Wednesday, August 28, 2013

ಇದು ನನ್ನದು



ಇದು ನನ್ನದು ಇದು ನನ್ನದು
ಈ ಲೋಕವೆ ನನ್ನದು
ಈ ಲೋಕವು ಹೊಂದಿರುವ
ಅಧಿಕಾರವು ನನ್ನದು..!


ಈ ಲೋಕದ ಸೊಬಗೆಲ್ಲವು
ನನ್ನದೇ ಕಲ್ಪನೆ,
ಈ ಕಲ್ಪನೆ ಕೂಡಿರಲು
ಆಗಿರುವುದು ರಚನೆ..!!


ದಿನ ಹುಟ್ಟುವ ಸೂರ್ಯನು
ನನ್ನದೇ ಕಣ್ಗಳು
ದಿನ ಮೂಡುವ ಚಂದ್ರನು
ನನ್ನನೇ ನೆನೆವನು..!!


ಜಗ ಗೆಲ್ಲಲಿ ಜಗ ಸೋಲಲಿ
ಜಯವೆಂದೂ ನನ್ನದೆ
ಇದರಿಂದ ದೊರಕುವ
ನಗುವೆಲ್ಲವೂ ನನ್ನದೆ..!!


ಯಾರಿರಲಿ ಇಲ್ಲದಿರಲಿ
ನಾ ಮೆರೆವೆ ಎಂದಿಗೂ
ಈ ಭಾವನೆ ಲೋಕದಿಂದ
ಹೊರಹೋಗದು ಎಂದಿಗೂ ..!!


ಬರೆದಿದ್ದು : 14-03-2004ರಂದು
ಇದು ನಾನು ಮೊಟ್ಟಮೊದಲು ಬರೆದ ಕವಿತೆ. 9 ವರ್ಷಗಳ ಹಿಂದೆ.. ಇದನ್ನು ನಂತರ ಓದುಗರ ವೇದಿಕೆ ಉಂಚಳ್ಳಿಯ ಯುವ ಕವಿಗೋಷ್ಟಿಯಲ್ಲಿ ಓದಿದ್ದೇನೆ. ನನ್ನ ಮೊದಲ ಕವಿತೆ ನಿಮ್ಮ ಮುಂದೆ ..

1 comment:

  1. ನಿಮ್ಮ ಕವಿತೆಯ ಸುರು ಪದವ ಹವಿ ಕನ್ನಡದಲ್ಲಿ ತರ್ಜಮೆ ಮಾಡಿ ಬರೆತ್ನೆ.
    1. ಇದು ಎನ್ನದು ಇದು ಎನ್ನದು ಈ ಲೋಕವೇ ಎನ್ನದು.ಈ ಲೋಕವು ಹೊಂದಿಪ್ಪ ಅಧಿಕಾರವು ಎನ್ನದು.
    ಧನ್ಯವಾದ

    ReplyDelete