆರ್ ನಿರ್ಧಾರದಿಂದ ತಮಿಳುನಾಡಿನಲ್ಲಿ ದೊಡ್ಡ ಅಚ್ಚರಿ ಉಂಟಾಗಿತ್ತುಘಿ. ಪಕ್ಷ ಘೋಷಣೆಗೂ ಮೊದಲು ಡಿಎಂಕೆ ಪಕ್ಷದಲ್ಲಿದ್ದ ಎಂಜಿಆರ್ ನಂತರದಲ್ಲಿ ಡಿಎಂಕೆ ನಾಯಕರೊಂದಿಗೆ ಉಂಟಾದ ಭಿನ್ನಮತದಿಂದ ಬೇರೆ ಪಕ್ಷ ರಚನೆಗೆ ಮುಂದಾದರು. ಅವರ ಈ ನಿರ್ಧಾರ ಫಲಕೊಟ್ಟಿತು. 1973ರ ಎಪ್ರೀಲ್ 2ರಂದು ನಡೆದ ತಮಿಳುನಾಡು ಚುನಾವಣೆಯಲ್ಲಿ ಪಕ್ಷ 11 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿ ಮೂರನೇ ಅತ್ಯಂತ ದೊಡ್ಡ ಪಕ್ಷ ಎಂದು ಹೆಸರಾಯಿತು. ಚಿತ್ರನಟನೋರ್ವನ ಹೊಸ ಪಕ್ಷ ಯಶಸ್ವಿಯಾಗಿತ್ತು. ತದನಂತರದಲ್ಲಿ ಈ ಪಕ್ಷ ತಮಿಳುನಾಡಿನಲ್ಲಿ ಅಕಾರದ ಚುಕ್ಕಾಣೀ ಹಿಡಿದಿದ್ದಲ್ಲದೇ ಎಂಜಿಆರ್ ಹಲವು ಸಾರಿ ಮುಖ್ಯಮಂತ್ರಿಯೂ ಆದರು. ಮೂರು ಸಾರಿ ಮುಖ್ಯಮಂತ್ರಿಯಾಗಿದ್ದ ಎಂಜಿಆರ್ ರಾಜಕಾರಣದಲ್ಲಿ ಯಶಸ್ವಿಯೂ ಆಗಿದ್ದರು.


ತೆಲುಗು ದೇಶಂ ಕಟ್ಟಿದ ಎನ್‌ಟಿಆರ್
ಎನ್. ಟಿ. ರಾಮರಾವ್ ಆಂಧ್ರ ಕಂಡ ಸೂಪರ್ ಸ್ಟಾರ್. ದಿಗ್ಗಜ ನಟ. ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಎಂಬ ಪಕ್ಷವನ್ನು ಕಟ್ಟಿದಾಗ ಹಲವರು ಅನುಮಾನದಿಂದ ನೋಡಿದ್ದರು. ತಮಿಳುನಾಡಿನಲ್ಲಿ ಎಂ. ಜಿ. ಆರ್ ಹಿಡಿದ ಹಾದಿಯನ್ನೇ ಇವರು ಆಯ್ಕೆ ಮಾಡಿಕೊಂಡರು. ಆ ಸಂದ‘ರ್ದಲ್ಲಿ ನಟನೆ ಬೇರೆ, ರಾಜಕಾರಣವೇ ಬೇರೆ ಎಂಬ ಮಾತುಗಳನ್ನು ಇವರ ಕುರಿತು ಆಡಲಾಗಿತ್ತುಘಿ. ಆಂಧ್ರದ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಮಾತ್ರ ಇದ್ದಾಗ ರಾಮರಾವ್ ಪಕ್ಷವನ್ನು ಘೋಷಿಸಿದರು. ಇದರಿಂದಾಗಿ ಆಂಧ್ರಪ್ರದೇಶ ಕೆಲಕಾಲ ಅಚ್ಚರಿಗೆ ಒಳಗಾಗಿತ್ತು. ಸರಣಿ ಪ್ರಚಾರ ಭಾಷಣಗಳು, ರ್ಯಾಲಿ, ಪ್ರವಾಸಗಳ ಮೂಲಕ ಆಂಧ್ರದಲ್ಲಿ ಸಂಚಲನ ಮೂಡಿಸಿದ ರಾಮರಾವ್ ವಿಧಾನ ಸಭೆ ಚುನಾವಣೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿದರು. 1982 ಮಾರ್ಚ್ 29ರಂದು ಪಕ್ಷವನ್ನು ಘೋಷಿಸಲಾಯಿತು. 1983ರಲ್ಲಿ ಪಕ್ಷ ಅಕಾರದ ಚುಕ್ಕಾಣಿ ಹಿಡಿಯಿತು. ಎನ್. ಟಿ. ರಾಮರಾವ್ ಆಂಧ್ರದ 10ನೇ ಮುಖ್ಯಮಂತ್ರಿಯಾಗಿ ಅಕಾರ ಸ್ವೀಕಾರ ಮಾಡಿದರು. ಈ ಕಾರಣದಿಂದಲೇ ಚಿತ್ರನಟರಾಗಿ ಪಕ್ಷವನ್ನು ಕಟ್ಟಿ ಯಶಸ್ವಿಯಾದವರ ಪೈಕಿ ಎನ್‌ಟಿಆರ್ ಮೊದಲ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಎನ್‌ಟಿಆರ್‌ರ ತೆಲುಗುದೇಶಂ ಪಕ್ಷವು ಆಂಧ್ರದಲ್ಲಿ ಅಕಾರಕ್ಕೇರಿದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಪಕ್ಷ ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿದೆ. ವಿಶೇಷವೆಂದರೆ ತೆಲುಗುದೇಶಂ ಪಕ್ಷ 1984ರಿಂದ 1989ರ ವರೆಗೆ 8ನೇ ಲೋಕಸಭೆ ಅವಧಿಯಲ್ಲಿ ವಿರೋಧ ಪಕ್ಷವಾಗಿಯೂ ಕಾರ್ಯನಿರ್ವಹಿಸಿತ್ತು. ವಿರೋಧ ಪಕ್ಷದ ಕಾರ್ಯ ನಿರ್ವಹಿಸಿದ ಮೊಟ್ಟ ಮೊದಲ ಪಕ್ಷ ಟಿಡಿಪಿ ಎನ್ನುವ ಖ್ಯಾತಿಯೂ ಪಕ್ಷಕ್ಕಿದೆ. ಪಕ್ಷದ ಯಶಸ್ಸಿನ ಸಿಂಹಪಾಲು ಎನ್. ಟಿ. ರಾಮರಾವ್ ಅವರದ್ದು ಎಂದರೆ ತಪ್ಪಾಗಲಿಕ್ಕಿಲ್ಲ.

ಪ್ರಜಾರಾಜ್ಯಂ ಕಟ್ಟಿ ಸೋತ ಚಿರಂಜೀವಿ
ತೆಲುಗು ಮೇರು ನಟ ಎನ್‌ಟಿಆರ್ ತೆಲುಗುದೇಶಂ ಕಟ್ಟಿ ಯಸ್ವಿಯಾಗಿದ್ದನ್ನೇ ಗಮನಿಸಿದ ಇನ್ನೋರ್ವ ನಟ, ಮೆಗಾಸ್ಟಾರ್ ಚಿರಂಜೀವಿ ಪ್ರಜಾರಾಜ್ಯಂ ಎನ್ನುವ ಹೊಸ ಪಕ್ಷವನ್ನು ಕಟ್ಟಿದರು. 2008ರ ಆಗಸ್ಟ್ 26ರಂದು ಚಿರಂಜೀವಿ ಪಕ್ಷವನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ ರಾಜಕೀಯ ಪಂಡಿತರು ಹಾಗೂ ಅಭಿಮಾನಿಗಳು ಎನ್‌ಟಿಆರ್ ಅವರಂತೆಯೇ ಚಿರಂಜೀವಿ ಕೂಡ ಮೋಡಿ ಮಾಡುತ್ತಾರೆ ಎಂದೇ ವಿಶ್ಲೇಷಿಸಿದ್ದರು. 2009ರ ಚುನಾವಣೆಯಲ್ಲಿ ಚಿರಂಜೀವಿ ಸಹಿತ 18 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತು. ಆಂಧ್ರದ ಇತಿಹಾಸದಲ್ಲಿ ಇದು ಸಾಧಾರಣ ವಿಜಯ ಎಂದೇ ಹೇಳಲಾಯಿತು. ನಂತರದ ದಿನಗಳಲ್ಲಿಯೂ ಪಕ್ಷ ಚೇತರಿಸಿಕೊಳ್ಳಲಿಲ್ಲ. ಪಕ್ಷ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಆಂಧ್ರದಲ್ಲಿ ಪಕ್ಷ ಆರಂಭದಲ್ಲಿ ಸೃಷ್ಟಿಸಿದ್ದ ಹವಾ ನಂತರದಲ್ಲಿ ಮುಂದುವರಿಯಲಿಲ್ಲ. ಇದರಿಂದಾಗಿ 2011ರ ಫೆಬ್ರವರಿ 6ರಂದು ಚಿರಂಜೀವಿ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದರು.

ಡಿಎಂಡಿಕೆ ಕಟ್ಟಿದ ವಿಜಯಕಾಂತ್
ತಮಿಳುನಾಡಿನ ಇನ್ನೋರ್ವ ನಟ ವಿಜಯಕಾಂತ್ ಅವರು ಎಂಜಿಆರ್ ಹಾದಿಯನ್ನು ಹಿಡಿದರು. 2005ರ ಸೆಪ್ಟೆಂಬರ್ 14ರಂದು ವಿಜಯಕಾಂತ್ ದೇಸೀಯ ಮುರ್ಪೋಕು ದ್ರಾವಿಡ ಕಳಗಂ ಎಂಬ ರಾಜಕೀಯ ಪಕ್ಷವನ್ನು ಘೋಷಿಸಿದಾಗ ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಡಿಎಂಕೆಗೆ ಭಾರಿ ಸವಾಲಾಗಬಲ್ಲದು ಎಂದೇ ಹೇಳಲಾಗಿತ್ತು. 2006ರಲ್ಲಿ ಮೊದಲ ಚುನಾವಣೆಯನ್ನು ಎದುರಿಸಿದ ಪಕ್ಷವು ಕೇವಲ 1 ಸ್ಥಾನದಲ್ಲಿ ಜಯ ಗಳಿಸಿತು. ನಂತರದ ಚುನಾವಣೆಗಳಲ್ಲಿ ಗೆಲುವು ಮರಿಚಿಕೆಯಾದರೂ, 2011ರಲ್ಲಿ 29 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಪಕ್ಷವು ಇಂದಿಗೂ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ. ಮತಗಳಿಕೆಯಲ್ಲಿ ಚುನಾವಣೆಯಿಂದ ಚುನಾವಣೆಗೆ ಏರಿಕೆಯಾಗುತ್ತಿದ್ದರೂ ಗೆಲುವು ಬಿಸಿಲು ಕುರೆಯಂತಾಗಿದೆ. ಸಂಸ್ಥಾಪಕ ವಿಜಯಕಾಂತ್ ಮಾತ್ರ ತನ್ನ ಛಲವನ್ನು ಬಿಡುತ್ತಿಲ್ಲ. ಪಕ್ಷ ಇದೀಗ ಎನ್‌ಡಿಎ ಜೊತೆ ಕೈಜೋಡಿಸಿದೆ.

ಜನಸೇನೆ ಮೂಲಕ ಅದೃಷ್ಟ ಪರೀಕ್ಷಿಸಿದ ಪವನ್ ಕಲ್ಯಾಣ್
ಸಹೋದರ ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿದಂತೇ ತಮ್ಮ ಪವನ್ ಕಲ್ಯಾಣ್ ಕೂಡ ಜನಸೇನೆ ಪಕ್ಷ ಕಟ್ಟುವ ಮೂಲಕ ರಾಜಕೀಯದ ಅದೃಷ್ಟ ಪರೀಕ್ಷೆ ಕೈಗೊಂಡರು. 2014ರ ಮಾರ್ಚ್ 14ರಂದು ತಮ್ಮ ಹೊಸ ಪಕ್ಷವನ್ನು ಘೋಷಿಸಿದ ಪವನ್ ಕಲ್ಯಾಣ್ ಇದೀಗ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯ ಸಂದ‘ರ್ದಲ್ಲಿ ತೆಲುಗುದೇಶಂ ಹಾಗೂ ಬಿಜೆಪಿ ಪರ ಪ್ರಚಾರ ಕಾರ್ಯ ಕೈಗೊಂಡಿದ್ದರು. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು. 2019ರ ವಿಧಾನಸಭಾ ಚುನಾವಣೆಯಗಲ್ಲಿ ಪವನ್ ಕಲ್ಯಾಣ್‌ರ ಜನಸೇನಾ ಪಕ್ಷ ಕಣಕ್ಕಿಳಿಯಲಿದೆ ಎಂದೂ ಹೇಳಲಾಗುತ್ತಿದೆ. ಚುನಾವಣೆಯ ಫಲಿತಾಂಶದ ಮೇಲೆ ಪವನ್ ಕಲ್ಯಾಣ್‌ರ ರಾಜಕೀಯ ಭವಿಷ್ಯ ನಿಂತಿದೆ.

ಟಿಎಂಎಂ ಪಕ್ಷ ಕಟ್ಟಿ ಸೋತ ಶಿವಾಜಿ ಗಣೇಶನ್ 
ತಮಿಳುನಾಡಿನಲ್ಲಿ ಮೇರು ನಟ ಎಂಜಿಆರ್ ಅವರ ಹಾದಿಯನ್ನೇ ಹಿಡಿದವರು ಇನ್ನೋರ್ವ ದಿಗ್ಗಜ ನಟ ಶಿವಾಜಿ ಗಣೇಶನ್ ಅವರು. ಡಿಎಂಕೆ ಪಕ್ಷದ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರೂ ಡಿಎಂಕೆ ನಾಯಕ ಕರುಣಾನಿ ಅವರ ಜೊತೆಗಿನ ಮುನಿಸಿನಿಂದಾಗಿ ಡಿಎಂಕೆಯನ್ನು ತೊರೆದರು. 1988ರಲ್ಲಿ ತಮ್ಮದೇ ಆದ ತಮಿಳಗ ಮುನ್ನೇಟ್ರ ಮುನ್ನಾನಿ ಎನ್ನುವ ಪಕ್ಷವನ್ನು ಕಟ್ಟಿದರು. 1989ರ ಚುನಾವಣೆಯಲ್ಲಿ ಪಕ್ಷ ರ್ಸ್ಪಸಿದ್ದ ಎಲ್ಲ ಕ್ಷೇತ್ರಗಳಲ್ಲಿಯೂ ಸೋಲನ್ನು ಅನುಭವಿಸಿತು. ಇದರಿಂದಾಗಿ ಶಿವಾಜಿ ಗಣೇಶನ್ ತಮ್ಮ ಪಕ್ಷವನ್ನು ಜನತಾ ದಳದೊಂದಿಗೆ ವಿಲೀನಗೊಳಿಸಿದರು. ಚಿತ್ರನಟನೋರ್ವ ಪಕ್ಷ ಕಟ್ಟಿ ಹೀನಾಯ ಸೋಲನ್ನು ಅನುಭವಿಸಿದ ಮೊದಲ ನಿದರ್ಶನ ಇದಾಗಿತ್ತು.

ಎಐಎಸ್‌ಎಂಕೆ ಕಟ್ಟಿದ ಶರತ್‌ಕುಮಾರ್
ಆಲ್ ಇಂಡಿಯಾ ಸಮಾಧುವಾ ಮಕ್ಕಳ್ ಕಚ್ಚಿ ಪಕ್ಷವನ್ನು ಕಟ್ಟಿ ರಾಜಕೀಯ ಪರೀಕ್ಷೆಗೆ ಮುಂದಾದವರು ಚಿತ್ರನಟ ಶರತ್‌ಕುಮಾರ್. 2007ರ ಆಗಸ್ಟ್ 31ರಂದು ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಿದರು. 2011ರಲ್ಲಿ ಎಐಎಡಿಎಂಕೆಯ ಮಿತ್ರ ಪಕ್ಷವಾಗಿ ಕಣಕ್ಕಿಳಿದಿದ್ದ ಶರತ್ ಕುಮಾರ್‌ರ ಎಎಸ್‌ಎಂಕೆ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದರು. ಈ ಪಕ್ಷವು ಪ್ರಸ್ತುತ ಕೇರಳಕ್ಕೂ ವಿಸ್ತರಣೆಯಾಗಿದೆ.

ಪ್ರಜಾಕೀಯ ಮೂಲಕ ಉಪೇಂದ್ರ ಸತ್ವಪರೀಕ್ಷೆ
ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರು ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಪ್ರಜಾಕೀಯ ಎಂಬ ಹೆಸರಿನ ಮೂಲಕ ಪಕ್ಷ ಘೋಷಣೆ ಕೈಗೊಂಡಿದ್ದ ಉಪೇಂದ್ರ ನಂತರದಲ್ಲಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಎಂದು ಅಕೃತವಾಗಿ ನಾಮಕರಣ ಮಾಡಿದರು. ತಮ್ಮ ಪಕ್ಷವನ್ನು ಕ್ಯಾಶ್‌ಲೆಸ್ ಪಕ್ಷ ಎಂದು ಕರೆದುಕೊಂಡಿರುವ ಉಪೇಂದ್ರ ಮುಂಬರುವ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ರ್ಸ್ಪಸುವುದಾಗಿ ಘೋಷಿಸಿದ್ದಾರೆ. ಪ್ರಜ್ಞಾವಂತ ಮತದಾರರೇ ಜೀವಾಳ ಎಂದು ಹೇಳುವ ಉಪೇಂದ್ರ ಕರ್ನಾಟಕದಲ್ಲಿ ಸ್ವತಂತ್ರ ಪಕ್ಷ ಕಟ್ಟಿದ ಮೊಟ್ಟ ಮೊದಲ ಚಿತ್ರ ನಟ. ಉಪೇಂದ್ರದ ಹೊಸ ಪ್ರಯೋಗ ಯಶಸ್ವಿಯಾಗುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ಪಕ್ಷ ಕಟ್ಟದೇ ಗೆದ್ದವರು
ತಾವೇ ಪಕ್ಷವನ್ನು ಕಟ್ಟದೇ ರಾಜಕಾರಣದಲ್ಲಿ ಯಶಸ್ವಿಯಾದ ಹಲವು ನಟರು ಹಗೂ ನಟಿಯರಿದ್ದಾರೆ. ಆ ಸಾಲಿನಲ್ಲಿ ಪ್ರಮುಖವಾಗಿರುವವರು ತಮಿಳುನಾಡಿನ ಜಯಲಲಿತಾ, ಕೆ. ಕರುಣಾನಿ, ಕನ್ನಡದ ಅಂಬರೀಶ್, ಅನಂತನಾಗ್, ಉಮಾಶ್ರೀಘಿ, ಕೇರಳದ ಕೆ. ಬಿ. ಗಣೇಶ ಕುಮಾರ್, ನಂದಮೂರಿ ಬಾಲಕೃಷ್ಣ, ನೆಪೋಲಿಯನ್ ಮತ್ತಿತರರು ಪ್ರಮುಖರಾಗಿದ್ದಾರೆ.
ಇವರಲ್ಲಿ  ತಮಿಳುನಾಡಿನ ಚಲನಚಿತ್ರ ಸಂ‘ಾಷಣೆಕಾರ, ಚಿತ್ರ ಸಾಹಿತಿ ಕೆ. ಕರುಣಾನಿ ಡಿಎಂಕೆ ಸೇರಿ ಹಲವು ಸಾರಿ ಮುಖ್ಯಮಂತ್ರಿಯಾದವರು. ತಮಿಳುನಾಡಿನಲ್ಲಿಯೇ ಚಿತ್ರನಟಿ ಜೆ. ಜಯಲಲಿತಾ ಎಐಎಡಿಎಂಕೆ ಪಕ್ಷ ಸೇರಿ, ಚುಕ್ಕಾಣಿ ಹಿಡಿದು, ಹಲವು ಸಾರಿ ಮುಖ್ಯಮಂತ್ರಿ ಗಾದಿಗೂ ಏರಿದ್ದಾರೆ. ಕನ್ನಡದ ನಟರಾದ ಅಂಬರೀಶ್ ಕೇಂದ್ರ ಸಚಿವರಾಗಿದ್ದರು. ಪ್ರಸ್ತುತ ಶಾಸಕರಾಗಿದ್ದಾರೆ. ಹಿರಿಯ ನಟ ಅನಂತನಾಗ್ ಜನತಾದಳ ಸರ್ಕಾರದಲ್ಲಿ ಸಚಿವರಾಗಿದ್ದರು. ಪ್ರಸ್ತುತ ಚಿತ್ರನಟಿ ಉಮಾಶ್ರೀ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿದ್ದಾರೆ. ಚಿತ್ರನಟಿಯರಾದ ತಾರಾ, ಜಯಮಾಲಾ ಅವರು ವಿ‘ಾನಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದವರು
ಪ್ರಸ್ತುತ ತಮಿಳುನಟ ರಜನೀಕಾಂತ್, ಕಮಲ್ ಹಾಸನ್, ವಿಶಾಲ್, ಕನ್ನಡದ ಉಪೇಂದ್ರ, ತೆಲುಗಿನ ಪವನ್ ಕಲ್ಯಾಣ್ ಮತ್ತಿತರರು ರಾಜಕೀಯ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ರಜನಿ, ಉಪೇಂದ್ರ, ಪವನ್ ಕಲ್ಯಾಣ್ ಹೊಸ ಪಕ್ಷಗಳನ್ನು ಘೋಷಿಸಿದ್ದರೆ ಕಮಲ್ ಹಾಸನ್ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ. ವಿಶಾಲ್ ತಮಿಳುನಾಡಿನ ಆರ್. ಕೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದರು.

ರಾಜಕಾರಣಿ-ನಟನೆಯ ದ್ವಿಪಾತ್ರ
ಕನ್ನಡದಲ್ಲಿ ಜಗ್ಗೇಶ್, ಮುಖ್ಯಮಂತ್ರಿ ಚಂದ್ರು, ಬಿ. ಸಿ. ಪಾಟೀಲ್, ಯೋಗೇಶ್ವರ್, ರಮ್ಯಾ, ರಾಮಕೃಷ್ಣ, ದೊಡ್ಡಣ್ಣ, ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಕೆ. ಶಿವರಾಮು  ಮತ್ತಿತರರು ಚುನಾವಣೆಗೆ ರ್ಸ್ಪಸಿ ಸೋಲು-ಗೆಲುವಿನ ಸಿಹಿ-ಕಹಿಯನ್ನು ಉಂಡಿದ್ದಾರೆ. ತೆಲುಗಿನಲ್ಲಿ ಕೋಟ ಶ್ರೀನಿವಾಸ ರಾವ್, ಮೋಹನ್ ಬಾಬು, ತಮಿಳಿನ ಎಸ್. ಎಸ್. ರಾಜೇಂದ್ರನ್,  ಮತ್ತಿತರರು ರಾಜಕೀಯ ರಂಗದಲ್ಲಿಯೂ ಛಾಪು ಮೂಡಿಸಿದ್ದಾರೆ.

Monday, January 1, 2018

ದಾಸ್ಯ (ಕಥೆ ಭಾಗ-3)

ನನ್ನ ಹಾಗೂ ಪಟೇಲರ ನಡುವಿನ ಜಗಳ ತಾರಕಕ್ಕೇರಿದಾಗಲೇ ನನ್ನ ಕೆನ್ನೆಗೆ ಅವರು ಫಟಾರೆಂದು ಹೊಡೆದಿದ್ದರು. ಬೆನ್ನಿಗೆ ಬಡಿಯಲು ಆರಂಭಿಸಿದ್ದರು. ನನಗೆ ಮಾತ್ರ ಈಗ ಸಿಟ್ಟು ತೀವ್ರವಾಗಿತ್ತು. ಒಂದು ಕ್ಷಣವೂ ಪಟೇಲರ ಮನೆಯಲ್ಲಿ ನಿಲ್ಲದೇ, ಮನೆ ಬಿಟ್ಟು ಬಂದಿದ್ದೆ.
ಅದಾದ ಮೇಲೆ ನನಗೆ ಒಂದೊಂದೆ ಮಾಹಿತಿಗಳು ಬರಲಾರಂಭಿಸಿದ್ದವು. ಪಟೇಲರು ನನ್ನ ಮದುವೆಯಾಗುವುದರ ಹಿಂದೆ ದೊಡ್ಡದೊಂದು ಹುನ್ನಾರವೇ ಅಡಗಿತ್ತು ಎನ್ನುವುದು ತಿಳಿದು ಬಂದಿತ್ತು. ನಾನು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ್ದು, ಕ್ರಾಂತಿ ಮಾರ್ಗವನ್ನು ಅನುಸರಿಸಿದ್ದು ಎಲ್ಲವನ್ನೂ ಅರಿತಿದ್ದ ಪೊಲೀಸ್ ಪಡೆ ಹಾಗೂ ಅಂಗ್ರೇಜಿ ಸರಕಾರ ನನ್ನನ್ನು ಹದ್ದುಬಸ್ತಿನಲ್ಲಿ ಇಡಲು ಮೋಸದ ಹೂಟವನ್ನು ಹೂಡಿತ್ತು. ಗಣಪಯ್ಯ ಪಟೇಲರ ಬಳಿ ಮದುವೆಯ ಪ್ರಸ್ತಾಪ ಮಾಡಿ, ಮದುವೆಯಾಗುವಂತೆ ಹೇಳಿ ನನ್ನನ್ನು ಚಳವಳಿಯಿಂದ ದೂರ ಇಡುವ ಯೋಜನೆ ಅವರದ್ದಾಗಿತ್ತು. ಅದರಲ್ಲಿ ಅವರು ಯಶಸ್ವಿಯೂ ಆಗಿದ್ದರು. ಈ ಸುದ್ದಿ ನನಗೆ ತಿಳಿದ ಕ್ಷಣವೇ ನನಗೆ ಸಿಟ್ಟು ಹೆಚ್ಚಿತು. ನಖಶಿಖಾಂತ ಕೋಪ ಬಂದಿತು. ಆದರೆ ಮಾಡುವುದು ಏನು ಎನ್ನುವುದು ತಿಳಿಯದೇ ಕಂಗಾಲಾದೆ. ಆಗಿದ್ದ ಮೋಸಕ್ಕೆ ಧುಃಖವೂ ಕಟ್ಟೆಯೊಡೆದಿತ್ತು. ತುಂಬಿದ ಬಸುರಿ ಬೇರೆ. ಇದಕ್ಕೊಂದು ಉತ್ತರ ನೀಡಲೇಬೇಕಿತ್ತು.
ನಾನು ಬಸುರಿಯಾದರೂ ತೊಂದರೆಯಿಲ್ಲ ಚಳುವಳಿಯಲ್ಲಿ ಮತ್ತೆ ಪಾಲ್ಗೊಳ್ಳಲೇಬೇಕೆಂದು ನಿರ್ಧರಿಸಿದೆ. ಯಥಾ ಪ್ರಕಾರ ಸುದ್ದಿ ತಿಳಿದ ಪಟೇಲರು ನನ್ನ ಬಳಿ ಬಂದು, `ಚಳವಳಿ ಬಿಟ್ಟು, ಜೊತೆಗೆ ಬಂದರೆ ಮನೆಯಲ್ಲಿ ಅವಕಾಶ. ಇಲ್ಲವಾದರೆ ನಿನ್ನನ್ನು ಬಿಟ್ಟು ಬಿಡುತ್ತೇನೆ ಎಂದು ಬೆದರಿಸಿದರು. ನಾನು ಜಗ್ಗಲಿಲ್ಲ. ಗಂಡ ಬಿಟ್ಟವಳು ಎನ್ನುವ ಅಪಖ್ಯಾತಿ ಬಂದರೂ ಚಿಂತೆಯಿಲ್ಲ. ದೇಶಸೇವೆಯೇ ಮುಖ್ಯ ಎಂದುಕೊಂಡೆ.
ಅಷ್ಟರ ನಂತರ ಇನ್ನೊಂದು ಪ್ರಮುಖ ಘಟನೆ ನಡೆಯಿತು. ಚಳವಳಿಯನ್ನು ಹತ್ತಿಕ್ಕಲು ನನ್ನ ಯಜಮಾನರಾದ ಗಣಪಯ್ಯ ಪಟೇಲರು ಬ್ರಿಟೀಷರ ಜೊತೆ ಕೈ ಜೋಡಿಸಿದರು. ಅದೇ ಸಂದರ್ಭದಲ್ಲಿ ತೀವ್ರಗಾಮಿಗಳ ಗುಂಪೊಂದು ನನ್ನ ಸಂಪರ್ಕಕ್ಕೆ ಬಂದಿತು. ನಾನು ಪೊಲೀಸರಿಗೆ ಕಲ್ಲು ಹೊಡೆದಿದ್ದ ವಿಷಯ ತಿಳಿದಿದ್ದ ಆ ಗುಂಪು ನನ್ನನ್ನು ಭೇಟಿ ಮಾಡಿ, ತಮ್ಮ ಗುಂಪಿನ ಮುಂದಾಳತ್ವ ವಹಿಸಿಕೊಳ್ಳಬೇಕೆಂದು ಕೋರಲು ಬಂದಿತ್ತು. ಆದರೆ ನಾನು ಆಗ ತುಂಬಿದ ಬಸುರಿ. ನನ್ನ ಪರಿಸ್ಥಿತಿಯನ್ನು ನೋಡಿ ಅವರು ನನ್ನ ಬಳಿ ವಿಷಯವನ್ನು ಅರುಹಲು ಹಿಂದೇಟು ಹಾಕಿದರು. ನನಗೆ ಅದು ಗೊತ್ತಾಗಿ, ನಾನೇ ಅವರ ಬಳಿ ವಿಷಯ ಪ್ರಸ್ತಾಪಿಸಿದ್ದೆ.
ನಿಧಾನವಾಗಿ ಆ ಗುಂಪಿನ ಸದಸ್ಯರಲ್ಲಿ ಒಬ್ಬಿಬ್ಬರು ನನ್ನ ಬಳಿ ಮಾತನಾಡಿದಾಗ, ನಾನು ಬಸುರಿಯಾಗಿದ್ದರೂ ತೊಂದರೆಯಿಲ್ಲ. ಹೋರಾಟದ ಮುಂದಾಳತ್ವ ವಹಿಸಿಕೊಳ್ಳಲು ಸಿದ್ಧನಿದ್ದೇನೆ. ಏನು ಮಾಡಬೇಕು ಹೇಳಿ ಎಂದೆ.
ಅವರು ಮೊದಲ ಹಂತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುವುದು, ನಂತರದಲ್ಲಿ ಬ್ರಿಟೀಷರನ್ನೋ ಅಥವಾ ಪೊಲೀಸರನ್ನೋ ಅಥವಾ ಅವರಿಗೆ ಸಹಾಯ ಮಾಡುತ್ತಿದ್ದವರನ್ನೋ ಹತ್ಯೆ ಮಾಡುವ ಆಲೋಚನೆ ಹೊಂದಿರುವುದಾಗಿ ಹೇಳಿದರು. ನಾನು ಅದಕ್ಕೆ ಮೆಚ್ಚುಗೆ ಹಾಗೂ ಒಪ್ಪಿಗೆ ಎರಡನ್ನೂ ಸೂಚಿಸಿದೆ. ಅದರಂತೆ ಕೆಲವು ದಿನಗಳ ಕಾಲ ನಮ್ಮ ಕ್ರಾಂತಿಕಾರಿ ಗುಂಪು ಅಲ್ಲಲ್ಲಿ ಉಗ್ರ ಚಟುವಟಿಕೆಗಳನ್ನೂ ಕೈಗೊಂಡಿತು. ಈ ಸಂದರ್ಭದಲ್ಲಿಯೇ ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ಆ ಮಗುವಿಗೆ ನಮ್ಮ ಬಳಗದವರು ಭರತ ಎಂಬ ಹೆಸರನ್ನಿರಿಸಿದ್ದರು. ಭಾರತ ದೇಶಕ್ಕೆ ಭಾರತ ಎನ್ನುವ ಹೆಸರು ಬರಲು ಮುಖ್ಯ ಕಾರಣನಾದ ಭರತ ಮಹಾರಾಜನ ಹೆಸರು ಅದು.
1947ರ ಜನವರಿಯೋ ಅಥವಾ ಇನ್ಯಾವುದೋ ತಿಂಗಳು ಅದು. ಇನ್ನೇನು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕೇ ಸಿಗುತ್ತದೆ ಎನ್ನುವ ಗುಲ್ಲೆದ್ದಿತ್ತು. ಬ್ರಿಟೀಷರು ಜಿಗುಟುತನ ತೋರುತ್ತಿದ್ದರು. ಭಾರತ ಬಿಟ್ಟು ಹೋಗುವ ದಿನಾಂಕವನ್ನು ನಾಳೆ, ನಾಡಿದ್ದು ಎಂಬಂತೆ ಮುಂದೂಡುತ್ತಲೇ ಇದ್ದರು. ಮಂದಗಾಮಿಗಳು ಆಶಾವಾದಿಗಳಾಗಿದ್ದರು. ಆದರೆ ನಮ್ಮ ಬಳಗಕ್ಕೆ ಮಾತ್ರ ಸಹನೆಯ ಕಟ್ಟೆ ಒಡೆದಿತ್ತು. ಹೀಗಿದ್ದಾಗಲೇ ನಮ್ಮ ಸಂಘಟನೆಯ ವಿಚಾರ ಬ್ರಿಟೀಷರಿಗೂ, ಅವರ ಪರವಾಗಿದ್ದ ಪೊಲೀಸರಿಗೂ ಗೊತ್ತಾಗಿ ಎಲ್ಲೆಂದರಲ್ಲಿ ನಮ್ಮ ಹುಡುಕಾಟವನ್ನು ಕೈಗೊಂಡಿದ್ದರು.
ಭರತನಿಗೆ ಮೂರೋ ನಾಲ್ಕೋ ತಿಂಗಳಾಗಿತ್ತಷ್ಟೇ. ಕ್ರಾಂತಿಕಾರಿಗಳ ಗುಂಪಿನ ಮುಂದಾಳತ್ವ ವಹಿಸಿದ್ದ ನಾನು ತಲೆಮರೆಸಿಕೊಂಡು ಓಡಾಡುತ್ತಿದ್ದೆ. ನೆಂಟರ ಮನೆಯೋ, ಗುಂಪಿನ ಸದಸ್ಯರ ಮನೆಯೋ ಇನ್ನೆಲ್ಲೋ. ಹೀಗಿದ್ದಾಗಲೇ ಒಂದು ದಿನ ನನ್ನನ್ನು ಪೊಲೀಸರು ಹುಡುಕಿಯೇ ಬಿಟ್ಟರು. ನಾನು ತಲೆತಪ್ಪಿಸಿಕೊಳ್ಳುವಲ್ಲಿ ಹೇಗೋ ಯಶಸ್ವಿಯಾದೆ. ಆದರೆ ಅಂದಿನಿಂದ ನನ್ನ ಜಾಡು ಅವರಿಗೆ ಗೊತ್ತಾಗತೊಗಿತ್ತು. ನಾನು ಎತ್ತ ಹೋದರೂ ನನ್ನನ್ನು ಬೆನ್ನಟ್ಟಲು ಆರಂಭಿಸಿದ್ದರು. ತಲೆ ತಪ್ಪಿಸಿಕೊಳ್ಳುವ ಭರದಲ್ಲಿ ಎಲ್ಲೆಲ್ಲೋ ಅಲೆದಿದ್ದೆ. ಕಂಕುಳಲ್ಲಿ ಭರತನಿದ್ದ.
ಹೀಗಿದ್ದಾಗ ಒಮ್ಮೆ ಅಲೆದಾಡಿ ನಮ್ಮೂರಿನ ಬಳಿಯೇ ಬಂದೆ. ಅಲ್ಲಿಗೆ ಬಂದಿದ್ದ ಸುದ್ದಿ ಪಟೇಲರಿಗೆ ಹೇಗೆ ಗೊತ್ತಾಗಿತ್ತೇನೋ. ಸೀದಾ ನನ್ನನ್ನು ಹುಡುಕಿ ಬಂದರು. ಬಂದವರೇ ನನ್ನ ಬಳಿ ರೇಗಾಡಲು ಆರಂಭಿಸಿದರು. ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತೆ ಪಾಲ್ಗೊಂಡಿದ್ದಕ್ಕೆ ಸಿಟ್ಟಾದರು. ಅಷ್ಟೇ ಅಲ್ಲದೇ ನನ್ನ ಜೊತೆಗೆ ಭರತನನ್ನು ಬಿಡಲು ವಿರೋಧಿಸಿ, ಭರತನನ್ನು ನಾನೇ ಕರೆದೊಯ್ಯುತ್ತೇನೆ ಎಂದು ಮುಂದಾದರು. ನನಗೂ ಸಿಟ್ಟು ಉಕ್ಕಿತು. ಅಲ್ಲಿಗೆ ಒಂದು ನಿಕ್ಕಿಯಾಗಿತ್ತು. ಪಟೇಲರು ನನ್ನ ಸ್ವಾತಂತ್ರ್ಯ ಹೋರಾಟಕ್ಕೆ ತಡೆ ಒಡ್ಡಬೇಕೆಂಬ ಕಾರಣಕ್ಕೇ ನನ್ನನ್ನು ಹುಡುಕಿ ಬಂದಿದ್ದಾರೆ ಎಂಬುದು ಅರ್ಥವಾಗಿತ್ತು. ನನ್ನ ಜತೆ ವಿಪರೀತ ಜಗಳವಾಡಿದ ಪಟೇಲರು ಭರತನನ್ನು ನನ್ನಿಂದ ಕಿತ್ತುಕೊಂಡು ಹೊರಟೇ ಹೋದರು. ನನಗೆ ಒಮ್ಮೆ ಆಕಾಶವೇ ಕಳಚಿ ಬಿದ್ದಿತ್ತು.

------------

ಇದಾಗಿ ಮೂರನೇ ದಿನಕ್ಕೆ ಪಟೇಲರು ತೀರಿಕೊಂಡಿದ್ದರು. ಅವರದು ಸಹಜ ಸಾವಾಗಿರಲಿಲ್ಲ. ಅವರ ಹತ್ಯೆಯಾಗಿತ್ತು. ಚಾಕುವಿನಿಂದ ಇರಿದ ಗುರುತುಗಳು ಮೈಮೇಲಿದ್ದವು. ನನಗೆ ಆಘಾತವಾಗಲಿಲ್ಲ. ನಾನು ನಿರೀಕ್ಷಿಸಿದ್ದೆ. ಸೀದಾ ಪಟೇಲರ ಮನೆಗೆ ನಾನು ಹೋಗುವ ವೇಳೆಗೆ ಅಲ್ಲಿದ್ದ ಪೊಲೀಸರು ನನ್ನನ್ನು ಬಂಧಿಸಿದ್ದರು.
ಪಟೇಲರ ಹತ್ಯೆಗೆ ಕಾರಣ ಸರಳವಾಗಿತ್ತು. ಭರತನನ್ನು ನನ್ನಿಂದ ಕಿತ್ತುಕೊಂಡು ಹೋದ ಸಂಗತಿ ನಮ್ಮ ಕ್ರಾಂತಿಕಾರಿ ಗುಂಪುಗಳಿಗೆ ತಿಳಿದಿತ್ತು. ಅವರು ನನ್ನ ಬಳಿ ಬಂದು ನನ್ನನ್ನು ಸಮಾಧಾನ ಮಾಡಿದ್ದರಲ್ಲದೇ, ಪಟೇಲರಿಂದ ಭರತನ್ನು ಮತ್ತೊಮ್ಮೆ ವಾಪಾಸು ಕರೆತರುವುದಾಗಿ ಹೇಳಿ ಹೋಗಿದ್ದರು. ನಾನು ಗುಂಪನ್ನು ಸಮಾಧಾನ ಮಾಡುವ ಯತ್ನ ಮಾಡಿದ್ದೆ. ಆದರೆ ನನ್ನ ಮಾತು ಕೇಳದ ಗುಂಪು ಸೀದಾ ಪಟೇಲರ ಮನೆಗೆ ಹೋಗಿತ್ತು. ಅಲ್ಲಿ ವಾಗ್ವಾದಗಳೂ ಆಗಿದ್ದವಂತೆ. ಜೊತೆಗೆ ಪಟೇಲರ ಮೇಲೆ ಏರಿ ಹೋಗಿದ್ದ ಗುಂಪಿನ ಸದಸ್ಯರು ಭರತನನ್ನು ಅವರ ಕೈಯಿಂದ ಕಿತ್ತುಕೊಂಡು ಬರಲು ಯತ್ನಿಸಿದ್ದರಂತೆ. ಹೀಗಿದ್ದಾಗಲೇ ಪಟೇಲರು ಮನೆಯಲ್ಲಿದ್ದ ಹಳೆಯ ಬಂದೂಕನ್ನು ತಂದು ಹೆದರಿಸಲು ಯತ್ನಿಸಿದ್ದರು. ತಕ್ಷಣವೇ ಗುಂಪಿನ ಸದಸ್ಯರಲ್ಲೋರ್ವ ಅವರ ಮೇಲೆ ನುಗ್ಗಿ ಚಾಕುವಿನಿಂದ ಇರಿದಿದ್ದ. ಒಂದೇ ಇರಿತಕ್ಕೆ ಪಟೇಲರು ತೀರಿಕೊಂಡಿದ್ದರು.
ತದನಂತರದಲ್ಲಿ ಪಟೇಲರ ಸಾವಿಗೆ ನಾನೇ ಕಾರಣ ಎಂದು ಕೆಲ ತಿಂಗಳುಗಳ ಜೈಲಾಯಿತು. ಅಷ್ಟರಲ್ಲಿ ಭಾರತ ಸ್ವಾತಂತ್ರ್ಯಗೊಂಡಿತ್ತು. ನಾನು ಬಿಡುಗಡೆಯೂ ಆದೆ. ಇದೇ ನೋಡು ನನ್ನ ಕಥೆ...' ಎಂದರು ಅಜ್ಜಿ.
ನನ್ನಲ್ಲಿ ಮಾತುಗಳಿರಲಿಲ್ಲ.

(ಮುಗಿಯಿತು)

ಇವರು ಜಗತ್ತಿಗೆ ಶ್ರೀಮಂತರು

(ಕತಾರ್)
ಪ್ರಪಂಚದಲ್ಲಿ ಅಜಮಾಸು 200ಕ್ಕೂ ಅಕ ರಾಷ್ಟ್ರಗಳಿವೆ. ಈ  ರಾಷ್ಟ್ರಗಳಲ್ಲಿ, ಕೆಲವು ಪ್ರತಿ ವರ್ಷ ಬಿಲಿಯನ್, ಟ್ರಿಲಿಯನ್ ಆದಾಯ ಉತ್ಪಾದಿಸುತ್ತವೆ. ಮತ್ತೆ ಕೆಲವು ರಾಷ್ಟ್ರಗಳ ಆದಾಯ ತೀರಾ ಕಡಿಮೆ ಇದೆ. ವಿಶ್ವದಲ್ಲಿ ಅದೆಷ್ಟೋ ರಾಷ್ಟ್ರಗಳು ಶ್ರೀಮಂತವಾದವುಗಳು ಎನ್ನುವ ಹಣೆಪಟ್ಟಿಯನ್ನು ಹೊತ್ತು ನಿಂತಿವೆ. ಮತ್ತೆ ಕೆಲವು ರಾಷ್ಟ್ರಗಳು ತೀರಾ ಬಡ ದೇಶಗಳು ಎಂಬ ಕುಖ್ಯಾತಿ ಗಳಿಸಿಕೊಂಡಿವೆ.
ದೇಶದ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡ ದೇಶಗಳು ಶ್ರೀಮಂತವಾಗಿವೆ. ಮಾನವ ಶಕ್ತಿ ಹಾಗೂ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುವಲ್ಲಿ ವಿಲವಾದ ರಾಷ್ಟ್ರಗಳು ಬಡವಾಗಿವೆ. ಭ್ರಷ್ಟಾಚಾರ, ಸದೃಢ ಆಡಳಿತ ಮುಂತಾದವುಗಳೂ ಕೂಡ ರಾಷ್ಟ್ರಗಳ ಅಭಿವೃದ್ಧಿಗೆ ಕಾರಣವಾಗಿವೆ.

ದೇಶದ ಶ್ರೀಮಂತಿಕೆಯನ್ನು ಅರಿಯಬೇಕಾದರೆ ಆಯಾಯಾ ದೇಶದ ಜಿಡಿಪಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ರಾಷ್ಟ್ರದ ಹಣಕಾಸಿನ ವೌಲ್ಯ, ಒಂದು ನಿಗದಿತ ವಸ್ತುವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಳ್ಳಬಹುದಾದ ಶಕ್ತಿ, ದೇಶಗಳು ಕೊಳ್ಳುವ ಶಕ್ತಿ ಇತ್ಯಾದಿಗಳ ಮೂಲಕ ದೇಶದ ಜಿಡಿಪಿಯನ್ನು ಅರಿಯಲಾಗುತ್ತದೆ. ಈ ಜಿಡಿಪಿಯನ್ನು ಆಧರಿಸಿಕೊಂಡು ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜಾಗತಿಕವಾಗಿ ಯಾವ ದೇಶ ಶ್ರೀಮಂತ, ಯಾವ ದೇಶ ಬಡವಾಗಿದೆ ಎನ್ನುವುದನ್ನು ನಿರ್ಧರಿಸುತ್ತದೆ.
(ಲಕ್ಸೆಂಬರ್ಗ್)
ಸಾಮಾನ್ಯವಾಗಿ ಪೆಟ್ರೂಲಿಯಂ ಉತ್ಪನ್ನಗಳನ್ನು ನಂಬಿರುವ ರಾಷ್ಟ್ರಗಳು ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದೆ. ಜಾಗತಿಕವಾಗಿ ಪೆಟ್ರೂಲಿಯಂ ಉತ್ಪನ್ನಗಳಿಗೆ ಬೇಡಿಕೆ ಬಂದಂತೆ ದೇಶದ ಆದಾಯಗಳೂ ಹೆಚ್ಚುತ್ತ ಹೋಗಿ, ಶ್ರೀಮಂತಿಕೆಯ ಮಟ್ಟ ಕೂಡ ಹೆಚ್ಚಾಗುತ್ತದೆ. ಆದರೆ 2014ರಿಂದ ಸತತವಾಗಿ ಇಳಿಯುತ್ತಾ ಸಾಗಿರುವ ತೈಲಬೆಲೆಯು ಕೊಲ್ಲಿ ರಾಷ್ಟ್ರಗಳ ಜಿಡಿಪಿಯನ್ನು ಬಹುವಾಗಿ ಬಾಧಿಸಿವೆ. ಇದೇ ಹೊತ್ತಿನಲ್ಲಿ ಇತರ ದೇಶಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೊಡಗಿಸಿರುವ ಐರ್ಲೆಂಡ್ ಹಾಗೂ ಐಸ್‌ಲೆಂಡ್ ಮುಂತಾದ ರಾಷ್ಟ್ರಗಳು ಬಂಡವಾಳ ಹಾಗೂ ದೇಶದ ಅಭಿವೃದ್ದಿಯಲ್ಲಿ ಮೂಲಕ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಐಎಂಎಫ್ 2017ರ ಅಕ್ಟೋಬರ್ ತಿಂಗಳಿನಲ್ಲಿ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

1. ಕತಾರ್ (124,930 ಡಾಲರ್)
ಈ ವರ್ಷದ ಶ್ರೀಮಂತ ರಾಷ್ಟ್ರದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಕತಾರ್ ಕೇವಲ 22.7ಲಕ್ಷ ಜನಸಂಖ್ಯೆ ಹೊಂದಿದೆ. ಈ ವರ್ಷದ ಒಟ್ಟಾರೆ ಗಳಿಕೆಯನ್ನು ಹಂಚಿದರೆ ಪ್ರತಿ ನಾಗರಿಕನೂ 124,930 ರಷ್ಟು ಧನವನ್ನು ಪಡೆಯುತ್ತಾನೆ. ಈ ಮಾಹಿತಿಯೇ ಅಗ್ರಸ್ಥಾನ ಪಡೆಯಲು ನೆರವಾಗಿದೆ ಎಂದು ಐಎಂಎಫ್ ವರದಿ ಮಾಡಿದೆ. ತೈಲಬೆಲೆ ಇಳಿದಿದ್ದರೂ ಈ ದೇಶದ ಇನ್ನೊಂದು ಉತ್ಪನ್ನವಾದ, ಪರ್ಯಾಯ ಇಂಧನದ ರೂಪವಾದ ಹೈಡ್ರೋ ಕಾರ್ಬನ್ನುಗಳ ಮಾರಾಟ ಈ ದೇಶದ ಗಳಿಕೆಗೆ ನೆರವಾಗಿದೆ. ಜಿಡಿಪಿಯಲ್ಲಿ ಏರಿಕೆಯು ಈ ವರ್ಷವೂ ಮುಂದುವರೆಯಲಿದೆ ಎಂದು ಐಎಂಎಫ್ ಅಂದಾಜಿಸಿದೆ.
(ಸಿಂಗಾಪುರ)

2. ಲಕ್ಸೆಂಬರ್ಗ್ (109,190 ಡಾಲರ್)
ಕೇವಲ ಆರು ಲಕ್ಷದಷ್ಟು ಜನಸಂಖ್ಯೆ ಇರುವ ಈ ರಾಷ್ಟ್ರ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಎರಡನೆಯ ಸ್ಥಾನ ಪಡೆಯಲು ಇದರ ನಾಗರಿಕರಲ್ಲಿ ಹೆಚ್ಚಿನವರು ಉದ್ಯೋಗಸ್ಥರಾಗಿರುವುದೇ ಕಾರಣವಾಗಿದೆ. 2016ರಲ್ಲಿ ಯೂರೋಪಿಯನ್ ಯೂನಿಯನ್ ನ ಒಟ್ಟಾರೆ ಏಳಿಗೆಗಿಂತಲೂ ಈ ದೇಶ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಶ್ರೀಮಂತಿಕೆ ತುಂಬಿ ತುಳುಕುತ್ತಿದೆ. ಆದರೆ ಬ್ರೆಕ್ಸಿಟ್ ಹಾಗೂ ಇತರ ಧೋರಣೆಗಳಲ್ಲಿ ಬದಲಾವಣೆಗಳಿಂದಾಗಿ ಅಮೇರಿಕಾಕ್ಕೆ ಎದುರಾದಂತೆಯೇ ಈ ದೇಶದ ಮೇಲೂ ಪ್ರಭಾವ ಬೀರಬಹುದೆಂದು ಐಎಂಎಫ್ ಅನುಮಾನ ವ್ಯಕ್ತಪಡಿಸಿದೆ.

(ಬ್ರೂನಿ)
3. ಸಿಂಗಾಪುರ (90,530 ಡಾಲರ್)
ವಿಶ್ವದ ಅತಿ ಶ್ರೀಮಂತ ರಾಷ್ಟವಾಗಲು ಈ 2017ರ ಮೊದಲ ಮೂರು ತಿಂಗಳಲ್ಲಿ ಜಿಡಿಪಿಯಲ್ಲಿ ಸಾಸಿದ 2.7% ರಷ್ಟು ಏರಿಕೆಯನ್ನು ಐಎಂಎಫ್ ಪರಿಗಣಿಸಿದೆ. ಅಜಮಾಸು ಐವತ್ತಾರು ಲಕ್ಷದ ಷ್ಟು ಜನಸಂಖ್ಯೆ ಹೊಂದಿರುವ ಈ ಪುಟ್ಟ ರಾಷ್ಟ್ರ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟದಿಂದ ಸತತ ಅಭಿವೃದ್ಧಿ ಸಾಸಿದ್ದರೂ ಕಳೆದ ವರ್ಷ ಕೊಂಚ ಹಿಂದೆ ಬಿದ್ದಿತ್ತು. ಆದರೆ ಈ ರಾಷ್ಟ್ರ ರ್ತುಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಕಾರಣ ಈ ಮೂಲಕ ಪಡೆಯುವ ಲಾಭ ದೇಶವನ್ನು ಶ್ರೀಮಂತವಾಗಿಸಲು ನೆರವಾಗಿದೆ.

4. ಬ್ರೂನಿ (76,740 ಡಾಲರ್)
2016ರಲ್ಲಿ  ರಾಷ್ಟ್ರೀಯ ಆದಾಯದಲ್ಲಿ ಇಳಿಕೆ ಕಂಡಿದ್ದರೂ ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮವಾಗಿಯೇ ನಿರ್ವಹಿಸಿದೆ ಎಂದು ಜಾಗತಿಕ ಹಣಕಾಸು ನಿ ವರದಿ ಮಾಡಿದೆ. ಕೇವಲ ನಾಲ್ಕು ಲಕ್ಷ ನಾಗರಿಕರಿರುವ ಈ ದೇಶದ ಮುಖ್ಯ ಆದಾಯವಾದ ತೈಲದ ಬೆಲೆ ಕಳೆದ ಎರಡು ವರ್ಷಗಳಿಂದ ಇಳಿಕೆ ಕಂಡಿದೆ. ಆದರೆ ತೈಲ ರಪ್ತು ಇಳಿಕೆಯನ್ನು ಕಂಡಿದೆ. ಇದರಿಂದ ದೇಶದ ಶ್ರೀಮಂತಿಕೆ ಇಳಳಿಮುಖ ಕಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಶೇ. 90ರಷ್ಟು ಆದಾಯ ತೈಲ ಮತ್ತು ನೈಸರ್ಗಿಕ ಅನಿಲದ ಮಾರಾಟದಿಂದ ಬರುತ್ತಿದೆ. 2014ರಲ್ಲಿ ವಿಶ್ವದ ಅತಿ ಹೆಚ್ಚು ಆದಾಯವನ್ನು ಬ್ರೂನಿ ತೈಲ ಮಾರಾಟದಿಂದಲೇ ಗಳಿಸಿತ್ತು.

(ಐರ್ಲ್ಯಾಂಡ್)
5. ಐರ್ಲೆಂಡ್ (72,630 ಡಾಲರ್)
ಯೂರೋಪ್ ನಲ್ಲಿಯೇ ಅತಿ ಹೆಚ್ಚು ಶೀಘ್ರವಾಗಿ ಆರ್ಥಿಕ ಅಭಿವೃದ್ಧಿ ಸಾಸಿರುವ ದೇಶವಾಗಿರುವ ಐರ್ಲೆಂಡ್. ಇದು ಯೂರೋಪಿನ ಪ್ರಮುಖ ಐದು ಶ್ರೀಮಂತ ದೇಶಗಳಲ್ಲಿ ಒಂದು ಎನ್ನಿಸಿಕೊಂಡಿದೆ. 2016ರಲ್ಲಿ ಈ ದೇಶ ಹೂಡಿಕೆ, ಕಟ್ಟಡ ನಿರ್ಮಾಣ ಮುಂತಾದವುಗಳಿಗೆ ಆದ್ಯತೆ ನೀಡಿದೆ. ದೇಶದ ನೈಸರ್ಗಿಕ ಸಂಪತ್ತಿನ ಸದ್ಬಳಕೆಯಿಂದ ಜಿಡಿಪಿ ಏರಿಕೆಯನ್ನು ಕಂಡಿದೆ ಎಂದು ಐಎಂಎ್ ವರದಿ ಮಾಡಿದೆ.

6. ನಾರ್ವೆ (70,590 ಡಾಲರ್)
ಕೇವಲ ಐವತ್ತು ಲಕ್ಷದ ನಾಗರಿಕರಿರುವ ಈ ಸ್ಕಾಂಡಿನೀವಿಯನ್ ದೇಶ ಇದು. ಮ‘್ಯರಾತ್ರಿಯ ಸೂರ್ಯನ ನಾಡು ಎನ್ನುವ ಖ್ಯಾತಿಯೂ ನಾರ್ವೇಗೆ ಇದೆ. ವಿಶ್ವದ ಐದು ಶ್ರೀಮಂತ ರಾಷ್ಟ್ರಗಳ ಪಟ್ಟಿಯಿಂದ ಒಂದೇ ಹಂತ ದೂರದಲ್ಲಿದೆ. ಐಎಂಎ್ ಪ್ರಕಾರ ಕೆಳೆದ ಎರಡು ವರ್ಷಗಳಲ್ಲಿ ತೈಲಬೆಲೆ ಇಳಿಕೆಯಿಂದ ಪ್ರ‘ಾವಗೊಂಡಿತ್ತು. 2008 ಮತ್ತು 2009ರ ಆರ್ಥಿಕ ಹಿಂಜರಿತದಿಂದಲೂ ಈ ದೇಶ ನಲುಗಿತ್ತು. ಆದರೆ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು  ಮತ್ತು ನಿರುದ್ಯೋಗ ಕಡಿಮೆ ಮಾಡಲು ಕೈಗೊಂಡ ಪ್ರಯತ್ನಗಳು ಈ ದೇಶವನ್ನು ಮತ್ತೊಮ್ಮೆ  ಜಾಗತಿಕ ಶ್ರೀಮಂತ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದೆ.

(ನಾರ್ವೇ)
7. ಕುವೈತ್ ( 69,670 ಡಾಲರ್)
ಅಜಮಾಸು ನಲವತ್ತು ಲಕ್ಷಗಳಷ್ಟು ಜನಸಂಖ್ಯೆಯನ್ನು ಹೊಂದಿರುವ  ಈ ದೇಶಕ್ಕೆ ತೈಲಮಾರಾಟವೇ ಪ್ರಮುಖ ಆದಾಯವಾಗಿತ್ತು. 2016ರಲ್ಲಿ ಇಳಿಕೆಯಾದ ತೈಲಬೆಲೆ ದೇಶದ ಆರ್ಥಿಕತೆಯ ಮೇಲೆ ಪ್ರ‘ಾವ ಬೀರಿತ್ತು ಎಂದು ಐಎಂಎ್ ವರದಿ ತಿಳಿಸುತ್ತದೆ. ಆದರೆ ತೈಲದ ಹೊರತಾಗಿ ಇತರ ಕ್ಷೇತ್ರಗಳಲ್ಲಿ ದೇಶ ಹೂಡಿದ ಹೂಡಿಕೆ ಈ ಹಿಂಜರಿಕೆಯಿಂದ ಹೊರಬರಲು ನೆರವಾಗಿದೆ ಹಾಗೂ ನೆರವಾಗುತ್ತಿದೆ.

8. ಸಂಯುಕ್ತ ಅರಬ್ ಸಂಸ್ಥಾನ (68,250 ಡಾಲರ್)
ತೈಲಬೆಲೆ ಹೆಚ್ಚಿದ್ದಾಗ ವಿಶ್ವದ ಶ್ರೀಮಂತ ರಾಷ್ಟ್ರವಾಗಿದ್ದ ಯು.ಎ.ಇ. ತೈಲಮಾರುಕಟ್ಟೆಯಲ್ಲಿ ಆಗಿರುವ ಇಳಿಕೆಯಿಂದ 2016ರಲ್ಲಿ ಪಟ್ಟಿಯಲ್ಲಿ ಕೆಳಗಿಳಿಯಬೇಕಿತ್ತು. ಆದರೆ ಈ ರಾಷ್ಟ್ರ ತೈಲದ ಮೇಲಿನ ಅವಲಂಬನೆಯಿಂದ ಹೊರಬರಲು 1994ರಲ್ಲಿ ಕೈಗೊಂಡಿದ್ದ ಕ್ರಮಗಳ ಪರಿಣಾಮವಾಗಿ ಇತರ ಕ್ಷೇತ್ರಗಳ ಮೇಲೆ ಹೂಡಿದ್ದ ಹೂಡಿಕೆಗಳು ಇಂದು ಲನೀಡುತ್ತಿದ್ದು ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಇಂದಿಗೂ ಸ್ಥಾನ ಪಡೆಯುವಂತಾಗಿದೆ. ಸುಮಾರು ಒಂದು ಕೋಟಿಯಷ್ಟು ನಾಗರಿಕರು ವಿಶ್ವದ ಅತ್ಯಂತ ಉನ್ನತ ಮಟ್ಟದ ಜೀವನವನ್ನು ನಡೆಸುತ್ತಿದ್ದಾರೆ. ಈ ಏರಿಕೆ 2017ರಲ್ಲಿ ಮುಂದುವರೆಯುತ್ತಾ ಸಾಗಿದೆ.

(ಕುವೈತ್)
9. ಸ್ವಿಟ್ಝರ್ಲೆಂಡ್ (61,360 ಡಾಲರ್)
2015ರಲ್ಲಿ ಈ ದೇಶದ ಕೇಂದ್ರೀಯ ಬ್ಯಾಂಕ್ 52 ಬಿಲಿಯಲ್ ಡಾಲರುಗಳನ್ನು ಕಳೆದುಕೊಂಡ ಬಳಿಕ ಈಗ ಚೇತರಿಕೆಯ ಹಂತದಲ್ಲಿದೆ. 2016ರಲ್ಲಿ ನಿ‘ಾನವಾಗಿ ಚೇತರಿಸಿಕೊಳ್ಳುತ್ತಿರುವ ಈ ದೇಶ ಕಳೆದ ವರ್ಷ ಶೇ.1.5ನಷ್ಟು ಪ್ರಗತಿ ಸಾಸಿದೆ. ಅಲ್ಲದೇ ಈ ಹಿಂಜರಿತದಿಂದ ಹೊರಬರಲು ನಡೆಸುತ್ತಿರುವ ಪ್ರಯತ್ನಗಳು ಎಂಭತ್ತು ಲಕ್ಷ ಜನಸಂಖ್ಯೆಯ ಈ ದೇಶವನ್ನು ನಿಧಾನ ಹಿಂದಿನ ವೈಭವಕ್ಕೆ ಮರಳಿಸುತ್ತಿವೆ.

10. ಹಾಂಗ್‌ಕಾಂಗ್ (61,020 ಡಾಲರ್)
 ಐಎಂಎ್ ನೀಡಿರುವ ವರದಿಯ ಪ್ರಕಾರ 2016ರಲ್ಲಿ ಈ ದೇಶದ ಪ್ರಗತಿಯ ಗತಿ ನಿ‘ಾನವಾಗಿತ್ತು. ಆದರೂ ಈ ದೇಶ ಪಟ್ಟಿಯಲ್ಲಿ ಕೊಂಚ ಕೆಳಕ್ಕೆ ಇಳಿದಿರಬಹುದೇ ಹೊರತು ಹೊರಬಿದ್ದಿಲ್ಲ. ಇಂದಿಗೂ ಈ ದೇಶ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿದೆ. ಕಳೆದ ವರ್ಷ ನೆರೆಯ ಚೀನಾದಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಹಾಗೂ ದೇಶದ ಉತ್ಪನ್ನಗಳನ್ನು ಕೊಳ್ಳುವಿಕೆಯೂ ಕಡಿಮೆಯಾದ ಕಾರಣ ಹಿಂಜರಿತಕ್ಕೆ ಒಳಗಾಗಿತ್ತು. ಆದರೆ ಈ ವರ್ಷ ವಿವಿ‘ ಕ್ಷೇತ್ರಗಳಲ್ಲಿ ಹೂಡಿರುವ ಹೂಡಿಕೆಯ ಮೂಲಕ ಮತ್ತೊಮ್ಮೆ ಏರುಮುಖದತ್ತ ಸಾಗುತ್ತಿದೆ. ಪುಟ್ಟ ರಾಷ್ಟ್ರವಾಗಿದ್ದರೂ ಇದರ ಎಪ್ಪತ್ತು ಲಕ್ಷ ಜನರು ವಾಸವಾಗಿದ್ದು ಜಗತ್ತಿನ ಅತಿ ಹೆಚ್ಚಿನ ಜನಸಾಂದ್ರತೆ ಹೊಂದಿರುವ ದೇಶವಾಗಿದೆ.

(ಯುಎಇ)
11. ಸ್ಯಾನ್ ಮಾರಿನೋ (60,360 ಡಾಲರ್)
ಕೇವಲ ತೊಂ‘ತ್ತು ಲಕ್ಷ ಜನಸಂಖ್ಯೆ ಇರುವ ಈ ಪುಟ್ಟ ರಾಷ್ಟ್ರದಲ್ಲಿ ನಿರುದ್ಯೋಗ ನಿವಾರಣೆಗೆ ನೀಡಿರುವ ಹೆಚ್ಚಿನ ಒತ್ತು ಹಾಗೂ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ದೇಶದ ಏಳಿಗೆಗೆ ನೆರವಾಗಿದೆ. ಆರ್ಥಿಕ ಹಿಂಜರಿತದಿಂದ ನಲುಗಿದ್ದ ರಾಷ್ಟ್ರಕ್ಕೆ ಈ ಪ್ರಯತ್ನಗಳೇ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣವಾಗಿವೆ.

12. ಅಮೇರಿಕಾ ಸಂಯುಕ್ತ ಸಂಸ್ಥಾನ (59,500 ಡಾಲರ್) ಐಎಂಎ್ ಪ್ರಕಾರ, ಈ ವಿಶಾಲ ದೇಶದಲ್ಲಿ 32.5 ಕೋಟಿ ಜನರಿದ್ದು 1850ರಿಂದ ಈ ದೇಶ ಪಡೆದ ಅಗಾ‘ ಬೆಳವಣಿಗೆ ಹಾಗೂ ವಿಸ್ತರಣೆ ವಿಶ್ವದಲ್ಲಿಯೇ ಅಪ್ರತಿಮವಾಗಿದ್ದು ಈ ಬೆಳವಣಿಗೆ ಇಂದಿಗೂ ಮುಂದುವರೆಯುತ್ತಿದೆ. 2016ರ ಐಎಂಎ್ ವರದಿಯ ಪ್ರಕಾರ ಈ ದೇಶದಲ್ಲಿ ನಿರುದ್ಯೋಗ ಅತಿ ಕಡಿಮೆ ಇದ್ದು ವಿವಿ‘ ಕ್ಷೇತ್ರಗಳಲ್ಲಿ ಹೂಡಿರುವ ಬಂಡವಾಳ ಹಾಗೂ ಖರ್ಚು ಮಾಡುವ ಶಕ್ತಿ ಈ ದೇಶದ ಏಳ್ಗೆಗೆ ನೆರವಾಗುತ್ತಿವೆ.

(ಸ್ವಿಟ್ಜರ್ಲ್ಯೆಂಡ್)
13. ಸೌದಿ ಅರೇಬಿಯಾ (55,260 ಡಾಲರ್)
ಈ ದೇಶದ ಜಿಡಿಪಿ ಬಹುತೇಕವಾಗಿ ತೈಲದ ಮಾರಾಟವನ್ನೇ ಆಧರಿಸಿದೆ. ಇತ್ತೀಚಿನ ತೈಲಬೆಲೆಯಲ್ಲಿ ಕುಸಿತದ ಬಳಿಕ ಇತರ ಕ್ಷೇತ್ರಗಳಲ್ಲಿಯೂ ದೇಶ ಹೂಡಿರುವ ಹಣವನ್ನು ಪರಿಗಣಿಸಿ ಐಎಂಎಫ್ ಮುಂದಿನ ವರ್ಷಗಳಲ್ಲಿ ಪಡೆಯಬಹುದಾದ ಏಳಿಗೆಯನ್ನೂ ಮುಂಗಂಡು ಈ ಪಟ್ಟಿಯಲ್ಲಿ ಸ್ಥಾನ ನೀಡಿದೆ. 3.2 ಕೋಟಿ ಜನಸಂಖ್ಯೆಯ ಈ ದೇಶ ಈಗ ವಿಷನ್ 2030 ಅಥವಾ 2030ರಲ್ಲಿ ದೇಶ ಪಡೆಯಬೇಕಾದ ಏಳ್ಗೆಗಾಗಿ ಇಂದಿನ ಕ್ರಮಗಳನ್ನು ಹೊರಡಿಸಿದ್ದು ನಿ‘ಾನವಾಗಿ ತೈಲದ ಮೇಲಿನ ಅವಲಂಬನೆಯಿಂದ ಹೊರಬರುವ ಪ್ರಯತ್ನಗಳನ್ನು ನಡೆಸುತ್ತಿದೆ. ಇದೀಗ ದೇಶದ ಚುಕ್ಕಾಣಿ ಹಿಡಿದಿರುವವರ ಮನಸ್ಥಿತಿ ಆಧುನಿಕ ದೇಶ ನಿರ್ಮಾಣ ಮಾಡುವುದರತ್ತ ಒಲವು ಹೊಂದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸೌದಿ ಅರೆಬಿಯಾ ಇನ್ನಷ್ಟು ಆದಾಯ ಗಳಿಕೆ ಮಾಡಿಕೊಂಡು, ತನ್ನ ಸ್ಥಾನದಲ್ಲಿ ಏರಿಕೆಯನ್ನು ಕಂಡರೂ ಅಚ್ಚರಿ ಪಡಬೇಕಿಲ್ಲಘಿ.

14. ನೆದರ್ಲ್ಯಾಂಡ್ಸ್ (53,580 ಡಾಲರ್)
2016ರ ಅಂಕಿ ಅಂಶಗಳ ವರದಿಯನ್ನು ಗಮನಿಸಿದ ಐಎಂಎ್ ಹಿಂದಿನ ವರ್ಷಗಳಲ್ಲಿ ಎದುರಾಗಿದ್ದ ಆರ್ಥಿಕ ಹಿಂಜರಿತವನ್ನು ಎದುರಿಸಿ ಮುಂದೆ ಬರುವ ಪ್ರಯತ್ನ ಹಾಗೂ ಬ್ರೆಕ್ಸಿಟ್ ಒಪ್ಪಂದದ ಮೂಲಕ ದೇಶದ ಆರ್ಥಿಕತೆಗೆ ಎದುರಾಗಿದ್ದ ಕಂಟಕದಿಂದ ಪಾರಾಗುವ ಕ್ರಮಗಳನ್ನೂ ಪರಿಗಣಿಸಿದೆ. ನೆದರ್ಲ್ಯಾಂಡ್ಸ್ ವಾಸ್ತವವಾಗಿ ನೆದರ್ಲ್ಯಾಂಡ್ಸ್, ಅರೂಬಾ, ಕುರಾಕಾವೋ ಹಾಗೂ ಸೈಂಟ್ ಮಾರ್ಟೆನ್ ಎಂಬ ನಾಲ್ಕು ದೇಶಗಳನ್ನು ಸಂಯುಕ್ತವಾಗಿ ನೆದರ್ಲ್ಯಾಂಡ್ಸ್ ಅಪತ್ಯ ಎಂದು ಕರೆಯಲಾಗುತ್ತದೆ. ಡೆನ್ಮಾರ್ಕ್ ಎಂಬ ಹೆಸರೂ ಈ ದೇಶಕ್ಕಿದೆ. ಈ ದೇಶದ ಒಟ್ಟಾರೆ ಜನಸಂಖ್ಯೆ ಕೇವಲ 1.7 ಕೋಟಿ. ಇವರಲ್ಲಿ ಹೆಚ್ಚಿನವರು ನೆದರ್ಲ್ಯಾಂಡ್ಸ್‌ನ ಪ್ರಮುಖ ದ್ವೀಪದಲ್ಲಿಯೇ ನೆಲೆಸಿದ್ದಾರೆ.

(ಹಾಂಗ್ ಕಾಂಗ್)
15. ಐಸ್‌ಲ್ಯಾಂಡ್ (52,150 ಡಾಲರ್)
ಹೆಸರೇ ಸೂಚಿಸುವಂತೆ ಈ ರಾಷ್ಟ್ರ ಅತಿ ಶೀತಲವಾದ ಪ್ರದೇಶ ಹೊಂದಿದೆ. ದೇಶದ ಎತ್ತ ನೋಡಿದರೂ ಹಿಮವೇ ಆವೃತ್ತವಾಗಿದೆ. ದೇಶದಾದ್ಯಂತ ಇರುವ ಮಂಜೇ ಈ ದೇಶದ ಪ್ರಮುಖ ಆದಾಯ. ಈ ಹಿಮವನ್ನೇ ಪ್ರವಾಸೋದ್ಯಮಕ್ಕೆ ಬಳಸುವ ಮೂಲಕ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ದೇಶದ ಜಿಡಿಪಿ ಏರಲು ಬಳಸಿಕೊಂಡಿದೆ. ಈ ಪುಟ್ಟ ರಾಷ್ಟ್ರವನ್ನು ವೀಕ್ಷಣೆ ಮಾಡಲು ತೆರಳುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ತನ್ಮೂಲಕ ಆದಾಯ ಕೂಡ ಹೆಚ್ಚಳವಾಗುತ್ತಿದೆ. ಈ ಏಳಿಗೆಯನ್ನು ಗಮನಿಸಿದ ಐಎಂಎ್ ಅಂಕಿ ಅಂಶಗಳ ಆಧಾರದ ಮೇಲೆ ಈ ಬೆಳವಣಿಗೆ ಹೆಚ್ಚಿನ ಅವಯವರೆಗೆ ಮುಂದುವರೆಯಲಿದೆ ಎಂದು ಊಹಿಸಿ ಹದಿನೈದನೆಯ ಸ್ಥಾನವನ್ನು ನೀಡಿದೆ.