ಚಿತ್ರನಟರುಗಳು ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸಿದ ನಿದರ್ಶನಗಳು ಹಲವಿದೆ. ಭಾರತದಲ್ಲಿ ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಲನಚಿತ್ರ ನಟರುಗಳೇ ಹೊಸ ಪಕ್ಷವನ್ನು ನಕಟ್ಟಿ ಅಕಾರದ ಚುಕ್ಕಾಣಿ ಹಿಡಿದು, ಮುಖ್ಯಮಂತ್ರಿಯೂ ಆಗಿದ್ದಾರೆ. ಇನ್ನೂ ಹಲವು ನಟರುಗಳು ಪಕ್ಷ ಕಟ್ಟಿದರೂ ಆರಕ್ಕೇರದೇ, ಮೂರಕ್ಕಿಳಿಯದೇ ತೊಳಲಾಡಿದ ಸಂದರ್ಭಗಳೂ ಇದೆ. ಕೆಲವು ಚಿತ್ರನಟರುಗಳು, ನಟಿಯರುಗಳು ಯಾವುದಾದರೂ ಒಂದು ರಾಜಕೀಯ ಪಕ್ಷವನ್ನು ಸೇರಿ, ಶಾಸಕರಾಗಿಯೋ, ವಿಧಾನ ಪರಿಷತ್ ಸದಸ್ಯರಾಗಿಯೋ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ಕೆಲವರು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ತಮಿಳುನಾಡು, ಕರ್ನಾಟಕ, ಆಂದ್ರಪ್ರದೇಶ, ಕೇರಳ, ತೆಲಂಗಾಣಗಳಲ್ಲಿ ಚಿತ್ರನಟರು ರಾಜಕೀಯ ರಂಗಕ್ಕೆ ಕಾಲಿರಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಚಿತ್ರ ರಂಗಕ್ಕೆ ಕಾಲಿರಿಸಿದ ನಟರುಗಳ ಸಾಲಿಗೆ ತಮಿಳುನಾಡಿನ ಸೂಪರ್ಸ್ಟಾರ್ ರಜನೀಕಾಂತ್ ಸೇರ್ಪಡೆಯಾಗಿದ್ದಾರೆ. ಡಿ.31ರಂದು ರಜನೀಕಾಂತ್ ತಾವು ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ತಿಳಿಸಿದ್ದಾರೆ. ಇದು ತಮಿಳುನಾಡಿನಲ್ಲಿ ಸಂಚಲನಕ್ಕೂ ಕಾರಣವಾಗಿದೆ.
ಪಕ್ಷ ಕಟ್ಟಿ ಗೆದ್ದವರು
ದಕ್ಷಿಣ ಭಾರತದ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಹಲವಾರು ಚಿತ್ರ ನಟರು ಪಕ್ಷವನ್ನು ಕಟ್ಟಿ ರಾಜ್ಯದ ಚುಕ್ಕಾಣಿ ಹಿಡಿದ ನಿದರ್ಶನಗಳಿವೆ. ಆಂದ್ರ ಪ್ರದೇಶದಲ್ಲಿ ಎನ್. ಟಿ. ರಾಮರಾವ್, ತಮಿಳುನಾಡಿನಲ್ಲಿ ಎಂ. ಜಿ. ರಾಮಚಂದ್ರನ್ ಇವರಲ್ಲಿ ಪ್ರಮುಖರು. ಇವರಲ್ಲದೇ ಆಂದ್ರ ಪ್ರದೇಶದಲ್ಲಿ ಚಿರಂಜೀವಿ, ಪವನ್ ಕಲ್ಯಾಣ್, ತಮಿಳುನಾಡಿನಲ್ಲಿ ವಿಜಯಕಾಂತ್ ಮತ್ತಿತರರು ಹೊಸ ಪಕ್ಷ ಕಟ್ಟಿ ಅದೃಷ್ಟ ಪರೀಕ್ಷೆ ನಡೆಸಿಕೊಂಡಿದ್ದಾರೆ. ಹಿಂದೆ ಶಿವಾಜಿ ಗಣೇಶನ್ ಮತ್ತಿತರ ನಟರುಗಳೂ ಕೂಡ ರಾಜಕೀಯ ಪಕ್ಷ ಕಟ್ಟಿದ್ದರು. ಇದೀಗ ತಮಿಳುನಾಡಿನಲ್ಲಿ ಕಮಲ್ ಹಾಸನ್, ರಜನೀಕಾಂತ್, ಕನ್ನಡದಲ್ಲಿ ಉಪೇಂದ್ರ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಅಭಿಮಾನಿಗಳು ಈ ನಟರುಗಳ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತು ಗೆಲುವಿನ ಸವಿಯನ್ನು ಉಣಿಸುತ್ತಾರೋ ಕಾದು ನೋಡಬೇಕಿದೆ.
ಎಐಎಡಿಎಂಕೆ ಕಟ್ಟಿದ ಎಂ. ಜಿ. ರಾಮಚಂದ್ರನ್
ತಮಿಳುನಾಡಿನಲ್ಲಿ ಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳೇ ಪ್ರಾಬಲ್ಯ ಮೆರೆಯುತ್ತಿದ್ದ ಸಂದ‘ರ್ದಲ್ಲಿ ಹೊಸ ಪಕ್ಷ ಕಟ್ಟಿ ಅದೃಷ್ಟ ಪರೀಕ್ಷೆಗೆ ಮುಂದಾದವರು ತಮಿಳುನಾಡಿನ ಮೇರು ನಟ ಎಂ. ಜಿ. ರಾಮಚಂದ್ರನ್ ಅವರು. 1972ರ ಅಕ್ಟೋಬರ್ 7ರಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೆಟ್ರ ಕಳಗಂ ಎಂಬ ಪಕ್ಷವನ್ನು ರಚನೆ ಮಾಡಿದರು. ಚಿತ್ರನಟರೋರ್ವರು ಹೊಸ ಪಕ್ಷವನ್ನು ಕಟ್ಟಿದ ಮೊದಲ ನಿದರ್ಶನ ಇದಾಗಿತ್ತುಘಿ. ಎಂಜಿಆರ್ ನಿರ್ಧಾರದಿಂದ ತಮಿಳುನಾಡಿನಲ್ಲಿ ದೊಡ್ಡ ಅಚ್ಚರಿ ಉಂಟಾಗಿತ್ತುಘಿ. ಪಕ್ಷ ಘೋಷಣೆಗೂ ಮೊದಲು ಡಿಎಂಕೆ ಪಕ್ಷದಲ್ಲಿದ್ದ ಎಂಜಿಆರ್ ನಂತರದಲ್ಲಿ ಡಿಎಂಕೆ ನಾಯಕರೊಂದಿಗೆ ಉಂಟಾದ ಭಿನ್ನಮತದಿಂದ ಬೇರೆ ಪಕ್ಷ ರಚನೆಗೆ ಮುಂದಾದರು. ಅವರ ಈ ನಿರ್ಧಾರ ಫಲಕೊಟ್ಟಿತು. 1973ರ ಎಪ್ರೀಲ್ 2ರಂದು ನಡೆದ ತಮಿಳುನಾಡು ಚುನಾವಣೆಯಲ್ಲಿ ಪಕ್ಷ 11 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿ ಮೂರನೇ ಅತ್ಯಂತ ದೊಡ್ಡ ಪಕ್ಷ ಎಂದು ಹೆಸರಾಯಿತು. ಚಿತ್ರನಟನೋರ್ವನ ಹೊಸ ಪಕ್ಷ ಯಶಸ್ವಿಯಾಗಿತ್ತು. ತದನಂತರದಲ್ಲಿ ಈ ಪಕ್ಷ ತಮಿಳುನಾಡಿನಲ್ಲಿ ಅಕಾರದ ಚುಕ್ಕಾಣೀ ಹಿಡಿದಿದ್ದಲ್ಲದೇ ಎಂಜಿಆರ್ ಹಲವು ಸಾರಿ ಮುಖ್ಯಮಂತ್ರಿಯೂ ಆದರು. ಮೂರು ಸಾರಿ ಮುಖ್ಯಮಂತ್ರಿಯಾಗಿದ್ದ ಎಂಜಿಆರ್ ರಾಜಕಾರಣದಲ್ಲಿ ಯಶಸ್ವಿಯೂ ಆಗಿದ್ದರು.
ತೆಲುಗು ದೇಶಂ ಕಟ್ಟಿದ ಎನ್ಟಿಆರ್
ಎನ್. ಟಿ. ರಾಮರಾವ್ ಆಂಧ್ರ ಕಂಡ ಸೂಪರ್ ಸ್ಟಾರ್. ದಿಗ್ಗಜ ನಟ. ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಎಂಬ ಪಕ್ಷವನ್ನು ಕಟ್ಟಿದಾಗ ಹಲವರು ಅನುಮಾನದಿಂದ ನೋಡಿದ್ದರು. ತಮಿಳುನಾಡಿನಲ್ಲಿ ಎಂ. ಜಿ. ಆರ್ ಹಿಡಿದ ಹಾದಿಯನ್ನೇ ಇವರು ಆಯ್ಕೆ ಮಾಡಿಕೊಂಡರು. ಆ ಸಂದ‘ರ್ದಲ್ಲಿ ನಟನೆ ಬೇರೆ, ರಾಜಕಾರಣವೇ ಬೇರೆ ಎಂಬ ಮಾತುಗಳನ್ನು ಇವರ ಕುರಿತು ಆಡಲಾಗಿತ್ತುಘಿ. ಆಂಧ್ರದ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಮಾತ್ರ ಇದ್ದಾಗ ರಾಮರಾವ್ ಪಕ್ಷವನ್ನು ಘೋಷಿಸಿದರು. ಇದರಿಂದಾಗಿ ಆಂಧ್ರಪ್ರದೇಶ ಕೆಲಕಾಲ ಅಚ್ಚರಿಗೆ ಒಳಗಾಗಿತ್ತು. ಸರಣಿ ಪ್ರಚಾರ ಭಾಷಣಗಳು, ರ್ಯಾಲಿ, ಪ್ರವಾಸಗಳ ಮೂಲಕ ಆಂಧ್ರದಲ್ಲಿ ಸಂಚಲನ ಮೂಡಿಸಿದ ರಾಮರಾವ್ ವಿಧಾನ ಸಭೆ ಚುನಾವಣೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿದರು. 1982 ಮಾರ್ಚ್ 29ರಂದು ಪಕ್ಷವನ್ನು ಘೋಷಿಸಲಾಯಿತು. 1983ರಲ್ಲಿ ಪಕ್ಷ ಅಕಾರದ ಚುಕ್ಕಾಣಿ ಹಿಡಿಯಿತು. ಎನ್. ಟಿ. ರಾಮರಾವ್ ಆಂಧ್ರದ 10ನೇ ಮುಖ್ಯಮಂತ್ರಿಯಾಗಿ ಅಕಾರ ಸ್ವೀಕಾರ ಮಾಡಿದರು. ಈ ಕಾರಣದಿಂದಲೇ ಚಿತ್ರನಟರಾಗಿ ಪಕ್ಷವನ್ನು ಕಟ್ಟಿ ಯಶಸ್ವಿಯಾದವರ ಪೈಕಿ ಎನ್ಟಿಆರ್ ಮೊದಲ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಎನ್ಟಿಆರ್ರ ತೆಲುಗುದೇಶಂ ಪಕ್ಷವು ಆಂಧ್ರದಲ್ಲಿ ಅಕಾರಕ್ಕೇರಿದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಪಕ್ಷ ಎನ್ನುವ ಖ್ಯಾತಿಯನ್ನೂ ಪಡೆದುಕೊಂಡಿದೆ. ವಿಶೇಷವೆಂದರೆ ತೆಲುಗುದೇಶಂ ಪಕ್ಷ 1984ರಿಂದ 1989ರ ವರೆಗೆ 8ನೇ ಲೋಕಸಭೆ ಅವಧಿಯಲ್ಲಿ ವಿರೋಧ ಪಕ್ಷವಾಗಿಯೂ ಕಾರ್ಯನಿರ್ವಹಿಸಿತ್ತು. ವಿರೋಧ ಪಕ್ಷದ ಕಾರ್ಯ ನಿರ್ವಹಿಸಿದ ಮೊಟ್ಟ ಮೊದಲ ಪಕ್ಷ ಟಿಡಿಪಿ ಎನ್ನುವ ಖ್ಯಾತಿಯೂ ಪಕ್ಷಕ್ಕಿದೆ. ಪಕ್ಷದ ಯಶಸ್ಸಿನ ಸಿಂಹಪಾಲು ಎನ್. ಟಿ. ರಾಮರಾವ್ ಅವರದ್ದು ಎಂದರೆ ತಪ್ಪಾಗಲಿಕ್ಕಿಲ್ಲ.
ಪ್ರಜಾರಾಜ್ಯಂ ಕಟ್ಟಿ ಸೋತ ಚಿರಂಜೀವಿ
ತೆಲುಗು ಮೇರು ನಟ ಎನ್ಟಿಆರ್ ತೆಲುಗುದೇಶಂ ಕಟ್ಟಿ ಯಸ್ವಿಯಾಗಿದ್ದನ್ನೇ ಗಮನಿಸಿದ ಇನ್ನೋರ್ವ ನಟ, ಮೆಗಾಸ್ಟಾರ್ ಚಿರಂಜೀವಿ ಪ್ರಜಾರಾಜ್ಯಂ ಎನ್ನುವ ಹೊಸ ಪಕ್ಷವನ್ನು ಕಟ್ಟಿದರು. 2008ರ ಆಗಸ್ಟ್ 26ರಂದು ಚಿರಂಜೀವಿ ಪಕ್ಷವನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ ರಾಜಕೀಯ ಪಂಡಿತರು ಹಾಗೂ ಅಭಿಮಾನಿಗಳು ಎನ್ಟಿಆರ್ ಅವರಂತೆಯೇ ಚಿರಂಜೀವಿ ಕೂಡ ಮೋಡಿ ಮಾಡುತ್ತಾರೆ ಎಂದೇ ವಿಶ್ಲೇಷಿಸಿದ್ದರು. 2009ರ ಚುನಾವಣೆಯಲ್ಲಿ ಚಿರಂಜೀವಿ ಸಹಿತ 18 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತು. ಆಂಧ್ರದ ಇತಿಹಾಸದಲ್ಲಿ ಇದು ಸಾಧಾರಣ ವಿಜಯ ಎಂದೇ ಹೇಳಲಾಯಿತು. ನಂತರದ ದಿನಗಳಲ್ಲಿಯೂ ಪಕ್ಷ ಚೇತರಿಸಿಕೊಳ್ಳಲಿಲ್ಲ. ಪಕ್ಷ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಆಂಧ್ರದಲ್ಲಿ ಪಕ್ಷ ಆರಂಭದಲ್ಲಿ ಸೃಷ್ಟಿಸಿದ್ದ ಹವಾ ನಂತರದಲ್ಲಿ ಮುಂದುವರಿಯಲಿಲ್ಲ. ಇದರಿಂದಾಗಿ 2011ರ ಫೆಬ್ರವರಿ 6ರಂದು ಚಿರಂಜೀವಿ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿದರು.
ಡಿಎಂಡಿಕೆ ಕಟ್ಟಿದ ವಿಜಯಕಾಂತ್
ತಮಿಳುನಾಡಿನ ಇನ್ನೋರ್ವ ನಟ ವಿಜಯಕಾಂತ್ ಅವರು ಎಂಜಿಆರ್ ಹಾದಿಯನ್ನು ಹಿಡಿದರು. 2005ರ ಸೆಪ್ಟೆಂಬರ್ 14ರಂದು ವಿಜಯಕಾಂತ್ ದೇಸೀಯ ಮುರ್ಪೋಕು ದ್ರಾವಿಡ ಕಳಗಂ ಎಂಬ ರಾಜಕೀಯ ಪಕ್ಷವನ್ನು ಘೋಷಿಸಿದಾಗ ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಡಿಎಂಕೆಗೆ ಭಾರಿ ಸವಾಲಾಗಬಲ್ಲದು ಎಂದೇ ಹೇಳಲಾಗಿತ್ತು. 2006ರಲ್ಲಿ ಮೊದಲ ಚುನಾವಣೆಯನ್ನು ಎದುರಿಸಿದ ಪಕ್ಷವು ಕೇವಲ 1 ಸ್ಥಾನದಲ್ಲಿ ಜಯ ಗಳಿಸಿತು. ನಂತರದ ಚುನಾವಣೆಗಳಲ್ಲಿ ಗೆಲುವು ಮರಿಚಿಕೆಯಾದರೂ, 2011ರಲ್ಲಿ 29 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಪಕ್ಷವು ಇಂದಿಗೂ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ. ಮತಗಳಿಕೆಯಲ್ಲಿ ಚುನಾವಣೆಯಿಂದ ಚುನಾವಣೆಗೆ ಏರಿಕೆಯಾಗುತ್ತಿದ್ದರೂ ಗೆಲುವು ಬಿಸಿಲು ಕುರೆಯಂತಾಗಿದೆ. ಸಂಸ್ಥಾಪಕ ವಿಜಯಕಾಂತ್ ಮಾತ್ರ ತನ್ನ ಛಲವನ್ನು ಬಿಡುತ್ತಿಲ್ಲ. ಪಕ್ಷ ಇದೀಗ ಎನ್ಡಿಎ ಜೊತೆ ಕೈಜೋಡಿಸಿದೆ.
ಜನಸೇನೆ ಮೂಲಕ ಅದೃಷ್ಟ ಪರೀಕ್ಷಿಸಿದ ಪವನ್ ಕಲ್ಯಾಣ್
ಸಹೋದರ ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿದಂತೇ ತಮ್ಮ ಪವನ್ ಕಲ್ಯಾಣ್ ಕೂಡ ಜನಸೇನೆ ಪಕ್ಷ ಕಟ್ಟುವ ಮೂಲಕ ರಾಜಕೀಯದ ಅದೃಷ್ಟ ಪರೀಕ್ಷೆ ಕೈಗೊಂಡರು. 2014ರ ಮಾರ್ಚ್ 14ರಂದು ತಮ್ಮ ಹೊಸ ಪಕ್ಷವನ್ನು ಘೋಷಿಸಿದ ಪವನ್ ಕಲ್ಯಾಣ್ ಇದೀಗ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯ ಸಂದ‘ರ್ದಲ್ಲಿ ತೆಲುಗುದೇಶಂ ಹಾಗೂ ಬಿಜೆಪಿ ಪರ ಪ್ರಚಾರ ಕಾರ್ಯ ಕೈಗೊಂಡಿದ್ದರು. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು. 2019ರ ವಿಧಾನಸಭಾ ಚುನಾವಣೆಯಗಲ್ಲಿ ಪವನ್ ಕಲ್ಯಾಣ್ರ ಜನಸೇನಾ ಪಕ್ಷ ಕಣಕ್ಕಿಳಿಯಲಿದೆ ಎಂದೂ ಹೇಳಲಾಗುತ್ತಿದೆ. ಚುನಾವಣೆಯ ಫಲಿತಾಂಶದ ಮೇಲೆ ಪವನ್ ಕಲ್ಯಾಣ್ರ ರಾಜಕೀಯ ಭವಿಷ್ಯ ನಿಂತಿದೆ.
ಟಿಎಂಎಂ ಪಕ್ಷ ಕಟ್ಟಿ ಸೋತ ಶಿವಾಜಿ ಗಣೇಶನ್
ತಮಿಳುನಾಡಿನಲ್ಲಿ ಮೇರು ನಟ ಎಂಜಿಆರ್ ಅವರ ಹಾದಿಯನ್ನೇ ಹಿಡಿದವರು ಇನ್ನೋರ್ವ ದಿಗ್ಗಜ ನಟ ಶಿವಾಜಿ ಗಣೇಶನ್ ಅವರು. ಡಿಎಂಕೆ ಪಕ್ಷದ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರೂ ಡಿಎಂಕೆ ನಾಯಕ ಕರುಣಾನಿ ಅವರ ಜೊತೆಗಿನ ಮುನಿಸಿನಿಂದಾಗಿ ಡಿಎಂಕೆಯನ್ನು ತೊರೆದರು. 1988ರಲ್ಲಿ ತಮ್ಮದೇ ಆದ ತಮಿಳಗ ಮುನ್ನೇಟ್ರ ಮುನ್ನಾನಿ ಎನ್ನುವ ಪಕ್ಷವನ್ನು ಕಟ್ಟಿದರು. 1989ರ ಚುನಾವಣೆಯಲ್ಲಿ ಪಕ್ಷ ರ್ಸ್ಪಸಿದ್ದ ಎಲ್ಲ ಕ್ಷೇತ್ರಗಳಲ್ಲಿಯೂ ಸೋಲನ್ನು ಅನುಭವಿಸಿತು. ಇದರಿಂದಾಗಿ ಶಿವಾಜಿ ಗಣೇಶನ್ ತಮ್ಮ ಪಕ್ಷವನ್ನು ಜನತಾ ದಳದೊಂದಿಗೆ ವಿಲೀನಗೊಳಿಸಿದರು. ಚಿತ್ರನಟನೋರ್ವ ಪಕ್ಷ ಕಟ್ಟಿ ಹೀನಾಯ ಸೋಲನ್ನು ಅನುಭವಿಸಿದ ಮೊದಲ ನಿದರ್ಶನ ಇದಾಗಿತ್ತು.
ಎಐಎಸ್ಎಂಕೆ ಕಟ್ಟಿದ ಶರತ್ಕುಮಾರ್
ಆಲ್ ಇಂಡಿಯಾ ಸಮಾಧುವಾ ಮಕ್ಕಳ್ ಕಚ್ಚಿ ಪಕ್ಷವನ್ನು ಕಟ್ಟಿ ರಾಜಕೀಯ ಪರೀಕ್ಷೆಗೆ ಮುಂದಾದವರು ಚಿತ್ರನಟ ಶರತ್ಕುಮಾರ್. 2007ರ ಆಗಸ್ಟ್ 31ರಂದು ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಿದರು. 2011ರಲ್ಲಿ ಎಐಎಡಿಎಂಕೆಯ ಮಿತ್ರ ಪಕ್ಷವಾಗಿ ಕಣಕ್ಕಿಳಿದಿದ್ದ ಶರತ್ ಕುಮಾರ್ರ ಎಎಸ್ಎಂಕೆ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದರು. ಈ ಪಕ್ಷವು ಪ್ರಸ್ತುತ ಕೇರಳಕ್ಕೂ ವಿಸ್ತರಣೆಯಾಗಿದೆ.
ಪ್ರಜಾಕೀಯ ಮೂಲಕ ಉಪೇಂದ್ರ ಸತ್ವಪರೀಕ್ಷೆ
ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರು ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಪ್ರಜಾಕೀಯ ಎಂಬ ಹೆಸರಿನ ಮೂಲಕ ಪಕ್ಷ ಘೋಷಣೆ ಕೈಗೊಂಡಿದ್ದ ಉಪೇಂದ್ರ ನಂತರದಲ್ಲಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಎಂದು ಅಕೃತವಾಗಿ ನಾಮಕರಣ ಮಾಡಿದರು. ತಮ್ಮ ಪಕ್ಷವನ್ನು ಕ್ಯಾಶ್ಲೆಸ್ ಪಕ್ಷ ಎಂದು ಕರೆದುಕೊಂಡಿರುವ ಉಪೇಂದ್ರ ಮುಂಬರುವ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ರ್ಸ್ಪಸುವುದಾಗಿ ಘೋಷಿಸಿದ್ದಾರೆ. ಪ್ರಜ್ಞಾವಂತ ಮತದಾರರೇ ಜೀವಾಳ ಎಂದು ಹೇಳುವ ಉಪೇಂದ್ರ ಕರ್ನಾಟಕದಲ್ಲಿ ಸ್ವತಂತ್ರ ಪಕ್ಷ ಕಟ್ಟಿದ ಮೊಟ್ಟ ಮೊದಲ ಚಿತ್ರ ನಟ. ಉಪೇಂದ್ರದ ಹೊಸ ಪ್ರಯೋಗ ಯಶಸ್ವಿಯಾಗುವುದೇ ಎನ್ನುವುದನ್ನು ಕಾದು ನೋಡಬೇಕಿದೆ.
ಪಕ್ಷ ಕಟ್ಟದೇ ಗೆದ್ದವರು
ತಾವೇ ಪಕ್ಷವನ್ನು ಕಟ್ಟದೇ ರಾಜಕಾರಣದಲ್ಲಿ ಯಶಸ್ವಿಯಾದ ಹಲವು ನಟರು ಹಗೂ ನಟಿಯರಿದ್ದಾರೆ. ಆ ಸಾಲಿನಲ್ಲಿ ಪ್ರಮುಖವಾಗಿರುವವರು ತಮಿಳುನಾಡಿನ ಜಯಲಲಿತಾ, ಕೆ. ಕರುಣಾನಿ, ಕನ್ನಡದ ಅಂಬರೀಶ್, ಅನಂತನಾಗ್, ಉಮಾಶ್ರೀಘಿ, ಕೇರಳದ ಕೆ. ಬಿ. ಗಣೇಶ ಕುಮಾರ್, ನಂದಮೂರಿ ಬಾಲಕೃಷ್ಣ, ನೆಪೋಲಿಯನ್ ಮತ್ತಿತರರು ಪ್ರಮುಖರಾಗಿದ್ದಾರೆ.
ಇವರಲ್ಲಿ ತಮಿಳುನಾಡಿನ ಚಲನಚಿತ್ರ ಸಂ‘ಾಷಣೆಕಾರ, ಚಿತ್ರ ಸಾಹಿತಿ ಕೆ. ಕರುಣಾನಿ ಡಿಎಂಕೆ ಸೇರಿ ಹಲವು ಸಾರಿ ಮುಖ್ಯಮಂತ್ರಿಯಾದವರು. ತಮಿಳುನಾಡಿನಲ್ಲಿಯೇ ಚಿತ್ರನಟಿ ಜೆ. ಜಯಲಲಿತಾ ಎಐಎಡಿಎಂಕೆ ಪಕ್ಷ ಸೇರಿ, ಚುಕ್ಕಾಣಿ ಹಿಡಿದು, ಹಲವು ಸಾರಿ ಮುಖ್ಯಮಂತ್ರಿ ಗಾದಿಗೂ ಏರಿದ್ದಾರೆ. ಕನ್ನಡದ ನಟರಾದ ಅಂಬರೀಶ್ ಕೇಂದ್ರ ಸಚಿವರಾಗಿದ್ದರು. ಪ್ರಸ್ತುತ ಶಾಸಕರಾಗಿದ್ದಾರೆ. ಹಿರಿಯ ನಟ ಅನಂತನಾಗ್ ಜನತಾದಳ ಸರ್ಕಾರದಲ್ಲಿ ಸಚಿವರಾಗಿದ್ದರು. ಪ್ರಸ್ತುತ ಚಿತ್ರನಟಿ ಉಮಾಶ್ರೀ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿದ್ದಾರೆ. ಚಿತ್ರನಟಿಯರಾದ ತಾರಾ, ಜಯಮಾಲಾ ಅವರು ವಿ‘ಾನಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದವರು
ಪ್ರಸ್ತುತ ತಮಿಳುನಟ ರಜನೀಕಾಂತ್, ಕಮಲ್ ಹಾಸನ್, ವಿಶಾಲ್, ಕನ್ನಡದ ಉಪೇಂದ್ರ, ತೆಲುಗಿನ ಪವನ್ ಕಲ್ಯಾಣ್ ಮತ್ತಿತರರು ರಾಜಕೀಯ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ರಜನಿ, ಉಪೇಂದ್ರ, ಪವನ್ ಕಲ್ಯಾಣ್ ಹೊಸ ಪಕ್ಷಗಳನ್ನು ಘೋಷಿಸಿದ್ದರೆ ಕಮಲ್ ಹಾಸನ್ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ. ವಿಶಾಲ್ ತಮಿಳುನಾಡಿನ ಆರ್. ಕೆ. ನಗರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದರು.
ರಾಜಕಾರಣಿ-ನಟನೆಯ ದ್ವಿಪಾತ್ರ
ಕನ್ನಡದಲ್ಲಿ ಜಗ್ಗೇಶ್, ಮುಖ್ಯಮಂತ್ರಿ ಚಂದ್ರು, ಬಿ. ಸಿ. ಪಾಟೀಲ್, ಯೋಗೇಶ್ವರ್, ರಮ್ಯಾ, ರಾಮಕೃಷ್ಣ, ದೊಡ್ಡಣ್ಣ, ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ಕೆ. ಶಿವರಾಮು ಮತ್ತಿತರರು ಚುನಾವಣೆಗೆ ರ್ಸ್ಪಸಿ ಸೋಲು-ಗೆಲುವಿನ ಸಿಹಿ-ಕಹಿಯನ್ನು ಉಂಡಿದ್ದಾರೆ. ತೆಲುಗಿನಲ್ಲಿ ಕೋಟ ಶ್ರೀನಿವಾಸ ರಾವ್, ಮೋಹನ್ ಬಾಬು, ತಮಿಳಿನ ಎಸ್. ಎಸ್. ರಾಜೇಂದ್ರನ್, ಮತ್ತಿತರರು ರಾಜಕೀಯ ರಂಗದಲ್ಲಿಯೂ ಛಾಪು ಮೂಡಿಸಿದ್ದಾರೆ.