Friday, February 22, 2019

ಪಾಠ ಮಾಡುವ ಗುರುವೃಂದದ ಗೋಳು ಕೇಳುವರ್ಯಾರು?

ಶಿಕ್ಷಕ ವರ್ಗ ಎಂದರೆ ಮಕ್ಕಳಿಗೆ ವಿದ್ಯಾದಾನ ಮಾಡುವ ಪುಣ್ಯ ಕಾರ್ಯ ಕೈಗೊಳ್ಳುವ ವರ್ಗ ಎನ್ನುವ ಮಾತಿದೆ. ಬೋಧನಾ ವೃತ್ತಿ ಸಮಾಜದಲ್ಲಿ ತನ್ನದೇ ಆದ ಗೌರವ ಹಾಗೂ ಆದರಗಳನ್ನು ಹೊಂದಿರುವ ವೃತ್ತಿ. ಆದರೆ ಶಿಕ್ಷಕರ ಮೇಲೆ ಇರುವ ಹಲವು ಹೊರೆಗಳಿಂದಾಗಿ ಅವರು ಕೈಗೊಳ್ಳುವ ಬೋಧನಾ ಕಾರ್ಯಕ್ಕೆ ತೊಡಕು ಉಂಟಾಗುತ್ತಿದೆ.
ಶಿಕ್ಷಕರೆಂದರೆ ಸಾಕು ಅವರಿಗೆ ವಿಶೇಷವಾದ ಗೌರವ ಹಾಗೂ ಆದರಗಳನ್ನು ತೋರಲಾಗುತ್ತದೆ. ಮಕ್ಕಳ ಬದುಕನ್ನು ರೂಪಿಸುವಂತಹ ಪುಣ್ಯ ಕಾರ್ಯವನ್ನು ಶಿಕ್ಷಕರು ಕೈಗೊಳ್ಳುವುದರಿಂದ ಅವರೆಡೆಗೆ ಯಾವಾಗಲೂ ಗೌರವದ ದೃಷ್ಟಿಯೇ ಇರುತ್ತದೆ. ಇನ್ನು ಗ್ರಾಮೀಣ ಭಾಗಗಳಲ್ಲಂತೂ ಮಾಸ್ಟರ್, ಮಾಸ್ಟ್ರು ಎಂದೇ ಸಂಬೋಧಿಸುತ್ತಾರೆ. ಆದರೆ ಇಂತಹ ಶಿಕ್ಷಕ ವರ್ಗ ಬೋಧನೆಯ ಜತೆ ಜತೆಯಲ್ಲಿ ಕೈಗೊಳ್ಳುವ ಇತರ ಕಾರ್ಯಗಳಿಂದ ಸಂಪೂರ್ಣ ಹೈರಾಣಾಗುತ್ತಿದ್ದಾರೆ.
ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಲ್ಲಿ ಶಿಕ್ಷಕರು ಕೈಗೊಳ್ಳುವ ಕಾರ್ಯಗಳು ಒಂದೆರಡಲ್ಲ. ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಕೆಲಸ ಒಂದೆಡೆಯಾದರೆ, ಅದರಿಂದ ಹೊರತಾದ ಕೆಲಸಗಳನ್ನು ಕೈಗೊಳ್ಳುವ ಬಗೆ ಅನೇಕ. ಅದಕ್ಕೆ ತಕ್ಕಂತೆ ಸರ್ಕಾರ ಕೂಡ ಶಿಕ್ಷಕರ ಮೇಲೆ ಹಲವು ಹೊರೆಗಳನ್ನು ಹೇರುವ ಮೂಲಕ ಶಿಕ್ಷಕ ವೃತ್ತಿ ಕೈಗೊಳ್ಳುವವರನ್ನು ಹೈರಾಣು ಮಾಡುತ್ತಿದೆ.
ಅಕ್ಷರ ದಾಸೋಹ, ಕ್ಷೀರ ಭಾಗ್ಯ, ಸುವರ್ಣ ಆರೋಗ್ಯ ಚೈತನ್ಯ, ಸೈಕಲ್ ವಿತರಣೆ, ಪಠ್ಯ ಪುಸ್ತಕ ವಿತರಣೆ, ಬ್ಯಾಗ್ ವಿತರಣೆ, ಚಿಣ್ಣರ ಅಂಗಳ, ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಬಾ ಮರಳಿ ಶಾಲೆಗೆ, ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ, ಶಾಲೆ ಬಿಟ್ಟ ಮಕ್ಕಳ ಮನೆಗೆ ಭೇಟಿ, ಎಸ್‌ಡಿಎಂಸಿ ರಚನೆ ಹೀಗೆ ಹತ್ತು ಹಲವು ಕಾರ್ಯಗಳು ಶಿಕ್ಷಕರ ನೆತ್ತಿಗೆ ಏರುತ್ತವೆ.
ಪಾಠ ಕಲಿಸುವ ಪುಣ್ಯ ಕಾರ್ಯವನ್ನು ಕೈಗೊಳ್ಳುವ ಶಿಕ್ಷಕರು ಕೈಗೊಳ್ಳುವ ಇತರ ಕಾರ್ಯಗಳು ಇಲ್ಲಿಗೆ ನಿಲ್ಲುವುದಿಲ್ಲ. ಶೌಚಾಲಯ ನಿರ್ವಹಣೆ, ಕಟ್ಟಡ ಕಾಮಗಾರಿ, ಸಮುದಾಯದತ್ತ ಶಾಲೆಗಳನ್ನು ನಡೆಸುವುದು, ಶಾಲಾ ವಾರ್ಷಿಕೋತ್ಸವ, ಪ್ರಗತಿಪತ್ರ ತುಂಬುವುದು, ಪಾಠ ಯೋಜನೆ, ಪಾಠ ಬೋಧನೆ, ಕ್ರಿಯಾ ಯೋಜನೆ, ಕ್ರಿಯಾ ಸಂಶೋಧನೆ, ಶೈಕ್ಷಣಿಕ ಯೋಜನೆ, ದಾಖಲೆ ನಿರ್ವಹಣೆ, ಡಾಟಾ ಎಂಟ್ರಿ, ಮಕ್ಕಳಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ವಿದ್ಯಾರ್ಥಿ ವೇತನ ಪ್ರಕ್ರಿಯೆ ಪೂರ್ಣಗೊಳಿಸುವುದು, ಸಮನ್ವಯ ಶಿಕ್ಷಣ ಹೀಗೆ ಹಲವು ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.
ಇನ್ನು ಚುನಾವಣೆಗಳು ಬಂದರಂತೂ ಶಿಕ್ಷಕರ ಪಾಡು ದೇವರಿಗೇ ಪ್ರೀತಿ. ಮತದಾರರ ಪಟ್ಟಿ ರಚನೆ, ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರರಣೆ ಮಾಡುವುದು, ಚುನಾವಣೆ ಸಂದರ್ಭದಲ್ಲಿ  ವಿಶೇಷ ತರಬೇತಿ, ಮತದಾನದ ಕಾರ್ಯ ಕೈಗೊಳ್ಳಲು ವಿವಿಧ ಪ್ರದೇಶಗಳಿಗೆ ತೆರಳುವುದು ಹೀಗೆ ಒದ್ದಾಡಬೇಕಾಗುತ್ತದೆ. ಚುನಾವಣೆ ಘೋಷಣೆಯಾದಾಗಿನಿಂದ ಹಿಡಿದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳುವ ವರೆಗೂ ಶಿಕ್ಷಕ ವೃಂದ ಕೈಗೊಳ್ಳುವ ಕಾರ್ಯಗಳು ಬಹಳ ಪ್ರಮುಖವಾದದ್ದು.
ಜನಗಣತಿ, ಮಕ್ಕಳ ಗಣತಿ ಹಾಗೂ ಜಾತಿ ಗಣತಿ ಸಂದರ್ಭರ್ದಲ್ಲಿ ಕೂಡ ಮೊದಲು ನೆನಪಾಗುವುದು ಶಿಕ್ಷಕರೇ. ಬಿಎಲ್‌ಒ ಕೆಲಸ, ಔಷೀಯ ಪರಿಕರಗಳನ್ನು, ಮಾತ್ರೆಗಳನ್ನು ಹಂಚುವುದು, ಪಲ್ಸ್ ಪೋಲಿಯೋ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು, ಸಮಾಲೋಚನಾ ಸಭೆ  ನಡೆಸುವುದು, ಎಸ್‌ಡಿಎಂಸಿ ಸಭೆ  ಕೈಗೊಳ್ಳುವುದು, ಪಾಲಕರ ಸಭೆ, ಶಿಕ್ಷಕರ ಸಭೆ, ಪುನಶ್ಚೇತನ ತರಬೇತಿ, ಬ್ರಿಟೀಷ್ ಕೌನ್ಸಿಲ್ ಸಭೆ, ಹೊರ ಸಂಚಾರ, ಕ್ಷೇತ್ರ ಸಂದರ್ಶನ, ಶೈಕ್ಷಣಿಕ ಪ್ರವಾಸ, ಜಿಲ್ಲಾ ದರ್ಶನ ಮುಂತಾದ ಕಾರ್ಯಗಳನ್ನೂ ಕೈಗೊಳ್ಳಬೇಕಾಗುತ್ತದೆ.
ಇಷ್ಟಕ್ಕೇ ನಿಲ್ಲುವುದಿಲ್ಲ ನೋಡಿ ಶಿಕ್ಷಕರ ಕಾರ್ಯ. ಸೇತುಬಂಧ  ಪರೀಕ್ಷೆಗಳನ್ನು ನಡೆಸುವುದು, ಪರಿಹಾರ ಬೋಧನೆ ಹಾಗೂ ಪೂರಕ ಬೋಧನೆ ಕಾರ್ಯ ಕೈಗೊಳ್ಳುವುದು. ಮಕ್ಕಳಿಗಾಗಿ ನಲಿ ಕಲಿ ಹಾಗೂ ಕಲಿ ನಲಿ ಕಾರ್ಯಕ್ರಮಗಳನ್ನು ನಡೆಸುವುದು, ಚೈತನ್ಯ ಮಾದರಿ, ಟಿಎಲ್‌ಎಂ ತಯಾರಿ, ಚಿಣ್ಣರ ಚುಕ್ಕಿಘಿ, ಚುಕ್ಕಿ ಚಿನ್ನ, ಕೇಳೀ ಕಲಿ, ಕ್ರೀಡಾ ಮೇಳ, ಕಲಿಕೋತ್ಸವ, ಮೆಟ್ರಿಕ್ ಮೇಳ, ವಿಜ್ಞಾನ ಮೇಳ ಮುಂತಾದವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ.
ಮಕ್ಕಳ ಪ್ರತಿಭೆಗಳನ್ನು ಹೊರಹಾಕಲೆಂದೇ ರೂಪಿಸಲಾದ ಪ್ರತಿಭಾ  ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೈನ್ಸ್ ಇನ್‌ಸ್ಪೈರ್ ಅವಾರ್ಡ್, ಪೂರಕ ಪರೀಕ್ಷೆ, ನೈದಾನಿಕ ಪರೀಕ್ಷೆ, ಸಿಸಿಇ ಪರೀಕ್ಷೆ, ಘಟಕ ಪರೀಕ್ಷೆ ಹೀಗೆ ಹಲವು ಕಾರ್ಯಗಳು ಶಿಕ್ಷಕ ವರ್ಗವನ್ನು ಸುತ್ತಿಕೊಳ್ಳುತ್ತವೆ.
ಇನ್ನು ಪರೀಕ್ಷೆಗಳು ಬಂದರಂತೂ ಶಿಕ್ಷಕ ವರ್ಗದವರ ಬವಣೆ ಇನ್ನಷ್ಟು ಹೆಚ್ಚುತ್ತವೆ. ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ, ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ, ಕಸ್ತೂರಬಾ ಬಾಲಿಕಾ ವಿದ್ಯಾಲಯ ಪ್ರವೇಶ ಪರೀಕ್ಷೆ, ನವೋದಯ ಪ್ರವೇಶ ಪರೀಕ್ಷೆ, ಎನ್‌ಟಿಎಸ್ ಪರೀಕ್ಷೆ, ಎನ್‌ಎಂಎಂಎಸ್ ಪರೀಕ್ಷೆ ಮುಂತಾದವುಗಳನ್ನು ಕೈಗೊಳ್ಳಬೇಕು. ಈ ಎಲ್ಲ ಪರೀಕ್ಷೆಗಳಲ್ಲಿಯೂ ವಿದ್ಯಾರ್ಥಿಗಳು ಉತ್ತೀರ್ಣರಾಗುವ ನಿಟ್ಟಿನಲ್ಲಿ ತರಬೇತಿಯನ್ನು ಒಡಗಿಸಬೇಕಾಗುತ್ತದೆ.
ಇಷ್ಟರ ಜತೆಯಲ್ಲಿ ಸರ್ಕಾರಿ ಆಚರಣೆಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಶಿಕ್ಷಕ ವರ್ಗದ್ದು. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಹೀಗೆ ಹತ್ತು ಹಲವು ಸರ್ಕಾರಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಿದೆ.
ಇಷ್ಟೆಲ್ಲ ಕೆಲಸ ಮಾಡಿದ ನಂತರ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಯಾವಾಗ ಎನ್ನುವ ಪ್ರಶ್ನೆ ಕಾಡುವುದು ಸಹಜ. ಸರ್ಕಾರ ಕೂಡ ಈ ಎಲ್ಲ ಕಾರ್ಯಗಳನ್ನೂ ಶಿಕ್ಷಕರ ಮೇಲೆ ಹೇರಿ ನಿರಾಳವಾಗಿ ಕುಳಿತಿದೆ. ಈ ಎಲ್ಲ ಕಾರ್ಯಗಳನ್ನು ಕೈಗೊಳ್ಳುವ ಸಂದ‘ರ್ದಲ್ಲಿ ಸಣ್ಣ ಪುಟ್ಟ ಲೋಪಗಳು ಸಂ‘ವಿಸಿದರಂತೂ ಮುಗಿದೇ ಹೋಯಿತು ಎನ್ನುವ ಪರಿಸ್ಥಿತಿ ಇದೆ. ದಂಡವನ್ನು ಹಾಕಿಯೋ ಅಥವಾ ಇನ್ಯಾವುದೋ ರೀತಿಯ ಕ್ರಮಗಳನ್ನು ಕೈಗೊಂಡು ಶಿಕ್ಷಕರನ್ನು ಇನ್ನಷ್ಟು ಹೈರಾಣು ಮಾಡಲಾಗುತ್ತದೆ.
ಇಷ್ಟೆಲ್ಲ ಕಾರ್ಯಗಳನ್ನು ಕೈಗೊಳ್ಳುವ ಶಿಕ್ಷಕರಿಗೆ ಈ ಕಾರ್ಯಗಳನ್ನು ಕೈಗೊಂಡಿದ್ದಕ್ಕಾಗಿ ಸಮರ್ಪಕವಾಗಿ ಸಂಬಳ ಹಾಗೂ ಇತರೆ ಭ ತ್ಯೆಗಳನ್ನು ನೀಡಲಾಗುತ್ತದೆಯೇ ಎಂದರೆ ಊಹೂ ಇಲ್ಲ. ಭತ್ಯೆಗಳನ್ನು ಪಡೆಯುವ ಸಲುವಾಗಿ ಶಿಕ್ಷಕ ವರ್ಗ ಹಲವು ದಿನಗಳ ಕಾಲ ಅಲೆದಾಡಿದ ಸಂದ‘ರ್ಗಳೂ ಇದೆ. ಜತೆ ಜತೆಗೆ ಪ್ರತಿ‘ಟನೆಯ ಮಾರ್ಗಗಳನ್ನು ಹಿಡಿದ ಸಂದ‘ರ್ಗಳೂ ಇದೆ. ಸರ್ಕಾರ ‘ತ್ಯೆಗಳನ್ನು ಕೊಡುವ ಸಂದ‘ರ್ದಲ್ಲಿ ಚೌಕಾಸಿಯ ಮಾರ್ಗವನ್ನೂ ಹಿಡಿಯುತ್ತದೆ. 1 ರೂಪಾಯಿ ‘ತ್ಯೆ ಕೊಡುವ ಸಂದ‘ರ್ವಿದ್ದರೆ ಅಂತಹ ಸಂದ‘ರ್ಗಳಲ್ಲಿ 80 ಪೈಸೆ ಕೊಡುತ್ತೇನೆ ಒಪ್ಪಿಕೊಳ್ಳಿ ಎಂದು ತಾಕೀತು ಮಾಡುತ್ತದೆ. ಶಿಕ್ಷಕ ವೃಂದ ಇಂತಹ ತೊಂದರೆಗಳನ್ನೂ ವೌನವಾಗಿ ಸಹಿಸಿಕೊಂಡಿದ್ದಾರೆ, ಸಹಿಸಿಕೊಳ್ಳುತ್ತಲೇ ಇದ್ದಾರೆ.
ಇಷ್ಟೆಲ್ಲ ಕಾರ್ಯಗಳನ್ನು ಕೈಗೊಳ್ಳುವ ಶಿಕ್ಷಕ ವೃಂದದ ಸಂಖ್ಯೆ ರಾಜ್ಯದ ಶಾಲೆಗಳಲ್ಲಿ ಸಂಪೂರ್ಣವಾಗಿ ‘ರ್ತಿಯಾಗಿದೆಯೇ ಎಂದರೆ ಅದಕ್ಕೂ ನಕಾರಾತ್ಮಕ ಉತ್ತರವೇ ದೊರೆಯುತ್ತದೆ. ಕನ್ನಡ ಮಾ‘್ಯಮದ ಪ್ರತಿ ಶಾಲೆಗಳಲ್ಲಿಯೂ ಕನಿಷ್ಠ ಒಂದಾದರೂ ಶಿಕ್ಷಕ ಹುದ್ದೆ ಖಾಲಿ ಇದ್ದೇ ಇದೆ. ಕಳೆದ ಹಲವು ವರ್ಷಗಳಿಂದ ರಾಜ್ಯ ಸರ್ಕಾರ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲಘಿ. ಈ ಕುರಿತಂತೆ ವಿಚಾರಿಸಿದರೆ ಆರ್ಥಿಕ ಇಲಾಖೆಯ ಕಡೆಗೆ ಮುಖ ಮಾಡಲಾಗುತ್ತದೆ.
ಈ ಎಲ್ಲ ಹೊರೆಗಳನ್ನು ಹೊತ್ತು, ಒದ್ದಾಡುತ್ತಘಿ, ‘ವ್ಯ ‘ಾರತದ ಮುಂದಿನ ಪ್ರಜೆಗಳ ‘ವಿಷ್ಯವನ್ನು ರೂಪಿಸುತ್ತಿರುವ ಶಿಕ್ಷಕ ವೃಂದದ ಬವಣೆಯನ್ನು ಕೇಳುವವರ್ಯಾರು? ಬೋ‘ನೆಯ ಜತೆ ಜತೆಗೆ ಶಿಕ್ಷಕರ ತಲೆಯನ್ನು ಸುತ್ತಿಕೊಂಡಿರುವ ಇತರ ಕಾರ್ಯಗಳ ಹೊರೆಯನ್ನು ಇಳಿಸುವವರು ಯಾರು? ವಿದ್ಯಾರ್ಥಿಗಳ ‘ವಿಷ್ಯ ರೂಪಿಸುವ ಕಾರ್ಯದಲ್ಲಿ ಶಿಕ್ಷಕರು ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡುವ, ಅನಗತ್ಯ ಕಾರ್ಯಗಳ ಹೊರೆಯನ್ನು ಇಳಿಸಲು ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಮುಂದಾಗುವರೇ ಎನ್ನುವುದು ಶಿಕ್ಷಕ ವಲಯದ ಪ್ರಶ್ನೆಘಿ.
ಶಿಕ್ಷಕರು ಎದುರಿಸುತ್ತಿರುವ ಇಂತಹ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಹುಡುಕುವ ಅಗತ್ಯವಿದೆ. ಬೋ‘ನೆಯನ್ನು ಹೊರತು ಪಡಿಸಿ ಶಿಕ್ಷಕ ವರ್ಗ ಎದುರಿಸುತ್ತಿರುವ ಇತರ ಕಾರ್ಯಗಳನ್ನು ತಡೆಯುವ ಅಗತ್ಯವಿದೆ. ಹೆಚ್ಚಿನ ಶಿಕ್ಷಕರ ನೇಮಕದ ಜತೆ ಜತೆಯಲ್ಲಿ ಸಮಯಕ್ಕೆ ಸರಿಯಾಗಿ ‘ತ್ಯೆ ಹಾಗೂ ಸಂಬಳ ನೀಡಿಕೆ, ಜನಗಣತಿ, ಚುನಾವಣೆ ಮುಂತಾದ ಕಾರ್ಯಗಳಿಗೆ ಬೇರೆಯ ಸಿಬ್ಬಂದಿಗಳನ್ನು ನೇಮಕ ಮಾಡುವುದು ಸೇರಿದಂತೆ ಹಲವು ಗಣನೀಯ ಬದಲಾವಣೆಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಹಲವು ಹೊರೆಗಳ ನಡುವೆ ಒದ್ದಾಡುತ್ತಿರುವ ಶಿಕ್ಷಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರ ದೃಢ ಹೆಜ್ಜೆ ನೀಡಲಿ ಎನ್ನುವುದು ಶಿಕ್ಷಕ ವರ್ಗದ ಆಶಯ.

No comments:

Post a Comment