ನಮ್ಮ ನಡುವೆ ಅನೇಕ ಪ್ರತಿಭಾವಂತರಿದ್ದಾರೆ. ತೆರೆಮರೆಯಲ್ಲಿ ಸದ್ದಿಲ್ಲದೇ ತಮ್ಮೊಳಗಿನ ಪ್ರತಿಭೆಯನ್ನು ಪೋಷಿಕೊಂಡು ಬರುತ್ತಿರುವವರು ಹಲವರು. ಪೇಪರ್ ಕಟಿಂಗ್ ಹಾಗೂ ಕ್ವಿಲ್ಲಿಂಗ್ ಪೇಪರ್ ಮೂಲಕ ಕಲಾಕೃತಿಗಳನ್ನು ಮಾಡುತ್ತ ತಮ್ಮೊಳಗಿನ ಪ್ರತಿಭೆಯನ್ನು ಅನಾವರಣ ಮಾಡುವವರೊಬ್ಬರು ಇಲ್ಲಿದ್ದಾರೆ. ಅವರೇ ನಿವೇದಿತಾ ಭಟ್ಟ.
ಸಣ್ಣಳ್ಳಿ ಮೂಲದವರಾದ ನಿವೇದಿತಾ ಭಟ್ಟ ಅವರು ಚಿಕ್ಕಂದಿನಿಂದ ಒಂದಲ್ಲ ಒಂದು ಕ್ರಿಯಾಶೀಲ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದವರು. ಕಸದಿಂದ ರಸ ತಯಾರಿಕೆಯಲ್ಲಿ ನಿವೇದಿತಾ ಭಟ್ಟರು ಕೈಚಳಕ ತೋರುತ್ತಿದ್ದಾರೆ. ನಮ್ಮ ನಡುವೆ ಹಾಳಾಗುವ ವಸ್ತುಗಳನ್ನೇ ಬಳಕೆ ಮಾಡುವ ಮೂಲಕ ಸಂಗ್ರಾಹ್ಯ ವಸ್ತುಗಳನ್ನು, ಗಿಫ್ಟ್ ಗಳನ್ನು ತಯಾರಿಸುತ್ತಿದ್ದಾರೆ. ತಮ್ಮ ಐದನೇ ಕ್ಲಾಸಿನಿಂದಲೇ ಈ ಕಾರ್ಯವನ್ನು ಕೈಗೊಳ್ಳುತ್ತ ಬಂದಿರುವ ನಿವೇದಿತಾ ಅವರ ಮನೆಯಲ್ಲಿ ಅದೆಷ್ಟೋ ಬಗೆ ಬಗೆಯ ಹೂದಾನಿಗಳು, ಸಿರಾಮಿಕ್ ಪ್ಲೇಟ್ಗಳು, ಕ್ವಿಲ್ಲಿಂಗ್ ಪೇಪರ್ ಕಲಾಕೃತಿಗಳು, ಗೋಡೆಗೆ ತೂಗುಹಾಕುವ ವಸ್ತುಗಳಿವೆ.
ನಿವೇದಿತಾ ಅವರು ಅಡಿಕೆ ಹಾಳೆಯಿಂದ ಹೂವನ್ನು ತಯಾರಿಸುತ್ತಾರೆ. ಬಾಳೆಪಟ್ಟೆಯಿಂದ ಸುಂದರ ಕಲಾಕೃತಿಗಳನ್ನು ತಯಾರು ಮಾಡುತ್ತಾರೆ. ಹಲಸಿನ ಹಣ್ಣನ್ನು ತಿಂದ ನಂತರ ಒಗೆಯಲಾಗುವ ಹಲಸಿನ ಹಣ್ಣಿನ ಬೇಳೆ (ಬೀಜ)ದಿಂದ ಬಗೆ ಬಗೆಯ ಹಕ್ಕಿಗಳು ಸೇರಿದಂತೆ ಹಲವಾರು ಕಲಾಕೃತಿಗಳನ್ನು ಅವರು ತಯಾರು ಮಾಡುತ್ತಾರೆ. ವೆಲ್ವೆಟ್ ಬಟ್ಟೆಯಿಂದ ವಿವಿಧ ಕಲಾಕರತಿಗಳು, ಕ್ವಿಲ್ಲಿಂಗ್ ಪೇಪರ್ ರಚನೆಗಳನ್ನು ಮಾಡುವ ನಿವೇದಿತಾ ಅವರು ಇದೀಗ ಮದುವೆ ಮಂಟಪಕ್ಕೆ ವೆಲ್ವಟ್ ಬಟ್ಟೆ ಹಾಗೂ ಕ್ವಿಲ್ಲಿಂಗ್ ಪೇಪರ್ ಮೂಲಕ ಹೊಸ ಬಗೆಯ ರಚನೆಯನ್ನು ತಯಾರು ಮಾಡುತ್ತಿದ್ದಾರೆ. ಮದುವೆ ಮಂಟಪಕ್ಕೆ ಇದೇ ಮೊಟ್ಟ ಮೊದಲ ಬಾರಿಗೆ ವೆಲ್ವೆಟ್ ಬಟ್ಟೆ ಹಾಗೂ ಕ್ವಿಲ್ಲಿಂಗ್ ಪೇಪರ್ ಬಳಕೆ ಮಾಡಿ ಹೊಸ ಬಗೆಯ ವಿನ್ಯಾಸ ರೂಪಿಸುವತ್ತ ಇವರು ಗಮನ ಹರಿಸಿದ್ದಾರೆ.
ಎಂಕಾಂ ಓದುತ್ತಿರುವ ನಿವೇದಿತಾ ಭಟ್ ಹಲವು ಬಗೆಯ ಕರ್ಚೀಫ್ ವರ್ಕ್ ಗಳನ್ನು ಕೈಗೊಂಡಿದ್ದಾರೆ. ಕರ್ಚೀಪ್ ಮೇಲೆ ಸರಸರನೆ ಬಗೆ ಬಗೆಯ ರಚನೆಗಳನ್ನು ಮೂಡಿಸುವ ಇವರಿಗೆ ಕಲಾದೇವಿ ಒಲಿದಿದ್ದಾಳೆ ಎಂದರೆ ತಪ್ಪಾಗಲಿಕ್ಕಿಲ್ಲ. ಬಾಯಾರಿಕೆಯಾದಾಗ ಕುಡಿಯುವ ಸಾಫ್ಟ್ ಡ್ರಿಂಕ್ಸ್ ಬಾಟಲಿಗಳು ಹಾಗೂ ಆ ಬಾಟಲಿಗಳ ಮುಚ್ಚಳಗಳನ್ನು ಒಗೆಯದೇ ಅದರಿಂದ ವಿಶಿಷ್ಟ ಬಗೆಯ ಕಲಾಕೃತಿಗಳನ್ನು ತಯಾರಿಸುವಲ್ಲಿ ನಿವೇದಿತಾ ಸಿದ್ಧಹಸ್ತರು. ಡ್ರಾಯಿಂಗ್ ಶೀಟ್ ಕೆಲಸಗಳು ಹಾಗೂ ಗ್ಲಾಸ್ ಪೇಂಟಿಂಗ್ಗಳನ್ನೂ ಇವರು ಕೈಗೊಳ್ಳುತ್ತಾರೆ.
ಬಾಲ್ಯದಲ್ಲಿ ಹವ್ಯಾಸಿಯಾಗಿ ರಚನೆ ಮಾಡುತ್ತಿದ್ದೆ. ಚಿಕ್ಕಂದಿನಲ್ಲಿ ಯಾವುದಾದರೂ ಸ್ಪರ್ಧೆಗಳಿಗೆ ನಾನೇ ಕಲಾಕೃತಿಗಳನ್ನು ತಯಾರು ಮಾಡುತ್ತಿದ್ದೆ. ಇವುಗಳಿಗೆ ಬಹುಮಾನಗಳೂ ಬಂದಿದ್ದವು. ಈಗ ಈ ಕುರಿತು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿ, ಮಾಹಿತಿಯನ್ನು ಪಡೆದು ಹೊಸ ಹೊಸ ಕಲಾಕೃತಿ ತಯಾರು ಮಾಡುವತ್ತ ಪ್ರಯತ್ನಿಸುತ್ತಿದ್ದೇನೆ. ಹಿರಿಯರ ಕಲಾಕೃತಿಗಳನ್ನೂ ಗಮನಿಸಿ, ಅಂತರ್ಜಾಲದ ಕಲಾಕೃತಿಗಳನ್ನು ಮನಸ್ಸಿನಲ್ಲಿಟ್ಟು, ನನ್ನದೇ ಆದ ಹೊಸ ಬಗೆಯ ಕಲಾಕೃತಿಗಳನ್ನು ತಯಾರು ಮಾಡುತ್ತಿದ್ದೇನೆ. ಇಂತಹ ಪ್ರತಿಭೆಗೆ ತಮ್ಮ ತಾಯಿಯವರಾದ ಗೀತಾ ಭಟ್ಟರೇ ಸ್ಪೂರ್ತಿ ಎಂದು ಹೇಳುವ ನಿವೇದಿತಾ ಭಟ್ಟರು ಸಿರಾಮಿಕ್ ವರ್ಕ್ಸ್ ಮಾಡುವುದರಲ್ಲೂ ಸಿದ್ಧಹಸ್ತರು. ಸಿರಾಮಿಕ್ ಮೂಲಕ ಗಣಪತಿ ಸೇರಿದಂತೆ ಗೋಡೆಗೆ ತೂಗು ಹಾಕುವ ಅನೇಕ ರಚನೆಗಳನ್ನು ಮಾಡಿದ್ದಾರೆ.
2014ರಲ್ಲಿ ತಾಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ನಡೆದ ಕೃಷಿ ಜಯಂತಿಯಲ್ಲಿ ಸ್ಥಳದಲ್ಲಿಯೇ ವಸ್ತು ತಯಾರಿಕೆಯಲ್ಲಿ ಮೊದಲ ಸ್ಥಾನ ಪಡೆದಿರುವ ನಿವೇದಿತಾ ಭಟ್ಟರಿಗೆ ಮುಂದಿನ ದಿನಗಳಲ್ಲಿ ಇಂತಹ ರಚನೆಗಳನ್ನು ತಯಾರು ಮಾಡುವ ಬಗ್ಗೆ ಆಸಕ್ತರಿಗೆ ತರಗತಿಗಳನ್ನು ನಡೆಸುವ ಆಲೋಚನೆಯೂ ಇದೆ. ಓದಿನ ಜೊತೆ ಜೊತೆಯಲ್ಲಿ ಹವ್ಯಾಸವಾಗಿ ಬೆಳೆಸಿಕೊಂಡು ಬಂದಿರುವ ಇಂತಹ ಪ್ರತಿಭೆಯನ್ನು ಮುಂದಿನ ದಿನಗಳಲ್ಲಿ ಆದಾಯದ ಮೂಲವನ್ನಾಗಿ ಮಾಡಿಕೊಳ್ಳುವ ಆಲೋಚನೆಯೂ ಇದೆ. ಓದಿನಲ್ಲಿಯೂ ಮುಂದಿರುವ ನಿವೇದಿತಾ ಅವರು ಕಾಲೇಜು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ.
ಪೇಪರ್ ವರ್ಕ್ ಹಾಗೂ ವಿಶಿಷ್ಟ ಕಲಾಕೃತಿಗಳನ್ನು ತಯಾರು ಮಾಡುವ ನಿವೇದಿತಾ ಅವರನ್ನು 948190**49 ಈ ದೂರವಾಣಿಯ ಮೂಲಕ ಸಂಪರ್ಕಿಸಬಹುದಾಗಿದೆ. ಇಂತಹ ತೆರೆಮರೆಯ ಪ್ರತಿಭೆಗಳು ಅದೆಷ್ಟೋ ಇವೆ. ಇಂತಹ ಪ್ರತಿಭೆಗಳಿಗೆ ಮತ್ತಷ್ಟು ಬೆಲೆ ಸಿಗಬೇಕಾದ ಅಗತ್ಯವಿದೆ. ಸಮಾಜ ಇಂತಹ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಬೆಲೆ ನೀಡಿದರೆ ಅವರೊಳಗಿನ ಪ್ರತಿಭೆಗೂ ಬೆಲೆ ಸಿಗಬಹುದಾಗಿದೆ.

No comments:
Post a Comment