Friday, August 1, 2014

ಹುರುಪು


ಕಳೆದು ಹೋಗಲಾರೆ ನಾನು
ಮತ್ತೆ ಮತ್ತೆ ಹುಟ್ಟುವೆ
ಹೊಸ ಚೇತನದುತ್ಸಾಹದಿ
ಜಗದ ಮೇರು ಮುಟ್ಟುವೆ |

ನವನವೀನ ಭಾವಗಳನು
ಮನಸಲ್ಲಿ ತುಂಬುವೆ
ಕಳೆದು ಹೋಗದಂತೆ ನಾನು
ಶರದಿಯತ್ತ ಜಿಗಿಯುವೆ |

ಪ್ರೀತಿ ಸ್ನೇಹ ತ್ಯಾಗ ಮೋಹ
ಕೂಡಿಕೊಂಡು ಬಾಳುವೆ
ಕಳಚಿದರೂ ಕೂಡಿದರೂ
ಮನದ ತುಂಬ ಒಲವೇ |

ರಾಶಿ ರಾಶಿ ಕನಸುಗಳನು
ಬೊಗಸೆಯಲ್ಲಿ ಹಿಡಿಯುವೆ
ಕಳೆದುಕೊಳ್ಳಲಾಗದಂತೆ
ಕೂಡಿಟ್ಟು ಪಡೆಯುವೆ |

ಬದುಕಿನಲ್ಲಿ ಕುಗ್ಗಿದರೂ
ಮತ್ತೆ ಮತ್ತೆ ಗೆಲ್ಲುವೆ
ಗೆಲುವೆಂಬ ಕುದುರೆಯನು
ಹತ್ತಿ ಓಟ ಓಡುವೆ  |



**
(ಈ ಕವಿತೆಯನ್ನು ಬರೆದಿರುವುದು 1-08-2014ರಂದು ಶಿರಸಿಯಲ್ಲಿ)

No comments:

Post a Comment