ಅಪೊಕ್ಯಾಲಿಪ್ಟೋ
ನಾನು ಇವತ್ತಷ್ಟೇ ನೋಡಿದ ಚಿತ್ರ. ಇಂಗ್ಲೀಷ್ ಅಬ್ ಟೈಟಲ್ ಹೊಂದಿದ ಎರಡೂ ಮುಕ್ಕಾಲು ತಾಸಿನ ಚಿತ್ರ. ಸಬ್ ಟೈಟಲ್ ಇಲ್ಲದೆಯೂ ಚಿತ್ರ ನೋಡಬಹುದು. ಅರ್ಥವಾಗುತ್ತದೆ. ಇಷ್ಟವಾಗುತ್ತದೆ.
ಯಾವುದೇ ನಾಗರಿಕತೆಗಳಲ್ಲಿ ಕೂಡ ಒಳಜಗಳಗಳು, ಪರಸ್ಪರ ಯುದ್ಧಗಳು, ಮಹತ್ವಾಕಾಂಕ್ಷೆಗಳು, ವಿಚಿತ್ರ ಆಚರಣೆಗಳು ಇದ್ದೇ ಇರುತ್ತವೆ. ಈ ಚಿತ್ರ ಮೆಕ್ಸಿಕೋದಲ್ಲಿನ ಮಯನ್ ನಾಗರಿಕರ ಬದುಕು ಅನಾವರಣಗೊಳಿಸುತ್ತದೆ.
ಚಿತ್ರದ ನಾಯಕ ಆಗಷ್ಟೇ ಟೀನೇಜ್ ಮುಗಿಸಿ ಮುಂದಿನ ಬದುಕಿಗೆ ಕಾಲಿಟ್ಟವನು. ಅವನಿಗೊಬ್ಬ ಹೆಂಡತಿ. ಆಗಲೇ ಒಂದು ಮಗುವಿನ ತಾಯಿ. ಇನ್ನೊಂದು ಕೂಸು ಹೊಟ್ಟೆಯಲ್ಲಿ. ಆತನ ತಂದೆ ಆ ಬುಡಕಟ್ಟು ಪಂಗಡದ ನಾಯಕ. ಪ್ರಕೃತಿಯೇ ಇವರಿಗೆ ವರ. ಪಂಚಭೂತಗಳೇ ಶಕ್ತಿ. ಕಾಡೆಂದರೆ ಹಸ್ತ ರೇಖೆಯಷ್ಟೇ ಸಲೀಸು. ಬೇಟೆಯಲ್ಲಿ ಎತ್ತಿದ ಕೈ.
ತಮ್ಮ ಗುಂಪಿನಲ್ಲೇ ಕುಣಿಯುತ್ತ, ನಲಿಯುತ್ತ ಇದ್ದವರ ಮೇಲೆ ಆ ದಿನಗಳ ನಗರವಾಸಿಗಳು ದಾಳಿ ಮಾಡುತ್ತಾರೆ. ಆ ಪಂಗಡದ ಮುದುಕರನ್ನು, ಹೋರಾಡುವವರನ್ನು ಕತ್ತರಿಸುತ್ತಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ, ಹಿಡಿದು ಕಟ್ಟಿ ಹಾಕುತ್ತಾರೆ. ಕಥಾನಾಯಕ ತನ್ನ ಮಡದಿಯನ್ನೂ, ಮಗುವನ್ನೂ ಬಾವಿಯೊಂದಕ್ಕೆ ಇಳಿಸಿದ ಸಂದರ್ಭದಲ್ಲಿ ಶತ್ರುಗಳಿಗೆ ಸಿಕ್ಕಿಕೊಳ್ಳುತ್ತಾನೆ.
ನಗರದಲ್ಲಿ ಹೆಂಗಸರನ್ನು ಮಾರಲಾಗುತ್ತದೆ. ದೊಡ್ಡದೊಂದು ಬಲಿಪೀಠದ ಮೇಲೆ ಗಂಡಸರನ್ನು ಹತ್ಯೆ ಮಾಡಲು ಒಯ್ಯುತ್ತಾರೆ. ಈಗಾಗಲೇ ಸಹಸ್ರ ಸಹಸ್ರ ಸಂಖ್ಯೆಯ ಜನರನ್ನು ಅಲ್ಲಿ ಹತ್ಯೆ ಮಾಡಲಾಗಿದೆ. ಹೀಗೆ ಕೊಂದವರ ರಕ್ತವನ್ನು ಆ ನಗರದ ಜನತೆ ತಮಗೂ, ತಮ್ಮ ಮಕ್ಕಳ ಮೈಗೂ ಹಚ್ಚುತ್ತಿವೆ. ಹೀಗೆ ಹಚ್ಚಿಕೊಂಡರೆ ಪ್ಲೇಗ್ ನಂತಹ ಕಾಯಿಲೆ ಬರಲಾರದು ಎಂಬುದು ಅವರ ನಂಬಿಕೆ.
ನಾಯಕನನ್ನು ವಧಾ ಸ್ಥಾನದ ಮೇಲೆ ಬಲಿಗಾಗಿ ಕತ್ತಿ ಎತ್ತಬೇಕೆಂಬಷ್ಟರಲ್ಲಿ ಸೂರ್ಯಗ್ರಹಣ ನಡೆಯುತ್ತದೆ. ಇದೊಂದು ಶಕುನ ಎಂದುಕೊಂಡು ಅವನನ್ನು ಬಿಡುತ್ತಾರೆ. ನಾಯಕ ಬಚಾವಾಗುತ್ತಾನೆ. ಕೊನೆಗೆ ನಾಯಕನನ್ನು ದೊಡ್ಡದೊಂದು ಬಯಲಿಗೆ ಕಳಿಸಿ ಓಡುವಂತೆ ಹೇಳಲಾಗುತ್ತದೆ. ಓಡುವಾಗ ಹಿಂದೆ ಬಾಣ ಬಿಡಲಾಗುತ್ತದೆ. ಅದನ್ನು ತಪ್ಪಿಸಿಕೊಂಡು ಮುನ್ನಡೆದರೆ ಜಗಜಟ್ಟಿಗಳು ಸಿಗಿದು ಹಾಕಲು ಕಾಯುತ್ತಿರುತ್ತಾರೆ. ನಾಯಕ ಇದನ್ನೂ ನಿವಾಳಿಸಿ ಮುನ್ನಡೆಯುತ್ತಾನೆ. ಆಗ ನಗರದ ಯೋಧರು ಆತನ ಬೆನ್ನು ಬೀಳುತ್ತಾರೆ. ಒಬ್ಬಂಟಿ ನಾಯಕನ ಪರವಾಗಿ ಪಂಚಭೂತಗಳು ಮಾತ್ರ ನಿಲ್ಲುತ್ತವೆ.
ಇದರ ನಡುವೆ ಕುಂಭದ್ರೋಣ ಮಳೆ. ನಾಯಕನ ಮಡದಿ ಇರುವ ಬಾವಿಯಲ್ಲಿ ಸಿಕ್ಕಾಪಟ್ಟೆ ನೀರು ತುಂಬಲು ಆರಂಭವಾಗುತ್ತದೆ. ಗರ್ಭಿಣಿಗೆ ಪ್ರಸವ ವೇದನೆಯೂ... ಇನ್ನೊಂದು ಮಗು ನೀರಲ್ಲಿ ಮುಳುಗಲಾರಂಭಿಸುತ್ತದೆ.
ನಾಯಕ ಬದುಕುತ್ತಾನಾ? ಗರ್ಭಿಣಿ ಬಾವಿಯಿಂದ ಹೊರ ಬರ್ತಾಳಾ? ಆಕೆಗೆ ಹೆರಿಗೆ ಆಗ್ತದಾ? ಮಯನ್ ನಾಗರೀಕತೆ ಅಳಿವು ಹೇಗೆ?
ಇದೆಲ್ಲಕ್ಕೂ ವಿಶಿಷ್ಟವಾದ ಕ್ಲೈಮ್ಯಾಕ್ಸ್ ಉತ್ತರ ಹೇಳುತ್ತದೆ.
ಕನ್ನಡದ ಚಿತ್ರಗಳಲ್ಲಿ ಕ್ಲೈಮ್ಯಾಕ್ ನಲ್ಲಿ ಹೀಗೆಯೇ ಆಗುತ್ತದೆ ಎಂಬುದನ್ನು ನಾವು ಊಹಿಸಬಹುದು. ಆದರೆ ವಿದೇಶಿ ಚಿತ್ರಗಳು ಹೀಗಲ್ಲ.
ವಿಶಿಷ್ಟ ಚಿತ್ರ ಆಪೊಕ್ಯಾಲಿಪ್ಟೋ... ನೋಡಿ.
ಚಿತ್ರಕ್ಕೆ ನಾನು ಕೊಡುವ ಅಂಕ ೧೦ಕ್ಕೆ ೮+
ಹೈವೇ ಯಲ್ಲಿ ತೆರೆದಕೊಂಡ ಕನಸುಗಳು...
ರೋಡ್ ಮೂವಿಗಳೆಂದರೆ ನನಗೆ ಇಷ್ಟದ ಸಿನಿಮಾ ಪ್ರಕಾರಗಳಲ್ಲಿ ಒಂದು. ಇಂಗ್ಲೀಷಿನ ರೋಡ್ ಮೂವಿಗಳಾದ ಡ್ಯೂಯೆಲ್, ಹಿಂದಿಯ 'ರೋಡ್ ಮೂವಿ', ಕನ್ನಡದ ಸವಾರಿ ೧-೨ ಇವೆಲ್ಲ ಇಷ್ಟವಾಗಿದೆ. ಇಂತದ್ದೇ ಒಂದು ರೋಡ್ ಮೂವಿ ಹೈವೆ.
೨೦೧೪ರಲ್ಲಿ ತೆರೆಗೆ ಬಂದ ಈ ಚಿತ್ರದ ಜೀವಾಳ ಆಲಿಯಾ ಭಟ್ ಹಾಗೂ ಅಮೋಘ ಕಥೆ. ರಣದೀಪ್ ಹೂಡಾನ ಒರಟುತನ.
ಶ್ರೀಮಂತ ಪೊಲೀಸ್ ಅಧಿಕಾರಿಯ ಮಗಳಾಗಿ ಹುಟ್ಟಿದ ವೀರಾ (ಆಲಿಯಾ)ಗೆ ಜಗತ್ತು ಸುತ್ತುವ ತವಕ. ಹಿಮಾಲಯದ ಪಹಾಡಿಗಳ ನಡುವೆ ಮನೆ ಕಟ್ಟಿ ಬದುಕು ಕಟ್ಟಿಕೊಳ್ಳುವ ಕನಸು. ಆದರೆ ಶ್ರೀಮಂತಿಕೆಯ ಸುಪ್ಪತ್ತಿಗೆ ನಡುವೆ ಎಲ್ಲದ್ದಕ್ಕೂ ಕಟ್ಟುನಿಟ್ಟು.
ಮರು ದಿನ ಮದುವೆ. ಆಕೆಗೆ ಕರಾಳ ರಾತ್ರಿಯಲ್ಲಿ ನಗರದ ಹೊರಕ್ಕೆ ದೀರ್ಘ ಜಾಲಿ ರೈಡ್ ಹೋಗುವ ಆಸೆ. ಏನಾದ್ರೂ ಆದ್ರೆ ನಾನು ಜವಾಬ್ದಾರನಲ್ಲ.. ಎಂಬ ತಾಕೀತಿನೊಂದಿಗೆ ಕರೆದೊಯ್ಯುವ ಗೆಳೆಯ. ನಡುವೆ ಆಕೆಯನ್ನು ಅಪಹರಿಸುವ ರಣದೀಪ್ ಹೂಡಾ.
ಪೊಲೀಸ್ ಅಧಿಕಾರಿಯ ಮಗಳು ಎಂಬ ಸತ್ಯ ಗೊತ್ತಾದ ತಕ್ಷಣ ಹೂಡಾನ ಸಖ್ಯ ತೊರೆಯುವ ಅಪಹರಣಕಾರರ ಗುಂಪು. ಹೂಡಾ ಒಬ್ಬಂಟಿ. ಈ ನಡುವೆ ದೆಹಲಿ, ಪಂಜಾಬ್, ಹರ್ಯಾಣ, ರಾಜಸ್ತಾನ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರಗಳಲ್ಲಿ ಓಡಾಟ. ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿದ ವೀರಾನ ತಂದೆ. ಒರಟು ಹೂಡಾನ ಮೇಲೆ ವೀರಾಳಿಗೆ ಅರಳಿದ ಒಲವು.
ರಾಜಸ್ತಾನದ ಮರುಭೂಮಿ, ಪೈರು ಬೆಳೆದು ನಿಂತ ಹರ್ಯಾಣ, ಪಂಜಾಬಿನ ಗದ್ದೆಗಳು, ಗುಡ್ಡ ಬೆಟ್ಟಗಳ ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರಗಳ ಸೌಂದರ್ಯದ ಅನಾವರಣ. ಇವೆಲ್ಲಕ್ಕೂ ಮೆರಗು ಎಂಬಂತೆ ಆಲಿಯಾ ಭಟ್ ಳ ಅಮೋಘ ಅಭಿನಯ.
ಅಳಬೇಡ...ಶ್... ಎನ್ನುವಾಗಿನ ಆಲಿಯಾ... ಚಿಕ್ಕಂದಿನಲ್ಲಿ ನನ್ನ ಮೇಲೆ ಪದೆ ಪದೆ ಅಂಕಲ್ ಒಬ್ಬರು ಚಾಕಲೇಟ್ ಆಸೆಗಾಗಿ ಅತ್ಯಾಚಾರ ಮಾಡುತ್ತಿದ್ದರು. ಅದನ್ನು ಅವರು ಮುದ್ದು ಮಾಡುತ್ತಿದ್ದರು. ವಿಷಯವನ್ನು ಅಮ್ಮನಿಗೆ ಹೇಳಿದಾಗ ಆಕೆ ಹೇಳಿದ್ದು, ಇದು ಮರ್ಯಾದೆ ಪ್ರಶ್ನೆ... ಅಳಬೇಡ... ಶ್... ಎಂದು ಎನ್ನುವಾಗಿನ ಆಲಿಯಾ...
ಹಿಮದಲ್ಲಿ ಆಡುವ ಆಲಿಯಾ... ಅಪಹರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮರುಭೂಮಿಯಲ್ಲಿ ಓಡಲು ಯತ್ನಿಸುವ ಆಲಿಯಾ... ಹಸಿದವಳಿಗೆ ಆಹಾರ ನೀಡಲು ಯತ್ನಿಸಿ ಅತ್ಯಾಚಾರಕ್ಕೆ ಯತ್ನಿಸಿದಾಗ... ನೀನೂ ಅಂಕಲ್ ನ ಹಾಗೇ ಮುದ್ದು ಮಾಡ್ತೀಯಾ ಎಂದು ಕೇಳುವ ಆಲಿಯಾ... ಮೇಕಪ್ ಇಲ್ಲದೆಯೇ ನಟಿಸಿದ ಆಲಿಯಾ... ಕೊನೆಯ ತನಕ ಕಾಡುತ್ತಾರೆ.
೨೦ ವರ್ಷಕ್ಕೂ ಕಡಿಮೆ ವಯೋಮಾನದ ಆಲಿಯಾಳ ಅಮೋಘ ನಟನೆಗೆ ಮಾರು ಹೋಗದವರೇ ಇಲ್ಲ ಬಿಡಿ. ಈ ಕಾರಣಕ್ಕಾಗಿ ಆಕೆಗೆ ಬಹುಮಾನಗಳೇ ಬಂದಿವೆ.
ಆಕೆಯ ಕನಸು ನನಸಾಗ್ತದಾ? ಇಬ್ಬರ ಪ್ರೇಮಕ್ಕೆ ಸುಖಾಂತ್ಯದ ಮುದ್ರೆ ಬೀಳ್ತದಾ? ಕಂಡಲ್ಲಿ ಗುಂಡೇಟು ಆದೇಶ ನೀಡಿದ ನಂತರ ಏನಾಗ್ತದೆ? ಕ್ಲೈಮ್ಯಾಕ್ಸ್ ಅನೂಹ್ಯವಾದುದು.
ಒಮ್ಮೆ ನೋಡಿ...
ಮಗದೊಮ್ಮೆ ನೋಡಬೇಕು ಎನ್ನಿಸುತ್ತದೆ...