ಕ್ರಿಕೆಟ್‌ನಲ್ಲಿ ಕೆಲವು ಆಟಗಾರರಿದ್ದಾರೆ. ಹೇರಳ ಪ್ರತಿಭೆಯನ್ನು ಹೊಂದಿದ್ದರೂ, ಪದೇ ಪದೆ ಅವಕಾಶಗಳನ್ನು ಪಡೆಯುತ್ತಿದ್ದರೂ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. ಟೀಕಾಕಾರರ ಬಾಯಿಗೆ ಆಹಾರವಾಗುತ್ತಿದ್ದಾರೆ. ಉತ್ತಮ ಆಟ ಆಡುವ ಸಾಮರ್ಥ್ಯ ಇದ್ದರೂ ಕಳಪೆ ಆಟದ ಮೂಲಕ ತಂಡದಿಂದ ಹೊರಹಾಕಲ್ಪಡುತ್ತಿದ್ದಾರೆ. ಅಂತವರಲ್ಲಿ ಒಬ್ಬ ಕೆ. ಎಲ್. ರಾಹುಲ್.
ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದು ಹಲವಾರು ವರ್ಷಗಳ ಕಾಲ ಕನಸು ಕಂಡು, ಶ್ರಮ ಪಟ್ಟವರು ಅನೇಕರು. ಇನ್ನೂ ಕೆಲವರು ಕೆಲವೇ ದಿನಗಳ ಕಾಲ ಶ್ರಮ ಪಟ್ಟು ತಂಡದಲ್ಲಿ ತಂಡಕ್ಕೆ ಆಯ್ಕೆಯಾಗುತ್ತಾರೆ. ಅವಕಾಶ ಸಿಕ್ಕ ತಕ್ಷಣ ಪ್ರಾರಂಭದಲ್ಲಿ ಮೂರ್ನಾಲ್ಕು ಪಂದ್ಯಗಳನ್ನು ಉತ್ತಮವಾಗಿ ಆಡುವ ಮೂಲಕ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಮುಂದಾಗುತ್ತಾರೆ. ತದನಂತರದಲ್ಲಿ ಅವರುಗಳಿಗೆ ಅಭಿಮಾನಿ ಬಳಗವೂ ಹುಟ್ಟಿಕೊಳ್ಳುತ್ತದೆ. ಜಾಹಿರಾತುದಾರರು ಬೆನ್ನು ಬೀಳುತ್ತಾರೆ. ಆದರೆ ನಂತರದ ದಿನಗಳಲ್ಲಿ ಮಾತ್ರ ಅವರು ತಮ್ಮ ಜವಾಬ್ದಾರಿಯನ್ನೇ ಮರೆತರೋ ಎಂಬಂತಾಗುತ್ತಾರೆ.
ಅಗಾಧ ಪ್ರತಿಭೆಯನ್ನು ಹೊಂದಿದ ಅದೆಷ್ಟೋ ಆಟಗಾರರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಬೇಜವಾಬ್ದಾರಿಯುತ ಆಟದಿಂದಾಗಿ ಅಂತವರು ಸ್ಥಾನ ಕಳೆದುಕೊಂಡ ನಿದರ್ಶನಗಳು ಸಾಕಷ್ಟಿದೆ. ಪ್ರತಿಭೆಯಿದ್ದರೂ, ಕಳಪೆ ಆಟ ಪ್ರದರ್ಶಿಸಿ ತಂಡದಿಂದ ಹೊರ ನಡೆದ ನಿದರ್ಶನಗಳು ಸಾಕಷ್ಟಿದೆ. ಅಂತಹ ಸಾಲಿಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಆಟಗಾರ ಕನ್ನಡಿಗ ಕೆ. ಎಲ್. ರಾಹುಲ್.
ರಾಹುಲ್ ತಂಡಕ್ಕೆ ಸೇರಿದ ಮೊದಲ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್‌ಟ್‌ನಲ್ಲಿ ಆಕರ್ಷಕ ಶತಕ ಭಾರಿಸಿದಾಗ ಈತನ ಬಗ್ಗೆ ಹೊಗಳಿದವರು ಅನೇಕ ಜನ. ರಾಹುಲ್ ದ್ರಾವಿಡ್‌ರ ನಂತರ ಭಾರತ ತಂಡಕ್ಕೆ ಆಸ್ತಿಯಾಗಬಲ್ಲ ಆಟಗಾರ ಎಂದು ವಿಶ್ಲೇಷಿಸಿದವರೂ ಅನೇಕ ಜನ. ಅದಕ್ಕೆ ತಕ್ಕಂತೆ ಒಂದಷ್ಟು ಸರಣಿಗಳಲ್ಲಿ ಸತತ ಶತಕಗಳನ್ನು ಭಾರಿಸಿ ಭೇಷ್ ಎನ್ನಿಸಿಕೊಂಡ ಕೆ. ಎಲ್. ರಾಹುಲ್ ನಂತರದಲ್ಲಿ ಮಾತ್ರ ಕಳಪೆ ಆಟದಿಂದ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಂಡದಲ್ಲಿ ಸತತ ಅವಕಾಶ ಪಡೆದರೂ ಕೂಡ ಅದರ ಲಾಭ ಪಡೆಯಲು ರಾಹುಲ್ ವಿಫಲರಾಗುತ್ತಿದ್ದಾರೆ. ಎರಡಂಕಿ ಮೊತ್ತವನ್ನು ತಲುಪಲೂ ಕೂಡ ಒದ್ದಾಡುತ್ತಿದ್ದಾರೆ. ಸಾಲು ಸಾಲು ವೈಲ್ಯ ಇದೀಗ ರಾಹುಲ್ ಸ್ಥಾನಕ್ಕೆ ಕುತ್ತನ್ನು ತರುತ್ತಿದೆ. ತಾವೇ ಮಾಡಿಕೊಳ್ಳುತ್ತಿರುವ ಯಡವಟ್ಟುಗಳು ರಾಹುಲ್‌ರ ಕ್ರೀಡಾಬದುಕಿಗೆ ಕರಿನೆರಳಾಗಿ ಪರಿಣಮಿಸುತ್ತಿದೆ.
ಕೆ. ಎಲ್. ರಾಹುಲ್‌ರ ಕೆಲವು ಇನ್ನಿಂಗ್ಸ್ ಗಳನ್ನು 8 ಗಮನಿಸಿದರೆ ಅವರ ಬ್ಯಾಟಿನಿಂದ ಅರ್ಧಶತಕ ದಾಖಲಾಗಿ ಹಲವು ಕಾಲಗಳೇ ಆಗಿದೆ. 9, 2, 0, 2, 44, 14, 13, 17, 26, 16 ಇವು ರಾಹುಲ್‌ರ ಕಳೆದ 10 ಇನ್ನಿಂಗ್ಸ್ ಗಳ ಸ್ಕೋರ್. ಇದರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರಿಸಿದ 44 ರನ್ ಗರಿಷ್ಠ ಸ್ಕೋರ್. ಈ ಎಲ್ಲ 10 ಇನ್ನಿಂಗ್ಸ್ ಗಳಿಂದ ರಾಹುಲ್ ರನ್ ಗಳಿಕೆ 143.
ಇತ್ತೀಚಿನ ದಿನಗಳಲ್ಲಿ ಭಾರತದ ತಂಡದಲ್ಲಿ ಸ್ಥಾನ ಪಡೆಯಲು ತೀವ್ರ ಸ್ಪರ್ಧೆ ನಡೆಯುತ್ತಿದೆ. ಅದರಲ್ಲೂ ಆರಂಭಿಕ ಸ್ಥಾನಕ್ಕಂತೂ ಹೇರಳ ಸ್ಪರ್ಧೆ ನಡೆಯುತ್ತಿದೆ. ರಾಹುಲ್, ಮುರಳಿ ವಿಜಯ್, ಪೃಥ್ವಿ ಶಾ ಹಾಗೂ ಮಾಯಾಂಕ್ ಅಗರ್ವಾಲ್ ಆರಂಭಿಕ ಸ್ಥಾಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ರಾಹುಲ್ ಹಾಗೂ ಮುರಳಿ ವಿಜಯ್ ವಿಲವಾಗುತ್ತಿರುವ ಸಂದರ್ಭದಲ್ಲಿ ಪೃಥ್ವಿ ಶಾ ಹಾಗೂ ಮಾಯಾಂಕ್ ಅಗರ್ವಾಲ್ ಉತ್ತಮ ಆಟದ ಮೂಲಕ ತಂಡದಲ್ಲಿ ಖಾಯಂ ಸ್ಥಾಾನ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗೆಯೇ ಮುಂದುವರಿದಲ್ಲಿ ರಾಹುಲ್ ತಂಡದಿಂದ ಹೊರಬೀಳುವುದು ಖಚಿತ ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ರಾಹುಲ್ ಎಚ್ಚೆತ್ತುಕೊಳ್ಳದಿದ್ದಲ್ಲಿ ಅವರ ಸ್ಥಾನ ಇನ್ನೊಬ್ಬರ ಪಾಲಿಗೆ ಮೀಸಲಾಗುವುದು ನಿಶ್ಚಿತ.
------------
ಮುಳುವಾಯಿತೆ ಪ್ರಸಿದ್ಧಿ
ಭಾರತ ಕ್ರಿಕೆಟ್ ತಂಡದ ಮೋಸ್ಟ್ ಪ್ಯಾಷನೇಬಲ್ ಪ್ಲೇಯರ್ ಎನ್ನುವ ಖ್ಯಾತಿ ರಾಹುಲ್ ಪಾಲಿಗಿದೆ. ವಿಶಿಷ್ಟ ಕೇಶ ವಿನ್ಯಾಸ, ಹೊಸ ಬಗೆಯ ಸ್ಟೈಲ್ ಮೂಲಕ ಎಲ್ಲರ ಮನಸ್ಸನ್ನು ಸೆಳೆದಾತ ರಾಹುಲ್. ಸಾಲು ಸಾಲು ಜಾಹೀರಾತುಗಳಲ್ಲಿಯೂ ಮಿಂಚುತ್ತಿರುವ ರಾಹುಲ್ ಪಾಲಿಗೆ ಪ್ರಸಿದ್ಧಿಯೇ ಮುಳುವಾಗುತ್ತಿದೆಯೇ ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿದೆ. ಆಟದ ಕಡೆಗೆ ಗಮನ ಕೊಡುವುದಕ್ಕಿಿಂತ ಇತರ ಕಡೆಗೆ ಗಮನ ಕೊಡುವುದು ಜಾಸ್ತಿಯಾಗುತ್ತಿದೆಯೇ? ಟಿವಿ ಶೋಗಳು, ಜಾಹೀರಾತುಗಳು, ಪ್ಯಾಶನ್ ಜಗತ್ತು ರಾಹುಲ್ ಆಟವನ್ನು ಹಾಳು ಮಾಡುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇವನ್ನು ದೂರವಿಟ್ಟು ಸಂಪೂರ್ಣ ತನ್ನ ಬ್ಯಾಟಿಂಗ್ ಬಗ್ಗೆಯೇ ಆದ್ಯತೆ ನೀಡಿದಾಗ ಮಾತ್ರ ರಾಹುಲ್‌ರಿಂದ ಉತ್ತಮ ಆಟವನ್ನು ನಿರೀಕ್ಷೆ ಮಾಡಲು ಸಾಧ್ಯ.

No comments:
Post a Comment