Tuesday, February 5, 2019

ಟೆಸ್ಟ್ ಲೋಕದಲ್ಲಿ ಮೊದಲ ಶತಕದ ಸಂಭ್ರಮ

(ಚಾರ್ಲ್ಸ್ ಬ್ಯಾನರ್ ಮ್ಯಾನ್ )
ಶತಕ ಭಾರಿಸುವುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಕನಸು. ಅದರಲ್ಲಿಯು ಪ್ರಮುಖವಾಗಿ ಯಾವುದೇ ದೇಶದ ಪರ ಅಂತಾರಾಷ್ಟ್ರೀಯ ವಲಯದಲ್ಲಿ ಮೊದಲ ಶತಕ ಭಾರಿಸುವುದು ಎಂದರೆ ಅದಕ್ಕಿಿಂತ ಹೆಮ್ಮೆಯ ಸಂಗತಿ ಇನ್ನೊೊಂದು ಇರಲಾರದು. ಆಸ್ಟ್ರೇಲಿಯಾದ ಚಾರ್ಲ್ಸ್  ಬ್ಯಾನರ್‌ಮನ್ ಅವರಿಂದ ಹಿಡಿದು ಐರ್ಲೆಂಡ್‌ನ ಕೆವಿನ್ ಓಬ್ರಿಯಾನ್‌ವರೆಗೆ ಬೇರೆ ಬೇರೆ ದೇಶದ ಆಟಗಾರರು ಆಯಾಯಾ ದೇಶದ ಪರ ಮೊದಲ ಶತಕ ಭಾರಿಸಿ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಹಾಗಾದರೆ ಯಾವ ಯಾವ ದೇಶದ ಆಟಗಾರರಿಂದ ಆ ದೇಶದ ಟೆಸ್ಟ್ ಕ್ರಿಕೆಟ್‌ನ ಮೊದಲ ಶತಕ ದಾಖಲಾಯಿತು ಎನ್ನುವ ಕುತೂಹಲ ಪ್ರತಿಯೊಬ್ಬರಿಗೂ ಇರುವುದು ಸಹಜ. ಅಂತಹ ವಿಶಿಷ್ಟ ಸಂಗತಿಯ ಕುರಿತು ಇದೋ ಇಲ್ಲಿದೆ ಕಿರು ಮಾಹಿತಿ.

ಚಾರ್ಲ್ಸ್  ಬ್ಯಾನರ್‌ಮನ್ (ಆಸ್ಟ್ರೇಲಿಯಾ)
ಆಸ್ಟ್ರೇಲಿಯಾದ ಚಾರ್ಲ್ಸ್  ಬ್ಯಾನರ್‌ಮನ್ ಆಸ್ಟ್ರೇಲಿಯಾ ದೇಶದ ಪಾಲಿಗೆ ಮೊಟ್ಟ ಮೊದಲ ಶತಕ ಭಾರಿಸಿದ ಖ್ಯಾತಿಯನ್ನು ಹೊಂದಿದ್ದಾರೆ. ವಿಶ್ವ ಕ್ರಿಕೆಟ್ ಇತಿಹಾಸ (ಟೆಸ್ಟ್, ಏಕದಿನ ಹಾಗೂ ಟಿ20)ದಲ್ಲಿ ದಾಖಲಾದ ಮೊಟ್ಟ ಮೊದಲ ಶತಕ ಭಾರಿಸಿದವರು ಇವರು ಎಂಬ ಖ್ಯಾತಿಯನ್ನು ಹೊಂದಿದ್ದಾರೆ. 1876-77ರಲ್ಲಿ ಮೇಲ್ಬೊರ್ನ್‌ನಲ್ಲಿ ನಡೆದ ಮೊಟ್ಟ ಮೊದಲ ಟೆಸ್ಟ್ ಪಂದ್ಯದಲ್ಲಿ  ಮೊಟ್ಟ ಮೊದಲ ಎಸೆತವನ್ನು ಎದುರಿಸಿದ್ದೂ ಈ ಬ್ಯಾನರ್‌ಮನ್ರೇ. ಅಂದಹಾಗೆ ಮೊದಲ ಶತಕ ಭಾರಿಸಿದ ಇವರು ಅಂದು ಗಳಿಸಿದ್ದು 165ರನ್.

ಡಬ್ಲು. ಜಿ. ಗ್ರೇಸ್ (ಇಂಗ್ಲೆೆಂಡ್)
ಕ್ರಿಕೆಟ್ ಪಿತಾಮಹ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿರುವ ಡಬ್ಲು ಜಿ. ಗ್ರೇಸ್ ಇಂಗ್ಲೆೆಂಡ್ ದೇಶದ ಮೊದಲ ಶತಕ ಭಾರಿಸಿದ ಆಟಗಾರ ಎನ್ನುವ ಖ್ಯಾತಿಯನ್ನು ಹೊಂದಿದ್ದಾರೆ. ಗ್ರೇಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಾಲ್ಕನೇ ಟೆಸ್ಟ್  ಪಂದ್ಯದಲ್ಲಿ ಶತಕ ಸಿಡಿಸಿದರು. 1880ರಲ್ಲಿ ದಿ ಓವಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಗ್ರೇಸ್ 152ರನ್ ಭಾರಿಸಿದ್ದರು.

ಜಿಮ್ಮಿ ಸಿಂಕ್ಲೇರ್ (ದಕ್ಷಿಣ ಆಫ್ರಿಕಾ)
ದಕ್ಷಿಣ ಆಫ್ರಿಕಾ ತಂಡ ಈಗ ವಿಶ್ವ ಕ್ರಿಕೆಟ್‌ನ ಭಲಿಷ್ಠ ರಾಷ್ಟ್ರಗಳಲ್ಲಿ ಒಂದು ಎಂದು ಹೆಸರಾಗಿರಬಹುದು. ಆದರೆ ತನ್ನ ಕ್ರಿಕೆಟ್ ಲೋಕದ ಆರಂಭಿಕ ದಿನಗಳಲ್ಲಿ ದಕ್ಷಿಣ ಆಫ್ರಿಕ ಬಹಳ ದುರ್ಬಲ ತಂಡವಾಗಿತ್ತು. ತನ್ನ ಮೊದಲ ಏಳು ಪಂದ್ಯಗಳಲ್ಲಿ ಯಾವೊಬ್ಬ ಆಟಗಾರ ಕನಿಷ್ಠ ಅರ್ಧಶತಕವನ್ನೂ ಭಾರಿಸಿರಲಿಲ್ಲ. ಆದರೆ 1898-99ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಇಂಗ್ಲೆೆಂಡ್ ವಿರುದ್ಧದ ಪಂದ್ಯದಲ್ಲಿ ದ. ಆಫ್ರಿಕಾದ ಜಿಮ್ಮಿ ಸಿಂಕ್ಲೆರ್ ಮೊಟ್ಟ ಮೊದಲ ಶತಕ ಭಾರಿಸಿದರು. ಈ ಪಂದ್ಯದಲ್ಲಿ ಅವರು 106 ರನ್ ಭಾರಿಸಿದ್ದರು. ಅಂದಹಾಗೆ ದ. ಆಫ್ರಿಕಾದ ಮೊದಲ ಮೂರು ಶತಕಗಳನ್ನು ಭಾರಿಸಿದ ಖ್ಯಾತಿಯೂ ಸಿಂಕ್ಲೇರ್ ಹೆಸರಿನಲ್ಲಿದೆ.

ಕ್ಲಿಫೋರ್ಡ್  ರೋಚ್ (ವೆಸ್ಟ್ ಇಂಡೀಸ್)
ಟ್ರಿನಿಡಾಡ್‌ನ ಆರಂಭಿಕ ಆಟಗಾರ ಕ್ಲಿಫೋರ್ಡ್  ರೋಚ್ ವೆಸ್ಟ್  ಇಂಡೀಸ್ ಪರ ಮೊದಲ ಶತಕ ಭಾರಿಸಿ ದಾಖಲೆ ಬರೆದರು. 1930ರಲ್ಲಿ ಬ್ರಿಡ್‌ಜ್‌‌ಟೌನ್‌ನಲ್ಲಿ ನಡೆದ ಇಂಗ್ಲೆೆಂಡ್ ವಿರುದ್ಧದ ಪಂದ್ಯದಲ್ಲಿ ಕ್ಲಿಫೋರ್ಡ್ ರೋಚ್ 122ರನ್ ಭಾರಿಸಿದರು. ಅಂದ ಹಾಗೆ ವಿಂಡೀಸ್ ಪರ ಮೊಟ್ಟ ಮೊದಲ ದ್ವಿಶತಕ ಭಾರಿಸಿದ ದಾಖಲೆಯೂ ಕ್ಲಿಫೋರ್ಡ್  ರೋಚ್ ಹೆಸರಿನಲ್ಲಿದೆ.

ಸ್ಟೀವ್ ಡೆಂಪ್‌ಸ್ಟರ್
1931ರಲ್ಲಿ ಟೆಸ್‌ಟ್‌ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ನ್ಯೂಜಿಲೆಂಡ್ ತನ್ನ ಎರಡನೇ ಪಂದ್ಯದಲ್ಲಿಯೇ ಆಟಗಾರನ ಶತಕಕ್ಕೆ ಸಾಕ್ಷಿಯಾಯಿತು. 1931ರಲ್ಲಿ ವೆಲ್ಲಿಂಗ್‌ಟನ್‌ನಲ್ಲಿ ಇಂಗ್ಲೆೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಟೀವ್ ಡೆಂಪ್‌ಸ್ಟರ್ ಆಕರ್ಷಕ ಶತಕ ಭಾರಿಸಿದರು. ಇದು ನ್ಯೂಜಿಲೆಂಡ್ ಪರ ಆಟಗಾರನೋರ್ವ ಭಾರಿಸಿದ ಮೊದಲ ಅಂತರಾಷ್ಟ್ರೀಯ ಶತಕವಾಗಿತ್ತು. ಆ ಪಂದ್ಯದಲ್ಲಿ ಡೆಂಪ್‌ಸ್ಟರ್ 136ರನ್ ಭಾರಿಸಿದರು.

ಲಾಲಾ ಅಮರನಾಥ್ (ಭಾರತ)
1933ರ ಡಿಸೆಂಬರ್‌ನಲ್ಲಿ ಭಾರತದ ಮೊಹಿಂದರ್ ಅಮರನಾಥ್ ಮೊಟ್ಟ ಮೊದಲ ಶತಕ ಭಾರಿಸಿದರು. ಇಂಗ್ಲೆೆಂಡ್ ವಿರುದ್ಧದ ಪಂದ್ಯದಲ್ಲಿ ಮೊಹಿಂದರ್ ಅಮರನಾಥ್ ಭಾರತದ ಪರ ಮೊಟ್ಟಮೊದಲ ಶತಕ ಸಿಡಿಸಿದರು. ಈ ಪಂದ್ಯದಲ್ಲಿ ಮೊಹಿಂದರ್ ಭಾರಿಸಿದ್ದು 118ರನ್. ಈ ಪಂದ್ಯದ ನಂತರ ಮೊಹಿಂದರ್ ಅಮರನಾಥ್ ತನ್ನ ರೂಮಿಗೆ ಮರಳಿದರೆ, ಹೊಟೆಲ್‌ನ ಹಾಸಿಗೆಯ ಮೇಲೆ ಅಭಿಮಾನಿಗಳು ಡಜನ್‌ಗಟ್ಟಲೆ ರೊಲೆಕ್‌ಸ್‌ ವಾಚುಗಳನ್ನು ಹಾಗೂ ಇತರ ಉಡುಗೊರೆಗಳನ್ನು ಇರಿಸಿದ್ದರಂತೆ.

ನಝರ್ ಮೊಹಮ್ಮದ್ (ಪಾಕಿಸ್ಥಾಾನ)
ಪಾಕಿಸ್ಥಾನ ತನ್ನ ಮೊಟ್ಟ ಮೊದಲ ಟೆಸ್ಟ್  ಪಂದ್ಯವನ್ನು ಭಾರತದ ವಿರುದ್ಧ 1952ರಲ್ಲಿ ಆಡಿತು. ಈ ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ಥಾನದ ಪರ ಮೊದಲ ಶತಕ ದಾಖಲಾಯಿತು. ಲಕ್ನೌದಲ್ಲಿ ನಡೆದ ಪಂದ್ಯದಲ್ಲಿ ನಝರ್ ಮೊಹಮ್ಮದ್ ಭರ್ಜರಿ ಶತಕ ಭಾರಿಸಿದರು. ನಝರ್ ಮೊಹಮ್ಮದ್ ತಮ್ಮ 515 ನಿಮಿಷದ ಸುದೀರ್ಘ ಪಂದ್ಯದಲ್ಲಿ 124ರನ್ ಭಾರಿಸಿ ಅಜೇಯರಾಗಿ ಉಳಿದರು. ಪಾಕಿಸ್ಥಾನ ಸರಣಿಯನ್ನು ಜಯಿಸಲು ನಝರ್ ಪ್ರಮುಖ ಕಾರಣರಾಗಿದ್ದು ವಿಶೇಷ.

ಸಿದ್ಧಾರ್ಥ್ ವೆಟ್ಟಿಮುನಿ (ಶ್ರೀಲಂಕಾ)
1952ರಲ್ಲಿ ಪಾಕಿಸ್ಥಾನ ಟೆಸ್ಟ್  ಮಾನ್ಯತೆ ಪಡೆದ 30 ವರ್ಷಗಳ ನಂತರ ಶ್ರೀಲಂಕಾ ತಂಡ 1982ರಲ್ಲಿ ಟೆಸ್ಟ್  ಮಾನ್ಯತೆ ಪಡೆಯಿತು. 1982ರಲ್ಲಿಯೇ ಶ್ರೀಲಂಕಾದ ಮೊದಲ ಶತಕ ದಾಖಲಾಯಿತು. ಪಾಕಿಸ್ಥಾನದ ವಿರುದ್ಧ ಫೈಸಲಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾದ ಸಿದ್ಧಾರ್ಥ್ ವೆಟ್ಟಿಮುನಿ ಮೊಟ್ಟ ಮೊದಲ ಶತಕ ಸಿಡಿಸಿದರು. ಈ ಪಂದ್ಯದಲ್ಲಿ ಅವರು 157ರನ್ ಭಾರಿಸಿದರು.

ಡೇವ್ ಹಟನ್ (ಜಿಂಬಾಬ್ವೆ)
1992ರಲ್ಲಿ ಭಾರತದ ವಿರುದ್ಧ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಡೇವ್ ಹಟನ್ ಜಿಂಬಾಬ್ವೆಯ ಪರ ಮೊದಲ ಶತಕ ಭಾರಿಸಿದರು. 115 ವರ್ಷಗಳ ನಂತರ ಟೆಸ್ಟ್  ಮಾನ್ಯತೆ ಪಡೆದ ಮೊದಲ ಪಂದ್ಯದಲ್ಲಿ ಶತಕ ಭಾರಿಸಿದ ಖ್ಯಾತಿ ಡೇವ್ ಅವರದ್ದಾಯಿತು. ಈ ಪಂದ್ಯದಲ್ಲಿ ಡೇವ್ ಹಟನ್ ಗಳಿಸಿದ್ದು 121ರನ್. ಇದರಿಂದಾಗಿ ಪಂದ್ಯ ಡ್ರಾ ಆಗಿತ್ತು. ಚಾರ್ಲ್‌ಸ್‌ ಬ್ಯಾನರ್‌ಮನ್ ಗಳಿಸಿದ ಮೊದಲ ಪಂದ್ಯದ ಶತಕದ ಸಂದರ್ಭದಲ್ಲಿ ಪಂದ್ಯ ಡ್ರಾ ಆಗಿತ್ತು. 115 ವರ್ಷದ ನಂತರ ಡೇವ್ ಇನ್ನೊಮ್ಮೆ ಶತಕ ಗಳಿಸಿದರು. ಈ ಸಂದರ್ಭದಲ್ಲಿಯೂ ಪಂದ್ಯ ಡ್ರಾ ಆಗಿದ್ದು ವಿಶೇಷ.

ಅಮಿನುಲ್ ಇಸ್ಲಾಾಂ (ಬಾಂಗ್ಲಾಾದೇಶ)
2000 ನೆ ಇಸವಿಯಲ್ಲಿ ಟೆಸ್ಟ್  ಮಾನ್ಯತೆ ಪಡೆದ ಬಾಂಗ್ಲಾದೇಶದ ಪರ ಮೊಟ್ಟ ಮೊದಲ ಶತಕ ಭಾರಿಸಿದವರು ಅಮಿನುಲ್ ಇಸ್ಲಾಾಂ. ಭಾರತದ ವಿರುದ್ಧ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಅಮಿನುಲ್ ಇಸ್ಲಾಾಂ ಶತಕ ಭಾರಿಸಿದರು. ಅವರ ಈ ಶತಕದ ಇನ್ನಿಿಂಗ್‌ಸ್‌ 145ರನ್‌ಗೆ ಕೊನೆಗೊಂಡಿತ್ತು. ಪಂದ್ಯದಲ್ಲಿ ಇಸ್ಲಾಾಂ ಶತಕ ಸಿಡಿಸಿದರೂ ಪಂದ್ಯವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಿರಲಿಲ್ಲ.

ಕೆವಿನ್ ಓಬ್ರಿಯಾನ್
ಟೆಸ್ಟ್  ಆಡುವ ಮಾನ್ಯತೆ ಪಡೆದ 11ನೇ ರಾಷ್ಟ್ರ ಎಂಬ ಖ್ಯಾತಿ ಪಡೆದ ಐರ್ಲೆಂಡ್ ಪರ ಮೊದಲ ಶತಕ ಭಾರಿಸಿದ್ದು ಕೆವಿನ್ ಓಬ್ರಿಯಾನ್. ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದ ಎರಡನೇ ಇನ್ನಿಿಂಗ್‌ಸ್‌‌ನಲ್ಲಿ ಓಬ್ರಿಯಾನ್ ಶತಕ ಭಾರಿಸಿದರೂ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಮೊದಲ ಟೆಸ್ಟ್ ನಲ್ಲಿ ದೇಶದ ಪರ ಮೊದಲ ಶತಕ ಭಾರಿಸಿದ ಮೂರನೇ ನಿದರ್ಶನ ಇವರದಾಯಿತು.

No comments:

Post a Comment