ಶ್ರೀಲಂಕಾ ಕ್ರಿಕೆಟ್ ದಿಗ್ಗಜ ರಂಗಣ ಹೆರಾತ್ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದಾರೆ. ಹೆರಾತ್ ವಿದಾಯದಿಂದಾಗಿ ಕ್ರಿಕೆಟ್ ಜಗತ್ತಿನಲ್ಲಿ ಬಹು ದೊಡ್ಡ ಬದಲಾವಣೆಯೊಂದು ಘಟಿಸುತ್ತಿದೆ. ಹೆರಾತ್ ವಿದಾಯದ ಮೂಲಕ ಕ್ರಿಕೆಟ್ ಲೋಕದಲ್ಲಿ 90ರ ದಶಕದ ಜಮಾನಾದ ಕೊನೆಯ ಕೊಂಡಿ ಕಳಚಿಕೊಳ್ಳುತ್ತಿದೆ.
ಮೊದಲ 15 ಓವರ್‌ಗಳಲ್ಲಿ ಪವರ್ ಪ್ಲೇ, 30 ಯಾರ್ಡ್ ಸರ್ಕಲ್ ನಿಯಮಗಳು, 250-260ರನ್ ಎಂದರೆ ಅಬ್ಬಬ್ಬಾ ಎನ್ನುವ ಸಮಯ, ಆಗ ತಾನೆ ಬಿಳಿ ಬಣ್ಣದ ಧಿರಿಸಿನಿಂದ ಬಣ್ಣ ಬಣ್ಣದ ಜೆರ್ಸಿಗೆ ಕಾಲಿಟ್ಟ ಸಮಯ ಈ ಮುಂತಾದ ಹಲವು ಸಂಗತಿಗಳು 90ರ ದಶಕದ ಕ್ರಿಕೆಟ್ ವೈಭವವನ್ನು ಕಟ್ಟಿಕೊಡುತ್ತವೆ.
90ರ ದಶಕದಲ್ಲಿಯೇ ಪಾಕಿಸ್ಥಾನ ಮೊಟ್ಟ ಮೊದಲ ವಿಶ್ವಕಪ್ ಎತ್ತಿ ಹಿಡಿದಿದ್ದು. ಈ ದಶಕದಲ್ಲಿಯೇ ಶ್ರೀಲಂಕಾ ಕ್ರಿಕೆಟ್ ತಂಡ ವಿಶ್ವವನ್ನೇ ಆಳಿದ್ದು. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾಗಿ ಪರಿವರ್ತನೆಯಾಗಿದ್ದು. 90ರ ದಶಕದಲ್ಲಿಯೇ ಆಸ್ಟ್ರೇಲಿಯಾ ಎಂಬುದು ಕ್ರಿಕೆಟ್‌ನ ಏಕಮೇವಾದ್ವಿತೀಯ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು. ಸಾಲು ಸಾಲು ಲೆಜೆಂಡ್‌ಗಳು ಜನಿಸಿದ್ದು.
ತೆಂಡೂಲ್ಕರ್ ಅಲ್ಲದೇ, ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ಮಾರ್ಕ್ ವಾ, ಸ್ಟೀವ್ ವಾ, ಜಾಕ್ ಕಾಲಿಸ್, ಹ್ಯಾನ್ಸಿ ಕ್ರೋನಿಯೆ, ಜಾಂಟಿ ರೋಡ್‌ಸ್, ಕಾರ್ಲ್ ಹೂಪರ್, ಅರ್ಜುನ ರಣತುಂಗಾ, ಅರವಿಂದ ಡಿಸಿಲ್ವಾ, ಗ್ಯಾರಿ ಕರ್ಸ್ಟನ್, ಮೈಕೆಲ್ ಬೆವನ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಾಲ್‌ಶ್, ಆಂಬ್ರೋಸ್, ಮುತ್ತಯ್ಯ ಮುರಳೀಧರನ್, ಮೆಕ್‌ಗ್ರಾಥ್, ಶೇನ್ ವಾರ್ನೆ, ಅನಿಲ್ ಕುಂಬ್ಳೆ ಹೀಗೆ ಸಾಲು ಸಾಲು ದಿಗ್ಗಜರು 90ರ ದಶಕದಲ್ಲಿಯೇ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಮಿಂಚಿದವರು. ಅಜರಾಮರವಾಗಿ ಉಳಿದವರು. 10-15 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದವರು.
ಕ್ರಿಕೆಟ್‌ನಲ್ಲಿ ಹಳೆಯ ನೀರು ಹರಿದು ಹೊಸ ನೀರು ಸದಾ ಬರುತ್ತಲೇ ಇರುತ್ತದೆ. 1990ರಿಂದ 1999ರ ವರೆಗಿನ ಕಾಲವೆಂದರೆ ಅತ್ತ ಕ್ಲಾಸಿಕ್ ಅಲ್ಲ, ಇತ್ತ ಮಾಡರ್ನ್ ಅಲ್ಲ. ಕ್ರಿಕೆಟ್ ಎನ್ನುವುದು ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ಸಮಯ. ನಿಧಾನವಾಗಿ ಹೊಸ ರೀತಿಯ ಅಂಶಗಳನ್ನು ಅಳವಡಿಸಿಕೊಳ್ಳುತ್ತಿದ್ದ ಹೊತ್ತು. ಪ್ರಸಿದ್ಧಿ, ಹಣ, ಜಾಹೀರಾತು ಹೀಗೆ ವಿವಿಧ ರಂಗಗಳಲ್ಲಿ ಕ್ರಿಕೆಟ್ ಕಲಿಗಳು ನಲಿಯುತ್ತಿದ್ದ ಹೊತ್ತು. ಆಟದ ಮಾದರಿಗಳೂ ಬದಲಾಗುತ್ತಿದ್ದ ಸಮಯ. ಹೊಸ ಹೊಸ ನಿಯಮಗಳನ್ನು ಪ್ರಯೋಗಗಳ ರೀತಿಯಲ್ಲಿ ಅಳವಡಿಕೆ ಮಾಡುತ್ತಿದ್ದ ಸಮಯ ಕೂಡ ಹೌದು. ಇಂತಹ 90ರ ದಶಕದ ಕೊಂಡಿಯಾಗಿ ಉಳಿದಿದ್ದರು ಶ್ರೀಲಂಕಾದ ಸ್ಪಿನ್ನರ್ ರಂಗಣ ಹೆರಾತ್.
2010ರಿಂದೀಚೆಗೆ 90ರ ದಶಕದಲ್ಲಿ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಅನೇಕರು ನಿವೃತ್ತರಾಗಿದ್ದಾರೆ. ಈ ಸಂದರ್ಭದಲ್ಲೆಲ್ಲ 90ರ ದಶಕದ ವೈಭವಗಳು ನಿಧಾನವಾಗಿ ತೆರೆಯ ಮರೆಗೆ ಸರಿಯುವ ಲಕ್ಷಣಗಳು ಕಣ್ಣಿಗೆ ಕಾಣಿಸಲು ಆರಂಭಿಸಿದೆ. ದ್ರಾವಿಡ್, ಸಂಗಕ್ಕಾರ, ಜಯವರ್ಧನೆ, ಅಫ್ರೀದಿ, ತೆಂಡೂಲ್ಕರ್, ಲಕ್ಷ್ಮಣ್, ಕಾಲಿಸ್, ಪಾಂಟಿಂಗ್, ಮೆಕ್‌ಗ್ರಾಥ್ ಹೀಗೆ ಹಲವರು ವಿದಾಯ ಹೇಳಿದಾಗಲೂ 90ರ ದಶಕದ ನೆನಪು ಮರುಕಳಿಸಿವೆ. ಇದೀಗ 90ರ ದಶಕದ ಕೊನೆಯ ಕೊಂಡಿಯಾಗಿದ್ದ ಹೆರಾತ್ ವಿದಾಯದ ಮೂಲಕ ಅಂದಿನ ಜಮಾನಾದ ಆಟಗಳು ನೆನಪಾಗಿ ಮಾತ್ರ ಉಳಿಯಲಿವೆ.
ಇಂದಿನ ಕ್ರಿಕೆಟ್ ಅಂದಿನ ಕ್ರಿಕೆಟ್ ಆಗಿ ಉಳಿದಿಲ್ಲ. ಟೆಸ್‌ಟ್, ಏಕದಿನ ಮಾದರಿಯ ಜತೆಗೆ ಟಿ20 ಎಂಬ ಚುಟುಕಿನ, ಅಬ್ಬರದ ಕ್ರಿಕೆಟ್ ಮಾದರಿ ಎಲ್ಲರ ಮನಸ್ಸಿನಲ್ಲಿ ಉಳಿದುಹೋಗಿದೆ. ನಿಯಮಗಳು ಬದಲಾಗಿದೆ. 300+ ರನ್ ಗಳಿಸಿದರೂ ಅದು ಯಾವುದೇ ತಂಡಗಳಿಗೆ ಸವಾಲಾಗುತ್ತಿಲ್ಲ. ಏಕದಿನ ಮಾದರಿಯಲ್ಲಿ 200+ ರನ್ ಸರಾಗವಾಗಿ ಭಾರಿಸುವ ಬ್ಯಾಟ್‌ಸ್‌ಮನ್‌ಗಳ ಉದಯವಾಗಿದೆ. ಬೌಲರ್‌ಗಳು ಹೈರಾಣಾಗುವ ಸಮಯವಂತೂ ತೀರಾ ಹೆಚ್ಚಾಗಿದೆ. ಇಂತಹ ಸಮಯದಲ್ಲಿ 90ರ ದಶಕದ ಆಟಗಳು ಹೆಚ್ಚಿನ ಜನರಿಗೆ ನೆನಪಾಗುವುದಿಲ್ಲ.
ಕ್ರಿಕೆಟ್ ಜಗತ್ತಿನಲ್ಲಿ 90ರ ದಶಕದ ಆಟಗಾರರ ವೈಭವವನ್ನು ಇನ್ನು ಮುಂದೆ ಕಾಣಲು ಸಾಧ್ಯವೇ ಇಲ್ಲ. ಬದಲಾವಣೆ ನಿರಂತರ ಎಂಬ ಸಂದರ್ಭದಲ್ಲಿ ಆ ಸಮಯದ ಆಟಗಾರರು ಸದಾ ನೆನಪಾಗುತ್ತಿರುತ್ತಾರೆ. ಕ್ಲಾಸಿಕ್ ಆಟಗಳು, ರೋಚಕ ಪಂದ್ಯಗಳು ಸದಾ ನೆನಪಾಗುತ್ತಲೇ ಇರುತ್ತವೆ. 90ರ ದಶಕದ ಆಟಗಾರನಿಗೆ ವಿದಾಯ ಹೇಳುತ್ತ, ಹೊಸ ಪರ್ವದ ಕಡೆಗೆ ಹೆಜ್ಜೆ ಹಾಕಬೇಕಿದೆ.