ವಿಜಯ್ ತಾಕತ್ತಿನ ಪ್ರದರ್ಶನ
ಶಂಕರ್ ಐಪಿಎಸ್ ಇದು ವಿಜಯನ ದಾಢಸಿತನ ಅನಾವರಣ ಮಾಡುವ ಚಿತ್ರ. ಒಳ್ಳೆಯವರಿಗೆ ಒಳ್ಳೆಯವನಾಗಿ ಕೆಟ್ಟವರಿಗೆ ಕೆಟ್ಟವನಾಗಿ ಕಾಣಿಸಿಕೊಳ್ಳುವ ಶಂಕರ್ (ವಿಜಯ್)ಗೆ ಅಪರಾಧಿಗಳನ್ನು ಮಟ್ಟಹಾಕುವುದೇ ಕೆಲಸ. ಕಂಡಕಂಡಲ್ಲಿ ಅಪರಾಧಿಗಳನ್ನು, ರೌಡಿಗಳನ್ನು, ಅತ್ಯಾಚಾರಿಗಳನ್ನು ಹಿಗ್ಗಾ ಮುಗ್ಗಾ ಜಾಡಿಸಿ ಎನ್ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡುವ ಶಂಕರ್, ಮಿಸ್ ಇಂಡಿಯಾ ಆಗಬೇಕೆಂಬ ಕನಸನ್ನು ಹೊಂದಿರುವ ಹುಡುಗಿ(ಕ್ಯಾಥರೀನ್ ಥೆರೇಸಾ) ಗೆ ಸಹಾಯ ಮಾಡುತ್ತಾನೆ. ಆಕೆಗೆ ಮಿಸ್ ಇಂಡಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಬಗ್ಗೆ ತರಬೇತಿ ಕೊಡಿಸುತ್ತಾನೆ. ಆದರೆ ಆಕೆಯ ಮೇಲೆ ಆಸಿಡ್ ದಾಳಿಯಾಗುತ್ತಾದೆ. ಹೆಸರಾಂತ ಉದ್ಯಮಿಯೊಬ್ಬನ ಮಗ ಆಕೆಯ ಮೇಲೆ ಆಸಿಡ್ ದಾಳಿ ಮಾಡುತ್ತಾನೆ. ಆಸಿಡ್ ದಾಳಿಗೆ ಒಳಗಾದ ಆಕೆಗೆ ನ್ಯಾಯವನ್ನು ಕೊಡಿಸಿ, ಸಮಾಜಕ್ಕೆ ಬುದ್ಧಿಹೇಳುವ ದಕ್ಷ ಅಧಿಕಾರಿಯಾಗಿ ವಿಜಯ್ ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಮಾಡೆಲ್ ಟ್ರೈನಿಯಾಗಿ ಕೆಲಸ ಮಾಡುವ ನಾಯಕಿ (ರಾಗಿಣಿ) ವಿಜಯ್ಗೆ ಬೆಂಗಾವಲಾಗಿ ನಿಂತು ಅಪರಾಧಿಗಳ ಮಟ್ಟಹಾಕುವ ನಾಯಕನ ಕಾರ್ಯದಲ್ಲಿ ಸಹಾಯ ಮಾಡುತ್ತಾಳೆ.
ಹೆಸರಿಗೆ ತಕ್ಕಂತೆ ಇದು ಖಾಕಿ ಚಿತ್ರ. ಹಾಗಾಗಿ ಚಿತ್ರದುದ್ದಕ್ಕೂ ಚಾಲೆಂಜುಗಳು, ಧಮಕಿಗಳು, ಫೈಟ್ಗಳು ಇದ್ದೇ ಇವೆ. ಚಿತ್ರದಲ್ಲಿ ಖಾಕಿ ಹಾಗೂ ಕಪ್ಪುಕೋಟುಗಳು ಪರಸ್ಪದ ಎದುರಾಳಿಗಳಾಗುತ್ತವೆ. ಇವೆರಡೂ ಪರಸ್ಪರ ಮೇಲಾಟದಲ್ಲಿ ತೊಡಗುತ್ತವೆ. ಪೊಲೀಸ್ ಅಧಿಕಾರಿ ಶಂಕರ್ಗೆ ಎದುರಾಗಿ ನಿಂತು ಸವಾಲು ಹಾಕುವ ಪಾತ್ರದಲ್ಲಿ ರಂಗಾಯಣ ರಘು ಬೊಂಬಾಟಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಅವಿನಾಶ್ ಹಾಗೂ ಶೋಭರಾಜ್ ಅವರುಗಳಿಗೆ ಅಪರೂಪಕ್ಕೆ ಒಳ್ಳೆಯ ಪಾತ್ರಗಳು ದೊರಕಿವೆ. ಚಿತ್ರಗಳಲ್ಲಿ ಯಾವಾಗಲೂ ವಿಲನ್ ಪಾತ್ರಗಳನ್ನು ಮಾಡುತ್ತಿದ್ದ ಶೋಭರಾಜ್ ಹಾಗೂ ಅವಿನಾಶ್ ಈ ಚಿತ್ರದಲ್ಲಿ ಬೇರೆಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದುದ್ದಕ್ಕೂ ಕಾಣಿಸಿಕೊಂಡಿರುವ ವಿಜಯ್ ಎಲ್ಲ ರೀತಿಯ ಅಭಿನಯಗಳನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರೆ ಕಾಮಿಡಿಯನ್, ಅವರೇ ಆಕ್ಷನ್ ಕಿಂಗ್, ಅವರೇ ಚಾಲೇಂಜರ್ ಕೊನೆಗೆ ಅವರೇ ಐಟಂ ಸಾಂಗಿಗೂ ಹೆಜ್ಜೆ ಹಾಕುತ್ತಾರೆ. ಎಲ್ಲಾ ಸಂಭಾಷಣೆಯನ್ನು ನಿಧಾನವಾಗಿ ಸ್ಪಷ್ಟವಾಗಿ ಉಚ್ಛರಿಸಿ ಎಲ್ಲರ ಸಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಸಂಭಾಷಣೆಗಳನ್ನು ವೇಗವಾಗಿ ಹೇಳಿದ್ದರೆ ವಿಜಯ್ನ್ನು ಮತ್ತೊಬ್ಬ `ಸಾಯಿಕುಮಾರ್' ಅನ್ನಬಹುದು. ಆದರೂ ಕೆಲವೊಮ್ಮೆ ಸಡನ್ನಾಗಿ ಸಿಟ್ಟಿಗೇಳುವುದು ನೋಡುಗರಿಗೆ ಕಿರಿಕಿರಿ ಉಂಟುಮಾಡುತ್ತದೆ. ಫೈಟುಗಳನ್ನು ಚೆನ್ನಾಗಿಯೇ ಮಾಡಿ ಪ್ರೇಕ್ಷಕರನ್ನು ಸೆಳೆಯುವ ವಿಜಯ್ ಚಿತ್ರದಲ್ಲಿ ಬೇಜಾನಾಗಿ ಬಟ್ಟೆ ಬಿಚ್ಚಿ ತಮ್ಮ ಸಿಕ್ಸ್ ಪ್ಯಾಕ್ ಶರೀರ ಪ್ರದಶರ್ಿಸುವ ಮೂಲಕ ತಾಕತ್ತು ತೋರಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯರಿಗೆ ಕೊಂಚ ಸ್ಕೋಪ್ ಕಡಿಮೆ. ಮಾಡೆಲ್ ಆಗಿದ್ದ ಕ್ಯಾಥರೀನ್ಗೆ ಇದು ಕನ್ನಡದ ಮೊದಲ ಚಿತ್ರ. ಚಿತ್ರದಲ್ಲಿ ಅವರದ್ದು ಮಿಸ್ ಇಂಡಿಯಾ ಸ್ಪಧರ್ಿಯ ಪಾತ್ರ. ಆದರೂ ಅವರು ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಂಗಾಯಣ ರಘು ಚಿತ್ರದ ಪ್ಲಸ್ ಪಾಯಿಂಟ್ಗಳಲ್ಲಿ ಒಂದು. ಚಿತ್ರದಲ್ಲಿ 5 ಹಾಡುಗಳಿವೆ. ಆದರೆ ಈ ಹಾಡುಗಳು ಮಾತ್ರ ಏನು ಮಾಡಿದರೂ ನೆನಪಲ್ಲಿ ಉಳಿಯಲಾರವು. ಇದಕ್ಕೆ ಸಂಗೀತ ನಿದರ್ೆಶಕರು ಕಾರಣವೋ ಗೀತೆಗಳನ್ನು ಬರೆದವರು ಕಾರಣವೋ ತಿಳಿಯುವುದಿಲ್ಲ. ವಿಜಯ್ ತೆರೆಯ ಮೇಲೆ ಇದ್ದಷ್ಟೂ ಹೊತ್ತು ಇತರ ಪಾತ್ರಗಳು ಮಾತೇ ಆಡದಿರುವುದು ಚಿತ್ರದ ಮೈನಸ್ ಪಾಯಿಂಟ್ಗಳಲ್ಲಿ ಒಂದು.
ಇನ್ನುಳಿದಂತೆ ದಾಸರಿ ಸೀನು ಅವರು ಕ್ಯಾಮರಾ ಮೂಲಕ ಉತ್ತಮ ದೃಷ್ಯಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಸಂಭಾಷಣೆಯಲ್ಲಿರುವ ಗಟ್ಟಿತನ ಸೆಳೆಯುತ್ತದೆ. ವಿಜಯ್ ವಿಜ್ರಂಭಣೆಗೆ ಬೇಕಾದ ಸಂಭಾಷಣೆಗಳನ್ನು ನಿದರ್ೇಶಕ ರಮೇಶ್ ಬಾಬೂ ಕೆತ್ತಿದ್ದಾರೆ. ಉತ್ತಮ ಸಂದೇಶವನ್ನು ಹೇಳಲು ಹೊರಟ ರಮೇಶ್ ಬಾಬೂ ಅದನ್ನು ಮಾಸ್ ಜನರ ಮನಸ್ಸಿಗೆ ಮುಟ್ಟಿಸುವಲ್ಲಿ ಕೆಲವೊಮ್ಮೆ ವಿಫಲರಾಗಿದ್ದಾರೆ. ಚಿತ್ರವನ್ನೂ ಇನ್ನೂ ಉತ್ತಮವಾಗಿ ಮಾಡಲು ರಮೇಶ್ ಬಾಬೂ ಪ್ರಯತ್ನಿಸಿದ್ದರೆ ಮಾಸ್ ಜೊತೆಗೆ ಕ್ಲಾಸ್ ಜನರನ್ನು ಸೆಳೆಯಬಹುದಿತ್ತು.
ಮಾಸ್ಗೆ ಬೇಕಾಗಿರುವ ಎಲ್ಲ ಮಸಾಲೆ ಅಂಶಗಳನ್ನೂ ಒಳಗಿರಿಸಿಕೊಂಡು, ಸಂಪೂರ್ಣ ವಿಜಯ್ ತಾಕತ್ ಹಾಗೂ ದಾಢಸಿತನದ ಮೇಲೆ ಹೊರಬಂದಿರುವ ಶಂಕರ್ ಐಪಿಎಸ್ ವಿಜಿ ಅಭಿಮಾನಿಗಳಿಗೆ ಹಬ್ಬದೂಟ ನೀಡುತ್ತದೆ.
ವಿನಯ್ ದಂಟಕಲ್
No comments:
Post a Comment