Thursday, October 1, 2009

ಎಲ್ಲ ಮರೆತಿರುವಾಗ (ಕಥೆ- ಭಾಗ - ೩)

(ಎರಡನೇ ಭಾಗದಿಂದ )
.....ಅವಳಿಗೆ ಮನೆಗೆ ಹೋದರು ಅದೇ ನೆನಪು.
ಅವನ್ಯಾರೋ... ಅವನೇಕೆ ಹಾಗೋ..ಅಂತ..
ಯಾಕೋ ಆಕೆಗೆ ಅಂದುಕೊಂಡ ಪ್ರಾಜೆಕ್ಟ್ ಕೆಲಸ ಮಾಡಲು
ಆಗಲೇ ಇಲ್ಲ..
ಮತ್ತೆ ಮರಳಿ ಶಿರಸಿಗೆ ಬಂದಳು.. ಊರಿನಿಂದ..
ಜೊತೆಗೆ ತನ್ನ ಗೆಳತಿ ಕವಿತಳನ್ನು ಕರೆದುಕೊಂಡು ಬಂದಿದ್ದಳು..
ಶಿರಸಿಗೆ ಬಂದವಳು ಮೊದಲು ಮಡಿದ ಕೆಲಸವೆಂದರೆ ಆ ಹಾಡುಗಾರ
ಹುಚ್ಚನನ್ನು ಹುಡುಕಿದ್ದು.. ಆದರೆ ಆತ ಆ ಬಸ್ ಸ್ಟ್ಯಾಂಡ್ ನಲ್ಲಿ ಸಿಗಲೇ ಇಲ್ಲ..
ಎಲ್ಲಿ ಹೋದನೋ ಅಂದುಕೊಂಡು ಮರಳಿದಳು..
ಯಾರೇ? ಎಂದು ಕೇಳಿದ ಕವಿತಾಳಿಗೆ ಏನೋ ಸಬೂಬು ಹೇಳಿದಳು ರಚನಾ .
................................................................................................
ರಚನ ಗೆ ಇತ್ತೀಚಿಗೆ ಅದೇ ಆಲೋಚನೆ.. ತಾನ್ಯಾಕೆ ಅವನ ಬಗ್ಗೆ ಆಲೋಚಿಸುತ್ತಿದ್ದೇನೆ..ಅಂತ..
ಹೀಗಿರಲು, ಒಮ್ಮೆ ಅವಳಿಗೆ ಬೋರಾಗಿದ್ದಾಗ ಸಿಕ್ಕ ಪ್ತ್ರಿಕೆಯೋಮ್ದರಲ್ಲಿ ಕನ್ನದಿಸುತ್ತಿದ್ದಾಗ
ಅವನ ಫೋಟೋ ಅಕಸ್ಮಾತ್ತಾಗಿ ಕಂಡಿತು. ಅಚ್ಚರಿಯಿಂದ ಓದಿದವಳಿಗೆ ಗೊತ್ತದದ್ದೇನೆಮದರೆ
ಆತ ಹಿಂದೊಮ್ಮೆ ರಾಜ್ಯ ಮಟ್ಟದ ಹಾಡುಗಾರ ಆಗಿದ್ದ ಎಂಬುದು..
ಯಾರೋ ವರದಿಗಾರ ಆತನ ಬಗ್ಗೆ ವರದಿ ಮಾಡಿದ್ದ.. ಈಗಂತೂ ಅವನೆಡೆಗಿದ್ದ ಕುತೂಹಲ
ಇಮ್ಮಡಿಸಿತು... ಅರೆ ರಾಜ್ಯ ಮಟ್ಟದ ಹಾಡುಗಾರ ಹುಚ್ಚನೇಕೆ ಆದ?
ಯಾಕೋ ಅವಳಿಗೆ ಕುಮಾರ ಗಂಧರ್ವ ನೆನಪಿಗೆ ಬಂದರು..
ಆತ ಹಾಗೆ ಆಗಲು ಇನ್ನೇನೋ ಕಾರಣವಿದೆ ಅನ್ನಿಸಿತು ಅವಳಿಗೆ...
ಮತ್ತೆ ಆತನನ್ನು ಹುಡುಕಲು ಹೊರಟಳು..
ಅಂತು ಶಿರಸಿ ಪೇಟೆಯ ಗಲ್ಲಿ ಗಲ್ಲಿಯನ್ನು ಹುಡುಕಿದ ಮೇಲೆ ಅಲ್ಲೆಲ್ಲೋ ಆತ ಸಿಕ್ಕ.

(ಮುಂದುವರಿಯುವುದು...............)

Tuesday, September 29, 2009

ಎಲ್ಲ ಮರೆತಿರುವಾಗ (ಕಥೆ -ಭಾಗ 2)


( ಮೊದಲ ಭಾಗದಿಂದ)
...... ಯಾಕೋ ಆಕೆಗೆ ತುಂಬ ಕುತೂಹಲವಾಯಿತು..
ಆತ ಇನ್ನೂ ಹಾಡುತ್ತಲೇ ಇದ್ದ.. ಧ್ವನಿ ಮಧುರವಾಗಿತ್ತು..
ಏನೋ ಗುಂಗು.. ಈಕೆ ಬಸಿನಲ್ಲಿ ಕುಳಿತೆ ಆತ ಹಾಡುವುದನ್ನು ನೋಡುತ್ತಿದ್ದಳು..
ಆತ ಹಾಡುತ್ತಿದ್ದ, ಅಸ್ಟೇ ಅಲ್ಲ ಬೇಡುತ್ತಿದ್ದ..
ಹಲವು ಯುವಕರು ಅವನನ್ನು ಗೋಳು ಹೊಯ್ದುಕೊಳ್ಳುತ್ತಿದ್ದರು ..
ಈಕೆಗೆ ಪಾಪ ಅನ್ನಿಸಿತು. ಒಂದೆ ವಯಸ್ಸು ಮನಸ್ಸು ಮಾತ್ರ ಸರಿ ಇಲ್ಲ.
ಸರಿ ಇದ್ದಿದ್ದರೆ ಈತನೂ ಹಗೆ ಇತರರನ್ನು ಚುದಯಿಸುತ್ತಿದ್ದನೇನೋ..
ಬಲವಿಲ್ಲದವನು ಬದುಕಲಾರ ಎಂಬ ಚಿಂತಕನ ವಾಕ್ಯದಂತೆ.. ಈಗ ಈತ
ಪೆಟ್ಟು ಅನುಭವಿಸುವ ಸಂಗತಿ ಬಂದಿತ್ತು.
ಆಗಲೇ ರಚನಾ ಗೆ ಒಂದು ಸಂಗತಿ ತಲೆಯಲ್ಲಿ ಹೊಕ್ಕಿದ್ದು.
ಇವನನ್ನು ಯಾಕೆ ತಾನು ಸರಿ ಮಾಡಬಾರದು ಅಂತ..
ತನಗೆ ಉಂಟಾದ ಭಾವನೆಯನ್ನು ಕಂಡು ತಾನೆ ಒಮ್ಮೆ ನಕ್ಕಳು..
ತಕ್ಷಣವೇ ಇದು ಆಗು ಹೋಗದ ಕೆಲಸ ಅಂದು ಕೊಮ್ದ್ದು ಮನೆಯೆಡೆಗೆ ಹೊರಟಳು..
ಆದರು, ಮನದೊಳಗೆ ಆ ಭಾವ ಕೊರೆಯುತ್ತಲೇ ಇತ್ತು..
ಈಕೆಯಿದ್ದ ಬಸ್ಸು ಹೊರಟರು ಆತ ಹಾಡುತ್ತಲೇ ಇದ್ದ...

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹುಉಡಿ ಬರದಿರು ಮತ್ತೆ ಹಳೆಯ ನೆನಪೇ...

(ಮುಂದುವರಿಯುವುದು.....)

ಜಾನು ವಿನ ಮತ್ತೊಂದು ಕವಿತೆ

ಗೆಳತಿ, ಜಾನುವಿನ ಇನ್ನೊಂದು ಕವಿತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.. ಓದಿ ಅಭಿಪ್ರಾಯ ತಿಳಿಸಿ . .,

ಮಿನುಗುತಾರೆ

ನೀನಾಗಿರುವೆ ನನ್ನ ಹೃದಯದಾಗಸದಲ್ಲಿ
ಸದಾ ಮಿನುಗುತಿರುವ
ನಕ್ಷತ್ರ .....,
ನಾ ಉಳಿಯುವೇನೆ ನಿನ್ನ ನೆನಪಿನಂಗಳದಲ್ಲಿ
ಸದಾ ನೆನಪಾಗಿ
ನಿನ್ಹತ್ರ .. .. .?

ಜಾನು ಹೆಗಡೆ ಮಗೆಗಾರ್

Saturday, September 26, 2009

ಎಲ್ಲ ಮರೆತಿರುವಾಗ (ಕಥೆ-ಭಾಗ 1)

ಎಲ್ಲ ಮರೆತಿರುವಾಗ
ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ..
ಎಂಬ ಹಾಡು ಸನಿಹದಲ್ಲಿ ಎಲ್ಲೋ ರಚನಾ ಗೆ ಕೇಳಿದಂತೆ ಆಗಿ ಎಚ್ಚೆತ್ತಳು.
ತನ್ನ ಕಂಪನಿಯ ಪ್ರಾಜೆಕ್ಟ್ ಕೆಲಸಕ್ಕಾಗಿ ಶಿರಸಿಗೆ ಹೊರಟವಳಿಗೆ ಅದ್ಯಾವಗಲೋ ನಿದ್ದೆ ಆವರಿಸಿ ಬಿಟ್ಟಿತ್ತು.
ಹಾಡಿನಿಂದ ಎಚ್ಹ್ಚ್ರದಾಗಲೇ ಆಕೆಗೆ ತಿಳಿದದ್ದು ತಾನು ಶಿರಸಿಯಲ್ಲಿ ಇದ್ದೇನೆ ಎಂಬುದು.
ಹಾಡು ಕೇಳಿದ ಕಡೆಗೆ ತಿರುಗಿದರೆ ಅಲ್ಲೊಬ್ಬ ಹುಚ್ಚ. ನೋಡಿದರೆ ಭಯಂಕರ ರೂಪ. ಆದರೆ ಧ್ವನಿ ಮಾತ್ರ ಇಂಪು..
ಚಿಂದಿ ಅಂಗಿ.. ಹರಿದ ಪ್ಯಾಂಟು .. ಸ್ನಾನ ಕಾಣದ ದೇಹ.. ಗಬ್ಬು ವಾಸನೆ.. ಇನ್ನು ಆತ ಊಟ ಮಾಡಿ ಅದೆಸ್ತು
ದಿನಗಳದವೋ.. ಬೆನ್ನಿನ ಒಳಗೆ ಹುತು ಹೋದಂತಿದ್ದ ಹೊಟ್ಟೆ. ಮೇಲ್ನೋಟಕ್ಕೆ ರಚನಾ ಳಿಗೆ ಕಂಡದ್ದು ಇದಿಷ್ಟು.
ಆತನ ರೂಪದಲ್ಲಿ ಅಂಥ ವಿಶೇಷ ಏನು ಇರ್ಲಿಲ್ಲ. ಆದರೆ ಆತನ ಧ್ವನಿ ಇತ್ತಲ್ಲ ಅದರಲ್ಲಿ ಏನೋ ಆಕರ್ಷಣೆ ..
ಹಾಡಿದ ಹಾಡಿನಲ್ಲಿ ಏನೋ ಒಂದು ಭಾವ. ಅದನ್ನು ಹಾಡಿದ ರೀತಿಯಮ್ತು ಪಕ್ಕ ಕ್ಲಾಸಿಕಲ್ .. ಒಮ್ಮೆ ಕೇಳಿದರೆ
ಮತ್ತೊಮ್ಮೆ ಕೇಳಬೇಕು ಅನ್ನಿಸುವಂಥದ್ದು..
ಅವ ಬಹುಶಃ ಹೊಟ್ಟೆಪಾಡಿಗಾಗಿ ಹಾಡುತ್ತಿರಬೇಕು.. ಎನ್ನಿಸಿತು ಅವಳಿಗೆ.. ಪಾಪದ ವ್ಯಕ್ತಿ ಎಂಬ ಭಾವ.. ವ್ಯಸ್ಸಿನ್ನು ೨೫ ಅಷ್ಟೆ.
ಅರೆ ಇಷ್ಟು ಚೆನ್ನಾಗಿ ಹಾಡುವ ಈತನಿಗೆ ಹುಚ್ಚೆ? ವಯಸ್ಸಿನ್ನೂ ಚಿಕ್ಕದು .. ಯಾಕೆ ಈತನಿಗೆ ಹುಚ್ಚು? ಅವಳಿಗೆ ಕುತೂಹಲವಾಯಿತು....

(ಮುಂದುವರಿಯುವುದು..)

Friday, September 25, 2009

ಕನಸು

ಮೂಲತಃ ಸಂಭಂಧಿಯಾದರು ಸ್ವಭಾವದಲ್ಲಿ ಮಿತ್ರನಾದ ಪ್ರಶಾಂತ್ ಪಿ ಪಿ ಹರಾಹುರಿ ಅಪರೂಪಕ್ಕೆ ಒಂದು ಹನಿ ಕವನ ಬರೆದಿದ್ದೀನಿ ಅಂದಾಗ ನನಗೆ ಅಚ್ಚರಿ.. ಕೊನೆಗೆ ಮೆಸೇಜ್ ಮಡಿದ ನಂತರವೇ ನಾನು ನಂಬಿದ್ದು.. ಆ ಕವನ ಇದೋ ನಿಮ್ಮ ಮುಂದೆ.. ಓದಿ..
ಕನಸು
ಜಂಗಮವಾಣಿಯ ಉಲಿಯನ್ನು ಕೇಳಿ
ನಮ್ಮದೇ ಎಂದು ಸರಸರನೆ ತೆಗೆದು ,
ನಲ್ಲೆ ಕರೆದಲೆಂದು ತಿಳಿದು,
ಮೆಲ್ಲನೆತ್ತಿ ಹಲೋ ಎಂದಿರಲು,
ಪಕ್ಕದವನು ಚಿನ್ನ ಎನ್ನ ಬೇಕೆ?
-- ಪ್ರಶಾಂತ್ ಪಿ ಪಿ .. ಹರಾಹುರಿ..