ಭಾರತದ ಕ್ರಿಕೆಟ್ ತಂಡ ಇದುವರೆಗೂ ತನ್ನ ತವರು ನೆಲದಲ್ಲಿ ಸರಣಿಗಳ ಮೇಲೆ ಸರಣಿಗಳನ್ನು ಗೆದ್ದು, ನಂಬರ್ 1 ಪಟ್ಟಕ್ಕೆ ಏರಿದೆ. ಸೋಲರಿಯದ ಸರದಾರ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದೆ. ಆದರೆ ಆಗಸ್ಟ್ 1ರಿಂದ ಆಂಗ್ಲರ ನೆಲದಲ್ಲಿ ಇಂಗ್ಲೆೆಂಡ್ ವಿರುದ್ಧವೇ ಟೆಸ್‌ಟ್ ಸರಣಿ ನಡೆಯುತ್ತಿದ್ದು, ನಿಜವಾದ ಅಗ್ನಿ ಪರೀಕ್ಷೆ ಎದುರಾಗಲಿದೆ.
ಭಾರತದ ಬಹುತೇಕ ಪಿಚ್‌ಗಳು ಬ್ಯಾಟಿಂಗ್ ಸ್ನೇಹಿ. ಸ್ಪಿನ್ ಪಿಚ್. ಇಲ್ಲಿ ಭಾರತದ ಬ್ಯಾಟ್‌ಸ್‌ಮನ್‌ಗಳು ಎದುರಾಳಿಗಳನ್ನು ಹೈರಾಣು ಮಾಡುವುದು ಸುಲಭ. ಅಲ್ಲದೇ ಭಾರತದ ಸ್ಪಿನ್ನರ್‌ಗಳ ಎದುರು ವಿದೇಶಿ ಬ್ಯಾಟ್‌ಸ್‌ಮನ್‌ಗಳು ತಿಣುಕಾಡುವುದು ಸಹಜ. ಆದರೆ ಇಂಗ್ಲೆೆಂಡಿನ ಪಿಚ್‌ಗಳು ಹಾಗಲ್ಲ. ವೇಗಿಗಳ ಸ್ನೇಹಿ, ಬೌನ್ಸಿ ಪಿಚ್‌ಗಳು. ಸ್ವಿಿಂಗ್ ಬೌಲರ್‌ಗಳಿಗೆ ಹೇಳಿ ಮಾಡಿಸಿದಂತಹ ಅಂಗಣಗಳು ಇಲ್ಲಿರುತ್ತವೆ. ಭಾರತ ತವರಿನಲ್ಲಿ ಭಲಾಢ್ಯ ಬ್ಯಾಟಿಂಗ್ ಕ್ರಮಾಂಕದ ಮೂಲಕ ಖ್ಯಾತಿ ಗಳಿಸಿದೆ. ಆದರೆ ನಿಜವಾದ ಸತ್ವ ಪರೀಕ್ಷೆ ಇಂಗ್ಲೆೆಂಡಿನ ಬೌನ್ಸಿ ಅಂಕಣಗಳಲ್ಲಿ ಆಗಲಿದೆ.
ಯಾರಾಗುವರು ಪ್ರಭಾವಿ?
ಭಾರತ ಹಿಂದೆ ಇಂಗ್ಲೆೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭಗಳಲ್ಲಿ ಸಾಕಷ್ಟು ಸೋಲುಗಳನ್ನು ಅನುಭವಿಸಿದ್ದರೂ, ಖ್ಯಾತ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಈ ಮುಂತಾದ ಆಟಗಾರರು ಭಾರತದ ಸಹಾಯಕ್ಕೆ ನಿಲ್ಲುತ್ತಿದ್ದರು. ಆದರೆ ಈಗ ಇರುವ ತಂಡದಲ್ಲಿ ಇಂಗ್ಲೆೆಂಡ್ ನೆಲದಲ್ಲಿ ಸಮರ್ಪಕವಾಗಿ ಬ್ಯಾಟಿಂಗ್ ಮಾಡುವವರ ಕೊರತೆ ಎದ್ದು ಕಾಣುತ್ತಿದೆ.
ಕ್ಯಾಪ್ಟನ್ ವಿರಾಟ್ ಕೊಹ್ಲಿ ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಉತ್ತಮ ಪಾರ್ಮಿನಲ್ಲಿದ್ದರೂ ಟೆಸ್‌ಟ್ ಸರಣಿಯಲ್ಲಿ ಅವರ ಪ್ರದರ್ಶನ ಹೇಗೆ ಎನ್ನುವ ಕುತೂಹಲ ಕಾಡುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಇಂಗ್ಲೆೆಂಡಿನ ಸ್ಪಿನ್ನರ್ ಎದುರು ಕೊಹ್ಲಿ ತಿಣುಕಾಡುತ್ತಿದ್ದಾರೆ. ಮುಂಬರುವ ಟೆಸ್‌ಟ್ ಸರಣಿ ಅವರ ಬ್ಯಾಾಟಿಂಗ್ ಸಾಮರ್ಥ್ಯಕ್ಕೆ ನಿಜವಾದ ಸವಾಲೇ ಸರಿ.
ನಂಬಿಕೆ ಉಳಿಸುವರೇ ರಹಾನೆ, ಪೂಜಾರ?
ಉಳಿದಂತೆ ಟೆಸ್‌ಟ್ ತಂಡದ ನಂಬಿಕಸ್ಥ ಬ್ಯಾಟ್‌ಸ್‌ಮನ್ ಎಂದರೆ ಅಜಿಂಕ್ಯಾ ರಹಾನೆ ಹಾಗೂ ಚೆತೇಶ್ವರ ಪೂಜಾರ. ಈ ಇಬ್ಬರೂ ಭಾರತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದಾಾರೆ. ಆದರೆ ಆಂಗ್ಲರ ನೆಲದಲ್ಲಿ ಅವರ ಬ್ಯಾಟಿಂಗ್ ಅಷ್ಟಕ್ಕಷ್ಟೇ. 2014-15ರಲ್ಲಿ ನಡೆದಿದ್ದ ಟೆಸ್‌ಟ್ ಸರಣಿಯ, ಪೂಜಾರ ಮೊದ ಮೊದಲ ಅಭಿನವ ದ್ರಾವಿಡ್ ಎಂದೇ ಕರೆಸಿಕೊಂಡರೂ, ತವರಿನಲ್ಲಿ ಮಾತ್ರ ಬ್ಯಾಟಿಂಗ್‌ಗೆ ಸೀಮಿತ ಎಂಬಂತಾಗಿದ್ದಾರೆ. ಹೀಗಿದ್ದಾಗ ಇವರಿಂದ ಯಾವ ರೀತಿಯ ಪ್ರದರ್ಶನ ಬರಬಹುದು ಎನ್ನುವ ನಿರೀಕ್ಷೆ ಹೆಚ್ಚಿದೆ.
ರಾಹುಲ್ ಮೇಲೆ ಜವಾಬ್ದಾರಿ:
ಕನ್ನಡಿಗ ಕೆ. ಎಲ್. ರಾಹುಲ್ ಮೇಲೆ ಈ ಸಾರಿ ಜವಾಬ್ದಾರಿ ಹೆಚ್ಚಿದೆ. ಆಷ್ಟ್ರೇಲಿಯಾದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ರಾಹುಲ್, ಇಂಗ್ಲೆೆಂಡ್ ವಿರುದ್ಧದ ಟಿ20ಯಲ್ಲಿ ಶತಕ ಸಿಡಿಸಿದ್ದರು. ಆದರೆ ಏಕದಿನದಲ್ಲಿ ವಿಲರಾಗಿದ್ದರು. ಬೌನ್ಸಿ ಪಿಚ್‌ಗಳಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ ಅನುಭವ ರಾಹುಲ್‌ಗಿದೆ. ಬದಲಾಗುತ್ತಿರುವ ಬ್ಯಾಟಿಂಗ್ ಕ್ರಮಾಂಕ ರಾಹುಲ್ ಆಟದ ಮೇಲೆ ಪ್ರದರ್ಶನ ಬೀರಬಹುದು. ಇಂಗ್ಲೆೆಂಡಿನಲ್ಲಿ ಅವರ ಬ್ಯಾಾಟ್‌ನಿಂದ ರನ್ ಮಳೆಯಾಗಲಿ ಎನ್ನುವ ಹಾರಯಿಕೆ ಅಭಿಮಾನಿಗಳದ್ದು.
ಬ್ಯಾಟಿಂಗ್ ನಿರೀಕ್ಷೆ:
ಆರಂಭಿಕ ಆಟಗಾರ ಶಿಖರ್ ಧವನ್, ಇದೇ ಮೊದಲ ಬಾರಿ ಟೆಸ್‌ಟ್ ತಂಡಕ್ಕೆ ಆಯ್ಕೆಯಾಗಿರುವ ರಿಷಬ್ ಪಂಥ್, ಇನ್ನೋರ್ವ ವಿಕೆಟ್ ಕೀಪರ್ ದಿನೇಶ್ ಕಾರ್ತೀಕ್ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ತ್ರಿಶತಕ ವೀರ ಕರುಣ್ ನಾಯರ್ ಹೇಗೆ ಬ್ಯಾಟ್ ಬೀಸಬಹುದು ಎನ್ನುವ ಕುತೂಹಲವಿದೆ. ಭಾರತದ ಬ್ಯಾಾಟಿಂಗ್ ಬಲ ಇಂಗ್ಲೆೆಂಡಿನ ವೇಗಿಗಳನ್ನು ಸಮರ್ಥವಾಗಿ ಎದುರಿಸಿದಲ್ಲಿ ಗೆಲುವು ಕಟ್ಟಿಿಟ್ಟ ಬುತ್ತಿಿಘಿ.
ಬೆಳಗುವರೇ ಕುಲದೀಪ
ಟೆಸ್‌ಟ್ ತಂಡಕ್ಕೆೆ ಆಯ್ಕೆೆಯಾಗಿರುವ ಇನ್ನೋರ್ವ ಹೊಸ ಮುಖ, ಇತ್ತೀಚಿನ ದಿನಗಳಲ್ಲಿ ಭಾರತದ ಸ್ಪಿನ್ ಮುಂದಾಳು ಎಂಬಂತೆ ಬಿಂಬಿತವಾಗಿರುವ ಚೈನಾಮನ್ ಕುಲದೀಪ್ ಯಾದವ್ ಪ್ರದರ್ಶನದ ಮೇಲೆ ಸಾಕಷ್ಟು ನಿರೀಕ್ಷೆೆಗಳಿವೆ. ಭಾರತದ ಸ್ಪಿನ್ ಪಿಚ್‌ಗಳಿಗಿಂತ ಭಿನ್ನವಾದ ಇಂಗ್ಲೆೆಂಡಿನ ಪಿಚ್‌ಗಳು ಕುಲದೀಪರ ಪಾಲಿಗೆ ವರದಾನವಾಗಬಹುದೇ ಎನ್ನುವುದನ್ನು ಕಾದು ನೋಡಬೇಕಿದೆ.
ಅನುಭವಿಗಳಾದ ಅಶ್ವಿನ್ ಹಾಗೂ ಜಡೇಜಾರ ಪರಿಣಾಮಕಾರಿ ಬೌಲಿಂಗ್ ಭಾರತದ ಬೆನ್ನಿಗೆ ನಿಲ್ಲಬಹುದು. ಉಳಿದಂತೆ ವೇಗಿಗಳಾದ ಭುವನೇಶ್ವರ ಕುಮಾರ್ ಹಾಗೂ ಜಸ್‌ಪ್ರೀತ್ ಬೂಮ್ರಾಾರ ಪ್ರದರ್ಶನ ಟೆಸ್‌ಟ್ ಲಿತಾಂಶದ ಮೇಲೆ ಪ್ರಭಾವ ಬೀರಲಿದೆ. ಇವರೀರ್ವರೂ ಸ್ವಿಿಂಗ್ ಮೂಲಕ ಆಂಗ್ಲರನ್ನು ಕಟ್ಟಿ ಹಾಕಿದರೆ ಮಾತ್ರ ಭಾರತಕ್ಕೆ ಗೆಲುವು ಸಾಧ್ಘಿ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪ್ರದರ್ಶನ ಕೂಡ ಉಲ್ಲೇಖನೀಯ.
ಹಿಂದೆ ಏನಾಗಿತ್ತು :
ಈ ಹಿಂದಿನ ಇಂಗ್ಲೆೆಂಡ್ ಪ್ರವಾಸಗಳಲ್ಲಿ ಭಾರತದ ಲಿತಾಂಶ ಗಮನಾರ್ಹವೇನೂ ಆಗಿಲ್ಲಘಿ. 1971 ಹಾಗೂ 2007ರಲ್ಲಿ ಭಾರತ ತಂಡ ಇಂಗ್ಲೆೆಂಡ್ ವಿರುದ್ಧದ 4 ಟೆಸ್‌ಟ್‌ಗಳ ಸರಣಿಯಲ್ಲಿ 1-0 ದಿಂದ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತ್ತು. ಅದನ್ನು ಹೊರತುಪಡಿಸಿದರೆ ಭಾರತ ತಂಡ ಟೆಸ್‌ಟ್ ಸರಣಿ ಗೆದ್ದೇ ಇಲ್ಲ.
-----
1932- ಭಾರತ ತಂಡದಿಂದ ಮೊಟ್ಟಮೊದಲ ಇಂಗ್ಲೆೆಂಡ್ ಪ್ರವಾಸ, ಮೊದಲ ಸರಣಿಯಲ್ಲಿ ಭಾರತಕ್ಕೆ 1-0 ಸೋಲು
1936, 1946, 1952, 1959, 1967, 1971, 1974, 1979, 1982, 1986, 1990, 1996, 2002, 2007, 2011, 2014ರಲ್ಲಿ ಭಾರತ ಇಂಗ್ಲೆೆಂಡ್ ಪ್ರವಾಸ ಕೈಗೊಂಡಿದೆ.