Monday, April 12, 2010

ಸಾನಿಯಾಗೊಂದು ಆತ್ಮೀಯ ಪತ್ರ


ಆತ್ಮೀಯ ಸಾನಿಯಾ..,
ನಿಜ, ಭಾರತದ ಟೆನ್ನಿಸ್ ಪಾಲಿಗೆ ನೀನು ಹೊಸತೊಂದು ಆಶಾಕಿರಣ. ಭಾರತೀಯ ನಾರಿಯರು ಕ್ರೀಡೆಯಲ್ಲಿ ಯಾವಾಗಲೂ ಹಿಂದುಳಿದವರು ಎಂಬ ಮಾತು ಹೆಚ್ಚಾಗಿ ಪ್ರಚಲಿತವಾಗಿದ್ದ ಕಾಲದಲ್ಲಿಯೇ ನೀನು ಹೊಸ ತಾರೆಯಾಗಿ ಉದಯಿಸಿದ್ದು. ಕ್ರಿಕೆಟ್ನ ಸವರ್ಾಧಿಕಾರದ ನಡುವೆ ಸೊರಗಿ ಹೋಗುತ್ತಿದ್ದ ಭಾರತೀಯರ ವಿವಿಧ ಕ್ರೀಡಾ ಪ್ರತಿಭೆಯನ್ನು ಎತ್ತಿಹಿಡಿದವರಲ್ಲಿ ನೀನೂ ಒಬ್ಬಾಕೆ. ಇಲ್ಲಿನ ಎಲ್ಲ ವರ್ಗದವರೂ ಕ್ರಿಕೆಟ್ ಭಜನೆ ಮಾಡುತ್ತಿದ್ದ ಕಾಲದಲ್ಲಿ ಟೆನ್ನಿಸ್ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿ ಕೋಟ್ಯಾಂತರ ಮಂದಿಯನ್ನು ಅಭಿಮಾನಿಗಳನ್ನಾಗಿ ಮಾಡಿಕೊಂಡಾಕೆ ನೀನು.
ನಿಜಕ್ಕೂ ನೀನು ಟೆನ್ನಿಸ್ಲೋಕಕ್ಕೆ ಕಾಲಿಟ್ಟಾಗ ಭಾರತದ ಟೆನ್ನಿಸ್ ಸೊರಗಿತ್ತು. ಎಲ್ಲೋ ಒಂದೆರಡು ಮಹಿಳೆಯರು ಆಗಾಗ ಗೆದ್ದು ದೀಪಾವಳಿಯ ಪಟಾಕಿಯಂತೆ ಸುದ್ದಿ ಮಾಡುತ್ತಿದ್ದರು. ಆದರೆ ಯಾರೂ ನಿನ್ನಷ್ಟು ಹೆಸರು ಮಾಡಲಿಲ್ಲ. ನಿಜಕ್ಕೂ ನೀನು ಟೆನ್ನಿಸ್ನಲ್ಲಿ ಉತ್ತಮ ಸಾಧಕಿ ಹೌದು. ಬಂದ ಹೊಸತರಲ್ಲಿಯೇ ಟೆನ್ನಿಸ್ ಲೋಕದಲ್ಲಿ ಭಾರೀ ಹೆಸರು ಮಾಡಿದ ಆಟಗಾತರ್ಿಯರಿಗೆ ಚಕ್ಕನೆ ಸೋಲುಣಿಸಿ ಶಾಕ್ ಕೊಟ್ಟವಳು ನೀನು. ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್, ಸನ್ಫೀಸ್ಟ್, ಮಿಯಾಮಿ ಓಪನ್ಗಳಂತಹ ಟೆನ್ನಿಸ್ನ ಹೆಸರಾಂತ ಟೂನರ್ಿಗಳಲ್ಲಿ ಭಾರತೀಯರಲ್ಲಿ ಇದುವರೆಗೆ ಯಾರೂ ಏರದಂತಹ ಎತ್ತರವನ್ನು ತಲುಪಿ ಸುದ್ದಿ ಮಾಡಿದಾಕೆ ನೀನು. ಅಷ್ಟೇ ಅಲ್ಲ ನೀನು ಮಾರಿಯಾ ಶರಪೋವಾ, ಸೆರೇನಾ ವಿಲಿಯಮ್ಸ್ರಂತಹ ಆಟಗಾತರ್ಿಯರ ಎದುರು ಕಾದಾಡಿ ಹೆಸರು ಮಾಡಿದವಳು.
ಕ್ರೀಡೆಗಳಲ್ಲಿ ಹಾಗೂ ಟೆನ್ನಿಸ್ನಲ್ಲಿ ಭಾರತೀಯ ನಾರಿಯರ ನಾಯಕಿಯಾಗಿ ನೀನು ರೂಪುಗೊಂಡಾಗ ಎಲ್ಲರೂ ಬಹಳ ಸಂತಸ ಪಟ್ಟಿದ್ದರು. ಹದಿ ಹರೆಯದಲ್ಲಿಯೇ ಟೆನ್ನಿಸ್ನಲ್ಲಿ ಒಳ್ಳೆಯ ಸಾಧನೆ ಮಾಡಿದಾಗ ಇಡೀ ಭಾರತೀಯರೆ ನಿನ್ನ ಬೆನ್ನಿಗೆ ನಿಂತು ಸಂತಸ ಪಟ್ಟರು. ನೂರರ ಆಚೀಚೆ ನಿನ್ನ ರ್ಯಾಂಕಿಂಗ್ಗಳಿದ್ದಾಗ ಈಕೆ ರ್ಯಾಂಕಿಂಗ್ನಲ್ಲಿ ಇನ್ನೂ ಮೇಲೆ ಬರಲಿ ಎಂದುಕೊಂಡರು. ನೀನು 100ರಿಂದ 75ಕ್ಕೆ ಬಂದೆ, 50ಕ್ಕೆ ಬಂದೆ ಕೊನೆಗೆ 40ರ ಆಸುಪಾಸಿಗೂ ಬಂದೆ. ಆಗೆಲ್ಲಾ ನಿನ್ನಷ್ಟೆ ಸಂತಸ ಪಟ್ಟವರು ನಮ್ಮ ಭಾರತೀಯರು.
ನೀನು ಸೋತಾಗ ತಾವೇ ಸೋತೆವೇನೋ ಎಂಬಷ್ಟು ದುಃಖಪಟ್ಟರು. `ಮುಂದಿನ ಟೂನರ್ಿಮೆಂಟ್ನಲ್ಲಿ ಸಾನಿಯಾ ಗೆಲ್ತಾಳೆ' ಅಂತ ತಮ್ಮಲ್ಲಿಯೇ ಸಮಾಧಾನ ಪಟ್ಟುಕೊಂಡರು. ನೀನು ಹೋದ ಟೂನರ್ಿಗೆ ತಾವೂ ಹೋಗಿ ನಿನ್ನನ್ನು ಹುರಿದುಂಬಿಸಿ ಸಂತಸಪಟ್ಟ ಮಂದಿ ಇನ್ನೂ ಬಹಳಷ್ಟು. 
ಇನ್ನು ಇಲ್ಲಿನ ಯುವಕರಂತೂ ನಿನ್ನ ಮೂಗುತಿ ಮುಖಕ್ಕೆ ಮರುಳಾಗಿ ಕನಸುಗಳ ಮೂಟೆಯನ್ನೇ ಕಟ್ಟಿಕೊಂಡರು. ಆಗೊಮ್ಮೆ ಪ್ರತಿದಿನ ಪೇಪರ್ಗಳಲ್ಲಿ ಬರುತ್ತಿದ್ದ ನಿನ್ನ ಪೋಟೋಗಳನ್ನು ಬೆಳಗಾಗುತ್ತಲೇ ನೋಡಿ ಆನಂದಪಟ್ಟರು. ಪೇಪರ್ನಲ್ಲಿ ಬರುತ್ತಿದ್ದ ನಿನ್ನ ಭಾವಚಿತ್ರಗಳನ್ನು ಕತ್ತರಿಸಿ ಇಟ್ಟುಕೊಂಡವರು ಹಲವರು. ಇನ್ನು ಕೆಲವರು ಇದ್ದರೆ ಇಂತವಳೊಬ್ಬಳು ಗೆಳತಿ ಇರಬೇಕು ಎಂದು ಕೊಂಡರು. ಬೆಳಗಿನ ಜಾವದ ಕನಸಿನಲ್ಲಿ ನಿನ್ನ ಕಂಡು ಖುಷಿಪಟ್ಟರು. ಸದಾ ಸಾನಿಯಾ ಸಾನಿಯಾ ಎಂದು ಕನವರಿಸಿದರು. ನಿನ್ನ ಮೋಡಿ ಅದೆಷ್ಟಿತ್ತೆಂದರೆ ಹಲವು ಭಾರತೀಯ ಹುಡುಗಿಯರೂ ನಿನ್ನ ಹಾಗೇ ಮೂಗುತಿ ಹಾಕಿಕೊಂಡು `ಮೂಗುತಿ ಸುಂದರಿ'ಯರಾಗಲಾರಂಭಿಸಿದರು. ಕಾಲೇಜುಗಳಲ್ಲಿ ನಿನ್ನಂತೆ ಕಾಣುವ ಹುಡುಗಿಯರನ್ನು `ಸಾನಿಯಾ' ಎಂಬ ಅಡ್ಡಹೆಸರನ್ನಿಟ್ಟು ಕರೆಯುವ ಪರಿಪಾಠವೂ ಬೆಳೆಯಿತು.
ಅದೆಂತಹ ಕ್ರೇಜé್ ಹುಟ್ಟುಹಾಕಿಬಿಟ್ಟಿದ್ದೀಯಾ ಮಾರಾಯ್ತಿ ನೀನು..? ಸುಂದರವಾಗಿರುವವರು ಬಾಲಿವುಡ್ಡಿನ ಹೀರೋಯಿನ್ಗಳು ಮಾತ್ರ ಎಂಬ ಮಾತೊಂದಿತ್ತು. ಹೆಸರಾಂತ ಜಾಹಿರಾತು ಕಂಪನಿಗಳೆಲ್ಲ ಅವರ ಬೆನ್ನಿಗೆ ಬಿದ್ದುಬಿಟ್ಟಿದ್ದರು. ಆದರೆ ನೀನು ಬಂದೆ ನೋಡು. ಆಮೇಲೆ ಎಲ್ಲವೂ ಬದಲಾಗಿಬಿಟ್ಟವು. ಅಷ್ಟೇ ಅಲ್ಲ ಸಾಲು ಸಾಲು ಜಾಹಿರಾತು ಕಂಪನಿಗಳು ನಿನ್ನ ಮನೆಯ ಬಾಗಿಲು ಬಡಿದರು. ಜಾಹಿರಾತು ಕಂಪನಿಗಳು ನಿನ್ನ ಮನೆಯ ಬಾಗಿಲು ಬಡಿದ ಹಾಗೆಲ್ಲಾ ನೀನು ಬದಲಾಗಲಾರಂಭಿಸಿದೆ. ಉತ್ತಮವಾಗಿ ಆಟವಾಡುತ್ತಿದ್ದ ನೀನು ಯಾರ್ಯಾರ ಕೈಯ್ಯಲ್ಲಿಯೋ ಸೋಲಲಾರಂಭಿಸಿದೆ.
ಉತ್ತಮ ಪ್ರತಿಭೆ ಇದ್ದ ನೀನು ಹಣ ಗಳಿಸಿದಂತೆಲ್ಲ ಕೇವಲ ಸುದ್ದಿ ಮಾಡುವ ವ್ಯಕ್ತಿಯಾದೆ. ನೀನು ಟೆನಿಸ್ ಮ್ಯಾಚ್ಗಳಲ್ಲಿ ಗೆಲ್ಲದೆ ಹೋದರೂ ನಿನ್ನ ಬಗ್ಗೆ ಬರೀ ಸುದ್ದಿಗಳಷ್ಟೇ ಬರಲಾರಂಭಿಸಿತು. ಅದಕ್ಕೂ ಮಿಗಿಲಾಗಿ ನೀನು ಮೊಣಕಾಲು ನೋವು, ಕೈ ನೋವು ಅಂತೆಲ್ಲ ನೆಪಗಳನ್ನು ಹೇಳಿ ಟೂನರ್ಿಯಿಂದ ಹಿಂದೆ ಸರಿದೆ. ಓಲಂಪಿಕ್, ಏಷ್ಯನ್ ಗೇಮ್ಸ್ಗಳಂತಹ ಕ್ರೀಡೆಗಳಲ್ಲಿ ನಿನ್ನ ಮೇಲೆ ನಿರೀಕ್ಷೆ ಇಟ್ಟವರೆಲ್ಲ ನೀನು ಸೋತ ಕೂಡಲೇ ನಿರಾಶರಾದರು. ಬಹುಶಃ ಆಗಲೇ ಇರಬೇಕು ಭಾರತೀಯರಿಗೆ ನಿನ್ನ ಮೇಲೆ ಮನಸ್ಸು ಮುರಿಯಲು.
ಇಷ್ಟರ ನಡುವೆಯೂ ನೀನು ಆಗೊಮ್ಮೆ ಈಗೊಮ್ಮೆ ಕನ್ನಡದ ಕುವರ ಮಹೇಶ್ ಭೂಪತಿ ಜೊತೆ ಮಿಕ್ಸೆಡ್ ಡಬಲ್ಸ್ ಆಡಿ ಗೆಲ್ತಾ ಇದ್ಯಲ್ಲಾ ಆಗಲೂ ನಾವು ಕುತೂಹಲದಿಂದ ನೋಡಿದ್ದಿದೆ. ಮತ್ತೆ ಗೆಲ್ತಾಳೆ ಅಂತ ಖುಷಿಪಟ್ಟಿದ್ದಿದೆ. ಆದರೆ ಆಗ ನೀನು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಅಂತಾಗಿಬಿಟ್ಟೆ. ಆಗ ಅಂದುಕೊಂಡೆವು ನಾವು `ಇವಳು ಇಷ್ಟೇ' ಅಂತ. ಅಲ್ಲಿಂದೀಚೆಗೆ ನೀನು ಗೆದ್ದರೂ ಸೋತರೂ ಭಾರತೀಯರು ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ.
ಈ ನಡುವೆ ಅದ್ಯಾರೋ ಇದ್ದಾನಲ್ಲ ನಿನ್ನ ಬಾಲ್ಯದ ಗೆಳೆಯ ಸೋಹ್ರಾಬ್ ಅವನ ಜೊತೆ ಮದುವೆ ಆಗ್ತೀಯಾ ಅನ್ನುವ ಸುದ್ದಿ ಬಂತು. ಕೆಲವರು ಖುಷಿ ಪಟ್ಟರೆ ಹಲವರು ಹೊಟ್ಟೆಉರಿ ಮಾಡಿಕೊಂಡರು. ಬಹು ದಿನಗಳ ಗೆಳತಿ ಯಾರನ್ನೋ ಮದುವೆ ಆಗಿ ಹೋಗ್ತಾ ಇದ್ದಾಳೆ ಎಂದು ಬೇಸರ ಪಟ್ಟುಕೊಂಡರು. ತಮ್ಮದೆ ಕುಟುಂಬದ ಹುಡುಗಿಯೊಬ್ಬಳು ಮದುವೆ ಆಗಿ ಹೋಗ್ತಾಳೆ ಅನ್ನುವಷ್ಟು ನೊಂದುಕೊಂಡರು.
ಆದರೆ ನೀನು ಆತನ ಜೊತೆ ಮದುವೆಯನ್ನು ಮುರಿದುಕೊಂಡೆ ನೋಡು ಆಗ ಮಾತ್ರ ನಿನ್ನ ಮೇಲೆ ಬಹಳ ಬೇಸರ ಹುಟ್ಟಿಬಿಟ್ಟಿತು. ಸ್ವಾರ್ಥಕ್ಕೋಸ್ಕರ ಬಾಲ್ಯದ ಮಿತ್ರನ ಜೊತೆ ಮದುವೆ ಆಗುವುದನ್ನು ತಪ್ಪಿಸಕೊಂಡೆ ನೋಡು ಆಗ ಬಹುತೇಕರು ನಿನ್ನನ್ನು ವಿರೋಧಿಸಿದರು. ಇವಳಿಗೂ ಬಾಲಿವುಡ್ಡಿನ ರೋಗ ಹಿಡಿಯಿತು, ದಿನಕ್ಕೊಬ್ಬರಂತೆ ಹುಡುಗರನ್ನು ಬದಲಾಯಿಸುವ ರೋಗ ಇವಳಿಗೆ ತಗುಲಿತು ಎಂದು ಹಲವರು ಮಾತಾಡಿಕೊಂಡರು. ದಿನಕ್ಕೊಬ್ಬ ಬಾಯ್ಫ್ರೆಂಡ್ಗಳನ್ನು ಬದಲಾಯಿಸುವ ಕರೀನಾ, ಕತ್ರಿನಾರ ಸಾಲಿಗೆ ನಿನ್ನನ್ನು ಸೇರಿಸಲಾರಂಭಿಸಿದರು.
ಅಷ್ಟೇ ಆದರೆ ಒಳ್ಳೆಯದಿತ್ತೇನೋ. ಆದರೆ ನೀನು ಪಾಕ್ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿದೆ ನೋಡು ಆಗ ಮಾತ್ರ ನಿನ್ನ ಮೇಲಿದ್ದ ಅಲ್ಪಸ್ವಲ್ಪ ಅಭಿಮಾನವೂ ಹೊರಟುಹೋಯಿತು. ಇಡಿಯ ಭಾರತೀಯ ಜನರು ನಿನ್ನ ಈ ಒಂದು ನಿಧರ್ಾರದಿಂದ ನೊಂದು ಕೊಂಡರು. ಅಷ್ಟೇ ಅಲ್ಲ ಅವರು ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲ ಕಣೆ, ಆ ಪಾಕಿಸ್ತಾನದ ಶೋಯೆಬ್ ಮಲ್ಲಿಕ್ ನಿನಗೆ ಯಾವಾಗ ಪರಿಚಯವಾದ..? ಯಾವಾಗ ನಿನ್ನ ಜೊತೆ ಮಾತಾಡಿದ..? ಯಾವಾಗ ಪ್ರೇಮ ನಿವೇದನೆ ಮಾಡಿದ..? ಸಕಲ ಭಾರತೀಯ ಯುವಕರು ಅದೇ ಕುತೂಹಲದಲ್ಲಿದ್ದಾರೆ.
ನೀನು ಮಲ್ಲಿಕ್ ಜೊತೆ ಮದುವೆ ಆಗುವ ವಿಷಯವನ್ನು ಜಾಹಿರು ಪಡಿಸಿದಾಗ ಬಹಳಷ್ಟು ಮಂದಿ ಅದನ್ನು ನಂಬಲೇ ಇಲ್ಲ. ಭಾರತೀಯ ಹುಡುಗಿ ಓರ್ವ ಪಾಕಿಸ್ತಾನಿಯನ್ನು ಮದುವೆ ಆಗುತ್ತಾಳೆ ಎಂಬುದನ್ನು ಕನಸು ಮನಸಿನಲ್ಲಿಯೂ ಆಲೋಚಿಸದ ಇಲ್ಲಿನ ಜನರು ನೀನಂದುದನ್ನು ಒಂದು ಸುಳ್ಳು ಸುದ್ದಿ ಇರಬೇಕು ಅಂದುಕೊಂಡರು. ಆದರೆ ನೀನು ಆ ಬಗ್ಗೆ ಬಹಳ ಗಂಭೀರವಾಗಿ ಮಾತನಾಡಿದಾಗಲೇ ಎಲ್ಲರಿಗೂ ತಿಳಿದಿದ್ದು ಇದೊಂದು ನಿಜವಾದ ಸುದ್ದಿ ಎಂದು.
ಆ ಸುದ್ದಿಯನ್ನು ಪ್ರಕಟಿಸಿದ ನಂತರ ನೀನು ನೀಡುತ್ತಿರುವ ಹಲವು ಹೇಳಿಕೆಗಳು ಎಲ್ಲರನ್ನು ಬೆರಗುಗೊಳಿಸುತ್ತಿದೆ. ಮದುವೆ ಆಗಿ ನೀನು ದುಬೈನಲ್ಲಿ ವಾಸಿಸುತ್ತೀಯಂತೆ, ಪಾಕಿಸ್ತಾನಿಯನನ್ನು ಮದುವೆ ಆದ ಮೇಲೂ ನೀನು ಭಾರತದ ಪರವಾಗಿಯೇ ಆಟ ಆಡುತ್ತೀಯಂತೆ ಇದು ನಿಜವಾ..? ಭಾರತೀಯರು ಈ ಮಾತುಗಳನ್ನು ನಂಬಬಹುದಾ.? ಅರ್ಥವಾಗುತ್ತಿಲ್ಲ.
ಇಷ್ಟೆಲ್ಲ ಹೇಳಿದ ಮೇಲೆ ನಿನಗೆ ಇನ್ನೂ ಕೆಲವು ಮಾತುಗಳನ್ನು ಹೇಳೋಣ ಅನ್ನಿಸುತ್ತಿದೆ. ನಿಜಕ್ಕೂ ನೀನು ಪಾಕಿಸ್ತಾನಿಯನ್ನು ಮದುವೆ ಆಗ್ತಾ ಇದ್ದೀಯಲ್ಲಾ ನಿನಗೆ ಭಾರತೀಯರು ಯಾರೂ ಸಿಗಲಿಲ್ಲವಾ? ಭಾರತದಲ್ಲಿ ಸುಮಾರು 7-8 ಕೋಟಿ ಮುಸ್ಲಿಮ್ ಯುವಕರಿದ್ದರಲ್ಲ ಅವರ್ಯಾರೂ ನಿನಗೆ ಇಷ್ಟವಾಗಲಿಲ್ಲವಾ? ಮದುವೆ ಆಗಲು ನಿನಗೆ ಪಾಕಿಸ್ತಾನಿಯೇ ಬೇಕಾದನಾ? ಭಾರತೀಯಳಾಗಿದ್ದುಕೊಂಡು ಪಾಕಿಯನ್ನು ನೀನು ಮದುವೆ ಆಗುವುದು ಎಷ್ಟು ಸರಿ? ನೀನು ಮದುವೆ ವಿಷಯ ಬಹಿರಂಗಪಡಿಸಿದ ನಂತರ ಏನಾಯ್ತು ಗೊತ್ತಲ್ಲ. ಭಾರತೀಯರು ನಿನ್ನ ಪ್ರತಿಕೃತಿ ದಹನ ಮಾಡಿದರು. ವಿರೊಧಿಸಿದರು.. ಪ್ರತಿಭಟನೆ ಮಾಡಿದರು. ಆದರೆ ಅದೇ ಹೊತ್ತಿನಲ್ಲಿ ಪಾಕಿಯರೇನು ಮಾಡಿದರು ಗೊತ್ತಲ್ಲ. ಕುಣಿದರು, ಕುಪ್ಪಳಿಸಿದರು. ಹಬ್ಬ ಮಾಡಿರು. ಪಾಪ ಇಲ್ಲಿನ ಯುವಕರು ಬೇಸರ ಮಾಡಿಕೊಂಡರು. ಹೋಗ್ಲಿ ಬಿಡು.. ಇಲ್ಲಿಯ ಜನರು ನಿನ್ನನ್ನು ಸಂತಸದಿಂದ ಬೀಳ್ಕೊಡುತ್ತಾರೆ. ಖುಷಿಯಿಂದ ನಿನ್ನ ಕಳಿಸಿಕೊಡುತ್ತಾರೆ.
ಆದರೆ ನಿನ್ನಲ್ಲಿ ಒಂದೇ ಕೋರಿಕೆ. ಶೋಯೆಬ್ ಜೊತೆ ಮದುವೆ ಎಂಬ ಸುದ್ದಿಯನ್ನು ನೀನಾಗಲೇ ತಿಳಿಸಿಬಿಟ್ಟಿದ್ದೀಯಾ. ಯಾವುದೇ ಕಾರಣಕ್ಕೂ ಮತ್ತೆ ಆ ಸುದ್ದಿಯನ್ನು ಸುಳ್ಳಾಗಿಸಬೇಡ. ಸೊಹ್ರಾಬ್ಗೆ ಕೈ ಕೊಟ್ಟಂತೆ ಆತನಿಗೂ ಕೈ ಕೊಡಬೇಡ. ನೀನು ಭಾರತದ ಪರವಾಗಿ ಆಡದಿದ್ದರೂ ಬೇಜಾರಿಲ್ಲ. ಒಳ್ಳೆಯ ರೀತಿಯ ಜೀವನವನ್ನು ನಡೆಸಿಕೊಂಡು ಹೋಗು ಸಾಕು. ಆದರೆ ಒಂದು ಮಾತ್ರ ಸತ್ಯ. ನಿನಗೆ ಇದುವರೆಗಿದ್ದ ಕೋಟ್ಯಾಂತರ ಅಭಿಮಾನಿಗಳ ಆದರ, ಪ್ರೀತಿ ಎಲ್ಲ ನಿಂತುಹೋಗಿದೆ. ಮತ್ತೆ ನಿನ್ನನ್ನು ಅವರು ಅಭಿಮಾನದಿಂದ ನೋಡಲಾರರು. ಅಲ್ಲಾದರೂ ನೀನು ಉತ್ತಮವಾಗಿ ಬದುಕು. ಇನ್ನೂ ಹೆಚ್ಚಿನ ಸಾಧನೆ ಮಾಡು ಎಂಬುದೆ ಎಲ್ಲರ ಹಾರೈಕೆ.

ಇಂತಿ ನಿನ್ನ ಅಭಿಮಾನಿ
ಭಾರತೀಯ ಯುವಕ

Sunday, April 11, 2010

ಗೆಳತಿ ಯಾಕ್ಹಿಗೆ...?




ಗೆಳತಿ ಯಾಕ್ಹಿಗೆ...?

ಗೆಳತಿ ಯಾಕ್ಹಿಗೆ...?
ಮೊದ-ಮೊದಲು ಈ ಭೂರಮೆಯ 
ಚುಂಬಿಸಿ ತೃಪ್ತಿಪಡಿಸಿದ 
ವರ್ಷಧಾರೆಯಲ್ಲೊಮ್ದು ಕಂಪಿದೆಯಲ್ಲ,..!!

ಮಾಮರದ ತಳಿರೆಲೆಗಳ ಚಿಗುರ 
ನಡು-ನಡುವಲ್ಲಿ ಕುಳಿತು 
ಕಾಣದ ಕನಸನ್ನು ಕಟ್ಟುತ್ತ
ಉಲಿವ ಕೋಗಿಲೆಯ ಕಂಠದೊದಳಲ್ಲೂ 
ಝಾಲಕಿದೆಯಲ್ಲಾ...!!!

ಹಾಗೆ ಸಾಗಿದಾಗ.......
ಏನನ್ನೂ ಬಯಸದಿದ್ದ ಈ 
ಭಾವದಾಳ-ಬಾಳ ಬದುಕಲ್ಲಿ 
ನೀ-ನೆಂಬ ಭೃಂಗವೆದೆಯ 
ಗೂಡಿದೆ ಕಿಂಡಿಕೊರೆದು, ರಂಧ್ರ ಮಾಡಿ 
ನಿನ್ನ ನೆನಪನ್ನೇ ಭದ್ರವಾಗಿಸಿದೆಯಲ್ಲ...!!!

ಗೆಳತಿ ಯಾಕ್ಹಿಗೆ...?
ನಿನ್ನ ನೆನಪು-ಒನಪು 
ನನ್ನ ಸೆಳೆಯುತ್ತಿದೆಯಲ್ಲಾ...!!!


Tuesday, March 23, 2010

ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು

ಮಾರ್ಚ್ 23, ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ದಾಸ್ಯಮುಕ್ತಿಗಾಗಿ ಜೀವನವನ್ನೇ ಬಲಿದಾನಗೈದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾದ ದಿನ. ಇಂದಿಗೆ ಈ ವೀರಯೋಧರು ದೇಶಕ್ಕಾಗಿ ಜೀವತೆತ್ತು 79 ವರ್ಷಗಳು ಸಂದಿವೆ. ಇಂದು ನಾವು ದೇಶದ ಒಳಿತಿಗೆ ಶ್ರಮಿಸಿದರೆ ಅದೇ ಈ ವೀರರಿಗೆ ನೀಡುವ ಅತ್ಯುನ್ನತ ಗೌರವ.

* ಸಿ.ಎಸ್. ರಾಮಚಂದ್ರ ಹೆಗಡೆ


"ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ..." ಹಾಗೊಂದು ಹಾಡು ಲಾಹೋರ್ ನ ಜೈಲಿನ ಗೋಡೆ ಗೋಡೆ ಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದ್ದಾಗಲಿ, ಸಂಗೀತ ಗೋಷ್ಠಿಯದ್ದಾಗಲಿ ಆಗಿರಲಿಲ್ಲ. ದೇಶಭಕ್ತಿಯ ಮಹಾಪರಾಧಕ್ಕಾಗಿ ನೇಣಿನ ಶಿಕ್ಷೆಗೆ ಒಳಗಾದ ಮೂವರು ಭಾರತೀಯ ಯುವಕರು ತಮ್ಮ ಬಲಿದಾನದ ಸಮಯ ಹತ್ತಿರವಾಯಿತೆಂದು ಸಂಭ್ರಮದಿಂದ ಆನಂದದಿಂದ ಹೇಳತೊಡಗಿದ್ದ ಹಾಡದು. ಸಾಯಲು ಹೊರಟವರಿಂದ ಸಂಭ್ರಮದ ಹಾಡು!

ತಾಯ ವಿಮೋಚನೆಗಾಗಿ, ಸ್ವಾತಂತ್ರ್ಯದ ಕನಸು ಕಂಡ ಆ ಮೂವರು ಭಾರತೀಯ ಯುವಕರಿಗೆ ಬ್ರಿಟಿಷ್ ಸರ್ಕಾರ ನೀಡಿದ್ದು ಗಲ್ಲು ಶಿಕ್ಷೆಯ ಉಡುಗೊರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಮರುದಿನ ಗಲ್ಲಿಗೇರಿಸಬೇಕಿತ್ತಾದರೂ ದೇಶಾಭಿಮಾನಿಗಳ ಪ್ರತಿಭಟನೆಗೆ ಹೆದರಿ ಬ್ರಿಟಿಷ್ ಸರ್ಕಾರ ಒಂದು ದಿನ ಮುಂಚೆಯೇ ಅವರನ್ನು ನೇಣಿ ಗೇರಿಸಲು ನಿರ್ಧರಿಸಿತ್ತು. ಸೆರೆಮನೆಯ ಅಧಿಕಾರಿಗಳು ಆ ಯುವಕರಿಗೆ ಈ ವಿಷಯ ತಿಳಿಸಿದಾಗ ಅವರಿಗೋ ಅತ್ಯಾನಂದ. ಆ ಮೂವರು ಗೆಳೆಯರಲ್ಲೂ ಪೈಪೋಟಿ - ತಮ್ಮಲ್ಲಿ ಮೊದಲು ಗಲ್ಲಿಗೇರುವ ಅವಕಾಶ ಯಾರದಿರಬೇಕು ಎಂಬ ಸಲುವಾಗಿ! ಅವರಿಗದು ಮಾತೃಭೂಮಿಯ ಮುಕ್ತಿಗಾಗಿ ಬಲಿದಾನಗೈಯ್ಯುವ ಭಾಗ್ಯ!

ಪ್ರತ್ಯಕ್ಷ ಸಾವಿನ ಎದುರು ನಿಂತಾಗಲೂ ಅವರಲ್ಲಿ ಭಯದ ಲವಲೇಶವೂ ಇಲ್ಲ. ಗಲ್ಲಿನ ವೇದಿಕೆ ಏರಿದಾಗಲೂ ಮುಖದಲ್ಲಿ ನಗು. ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಜೀವ ತೆಗೆವ ನೇಣಿನ ಕುಣಿಕೆಯನ್ನು ಅವರು ಚುಂಬಿಸಿದರು. ಮನದಲ್ಲಿ ಅದೇನನ್ನೋ ಸಾಧಿಸಿದ ತೃಪ್ತಿ. ಮೊಗದಲ್ಲಿ ಚೈತನ್ಯದ ಚಿಲುಮೆ. ಸಾಯಲು ಹೊರಟವರ ಮುಖದಲ್ಲಿ ನಗು. ಬ್ರಿಟಿಷ್ ಅಧಿಕಾರಿಗಳಿಗೆ ಅತ್ಯಾಶ್ಚರ್ಯ. ಅಲ್ಲಿದ್ದವರು ಐದು ಮಂದಿ ಬ್ರಿಟಿಷ್ ಅಧಿಕಾರಿಗಳು. ಒಬ್ಬ ಬ್ರಿಟಿಷ್ ಅಧಿಕಾರಿ ಕೇಳಿದ 'ಯಾಕೆ ನಗುತ್ತಿದ್ದೀರಿ?' ಬಲಿದಾನಕ್ಕೆ ಸಿದ್ಧನಾದ ಯುವಕರಲ್ಲಿ ಒಬ್ಬ ಹೇಳಿದ "ಸಾರ್ ನೀವು ಅದೃಷ್ಟವಂತರು!" ಬ್ರಿಟಿಷ್ ಅಧಿಕಾರಿಗೆ ಮತ್ತಷ್ಟು ಅಚ್ಚರಿ . 'ಕ್ಷಣದಲ್ಲಿ ಹೆಣವಾಗಿ ಉರುಳುವ ನೀವು ನಮ್ಮ ಅದೃಷ್ಟವನ್ನೇಕೆ ಹೊಗಳ್ತೀರಿ?' ಆತನ ಪ್ರಶ್ನೆ. ಅದಕ್ಕೆ ಆ ಭಾರತೀಯ ಯುವಕ ನಗುತ್ತಲೇ ಉತ್ತರಿಸುತ್ತಾನೆ. "ತನ್ನ ತಾಯ್ನಾಡಿನ ಮುಕ್ತಿಗಾಗಿ, ಸ್ವಾತಂತ್ರ್ಯದ ಕನಸಿಗಾಗಿ ಈ ನಾಡಿನ ಯುವಕ ಅದೆಷ್ಟು ಆನಂದದಿಂದ, ಸಂತೋಷದಿಂದ, ಸಂಭ್ರಮದಿಂದ ಬಲಿದಾನ ಮಾಡ್ತಾನೆ, ಅದನ್ನು ನೋಡುವ ಅದೃಷ್ಟ 30 ಕೋಟಿ ಭಾರತೀಯರಲ್ಲಿ ನಿಮಗೆ ಐದು ಜನರಿಗೆ ಮಾತ್ರ ಸಿಗ್ತಿರೋದು , ನೀವು ಅದೃಷ್ಟವಂತರು!"

ಎಂತಹ ತಾಕತ್ತಿನ ಮಾತದು. ಸಾವಿನ ಸಮ್ಮುಖದಲ್ಲೂ ಅಂದು ಹಾಗೆ ದಿಟ್ಟ ವಾಗಿ ಮಾತಾಡಿದವನು ನಮ್ಮೆಲ್ಲರ ಪ್ರೀತಿಯ ಸರ್ದಾರ್ ಭಗತ್ ಸಿಂಗ್. ಜತೆಗಿದ್ದವರು ಅವನಷ್ಟೇ ಉಜ್ವಲ ದೇಶಭಕ್ತಿ, ಸ್ವಾತಂತ್ರ್ಯದ ಕನಸನ್ನು ಎದೆಯೊಳಗಿಟ್ಟುಕೊಂಡಿದ್ದ ಸುಖದೇವ್ ಮತ್ತು ಶಿವರಾಂ ರಾಜಗುರು.

ಅಂದು 23 ಮಾರ್ಚ್ 1931. ಇನ್ನೂ ತಾರುಣ್ಯದ ಹೊಸ್ತಿಲಲ್ಲಿದ್ದ ಭಗತ್ ಸಿಂಗ್, ಸುಖದೇವ್, ರಾಜಗುರು ಈ ನಮ್ಮ ಭಾರತದ ದಾಸ್ಯ ವಿಮೋಚನೆಗಾಗಿ, ತಮ್ಮ ಮಾತೃಭೂಮಿಯ ಅಗಾಧ ಪ್ರೀತಿ, ಉಜ್ವಲ ದೇಶಭಕ್ತಿಯ ಕಾರಣಕ್ಕಾಗಿ ನಗುನಗುತ್ತಲೇ ನೇಣಿಗೇರಿದ ದಿನ. 'ಈ ದೇಶಕಾಗಿ ಸಾಯಲೂ ಸಿದ್ಧ' ಅನ್ನೋದು ಕೇವಲ ಮಾತಲ್ಲ, ಈ ದೇಶದ ಯುವಕರು ಮಾತೃಭೂಮಿಯ ಒಳಿತಿಗಾಗಿ ಸಾವಿಗೂ ಸವಾಲು ಹಾಕಬಲ್ಲರು ಎಂಬುದನ್ನು ಜಗತ್ತಿಗೇ ನಿರೂಪಿಸಿ ಸಾಧಿಸಿ ತೋರಿಸಿದ ದಿನ. ಅಂದು ಅವರಿಗಿದ್ದದ್ದು ಭಾರತದ ದಾಸ್ಯ ವಿಮೋಚನೆ ಹಾಗೂ ಸ್ವತಂತ್ರ ಭಾರತದ ಕನಸು ಮಾತ್ರ. ನಾವು ಸ್ವತಂತ್ರರಾಗಿ, ದಾಸ್ಯಮುಕ್ತರಾಗಿ ಇರುವ ಇಂದಿನ ಈ ದಿನಗಳಿಗಾಗಿ ಅವರು ತಮ್ಮ ಸುಂದರ ನಾಳೆಗಳನ್ನು ಬಲಿಕೊಟ್ಟಾಗ , ತಾಯ್ನಾಡಿಗಾಗಿ ನಗುನಗುತ್ತಾ ನೇಣಿಗೇರಿದಾಗ ಭಗತ್ ಸಿಂಗ್ ಗೆ ಕೇವಲ 23 ವರ್ಷ, ಸುಖದೇವ್ ಗೆ 27 ವರ್ಷ ಹಾಗೂ ರಾಜಗುರು ಗೆ 25 ವರ್ಷ! ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ಆನಂದ, ದಾಸ್ಯಮುಕ್ತಿಯನ್ನೇ ಜೀವನದ ಧ್ಯೇಯವಾಗಿಸಿ ಕೊಂಡವರು ಅವರು. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲೇ ಅವರದು ಧೀರೋದಾತ್ತ ಅಧ್ಯಾಯ. ಇನ್ನೂ ಶತ ಶತಮಾನಗಳವರೆಗೆ ಭಾರತೀಯ ಯುವಕರಿಗೊಂದು ಆದರ್ಶ, ಅನುಪಮ ಮಾದರಿ, ಉಜ್ವಲ ಮಾರ್ಗದರ್ಶಿ.

ಮನೆಯಲ್ಲಿ ಮದುವೆ ಮಾಡುತ್ತೇನೆಂದಾಗ 'ಭಾರತದ ಸ್ವಾತಂತ್ರ್ಯವೇ ನನ್ನ ಮದುವೆ' ಎಂದು ಪತ್ರ ಬರೆದಿಟ್ಟು ಮನೆಯಿಂದ ಹೊರಬಂದು ಸಂಪೂರ್ಣ ತನ್ನನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡ ಭಗತ್, ದೇಶಾಭಿಮಾನವನ್ನೇ ತಮ್ಮ ರಕ್ತದ ಕಣಕಣ ದಲ್ಲಿ ತುಂಬಿಕೊಂಡು, ದೇಶಭಕ್ತಿಯನ್ನೇ ಉಸಿರಾಡುತ್ತಾ ಬಲಿದಾನದ ಸಮಯ ಬಂದಾಗ 'ನಾನು ಮೊದಲು ನಾನು ಮೊದಲು' ಎಂದು ಪೈಪೋಟಿಗಿಳಿದು ನಗು ನಗುತ್ತಾ ನೇಣಿ ಗೇರಿದ ಸುಖದೇವ್, ರಾಜಗುರು ... ಎಂತಹ ವೀರ ಪರಂಪರೆಯ ಮಕ್ಕಳು ನಾವು! ಆದರೆ ನಮ್ಮಲ್ಲೇಕಿಂದು ಆತ್ಮ ವಿಸ್ಮೃತಿಯ ಕರಿನೆರಳು? ನಾವಿಂದು ಬಲಿದಾನಗೈಯಬೇಕಿಲ್ಲ. ಮನೆ ಮಠ ಸಂಸಾರ ಬಿಟ್ಟು ಬರಬೇಕಿಲ್ಲ. ಯೌವನ, ಬದುಕನ್ನು ತ್ಯಾಗ ಮಾಡಬೇಕಿಲ್ಲ. ಆದರೆ ಕನಿಷ್ಟ ದೇಶವನ್ನು ಪ್ರೀತಿಸಲಾರೆವಾ? ದೇಶದ ಒಳಿತಿಗೆ ಸ್ಪಂದಿಸಲಾರೆವಾ? ಆ ವೀರ ಬಲಿದಾನಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಲಾರೆವಾ? ನಮ್ಮ ಈ ವೀರ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲಾರೆವಾ? ಈ ದೇಶದ ರೈತ, ಗಡಿಕಾಯುವ ಸೈನಿಕರ ಕುರಿತು ಕಿಂಚಿತ್ತೂ ಕಾಳಜಿ ಹೊಂದಲಾರೆವಾ? ಅಷ್ಟೂ ಮಾಡಲಾಗದಿದ್ದರೆ ಸುಖಾಸುಮ್ಮನೆ ಈ ದೇಶಕ್ಕೆ ಬೈಯ್ಯೋದು ಬಿಟ್ಟು, ಈ ದೇಶವನ್ನು ಟೀಕಿಸೋದು ಬಿಟ್ಟು, ದೇಶಕ್ಕಾಗಿ ಕೆಲಸ ಮಾಡುತ್ತಿರುವವರ ಕಾಲೆಳೆಯೋದು ಬಿಟ್ಟು ಸುಮ್ಮನಿರಲಾರೆವಾ?

ದೇಶಕ್ಕಾಗಿ ನಾವೇನೂ ಮಾಡಬೇಕಿಲ್ಲ. ನನ್ನ ಹಳ್ಳಿ, ನನ್ನ ಊರು, ನನ್ನ ಜನ, ನನ್ನ ಸುತ್ತಮುತ್ತಲಿನ ಸಮಾಜಕ್ಕಾಗಿ ಸ್ಪಂದಿಸುವುದೇ, ತುಡಿಯುವುದೇ, ಸಮಾಜದ ಒಳಿತಿಗೆ ಶ್ರಮಿಸುವುದೇ ನಾವಿಂದು ಮಾಡಬೇಕಾದ ಕಾರ್ಯ. ಅದೇ ದೇಶ ಕಟ್ಟುವ ಕೆಲಸ.

ಭಗತ್ ಸಿಂಗ್,ರಾಜಗುರು , ಸುಖದೇವ್ ರ ಬಲಿದಾನದ ಈ ದಿನ ಅಂತಹದೊಂದು ಸಂಕಲ್ಪ ಮಾಡೋಣ. ಇಲ್ಲದಿದ್ದರೆ ಮತ್ತೊಂದು ಮಾರ್ಚ್ 23 ಬರುತ್ತದೆ, ಹೋಗುತ್ತದೆ. ಮತ್ತು ನಾವು ಒಂದೊಂದೇ ವರ್ಷ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ . ಅಷ್ಟೇ!






***************************************************
 ಇದು ನಮ್ಮ ರಾಮಚಂದ್ರ ಹೆಗಡೆ ಸಿ. ಎಸ ಅವರು ಬರೆದ ಲೇಖನ..
ಅವರು ದಟ್ಸ್ ಕನ್ನಡ ದಲ್ಲಿ ಬರೆದಿದ್ದರು.. ಅದನ್ನು ನಿಮಗಾಗಿ ಹಾಗೆ ಎತ್ತಿ ಇಟ್ಟಿದ್ದೇನೆ..- ವಿನಯ್

Wednesday, March 17, 2010

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು ದಿನ-೧

 ದಿನ-೧..
ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ...

ಕೆಲವು ದಿನಗಳ ಹಿಂದೆ ನಾವು ಮಿತ್ರರು ಸೇರಿ ಊಟಿಗೆ ಹೋಗೋಣ ಎಂಬ ಪ್ಲಾನ್ ಹಾಕಿಕೊಂಡೆವು..
ಆ ಪ್ರಕಾರವಾಗಿ ಪೆಬ್ರವರಿ ೧೮ ರಂದು ಸಂಜೆಯ ವೇಳೆಗೆ ರಾಘವ ನ ಜೊತೆ ನಾನು ಹೊರಟೆ..
ನಮ್ಮ ತಂಡದ ಸದಸ್ಯರಾದ ಕಿಟ್ಟು ಹಾಗು ಮೋಹನ ಮೊದಲೇ ಮೈಸೂರು ತಲ್ಲುಪಿದ್ದರು...
ನಾವು ಬೆಂಗಳೂರನ್ನು ಬಿಡುವ ವೇಳೆಗೆ ಬಾನಲ್ಲಿ ಸೂರ್ಯ ಇಳಿಯುತ್ತಿದ್ದ.. ಸಂಜೆ ೫ ಮೀರಿತ್ತು..
ರಾಘವನ ಮೋಟರ್ ಸೈಕಲ್ ಏರಿ ಹೊರಟೆವು.. ಮೈಸೂರಿನ ಕಡೆ ನಮ್ಮ ಪಯಣ ಬಲು ನಿಧಾನವಾಗಿ ಸಾಗಿತು.
ಬಿಡದಿ ಬಳಿ ಏಳನೀರು ಕುಡಿದು ಹೊರಟೆವು.. ಬಾಯಿಯಲ್ಲಿ ಹಳೆಯ ಹಾಡುಗಳಿದ್ದವು..
ಕೆಳವು ಕಡೆ ರಾಘು, ಹಲವು ಕಡೆ  ನಾನು ವಾಹನ ಚಲಾಯಿಸಿದೆ..
ಮೈಸೂರು ರಸ್ತೆಯಂತೂ ವಾಹನಗಳ ಭರಾಟೆಯಿಂದ ಕೂಡಿತ್ತು..
ಅಂತು ಇಂತೂ ಮೈಸೂರು ತಲುಪಿದಾಗ ಸಂಜೆ ೮ ಗಂಟೆ..
ಅಲ್ಲಿನ ಹುಣಸೂರು ಸರ್ಕಲ್ನಲ್ಲಿ ಮಿರ್ತರಿಗಾಗಿ ಕಾದೆವು..
ಕೆಳವು ಸಮಯದ ನಂತರ ಅವರು ಬಂದರು..
ನಂತರ ಕೊಂಚ ಮಾತುಕತೆ ನಡೆಯಿತು..
ಆ ಪ್ರಕಾರವಾಗಿ ನಾವು ರಾತ್ರಿ ಉಳಿಯುವುದು ಗುಂಡ್ಲುಪೇಟೆಯಲ್ಲಿ ಎಂಬ ನಿರ್ಧಾರವಾಯಿತು..
ಇಲ್ಲಿಂದ ನಾವು ಬದಲಾವಣೆ ಮಾಡಿ ಹೊರಟೆವು..
ನಾನು ಮೋಹನನ ಬೈಕ್ ಏರಿದೆ..ರಾಘು ಬೈಕ್ಗೆ ಕಿಟ್ಟು ಬಂದ..
 ರೇಸ್ ಬಾಬಾ ರೇಸ್
ಇಲ್ಲಿ ಮಿತ್ರರು ರೇಸ್ ಗೆ ಬಿದ್ದರು..
ಒಬ್ಬರಿಗಿಂತ ಮತ್ತೊಬ್ಬರು ವೇಗವಾಗಿ ಹೋಗಬೇಕೆಂಬ ತವಕ..
ಅದೆಸ್ತು ವೇಗವಾಗಿ ಸಾಗಿದರೋ..?
ಕೊನೆಗೆ ನಂಜನಗೂಡಿನಲ್ಲಿ ಊಟ ಮಾಡಿದೆವು..
ನಂತರ ಮತ್ತೆ ಮುಂದೆ ಹೊರಟೆವು..
ಇಲ್ಲೂ ಮತ್ತೆ ರೇಸ್..!!!
ಕೊನೆಗೆ ಗುಂಡ್ಲುಪೇಟೆ ತಲುಪುವ ವೇಳೆಗೆ ಆಗಲೇ ಸಮಯ ೧೧ ಆಗಿತ್ತು..
ಎಲ್ಲಿ ಉಳಿಯೋದು ಎಂದು ಚಿಂತಿಸಿದೆವು..
ಕೊನೆಗೆ ಉಳಿಯಲು ಲಾಡ್ಜ್ ಹುಡುಕಿದೆವು..
ಸಿಕ್ಕಿತು.. ಕಡಿಮೆ ಬೆಲೆಗೆ..
ಅಲ್ಲಿ ಸ್ನಾನ ಮಾಡಿ ಮಲಗಿದೆವು..
ಮರುದಿನದ ಪಯಣದ ಕನಸು ಕಣ್ಣಿನಲ್ಲಿತ್ತು....

(ಮುಂದುವರಿಯುತ್ತದೆ...)

Monday, March 15, 2010

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು

ಅಲ್ಲಿಗೆ ಹೋಗಿ ಬಂದೆ..
ಮಿತ್ರರ ಜೊತೆಗೆ.. ಬಹು ದಿನಗಳ ಆಸೆ ಇತ್ತು..
ಅಂತೂ ಕೈಗೂಡಿತು..
ನಮ್ಮ ಪ್ರಯಾಣ ಬಹಳ ಚನ್ನಾಗಿತ್ತು..
ಮೊದಲು ಬೆಂಗಳೂರಿನಿಂದ ಮೈಸೂರು, ನಂತರ ಬಂಡೀಪುರ, ಊಟಿ, ಗುದಳುರಿಗೆ ತೆರಳಿದೆವು...
ನಂತರ ಸುಲ್ತಾನ್ ಬತ್ತೇರಿ ಹಾಗು ಎಡಕ್ಕಲ್ ಗುಡ್ಡಕ್ಕೆ ಸಹ ಹೋಗಿ ಬಂದೆವು...
ಅದರ ವಿವರ ಇನ್ನೊಮ್ಮೆ........