ಪಿಬಿಎನ್ :
ಪರಶುರಾಮಪ್ಪ ಎಂಬ ಹೆಸರಿನ ಪಿಬಿಎನ್ ನಮ್ಮ ಹೈಸ್ಕೂಲು ದಿನಗಳಲ್ಲಿ ಭಯಾನಂಕ ಮಾಸ್ತರ್ ಎಂದೇ ಖ್ಯಾತಿಯಾಗಿದ್ದರು. ಪರಶುರಾಮಪ್ಪ ಅವರ ನೆನಪಾದರೆ ಸಾಕು ಅವರ ಬೆತ್ತದ ಏಟು ನೆನಪಾಗುತ್ತಿತ್ತು. ನನಗಂತೂ ಅವರ ಬಗ್ಗೆ ಮತ್ತಷ್ಟು ಭಯವೇ ಬಿಡಿ.
ನಾನು ಕಾನಲೆಯ ಸರಕಾರಿ ಪ್ರೌಢಶಾಲೆಗೆ ಸೇರುತ್ತೇನೆ ಎಂದು ನಿಶ್ಚಯಸಿದ ಸಂದರ್ಭದಲ್ಲಿ ದೊಡ್ಡಪ್ಪ ಕಲ್ಲಾರೆ ಕೃಷ್ಣಪ್ಪ, ಗುರಣ್ಣ ಹಾಗೂ ಗಿರೀಶಣ್ಣರು ಪಿಬಿಎನ್ ಅವರ ಬಗ್ಗೆ ಹಾಗೂ ಅವರ ಸಿಟ್ಟಿನ ಬಗ್ಗೆ, ಅವರು ಹೊಡೆಯುವ ಹೊಡೆತಗಳ ಬಗ್ಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಭೀತಿಯನ್ನು ಹುಟ್ಟಿಸಿದ್ದರು. ಪಿಬಿಎನ್ ಅವರು ವಿಜ್ಞಾನ ವಿಷಯದ ಶಿಕ್ಷಕರೆಂದೂ ಸರಿಯಾಗಿ ಕಲಿಯದೇ ಇದ್ದರೆ ಮೊದ ಮೊದಲು ಬೆನ್ನಮೇಲೆ ಗುದ್ದುವರೆಂದೂ ನಂತರ ಶೆಳಕೆಯನ್ನು ಹುಡಿಗರೆಯುವರೆಂದೂ ಹೇಳಿದ್ದರು. ತಾನೂ ಸಾಕಷ್ಟು ಹೊಡೆತ ತಿಂದು ಕೈ ಕೆಂಪಗೆ ಮಾಡಿಕೊಂಡಿದ್ದೇನೆ ಎಂದು ಗಿರೀಶಣ್ಣ ಹೇಳಿದ್ದ. ಕಾಲ ಮೇಲೆಲ್ಲೆ ಬಾಸುಂಡೆ ಬರುವಂತೆ ಹೊಡೆಯುತ್ತಾರೆ ಎಂದೂ ಹೇಳಿದ್ದ. ನಾನು ಹೈಸ್ಕೂಲಿಗೆ ಸೇರಿದ ಹೊಸತರಲ್ಲಿ ನನಗೆ ಅವರಿಂದ ಸಾಕಷ್ಟು ಹೊಡೆತಗಳು ಬೀಳಲಿಲ್ಲ ಬಿಡಿ. ಆದರೆ ನನ್ನ ಜೊತೆಯ ಹುಡುಗರಿಗೆಲ್ಲ ಸಿಕ್ಕಾಪಟ್ಟೆ ಹೊಡೆತಗಳು ಬಿದ್ದಿದ್ದವು. ಆಗಲೇ ನನಗೆ ಅವರ ಬಗ್ಗೆ ಭಯವಿತ್ತು.
ಪರಶುರಾಮಪ್ಪ ಮಾಸ್ತರ್ ಅವರಿಂದ ನಾನು ಮೊಟ್ಟ ಮೊದಲ ಸಾರಿ ಹೊಡೆತ ತಿಂದಿದ್ದು ಸದಾ ಕಾಲ ಜ್ಞಾಪಕದಲ್ಲಿ ಇರುತ್ತದೆ. ನನ್ನ ಕ್ಲಾಸಿನಲ್ಲಿ ಒಬ್ಬ ಹುಡುಗ ಇದ್ದ. ಅವನ ಹೆಸರೂ ಪರಶುರಾಮ ಎಂದೇ. ಹತ್ತಿರದ ಪಡವಗೋಡು ಎಂಬ ಊರಿನವನು. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ ಅವನ ಅಪ್ಪನ ಹೆಸರು ಹೇಳಿದರೆ ಅವನಿಗೆ ಅಸಾಧ್ಯ ಸಿಟ್ಟು ಬರುತ್ತಿತ್ತು. ಗಾಮ ಎಂಬುದು ಆತನ ತಂದೆಯ ಹೆಸರಾಗಿತ್ತು. ನನ್ನದೇ ಕ್ಲಾಸಿನಲ್ಲಿ ಅನೇಕ ಗೆಳೆಯರು ಆತನಿಗೆ ಗಾಮ ಎಂದು ಕರೆದು ಛೇಡಿಸುತ್ತಿದ್ದರು. ಆತ ಸಿಟ್ಟು ಮಾಡಿಕೊಳ್ಳುತ್ತಿದ್ದ. ಅದೇ ಸಂದರ್ಭದಲ್ಲಿ ಚಿತ್ರನಟ ಉಪೇಂದ್ರ ನಟನೆಯ ಉಪೇಂದ್ರ ಸಿನೆಮಾ ಸಿಕ್ಕಾಫಟ್ಟೆ ಹಿಟ್ ಆಗಿತ್ತು. ಅದರಲ್ಲೂ ಆ ಸಿನೆಮಾದ ಗಾಮ ಗಾಮ ಗಾ.. ಎಂಬ ಹಾಡೂ ಕೂಡ ಅಷ್ಟೇ ಹಿಟ್ ಆಗಿತ್ತು. ಆದಿನ ನಾನು ಹೈಸ್ಕೂಲಿನ ವಿಶ್ರಾಂತಿ ಸಮಯದಲ್ಲಿ ದೊಡ್ಡದಾಗಿ ಗಾಮ ಗಾಮ ಗಾ ಎಂದು ಹಾಡುತ್ತ ಬರುತ್ತಿದ್ದೆ. ನಿಜಕ್ಕೂ ನನಗೆ ಪರಶುರಾಮನನ್ನು ಕಾಲೆಳೆಯುವ ಉದ್ದೇಶವಿರಲಿಲ್ಲ. ಆದರೆ ನಾನು ಹಾಡುತ್ತಿದ್ದ ಹಾಡು ಆತನಿಗೆ ಕೇಳಿಸಿರಬೇಕು. `ತಡೀ ಲೇ.. ನಿನ್ನಾ..'ಎಂದವನೇ ನನ್ನನ್ನು ಬೆನ್ನಟ್ಟಿಕೊಂಡು ಬಂದ. ನಾನು ಓಡುವುದರಲ್ಲಿ ಶೂರ. ಅವನು ಬೆನ್ನಟ್ಟಿದಂತೆಲ್ಲ ಇಡಿಯ ಮೈದಾನವನ್ನು ಸುತ್ತಾಡಿಸಿದೆ. ಆತನೂ ಬೆನ್ನತ್ತಿದ್ದ. ಕೊನೆಗೆ ನಾನು ಸೀದಾ ಹೈಸ್ಕೂಲ್ ಆವರಣದ ಒಳ ಹೊಕ್ಕಿದ್ದೆ. ದುರದೃಷ್ಟವಶಾತ್ ಸ್ಟಾಪ್ ರೂಮನ್ನು ದಾಟಿ ಮುಂದಕ್ಕೆ ಓಡಬೇಕು ಎನ್ನುವಷ್ಟರಲ್ಲಿ ಸ್ಟಾಪ್ ರೂಮಿನ ಬಾಗಿಲಿನ ಅಂಚಿಗೆ ನನ್ನ ಕಾಲು ಬಡಿದಿತ್ತು. ದಬಾರನೆ ಬಿದ್ದೆ. ಪರಶುರಾಮ ನಾನು ಬಿದ್ದಿದ್ದನ್ನು ನೋಡಿ ಹೆದರಿ ಓಡಿ ಹೋದ. ನಾನು ಎದ್ದು ನೋಡುತ್ತೇನೆ ಅಲ್ಲೆಲ್ಲ ರಕ್ತಮಯ. ಕಾಲು ಒಂದೆಡೆ ದೊಡ್ಡದಾಗಿ ಗಾಯವಾಗಿತ್ತು. ರಕ್ತ ಸುರಿಯುತ್ತಿತ್ತು. ನಾನು ಬಿದ್ದಿದ್ದನ್ನು ನೋಡಿ ಒಂದಿಬ್ಬರು ಶಿಕ್ಷಕರು ಬಂದು ನನ್ನನ್ನು ಎತ್ತಿದರು. ನಂತರ ನನಗಾಗಿದ್ದ ಗಾಯಕ್ಕೆ ಔಷಧಿಯನ್ನು ಸವರಿದರು. ನಂತರ ವಿಚಾರಿಸಲಾಗಿ ನಾನು ನಡೆದಿದ್ದನ್ನು ಹೇಳಿದ್ದೆ.
ಅದಾಗಿ ಒಂದು ತಾಸಿನ ನಂತರ ನಮಗೆ ಪರಶುರಾಮಪ್ಪ ಮಾಸ್ತರರ ತರಗತಿಯಿತ್ತು. ಕ್ಲಾಸಿಗೆ ಬಂದವರೇ ಪರಶುರಾಮನನ್ನು ನಿಲ್ಲಿಸದರು. `ವಿನಯ ಹೆಗಡೆ ಯಾರಲೇ..' ಎಂದರು. ನಾನು ಎದ್ದು ನಿಂತೆ. ದೋಸ್ತ ಪ್ರದೀಪನನ್ನು ಕರೆದು `ಲೇ ಬಟಾ.. ಎರಡು ದೊಡ್ಡ ಕೋಲನ್ನ ತಗಂಡು ಬಾರಲೇ..' ಎಂದರು. ನನಗೆ ಎದೆ ಹೊಡೆದುಕೊಳ್ಳಲು ಆರಂಭವಾಗಿತ್ತು. ಪ್ರದೀಪ ಕೋಲನ್ನು ತಂದ. `ಲೇ ಬಟಾ ಕೈ ಉದ್ದ ಮಾಡಲೇ..' ಎಂದರು. ಪ್ರದೀಪ ಕೈ ಉದ್ದ ಮಾಡಿದ್ದ. ರಪ್ಪೆಂದು ಬಡಿದಿದ್ದರು. `ಅಯ್ಯಮ್ಮಾ..' ಎಂದು ಪ್ರದೀಪ ಹೊಯ್ಕಂಡಿದ್ದ. ಕೋಲು ಮುರಿದಿತ್ತು. ಏನೂ ತಪ್ಪು ಮಾಡದಿದ್ದ ಹುಡುಗರಿಗೆ ಹೊಡೆಯುವ ಗುಣವೂ ಅವರಲ್ಲಿ ಇತ್ತು. ನಂತರ ಪರಶುರಾಮನ ಕರೆದು ಕೈ ಉದ್ದ ಮಾಡೆಂದು ಹೇಳಿ ಸಮಾ ನಾಲ್ಕೈದು ಏಟು ಹೊಡೆದರು. ನಂತರ ನನ್ನ ಬಳಿ ಬಂದರು. `ಏನಲೇ ಗಾಂಡ್ ಮಸ್ತಿ ಮಾಡ್ತೀಯೇನಲೇ..' ಎಂದರು. ರಪ್ಪಂತ ಕೈ ಮೇಲೆ ಹೊಡೆದರು. ನನಗೂ ಒಂದು ಸಾರಿ ಏನಾಗುತ್ತಿದೆ ಎಂಬುದು ಅರಿವಾಗಲೇ ಇಲ್ಲ. ಕಣ್ಣಲ್ಲಿ ನೀರು ಬಂದಿತ್ತು. `ಇನ್ನೊಂದು ಸಾರಿ ಈ ಥರ ಆದರೆ ನೋಡಿ..' ಎಂದರು. ನಂತರ ಯಥಾ ಪ್ರಕಾರ ಅವರ ತರಗತಿ ಶುರು ಹಚ್ಚಿಕೊಂಡಿದ್ದರು. ನನಗೆ ಗಾಯದ ಉರಿ ಬೇರೆ. ಅವರು ಹೊಡೆದ ನೋವು ಬೇರೆ.
ಇದಾದ ನಂತರ ಬೆಳಿಗ್ಗೆ ಮುಂಜಾನೆ ಹೈಸ್ಕೂಲಿನಲ್ಲಿ ಪ್ರಾರ್ಥನೆಗೆ ನಿಂತ ಸಮಯದಲ್ಲೆಲ್ಲ ನಾನು `ದೇವರೆ ಇವತ್ತು ಏನಾದರೂ ಮಾಡಿ ಪಿಬಿಎನ್ ಹೈಸ್ಕೂಲಿಗೆ ಬರದೇ ಇರುವ ಹಾಗೆ ಮಾಡಪ್ಪಾ.. ಅವರ ಬೈಕ್ ಪಂಚರ್ ಆದರೂ ಆಗಲಿ..' ಎಂದು ಮನಸ್ಸಿನಲ್ಲಿಯೇ ಬೇಡಿಕೊಂಡಿದ್ದೂ ಉಂಟು. ಇದರ ನಡುವೆಯೇ ಮತ್ತೊಂದು ಸಮಸ್ಯೆಯೂ ನಮಗೆ ಕಾಡುತ್ತಿತ್ತು. ಆವರ ಬಹುತೇಕ ತರಗತಿಗಳೂ ಮಧ್ಯಾಹ್ನ 2 ಗಂಟೆಗೆ ಇರುತ್ತಿದ್ದವು. ನಾವು ಊಟ ಮಾಡಿ ಹೈಸ್ಕೂಲಿಗೆ ಬಂದ ತಕ್ಷಣ ಶುರುವಾಗುತ್ತಿದ್ದುದೇ ಅವರ ಕ್ಲಾಸ್. ತರಗತಿಯ ನಡುವೆ ನಮಗೆಲ್ಲ ವಿಪರೀತ ತೂಕಡಿಕೆ ಕಾಡುತ್ತಿತ್ತು. ಒಂದಿಬ್ಬರು ಕುಳಿತಲ್ಲಿಯೇ ನಿದ್ರೆಯನ್ನೂ ಮಾಡಿದ್ದುಂಟು. ಆದರೆ ಇದು ಕಣ್ಣಿಗೆ ಬಿದ್ದರೆ ಸಾಕು ಪರಶುರಾಮಪ್ಪ ಮಾಸ್ತರ್ ನಮ್ಮ ಕೈಯನ್ನು ಉರಿ ಉರಿಗೊಳಿಸುತ್ತಿದ್ದರು.
ನಂತರದ ದಿನಗಳಲ್ಲಿ ನಾವು ಸಾಕಷ್ಟು ಹೊಡೆತಗಳನ್ನು ತಿಂದದ್ದು ಉಂಟು ಬಿಡಿ. ವಿಜ್ಞಾನವನ್ನು ಅಷ್ಟೇ ಚನ್ನಾಗಿ ಅವರು ಬೋಧಿಸುತ್ತಿದ್ದರು. ಇದಕ್ಕಿಂತ ಹೊರತಾಗಿ ಇನ್ನೂ ಹಲವು ವಿಶೇಷ ಗುಣಗಳಿದ್ದವು. ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುವುದರಲ್ಲಿ ಅವರದ್ದು ಎತ್ತಿದ ಕೈ ಆಗಿತ್ತು. ಶಾರದಾ ಪೂಜೆ ಮಾಡಿಸುವುದು, ಗಣೇಶೋತ್ಸವ ಮಾಡಿಸುವುದು, ಪ್ರವಾಸ ಹೊರಡಿಸುವುದು ಇತ್ಯಾದಿಗಳು.
`ಲ್ಯೇ.. ಹೆಗಡೆ..' ಎಂದೇ ನನ್ನನ್ನು ಕರೆಯುತ್ತಿದ್ದ ಪರಶುರಾಮಪ್ಪರಿಗೆ ಒಂಭತ್ತು ಹಾಗೂ ಹತ್ತನೆ ತರಗತಿಯ ವೇಳೆಗೆಲ್ಲ ನಾನು ಆಪ್ತನೇ ಆಗಿದ್ದೆ. ವಿಜ್ಞಾನದ ಚಿತ್ರಗಳನ್ನು ಬಹಳ ಸುಂದರವಾಗಿ ಬಿಡಿಸಿ ಬಣ್ಣ ತುಂಬುತ್ತಿದ್ದ ಕಾರಣ ನಾನು ಅವರ ಆಪ್ತನಾಗಿದ್ದೆ ಎಂದರೆ ತಪ್ಪಿಲ್ಲ ಬಿಡಿ. ಒಂಭತ್ತನೇ ತರಗತಿಯಲ್ಲಿ ಇದ್ದಾಗಲೇನೋ ಒಮ್ಮೆ ಹೈಸ್ಕೂಲಿಗೆ ಇನ್ಸ್ಫೆಕ್ಷನ್ನಿಗೆ ಮೇಲಧಿಕಾರಿಗಳು ಬಂದಿದ್ದರು. ಅದೇ ಸಂದರ್ಭದಲ್ಲಿ ಪರಶುರಾಮಪ್ಪನವರು ಮೊದಲೇ ನನಗೆ ಕರೆದು ಕೆಲವು ಪ್ರಶ್ನೆ ಕೇಳುತ್ತೇನೆ. ಸರಿ ಉತ್ತರ ಕೊಡಬೇಕು. ಇಲ್ಲವಾದರೆ ಐತಲೇ ನಿನಗೆ ಎಂದು ಬೆದರಿಸಿದ್ದರು. ನಾನು ಬೆವೆತು ಹೋಗಿದ್ದೆ. ಮೇಲಧಿಕಾರಿಗಳು ಬಂದರು. ಪಿಬಿಎನ್ ತರಗತಿ ಶುರುಮಾಡಿದರು. `ಮೂತ್ರಪಿಂಡ' ವಿಷಯದ ಕುರಿತು ತರಗತಿ. ಚಿತ್ರ ಬಿಡಿಸಿ ಪಾಠ ಮಾಡಿದರು. ಪಿಬಿಎನ್ ಅವರೇ ಆಯ್ದ ವಿದ್ಯಾರ್ಥಿಗಳ ಬಳಿ ಪ್ರಶ್ನೆಗಳನ್ನೂ ಕೇಳಿದರು. ಹಲವರು ಉತ್ತರ ಹೇಳಿದರು. ನಂತರ ಮೇಲಧಿಕಾರಿ ಯಾರಾದರೂ ಒಬ್ಬರು ಬೋರ್ಡಿನ ಮೇಲೆ ಮೂತ್ರಪಿಂಡದ ಚಿತ್ರ ಬಿಡಿಸಿ ಎಂದರು. ಎಲ್ಲರೂ ಸುಮ್ಮನೆ ಕುಳಿತರು. ಕೊನೆಗೆ ಪಿಬಿಎನ್ ನನ್ನನ್ನು `ಲೇ ಹೆಗಡೆ. ಬಾರಲೇ.. ಚಿತ್ರ ಬಿಡಿಸು..' ಎಂದರು. ನಾನು ಅಳುಕುತ್ತಲೇ ಹೋಗಿ ಚಿತ್ರ ಬಿಡಿಸಿದೆ. ಚನ್ನಾಗಿ ಬಂದಿತ್ತು. ನನಗೂ ಖುಷಿಯಾಗಿತ್ತು. ಪಿಬಿಎನ್ ಅವರೂ ಖುಷಿಯಾಗಿದ್ದರು. ಮೇಲಧಿಕಾರಿ ಗುಡ್ ಎಂದೂ ಹೇಳಿ ಹೋದರು. ಅವರು ಅತ್ತ ಹೋದ ನಂತರ `ಮಗನೆ ಉಳಕಂಡೀಯಲೆ ಇವತ್ತು..' ಎಂದರು. ನಾನು ನಿರಾಳನಾಗಿದ್ದೆ.
ಇಂತಹ ಪಿಬಿಎನ್ ಅವರ ಇನ್ನೊಂದು ಗುಣವೆಂದರೆ ಪರೀಕ್ಷೆಗಳಲ್ಲಿ ಮೊದಲಿನದ್ದಕ್ಕಿಂತ ಕಡಿಮೆ ಅಂಕಗಳು ಬಿದ್ದರೆ ಹೊಡೆಯುತ್ತಿದ್ದರು. ಪ್ರತೀ ಪರೀಕ್ಷೆಗಳಲ್ಲಿ ಹಿಂದಿನದ್ದಕ್ಕಿಂತ ಕಡಿಮೆ ಅಂಕ ಬಿದ್ದರೆ ಹೊಡೆತ ಬೀಳುತ್ತಿತ್ತು. ಬಹುಶಃ ಅವರ ಕೈಯಿಂದ ಅಂಕಗಳ ವಿಷಯದಲ್ಲಿ ಕಡಿಮೆ ಹೊಡೆತಗಳನ್ನು ತಿಂದವರ ಪೈಕಿ ನಾನು, ಆಶಾ, ರವಿ, ರಾಘವೇಂದ್ರ, ಕಿರಣ ಹಾಗೂ ಇನ್ನೊಂದೆರಡು ಮೂರು ಮಂದಿ ಇರಬೇಕು ಅಷ್ಟೇ.
ಕೆಲವು ವಿಷಯಗಳ ಬಗ್ಗೆ ಪಿಬಿಎನ್ ಅವರ ಮೇಲೆ ನನಗೆ ಬೇಜಾರೂ ಇದೆ ಬಿಡಿ. ಎಸ್ಎಸ್ಎಲ್ಸಿಯಲ್ಲಿ ನಾನು ಒಂದು ಟೀಮ್ ಗೆ ಲೀಡರ್ ಆಗುವವನಿದ್ದೆ. ಬಹುತೇಕ ಆಯ್ಕೆಯಾಗಿ ನನ್ನ ಹೆಸರನ್ನು ಕೂಗಿಯೂ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ನನ್ನ ಹೆಸರನ್ನು ತೆಗೆದು ಹಾಕಿದ್ದರು. ಇದಲ್ಲದೇ ಹೈಸ್ಕೂಲ್ ಕೊನೆಯ ದಿನಗಳಲ್ಲಿ ಆದರ್ಶ ವಿದ್ಯಾರ್ಥಿ ಆಯ್ಕೆಗೂ ನನ್ನ ಹೆಸರನ್ನು ಗಣನೆಗೆ ತೆಗೆದುಕೊಳ್ಳಲಿಲ್ಲವಂತೆ. ಇನ್ನೊಬ್ಬ ಸರ್ ಹೇಳಿದ ನಂತರವೇ ನನ್ನ ಗಮನಕ್ಕೆ ಇದು ಬಂದಿದ್ದು. ಯಾಕೆ ಹೀಗೆ ಮಾಡಿದರು ಎನ್ನುವುದು ನನಗೆ ಈಗಲೂ ಅರಿವಿನಲ್ಲಿ ಇಲ್ಲ ಬಿಡಿ.
ಎಸ್ಎಸ್ಎಲ್ಸಿಯಲ್ಲಿ ಇದ್ದಾಗ ನಾನು ಲಕ್ಷಪ್ಪ ಸರ್ ನೆರವಿನಿಂದ ಆನಂದಪುರದಲ್ಲಿರುವ ಮುರುಘಾ ಮಠಕ್ಕೆ ಹೋಗಿ ಅಲ್ಲಿ ನಡೆದಿದ್ದ ಕ್ವಿಜ್ ಕಾಂಪಿಟೇಶನ್ನಿನಲ್ಲಿ ತೃತೀಯ ಬಹುಮಾನ ಗಳಿಸಿಕೊಂಡು ಬಂದಿದ್ದೆ. ಇದರಿಂದ ಖುಷಿಯಾಗಿದ್ದ ಪಿಬಿಎನ್ ಕಾನಲೆಯ ಪ್ರೌಢಶಾಲೆಯಲ್ಲಿಯೂ ಕೂಡ ಸಾಗರ ತಾಲೂಕಾ ಮಟ್ಟದ ಕ್ವಿಜ್ ಕಾಂಪಿಟೇಶನ್ ನಡೆಸಿದ್ದರು. ಈ ಕಾಂಪಿಟೇಶನ್ ಸಂದರ್ಭದಲ್ಲಿ ನನ್ನ ನೇತೃತ್ವದ ಕಾನ್ಲೆ ತಂಡವು ವಿಜ್ಞಾನದ ಫಿಸಿಕ್ಟ್ ವಿಭಾಗದ ಸ್ಪರ್ಧೆ ಬರುವ ವೇಳೆಗೆ 5ನೇ ಸ್ಥಾನದಲ್ಲಿತ್ತು. ಆದರೆ ಪಿಬಿಎನ್ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದರು. ರಾಪಿಡ್ ರೌಂಡ್ ಪ್ರಶ್ನೆಗೆ ಅಷ್ಟೇ ವೇಗದಲ್ಲಿ ನಾವು ಉತ್ತರ ಹೇಳಿದ್ದೆವು. ಪರಿಣಾಮವಾಗಿ ಈ ವಿಭಾಗದ ಸ್ಪರ್ಧೆ ಮುಗಿಯುವ ವೇಳೆಗೆ ನಮ್ಮ ತಂದ ಎರಡನೇ ಸ್ಥಾನ ತಲುಪಿಬಿಟ್ಟಿತ್ತು. ಸ್ಪರ್ಧೆ ಮುಗಿದ ನಂತರದ ದಿನಗಳಲ್ಲಿ ಪಿಬಿಎನ್ ಹೇಳೀಕೊಂಡಿದ್ದರಂತೆ `ಬಡ್ಡೀಮಗ ಹೆಗಡೆ.. ಫಿಸಿಕ್ಸಿನಲ್ಲಿ ಭಯಂಕರ ಚುರುಕು.. ಮುಂದೆ ಸೈನ್ಸೇ ಮಾಡ್ತಾನೆ..' ಆದರೆ ನಾನು ಸೈನ್ಸ್ ಮಾಡಲಿಲ್ಲ ಬಿಡಿ.
ಇವರ ಬಗ್ಗೆ ಇನ್ನೊಂದು ವಿಷಯ ಹೇಳಲೇಬೇಕು. ಸ್ವಲ್ಪ ಪೋಲಿಯೆನ್ನಿಸಬಹುದು. ಆದರೂ ಪ್ರಮುಖ ವಿಷಯವಾದ್ದರಿಂದ ಹೇಳಲೇಬೇಕು ಬಿಡಿ. ಪಿಬಿಎನ್ ಕ್ಲಾಸ್ ಮಾಡುತ್ತಿದ್ದಾಗ ಯಾರೂ ಕೂಡ ನಗಬಾರದಿತ್ತು. ಅಪ್ಪಿ ತಪ್ಪಿ ನಕ್ಕರೂ ಅವರ ಕೆಲಸ ಕೆಟ್ಟಿತು ಎಂದೇ ಅರ್ಥ. ಅದರಲ್ಲೂ ಜೀವಶಾಸ್ತ್ರ ಕಲಿಸುವಾಗಲಂತೂ ನಗಲೇ ಬಾರದಿತ್ತು. ಇದಕ್ಕೂ ಒಂದು ಪ್ರಮುಖ ಕಾರಣವಿದೆ. ಎಸ್ಎಸ್ಎಲ್ಸಿಯಲ್ಲಿ ನಮಗೆ ಮನುಷ್ಯನ ಭಾಗಗಳ ಕುರಿತು ಪಾಠಗಳಿವೆ. ಅದರಲ್ಲೂ ಸಂತಾನ, ಲೈಂಗಿಕ ಕ್ರಿಯೆಗಳ ಕುರಿತು ಪಾಠಗಳಿವೆ. ಯುವ ಮನಸ್ಸುಗಳು ಇವುಗಳನ್ನು ಅರಿತುಕೊಳ್ಳಲಿ ಎನ್ನುವ ಕಾರಣಕ್ಕಾಗಿ ಈ ಪಾಠಗಳನ್ನು ಇಟ್ಟಿದ್ದರು. ಈ ಸಂದರ್ಭದಲ್ಲಿ ಶಿಶ್ನ, ಯೋನಿ, ಸಂಭೋಗ ಮುಂತಾದ ವಿಷಯಗಳ ಬಗ್ಗೆ ತುಸು ಹೆಚ್ಚಿಗೆ ಗಂಭೀರವಾಗಿ ಪಠ ಮಾಡುತ್ತಿದ್ದರು ಪಿಬಿಎನ್. ಸ್ವಲ್ಪವೂ ಶಬ್ದ ತಪ್ಪದಂತೆ ಕಲಿಸುತ್ತಿದ್ದರು. ಈ ಸಂದರ್ಭದಲ್ಲಿ ಯಾರಾದರೂ ನಕ್ಕರೆ ಮುಗಿದೇ ಹೋಗುತ್ತಿತ್ತು ಅವರ ಕಥೆ. ನಮ್ಮ ಕ್ಲಾಸಿನಲ್ಲಿ ಕೆಲವು ಹುಡುಗಿಯರು ಈ ವಿಷಯ ಬಂದಾಗ ತೀವ್ರ ಮುಜುಗರಕ್ಕೆ ಒಳಗಾಗುತ್ತಿದ್ದರು. ಒಮ್ಮೆಯಂತೂ ಒಬ್ಬಾಕೆ ಕಿಸಕ್ಕನೆ ನಕ್ಕಿದ್ದಳು. ತಕ್ಷಣವೇ ಆಕೆಯನ್ನು ಎದ್ದು ನಿಲ್ಲಿಸಿದ ಪಿಬಿಎನ್ `ಶಿಶ್ನ ಎಂದರೇನೋ..' ವಿವರಿಸುವ ಎಂದರು. ಆ ಹುಡುಗಿಗಿಂತ ಹೆಚ್ಚಾಗಿ ನಾವೆಲ್ಲರೂ ಕಕ್ಕಾಬಿಕ್ಕಿಯಾಗಿದ್ದೆವು. ಹುಡುಗರ ಬಳಿಯೂ ಕೂಡ ಇಂತದ್ದೇ ತಪ್ಪು ನಡೆದರೆ ಅವರನ್ನೂ ಇದೇ ರೀತಿ ಪ್ರಶ್ನೆಗಳನ್ನು ಕೇಳಿ ಅವರಲ್ಲಿನ ಹುಡುಗಾಟಿಕೆ ಬುದ್ಧಿಯನ್ನು ದೂರ ಮಾಡುತ್ತಿದ್ದರು. ಮೊದ ಮೊದಲಿಗೆ ನಾವು ಇದನ್ನು ತಪ್ಪು ಎಂದುಕೊಂಡಿದ್ದೆವು. ಆದರೆ ನಂತರದ ದಿನಗಳಲ್ಲಿ ನಮಗೆ ಅರಿವಾಯಿತು ಬಿಡಿ. ಆಗ ತಾನೆ ಯುವ ಭಾವನೆಗಳು ಮೂಡುತ್ತಿದ್ದ ನಮ್ಮಲ್ಲಿ ಪ್ರೌಢರಾದ ಶಿಕ್ಷಕರೊಬ್ಬರು ಅಪಸವ್ಯವಾಗದಂತೆ ವಿವರಗಳನ್ನು ಹೇಳುವುದು ಸುಲಭದ ಕೆಲಸವಲ್ಲ. ಗಂಭೀರವಾಗಿ ಇಂತಹ ವಿಷಯಗಳನ್ನು ಮಾತಾಡುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾರ್ಥವಾಗುತ್ತದೆ. ಇಂತಹ ಸಮಯದಲ್ಲಿ ಯಾರಾದರೂ ನಕ್ಕರೆ ಕಲಿಸುತ್ತಿದ್ದವರ ಪಾಡು ಏನಾಗಬೇಡ ಹೇಳಿ. ಪಿಬಿಎನ್ ಅವರೂ ಅದಕ್ಕೆ ನಮಗೆಲ್ಲ ಗಂಭೀರವಾಗಿ ಕ್ರಮಕೈಗೊಂಡಿದ್ದರು. ಪರಿಣಾಮವಾಗಿ ಅವರ ತರಗತಿಗಳಲ್ಲಿ ನಗುವುದು ಕಡಿಮೆಯಾಗಿತ್ತು. ಗಂಭೀರತೆ ಬಂದಿತ್ತು.
ಇಂತಿಪ್ಪ ಪಿಬಿಎನ್ ಈಗಲೂ ಕಾನಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಹೆಡ್ ಮಾಸ್ತರರಾಗಿದ್ದಾರೆ ಎನ್ನುವ ಸುದ್ದಿಯಿದೆ. ಮುಂದಿನ ಸಾರಿಯಾದರೂ ಕಾನ್ಲೆಗೆ ಹೋದಾಗ ಅವರನ್ನು ಮಾತನಾಡಿಸಿಕೊಂಡು ಬರಬೇಕೆಂದುಕೊಂಡಿದ್ದೇನೆ.
(ಮುಂದಿನ ಭಾಗದಲ್ಲಿ ಭಾರತಿ ಹೆಗಡೆ ಹಾಗೂ ಕೆಬಿಎನ್ ಅವರ ಬಗ್ಗೆ ಬರೆಯಲಿದ್ದೇನೆ )