Friday, April 18, 2014

ಮನಸು ಕನ್ನಡಿಯಂತೆ

(ರೂಪದರ್ಶಿ : ಸಮನ್ವಯಾ ಸುದರ್ಶನ್)
ಮನಸು ಕನ್ನಡಿಯಂತೆ
ಜೋಪಾನ ಇಡು ಜಾಣೆ
ಕಳೆದ ಕಷ್ಟದ ಪರಿಯ
ಅರಿತು ನಡೆದಿರು ಜಾಣೆ |

ಚಿಕ್ಕ ಮನಸಿಗೆ ಘಾಸಿ
ನೂರು ನೂರಾಗಿಹುದು
ಹಲನೋವು ಕೆಲದುಃಖ
ಮನವ ಚುಚ್ಚುತಲಿಹುದು |

ಕಾಯುತಿದೆ ಭುವಿಕಲ್ಲು
ಜಾರಿ ಬೀಳುವುದಕ್ಕೆ
ನಡುಗುತಿದೆ ಕೈಗಳು
ಹಲ ಕಷ್ಟ ತುಮುಲಕ್ಕೆ |

ಒಡೆಯದಂತಿರಲಿ ಮನ
ಸೋಲ ಸಿಳೆವಿಗೆ ಸಿಕ್ಕಿ
ಹರಿಯುವಂತಿರಲಿ ಮನ
ನಿಲುವಿಗೆದುರಾಗಿ ||

**
(ಈ ಕವಿತೆಯನ್ನು ಬರೆದಿದ್ದು 26-10-2006ರಂದು ದಂಟಕಲ್ಲಿನಲ್ಲಿ)
(ಭಾವಚಿತ್ರ ಬಳಕೆಗೆ ಅನುಮತಿ ನೀಡಿದ ಸಮನ್ವಯಾ ಹಾಗೂ ಸುದರ್ಶನ್ ಅವರಿಗೆ ಥ್ಯಾಂಕ್ಯೂ)

2 comments: