Saturday, September 8, 2018

ಮಾಯಾಂಕ್ ಅಗರ್ವಾಲ್‌ರನ್ನು ಪದೇ ಪದೆ ಕಡೆಗಣಿಸಿದ ಬಿಸಿಸಿಐ

ಕಳೆದ ಒಂದೂವರೆ ವರ್ಷದ ಅವಯಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎಂದರೆ ಅದು ಮಾಯಾಂಕ್ ಅಗರ್ವಾಲ್ ಮಾತ್ರ. ಶತಕಗಳ ಮೇಲೆ ಶತಕ ಭಾರಿಸಿ, ರನ್ ಸುರಿಮಳೆಯನ್ನೇ ಸುರಿಸುತ್ತಿರುವ ಮಾಯಾಂಕ್ ಅಗರ್ವಾಲ್‌ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡದೇ ಬಿಸಿಸಿಐ ಮಾತ್ರ ಪದೇ ಪದೆ ಕಡೆಗಣನೆ ಮಾಡುತ್ತಿದೆ.
ಕರ್ನಾಟಕ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ದೇಸೀಯ ಕ್ರೀಡೆಗಳಲ್ಲಿ ರನ್ ಸುರಿಮಳೆಯನ್ನೇ ಸುರಿಸಿದ್ದಾರೆ. ರಣಜೀ ಟ್ರೋಫೀ, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ದೇವಧರ್ ಟ್ರೋಫಿ ಹೀಗೆ ವಿವಿಧ  ದೇಸೀಯ ಕ್ರೀಡೆಗಳಲ್ಲಿ ಶತಕಗಳ ಮೇಲೆ ಶತಕ ಭಾರಿಸಿದ್ದಾರೆ. ಇಷ್ಟೇ ಅಲ್ಲದೇ ಭಾರತ ಎ ತಂಡದ ಪರ ಇಂಗ್ಲೆೆಂಡ್ ಎ ವಿರುದ್ಧ ಆಂಗ್ಲರ ನೆಲದಲ್ಲೇ ಎರಡು ಶತಕ ಭಾರಿಸಿ ಸಾಧನೆ ಮಾಡಿದ್ದಾಾರೆ.
ಮಾಯಾಂಕ್ ಅಗರ್ವಾಲ್ ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಜತೆ ಜತೆಯಲ್ಲಿ ಆಸ್ಟ್ರೇಲಿಯಾ ಎ ಹಾಗೂ ವೆಸ್ಟ್  ಇಂಡಿಸ್‌ಎ ನಡುವಿನ ಭಾರತ ಎ ತಂಡದ ಸರಣಿಯಲ್ಲಿಯೂ ಕೂಡ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಕಳೆದ ಒಂದು ವರ್ಷದ ಅವಯಲ್ಲಿ ಲೀಸ್ಟ್  ಎ ತಂಡದ ಪರ ಕೇವಲ 8 ಪಂದ್ಯಗಳಲ್ಲಿ 723 ರನ್ ಗಳಿಸಿದ ಸಾಧನೆ ಮಾಯಾಂಕ್‌ರ ಹೆಸರಲ್ಲಿದೆ. ಇಷ್ಟೇ ಅಲ್ಲ 2017-18ರ ದೇಸೀಯ ಕ್ರೀಡೆಗಳಲ್ಲಿ ಮಾಯಾಂಕ್ ಗಳಿಸಿದ್ದು ಬರೋಬ್ಬರಿ 2141ರನ್. ದೇಸೀಯ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ 2000 ರನ್ ದಾಖಲಿಸಿದ ಮೊದಲ ಆಟಗಾರ ಎನ್ನುವ ಖ್ಯಾಾತಿಯೂ ಮಾಯಾಂಕ್ ಬೆನ್ನಿಗಿದೆ. ಇನ್ನೂ ವಿಶೇಷವೆಂದರೆ ಮಾಯಾಂಕ್ ಅಗರ್ವಾಲ್ ವಿಶ್ವದ ಮಟ್ಟದಲ್ಲಿ ದೇಸೀಯ ಕ್ರಿಕೆಟ್‌ನಲ್ಲಿ ಒಂದು ವರ್ಷದಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಸಾಧಕರ ಯಾದಿಯಲ್ಲಿಯೂ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಿದ್ದರೂ ಕೂಡ ಮಾಯಾಂಕ್‌ರನ್ನು ಭಾರತ ತಂಡಕ್ಕೆೆ ಆಯ್ಕೆ ಮಾಡದೇ ಕಡೆಗಣಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಭಾರತದ ನೆಲದಲ್ಲಿ ಮಾತ್ರವಲ್ಲ ವಿದೇಶದ ನೆಲದಲ್ಲಿಯೂ ಅರ್ಗವಾಲ್ ಸಾಕಷ್ಟು ರನ್ ಸುರಿಮಳೆಗೈದಿದ್ದಾರೆ. ಭಾರತ ಟೆಸ್‌ಟ್‌ ತಂಡದಲ್ಲಿನ ಹಲವು ಆಟಗಾರರು ಇಂಗ್ಲೆೆಂಡ್ ನೆಲದಲ್ಲಿ ರನ್ ಗಳಿಸಲು ಪರದಾಡಿದ್ದು ಕಣ್ಣೆದುರಿಗೇ ಇದೆ. ಹೀಗಿರುವ ಸಂದರ್ಭರ್ದಲ್ಲೇ ಮಾಯಾಂಕ್, ಇಂಗ್ಲೆೆಂಡ್ ನೆಲದಲ್ಲಿ ಆಂಗ್ಲ ಯುವ ತಂಡದ ಸ್ವಿಿಂಗ್ ಬಾಲಿಂಗ್‌ನ್ನು ಲೀಲಾಜಾಲವಾಗಿ ಎದುರಿಸ ಶತಕಗಳನ್ನು ಭಾರಿಸಿದ್ದರು. ಇವರನ್ನು ತಂಡಕ್ಕೆೆ ಆಯ್ಕೆ ಮಾಡಿದ್ದರೆ, ಪ್ರಭಾವಿ ಆಗಬಲ್ಲರು ಎನ್ನುವ ಭರವಸೆಯನ್ನು ಹುಟ್ಟು ಹಾಕಿದ್ದರು.
ಶತಕಗಳ ಮೇಲೆ ಶತಕ, ರನ್‌ಗಳ ಸುರಿಮಳೆ ಭಾರಿಸುತ್ತಿರುವ ಮಾಯಾಂಕ್ ಅಗರ್ವಾಲ್ ಭಾರತದ ಟೆಸ್ಟ್ , ಏಕದಿನ ತಂಡಗಳಿಗೆ ಆಯ್ಕೆಯಾಬೇಕಾದರೆ ಇನ್ನೇನು ಮಾಡಬೇಕು ಎನ್ನುವ ಪ್ರಶ್ನೆಗಳು ಹಿರಿಯ ಆಟಗಾರರಿಂದ, ಕ್ರಿಕೆಟ್ ಪ್ರೇಮಿಗಳಿಂದ ಕೇಳಿ ಬಂದಿದೆ. ಪದೇ ಪದೆ ವಿಫಲರಾಗುತ್ತಿರುವ ಆಟಗಾರರಿಗೆ ಪದೇ ಪದೆ ಮಣೆ ಹಾಕಲಾಗುತ್ತಿದೆ. ಆದರೆ ಗಮನಾರ್ಹ ಪ್ರದರ್ಶನ ನೀಡಿ ಮತ್ತೆ ಮತ್ತೆ ಆಯ್ಕೆ ಮಂಡಳಿಯ ಕದ ತಟ್ಟುತ್ತಿದ್ದರೂ ಮಾಯಾಂಕ್ ಅಗರ್ವಾಲ್‌ರನ್ನು ಕಡೆಗಣನೆ ಮಾಡುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಹರ್ಭಜನ್  ಸಿಂಗ್‌ರಂತಹ ಹಿರಿಯ ಆಟಗಾರರೇ ಮಾಯಾಂಕ್‌ಗೆ ಅವಕಾಶ ನೀಡಬೇಕಿತ್ತು ಎಂದು ಹೇಳುತ್ತಿದ್ದಾರೆ. ಆದರೆ ಬಿಸಿಸಿಐ ಮಾತ್ರ ಮಾಯಾಂಕ್ ಅಗರ್ವಾಲ್‌ರನ್ನು ಕಡೆಗಣಿಸುವ ಮೂಲಕ ಪ್ರತಿಭಾವಂತ ಆಟಗಾರನಿಗೆ ಅನ್ಯಾಯ ಮಾಡುತ್ತಿದೆ.

---
ಬೇಕೆಂದೇ ಕಡೆಗಣನೆ
ಮಾಯಾಂಕ್ ಅಗರ್ವಾಲ್ ಇಷ್ಟೆಲ್ಲ ರನ್ ಗಳಿಸಿದ್ದರೂ ಕೂಡ ಅವರನ್ನು ಕಡೆಗಣನೆ ಮಾಡಿ ಪೃಥ್ವಿ ಶಾ ಹಾಗೂ ಹನುಮ ವಿಹಾರಿಗೆ ಇಂಗ್ಲೆೆಂಡ್ ತಂಡದ ವಿರುದ್ಧ ಟೆಸ್ಟ್  ಸರಣಿಗೆ ಆಯ್ಕೆ ಮಾಡಲಾಯಿತು. ಅಷ್ಟೇ ಅಲ್ಲದೇ ಏಷ್ಯಾ ಕಪ್‌ಗೂ ಅವಕಾಶ ನೀಡಲಿಲ್ಲ. ಇದನ್ನೆಲ್ಲ ಗಮನಿಸಿದಾಗ ಮಾಯಾಂಕ್ ಅಗರ್ವಾಲ್‌ರನ್ನು ಬೇಕೆಂದೇ ಕಡೆಗಣನೆ ಮಾಡಲಾಗುತ್ತಿದೆ ಎನ್ನುವ ಮಾತುಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ. ಪ್ರತಿಭಾವಂತ ಆಟಗಾರನಿಗೆ ಮಣೆ ಹಾಕುವ ಬದಲು ಉಳಿದವರನ್ನು ಆಯ್ಕೆ ಮಾಡುತ್ತಿರುವುದು ಬಿಸಿಸಿಐನಲ್ಲಿನ ರಾಜಕೀಯವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿದೆ.

Thursday, September 6, 2018

ಅಂ-ಕಣ -11

ಅರ್ಥ

ತುಟಿಗೊತ್ತಿದ ಮುತ್ತಿಗಿಂತ
ಹಣೆಗೊತ್ತಿದ ಮುತ್ತೇ
ಜಾಸ್ತಿ ಕಾಡಿದರೆ..,
ನಿಮ್ಮ ಪ್ರೀತಿ ಇನ್ನೂ
ಜೀವಂತವಿದೆ ಎಂದೇ ಅರ್ಥ!


ಕೊಂಡಿ 

ಕೆಲವು ದಿನ ಆಯ್ತು,
ಬೆಡ್ ರೂಂ ಲೈಟ್ ಹಾಕಿದ್ರೆ
ಬಾತ್ ರೂಮಲ್ಲಿ ಲೈಟ್
ಆನ್ ಆಗ್ತಿದೆ!
ವಯರ್ ಪಿಟಿಂಗ್ ಪ್ರಾಬ್ಲಮ್ಮೇ?
ಶಾರ್ಟಾಗಿರಬಹುದೇ...?
ಅಥವಾ...


ಭಾಗ್ಯ 

ಕೆಲವರಿಗೆ ಫ್ರೆಂಡ್
ಲೀಸ್ಟಿಗಿಂತ
ಬ್ಲಾಕ್ ಮಾಡಿದ ಲೀಸ್ಟೇ
ಜಾಸ್ತಿ ಇರುತ್ತೆ!


ದೃಷ್ಟಿ ಕೋನ

ನನ್ನನ್ನು ಒಂದೇ
ಕಣ್ಣಿನಿಂದ,
ದೃಷ್ಟಿ ಕೋನದಿಂದ
ನೋಡಬೇಡ
ನನ್ನ
ಇನ್ನೊಂದು ಬದುಕು
ನಿನ್ನೊಡನೆ
ನನ್ನನ್ನೂ ಸುಟ್ಟೀತು!


ಕಾರಣ 

ನನಗೆ ಕಣ್ಣೀರು
ಬಂದಾಗಲೇ
ಅಂದುಕೊಂಡೆ
ನೀನು
ಅಳುತ್ತಿದ್ದೀಯೆಂದು|

Wednesday, September 5, 2018

ಬಡತನದಲ್ಲಿ ಅರಳಿದ ಪ್ರತಿಭೆಗಳು ನೋವಿನಲ್ಲೂ ಚಿನ್ನ ಗೆದ್ದರು

ನೋವಿನಲ್ಲೂ ಚಿನ್ನ ಗೆದ್ದಳು ಸ್ವಪ್ನಾ-ಉದ್ಯೋಗಕ್ಕಾಗಿ ಅಲೆಯುತ್ತಿದ್ದ ಮಂಜಿತ್‌ಗೆ ಬಂಗಾರ


ಬಡತನವಿರಲಿ, ಅನಾರೋಗ್ಯವೇ ಇರಲಿ ದೇಶಕ್ಕೆ ಪದಕ ಗೆಲ್ಲಬೇಕೆಂಬ ತವಕ ಇದ್ದರೆ ಎಂತಹ ಸಮಸ್ಯೆಯನ್ನೂ ಮರೆತು ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಈ ಏಷ್ಯನ್ ಗೇಮ್ಸ್  ಮತ್ತೊಮ್ಮೆ ಸಾಬೀತು ಪಡಿಸಿದೆ. ಬಡತನ, ಅನಾರೋಗ್ಯದ ನಡುವೆ ಸ್ವಪ್ನಾ ಬರ್ಮನ್ ಚಿನ್ನ ಗೆದ್ದರೆ, ಉದ್ಯೋಗವಿಲ್ಲದೇ ಗದ್ದೆಯಲ್ಲಿ ದುಡಿಯುತ್ತಿದ್ದ ಮಂಜಿತ್ ಸಿಂಗ್ ಕೂಡ ಬಂಗಾರ ಗೆದ್ದು ಸಾಧನೆ ಮಾಡಿದ್ದಾಾರೆ.

ನೋವು ನುಂಗಿ ಗೆದ್ದ ಸ್ವಪ್ನಾ:
ತೀವ್ರ ಪ್ರಮಾಣದ ಜ್ವರ, ಅಸಾಧ್ಯ ಹಲ್ಲು ನೋವು. ಇದರ ನಡುವಲ್ಲೇ ದೇಶಕ್ಕಾಗಿ ಪದಕ ಗೆಲ್ಲುವ ತವಕ. ಮೂರು ದಿನಗಳ ಕಾಲ ಏಳು ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿದ ಸ್ವಪ್ನಾ ಬರ್ಮನ್ ಚಿನ್ನ ಗೆದ್ದು, ವಿಶೇಷ ಸಾಧನೆ ಮಾಡಿದ್ದಾಳೆ.
ಹೆಪ್ಟಾಥ್ಲಾನ್. ಇಂಥದ್ದೊೊಂದು ಹೆಸರಿನ ಆಟವಿದೆ ಎನ್ನುವುದು ಹಲವು ಭಾರತೀಯರಿಗೆ ಗೊತ್ತಿಲ್ಲ. ಆದರೆ ಹೆಪ್ಟಾಥ್ಲಾನ್ ಎಂಬ ಕ್ರೀಡೆ ಇದೆ ಎಂಬುದನ್ನು ತಿಳಿಸಿಕೊಟ್ಟವಳು ಸ್ವಪ್ನಾ ಬರ್ಮನ್. ಏಳು ವಿಭಿನ್ನ ಕ್ರೀಡೆಗಳನ್ನು ಒಳಗೊಂಡ ಹೆಪ್ಟಾಥ್ಲಾನ್‌ನಂತೆಯೇ ಸ್ವಪ್ನಾಳ ಬದುಕು ಕೂಡ ವಿಭಿನ್ನವಾಗಿತ್ತು.
100ಮೀ. ಹರ್ಡಲ್‌ಸ್‌, ಎತ್ತರ ಜಿಗಿತ, ಗುಂಡುಎಸೆತ, 200 ಮೀ. ಓಟ, ಲಾಂಗ್ ಜಂಪ್, ಜಾವೆಲಿನ್ ಥ್ರೋ, 800ಮೀ. ಓಟ ಹೀಗೆ ಒಟ್ಟು ಏಳು ವಿವಿಧ ಕ್ರೀಡೆಗಳನ್ನು ಒಟ್ಟಾಾಗಿಸಿ ಹೆಪ್ಟಾಥ್ಲಾನ್ ಎನ್ನಲಾಗುತ್ತದೆ. ಈ ಕ್ರೀಡೆಗೆ ಏಳು ರೀತಿಯ ಕೌಶಲ್ಯದ ಅಗತ್ಯವಿದೆ.
ಕ್ರೀಡಾಕೂಟಕ್ಕೆೆ ತೆರಳುವ ಮೊದಲೇ, ಆರು ಬೆರಳಿನ ಸ್ವಪ್ನಾ ಬರ್ಮನ್‌ಗೆ ಸರಿ ಹೊಂದುವಂತಹ ಶೂ ಸಿಗದೇ ಸಮಸ್ಯೆ ಉಂಟಾಗಿತ್ತು. ಆ ಸಮಸ್ಯೆಯ ನಡುವೆಯೂ ಕ್ರೀಡಾಕೂಟದಲ್ಲಿ ಪಾಲ್ಗೊೊಂಡವಳಿಗೆ ಕಾಡಿದ್ದು ತೀವ್ರ ಪ್ರಮಾಣದ ಜ್ವರ ಹಾಗೂ ಹಲ್ಲುನೋವು. ಈ ನೋವಿನ ನಡುವೆಯೂ ಆಟವನ್ನಾಡಿದ ಸ್ವಪ್ನಾ ಚಿನ್ನ ಗೆದ್ದು ಮೆರೆದಿದ್ದಾಳೆ.
ಚಿಕಿತ್ಸೆ ಪಡೆಯುತ್ತಲೇ ಎಲ್ಲಾ ವಿಭಾಗದಲ್ಲೂ ಆಕೆ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದಳು. ಹೈ ಜಂಪ್‌ನಲ್ಲಂತೂ ಆಕೆ ಅಸಾಧ್ಯ ನೋವಿನ ನಡುವೆ ಆಡಿದ್ದಳು. ಜಾವೆಲಿನ್ ಹಾಗೂ ಶಾಟ್‌ಪುಟ್‌ನಲ್ಲಿ ಆಕೆ ನೀಡಿದ ಅಧ್ಭುತ ಪ್ರದರ್ಶನವೇ ಆಕೆಯನ್ನು ಬಂಗಾರದ ಪದಕವನ್ನು ಇನ್ನಷ್ಟು ಹತ್ತಿರ ಮಾಡಿಸಿತ್ತು.
ಬಡ ಕುಟುಂಬ, ಕಾಯಿಲೆ ಪೀಡಿತ ತಂದೆ:
ಬಡತನದಲ್ಲಿ ಬೆಳೆದು ಬಂದ ಸ್ವಪ್ನಾಳ ಬಾಲ್ಯ ಬಹಳ ಕಷ್ಟಕರವಾಗಿತ್ತು. ಸ್ವಪ್ನಾಳ ತಂದೆ ತಳ್ಳುಗಾಡಿ ನಡೆಸುತ್ತಿದ್ದರು. ತಳ್ಳು ಗಾಡಿಯ ಮೂಲಕ ಬಂದ ದುಡ್ಡಿನಲ್ಲಿ ಬದುಕು ಸಾಗಿಸಬೇಕಿತ್ತು. ಅಂತದ್ದರಲ್ಲಿ 2013ರಲ್ಲಿ ಸ್ವಪ್ನಾ ತಂದೆ ಪಾಶ್ವವಾಯುಗೆ ತುತ್ತಾದರು. ಅಲ್ಲಿಂದ ಅವರು ಹಾಸಿಗೆಯಲ್ಲೇ ಜೀವನ ದೂಡುತ್ತಿದ್ದಾರೆ. ಸ್ವಪ್ನಾ ತಾಯಿ ಹತ್ತಿರದ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ.
ಕ್ರೀಡೆಯ ಆರಂಭಿಕ ದಿನಗಳಲ್ಲಿ ಸ್ಪಪ್ನಾ  ಹೈ ಜಂಪ್‌ನಲ್ಲಿ ಆಸಕ್ತಿ ತೋರಿಸಿದ್ದಳು. ಕುಳ್ಳಗಿದ್ದ ಕಾರಣ ಆಕೆಯನ್ನು ಹೈ ಜಂಪ್ ಆಟದಿಂದ ರಿಜೇಕ್ಟ್  ಮಾಡಲಾಗಿತ್ತು. ನಂತರ ಎರಡು ಬಾರಿ ಟ್ರಯಲ್ ನಡೆಸಿ ಆಯ್ಕೆ ಮಾಡಲಾಗಿತ್ತು.ಸ್ವಪ್ನಾಳ ಎರಡೂ ಕಾಲಿಗೆ ಆರು ಬೆರಳುಗಳಿದೆ. ಈ ಕಾರಣದಿಂದ ಧರಿಸಲು ಸರಿಯಾದ ಶೂಗಳೇ ಇರಲಿಲ್ಲ. ಹೀಗಿದ್ದಾಗಲೂ ಉತ್ತಮ ಪ್ರದರ್ಶನ ನೀಡಿದ್ದಾಳೆ.
ಕಷ್ಟದ ನಡುವೆಯೂ ಉತ್ತಮ ತರಬೇತಿ ಪಡೆದು, ನೋವಿನ ನಡುವೆಯೂ ಒಳ್ಳೆಯ ಪ್ರದರ್ಶನ ನೀಡಿದ ಸ್ವಪ್ನಾಳ ಸಾಧನೆಗೆ ಹ್ಯಾಟ್ಸಾಫ್  ಹೇಳೋಣ.

ದನಕಾಯುವ ಮಂಜಿತ್ ಬಂಗಾರ ಗೆದ್ದ:

ಕತ್ತಲಲ್ಲಿ ಇದ್ದೋನು, ಬೆಳಕಲ್ಲಿ ಎದ್ದೋನು
ಮಣ್ಣಲ್ಲಿ ಇದ್ದೋನು, ಬಂಗಾರ ಗೆದ್ದನು...
ಇಂತದ್ದೊೊಂದು ಹಾಡು ಚಿನ್ನಾರಿ ಮುತ್ತಾದಲ್ಲಿದೆ. ಮಂಜಿತ್ ಸಿಂಗ್ ಕಥೆ ಚಿನ್ನಾರಿ ಮುತ್ತಕ್ಕಿಿಂತ ಬೇರೆ ರೀತಿಯೇನೂ ಅಲ್ಲ.
ಹರ್ಯಾಣ ಮೂಲದ ವೇಗದ ಓಟಗಾರ ಮಂಜಿತ್ ಸಿಂಗ್ ಚಿನ್ನ ಗೆಲ್ಲುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ ಬಿಡಿ. 800 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ ವ್ಯಕ್ತಿ ಮಂಜಿತ್.
ಮಂಜಿತ್‌ಗೆ ಮಾಡಲು ಉದ್ಯೋಗವೇ ಇಲ್ಲ. ಓಎನ್‌ಜಿಸಿಯಲ್ಲಿ 2 ವರ್ಷದ ಗುತ್ತಿಗೆ ಮೇರೆಗೆ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾನೆ. ಉಳಿದ ಸಮಯದಲ್ಲಿ ಗದ್ದೆಯಲ್ಲಿ ದುಡಿಯುತ್ತಾನೆ. ತದನಂತರದಲ್ಲಿ ದನ ಕಾಯುತ್ತಾನೆ.
ಮಂಜಿತ್ ಸಿಂಗ್ ತಂದೆ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಶಾಟ್‌ಪುಟ್ ಪ್ಲೇಯರ್. ಆದರೆ ಮನೆಯಲ್ಲಿ ಅನುಕೂಲಸ್ಥರಲ್ಲ. ಹೀಗಾಗಿ ಮಂಜಿತ್‌ಗೆ ಆರಂಭಿಕ ದಿನಗಳಲ್ಲಿ ಉತ್ತಮ ತರಬೇತಿಯೂ ಸಿಕ್ಕಿರಲಿಲ್ಲ. ಮಂಜಿತ್ ಆಟವನ್ನು ಗಮನಿಸಿದವರಿಗೆ ಆತ ಆರಂಭದಲ್ಲಿ ಹಿಂದೆ ಬಿದ್ದು, ತದನಂತರ ಏಕಾಏಕಿ ಒಬ್ಬೊಬ್ಬರನ್ನಾಗಿ ಹಿಂದಿಕ್ಕುವುದು ಕಂಡುಬರುತ್ತದೆ. ಆತನ ಬದುಕೂ ಅಷ್ಟೇ. ಆರಂಭದಲ್ಲಿ ಎಲ್ಲರಿಗಿಂತ ಹಿಂದೆ ಬಿದ್ದವನು ನಂತರ ಒಂದೊಂದಾಗಿ ಸಾಧನೆ ಮಾಡಿದ್ದಾನೆ ಎನ್ನುವುದು ಮಂಜಿತ್ ಕುಟುಂಬಸ್ಥರ ಅಭಿಪ್ರಾಯ.

ಬಡತನ, ಕಷ್ಟ, ನೋವು ಇವು ದೇಶದ ಮುಂದೆ ಗೌಣವಾಗುತ್ತವೆ. ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹರಡುವ ಸಂದರ್ಭ ಬಂದರೆ ಇವೆಲ್ಲವನ್ನೂ ಕಡೆಗಣನೆ ಮಾಡಿ ಸಾಧನೆ ಮಾಡುತ್ತಾನೆ ಎನ್ನುವುದಕ್ಕೆ ಈ ಇಬ್ಬರು ಆಟಗಾರರೇ ಸಾಕ್ಷಿ. ಇಂತಹ ಅಸಂಖ್ಯಾತ ಕಷ್ಟಸಹಿಷ್ಣು ಆಟಗಾರರಿಗೊಂದು ಸಲಾಂ.

Friday, August 24, 2018

ಅದೃಷ್ಟದ ಬೆರಳಿಂದಲೇ ಸಮಸ್ಯೆಗಳ ಸರಮಾಲೆ

ಕೈ ಅಥವಾ ಕಾಲಿಗೆ ಆರು ಬೆರಳುಗಳಿದ್ದರೆ, ಅದನ್ನು ಅದೃಷ್ಟ ಎಂದು ಭಾವಿಸುವವರು ಹಲವರಿದ್ದಾರೆ. ಆದರೆ ಏಷ್ಯನ್ ಗೇಮ್‌ಸ್‌‌ನಲ್ಲಿ ಪಾಲ್ಗೊಂಡ  ಭಾರತದ ಆಟಗಾರ್ತಿಯೊಬ್ಬರು ಆರು ಬೆರಳಿನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
21 ವರ್ಷ ವಯಸ್ಸಿನ ಸ್ವಪ್ನ ಬರ್ಮನ್ ಹೆಪ್ಟಾಥ್ಲಾನ್ ಆಟಗಾರ್ತಿ. ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್‌ಸ್‌‌ನಲ್ಲಿ ಮುಂದಿನವಾರ ಹೆಪ್ಟಾಥ್ಲಾನ್ ಸ್ಪರ್ಧೆ ನಡೆಯಲಿದ್ದು, ಸ್ವಪ್ನ  ಭಾಗವಹಿಸುತ್ತಿದ್ದಾಳೆ. ಈಕೆಯ ಕಾಲಿನಲ್ಲಿ ಆರು ಬೆರಳುಗಳಿವೆ. ಈ ಆರು ಬೆರಳುಗಳು ಸ್ವಪ್ನಗೆ ತೀವ್ರ ಸಮಸ್ಯೆಯನ್ನು ಉಂಟುಮಾಡಿದೆ.
ಸ್ವಪ್ನ ಕಾಲಿನಲ್ಲಿಲ್ಲಿ ಆರು ಬೆರಳುಗಳಿರುವ ಕಾರಣ, ಆಕೆಗೆ ಅಗತ್ಯವಾದ ಶೂಗಳೇ ಸಿಗುತ್ತಿಲ್ಲ. ಇದರಿಂದ ಸ್ವಪ್ನ ಸಮಸ್ಯೆ ಎದುರಿಸುವಂತಾಗಿದೆ.  ಭಾರತದ ಒಲಂಪಿಕ್ ಸಮಿತಿ ನೀಡಿರುವ ಶೂಗಳು ಈಕೆಯ ಕಾಲಿಗೆ ಹಿಡಿಸುತ್ತಿಲ್ಲ. ಅಲ್ಲದೇ ಐದು ಬೆರಳುಗಳಿಗೆ ಸರಿ ಎನ್ನಿಸುವ ಶೂಗಳು, ಆರನೇ ಬೆರಳಿಗೆ ತೀವ್ರ ಸಮಸ್ಯೆಯನ್ನು ಉಂಟುಮಾಡುತ್ತಿದೆ. ತೀರಾ ಸಣ್ಣದಾದ ಶೂ ಧರಿಸುವುದರಿಂದ ಕಾಲು ನೋವು ಹಾಗೂ ಬೆರಳು ನೋವು ಸ್ವಪ್ನಾರಿಗೆ ಕಾಡುತ್ತಿದೆ. ಈ ನೋವಿನ ನಡುವೆಯೂ ಪದಕ ಗೆಲ್ಲುವ ಛಲ ಸ್ವಪ್ನಾದು.
ಜಲಪೈಗುರಿಯ ಬಡ ಕುಟುಂಬದಿಂದ ಬಂದ ಸ್ವಪ್ನ ಕ್ರೀಡಾ ಅನುದಾನದಿಂದಲೇ ಸಾಕಷ್ಟು ತರಬೇತಿ ಪಡೆದು ಏಷ್ಯನ್ ಗೇಮ್‌ಸ್‌‌ನಲ್ಲಿ  ಭಾಗವಹಿಸಿದ್ದಾಳೆ. ಹಿಂದೆ ಇಂಚೋನ್ ಏಷ್ಯನ್ ಗೇಮ್‌ಸ್‌‌ನಲ್ಲಿಯೂ  ಭಾಗವಹಿಸಿದ್ದ ಈಕೆ ಈ ಸಾರಿ ಪದಕದ ಭರವಸೆ ಮೂಡಿಸಿದ್ದಾರೆ. ಆದರೆ ಕಾಲಿಗೆ ಹೊಂದಿಕೆಯಾಗದ ಹೊಸ ಶೂಗಳ ಬದಲು ಅನಿವಾರ್ಯವಾಗಿ ಹಳೆಯ ಶೂಗಳನ್ನೇ ಬಳಕೆ ಮಾಡುವ ಸಂದರ್ಭ  ಎದುರಾಗಿದೆ.  ಭಾರತದಲ್ಲಿ ಆರು ಬೆರಳಿನ ವ್ಯಕ್ತಿಗಳು ಧರಿಸುವ ನಿಟ್ಟಿನಲ್ಲಿ ವಿಶೇಷ ಶೂಗಳನ್ನು ತಯಾರಿಸುವುದಿಲ್ಲ. ಈ ಕಾರಣದಿಂದ ಸಮಸ್ಯೆ ಹೆಚ್ಚುತ್ತಿದೆ. ಅದೃಷ್ಟದ ಬೆರಳು ಅಥ್ಲಿಟ್‌ಗೆ ಸಮಸ್ಯೆಯಾಗುತ್ತಿದ್ದುದು ಹೀಗೆ.

----

ಆರನೇ ಬೆರಳು ಅದೃಷ್ಟದ ಸಂಕೇತ ಎನ್ನುತ್ತಾರೆ. ಆದರೆ ನನಗೆ ಅದು ಸಮಸ್ಯೆಯನ್ನೇ ತಂದಿದೆ. ಹಲವರು ಶಸ್ತ್ರ  ಚಿಕಿತ್ಸೆ ಮೂಲಕ ಆರನೇ ಬೆರಳನ್ನು ತೆಗೆಸುವಂತೆ ಸಲಹೆ ನೀಡಿದ್ದರು. ಆದರೆ ನಾನು ಅದಕ್ಕೆ ಒಪ್ಪಿರಲಿಲ್ಲ. ಇದೀಗ ಆರನೇ ಬೆರಳಿನಿಂದ ನೋವು ಅನುಭವಿಸಬೇಕಾಗಿದೆ. ಆದರೂ ಪದಕ ಗೆಲ್ಲುವ ಛಲ ನನ್ನದು ಎಂದು ಸ್ವಪ್ನಾ ಹೇಳುತ್ತಾಳೆ.

Thursday, August 23, 2018

ಒಂದು ತಿಂಗಳಲ್ಲಿ ಸದ್ದು ಮಾಡಿದ ಎರಡು ತಬ್ಬುಗೆ

ದೇಶದ, ಸಂಸತ್ತಿನ ಗೌರವಕ್ಕೆ ಧಕ್ಕೆ ತಂದ ಸಿಧು, ರಾಹುಲ್ ಆಲಿಂಗನ

ಕಳೆದ ಒಂದು ತಿಂಗಳಿನಿಂದೀಚೆಗೆ ಇಬ್ಬರು ನಾಯಕರು ಮಾಡಿದ ತಬ್ಬುಗೆಗಳು ಸಾಕಷ್ಟು ವಿವಾದಗಳಿಗೆ, ಚರ್ಚೆಗಳಿಗೆ ಕಾರಣವಾಗಿದೆ. ಇಬ್ಬರೂ ನಾಯಕರುಗಳು ಅನಗತ್ಯ ತಬ್ಬುಗೆಯಿಂದ ಸದ್ದು ಮಾಡಿದ್ದಾಾರೆ. ಹೀಗೆ ತಬ್ಬುಗೆ ಮೂಲಕ ಸುದ್ದಿಯಾದವರಲ್ಲೊಬ್ಬರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ಇನ್ನೋರ್ವ ನವಜೋತ್ ಸಿಂಗ್ ಸಿಧು. ಒಬ್ಬರ ತಬ್ಬುಗೆ ಲೋಕಸಭೆಯ ಗೌರವಕ್ಕೆ ಕುಂದು ಉಂಟು ಮಾಡಿದರೆ, ಇನ್ನೊಬ್ಬರ ತಬ್ಬುಗೆ ದೇಶದ ಗೌರವಕ್ಕೇ ಕುಂದನ್ನು ತಂದಿತು.
ಮೊಟ್ಟ ಮೊದಲ ತಬ್ಬುಗೆಯನ್ನು ಕೈಗೊಂಡಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ಲೋಕಸಭಾ ಕಲಾಪದ ಸಂದರ್ಭದಲ್ಲಿ ಭಾಷಣ ಮಾಡಿ ನಂತರ ಇದ್ದಕ್ಕಿದ್ದಂತೆ ಸದನದಲ್ಲಿಯೇ ಪ್ರಧಾನಿ ಮೋದಿ ಅವರ ಬಳಿ ತೆರಳಿ ಅವರನ್ನು ತಬ್ಬಿಕೊಳ್ಳುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದರು.
ಚುನಾವಣೆಯ ಸಂದರ್ಭದಲ್ಲೆಲ್ಲ ಮೋದಿಯವರ ಮೇಲೆ ಆರೋಪಗಳನ್ನು ಮಾಡುವ, ವೀರಾವೇಶದ ಭಾಷಣ ಮಾಡುವಂತೆ ಪೋಸು ಕೊಡುವ ರಾಹುಲ್ ಗಾಂಧಿ, ಲೋಕಸಭಾ ಕಲಾಪದ ಸಂದರ್ಭದಲ್ಲಿಯೂ ಕೂಡ ಇದೇ ರೀತಿ ಮಾಡಲು ಮುಂದಾದರು. ಕೆಲ ನಿಮಿಷಗಳ ಕಾಲ ಭಾಷಣವನ್ನೂ ಮಾಡಿದರು. ನಗೆಪಾಟಲಿಗೂ ಇಡಾದರು. ಅಷ್ಟಾದ ಮೇಲೆ ಸುಮ್ಮನೇ ಇರಬೇಕೆ ಬೇಡ್ವೆ. ಅದು ಬಿಟ್ಟು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಎದುರಿನಲ್ಲಿಯೇ ಸಾಗಿ ಪ್ರಧಾನಿ ಮೋದಿ ಅವರ ಖುರ್ಚಿ ಬಳಿ ತೆರಳಿ ಅವರನ್ನು ಎದ್ದೇಳಿ ಎಂದು ಹೇಳಿದರು. ಮೋದಿ ಏಳದಿದ್ದರೂ ಇವರೇ ಹೋಗಿ ಇದ್ದಕ್ಕಿದ್ದಂತೆ ತಬ್ಬಿಕೊಂಡು ಎಲ್ಲರನ್ನೂ ಅವಾಕ್ಕಾಗಿಸಿದರು. ಇವರ ಈ ನಡೆ ಸಾಕಷ್ಟು ಚರ್ಚೆಗೂ ಕಾರಣವಾಯಿತು.
ಅನಗತ್ಯ ತಬ್ಬುಗೆಯನ್ನು ನಂತರದಲ್ಲಿ ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳುವ ಯತ್ನವನ್ನೂ ನಡೆಸಿತು. ರಾಹುಲ್ ತನ್ನನ್ನು ಟೀಕಿಸುವವರನ್ನೂ ತಬ್ಬಿಕೊಳ್ಳುತ್ತಾರೆ ಎನ್ನುವ ಪಟ್ಟ ಕೊಡಲು ಕಾಂಗ್ರೆಸ್ ಮುಂದಾಯಿತು. ಆದರೆ ಅದರ ಬೆನ್ನಲ್ಲೇ ಕಣ್ಣು ಮಿಟುಕಿಸುವ ಮೂಲಕ ರಾಹುಲ್ ಗಾಂಧಿ ಮತ್ತೊಮ್ಮೆ ದೇಶವಾಸಿಗಳ ಮುಂದೆ ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಂಡುಬಿಟ್ಟರು. ಈ ಘಟನೆಯ ನಂತರ ರಾಹುಲ್ ತಬ್ಬುಗೆ ಹಲವು ರೀತಿಯಲ್ಲಿ ಬಣ್ಣಿಸಲ್ಪಟ್ಟಿದ್ದು ಎಲ್ಲರ ನೆನಪಿನಲ್ಲಿದೆ. ಗಂಭೀರವಾಗಿ ವರ್ತಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಬೇಕಿದ್ದ ವ್ಯಕ್ತಿ ಈ ರೀತಿ ವರ್ತಿಸುವುದು ಸರಿಯಲ್ಲ ಎನ್ನಿಸಿಕೊಂಡಿತು. ಭವಿಷ್ಯದ ಪ್ರಧಾನಿ ಎಂದೆಲ್ಲ ಬಿಂಬಿಸಿಕೊಳ್ಳುವ ನಾಯಕ ತಾನು ಈ ರೀತಿ ನಡೆದುಕೊಂಡರೆ ಮುಂದೆ ದೇಶದ ಗತಿಯೇನು ಎಂದು ಜನಸಾಮಾನ್ಯರು ಆಡಿಕೊಂಡಿದ್ದು ಇನ್ನೂ ಹಸಿಯಾಗಿಯೇ ಇದೆ.
ಭಾರತದ ಕಾಂಗ್ರೆಸ್ ಗೆ ಶತಮಾನಗಳ ಇತಿಹಾಸವೇ ಇದೆ. ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಭೋಸ್ ಅವರಿಂದ ಹಿಡಿದು ಅದೆಷ್ಟೋ ಮಹಾನ್ ಚೇತನಗಳು ಅಧ್ಯಕ್ಷ ಸ್ಥಾನ ವಹಿಸಿಕೊಂಡು ದೇಶವನ್ನು ಮುನ್ನಡೆಸಿದ್ದಾರೆ. ಅಂತಹ ನಾಯಕರು ಮುನ್ನಡೆಸಿದ್ದ ಪಕ್ಷವನ್ನು ಇದೀಗ ರಾಹುಲ್ ಗಾಂಧಿ ಮುನ್ನಡೆಸುತ್ತಿದ್ದಾರೆ. ಆದರೆ ಆ ನಾಯಕರು ಯಾವತ್ತಿಗೂ ರಾಹುಲ್ ರಂತೆ ಬಾಲಿಶತನವನ್ನು ಮೆರೆದಿರಲಿಲ್ಲ. ಲೋಕಸಭೆಯ ಗೌರವಕ್ಕೆ ಚ್ಯುತಿ ತಂದಿರಲಿಲ್ಲ. ಆದರೆ ರಾಹುಲ್ ಗಾಂಧಿಯವರ ಆಲಿಂಗನ ಲೋಕಸಭೆಗೂ, ಕಲಾಪಕ್ಕೂ ಚ್ಯುತಿ ತಂದುಬಿಟ್ಟಿತು. ತಬ್ಬುಗೆ ಹಾಗೂ ಕಣ್ಣುಮಿಟುಕಿಸುವಿಕೆಯ ಮೂಲಕ ರಾಹುಲ್ ಲೋಕಸಭೆ ಎಂದರೆ ಮಕ್ಕಳಾಟ ಎನ್ನುವಂತೆ ನಡೆದುಕೊಂಡುಬಿಟ್ಟರು. ಇದು ಸದನಕ್ಕೆ ಕುಂದು ತಂದಿತು.
ಇದೀಗ ಮಾಜಿ ಕ್ರಿಕೆಟಿಗ, ಪಂಜಾಬ್ ನ ಸಚಿವ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ತಬ್ಬಿಕೊಳ್ಳುವ ಮೂಲಕ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ. ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ತೆರಳಿದ್ದೂ ಅಲ್ಲದೆ ಭಾರತದ ವಿರುದ್ಧ ಭಯೋತ್ಪಾದಕರ ಬೆನ್ನು ತಟ್ಟಿ ಅವರನ್ನು ಕಾಶ್ಮೀರದ ಗಡಿಯೊಳಕ್ಕೆ ನುಸುಳಲು ಕುಮ್ಮಕ್ಕು ನೀಡುವ ಪಾಕ್ ಸೇನಾ ಮುಖ್ಯಸ್ಥರನ್ನು ತಬ್ಬಿಕೊಳ್ಳುವ ಮೂಲಕ ದೇಶವಾಸಿಗಳ ಕೆಂಗಣ್ಣಿಗೆ ಕಾರಣರಾಗಿದ್ದಾರೆ.
ಶತ್ರು ರಾಷ್ಟ್ರ ಪಾಕಿಸ್ಥಾನಕ್ಕೆ ತೆರಳಿದ್ದರೂ ಅಲ್ಲದೇ ಭಾರತದ ವಿರುದ್ಧ ಭಯೋತ್ಪಾದಕರನ್ನು ಅಟ್ಟುವ ಮೂಲಕ ಭಾರತದ ಯೋಧರ ಮಾರಣಹೋಮಕ್ಕೆ ಟೊಂಕ ಕಟ್ಟಿ ನಿಂತವರನ್ನು ತಬ್ಬಿಕೊಳ್ಳುವ ಮೂಲಕ ಸಿಧು ಭಾರತಕ್ಕೆ, ಯೋಧರಿಗೆ ದ್ರೋಹವನ್ನೇ ಎಸಗಿಬಿಟ್ಟರು. ಇಷ್ಟಾದ ಮೇಲೂ ಪಾಕಿಸ್ಥಾನದ ಸೇನಾ ಮುಖ್ಯಸ್ಥರು ತಮ್ಮ ಕಿವಿಯಲ್ಲಿ ಶಾಂತಿ ಮಂತ್ರವನ್ನು ಜಪಿಸಿದರು ಎಂದು ಹೇಳಿ ಉರಿಯುತ್ತಿದ್ದ ದೇಶದ ಮನಸ್ಸುಗಳಿಗೆ ಇನ್ನಷ್ಟು ಕಿಡಿ ಹೊತ್ತಿಕೊಳ್ಳುವಂತೆ ಮಾಡಿದರು.
ಇಮ್ರಾನ್ ಖಾನ್ ತಾವು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರ ಆದಿಯಾಗಿ ಹಲವು ನಾಯಕರನ್ನು ಕರೆದಿದ್ದರು. ಆದರೆ ಆ ನಾಯಕರುಗಳೆಲ್ಲ ಪಾಕಿಸ್ಥಾನದ ಕರೆಯನ್ನು ಕಣ್ಣೆತ್ತಿಯೂ ನೋಡಿರಲಿಲ್ಲ. ಆದರೆ ಧಿಮಾಕು ತೋರಿದ ನವಜೋತ್ ಸಿಂಗ್ ಸಿಧು ಮಾತ್ರ ತಾವು ಹೋಗುತ್ತೇವೆ ಎಂದಿದ್ದಲ್ಲದೇ, ಅಲ್ಲಿಗೆ ಹೋಗುವ ಮೂಲಕ ಭಾರತೀಯರ ಮನಸ್ಸುಗಳಿಗೆ ಆಘಾತ ಉಂಟಾಗುವಂತೆ ಮಾಡಿದರು.
ಇದೇ ಸಿಧು ಪಾಕಿಸ್ಥಾನದ ಸೇನಾ ಮುಖ್ಯಸ್ಥರನ್ನು ತಬ್ಬಿಕೊಂಡಿದ್ದ ಸಂದರ್ಭದಲ್ಲೇ, ಕಾಶ್ಮೀರದಲ್ಲಿ ಪಾಕ್ ಸೇನೆ ಭಾರತದ ಯೋಧರ ಮೇಲೆ ವಿನಾಕಾರಣ ಗುಂಡಿನ ದಾಳಿ ನಡೆಸುತ್ತಿತ್ತು. ಇಷ್ಟಾದರೂ ಸಿಧು ತಮ್ಮ ಕಿವಿಯಲ್ಲಿ ಸೇನಾ ಮುಖ್ಯಸ್ಥರು ಶಾಂತಿ ಮಂತ್ರ ಜಪಿಸಿದರು ಎಂದು ರೈಲು ಬಿಟ್ಟರು. ಇಷ್ಟರ ಜತೆ ಮೋದಿ ಆಲಿಂಗನ ಮಾಡಿಲ್ಲವೇ? ಅವರನ್ನೇಕೆ ಕೇಳುವುದಿಲ್ಲ ಎನ್ನುವ ಉದ್ಧಟತನವೂ ಬೇರೆ.
ಒಂದಾನೊಂದು ಕಾಲದಲ್ಲಿ ಪಾಕಿಸ್ಥಾನದ ವಿರುದ್ಧವೇ ಕ್ರಿಕೆಟ್ ಪಂದ್ಯಗಳಲ್ಲಿ ಗುಡುಗುತ್ತಿದ್ದ, ಅಬ್ಬರಿಸುತ್ತಿದ್ದ, ರನ್ ಮಳೆ ಸುರಿಸಿ, ಪಾಕಿಸ್ಥಾನ ಎಂದರೆ ಆಜನ್ಮ ವೈರಿ ಎಂಬಂತೆ ನಡೆದುಕೊಳ್ಳುತ್ತಿದ್ದ ಸಿಧು ನಡೆ ಇದೀಗ ಬಹುತೇಕರ ಮನಸ್ಸಿನಲ್ಲಿ ಬೇರೆಯದೇ ಭಾವನೆಗಳಿಗೆ ಕಾರಣವಾಗಿದ್ದಾರೆ. ಕ್ರಿಕೆಟ್ ನಲ್ಲಿನ ವೀರಾವೇಶವೆಲ್ಲವೂ ನಾಟಕವಾ ಎನ್ನುವಂತಾಗಿದೆ. ತಮ್ಮ ನಡೆಯಿಂದಾಗಿ ಭಾರತೀಯರ ಮನಸ್ಸಿನಲ್ಲಿ ಆಳವಾದ ಗಾಯವನ್ನೂ ಮಾಡಿಬಿಟ್ಟಿದ್ದಾರೆ. ಭಾರತೀಯರು ಸಿಧುವನ್ನು ಇನ್ನು ಕ್ಷಮಿಸಲಾರರು ಬಿಡಿ.
ಪಾಕಿಸ್ಥಾನ ಭಾರತಕ್ಕೆ ಎಸಗಿದ ದ್ರೋಹ ಒಂದೆರಡಲ್ಲ ಬಿಡಿ. ಸಾಲು ಸಾಲು ಯುದ್ಧಗಳು, ಕ್ಯಾತೆಗಳನ್ನು ಪಾಕಿಸ್ಥಾನ ಮಾಡುತ್ತಲೇ ಇದೆ. ಕಾಶ್ಮೀರದಲ್ಲಿ ಉಗ್ರರನ್ನು ನುಗ್ಗಿಸುವುದು, ಭಾರತದ ಮೇಲೆ ಉಗ್ರರ ದಾಳಿ ಕೈಗೊಳ್ಳುವ ಮೂಲಕ ಭಾರತವನ್ನು ಅಧೀರವನ್ನಾಗಿ ಮಾಡಲು ಯತ್ನಿಸುತ್ತಿರುವುದು ಪದೇ ಪದೆ ನಡೆಯುತ್ತಲೇ ಇದೆ. ವಿಶ್ವಸಂಸ್ಥೆಯ ಅಂಗಳದಲ್ಲಿ ಪದೇ ಪದೆ ಕಾಶ್ಮೀರ ವಿಷಯವನ್ನು ಪ್ರಸ್ಥಾಪಿಸುತ್ತಲೇ ಇದೆ.
ಇಂತಹ ಪಾಕಿಸ್ಥಾನವೇ ಭಾರತದಲ್ಲಿ ಒಂದಾನೊಂದು ಕಾಲದಲ್ಲಿ ನೌಕಾಧಿಕಾರಿಯಾಗಿದ್ದ ಕುಲಭೂಷಣ್ ಜಾಧವ ರಿಗೆ ಚಿತ್ರಹಿಂಸೆ ನೀಡುತ್ತಿದೆ. ಅಷ್ಟೇ ಅಲ್ಲದೇ ಜಾಧವ್ ಕುಟುಂಬಸ್ಥರು ಪಾಕಿಸ್ಥಾನದ ಜೈಲಿನಲ್ಲಿರುವ ಜಾಧವ್ ಭೇಟಿಗೆ ಹೋದಾಗ ಅವರ ಜತೆ ನಡೆದುಕೊಂಡ ರೀತಿ ಯಾರಿಗೂ ಮರೆತಿಲ್ಲ. ಜಾಧವ್ ತಾಯಿ ಹಾಗೂ ಪತ್ನಿಯನ್ನು ಅವಮಾನಿಸಿದ್ದು, ಕುಂಕುಮ, ಬಳೆ, ತಾಳಿಗಳನ್ನೆಲ್ಲ ತೆಗೆಸಿ ಇಟ್ಟಿದ್ದು, ಜಾಧವ್ ಪತ್ನಿಯ ಚಪ್ಪಲಿ ಕದ್ದಿದ್ದು ಇವೆಲ್ಲ ಇನ್ನೂ ನೆನಪಿನಲ್ಲಿದೆ.
ಭಾರತಕ್ಕೆ ಹೀಗೆ ಸಾಲು ಸಾಲು ಅವಮಾನ ಮಾಡಿದ, ಸಮಯ ಸಿಕ್ಕಾಗಲೆಲ್ಲ ಅವಮಾನ ಮಾಡಲು ಕಾಯುತ್ತಿರುವ ಪಾಕಿಸ್ಥಾನದ ಸೈನ್ಯದ ಮುಖ್ಯಸ್ಥರನ್ನೇ ಆಲಿಂಗನ ಮಾಡುವ ಮೂಲಕ ಸಿಧು ಭಾರತಕ್ಕೆ ದ್ರೋಹ ಎಸಗಿದಂತಾಗಲಿಲ್ಲವೇ? ಕ್ರಿಕೆಟ್ ಆಡುವಾಗಿನ ರೋಷ, ಆವೇಷ ಜಿದ್ದು ಎಲ್ಲ ಈಗೆಲ್ಲಿ ಹೋಯಿತು? ತಪ್ಪು ಮಾಡಿಯೂ ಅದನ್ನು ಸಮರ್ಥನೆ ಮಾಡಿಕೊಳ್ಳುವ ಸಿಧುಗೆ ನಾಚಿಕೆಯಾಗುವುದಿಲ್ಲವೇ?
ಒಂದು ತಿಂಗಳ ಅವಧಿಯಲ್ಲಿ ಈ ಎರಡು ಆಲಿಂಗನಗಳು ದೇಶದಾದ್ಯಂತ ಸಾಕಷ್ಟು ಸದ್ದು ಮಾಡಿತು. ಒಂದು ಆಲಿಂಗನ ದೇಶಕ್ಕೆ ಮನರಂಜನೆಯನ್ನು ನೀಡಿದರೆ ಇನ್ನೊದು ದೇಶದ ಜನರ ಮನಸ್ಸು ಕುದಿಯುವಂತೆ ಮಾಡಿತು.
ದೇಶದ ಜನರ ಹಾಗೂ ಸಂಸತ್ತಿನ ಗೌರವಗಳಿಗೆ ಕುಂದು ಉಂಟು ಮಾಡುವಂತಹ ಇಂತಹ ಆಲಿಂಗನಗಳ ಅಗತ್ಯವಾದರೂ ಏನಿದೆ? ಯಾರನ್ನೋ ಅನುಕರಿಸಲು ಹೋದರೆ ಇದಕ್ಕಿಿಂತ ಭಿನ್ನವಾದದ್ದು ಏನು ಆಗಲು ಸಾಧ್ಯ? ವಯಕ್ತಿಕ ಲಾಭಕ್ಕಾಾಗಿ, ಹೆಸರಿಗಾಗಿ ದೇಶದ ಗೌರವವನ್ನು, ಸಂಸತ್ತಿನ ಗೌರವವನ್ನು ಕಳೆಯಲು ಹಿಂದೇಟು ಹಾಕದವರು ದೇಶಕ್ಕಾಗಿ ಇನ್ನೇನು ತಾನೇ ಮಾಡಿಯಾರು?