Friday, August 10, 2018

ನೆಗೆಟಿವ್ ರಾಜಕಾರಣದ ಪೊರೆ ಕಳಚಿದಾಗಲೇ ಕಾಂಗ್ರೆಸ್‌ಗೆ ಮರುಜನ್ಮ

ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಅತ್ಯಂತ ಹೆಚ್ಚು ಸೋಲನ್ನು ಅನುಭವಿಸಿದ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಧನಾತ್ಮಕ ಅಂಶಗಳು ಕಣ್ಣೆದುರಿಗೆ ಸಾಕಷ್ಟು ಇದ್ದರೂ ನೆಗೆಟಿವ್ ಅಂಶಗಳನ್ನೇ ನೆಚ್ಚಿಕೊಂಡು, ನೆಗೆಟಿವ್ ರಾಜಕಾರಣವನ್ನೇ ಮಾಡುತ್ತ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್ ಗೆ ಅಂಶಗಳಿಂದಲೇ ಸೋಲು ಎದುರಾಗುತ್ತಿದೆ ಎನ್ನುವುದು ಅರ್ಥವಾಗುವುದು ಯಾವಾಗ? ಎಂದಿಗೆ ಕಾಂಗ್ರೆಸ್ ತನ್ನ ರಾಜಕಾರಣದ ಶೈಲಿಯನ್ನು ಬದಲಿಸಿಕೊಳ್ಳುವುದಿಲ್ಲವೋ ಅಂದಿನವರೆಗೆ ಕಾಂಗ್ರೆಸ್ ಗೆ ಸೋಲು ಬೆನ್ನು ಬಿಡುವುದಿಲ್ಲ.
ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಕಾಂಗ್ರೆಸ್ ಮಾಡಿಕೊಂಡು ಬಂದಿದ್ದು ಇದೇ ನೆಗೆಟಿವ್ ರಾಜಕಾರಣವನ್ನೇ. ಶತಮಾನಗಳ ಇತಿಹಾಸವನ್ನು ಹೊಂದಿದ ಕಾಂಗ್ರೆಸ್ ತನ್ನ ಜನ್ಮದಿಂದಲೂ ನೆಗೆಟಿವ್ ರಾಜಕಾರಣದಲ್ಲೇ ಮಿಂದೇಳುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇನ್ನು ಕಳೆದ ಒಂದು ದಶಕದಲ್ಲಿ ಅಂದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಚ್ಚಳವಾದಾಗ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಕಾಂಗ್ರೆಸ್ ನೆಗೆಟಿವ್ ರಾಜಕಾರಣ ಇನ್ನಷ್ಟು ಹೆಚ್ಚಳಗೊಂಡಿತು. ಅದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ.
ಇತ್ತೀಚಿನ ವರ್ಷಗಳಲ್ಲಿ ನಡದ ಯಾವುದೇ ಚುನಾವಣೆಯನ್ನು ಗಮನಿಸಿ, ಕಾಂಗ್ರೆಸ್ ಮೊಟ್ಟ ಮೊದಲಿಗೆ ಬಳಕೆ ಮಾಡಿಕೊಳ್ಳುವುದು ನೆಗೆಟಿವ್ ಅಂಶಗಳನ್ನು. ಜಾತಿ, ಧರ್ಮ, ಮೀಸಲಾತಿ, ಪ್ರತ್ಯೇಕ ರಾಜ್ಯ ಹೀಗೆ ಹತ್ತು ಹಲವು ನೆಗೆಟಿವ್ ಅಂಶಗಳೇ ಕಾಂಗ್ರೆಸ್ ಪಾಲಿಗೆ  ಸ್ತ್ರಗಳಾಗುತ್ತವೆ. ಯಾರನ್ನು ಹೇಗೆ ಒಡೆದರೆ ಮತಗಳಾಗಬಹುದು ಎನ್ನುವುದೇ ಕಾಂಗ್ರೆಸ್ ಪಾಲಿಗೆ ಮುಖ್ಯವಾಗುತ್ತವೆ. ಸುಳ್ಳಾದರೂ ಸರಿ ಸುಮ್ಮನೆ ಹುಯ್ಯಲೆಬ್ಬಿಸಿದರೆ ಅದರಿಂದ ಒಂದಷ್ಟು ಓಟು ಸಿಗಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಆದರೆ ಲೆಕ್ಕಾಚಾರಗಳೇ ಕಾಂಗ್ರೆಸ್ ಪಾಲಿಗೆ ಮುಳುವಾಗುತ್ತಿದೆ.
ಸುಮ್ಮನೆ ಗಮನಿಸಿದರೆ ಕಾಂಗ್ರೆಸ್ ನೆಗೆಟಿವ್ ರಾಜಕಾರಣ ಕಣ್ಣಿಗೆ ಪದೇ ಪದೆ ರಾಚುತ್ತದೆ. 2014 ಲೋಕಸಭಾ ಚುನಾವಣೆಗೂ ಮೊದಲಿನ ಕಾಂಗ್ರೆಸ್ ಕಾರ್ಯಗಳನ್ನೇ ಗಮನಿಸಿದರೆ ಹಲವು ಅಂಶಗಳು ಗಮನಕ್ಕೆ ಬರುತ್ತವೆ. ಅದರಲ್ಲಿ ಪ್ರಮುಖವಾದದ್ದು, ಗೋಧ್ರಾ ಹತ್ಯಾಕಾಂಡದ ವಿಷಯ. ಅಂಶವನ್ನೇ ಇಟ್ಟುಕೊಂಡು ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿತು. ಪ್ರಕರಣಗಳನ್ನೂ ದಾಖಲಿಸುವ ಮಟ್ಟಕ್ಕೆ ಇಳಿಯಿತು. ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಂತೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮೋದಿಯವರನ್ನು ಮೌತ್ ಕಾ ಸೌದಾಗರ್ ಎಂದೂ ಕರೆದರು. ಮಣಿಶಂಕರ್ ಅಯ್ಯರ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೋದಿಯವರನ್ನು ನೀಚ ಆದ್ಮಿ ಎಂದು ಕರೆದೂಬಿಟ್ಟರು. ಇದನ್ನು ನೋಡಿದ ಗುಜರಾತ್ ಮತದಾರ ಹಸ್ತಕ್ಕೆ ಬಾಯ್ ಬಾಯ್ ಎಂದು ಹೇಳಿ ಓಡಿಸಿದ್ದು ಮರೆತಿಲ್ಲ ಬಿಡಿ.
2014 ಚುನಾವಣೆಗೂ ಮೊದಲು ಕಾಂಗ್ರೆಸ್ ವಿಶಾಲ ಆಂಧ್ರಪ್ರದೇಶವನ್ನು ಒಡೆದು ಎರಡು ರಾಜ್ಯಗಳನ್ನಾಗಿ ಮಾಡಿತು. ತೆಲಂಗಾಣ ಹಾಗೂ ಆಂಧ್ರ ಎಂದು ವಿಭಜನೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮನಸ್ಸಿನಲ್ಲಿದ್ದುದು ಬರೀ ಮತ ಗಳಿಕೆ ಮಾತ್ರ. ಇದೇ ಕಾಂಗ್ರೆಸ್ 2014 ಚುನಾವಣೆಗೂ ಪೂರ್ವದಲ್ಲಿ ಜೈನರಿಗೆ ಅಲ್ಪಸಂಖ್ಯಾತ ಮಾನ್ಯತೆಯನ್ನು ನೀಡಿತು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲಂತೂ ಕಾಂಗ್ರೆಸ್ ತನ್ನೊಳಗೆ ಪಾಸಿಟಿವ್ ಆಲೋಚನೆಗಳು ಇವೆ ಎನ್ನುವುದನ್ನೇ ಮರೆತಿದೆಯೇನೋ ಎನ್ನುವಂತೆ ವರ್ತಿಸುತ್ತಿದೆ. ಯಾವುದೇ ಕೆಲಸ, ಪ್ರತಿಭಟನೆ, ಹೋರಾಟ, ಚುನಾವಣಾ ಪ್ರಚಾರ ಹೀಗೆ ಎಲ್ಲ ರಂಗಗಳಲ್ಲಿಯೂ ನೆಗೆಟಿವ್ ಅಂಶಗಳಿಗೇ ಮಹತ್ವವನ್ನು ನೀಡುತ್ತಿದೆ.
ಸುಮ್ಮನೆ ಗಮನಿಸಿ, ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನನ್ನು ತಾನು ಪ್ರಚಾರ ಮಾಡಿಕೊಳ್ಳುವಲ್ಲಿ ಸಾಕಷ್ಟು ಧನಾತ್ಮಕ ಅಂಶಗಳಿದ್ದವು. ಆದರೆ ಅದ್ಯಾವುದನ್ನೂ ಮಾಡಲು ಮುಂದಾಗಲಿಲ್ಲ. ಬದಲಾಗಿ ಪಾಟೀದಾರ್ ಚಳುವಳಿಯನ್ನು ಮತಗಳಿಕೆಗಾಗಿ ಬಳಕೆ ಮಾಡಿಕೊಳ್ಳಲು ಮುಂದಾಯಿತು. ತದನಂತರದಲ್ಲಿ ದಲಿತರಿಗೆ ಅನ್ಯಾಯ ಎನ್ನುವ ಗಲಾಟೆಯನ್ನು ಎಬ್ಬಿಸಲು ನೋಡಿತು. ಅಂಶಗಳೇ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮುಳುವಾಯಿತು. ಅಷ್ಟೇ ಏಕೆ ತಾನೊಬ್ಬ ಹಿಂದೂ ಎಂದು ಬಿಂಬಿಸುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನಗಳನ್ನು ಸುತ್ತಿದರು. ತಾವೊಬ್ಬ ಜನಿವಾರ ಹೊಂದಿರುವ ಬ್ರಾಹ್ಮಣ ಎಂದುಕೊಂಡರು. ಆದರೆ ಇದು ಲಕಾರಿಯಾಗಲಿಲ್ಲ. ಚುನಾವಣೆಯ ನಂತರ ದೇವಸ್ಥಾನವನ್ನು ಮರೆತರು. ಜನಿವಾರ ಎಲ್ಲಿಗೆ ಹೋಯಿತೋ ಗೊತ್ತಿಲ್ಲ.
ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳ ಚುನಾವಣೆಗೂ ಮೊದಲು ಕಾಂಗ್ರೆಸ್ ದೇಶದಲ್ಲಿ ಅಸಹಿಷ್ಣುತೆಯಿದೆ ಎಂದು ಹುಯ್ಯಲೆಬ್ಬಿಸಲು ಮುಂದಾಯಿತು. ದೇಶದಲ್ಲಿ ಮುಸ್ಲೀಮರಿಗೆ ಆತಂಕಕರ ವಾತಾವರಣವಿದೆ ಎಂದು ಬೊಬ್ಬಿರಿಯಲು ಯತ್ನಿಸಿ ಸೋಲನ್ನು ಅನುಭವಿಸಿತು. ಇನ್ನು ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಪ್ರತ್ಯೇಕ ಧರ್ಮ ಅಂಶವನ್ನೇ ಪ್ರಮುಖವಾಗಿಸಲು ಮುಂದಾಯಿತು. ರಾಹುಲ್ ಗಾಂಧಿ ಕೂಡ ವಚನಗಳನ್ನು ಹೇಳಿದರು. ದೇವಸ್ಥಾನಗಳು, ಮಠ ಮಂದಿರಗಳನ್ನು ಸುತ್ತಿದರು. ಇದು ಯಾವುದೂ ಕಾಂಗ್ರೆಸ್ ಗೆ ಲಾಭ ತಂದುಕೊಡಲಿಲ್ಲ. ಬದಲಾಗಿ ಸಾಕಷ್ಟು ಹೊಡೆತವನ್ನೇ ನೀಡಿತು.
ಭಾರತದ ಆಯುರ್ವೇದವೋ, ಯೋಗವೋ ಅಥವಾ ಪ್ರಾಚೀನ ಸಂಸ್ಕೃತಿ ಸಂಪ್ರದಾಯಗಳನ್ನೋ ವಿಶ್ವದ ಎದುರು ತೆರೆದಿಡಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನೆಗೆಟಿವ್ ಅಂಶಗಳನ್ನು ತೆರೆದಿಟ್ಟರು. ವಿದೇಶಗಳ ನಾಯಕರು ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತದ ಪ್ರಥಮ ಪ್ರಧಾನಿ ನೆಹರೂ ಅವರಿಗೆ ಹಾವುಗಳನ್ನು ಆಡಿಸುವುದನ್ನು ಹೆಮ್ಮೆ ಎಂಬಂತೆ ತೋರಿಸಿದ್ದರಂತೆ. ಆಮೇಲಾದರೂ ಅಷ್ಟೇ ಭಾರತದಲ್ಲಿನ ಯಾವುದೇ ಪಾಸಿಟಿವ್ ಅಂಶಗಳನ್ನೂ ಕಾಂಗ್ರೆಸ್ ವಿಶ್ವದ ಎದುರು ತೆರೆದಿಡುವ ಪ್ರಯತ್ನವನ್ನೇ ಮಾಡಲಿಲ್ಲ. ಭಾರತದಲ್ಲಿನ ಪ್ರವಾಸೋದ್ಯಮದ ಕುರಿತು, ಹೂಡಿಕೆಗೆ ಇರುವ ವಿಪುಲ ಅವಕಾಶಗಳ ಕುರಿತು ಯಾವತ್ತೂ ಕಾಂಗ್ರೆಸ್ ಧನಾತ್ಮಕವಾಗಿ ಮಾತನಾಡಲೇ ಇಲ್ಲ. ವಿಶ್ವದ ಎದುರು ಭಾರತವನ್ನು ಧನಾತ್ಮಕವಾಗಿ ತೆರೆದಿಡುವ ಪ್ರಯತ್ನವನ್ನೇ ಮಾಡಲಿಲ್ಲ. ಬದಲಾಗಿ ಭಾರತದಲ್ಲಿನ ನೆಗೆಟಿವ್ ಅಂಶಗಳನ್ನು ವಿಶ್ವದ ವೇದಿಕೆಗಳಲ್ಲಿ ತೆರೆದಿಡುವುದರಲ್ಲೇ ಆಸಕ್ತಿಯನ್ನು ತೋರಿಸಿತು.
ಕಾಂಗ್ರೆಸ್ ಇಂತಹ ತನ್ನ ನೆಗೆಟಿವ್ ಮನಸ್ಥಿತಿಯಿಂದಲೇ ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. 2019 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಗದ್ದುಗೆಗೆ ಏರುವ ಕನಸನ್ನು ಕಾಣುತ್ತಿದೆ. ಆದರೆ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರುಗಳಿಗೆ ತಮ್ಮ ನಾಯಕರ ಮೇಲೆಯೇ ನಂಬಿಕೆ ಇಲ್ಲ ಎನ್ನುವಂತಹ ಪರಿಸ್ಥಿತಿ ಉದ್ಭವವಾಗಿದೆ. 2019 ಚುನಾವಣೆಯಲ್ಲಿ ರಾಹುಲ್ ಪ್ರಧಾನಿಯಾಗುತ್ತಾರೆಯೇ ಎಂದು ಗಟ್ಟಿಯಾಗಿ ಕೇಳಿದರೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸದೃಢವಾಗಿ ಹೌದು ಎನ್ನುವಲ್ಲಿ ವಿಲರಾಗುತ್ತಾರೆ. ನಕ್ಕು ಸುಮ್ಮನಾಗುತ್ತಾರೆ. ಗೆಲ್ಲುವ ಕನಸನ್ನು ಹೊಂದಿರುವ ಕಾಂಗ್ರೆಸ್ಸಿಿಗರು ಯಾವುದೋ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿಗೆ ಮುಂದಾಗುತ್ತಾರೆ. ತೃತೀಯ ರಂಗದ ಕುರಿತಂತೆ ಧ್ವನಿ ಎತ್ತುತ್ತಾರೆ. ಹಂತಕ್ಕೆ ಬಂದು ತಲುಪಿದೆ ಕಾಂಗ್ರೆಸ್ ಮನಸ್ಥಿತಿ.
ಕಾಂಗ್ರೆಸ್ ಯಾವತ್ತಿಗೂ ಪಾಸಿಟಿವ್ ರಾಜಕಾರಣವನ್ನು ಮಾಡಬಹುದು ಎನ್ನುವುದರ ಕುರಿತಂತೆ ಆಲೋಚನೆಯನ್ನೇ ಮಾಡಿಲ್ಲ. ತಾನು ಮಾಡಿದ ಧನಾತ್ಮಕ ಕಾರ್ಯಗಳನ್ನು ರಾಷ್ಟ್ರಾದ್ಯಂತ ಧನಾತ್ಮಕವಾಗಿ ಪ್ರಚಾರ ಮಾಡುವುದಕ್ಕೆ ಕಾಂಗ್ರೆಸ್ ಯಾವತ್ತಿಗೂ ಮುಂದಾಗಿಲ್ಲ. ಮುಂದೆ ತಾನು ಅಧಿಕಾರಕ್ಕೆ ಬಂದರೆ ಜನರಿಗೆ ಅನುಕೂಲವಾಗುವಂತಹ ಕಾರ್ಯಗಳ ಕುರಿತು ಯಾವುದೇ ಗಟ್ಟಿ ನಿಲುವನ್ನೇ ಕಾಂಗ್ರೆಸ್ ಹೊಂದಿಲ್ಲ.
ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮನ್ನು ಅಧಿಕಾರಕ್ಕೆ ತಂದರೆ ಯಾವ ರೀತಿ ಬದಲಾವಣೆಗಳನ್ನು ಮಾಡಬಲ್ಲೆ ಎಂಬುದನ್ನು ಜನರ ಮನಸ್ಸಿನಲ್ಲಿ ಧನಾತ್ಮಕವಾಗಿ ಅಚ್ಚಳಿಯದಂತೆ ಮೂಡಿಸುತ್ತಿದ್ದಾರೆ. ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಅದೇ ಹಳೆಯ ಸಿದ್ಧ ಸೂತ್ರಕ್ಕೆ ಜೋತು ಬಿದ್ದಿದೆ.
ಪ್ರಧಾನಿ ಮೋದಿಯವರನ್ನೋ ಅಥವಾ ಅವರ ಸರ್ಕಾರದ ಕಾರ್ಯಗಳನ್ನೋ ತೆಗಳಿದರೆ, ಆರೋಪಗಳನ್ನು ಮಾಡಿದರೆ ಅದೇ ದೊಡ್ಡ ಸಾಧನೆ ಎಂದುಕೊಂಡಿದೆ ಕಾಂಗ್ರೆಸ್. ವಿನಾಕಾರಣ ಮೋದಿ ಮೇಲೆ ಗೂಬೆ ಕೂರಿಸುವುದರಲ್ಲೇ ಕಾಂಗ್ರೆಸ್ಸಿಗೆ ತೃಪ್ತಿ. ಮೋದಿಯವರು ಕೈಗೊಳ್ಳುವಂತಹ ಯೋಜನೆಗಳಿಗಿಂತ ಉತ್ತಮವಾದುದನ್ನು ತಾನು ರೂಪಿಸಬಲ್ಲೆ ಎಂದು ಕಾಂಗ್ರೆಸ್ ಎಂದಿಗೂ ಬಿಂಬಿಸಿಲ್ಲ. ದೇಶದ ಭವಿಷ್ಯಕ್ಕೆ ಅಗತ್ಯವಾದುದನ್ನು ತಾನು ಮಾಡಬಲ್ಲೆ ಎನ್ನುವ ಮಾತುಗಳು ಕಾಂಗ್ರೆಸ್ ಹಾಗೂ ಅದರ ನಾಯಕರಿಂದ ಯಾವತ್ತೂ ಬಂದಿಲ್ಲ. ಸಮಾಜದ ಪಾಸಿಟಿವ್ ಅಂಶಗಳ ಕುರಿತು ಯಾವತ್ತೂ ಆಲೋಚನೆಯನ್ನೇ ಮಾಡಿಲ್ಲ.
ಕಾಂಗ್ರೆಸ್ ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳಲಿದ್ದಲ್ಲಿ ಅದು ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಳ ಹಂತಕ್ಕೆ ತಲುಪಬಹುದು. ಮೊಟ್ಟ ಮೊದಲನೆಯದಾಗಿ ಕಾಂಗ್ರೆಸ್ ವಂಶಾಡಳಿತ ಎಂಬ ಹಳೆಯ ಸಂಪ್ರದಾಯವನ್ನು ಬದಲಿಸಬೇಕು. ಕಾಂಗ್ರೆಸ್ ನಲ್ಲಿಸುವ ಸಮರ್ಥ ಯುವ ನಾಯಕರಿಗೆ ಪಟ್ಟವನ್ನು ಕಟ್ಟಿ, ಪಕ್ಷ ಮುನ್ನಡೆಸಲು ಬಿಟ್ಟಾಗ ಕಾಂಗ್ರೆಸ್ ಬಹುಪಾಲು ಬದಲಾಗಬಹುದು. ಯಾವಾಗ ನೆಹರು-ಗಾಂಧಿ ಕುಟುಂಬದ ಚುಕ್ಕಾಣಿಯನ್ನು ಬದಲಿಸಿ ಕಾಂಗ್ರೆಸ್ ಇತರ ನಾಯಕರನ್ನು ಪಕ್ಷದ ಮುಂದಾಳುವನ್ನಾಗಿ ಮಾಡುತ್ತದೆಯೋ ಆವಾಗ ಜನಸಾಮಾನ್ಯರಲ್ಲಿ ಕಾಂಗ್ರೆಸ್ ಕಡೆಗೆ ಇರುವ ನಿರಾಶಾವಾದದ ಭಾವನೆಗಳು ಬದಲಾಗುತ್ತವೆ.
ವಿ. ಡಿ. ಸಾರ್ವರ್ಕರ್ ರನ್ನು ಸುಮ್ಮನೆ ತೆಗಳಿದರೆ, ಸಂಘವನ್ನು ದೂರಿದರೆ ಖಂಡಿತವಾಗಿಯೂ ಜನರು ನಂಬುವುದಿಲ್ಲ. ಜಶೋದಾ ಬೆನ್ ಗೆ ಅನ್ಯಾಯವಾಯಿತು ಎಂದು ಹುಯ್ಯಲಿಟ್ಟರೆ, ಅಸಹಿಷ್ಣುತೆ ಎಂದು ಸೊಲ್ಲೆತ್ತಿಿದ್ದರೆ ಪ್ರತಿಯೊಬ್ಬರೂ ಕಾಂಗ್ರೆಸ್ ನ್ನು ಆಚೆಗಟ್ಟುತ್ತಾರೆ.
ಮೋದಿಯವನ್ನು ತೆಗಳುವುದನ್ನು ಬಿಟ್ಟು ದೇಶಕ್ಕೆ ಅಗತ್ಯವಾದ ಹಾಗೂ ಅನಿವಾರ್ಯವಾದ ಯೋಜನೆಗಳ ಕುರಿತು ನೀಲನಕ್ಷೆ ರೂಪಿಸಿ ಅದನ್ನು ಪರಿಣಾಮಕಾರಿಯಾಗಿ ಜನರ ಮುಂದಿಡಬಹುದು. ಕಪಿಲ್ ಸಿಬಲ್, ಚಿದಂಬರಂ, ಮಣಿಶಂಕರ ಅಯ್ಯರ್ ರಂತಹ ಹಿರಿಯರಿಗೆ ಸಕ್ರಿಯ ರಾಜಕಾರಣದಿಂದ ನಿವೃತ್ತಿಯನ್ನು ಕೊಟ್ಟು ಅವರ ಜಾಗದಲ್ಲಿ ಸಚಿನ್ ಪೈಲೆಟ್, ಜ್ಯೋತಿರಾದಿತ್ಯ ಸಿಂಧಿಯಾರಂತಹ ಹೊಸ ತಲೆಮಾರಿನ ಯುವಕರಿಗೆ ಅವಕಾಶ ನೀಡಿ, ಮೊಟ್ಟ ಮೊದಲಿಗೆ ಪಕ್ಷದಲ್ಲೇ ಪಾಸಿಟಿವ್ ಅಂಶಗಳನ್ನು ಬೆಳೆಸುವ ಅಗತ್ಯವಿದೆ.
ಅಭಿವೃದ್ಧಿ ರಾಜಕಾರಣವನ್ನು ಬಿಟ್ಟು ಅದೇ ಹಳೆಯ ದ್ವೇಷದ, ಒಡೆಯುವ, ಜಾತಿಯ ರಾಜಕಾರಣವನ್ನೇ ನಂಬಿಕೊಂಡಿದ್ದರೆ ಕಾಂಗ್ರೆಸ್ ಅವಸಾನವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಪಂಸಖ್ಯಾತ ಓಲೈಕೆಯನ್ನು ಮಾಡುತ್ತಿದ್ದರೆ, ರಾಜ್ಯಗಳ ನಡುವೆ, ಭಾಷೆಗಳ ನಡುವೆ ಒಡಕನ್ನು ಹುಟ್ಟು ಹಾಕುತ್ತಿದ್ದರೆ ಕಾಂಗ್ರೆಸ್ ಮತ್ತಷ್ಟು ಕೆಳಮಟ್ಟಕ್ಕೆ ಕುಸಿಯುತ್ತದೆಯೇ ಹೊರತು ಎಂದಿಗೂ ಜನರ ಮನಸ್ಸಲ್ಲಿ ಸ್ಥಾನ ಗಳಿಸುವುದಿಲ್ಲ. ಜನಸಾಮಾನ್ಯರು, ಮತದಾರರು ಮೊದಲಿಗಿಂತ ಬುದ್ಧಿವಂತರಾಗಿದ್ದಾರೆ. ಅವರಿಗೆ ಮೊದಲಿನಂತೆ ಸುಳ್ಳುಹೇಳಿದರೆ ಕ್ಷಣಮಾತ್ರದಲ್ಲಿ ಅರ್ಥವಾಗಿ ಬಿಡುತ್ತದೆ. ಕಾಂಗ್ರೆಸ್ ಇನ್ನೂ ಅಂತಹ ಹಳೆಯ ರಾಜಕಾರಣಕ್ಕೇ ಜೋತು ಬಿದ್ದರೆ ಜನಸಾಮಾನ್ಯ, ಮತದಾರ ಕಾಂಗ್ರೆಸ್ ನ್ನು ಕಾಲಕಸಕ್ಕಿಂ ಕಡೆ ಮಾಡಿಬಿಟ್ಟಾನು. ಮುಂದಿನ ದಿನಗಳಲ್ಲಾದರೂ ಕಾಂಗ್ರೆಸ್ ಪಾಸಿಟಿವ್ ರಾಜಕಾರಣದ ಕಡೆಗೆ ಹೊರಳಲಿ.
 
 

Wednesday, August 8, 2018

ನಮ್ಮೂರಲ್ಲೊಂದು ಟಾಯ್ಲೆಟ್ ಕಥೆ (ನಮ್ಮೂರ ಚಿತ್ರಗಳು -1)


ಇಬ್ಬರು ತುಂಬು ಗರ್ಭಿಣಿಯರು. ಅವರ ಜತೆಯಲ್ಲಿ ಸೇನಾಪತಿಗಳು, ಕಾಲಾಳುಗಳಂತೆ ನಾಲ್ಕೈದು ಹೆಂಗಳೆಯರು, ಹರೆಯಕ್ಕೆ ಬಂದ ಹುಡುಗಿಯರು.
ಮನೆಯ ಹಿಂಭಾಗದಿಂದಲೇ ಆರಂಭವಾಗುವ ದಟ್ಟ ಕಾಡು. ಸೂರ್ಯ ಕಷ್ಟಪಟ್ಟು ಪ್ರಯತ್ನಿಸಿದರೂ ತನ್ನ ಕಿರಣಗಳನ್ನು ಭೂಮಿಗೆ ಸೋಕಲು ಕಷ್ಟಪಡುವತಹ ಕಾಡು. ಬರಿ ಕಾಡಾದರೆ ಹೇಗೋ ಸರಿ, ದೊಡ್ಡ ಧರೆ.. ಮಧ್ಯದಲ್ಲೊಂದು ಕಚ್ಚಾ ಮಣ್ಣು ರಸ್ತೆ.
ಈ ಗರ್ಭಿಣಿಯರು ಹಾಗೂ ಹೆಂಗಳೆಯರ ಪಡೆ ಮಬ್ಬು ಬೆಳಕಿನಲ್ಲಿ ಲಾಟೀನು ಹಿಡಿದು ಈ ಮನೆಯ ಹಿಂಭಾಗದ ರಸ್ತೆಯನ್ನು ದಾಟಿ ರಸ್ತೆಯಿಂದ ಬೆಟ್ಟ ಏರಲು ಏನಿಲ್ಲವೆಂದರೂ ೧೦-೧೫ ನಿಮಿಷ ಬೇಕೇಬೇಕು. ರಸ್ತೆಯನ್ನು ಸುಲಭವಾಗಿ ದಾಟಬಹುದಿತ್ತಾದರೂ ಹಿಂದಿನ ಬೆಟ್ಟವನ್ನು ಏರುವುದು ಸುಲಭವಿರಲಿಲ್ಲ ಬಿಡಿ. ಅನಾಮತ್ತು ೩೦-೩೫ ಅಡಿಯ ದಿಬ್ಬ ಏರಲೇಬೇಕು. ಹರೆಯದ ಹೆಂಗಳೆಯರು ಸುಲಭವಾಗಿ ಏರಬಲ್ಲರು ಆದರೆ ಗರ್ಭಿಣಿಯರು, ಅದಾಗಲೆ ದಿನ ತುಂಬಿ ಮಗುವನ್ನು ಹೆರಲು ದಿನ ನೋಡುತ್ತಿದ್ದವರು ಹೇಗೆ ತಾನೇ ಆ ದಿಬ್ಬವನ್ನು ಏರಿಯಾರು?
ಕೈಯಲ್ಲೊಂದು ನೀರಿನ ಚೊಂಬು ಹಿಡಿದು, ಇನ್ನೊಂದು ಕೈಯನ್ನು ಆಗಾಗ ಸೊಂಟಕ್ಕೆ ಒತ್ತಿಕೊಂಡೋ ಅಥವಾ ಪಕ್ಕದ ದಿಬ್ಬವನ್ನು ಆಸರೆಯಾಗಿ ಹಿಡಿದುಕೊಂಡೋ ಏದುಸಿರು ಬಿಡುತ್ತ ಹತ್ತುವಷ್ಟರಲ್ಲಿ ಜೀವ ಹೈರಾಣಾಗುತ್ತಿತ್ತು. ಅಬ್ಬಾ ಬೆಟ್ಟವನ್ನು ಹತ್ತಿದೆವಲ್ಲ ಎಂದು ಸಮಾಧಾನಪಡುವಂತಿಲ್ಲ. ಅಕ್ಕ ಪಕ್ಕದಲ್ಲಿದ್ದ ಗುರಿಗೆ ಮಟ್ಟಿಯನ್ನೋ, ಅಥವಾ ಇನ್ಯಾವುದೋ ಮಟ್ಟಿಯನ್ನೋ ಹುಡುಕಬೇಕಿತ್ತು. ಇಷ್ಟೆಲ್ಲ ಸಾಹಸ ಪಡಬೇಕಿದ್ದುದು ಬೇರೇನಕ್ಕೂ ಅಲ್ಲ.. ಅನಿವಾರ್ಯ ಶೌಚಕ್ಕಾಗಿ.
ಯಾವುದೋ ಮಟ್ಟಿ ಸಿಕ್ಕು ಅಲ್ಲಿ ಸೀರೆಯನ್ನೆತ್ತಿ ಆರಾಮವಾಗಿ ಕುಳಿತುಕೊಳ್ಳುವ ಹಾಗೆ ಇರಲಿಲ್ಲ ಬಿಡಿ. ಆ ಮಟ್ಟಿಯಲ್ಲಿ ಹಸಿರು ಹಾವೋ, ಕೇರೆ ಹಾವೋ ಅಥವಾ ಹಪ್ರೆ, ಕೊಳಕುಮಂಡಲ, ಕುದುರಬೆಳ್ಳನಂತಹ ಕೆಟ್ಟ ವಿಷಕಾರಿ ಹಾವೋ ತಕ್ಷಣ ಇಣುಕಿ ಹೌಹಾರುವಂತೆ ಮಾಡುತ್ತಿದ್ದವು. ಆಗ ಮಾಡುತ್ತಿದ್ದ ಅನಿವಾರ್ಯ ಕೆಲಸವನ್ನು ಅರ್ಧಕ್ಕೆ ಬಿಟ್ಟು ಓಡಿದ್ದ ದಿನಗಳೂ ಇದ್ದವು.
ಇನ್ನು ಮಳೆಗಾಲವಾದರಂತೂ ಜೀವ ಮತ್ತಷ್ಟು ಹೈರಾಣಾಗುತ್ತಿತ್ತು. ನಮ್ಮೂರಲ್ಲಿ ಈಗಲೂ ಉಂಬಳಗಳ ಕಾಟ ಜಾಸ್ತಿ. ಇನ್ನು ಆಗ ಕೇಳಬೇಕೆ. ಯಾವುದೋ ಮಾಆಯದಲ್ಲಿ ಯಾರಿಗೂ ತಿಳಿಯದಂತೇ ನಮ್ಮ ಅಂಗಾಂಗಗಳಿಗೆ ಅಂಟಿಕೊಂಡು ರಕ್ತ ಹೀರಿ ಡೊಣೆಯನಂತಾಗುತ್ತಿದ್ದ ಉಂಬಳಗಳು ಆ ದಿನಗಳಲ್ಲಿ ಆ ಹೆಂಗಳೆಯರಿಗೆ, ಗಭಿಣಿಯರಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಕೈಕಾಲಿಗೆ ಕಚ್ಚಿದರೆ ಹೇಗೋ ತಡೆದುಕೊಳ್ಳಬಹುದು. ಆದರೆ ಬೇರೆ ಕಡೆಗಳಲ್ಲಿ ಕಚ್ಚಿದರೆ ಏನು ಗತಿ? ಆ ಹೆಂಗಳೆಯರು ಯಾವಾಗ ಎಲ್ಲಿ ಉಂಬಳಗಳು ಕಚ್ಚುತ್ತವೋ ಎನ್ನುವ ಆತಂಕದಲ್ಲಿಯೇ ತಮ್ಮ ದೈನಂದಿನ ಕಾರ್ಯಗಳನ್ನು ಮುಗಿಸುತ್ತಿದ್ದರು. ಇಷ್ಟರ ಜೊತೆ ಎಲ್ಲ ಕಾಡುಗಳಲ್ಲಿ ಇರುವಂತೆ ಆ ಕಾಡಿನಲ್ಲೂ ಅಸಂಖ್ಯಾತ ಸೊಳ್ಳೆಗಳ ಪಡೆ ರಕ್ತ ಹೀರಲು ಕಾಯುತ್ತಲೇ ಇತ್ತು ಬಿಡಿ.
ಚಳಿಗಾಲದ ಸಂದರ್ಭದಲ್ಲಿ ಇನ್ನೂ ಬಹುದೊಡ್ಡ ಆತಂಕಗಳು ಹೀಗೆ ಶೌಚಕ್ಕೆ ಹೋಗುವವರನ್ನು ಕಾಡುತ್ತಿದ್ದವು. ಚಳಿಗಾಲದ ಸಂದರ್ಭದಲ್ಲಿ, ಆಗ ತಾನೆ ಎಳೆಯ ಹುಲ್ಲುಗಳು ಎರಡೆಲೆ ಮೂಡಿಸಿ ತಮ್ಮ ಗಾತ್ರ ಹಿಗ್ಗಿಸುವ ಸಮಯದಲ್ಲಿ ಅವನ್ನು ಮೆಲ್ಲುವುದಕ್ಕಾಗಿ ಕಾಡೆಮ್ಮೆಗಳು, ಜಿಂಕೆಗಳು, ಕಡವೆಗಳ ಹಿಂಡು ದಟ್ಟ ಕಾಡಿನಿಂದಿಳಿದು ಬಯಲ ಕಡೆಗೋ, ನಮ್ಮ ಊರು ಕಾಣುವಷ್ಟು ಹತ್ತಿರಕ್ಕೋ ಆಗಮಿಸುತ್ತಿದ್ದವು. ಅವನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಈ ವನ್ಯ ಮೃಗಗಳ ಬೆನ್ನು ಬೆನ್ನಿಗೆ ಹುಲಿಗಳೋ, ಸೀಳು ನಾಯಿಗಳೋ, ಗುರ್ಕೆಗಳೋ ಆಗಮಿಸುತ್ತಿದ್ದವು. ಕಾಡಿಗೆ ಶೌಚಕ್ಕಾಗಿ ಹೋದವರು ಯಾವಾಗ ಹುಲಿ ಬರುತ್ತದೋ, ಯಾವಾಗ ಬೆನ್ನ ಹಿಂದೆ ಸೀಳು ನಾಯಿ ನಿಂತು ಊಳಿಡುತ್ತದೋ, ಮತ್ಯಾವಾಗ ಮೈಮೇಲೆ ಕಾಡೆಮ್ಮೆಗಳೋ, ಜಿಂಕೆಗಳೋ ಜಿಗಿದು ಓಡುತ್ತವೆಯೋ ಎನ್ನುವ ದುಗುಡದಲ್ಲೇ ತಮ್ಮ ನಿತ್ಯಕಾರ್ಯವನ್ನು ಮುಗಿಸಬೇಕಿತ್ತು.
ಈ ನಿತ್ಯಕರ್ಮಕ್ಕೂ ಸಮಯಮಿತಿ ಇತ್ತು. ಇನ್ನೂ ಬೆಳಕು ಮೂಡದಿದ್ದ ಹೊತ್ತು ಅಂದರೆ ನಸುಕಿನಲ್ಲೇ ಹೋಗಬೇಕು. ನಸುಕಿನಲ್ಲೇ ತಮ್ಮ ಕಾರ್ಯ ಮುಗಿಸಬೇಕು. ನಸುಕಿನಲ್ಲಿ ಕಾರ್ಯ ಮಾಡದಿದ್ದರೆ ಸಂಜೆಯಾಗುವುದನ್ನೇ ಕಾಯಬೇಕಿತ್ತು. ನಮ್ಮೂರಿನಲ್ಲಿ ಆಗೆಲ್ಲ ಸೊಪ್ಪಿನ ಹೊರೆಯನ್ನು ತರುವ ರೂಢಿ. ಮುಂಜಾನೆ ನಾಲ್ಕಕ್ಕೆಲ್ಲ ನಮ್ಮೂರಿನ ಹೈದರು ಎದ್ದು ಕಾಡಿಗೆ ಹೋಗಿ ಯಾವುದೋ ದೈತ್ಯ ಮರವನ್ನು ಕಡಿದು, ಸೊಪ್ಪನ್ನು ಹೊರೆಯಾಗಿ ಕಟ್ಟಿಕೊಂಡು ಬಂದು ಕೊಟ್ಟಿಗೆಗೆ ತಂದು ಹಾಸುತ್ತಿದ್ದರು. ಶೌಚಕ್ಕಾಗಿ ಹೋದವರು ಮೊದಲು ಮಟ್ಟಿಯನ್ನು ನೋಡುತ್ತಿದ್ದಷ್ಟೇ ಪ್ರಮುಖವಾಗಿ ಮರಗಳ ತಲೆಯನ್ನೂ ನೋಡುತ್ತಿದ್ದರು. ಯಾವ ಮರದ ಮೇಲೆ ಯಾರು ಹತ್ತಿಕೊಂಡು ಸೊಪ್ಪು ಕಡಿಯುತ್ತಿದ್ದಾರೋ ಎಂದು ನೋಡಿಕೊಂಡು, ಅವರು ಹತ್ತಿರದಲ್ಲೇ ಇದ್ದರೆ ಅವರ ಕಣ್ಣಿಗೆ ಕಾಣಿಸದಂತೆ ದೂರ ಮರೆಯಲ್ಲಿ ತಮ್ಮ ನಿತ್ಯ ಕರ್ಮಕ್ಕಾಗಿ ಕುಳಿತುಕೊಳ್ಳುತ್ತಿದ್ದರು. ಭಯ, ಆತಂಕ, ಅವಮಾನ, ನಾಚಿಕೆ, ದುಗುಡಗಳ ಮಧ್ಯ ಈ ನಿತ್ಯಕಾರ್ಯ ನಡೆಯುತ್ತಿತ್ತು. ಇನ್ನು ಯಾರಿಗಾದರೂ ಅನಾರೋಗ್ಯವಾದ ಸಂದರ್ಭದಲ್ಲಿ ಬೇಧಿ ಶುರುವಾಯಿತೋ ಅವರ ಪಾಡು ಯಾರಿಗೂ ಬೇಡ.
ಈ ಶೌಚ ಕಾರ್ಯದ ಸಂದರ್ಭದಲ್ಲಿ ದಿನ ನಿತ್ಯದ ಆಗು ಹೋಗುಗಳು, ಅತ್ತೆ-ಸೊಸೆ ಮುನಿಸು, ಚಿನ್ನದ ದರ, ಕಾಸಿನ ಸರದ ವಿಷಯಗಳು, ತಮ್ಮ-ಮಗನಿಗೋ ಮಗಳಿಗೋ ಕಾಡಿದ ಚಿಕ್ಕ ಪುಟ್ಟ ಕಾಯಿಲೆ ಹೀಗೆ ಅಸಂಖ್ಯಾತ ಹೆಂಗಳೆಯರ ಸುದ್ದಿಗಳು ವಿನಿಮಯವಾಗುತ್ತಿದ್ದವು. ನಿತ್ಯ ಕರ್ಮದ ಸಮಯ ಸುದ್ದಿ ಪ್ರಸಾರದ ಸಂದರ್ಭವಾಗಿ ಬದಲಾಗುತ್ತಿದ್ದುದೂ ಇದೆ. ಆ ದಿನಗಳಲ್ಲಿ ನಮ್ಮ ಮನೆಗಳಿಂದ ಬೆಟ್ಟದ ಕಡೆಗೆ ನೋಡಿದರೆ ಬೆಟ್ಟದ ಕಾನನದ ನಡುವೆ ಸಾಲಾಗಿ ಲಾಟೀನು ಬೆಳಗುವುದು ಕಾಣುತ್ತಿತ್ತಂತೆ.
ಹೀಗೆ ಶೌಚಾಲಯಕ್ಕಾಗಿ ಕಷ್ಟಪಟ್ಟು ಕಾಡಿನಿಂದೊಡಗೂಡಿದ ಗುಡ್ಡವನ್ನು ಏರುತ್ತಿದ್ದ ಇಬ್ಬರು ಗರ್ಭಿಣಿ ಹೆಗಸರಲ್ಲಿ ಒಬ್ಬಾಕೆ ನನ್ನ ಅಮ್ಮ. ಇನ್ನೊಬ್ಬಾಕೆ ನನ್ನ ಚಿಕ್ಕಮ್ಮ. ಇದು ೧೯೯೦ರ ದಶಕದ ಪೂವಾರ್ಧದಲ್ಲಿ ನಡೆದಿದ್ದ ಇಂತಹದ್ದೊಂದು ಸಂಗತಿಯನ್ನು ಅಮ್ಮ ಆಗೊಮ್ಮೆ ಈಗೊಮ್ಮೆ ಹೇಳುತ್ತಲೇ ಇದ್ದಳಾದರೂ ನಾನು ಈ ಕುರಿತು ಹೆಚ್ಚಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಚಿಕ್ಕಂದಿನಲ್ಲಿ ಅಂದರೆ ನನಗೆ ಮೂರೋ ನಾಲ್ಕೋ ವರ್ಷ ವಯಸ್ಸಾದ ಸಂದರ್ಭದಲ್ಲಿ ನಾನೂ ಹೀಗೆ ಶೌಚಕ್ಕಾಗಿ ಗುಡ್ಡ ಹತ್ತಿದವನೇ. ಒಂದೆರಡು ಸಾರಿ ನನಗೆ ಬೇಧಿ ಶುರುವಾದಾಗೆಲ್ಲ ಅಪ್ಪನನ್ನೋ, ಅಮ್ಮನನ್ನೋ ಕರೆದುಕೊಂಡು ಗುಡ್ಡದ ಕಡೆಗೆ ಓಡಿದ್ದೆಲ್ಲ ಅಸ್ಪಷ್ಟವಾಗಿ ನೆನಪಿದೆ. ನಡು ನಡುವೆ ಜಾರಿ ಬಿದ್ದಿದ್ದೂ ಕೂಡ ಚಿತ್ತ ಭಿತ್ತಿಯ ಮೇಲೆ ಅಚ್ಚಳಿಯದೇ ಉಳಿದಿದೆ. ಆಗೀಗ ಅವೆಲ್ಲ ನೆನಪಗೆ ಬರುತ್ತಲೇ ಇರುತ್ತವೆ.
ನಮ್ಮೂರಿನಲ್ಲಿ ಗಂಡಸರು ಆ ದಿನಗಳಲ್ಲಿ ಅಘನಾಶಿನಿ ನದಿ ತೀರವನ್ನೋ ಅಥವಾ ಇನ್ಯಾವುದೋ ನದಿಯ ಮೂಲಗಳನ್ನೋ ಹುಡುಕಿ ಹೋಗುತ್ತಿದ್ದರು. ಗಂಡಸರಿಗೆ ಶೌಚಕ್ಕೆ ಇಂತದ್ದೇ ಮಯ ಬೇಕು ಎಂಬುದು ಇರಲಿಲ್ಲವಲ್ಲ. ಹಾಗಾಗಿ ದಿನದ ಯಾವುದೇ ಸಮಯದಲ್ಲಿಯೂ ಅವರು ಎಲ್ಲಿ ಬೇಕಾದರೂ ಹೋಗಿ ತಮ್ಮ ನಿತ್ಯಕರ್ಮ ಮುಗಿಸಿ ಬರುತ್ತಿದ್ದರು. ಆದರೆ ಹೆಂಗಳೆಯರ ಪಾಡು ಯಾರಿಗೆ ಗೊತ್ತಾಗಬೇಕು ಹೇಳಿ.
ಅಮ್ಮ ಹಾಗೂ ಚಿಕ್ಕಮ್ಮ ಇಬ್ಬರೂ ದಿನ ತುಂಬಿದ ಬಸುರಿಯರು ಎಂದೆನಲ್ಲ.., ಇವರ ಪೈಕಿ ಅಮ್ಮನ ತವರಿನಲ್ಲಿ ಆಗ ಶೌಚಾಲಗಳಿರಲಿಲ್ಲ. ಅಲ್ಲಿಯೂ ಬಯಲನ್ನೇ ಆಶ್ರಯಿಸಿ ಇರಬೇಕಿತ್ತು. ಹಾಗಾಗಿ ಅಮ್ಮ ತನ್ನ ಗಂಡನ ಮನೆಯಲ್ಲಿ ಅಡ್ಜೆಸ್ಟ್ ಮಾಡಿಕೊಂಡಿರಬೇಕು ಬಿಡಿ. ಆದರೆ ಚಿಕ್ಕಮ್ಮ ಹಾಗಲ್ಲ, ಆ ದಿನಗಳಲ್ಲಿ ಮುಂದುವರಿದ ಊರುಗಳಲ್ಲೊಂದರಿಂದ ಬಂದಾಕೆ. ಆಕೆಗೆ ಹೊಂದಿಕೊಳ್ಳು ಕಷ್ಟವೇ ಆಗಿತ್ತಂತೆ. ಅದು ಬಿಡಿ. ಅಮ್ಮ ನಾಲ್ಕೈದು ವರ್ಷಗಳ ಕಾಲ ಬಯಲು ಶೌಚದ ಫಲಾನುಭವಿಯಾಗಿದ್ದರೆ, ಚಿಕ್ಕಮ್ಮನೂ ಬಹುತೇಕ ಒಂದೆರಡು ವರ್ಷ ಇದರ ಫಲಾನುಭವಿಯಾಗಿದ್ದಳು.
ಇಂತಹ ಬಯಲು ಶೌಚದ ವ್ಯವಸ್ಥೆಗೆ ಕೊನೆಗೂ ಒಂದು ದಿನ ನಮ್ಮೂರಲ್ಲಿ ಪೂರ್ಣವಿರಾಮ ಬಿದ್ದಿತ್ತು. ಅದ್ಯಾರು ಹೇಳಿದರೋ, ನನ್ನ ಪಕ್ಕದ ಮನೆಯ ಅಜ್ಜನಿಗೆ ಹೆಂಗಳೆಯರು ಪಡುತ್ತಿದ್ದ ಪಾಡು ಅರ್ಥವಾಗಿತ್ತು. ದಿನನಿತ್ಯ ಅವರು ಪಡುತ್ತಿದ್ದ ಬವಣೆ ಅರಿವಿಗೆ ಬಂದಿತ್ತು. ನನ್ನ ಪಕ್ಕದ ಮನೆಯ ಅಜ್ಜ, ನನ್ನ ಅಜ್ಜನ ಬಳಿ ಬಂದು ಶೌಚಾಲಯ ಕಟ್ಟಿಸುವ ಪ್ರಸ್ತಾಪವನ್ನು ಇಟ್ಟಿದ್ದ. ಮೊದ ಮೊದಲಿಗೆ ನನ್ನ ಅಜ್ಜ ಶೌಚಾಲಯ ನಿರ್ಮಾಣದ ಕುರಿತು ನಿರಾಸಕ್ತಿ ತೋರಿದ್ದರೂ ಕೊನೆಗೊಮ್ಮೆ ಒಪ್ಪಿಕೊಂಡಿದ್ದ. ಪಕ್ಕದ ಮನೆಯ ಅಜ್ಜ ತನ್ನದೇ ಜಾಗದಲ್ಲಿ ಎರಡು ಶೌಚಾಲಯ ನಿರ್ಮಾಣಕ್ಕೆ ಅಡಿಗಲ್ಲನ್ನೂ ಹಾಕಿದ್ದ. ಒಂದು ನಮ್ಮ ಮನೆಗೆ, ಇನ್ನೊಂದು ಆ ಅಜ್ಜನ ಮನೆಯ ಬಳಕೆಗೆ. ಕೊನೆಗೊಂದು ದಿನ ನಮ್ಮೂರಲ್ಲಿ ಶೌಚಾಲಯ ನಿರ್ಮಾಣಗೊಂಡು ಆಧುನಿಕತೆಗೆ ತೆರೆದುಕೊಂಡಿತ್ತು. ಬಯಲು ಶೌಚವೆಂಬುದು ಸಂಪೂರ್ಣವಾಗಿ ಕೊನೆಗೊಂಡಿತ್ತು. ನಮ್ಮೂರಿಗರ ಬವಣೆಗೆ ಅದರಲ್ಲೂ ಮುಖ್ಯವಾಗಿ ನಮ್ಮೂರ ಹೆಂಗಳೆಯರ ಪಡಿಪಾಟಲಿಗೆ ಪೂರ್ಣವಿರಾಮ ಬಿದ್ದಿತ್ತು.

ಇಷ್ಟೆಲ್ಲ ಆದರೂ ಆ ದಿನಗಳು ನೆನಪಾಗುತ್ತಿರುತ್ತವೆ. ಶೌಚಕ್ಕೆ ಕುಳಿತ ಹೆಂಗಳೆಯರ ಮೇಲೆ ಹುಲಿ ದಾಳಿ ಮಾಡಿದ್ದರೆ? ಚಿರತೆ ಹೊತ್ತೊಯ್ದಿದ್ದರೆ? ಕಚ್ಚಬಾರದಂತಹ ಜಾಗಗಳಲ್ಲೆಲ್ಲ ಉಂಬಳಗಳು ಕಚ್ಚಿದ್ದರೆ? ಅಸಂಖ್ಯ ಸೊಳ್ಳೆಗಳ ಹಿಂಡಿನಿಂದಾಗಿ ಮಲೆರಿಯಾ, ಡೆಂಗ್ಯೂಗಳಂತಹ ಮಾರಕ ರೋಗಗಳು ಆವರಿಸಿದ್ದರೆ? ಯಾವುದೋ ವಿಷಕಾರಿ ಹಾವುಗಳು ಕಚ್ಚಿದ್ದರೆ? ಅದು ಹೋಗಲಿ, ಏನೋ ಅಪಾಯ ಕಂಡು ಬಂದು ಹೆದರಿದ ಬಸುರಿಯರು ಓಡಿ ಹೋಗಲು ಯತ್ನಿಸಿ ಜಾರಿ ಬಿದ್ದಿದ್ದರೆ? ಬೆಚ್ಚುವ ಬಸುರಿಯರಿಗೆ ಬಾಳಂತಿ ಸನ್ನಿಯೋ ಅಥವಾ ಇನ್ಯಾವುದೋ ಮಾನಸಿಕ ಕಾಯಿಲೆಗಳು, ಕಸಾಲೆಗಳು ಆವರಿಸಿದ್ದರೆ? ಅಬ್ಬ.. ಅಂತ ದಿನಗಳು ಈಗಿಲ್ಲವಲ್ಲ... ಅಮ್ಮ ಈಗಲೂ ನಿಟ್ಟುಸಿರು ಬಿಡುತ್ತಿರುತ್ತಾರೆ. ಅಂತದ್ದೊಂದು ದಿನಗಳನ್ನು ನೆನಪಿಸಿಕೊಳ್ಳಲೂ ಹೇಸಿಗೆ ಪಟ್ಟುಕೊಳ್ಳುತ್ತಾಳೆ. ಆದರೂ ನೆನಪಾದಾಗ ಶೌಚಾಲಯದ ಅಗತ್ಯತೆಯ ಬಗ್ಗೆ ಮಾತನಾಡುತ್ತಾಳೆ. ತಮ್ಮಂತೆ ಇನ್ಯಾರೂ ಕೂಡ ಬವಣೆ ಅನುಭವಿಸುವುದು ಬೇಡ ಎನ್ನುತ್ತಿರುತ್ತಾಳೆ.

ಅಂದಹಾಗೆ ಟಾಯ್ಲೆಟ್ ಏಕ್ ಪ್ರೇಮ ಕಥಾ ಚಿತ್ರವನ್ನು ನೋಡಿದೆ. ಮತ್ತೊಮ್ಮೆ ಈ ಎಲ್ಲ ಘಟನೆಗಳೂ ನೆನಪಿಗೆ ಬಂದವು.

Friday, August 3, 2018

ಯುವಕರ ಕ್ರೀಡೆ ಕ್ರಿಕೆಟ್‌ನಲ್ಲಿ ಹಿರಿ-ಕಿರಿಯರ ಸದ್ದು

ಯುವಕರ ಕ್ರೀಡೆ ಕ್ರಿಕೆಟ್ ಎನ್ನುವ ಮಾತಿದೆ. 19-20 ವರ್ಷದ ಆಟಗಾರರಿಂದ ಹಿಡಿದು 36-37 ವರ್ಷ ವಯಸ್ಸಿನ ವರೆಗೆ ಕ್ರಿಕೆಟ್ ಆಡುವವರೇ ಹೆಚ್ಚು. 19-20 ವರ್ಷ ವಯಸ್ಸಿನ ಒಳಗಿನ ಕ್ರಿಕೆಟಿಗರ ಸಂಖ್ಯೆ ಬೆರಳೆಣಿಕೆಯಷ್ಟು. ಅದೇ ರೀತಿ 37 ವರ್ಷ ವಯಸ್ಸಿನ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.
ಕ್ರಿಕೆಟ್ ಅಂಗಣದಲ್ಲಿ 20 ವರ್ಷದೊಳಗಿನ ಆಟಗಾರರನ್ನು ಅನನುಭವಿ, ಇನ್ನೂ ಎಳಸು ಎಂದು ಕರೆದರೆ, 35 ವರ್ಷ ಆದಂತೆಲ್ಲ ವಯಸ್ಸಾಯಿತು, ಇನ್ನು ನಿವೃತ್ತಿಯ ಕಡೆಗೆ ಗಮನ ಹರಿಸಲಿ ಎಂಬ ಮಾತುಗಳು ಕೇಳಿ ಬರಲು ಆರಂಭವಾಗುತ್ತದೆ. ಉತ್ತಮ ಫಾರ್ಮಿನಲ್ಲಿದ್ದರೂ ಆಟಗಾರರ ನಿವೃತ್ತಿಯ ಕುರಿತು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಲು ಶುರುಮಾಡುತ್ತಾರೆ. ಹಾಗಾದರೆ ಕ್ರಿಕೆಟ್ ರಂಗಕ್ಕೆ ಕಾಲಿರಿಸಿದ ಅತ್ಯಂತ ಕಿರಿಯ ವ್ಯಕ್ತಿಯ ವಯಸ್ಸೆಷ್ಟಿರಬಹುದು? ಕ್ರಿಕೆಟ್ ಆಡಿ ನಿವೃತ್ತಿಯಾದ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು ಎನ್ನುವ ಕುತೂಹಲ ಹಲವರಲ್ಲಿ ಇರಬಹುದು. ಇಂತಹ ಹಿರಿಯ ಹಾಗೂ ಕಿರಿಯ ವ್ಯಕ್ತಿಗಳ ಕುರಿತು ಕಿರು ಮಾಹಿತಿ ಇಲ್ಲಿದೆ.

ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕಿರಿಯ ವ್ಯಕ್ತಿ
ಟೆಸ್‌ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಪಾಕಿಸ್ತಾನದ ಹಸನ್ ರಾಜಾ. 1996ರಲ್ಲಿ ಜಿಂಬಾಬ್ವೆಯ ವಿರುದ್ಧ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಹಸನ್ ರಾಜಾಗೆ ಕೇವಲ 14 ವರ್ಷ, 227 ದಿವಸವಾಗಿತ್ತು.
ಈ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ ಮುಷ್ತಾಕ್ ಮೊಹಮ್ಮದ್. ವಿಂಡೀಸ್ ವಿರುದ್ಧ 1959ರಲ್ಲಿ ಕ್ರಿಕೆಟ್ ಆಡಿದಾಗ ಈತನ ವಯಸ್ಸು 15 ವರ್ಷ 124 ದಿನಗಳಾಗಿತ್ತು. ಪಾಕಿಸ್ತಾನದವನೇ ಆದ ಅಕೀಬ್ ಜಾವೆದ್ ಕ್ರಿಕೆಟ್ ಜೀವನ ಆರಂಭಿಸಿದಾಗ ಆತನಿಗೆ 16 ವರ್ಷ 189 ದಿನಗಳಾಗಿತ್ತು. 1989ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆತ ತನ್ನ ಕ್ರಿಕೆಟ್ ಬದುಕು ಆರಂಭಿಸಿದ. ಇದೇ ಸಾಲಿನಲ್ಲಿ ನಾಲ್ಕನೇ ಸ್ಥಾನ ಗಳಿಸಿರುವ ಆಟಗಾರ ಭಾರತದ ಸಚಿನ್ ತೆಂಡೂಲಕ್‌ರ್‌‌. ಪಾಕಿಸ್ತಾನದ ವಿರುದ್ಧ 1989ರಲ್ಲಿ ಕ್ರಿಕೆಟ್ ಆಡಿದ ಸಚಿನ್‌ಗೆ ಆಗ 16 ವರ್ಷ 205 ದಿನವಾಗಿತ್ತಷ್ಟೇ. 1969ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಾಕಿಸ್ತಾನದ ಆಪ್ಹ್ತಾಬ್ ಬಲೂಚ್‌ಗೆ ಆಗ 16 ವರ್ಷದ 223 ದಿನಗಳಾಗಿತ್ತು.

ಹಿರಿಯ ಆಟಗಾರರು
ಕ್ರಿಕೆಟ್‌ನಲ್ಲಿ 35-36 ವರ್ಷಗಳಿಗೆಲ್ಲ ನಿವೃತ್ತಿ ಹೇಳುವ ಆಟಗಾರರೇ ಹೆಚ್ಚು. ಅಬ್ಬಬ್ಬಾ ಎಂದರೆ 40, ಅಲ್ಲೊಬ್ಬ ಇಲ್ಲೊಬ್ಬರು 41-42 ವರ್ಷಗಳ ತನಕ ಕ್ರಿಕೆಟ್ ಆಡಿದವರಿದ್ದಾರೆ. ಆದರೆ ಇಂಗ್ಲೆೆಂಡ್ ಪರ ಕ್ರಿಕೆಟ್ ಆಡಿದ ವಿಲ್ರೆಡ್ ರೋಡ್‌ಸ್‌ ತಾನು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಆತನ ವಯಸ್ಸು 52 ವರ್ಷ 165 ದಿನಗಳಾಗಿತ್ತು. ಆಸ್ಟ್ರೇಲಿಯಾದ ಬೆರ್ಟ್ ಐರನ್‌ಮ್ಯಾಾಂಗರ್ ಟೆಸ್‌ಟ್‌‌ಗೆ ವಿದಾಯ ಹೇಳಿದಾಗ ಆತನ ವಯಸ್ಸೂ ಕೂಡ ಅರ್ಧಶತಕ  ದಾಟಿತ್ತು ಬಿಡಿ. ಕ್ರಿಕೆಟ್‌ಗೆ ವಿದಾಯ ಹೇಳುವಾಗ ಆತನಿಗೆ ಆಗಿದ್ದ ವಯಸ್ಸು 50 ವರ್ಷದ 327 ದಿನ. ಕ್ರಿಕೆಟ್ ಪಿತಾಮಹ ಡಬ್ಲೂ. ಜಿ. ಗ್ರೇಸ್ ಕೂಡ ಹಿರಿಯರ ಯಾದಿಯಲ್ಲಿದ್ದಾರೆ. ಇವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಾಗ ಆಗಿದ್ದ ವಯಸ್ಸು 50 ವರ್ಷದ 320 ದಿನಗಳು. ಇಂಗ್ಲೆೆಂಡಿನ ಜಾರ್ಜ್ ಗನ್ 50 ವರ್ಷದ 303, ಜೇಮ್‌ಸ್‌ ಸದರ್ಟನ್ 49 ವರ್ಷದ 139 ದಿನಗಳಾದಾಗ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದ್ದರು.

ವಿವಿದ ದೇಶಗಳ ಹಿರಿಯ ಕ್ರಿಕೆಟ್ ಆಟಗಾರರು
ಆಸ್ಟ್ರೇಲಿಯಾ -ಬೆರ್ಟ್ ಐರನ್‌ಮ್ಯಾಾಂಗರ್ -50 ವರ್ಷದ 327 ದಿನಗಳು
ಬಾಂಗ್ಲಾದೇಶ - ಮೊಹಮ್ಮದ್ ರಫೀಕ್ -37 ವರ್ಷದ 180 ದಿನಗಳು
ಇಂಗ್ಲೆೆಂಡ್         -ವಿಲ್ರೆೆಡ್ ರೋಡ್‌ಸ್‌ -52 ವರ್ಷದ 165 ದಿನಗಳು
ಭಾರತ          - ವಿನೂ ಮಂಕಡ್ -41 ವರ್ಷ 305 ದಿನಗಳು
ನ್ಯೂಜಿಲೆಂಡ್      -ಜ್ಯಾಕ್ ಅಲಾಬಸ್ಟಾಾರ್ -41 ವರ್ಷ 247 ದಿನಗಳು
ಪಾಕಿಸ್ತಾಾನ  -ಮಿರಾನ್ ಭಕ್ಷ್     -47 ವರ್ಷ 307 ದಿನಗಳು
ದಕ್ಷಿಣ ಆಫ್ರಿಕಾ       -ಡೇವ್ ನರ್ಸ್           -45 ವರ್ಷ 207 ದಿನಗಳು
ಶ್ರೀಲಂಕಾ        -ಸೋಮಚಂದ್ರ ಡಿ. ಸಿಲ್ವಾ -42ವರ್ಷ 78 ದಿನಗಳು
ವೆಸ್‌ಟ್‌ ಇಂಡೀಸ್   - ಜಾರ್ಜ್ ಹೆಡ್ಲೀ         -44 ವರ್ಷ 236 ದಿನಗಳು
ಜಿಂಬಾಬ್ವೆೆ    -ಜಾನ್ ಟ್ರೈಕೋಸ್ -45 ವರ್ಷ 304 ದಿನಗಳು

ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಹಿರಿಯರು
ಕಿರಿಯ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದನ್ನು ಕೇಳಿರುತ್ತೀರಿ. ಅದೇ ಹಿರಿಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು ಎಷ್ಟಿರಬಹುದು ಎನ್ನುವ ಕುತೂಹಲ ಇರಬಹುದು. ಇಂಗ್ಲೆೆಂಡಿನ ಜೇಮ್‌ಸ್‌ ಸದರ್ಲೆಂಡ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು 49 ವರ್ಷದ 119 ದಿನಗಳಾಗಿದ್ದವು. ಪಾಕಿಸ್ತಾನದ ಮಿರಾನ್ಭಕ್ಷ್ ಗೆ 47 ವರ್ಷದ 284 ದಿನಗಳಾಗಿದ್ದವು. ಆಸ್ಟ್ರೇಲಿಯಾದ ಡಾನ್ ಬ್ಲೇಕ್‌ಗೆ 46 ವರ್ಷದ 253 ದಿನಗಳಾಗಿದ್ದವು. ಭಾರತದ ರುಸ್ತುಮ್‌ ಜೇಮ್ಶೆಟ್‌ಜಿಗೆ 41 ವರ್ಷದ 27 ದಿನಗಳಾಗಿದ್ದವು. ಈಗ ಹೇಳಿ ಕ್ರಿಕೆಟ್ ಕೇವಲ ಯುವಕರ ಕ್ರೀಡೆಯೇ?