ದೇಶಾದ್ಯಂತ ಮಳೆ ಸುರಿದು ಭೂತಾಯಿ ಹಸಿರ ಸೀರೆ ತೊಟ್ಟಂತೆ ಕಂಗೊಳಿಸುತ್ತಿದ್ದಾಾಳೆ. ಬೆಟ್ಟಗಳು ಕೈ ಬೀಸಿ ಕರೆಯುತ್ತವೆ, ಜಲಪಾತ ಸ್ವಾಗತಿಸುತ್ತಿವೆ. ಎಲ್ಲ ಪ್ರವಾಸಿ ತಾಣಗಳೂ ಮನಸೆಳೆಯುತ್ತಿವೆ. ಮತ್ಯಾಕೆ ತಡ, ಬ್ಯಾಗ್ ಹೊತ್ತು ಹೊರಡಿ ಪ್ರವಾಸಕ್ಕೆ. ಹಾಗೆ ಹೊರಡುವ ಮುನ್ನ ಮುಂಜಾಗ್ರತೆಗಾಗಿ ಈ ಲೇಖನ ಓದಿ...
------------
ಆಗಸದಲ್ಲಿ ಕರಿ ಮೋಡಗಳ ಹಿಂಡು ಸಾಲುಗಟ್ಟಿ ದೂರ ತೀರದ ಪಯಣ ಹಮ್ಮಿಕೊಂಡಿವೆ. ಸಾಗುವ ಹಾದಿಯಲ್ಲಿ ಮಳೆ ಸುರಿಸಿ ಭೂಮಿಯನ್ನು ತಂಪಾಗಿಸಿ ನೀರ ಸೆಲೆ ಚಿಮ್ಮಿಸುತ್ತಿವೆ. ವಾತಾವರಣ ಹಿತವಾಗಿದ್ದು, ಎಂತಹ ವ್ಯಕ್ತಿಯ ಮನಸ್ಸಿನಲ್ಲಿಯೂ ದೂರದ ಪ್ರಯಾಣ ಮಾಡಬೇಕೆನ್ನುವ, ಚಾರಣಕ್ಕೆ ಹೊರಡಬೇಕೆಂಬ ಆಶಯ ಬಲವಾಗಿ ಚಿಮ್ಮಿಸುತ್ತಿವೆ. ಅದೆಷ್ಟೋ ಜನ ಇಂತಹ ಹಿತ ವಾತಾವರಣದಲ್ಲೇ, ವಾರಾಂತ್ಯಕ್ಕೊೊಂದು ಬೈಕ್ ಟ್ರಿಪ್ಪನ್ನೋ, ಕಾರುಗಳ ಮೂಲಕ ತಿರುಗಾಟವನ್ನೋ ಹೊರಡುತ್ತಾರೆ. ಇನ್ನೂ ಹಲವರು ಗುಂಪು ಗುಂಪಾಗಿ ಟ್ರೆಕ್ಕಿಿಂಗ್‌ಗಾಗಿ ನಗರವನ್ನು ಬಿಟ್ಟು ಕಾಡಿಗೋ, ಬೆಟ್ಟಕ್ಕೋ, ಜಲಪಾತಗಳಿಗೋ ಹೊರಡುತ್ತಾಾರೆ. ಖುಷಿಯಿಂದ ಕಾಲ ಕಳೆಯುವ ಯೋಜನೆಗಳನ್ನು ಮನಸ್ಸಿನಲ್ಲಿ ಹಾಕಿಕೊಂಡಿರುತ್ತಾರೆ.
ಪ್ರವಾಸ ಯಾರಿಗೆ ತಾನೇ ಇಷ್ಟವಿರೋದಿಲ್ಲ ಹೇಳಿ. ಒತ್ತಡದ, ಧಾವಂತದ ಬದುಕಿನ ನಡುವೆ ಒಂದೋ, ಎರಡೋ ದಿನಗಳ ಕಾಲ ಆರಾಮವಾಗಿ, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ತಳ್ಳಿ ಪ್ರಕೃತಿಯ ಮಧ್ಯವೋ, ಇಷ್ಟಪಟ್ಟ ತಾಣಗಳ ನಡುವೆಯೋ ಖುಷ್ ಖುಷಿಯಾಗಿ ಕಳೆಯುವುದು ಪ್ರತಿಯೊಬ್ಬರಿಗೂ ಇಷ್ಟವೇ. ಹಾಗಾದರೆ ಪ್ರವಾಸಕ್ಕೆ ಹೋಗುವುದು ಸುಲಭವೇ? ಏನೂ ತಯಾರಿ ಇಲ್ಲದೆಯೇ ಪ್ರವಾಸ ಮಾಡಿಬಿಡಬಹುದೆ? ಹೂಂ ಹೂಂ. ಪ್ರವಾಸವಿರಲಿ, ಚಾರಣವೇ ಇರಲಿ, ಅಗತ್ಯವಾದ ಕೆಲವು ತಯಾರಿಗಳಂತೂ ಬೇಕೇ ಬೇಕಾಗುತ್ತದೆ. ಹಾಗಾದರೆ ಪ್ರವಾಸಕ್ಕೆ ಹೊರಡುವ ಮುನ್ನ ಏನು ತಯಾರಿಬೇಕು? ಅವುಗಳ ಕಡೆಗೆ ಕಣ್ಣಾಡಿಸೋಣ ಬನ್ನಿ.
ಇವುಗಳ ಮರೆಯದಿರಿ...
ಉತ್ತಮ ಚಿತ್ರಗಳಿಗೊಂದು ಕ್ಯಾಮೆರಾ
ಸೆಲ್ಫೀ ತೆಗೆಯಲೊಂದು ಸ್ಟಿಕ್
ಹಗುರದ ಪವರ್ ಬ್ಯಾಾಂಕ್
ಮೊಬೈಲ್, ಕ್ಯಾಮೆರಾ ಬ್ಯಾಟರಿ ಪೂರ್ತಿ ಜಾರ್ಜ್ ಆಗಿರಲಿ
ಕೊಡೆ, ರೇನ್ ಕೋಟ್, ಮೆಡಿಕಲ್ ಕಿಟ್
ಬ್ಯಾಗ್ ಹಗುರವಾಗಿರಲಿ
ಕೆಲವರು ಪ್ರವಾಸಕ್ಕೆ ಹೊರಡುವ ಸಂದರ್ಭದಲ್ಲಿ ಇದ್ದ ಬಿದದ್ದ ವಸ್ತುಗಳನ್ನೆಲ್ಲ ಬ್ಯಾಾಗಿಗೆ ತುಂಬಿಕೊಳ್ಳತ್ತಾರೆ. ಬಟ್ಟೆಗಳು, ಶೂಗಳು ಅದೂ ಇದೂ ಎಂದುಕೊಂಡು ಹತ್ತಾರು ಬಗೆಯ ವಸ್ತುಗಳನ್ನು ಬ್ಯಾಗಿನೊಳಕ್ಕೆ ತುರುಕಿಕೊಳ್ಳುತ್ತಾರೆ. ಅನವಶ್ಯಕ ವಸ್ತುಗಳನ್ನು ಬ್ಯಾಗಿನೊಳಕ್ಕೆ ಹಾಕಿಕೊಂಡು ಭಾರ ಮಾಡಿಕೊಳ್ಳುತ್ತಾರೆ. ಇದರಿಂದ ಪ್ರವಾಸ ಪ್ರಯಾಸವಾಗುವ ಸಂದರ್ಭವೇ ಜಾಸ್ತಿ. ಖುಷಿಯಾಗಿ ಕಳೆಯ ಬೇಕೆಂಬ ಪ್ರವಾಸ ನಿಮ್ಮ ಬ್ಯಾಗಿನ ಭಾರದಿಂದಲೇ ಬೇಸರಕ್ಕೂ ಕಾರಣವಾಗಬಹುದು. ಟ್ರೆೆಕ್ಕಿಿಂಗ್‌ನಂತಹ ಸಮಯದಲ್ಲಿ ಅನಾವಶ್ಯಕ ವಸ್ತುಗಳಿಂದ ಸುಮ್ಮನೇ ತೊಂದರೆಗೆ ಒಳಗಾಗುತ್ತಾಾರೆ. ನಿಮ್ಮ ಪ್ರಯಾಣಕ್ಕೆ ಮುನ್ನ ಅನಗತ್ಯ ವಸ್ತುಗಳಿಂದ ದೂರವಿರಿ. ದೂರದ ಪ್ರವಾಸದ ಸಂದರ್ಭದಲ್ಲಿ ಅನಗತ್ಯದ ಭಾರಕ್ಕೆ ಕಾರಣವಾಗುವ ವಸ್ತುಗಳನ್ನು ಬಿಟ್ಟು ಅದರ ಬದಲು ಭಾರ ಕಡಿಮೆ ಇರುವ ವಸ್ತುಗಳಿಗೆ ಆದ್ಯತೆ ನೀಡಿ. ಹಲವಾರು ಜತೆ ಬಟ್ಟೆಗಳನ್ನು ಒಯ್ಯುವುದರ ಬದಲು 2 ಅಥವಾ 3 ಜತೆ ಬಟ್ಟೆಗಳಿಗೆ ಆದ್ಯತೆ ನೀಡಿ.
ವಾಹನಗಳ ಕಡೆಗೆ ಮುನ್ನೆಚ್ಚರಿಕೆ ಅಗತ್ಯ
ಪ್ರವಾಸಕ್ಕೆ ನಿಮ್ಮದೇ ಸ್ವಂತ ವಾಹನ ಒಯ್ಯುವುದಿದ್ದರೆ ಅದರ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದ ಅಗತ್ಯ. ವಾಹನಗಳ ಆಯ್ಕೆಯೂ ಕೂಡ ಅಷ್ಟೇ ಮುಖ್ಯ. ದ್ವಿಚಕ್ರ ಅಥವಾ ಚತುಷ್ಚಕ್ರ ವಾಹನಗಳನ್ನು ಆದ್ಯತೆಯ ಮೇರೆಗೆ ಬಳಕೆ ಮಾಡಿಕೊಳ್ಳಿ. ಪ್ರಯಾಣ ಆರಂಬಿಸುವ ಮೊದಲು ವಾಹನಗಳನ್ನು ಪರೀಕ್ಷೆ ಮಾಡಿಸಿಕೊಳ್ಳಿ. ಪ್ರಯಾಣಕ್ಕೆ ಮೊದಲು ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಿ. ಸರ್ವೀಸ್ ಮಾಡಿಸಿಕೊಳ್ಳಿ. ವಾಹನದ ಚಕ್ರಗಳಲ್ಲಿ ಗಾಳಿ ಇದೆಯೇ ಎಂದು ಪರೀಕ್ಷೆ ಮಾಡಿಕೊಳ್ಳಿ. ಪ್ರಯಾಣದ ಮಧ್ಯದಲ್ಲಿ ವಾಹನ ಕೈಕೊಟ್ಟರೆ ಉಪಯೋಗಕ್ಕೆ ಬರಲಿ ಎನ್ನುವ ಕಾರಣಕ್ಕಾಗಿ ಕೆಲವು ರಿಪೇರಿ ಸಾಧನಗಳು ಜತೆಯಲ್ಲಿರಲಿ. ಎಲ್ಲಕ್ಕಿಿಂತ ಮುಖ್ಯವಾಗಿ ಗಾಡಿಯಲ್ಲಿ ಸಾಕಷ್ಟು ಇಂಧನ ಇರಲಿ. ಪ್ರಯಾಣದ ಸಂದರ್ಭದಲ್ಲಿ ಅತಿಯಾದ ವೇಗಕ್ಕೆ ಕಡಿವಾಣ ಹಾಕಿ.
ಮಳೆ ಬಗ್ಗೆ ಇರಲಿ ಎಚ್ಚರ
ಇದು ಮಳೆಗಾಲದ ಸೀಸನ್. ಮಳೆ ಜಾಸ್ತಿ ಬಂತೆಂದು, ಜಲಪಾತಗಳಿಗೋ ಅಥವಾ ಇನ್ಯಾವುದೋ ಹಿನ್ನೀರಿನ ಪ್ರದೇಶಗಳಿಗೋ, ನದಿ ತೀರಕ್ಕೋ ಪ್ರವಾಸ ಹೋಗುವ ಸಂದರ್ಭದಲ್ಲಿ ಮಳೆಯ ಬಗ್ಗೆ ಎಚ್ಚರ ವಹಿಸುವುದು ಕಡ್ಡಾಯ. ಯಾವುದೇ ಕ್ಷಣದಲ್ಲಿ ಮಳೆ ತೀವ್ರವಾಗಿ ಅನಾಹುತವಾದೀತು ಎಚ್ಚರ. ಜಲಪಾತಗಳಲ್ಲಿ, ನದಿಗಳಲ್ಲಿ ಈಜುವಾಗಲೂ ಎಚ್ಚರ ವಹಿಸಲೇಬೇಕು. ದಿಢೀರನೆ ನದಿಗಳಲ್ಲಿ ಪ್ರವಾಹ ಬಂದೀತು. ಈ ಕುರಿತು ಜಾಗರೂಕರಾಗಿರುವುದೂ ಕೂಡ ಅಷ್ಟೇ ಮುಖ್ಯ. ಈಜು ಬರದೇ ನದಿಗೆ ಇಳಿಯಲೇಬೇಡಿ. ಅಪರಿಚಿತ ಸ್ಥಳದ ನದಿಗಳು, ಕೆರೆಗಳು, ಜಲಪಾತಗಳು ಅತ್ಯಂತ ಅಪಾಯಕಾರಿ. ಹೀಗಾಗಿ ಅವುಗಳಲ್ಲಿ ಈಜುವ, ನೀರಾಟ ಮಾಡುವ ಉಸಾಬರಿಗೆ ಹೋಗಲೇಬೇಡಿ. ಭಾರಿ ಮಳೆ ಬೀಳುತ್ತಿರುವ ಸಂದರ್ಭದಲ್ಲಿ ಪ್ರಯಾಣ ಮಾಡಲೇಬೇಡಿ.
ಕಾಡಿನಲ್ಲಿ ಹುಷಾರಾಗಿರಿ
ಕಾಡಿಗೆ ಪ್ರವಾಸ ಹೋದರೆ, ಟ್ರೆೆಕ್ಕಿಿಂಗ್ ಕೈಗೊಂಡರೆ ಇನ್ನೂ ಜಾಗರೂಕವಾಗಿರುವುದು ಅಗತ್ಯ. ಕಾಡಲ್ಲಿ ಬೆಂಕಿ ಹಾಕಬೇಡಿ. ಇದರಿಂದ ಕಾಡು ಪ್ರಾಣಿಗಳು ಹಾಗೂ ಅಮೂಲ್ಯ ವೃಕ್ಷ ಸಂಪತ್ತಿಗೆ ಹಾನಿಯಾದೀತು. ಕಾಡಿನ ಪ್ರಾಣಿಗಳನ್ನು ಕೆಣಕಲು ಹೋಗಬೇಡಿ. ಕಾಡು ಪ್ರಾಣಿಗಳ ನೆಮ್ಮದಿಗೆ ಭಂಗ ತರಲೇಬೇಡಿ. ಕಾಡಿನ ನಿರ್ಮಲ ಪರಿಸರವನ್ನು ಕಲ್ಮಶಗೊಳಿಸಲು ಮುಂದಾಗಬೇಡಿ.
ಚಾರಣಿಗರಿಗೆ ಕಿವಿಮಾತು
ಸಾಮಾನ್ಯವಾಗಿ ಚಾರಣ ಮಾಡುವ ಹುಮ್ಮಸ್ಸು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಪೂರ್ವಸಿದ್ಧತೆಯ ಕೊರತೆ ಅವರನ್ನು ಕಾಡುತ್ತದೆ. ಚಾರಣವನ್ನು ಆರಂಭಿಸಿದವರು, ಯಾವುದೋ ತಾಣದಲ್ಲಿ ಸಿಲುಕಿದ್ದಾಗ ಆ ವಸ್ತು ತಂದರೆ ಚನ್ನಾಗಿತ್ತು, ಈ ವಸ್ತುವನ್ನು ತಂದಿದ್ದರೆ ಚನ್ನಾಾಗಿತ್ತು, ಇದನ್ನು ತರಬಾರದಿತ್ತು, ಅದನ್ನು ತರಬಾರದಿತ್ತು ಎಂದುಕೊಳ್ಳುತ್ತಾರೆ. ಈ ಕಾರಣದಿಂದಾಗಿ ಚಾರಣ ಕೈಗೊಳ್ಳುವವರು ಸಮರ್ಪಕವಾಗಿ ಯೋಜನೆಯನ್ನು ಕೈಗೊಳ್ಳುವ ಅಗತ್ಯವಿದೆ. ಚಾರಣ ಮಾಡುವವರು ತಮ್ಮ ಬ್ಯಾಗಿನಲ್ಲಿ ಒಂದು ಹಗ್ಗ, ಅಗತ್ಯದ ಹಾಗೂ ಅನಿವಾರ್ಯದ ಸಂದರ್ಭದಲ್ಲಿ ಬಳಕೆಯಾಗಲು ಕತ್ತಿ ಅಥವಾ ಚಾಕುವಿನಂತಹ ಒಂದು ಆಯುಧ, ರಾತ್ರಿಯಾದರೆ ನಿಂತ ಜಾಗದಲ್ಲಿಯೇ ಉಳಿದುಕೊಳ್ಳಲು ಅನುಕೂಲವಾಗುವಂತಹ ಭಾರರಹಿತ ಟೆಂಟ್ ಇತ್ಯಾದಿಗಳು ಜತೆಯಲ್ಲಿರಲಿ.
ಮೆಡಿಕಲ್ ಕಿಟ್ ಜತೆಯಲ್ಲಿರಲಿ
ಪ್ರವಾಸ ಹೋಗುವವರು ಪ್ರಮುಖವಾಗಿ ಕೈಗೊಳ್ಳುವ ಮುನ್ನೆಚ್ಚರಿಕಾ ಕಾರ್ಯಗಳಲ್ಲಿ ಇದೂ ಒಂದು. ಮೆಡಿಕಲ್ ಕಿಟ್ ಇಟ್ಟುಕೊಳ್ಳಲೇಬೇಕು. ಬ್ಯಾಾಂಡೇಜ್ ವಸ್ತುಗಳು, ನೋವು ನಿವಾರಕಗಳು, ಥಂಡಿ, ಜ್ವರ ಸೇರಿದಂತೆ ಹಲವು ಸೂಕ್ಷ್ಮ ಖಾಯಿಲೆಗಳಿಗೆ ಅಗತ್ಯವಾದಂತಹ ಔಷಧಿಗಳು ಮೆಡಿಕಲ್ ಕಿಟ್‌ನಲ್ಲಿ ಇರಲಿ.
ಆಹಾರ ಕಟ್ಟಿಕೊಳ್ಳಿ
ಒಂದು ದಿನದ ಪ್ರವಾಸವಿದ್ದರೆ, ತೀರಾ ಕಾಡು, ಜಲಪಾತಗಳು, ಜನವಸತಿ ರಹಿತ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವುದಿದ್ದರೆ ಆಹಾರವನ್ನು ಕಟ್ಟಿಕೊಂಡು ಹೋಗಿ. ಬುತ್ತಿಯೋ, ಊಟವೋ, ಅಥವಾ ಇನ್ಯಾವುದೋ ಹೊಟ್ಟೆ ತುಂಬುವಂತಹ ತಿಂಡಿಗಳನ್ನು ತೆಗೆದುಕೊಂಡು ಹೋಗಿ. ತರಹೇವಾರಿ ಸ್ನ್ಯಾಕ್‌ಸ್‌ಗಳ ಬದಲು ಹಸಿವು ಕಡಿಮೆ ಮಾಡುವ ಆಹಾರಗಳಿಗೆ ಆದ್ಯತೆ ನೀಡಿ. ಸಾಕಷ್ಟು ನೀರನ್ನೂ ಇಟ್ಟುಕೊಳ್ಳಿ. ದೈಹಿಕ ಶ್ರಮ ಬಯಸುವಂತಹ ತಾಣಗಳಲ್ಲಿ ಕುಡಿಯುವ ನೀರಿನ ಬಳಕೆ ತೀವ್ರವಾಗುತ್ತದೆ. ಆದ್ದರಿಂದ ನೀರನ್ನು ಹೆಚ್ಚು ತೆಗೆದುಕೊಂಡು ಹೋದಷ್ಟೂ ಒಳ್ಳೆಯದು.
ಇಂತಹ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪ್ರವಾಸ ಮಾಡಿದಾಗ ಪ್ರವಾಸ ಸಂತೋಷದಾಯಕವಾಗಿರುತ್ತದೆ. ಇಲ್ಲವಾದಲ್ಲಿ ಪ್ರವಾಸ ಎನ್ನುವುದು ಪ್ರಯಾಸವೇ ಆಗಿ, ಯಾಕಾದರೂ ಪ್ರವಾಸ ಕೈಗೊಂಡೆವೋ ಎನ್ನುವಂತಾಗಬಹುದು. ಸ್ಪಷ್ಟ ಯೋಜನೆಯಿದ್ದರೆ ಪ್ರವಾಸವನ್ನು ಅತ್ಯಂತ ಖುಷಿಯಿಂದ ಸವಿಯಬಹುದು. ಇಲ್ಲವಾದರೆ ಪ್ರವಾಸದ ಮಜಾವೇ ಹಾಳಾಗಿ ಬಿಡಬಹುದು.
ಪ್ರವಾಸ ಪರಿಸರಸ್ನೇಹಿಯಾಗಿರಲಿ
ನೀವು ಮಾಡುವ ಪ್ರವಾಸ ಪರಿಸಕ್ಕೆ ಪೂರಕವಾಗಿರಲಿ. ಪರಿಸರವನ್ನು ಹಾಳುಮಾಡುವಂತಹ ಸಂಗತಿಗಳಿಗೆ ಕಟ್ಟುನಿಟ್ಟಾಗಿ ತಡೆ ಹಾಕಿಕೊಳ್ಳಿ. ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ತ್ಯಜಿಸಿ. ಪರಿಸರ ನಮಗೆ ಪರಿಶುದ್ಧವಾಗಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ಬದುಕು ಕಟ್ಟಿಕೊಡಬಲ್ಲದು. ನೀವು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಎಲ್ಲೆೆಂದರಲ್ಲಿ ಪ್ಲಾಸ್ಟಿಕ್ ಎಸೆಯುವ ಕಾರ್ಯವನ್ನು ಮಾಡಬೇಡಿ. ಒಂದು ವೇಳೆ ಅನಿವಾರ್ಯವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ಹೋದರೂ ಪ್ರವಾಸಿ ತಾಣಗಳಲ್ಲಿ ಅದನ್ನು ಎಸೆಯದೇ ಮರಳಿ ಬರುವಾಗ ತೆಗೆದುಕೊಂಡು ಬನ್ನಿ. ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡಿ. ಪ್ರವಾಸಿ ತಾಣದಲ್ಲಿ ಮದ್ಯ ಸೇವನೆಯಿಂದ ದೂರವಿರಿ. ಕೂಗಾಟ, ಅಬ್ಬರ ಇತ್ಯಾಾದಿಗಳಿಗೆ ಕಡಿವಾಣ ಹಾಕಿ.