ಬೆಳಗುತಿದೆ ಇರುಳ ದೀಪ
ಮಣ್ಣ ಹಣತೆಯಲ್ಲಿ..|
ಮೆರೆಯುತಿದೆ ಬಾಳ ರೂಪ
ಬದುಕ ಕನ್ನಡಿಯಲ್ಲಿ..||
ಜೀವ ರಸವೆ ಎಣ್ಣೆಯಂತೆ
ಹೀರಿ ದೀಪ ಬೆಳಗಿದೆ..|
ಪ್ರತಿಬಿಂಬದ ರೂಪ ಕಂಡು
ಮನವು ಒಮ್ಮೆ ನಕ್ಕಿದೆ..||
ಬೆಳಗು ದೀಪ ಬಾಳಿನಲ್ಲಿ
ತಿಮಿರ ಚುಚ್ಚಿ ಕಳೆದಿದೆ..|
ಬಾಳ ರೂಪ ಹೊಸದು ಅರ್ಥ
ಪಡೆದು ನಲಿದು ನಿಂತಿದೆ..||
ಬೆಳಗುತಿರಲಿ ಸದಾ ಹೀಗೆ
ಇರುಳಿನಲ್ಲಿ ದೀಪ
ಮನಸಿನಲ್ಲಿ ಸದಾ ಇರಲಿ
ನಲಿವ ಹೊನ್ನ ರೂಪ ..||
**
(ಈ ಕವಿತೆಯನ್ನು ಬರೆದಿರುವುದು 24.10.2006ರಂದು ದಂಟಕಲ್ಲಿನಲ್ಲಿ)
ಮಣ್ಣ ಹಣತೆಯಲ್ಲಿ..|
ಮೆರೆಯುತಿದೆ ಬಾಳ ರೂಪ
ಬದುಕ ಕನ್ನಡಿಯಲ್ಲಿ..||
ಜೀವ ರಸವೆ ಎಣ್ಣೆಯಂತೆ
ಹೀರಿ ದೀಪ ಬೆಳಗಿದೆ..|
ಪ್ರತಿಬಿಂಬದ ರೂಪ ಕಂಡು
ಮನವು ಒಮ್ಮೆ ನಕ್ಕಿದೆ..||
ಬೆಳಗು ದೀಪ ಬಾಳಿನಲ್ಲಿ
ತಿಮಿರ ಚುಚ್ಚಿ ಕಳೆದಿದೆ..|
ಬಾಳ ರೂಪ ಹೊಸದು ಅರ್ಥ
ಪಡೆದು ನಲಿದು ನಿಂತಿದೆ..||
ಬೆಳಗುತಿರಲಿ ಸದಾ ಹೀಗೆ
ಇರುಳಿನಲ್ಲಿ ದೀಪ
ಮನಸಿನಲ್ಲಿ ಸದಾ ಇರಲಿ
ನಲಿವ ಹೊನ್ನ ರೂಪ ..||
**
(ಈ ಕವಿತೆಯನ್ನು ಬರೆದಿರುವುದು 24.10.2006ರಂದು ದಂಟಕಲ್ಲಿನಲ್ಲಿ)
Tumba chennagide......
ReplyDeleteGood
Tumba chennagide......
ReplyDeleteಬೆಳಗುತಿರಲಿ ಸದಾ ಹೀಗೆ nimma muddu kavana...!!!
ಗುರುನಾಥ ಭಟ್ಟರೆ ಹಾಗೂ ವಿಘ್ನೇಶ್ ಅವರೆ ನಿಮ್ಮ ಪ್ರತಿಕ್ರಿಯೆಗೆ ನಾನು ಸದಾ ಚಿರಋಣಿ.
ReplyDeleteಪ್ರೀತಿಯಿರಲಿ