ಭಾರತೀಯ ರೈಲ್ವೆಗೆ 150ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ಈ ಅವಯಲ್ಲಿ ಭಾರತೀಯ ರೈಲ್ವೆ ಅನೇಕ ಏಳು ಬೀಳುಗಳನ್ನೂ ಕಂಡಿದೆ. ಸಾಕಷ್ಟು ಬೆಳವಣಿಗೆಗಳು, ತಾಂತ್ರಿಕ ಅಭಿವೃದ್ಧಿ ಭಾರತೀಯ ರೈಲ್ವೆಯಲ್ಲಿ ಆಗಿದೆ. ಉಂಗಿಬಂಡಿಗಳು ಓಡುತ್ತಿದ್ದ ಜಾಗದಲ್ಲಿ ಡೀಸೇಲ್ ಇಂಜಿನ್ನುಗಳು, ವಿದ್ಯುತ್ ರೈಲುಗಳೂ ಬಂದಿವೆ. ಅಷ್ಟೇ ಏಕೆ ಇದೀಗ ಭಾರತದಲ್ಲಿ ಬುಲೆಟ್ ಟ್ರೇನ್ ಓಡಿಸುವ ನಿಟ್ಟಿನಲ್ಲಿಯೂ ಪ್ರಯತ್ನಗಳು ಸಾಗಿವೆ.
ಅದೇ ರೀತಿ ರೈಲ್ವೆಯ ಕಾರ್ಯಕ್ಷಮತೆ ಕೂಡ ಹೆಚ್ಚಿದೆ. ರೈಲ್ವೆ ನಿಲ್ದಾಣಗಳ ಸುಧಾರಣೆ, ಹಳಿಗಳ ಬದಲಾವಣೆ, ಮಾರ್ಗಗಳ ವಿದ್ಯುದೀಕರಣ, ಹಳಿಗಳ ಡಬ್ಲಿಂಗ್, ಬೋಗಿಗಳ ಸುಧಾರಣೆ ಹೀಗೆ ಹಲವಾರು ವಿಭಾಗಗಳಲ್ಲಿ ರೈಲ್ವೆ ಅಭಿವೃದ್ಧಿಯನ್ನು ಕಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನೂ ಒದಗಿಸಲಾಗಿದೆ. ಹಳೆಯ ಬೋಗಿಗಳ ಬದಲು ಹೊಸ, ಆಧುನಿಕ ವ್ಯವಸ್ಥೆಯನ್ನೊಳಗೊಂಡ ಬೋಗಿಗಳು ಬಂದಿವೆ. ಸುಖಾಸೀನ ಸೀಟುಗಳನ್ನೊಳಗೊಂಡ ಬೋಗಿಗಳು, ಹವಾನಿಯಂತ್ರಿತ ಬೋಗಿಗಳೂ ಬಂದಿದೆ. ಇದೀಗ ಮುಂಬಯಿಯಲ್ಲಿ ಓಡಾಡುವ ಲೋಕಲ್ ಟ್ರೇನುಗಳಲ್ಲಿಯೂ ಕೂಡ ಹವಾ ನಿಯಂತ್ರಿತ ಬೋಗಿಗಳನ್ನು ಅಳವಡಿಕೆ ಮಾಡಲಾಗಿದ್ದು, ಈ ರೈಲುಗಳು ಸೋಮವಾರದಿಂದ ಓಡಾಟ ನಡೆಸಲು ಆರಂಭಿಸಿವೆ.
ಮುಂಬಯಿ ಲೋಕಲ್ ರೈಲ್ವೆ ಇತಿಹಾಸ-ವಿಶೇಷ
ಮುಂಬಯಿಯ ಮಹಾನಗರ ರೈಲ್ವೆ ವಿಭಾಗಕ್ಕೊಳಪಟ್ಟಿರುವ ಮುಂಬಯಿಯ ಲೋಕಲ್ ರೈಲುಗಳ ಜಾಲ ಎಂತವರನ್ನೂ ನಿಬ್ಬೆರಗಾಗಿಸುತ್ತದೆ. 465 ಕಿಲೋಮೀಟರ್ (289ಮೈಲು) ವಿಸ್ತಾರವಾಗಿರುವ ಮುಂಬಯಿ ಲೋಕಲ್ ಟ್ರೇನ್ ಜಾಲವು ಪ್ರತಿದಿನ 2342 ರೈಲ್ವೆ ಸೇವೆಗಳನ್ನು ಒದಗಿಸುತ್ತದೆ. ಜೊತೆಗೆ ಸರಾಸರಿ 7.5 ಮಿಲಿಯನ್ ಪ್ರಯಾಣಿಕರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕರೆದೊಯ್ಯುತ್ತದೆ. ಜಗತ್ತಿನ ಅತ್ಯಂತ ಜನನಿಬಿಡ ಲೋಕಲ್ ರೈಲ್ವೆ ಜಾಲಗಳಲ್ಲಿ ಮುಂಬಯಿ ಸಬ್‌ಅರ್ಬನ್ ರೈಲ್ವೇಯೂ ಒಂದು ಎನ್ನಿಸಿಕೊಂಡಿದೆ. ಮುಂಜಾನೆ 4 ಗಂಟೆಯಿಂದ ಮಧ್ಯ ರಾತ್ರಿ 1 ಗಂಟೆಯವರೆಗೂ ರೈಲು ಸೇವೆ ಇರುವುದೂ ಕೂಡ ವಿಶೇಷ. 1853ರ ಎಪ್ರಿಲ್ 16ರಂದು ಮದುಆಹ್ನ 3.35ಕ್ಕೆ ಮೊಟ್ಟಮೊದಲ ಸಬ್ ಅರ್ಬನ್ ರೈಲು ಓಡಿತ್ತುಘಿ. ಸಾಮಾನ್ಯವಾಗಿ ಪ್ರತಿ ರೈಲುಗಳಲ್ಲಿಯೂ 12ರಿಂದ 15 ಬೋಗಿಗಳನ್ನು ಅಳವಡಿಸಲಾಗುತ್ತದೆ. ಮುಂಬಯಿ ಸಬ್‌ಅರ್ಬನ್ ರೈಲುಗಳ ಸರಾಸರಿ ವೇಗ 50 ಕಿಮಿ. ಪ್ರತಿ ರೈಲಿನಲ್ಲಿಯೂ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆಯ ಬೋಗಿಗಳಿವೆ. ಮಕ್ಕಳು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿಗಳನ್ನೂ ತೆರೆಯಲಾಗಿದೆ. 2002ರ ವೇಳೆಗೆ ಪ್ರಾಯೋಗಿಕವಾಗಿ ಒಂದೊಂದು ಹವಾನಿಯಂತ್ರಿತ ಬೋಗಿಗಳನ್ನು ಅಳವಡಿಸಲಾಗಿತ್ತು. 2013ರಲ್ಲಿ ಸಂಪೂರ್ಣ ಹವಾನಿಯಂತ್ರಿತ ರೈಲುಗಳನ್ನು ಓಡಿಸುವ ಯೋಜನೆ ಕೈಗೊಳ್ಳಲಾಯಿತು. 2017ರಂದು ಅದು ಕಾರ್ಯರೂಪಕ್ಕೆ ಬರುತ್ತಿದೆ.
ಮುಂಬಯಿಯಲ್ಲಿ ಲೋಕಲ್ ರೈಲಿಗೆ ಚಾಲನೆ ನೀಡಿದ್ದು ಬ್ರಿಟೀಷರು. 1853ರಲ್ಲಿ 34 ಕಿಮಿ ದೂರದ ವಿಕ್ಟೋರಿಯಾ ಟರ್ಮಿನಸ್-ಠಾಣೆ ನಡುವಿನ ಮಾರ್ಗದಲ್ಲಿ ರೈಲ್ವೆ ಸಂಚಾರ ಆರಂಭವಾಯಿತು. ಇದು ಏಷ್ಯಾದ ಮೊಟ್ಟಮೊದಲ ರೈಲ್ವೆ ಸೇವೆಯಾಗಿರುವುದೂ ಕೂಡ ವಿಶೇಷವೇ ಸರಿ. ಮುಂಬಯಿಯ ಲೋಕಲ್ ರೈಲ್ವೆ ಜಾಲವು ಪಶ್ಚಿಮ ರೈಲ್ವೆ ಹಾಗೂ ಕೇಂದ್ರೀಯ ರೈಲ್ವೆ ವಲಯಗಳ ವ್ಯಾಪ್ತಿಯಲ್ಲಿ ಬರುತ್ತದೆ. ಈ ಎರಡೂ ವಲಯಗಳ ದೀರ್ಘ ದೂರದ ರೈಲುಗಳೂ ಕೂಡ ಕೆಲವು ಕಡೆಗಳಲ್ಲಿ ಲೋಕಲ್ ರೈಲಿನ ಮಾರ್ಗದಲ್ಲಿಯೇ ಚಲಿಸುವುದು ವಿಶೇಷ.
ಮುಂಬಯಿಯ ಲೋಕಲ್ ರೈಲ್ವೆ ಜಾಲವನ್ನು ಪ್ರಮುಖವಾಗಿ ನಾಲ್ಕು ಭಾಗ ಮಾಡಲಾಗಿದೆ. ಪಶ್ಚಿಮ ಭಾಗ, ಕೇಂದ್ರ ಭಾಗ, ಹಾರ್ಬರ್ ಭಾಗ ಹಾಗೂ ಟ್ರಾನ್ಸ್ ಹಾರ್ಬರ್ ವಿಭಾಗ ಎಂಬ ನಾಲ್ಕು ಭಾಗಗಳಿವೆ. ಪಶ್ಚಿಮ ಭಾಗದಲ್ಲಿ 37 ರೈಲ್ವೆ ನಿಲ್ದಾಣಗಳಿವೆ. ಕೇಂದ್ರೀಐ ವಿಭಾಗದಲ್ಲಿ 62, ಹಾರ್ಬರ್ ವಿಭಾಗದಲ್ಲಿ 32 ಹಾಗೂ ಟ್ರಾನ್ಸ್ ಹಾರ್ಬರ್ ವಿಭಾಗದಲ್ಲಿ 10 ರೈಲ್ವೆ ನಿಲ್ದಾಣಗಳಿವೆ.
ಭಾರತೀಯ ರೈಲ್ವೆಯ ವಿಶೇಷತೆಗಳು
ಭಾರತದಲ್ಲಿ 119630 ಕಿಲೋಮೀಟರ್ ಉದ್ದದ ರೈಲ್ವೆ ಹಳಿಗಳಿವೆ. ಜಗತ್ತಿನ ನಾಲ್ಕನೇ ಅತ್ಯಂತ ದೊಡ್ಡ ರೈಲ್ವೆ ಜಾಲ ಭಾರತದ್ದು ಎನ್ನುವ ಖ್ಯಾತಿ ಗಳಿಸಿಕೊಂಡಿದೆ. ಈ ಮಾರ್ಗಗಳ ಪೈಕಿ ಶೇ.45ರಷ್ಟು ಮಾರ್ಗವನ್ನು ವಿದ್ಯುದೀಕರಣ ಗೊಳಿಸಲಾಗಿದೆ. ಭಾರತದಲ್ಲಿ ಒಂದು ರೈಲಿನಲ್ಲಿ ಪ್ರತಿ ದಿನ ಓಡಾಡುವವರ ಸರಾಸರಿ ಸಂಖ್ಯೆ 13313. ಭಾರತದಲ್ಲಿ ಸಂಚರಿಸುವ ಎಲ್ಲ ರೈಲುಗಳ ಸರಾಸರಿ ವೇಗ ತಾಸಿಗೆ 50.9 ಕಿಲೋಮೀಟರ್. 254006 ರೈಲ್ವೆ ವ್ಯಾಗನ್ನುಗಳು, 70241 ಪ್ಯಾಸೆಂಜರ್ ಬೋಗಿಗಳು, 11122 ಲೋಕೋ ಮೋಟಿವ್‌ಗಳುಗಳಿದ್ದು ಇದರಲ್ಲಿ 39 ಉಗಿ ಇಂಜಿನ್ನುಗಳು, 5869 ಡಿಸೇಲ್ ಇಂಜಿನ್ನುಗಳು ಹಾಗೂ 5214 ವಿದ್ಯುತ್ ಚಾಲಿತ ಇಂಜಿನ್ನುಗಳಾಗಿವೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ನೀಡಿದ ಸಂಸ್ಥೆಗಳಲ್ಲಿ ಭಾರತೀಯ ರೈಲ್ವೆಗೆ 8ನೇ ಸ್ಥಾನ.
ಭಾರತೀಯ ರೈಲ್ವೆಯ ಹಲವು ಮೊದಲುಗಳು
ಭಾರತದಲ್ಲಿ ಮೊಟ್ಟಮೊದಲ ರೈಲು ಓಡಿದ್ದು 1845ರ ಮೇ 8ರಂದು. ಆಗಿನ ಮದ್ರಾಸ್ ಪ್ರಾಂತ್ಯದ ರೆಡ್ ಹಿಲ್ಸ್‌ನಿಂದ ಚಿಂತಾದ್ರಿಪೇಟೆ ವರೆಗಿನ 34 ಕಿಲೋಮೀಟರ್ ಉದ್ದದ ಮಾರ್ಗಕ್ಕೆ 1837ರಲ್ಲೇ ಅಡಿಗಲ್ಲು ಹಾಕಲಾಯಿತಾದರೂ 1853ರಲ್ಲಿ ಈ ಮಾರ್ಗದಲ್ಲಿ ಮೊದಲ ರೈಲು ಓಡಾಡಿತು. ಈ ಕಾರಣದಿಂದ 1845ರಲ್ಲಿ ಮುಂಬಯಿ ಹಾಗೂ ಠಾಣೆ ಮದ್ಯ ಓಡಾಡಿದ ರೈಲನ್ನೇ ಭಾರತದ ಮೊಟ್ಟ ಮೊದಲ ರೈಲು ಎನ್ನಲಾಗುತ್ತದೆ. 1951ರಲ್ಲಿ ಭಾರತದ ಎಲ್ಲ ಪ್ರಾಂತ್ಯಗಳ ರೈಲನ್ನೂ ರೈಲ್ವೆ ಇಲಾಖೆಯ ಅಡಿಯಲ್ಲಿ ತರಲಾಯಿತು. ಜೊತೆಗೆ ಭಾರತದಲ್ಲಿ ರೈಲ್ವೆ ವಿಭಾಗಗಳನ್ನೂ ಆರಂಭಿಸಲಾಯಿತು. 1925ರಲ್ಲಿ ಮುಂಬಯಿಯ ವಿಕ್ಟೋರಿಯಾ ಟರ್ಮಿನಸ್ ಹಾಗೂ ಕುರ್ಲಾ ನಡುವೆ ಮೊಟ್ಟಮೊದಲ ವಿದ್ಯುತ್ ಚಾಲಿತ ರೈಲನ್ನು ಓಡಿಸಲಾಯಿತು. 1873ರ ಫೆಬ್ರವರಿ 24ರಂದು ಕೋಲ್ಕತ್ತಾದಲ್ಲಿ ಸಿಲ್ಡಾಹ್‌ನಿಂದ ಅರ್ಮೇನಿಯನ್ ಘಾಟ್ ಸ್ಟ್ರೀಟ್‌ವರೆಗೆ ಮೊಟ್ಟಮೊದಲ ಟ್ರಾಮ್ ರೈಲನ್ನು ಓಡಿಸಲಾಯಿತು. 1951ರಲ್ಲಿ ರೈಲುಗಳಲ್ಲಿ ಫ್ಯಾನುಗಳನ್ನು ಹಾಗೂ ಲೈಟ್‌ಗಳ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು. ಅದೇ ವರ್ಷ ಪ್ಯಾಸೆಂಜರ್ ಬೋಗಿಗಳು ಹಾಗೂ ಇತರೆ ಐಷಾರಾಮಿ ಬೋಗಿಗಳನ್ನು ಆರಂಭಿಸಲಾಯಿತು. ನಿದ್ರಿಸಿ ಪ್ರಯಾಣಿಸುವವರಿಗಾಗಿ ಸ್ಲೀಪಿಂಗ್ ಬೋಗಿಗಳನ್ನೂ ಆರಂಭಿಸಲಾಯಿತು.
ಭಾರತದ ಮೊಟ್ಟ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲು 1956ರಲ್ಲಿ ದೆಹಲಿಯಿಂದ ಕೋಲ್ಕತ್ತಾದ ಹೌರಾ ವರೆಗೆ ಪ್ರಯಾಣ ಬೆಳೆಸಿತು. 1986ರಲ್ಲಿ ಹೊಸದಿಲ್ಲಿಯಲ್ಲಿ ಕಂಪ್ಯೂಟರೀಕೃತ ಟಿಕೆಟ್ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಾಯಿತು. 1988ರಲ್ಲಿ ದೆಹಲಿ ಹಾಗೂ ಝಾನ್ಸಿ ನಡುವೆ ಮೊಟ್ಟಮೊದಲ ಶತಾಬ್ದಿ ರೈಲನ್ನು ಓಡಿಸಲಾಯಿತು. 1990ರಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರವನ್ನು ಪರಿಚಯಿಸಲಾಯಿತು. 1993ರಲ್ಲಿ ಎಸಿ-3 ಟೈರ್ ಕೋಚ್ ಹಾಗೂ ಸ್ಲೀಪರ್ ಬೋಗಿಗಳನ್ನು ಪರಿಚಯಿಸಲಾಯಿತು. ಅಲ್ಲದೇ ಇದುವರೆಗೂ ಇದ್ದ ಪ್ಯಾಸೆಂಜರ್ ಮತ್ತು ಸ್ಲೀಪರ್ ಬೋಗಿಗಳನ್ನು ಪ್ರತ್ಯೇಕಿಸಲಾಯಿತು. 1996ರಲ್ಲಿ ಕಂಪ್ಯೂಟರೀಕೃತ ಮುಂಗಡ ಸೀಟು ಕಾಯ್ದಿರಿಸುವ ಸೇವೆ ಜಾರಿಗೆ ಬಂದಿತು. 2016ರಲ್ಲಿ ಭಾರತದ ಅತ್ಯಂತ ವೇಗದ ರೈಲಾದ ಗತಿಮಾನ್ ಎಕ್ಸ್‌ಪ್ರೆಸ್‌ನ್ನು ಪರಿಚಯಿಸಲಾಗಿದೆ. 2022ರ ವೇಳೆಗೆ ಭಾರತದ ಎಲ್ಲ ರೈಲ್ವೆ ಮಾರ್ಗಗಳನ್ನೂ ವಿದ್ಯುದೀಕರಣಗೊಳಿಸುವ ಗುರಿ ರೈಲ್ವೆ ಇಲಾಖೆಯ ಮುಂದಿದೆ.
ಮುಂಬೈನಲ್ಲಿ ಎಸಿ ಲೋಕಲ್ ರೈಲು
ಇದೇ ಮೊತ್ತ ಮೊದಲ ಬಾರಿಗೆ ಮುಂಬೈನಲ್ಲಿ ಹವಾನಿಯಂತ್ರಿತ ಸಬ್‌ಅರ್ಬನ್ ಲೋಕಲ್ ರೈಲು ಸಂಚರಿಸಲು ಆರಂಭಿಸಿವೆ. ಮುಂಬಯಿಗರ ಪಾಲಿಗೆ ಇದು ಹೊಸವರ್ಷದ ಕೊಡುಗೆ. ಹವಾ ನಿಯಂತ್ರಿತ ಬೋಗಿಗಳನ್ನು ಒಳಗೊಂಡಿರುವ ಮೊಟ್ಟ ಮೊದಲ ರೈಲು ಅಂಧೇರಿಯಿಂದ 2 ಗಂಟೆ 10 ನಿಮಿಷಕ್ಕೆ ಹೊರಡಲಿದೆ. ಅದೇ ರೀತಿ ಈ ಎಸಿ ಲೋಕಲ್ ರೈಲು 2 ಗಂಟೆ 44 ನಿಮಿಷಕ್ಕೆ ಚರ್ಚ್‌ಗೇಟ್ ತಲುಪಲಿದೆ.
ಒಟ್ಟು 12 ಟ್ರಿಪ್‌ಗಳು
ಮೊದಲ ಉದ್ಘಾಟನಾ ಪ್ರಯಾಣದ ಬಳಿಕ ಎಲ್ಲಾ ವಾರದ ದಿನಗಳಲ್ಲಿ 6 ರಿಟರ್ನ್ ಟ್ರಿಪ್‌ಗಳನ್ನು ಒದಗಿಸಲಿದೆ. ಶನಿವಾರ ಹಾಗೂ ಭಾನುವಾರ ನಿರ್ವಹಣೆ ಉದ್ದೇಶದಿಂದ ಸೇವೆಗಳಿಂದ ಅಲಭ್ಯ ವಾಗಿರುತ್ತದೆ ಎಂದು ಪಶ್ಚಿಮ ರೈಲ್ವೆ ಮುಖ್ಯ ವಕ್ತಾರ ರವೀಂದರ್ ಭಾಕರ್ ಮಾಹಿತಿ ನೀಡಿದ್ದಾರೆ.
ಪ್ರತಿದಿನ 12 ಟ್ರಿಪ್‌ಗಳು, ಚರ್ಚ್‌ಗೇಟ್-ವಿರಾರ್(ಪಲ್‌ಘರ್) ವಲಯದಲ್ಲಿ 8 ಟ್ರಿಪ್‌ಗಳನ್ನು ನೀಡಲಿದೆ. ಚರ್ಚ್‌ಗೇಟ್-ಬೋರಿವಾಲಿ ನಡುವೆ 3 ಟ್ರಿಪ್‌ಗಳನ್ನು ನೀಡಲಿದೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಾಗುತ್ತದೆ. ಮತ್ತೊಂದು ಅಂತಿಮ ಸೇವೆ ತುಂಬಾ ನಿಧಾನವಾದ ಪ್ರಯಾಣವಾಗಿರುತ್ತದೆ. ಅದು ಮಹಾಲಕ್ಷ್ಮಿ- ಬೋರಿವಿಲಿ ನಡುವೆ ಅಲ್ಲಲ್ಲಿ ನಿಲ್ದಾಣಗಳಲ್ಲಿ ನಿಲ್ಲಿಸಿಕೊಂಡು ಹೋಗುವ ಟ್ರಿಪ್ ಆಗಿರಲಿದೆ. ಜ.1ರ ನಂತರ ಈ ರೈಲಿನ ಸೇವೆಯನ್ನು ಚರ್ಚ್‌ಗೇಟ್‌ನಿಂದ ವೀರಾರ್ ವರೆಗೆ ವಿಸ್ತರಣೆ ಮಾಡಲಾಗುತ್ತಿದೆ.
ಟಿಕೆಟ್ ದರ ಹೆಚ್ಚು
ಉದ್ಘಾಟನಾ ಟಿಕೆಟ್ ದರವನ್ನು ಪಶ್ಚಿಮ ರೈಲ್ವೆ ಘೋಷಿಸಿದೆ. ಟಿಕೆಟ್ ದರ ಸಾಮಾನ್ಯ ಪ್ರಥಮ ದರ್ಜೆ ಟಿಕೆಟ್‌ಗಿಂತ 1.3 ಪಟ್ಟು ಹೆಚ್ಚಿದೆ. ವಾರಕ್ಕೊಮ್ಮೆ, 15 ದಿನಕ್ಕೊಮ್ಮೆ ಹಾಗೂ ತಿಂಗಳಿಗೊಮ್ಮೆ ಟಿಕೆಟ್ ಲಭ್ಯವಿವೆ. ಅವುಗಳು ಸಾಮಾನ್ಯ ಪ್ರಥಮ ದರ್ಜೆ ಟಿಕೆಟ್ ದರಕ್ಕಿಂತ 5, 7.5 ಮತ್ತು 10 ಪಟ್ಟು ಹೆಚ್ಚಿವೆ. ಅಲ್ಲದೇ, ಶೇ.5ರಷ್ಟು ಜಿಎಸ್‌ಟಿ ಹಾಗು ಇತರ ಶುಲ್ಕಗಳೂ ಸೇರುತ್ತವೆ.
ಹವಾನಿಯಂತ್ರಿತ ಸಬ್‌ಅರ್ಬನ್ ರೈಲಿನ ವಿಶೇಷತೆಗಳು
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾದ ಸಂಪೂರ್ಣ ಹವಾನಿಯಂತ್ರಿತ ರೈಲು 6,000 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಸ್ವಯಂಚಾಲಿತ ಬಾಗಿಲು ತೆರೆಯುವ ಹಾಗೂ ಮುಚ್ಚುವ ವ್ಯವಸ್ಥೆಘಿ, ಎಲ್‌ಇಡಿ ದೀಪಗಳು, ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ನಡುವೆ ತುರ್ತು ಟಾಕ್ ಬ್ಯಾಕ್ ವ್ಯವಸ್ಥೆ, ಅತ್ಯಾಧುನಿಕ ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಗಂಟೆಗೆ 100 ಕಿ.ಮೀ. ತನಕದ ವೇಗ, 12 ಬೋಗಿಗಳನ್ನೂ ಪರಸ್ಪರ ಸಂಪರ್ಕಿಸುವ ಏರ್‌ಟೈಟ್ ಪ್ರವೇಶ ದ್ವಾರಗಳು, ಇನ್ನೂ ಇತರ ಆಧುನಿಕ ಸೌಲಭ್ಯಗಳು ಹಾಗೂ ಪ್ರಯಾಣಿಕರ ಸುರಕ್ಷತೆಗೂ ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಈ ರೈಲು ಹೊಂದಿರುತ್ತದೆ. ಈಗಾಗಲೇ 65ಕ್ಕೂ ಹೆಚ್ಚಿನ ಸಾರಿ ಈ ರೈಲಿನ ಪ್ರಾಯೋಗಿಕ ಓಡಾಟ ಪರೀಕ್ಷೆ ಕೈಗೊಳ್ಳಲಾಗಿದೆ.
ಮೆಟ್ರೋ ನಗರಗಳಲ್ಲಿ ಎಸಿ ಲೋಕಲ್ ರೈಲು
ಮುಂಬೈ ಮೆಟ್ರೊ ನಗರವಷ್ಟೇ ಅಲ್ಲದೆ ಕೋಲ್ಕತಾ, ಚೆನ್ನೈ ಮತ್ತು ಸಿಕಂದರಾಬಾದ್ ಮೆಟ್ರೊ ನಗರಗಳ ಲೋಕಲ್ ರೈಲುಗಳಲ್ಲೂ ಹವಾನಿಯಂತ್ರಿತ ಮತ್ತು ಸ್ವಯಂಚಾಲಿತ ಬಾಗಿಲುಗಳ ಬೋಗಿಗಳಿರಲಿವೆ ಎಂಬುದು ರೈಲ್ವೆ ಇಲಾಖೆಯ ಅಕಾರಿಗಳು ನೀಡುವ ಮಾಹಿತಿ.
ಹೊಸ ಎಸಿ ರೈಲುಗಳು ಮತ್ತು ಹಳೇ ಲೋಕಲ್ ರೈಲುಗಳು ಒಟ್ಟೊಟ್ಟಿಗೆ ಓಡಾಡಲಿವೆ. ಆದರೆ ಪ್ರಯಾಣದ ದರಗಳಲ್ಲಿ ವ್ಯತ್ಯಾಸವಿದೆ. ಸ್ವಯಂಚಾಲಿತ ಬಾಗಿಲುಗಳ ಎಸಿ ಬೋಗಿಗಳಿರುವ ರೈಲುಗಳು ಚೆನ್ನೈ, ಕೋಲ್ಕತಾ, ಬೆಂಗಳೂರು ನಗರಗಳಲ್ಲೂ ಓಡಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂಬುದೂ ಅಕಾರಿಗಳು ನೀಡುವ ಮಾಹಿತಿ.