Wednesday, September 23, 2009

ಒಂದು ಕವನ

ಗೆಳತಿ ಒಬ್ಬಳು ಕಳಿಸಿದ ಕವನವ ನೀವೂ ಓದಲೆಂದು ನಿಮ್ಮ ಮುಂದೆ ಇಡುತ್ತಿದ್ದೇನೆ .. ಓದಿ.. ಅನಿಸಿಕೆ ತಿಳಿಸಿ.

ಭಾವನಾ..
ಗೆಳೆಯ,..
ಏಕೆಂದು ತಿಳಿಯೆ ನಾನು..!!
ದಿನವೂ ಭಾವನೆಗಳ ಮೂಡಿಸುತ್ತಿದ್ದ
ಕವನಗಳೇ ಕಾಣುತ್ತಿಲ್ಲ..
ಕಣ್ಣಂಚಲಿ . . . . . . . . . . .

ನಿತ್ಯ, ನನ್ನ
ನಡು ರಾತ್ರಿಯಲ್ಲಿ ಕೂಡ ಕಾಡುತ್ತಿದ್ದ
ನಿನ್ನ ನೆನಪೇ ಇಲ್ಲ...
ಕನಸಲಿ . . . . . . . . . . . .

ಪ್ರತಿಕ್ಷಣ
ನನ್ನೊಳಗೆ ನಾನಾಗಿದ್ದ ನಿನ್ನ ನೆನಪೇ
ಬರುತ್ತಿಲ್ಲ.. ನನ್ನ ಈ
ಮನದಲಿ. . . . . . . . . . . . . . .

ಅನುದಿನ,
ನನ್ನ ಜೀವವೆನ್ದುಕೊಂಡಿದ್ದ
ನಿನ್ನ ಹೆಸರೆ ಸಿಗುತ್ತಿಲ್ಲ
ನನ್ನುಸಿರಿನಲಿ . . . . . . . . . .

ಅದಕ್ಕೆ,,
ನೀ ನನ್ನಿಂದ ದೂರವಾಗುವ
ಭಯ ಆವರಿಸಿದೆ, ಪ್ರತಿಕ್ಷನ
ನನ್ನಲಿ.. . . . . . . . . . . . . .

ಇದನ್ನು ಬರೆದಿದ್ದು... : ಜಾನು ಮಗೆಗಾರ್

ಕವಯಿತ್ರಿಯ ಚಿಕ್ಕ ಪರಿಚಯ : ಈಕೆ ಓರ್ವ ಯುವ ಬರಹಗಾರ್ತಿ.. ಉತ್ತರ ಕನ್ನಡದ ಹಳ್ಳಿಯೊಂದರ ಹುಡುಗಿ.. ಬರೆದು ಮುಚಿಡುವ ಚಟ. ಆಗಾಗ ಬರೆದರೂ ಭಾವನೆಗಳ ಸ್ಪಂದನ ತುಂಬ...ಹೆಚ್ಚು... ತುಂಬ ಒತ್ತಾಯದ ನಂತರ ನಾ ಪಡೆದ ಕವನ ಇದು.. ನೀವೂ ಓದಲೆಂದು ಇಲ್ಲಿ ಇಟ್ಟಿದ್ದೇನೆ.. ಅನಿಸಿದ್ದು ಬರೆಯಿರಿ..
ನಿಮ್ಮವ : ವಿನಯ..

Wednesday, September 16, 2009

ನನ ಊರು

ನನ್ನ ಊರು ದಂಟಕಲ್
ದಂಟಕಲ್ ಬಗ್ಗೆ ವೀಕಿಪೀಡಿಯಾದಲ್ಲಿ ಬರೆದಿರುವ ಸಾಲುಗಳು
Dantkal

Dantkal is a village near Sirsi, North Kanara , State of Karnataka, India. All people staying there are Havyaka Brahmins, and the village is only connected with roads from Sirsi and Siddapur. This place is famous for "SHEDI" So this place is known as SHEDI Dantkal. The place is on the shore of river "Aghanashini". "Agha" means "sin" and "Nashini" means "remover".

This article related to a location in Karnataka is a stub. You can help Wikipedia by expanding it.
Places to visit near by: Temples: "marikamba temple" Sirsi, "Ganesha temple" Heroor, "mallikarjuna temple Balur", "Sangameshwara in Balur sangama", "Ganesha temple Balur", "Kalika bhavani temple Kansur"... Other places: "Teppesavalu kallu","kote gudde","sarkallu","Haklu"(where people leave their cattles in "Deepavali"),etc...

Water Falls " Unchalli Falls", " Ilimane Falls", " Bennehole Falls", ...ETC. YANA is one of the famous place...
For More Details Please contect MRIGHASHIRA TRAVEL AGENCES. Contect NO. KRISHNAMOORTI DIXIT - 9164626299.

Retrieved from "http://en.wikipedia.org/wiki/Dantkal"

Friday, September 11, 2009

ನೀವು ಕಂಡಿರ? ನೀವು ಕಂಡಿರಾ?

ಚಿವ್ ಚಿವ್ ಗುಬ್ಬಿ ನಿ ಎತ್ತ ಹೋದೆ?

ದಿನದಿನ ನಿನ್ನ ನ ಕಾಣದಾದೆ.

ನಮ್ಮ ಮೊಬೈಲ್ ಹಾವಳಿ ನಿನ್ನ ಜೀವಕ್ಕೆ

ಕುತ್ತಾಯಿತ? ಇಲ್ಲ ನಾವು ನಿನ್ನ ಕತ್ತು ಕೊಯ್ದೇವ?

ಎತ್ತ ಹೋದೆ? ಚಿಕ್ಕಂದಿನಲ್ಲಿ ಹಳೆಯ ದೊಡ್ಡ

ಕೊಟ್ಟಿಗೆಯ ಮೇಲೆ ಅಲ್ಲೆಲ್ಲೋ ಗುಡು ಕತ್ತೂತ್ತೀದ್ದೆ

ಈಗ ನಿನ ಚಿವ್ ಚಿವ್ ದನಿ ಇಲ್ಲ..

ಮಕ್ಕಳ ಬಾಯಲ್ಲಿ ತ ತಾ ಗುಬ್ಬಿ ತವನ್ ಗುಬ್ಬಿ

ಎಂಬೋ ಹಾಡು ಇಲ್ಲ..

ಈಗಿನ ಮಕ್ಕಳಿಗೆ ಗುಬ್ಬಿ ಅಂದರೇನು ಅಂತ ಗೊತ್ತಿಲ್ಲ.

ಹೌದು ನೀನು ಹೋಗಿದ್ದದ್ರು ಎಲ್ಲಿಗೆ?

ಬಾ ಮತ್ತೆ ಮೆಲ್ಲಗೆ. ನಮ್ಮ ಮನೆಯ ಮಹಡಿಯಲ್ಲೋಮ್ದು

ಮರದ ಮೆತ್ತನೆಯ ಗುಡು ಇದೆ.. ಅದು ಖಾಲಿ ಇದೆ.

ಯಾವಾಗ ಬರ್ತೀಯ? ಯಾಕೋ... ಚಿಕ್ಕಂದಿನಲ್ಲಿ ಪೆರ್ಲ ಹಣ್ಣು

ತಿನ್ನುವಾಗ ಇದು ಗುಬ್ಬಿ ತಿಮ್ದಿದ್ಇದೆ ಅನ್ನುತ್ತಿದ್ದಿವಿ. ಈಗ ಮಕ್ಕಳಿಗೆ ಆ ಮಾತೆ ಗೊತ್ತಿಲ್ಲ.

ಯಾಕೋ ಇತ್ತೀಚಿಗೆ ಗುಬ್ಬಿ ತಿಂದ ಹಣ್ಣು ತಿನ್ನುವ ಆಸೆ..

ನಾವು ಗುಬ್ಬಿ ಎಂಜಲು ಅನ್ತ ಮಾಡ್ತಿವಿ.. ಈಗಿನ ಹುಡುಗರು ಕೇಳಿದ್ರೆ ಅದೇನು ಅಂತ ಕೇಳ್ತಾರೆ.

ಗುಬ್ಬಿಯೇ ಕಾಣುತ್ತಿಲ್ಲ.. ಈ ಮುನ್ದೆವು ಗಳಿಗೆ ಗುಬ್ಬಿ ಎಂಜಲು ಏನ್ ಗೊತ್ತು?

ಮತ್ತೆ ಬಾ ... ನಾನು ಪೇಪರ್ ಮೂಲಕ ಹುದುಕಿಕೊವಿ ಅಂತ ಜಾಹಿರಾತು ಹಾಕುವ ಮುನ್ನ..

ಬರ್ತೀಯ? ಕಾಯುತ್ತಿದ್ದೀನಿ..

Tuesday, September 8, 2009

ಅತ್ರಿಯ ನೆನಪಿನಲ್ಲಿ

ಯಾಕೋ ಗೊತ್ತಿಲ್ಲ ಹಾಡು ಅಂದ ತಕ್ಷಣ ಬಿಟ್ಟು ಬಿಡದಂತೆ ಅತ್ರಿ ನೆನಪಾಗುತ್ತಾನೆ.
ಭಾವಗೀತೆಗಳ ಸರದಾರ ಅತ್ರಿಯ ಒಂದೊಂದು ಹಾಡು ಸುಕೋಮಲ. ಸುಂದರ.
ಆತನ
ಏಳೆನ್ನ ಮನದನ್ನೆ,
ಹಾಡು ಹಳೆಯದಾದರೇನು,
ಪ್ರೀತಿ ಇಲ್ಲದ ಮೇಲೆ
ಈ ಮುಂತಾದ ಹಾಡುಗಳಿವೆಯಲ್ಲ ಅವನ್ನು ಕೇಳುತ್ತಿದ್ದರೆ ಆಗುವ ಅನುಭವವೇ ಅದ್ಬುತ ..
ಅವು ಒಂದು ಸುಂದರ ಲೋಖಕ್ಕೆ ಸರ್ರನೆ ಒಯ್ದು ಬಿಡುತ್ತವೆ.
ಗಣೇಶ್ ವಿಜಯಕುಮಾರ ಅತ್ರಿ ಎಲ್ಲೋ ಒಂದೊಂದು ಸಲ ಪಿ ಬಿ ಯಂತೆ ಹಾಡುತ್ತಿದ್ದ ... ಆತನ ಹಾಡುಗಳನ್ನು ಕೇಳಿದರೆ ಪಿ. ಬಿ.ಯನ್ನು ಕೇಳಿದಂತಾಗುತ್ತಿತ್ತು. ಮತ್ತೊಮ್ಮೆಇಲ್ಲ ಹಾಗಲ್ಲ ಅನ್ನಿಸಿಬಿಡುತ್ತಿದ್ದ..
ಪಿ. ಬಿ.ಯ ಹಲವಾರು ಜನಪ್ರಿಯ ಹಾಡುಗಳನ್ನು ರಿಮೇಕ್ ಮಾಡಿದ್ದ ಅತ್ರಿ ಅವನಂತೆ ಹಾಡಲು ಯತ್ನಿಸಿದ್ದ.
ಹಳೆಯ ಮಧುರ ಹಾಡುಗಳನ್ನು ಹಾಡಲು ಯತ್ನಸಿ ಕೆಲವೊಮ್ಮೆ ಯಶಸ್ವಿಯೂ ಆಗಿದ್ದ.
ಪಿ.ಬಿ.ಯಂತೆ ಹಾಡುವಾಗ ಕೆಲವೊಮ್ಮೆ ಸೋತಿದ್ದೂ ಇದೆ. ಒಳ್ಳೆಯ ಹಾಡುಗಳನ್ನು ಹಾಳು ಮಾಡಿದ್ದೂ ಇದೆ.
ಪಿ.ಬಿಯಂತೆ `ರ'ಉಚ್ಛಾರದ ಬದಲು `ದ'ಉಚ್ಛಾರ ಮಾಡಿದ್ದೂ ಇದೆ.
ಆದರೆ ಭಾವಗೀತೆಗಳೆಂದರೆ ಅವನದ್ದೇ ಖದರು.

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ..?
ಇರಬಹುದು
ಏಳೆನ್ನ ಮನದನ್ನೆ.. ಏಳು ಮುದ್ದಿನ ಕನ್ನೆ ಇರಬಹುದು..
ಆತನ ನಂತರ ಅದೆಷ್ಟೇ ಮಂದಿ ಈ ಹಾಡನ್ನು ಹಾಡಿದ್ದರೂ ಕೂಡ ಅತ್ರಿ ಹಾಡಿದ ಧಾಟಿಯೇ ನೆನಪಾಗುತ್ತವೆ.

ಆದರೆ ವಿಧಿಯಾಟವೇ ಬೇರೆ ಇದೆ ನೋಡಿ....
ಸೌಮ್ಯನದಿ ತುಂಗೆ ಆತನನ್ನು ಬಲಿತೆಗೆದುಕೊಂಡಿದೆ.
ಮಗನ ಆಟದ ಚೆಂಡು ಹೆಕ್ಕಲು ಹೋಗಿ ಅತ್ರಿಯೊಡನೆ ಕುಟುಂಬವೇ ಜಲಸಮಾಧಿಯಾದಾಗ ಆತನ ಫ್ಯಾನ್ಸ್ಗಳಿಗೆಲ್ಲ ಒಮ್ಮೆ ಅದೆಷ್ಟು ಶಾಕ್ ಆಗಿರಬೇಡ..?

ಆ ಮೋಡಿಗಾರ ಬದುಕಿದ್ದಿದ್ದರೆ ಇನ್ನೆಸ್ಟು ಸಹಸ್ರ ಹಾಡು ಹಾಡುತ್ತಿದ್ದನೋ..
ವಿಧಿ ಯಾಕೋ ಅವನ ಮೇಲೆ ಮುನಿದಿತ್ತು. ತುಂಗೆಯ ತೀರದಲ್ಲಿ ಹಾಡಲು ಹೋದ ಅತ್ರಿ ಮತ್ತೆ ಮರಳಲಿಲ್ಲ.
ಯಾವಾಗಲೋ ಹಾಡಲ್ಲಿ ಆತ ಹಾಡಿದ್ದ
ವೀರ ಖಡುಗವ ಝಾಳಪಿಸುವ ವೀರ ನಾನಾದೊಡೆ 
ಕಾವೇರಿ ತುಂಗೆಯರ ಮಡಿಲಲ್ಲಿ ಮಡಿವೆ ಅಂತ.. 
 ಎಂಥ ವಿಪರ್ಯಾಸ ಅಲ್ಲವಾ .. ಆತ ಗತಪ್ರಾಣನಾಗಿದ್ದು ಅಲ್ಲೇ..

ಗೆಳತಿ ದಿವ್ಯ ಹೇಳುತ್ತಾಳೆ- ' ವಿನು' ಅತ್ರಿ ಇದ್ದಿದ್ದರೆ ಮನೆಗೆ ಕರೆದುಕೊಂಡು ಬಂದು ಹಾಡಿಸುತ್ತಿದ್ದೆ..
ಅವ ಅಂದ್ರೆ ಅಷ್ಟು ಇಷ್ಟ. ಅವ ಸಾಯುವಾಗ ನಾನು ೧೦ ತರಗತಿ..
ಸತ್ತದ್ದು ಕೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದೆ' ಅಂತ..

ಅವನಂತೆ ಹಾಡುವ ಅಣ್ಣ ಗಿರೀಶ ಕೂಡ ಅಷ್ಟೆ ಆತನ ಸಾವಿನಿಂದ ಮಂಕಾಗಿ ಕೂತಿದ್ದ.
ಅತ್ರಿಯನ್ನು ಪದೆ ಪದೆ ಆತ ಮಿಸ್ ಮಾಡಿಕೊಂಡಿದ್ದ ಸಂದರ್ಭಗಳನ್ನು ನಾನು ಕಂಡಿದ್ದೇನೆ.

ಅತ್ರಿ ಹಾಡಿದ 
ಎದ್ದೇಳು ಮಂಜುನಾಥ 
ಏಳು ಬೆಳಗಾಯಿತು 
ಅನ್ನೋ ಹಾಡು ಕೇಳಿರಬೇಕಲ್ಲಾ... ಕೇಳಿಯೇ ಇರ್ತೀರಾ..
ಅಷ್ಟು ಚನ್ನಾಗಿದೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನು ತನ್ನ ಸುಮಧುರ ಕಂಠದ ಮೂಲಕ ಏಳಿಸುವ ಹಾಡು ಇಂದಿಗೂ ಕೇಳುತ್ತಲೇ ಇದೆ.
ಅತ್ರಿಯೊಂಥರಾ ಕನ್ನಡದ ಸುಬ್ಬುಲಕ್ಷ್ಮಿ ಇದ್ದಹಾಗೆ ಅಂದರೆ ತಪ್ಪಿಲ್ಲ.
ಸುಬ್ಬುಲಕ್ಷ್ಮಿಯ ಸುಪ್ರಭಾತ ಎಷ್ಟು ಫೇಮಸ್ಸೋ ಕನ್ನಡದ ಅದ್ದೇಳು ಮಂಜುನಾಥ ಕೂಡ ಅಷ್ಟೇ ಫೇಮಸ್ಸು..
ಆ ಹಾಡು ಅದೆಷ್ಟು ಉತ್ಸಾಹದ ಸಂಕೇತ ಗೊತ್ತಾ.. ಕೇಳಲು ಅದು ಭಕ್ತಿಗೀತೆ.. ಆದರೆ ಚಿಂತನೆಗೆ ಬಿದ್ದರೆ ಅದು
ಅಲೌಕಿಕ ಅನುಭೂತಿ ಕೊಡುತ್ತದೆ. 

ಶಿವರುದ್ರಪ್ಪ, ಕುವೆಂಪು, ನಿಸ್ಸಾರರಂತಹ ಕನ್ನಡದ ಮೇರು ಕವಿಗಳ ಭಾವಗೀತೆಗಳಿಗೆ ಜೀವ ಕೊಟ್ಟ ಸಾಧಕ ಈತ.
ಅವರ ಅದೆಷ್ಟೋ ಕವನವನ್ನು ಹಾಡಿ ಅಮರಗೊಳಿಸಿದ ಖ್ಯಾತಿ ಇವನದ್ದು. 

ಕನ್ನಡದ ಗೌರಿ ಗಣೇಶ ಎನ್ನುವ ಸಿನೆಮಾದಲ್ಲೂ ಹಾಡಿದ್ದಾನೆ.


ಅಂತಹವನು ಅಕಾಲಿಕವಾಗಿ ಸತ್ತನಲ್ಲ.... ಛೆ..ಈಗಲೂ ... ಮರೆಯಲಾರೆ...
ಆತನ ಹಾಡುಗಳಷ್ಟೇ ಆತನ ಅಕಾಲಿಕ ಮರಣವೂ ಕಾಡುತ್ತಿದೆ. ಕಾಡುತ್ತದೆ..

ಅತ್ರಿ ಮತ್ತೆ ಹುಟ್ಟಿ ಬಾ...
ಗಿರೀಶ್ , ದಿವ್ಯ, ನಾನು ಎಲ್ಲರು ನಿನ್ನ ತುಂಬ ಮಿಸ್ ಮಾಡ್ಕೋತಿದ್ದಿವಿ...
ನಾವಷ್ಟೇ ಅಲ್ಲ... ನಮ್ಮಂತಹ ಅದೆಷ್ಟೋ ಅತ್ರಿ ಭಕ್ತರು ಕಾಯ್ತಾ ಇದ್ದೀವಿ..
ಮತ್ತೆ ಬಾ ಅಭಿನವ ಪಿ...ಬಿ...


Wednesday, September 2, 2009

ಉಂಚಳ್ಳಿ ಜಲಪಾತದ ಒಡಲಿಗೆ

ಅಲ್ಲಿಗೆ ನಾವು ಹೋಗಿದ್ದು ೮ ಜನ.
ನಾಲ್ವರು ಹುಡುಗರು .. ನಾಲ್ವರು ಹುಡುಗಿಯರೂ.
ಭಲೇ ಖುಷಿಯೋದನೆ ಜಿಪ್ ಏರಿ ಹೋದವರು ಕಬ್ಬರಿದಿದ್ದು ಬಹಳವೇ.
ದಾರಿಯಲ್ಲಿ ಜೋತೆಗಿದ್ದುದು ಹಾಡು ಹಸೆ ..

ನಸುಕಿನ ಚುಮು ಚುಮು ಮುಂಜಾನೆ ಹೊರಟು ಅಲ್ಲಿಗೆ ತಲುಪಿದ್ದು ಮಧ್ಯಾನ್ನದ ವೇಳೆ.
ಬೇಸಿಗೆಯ ಪರಿಣಾಮವೋ ಏನೋ ಅಸ್ಟು ನೀರೆ ಇರ್ಲಿಲ್ಲ. ಆದರೂ ನಮ್ಮ ಖುಷಿಗೆ ಪಾರವಿರಲಿಲ್ಲ..
ಆದರು ಬಂದಿದ್ದೀವಲ್ಲಾ .. ಮಾಡುವುದು ಏನು ಗೊತ್ತಾಗದೆ ,
ಜಲಪಾತದ ಬುಡಕ್ಕೆ ಹೋಗೋದು ಅಂತ ಅಂದುಕೊಂಡೆವು ..

ಸುತ್ತು ಬಳಸಿನ ಹಾದಿ.. ಅಂಕು, ಡೊಂಕು..
ಹೇಗೋ ಎದ್ದು ಬಿದ್ದು ಬುಡ ತಲುಪಿದಾಗ ಸಮಾಧಾನದ ಬಿಸಿಯುಸಿರು..
ಹೊಟ್ಟೆಯಲ್ಲಿ ಇಲಿಗಳು ಕಣ್ಣಾಮುಚ್ಚಾಲೆ ಆಡಿದಂತಹ ಅನುಭವವೂ ಸೇರಿ ತಳಮಳ..

ಕಿತ್ತು ಬರುವ ಬೆವರು.. ಸೆಖೆಯ ಬಿಸಿಯುಸಿರು..
ತಡ ಮಾಡಲಿಲ್ಲ .. ನೀರಿಗೆ ಇಳಿದೆಬಿಟ್ಟೆವು.. ತಂಪು ತಂಪು..
ಚಳಿ ಚಳಿ .. ಹಿತ ಹಿತ.. ನಾನು ಶ್ರೀನಂದನ ಸೀದಾ ಈಜಿಗೆ ಬಿದ್ದೆವು..

ಜೊತೆಯಲ್ಲಿದ್ದ ವಿಜಯ ಹುಮ್ಮಸ್ಸು ತೋರಲಿಲ್ಲ.. ಹುಡುಗಿಯರು ಸುಮ್ಮನಿದ್ದರು..
ನಮಗೆ ಖಬರಿರಲಿಲ್ಲ.. ಉಂಚಳ್ಳಿಯ ಗುಂಡಿಯಾಳವನ್ನೊಮ್ಮೆ ಹುಡಕಲೇಬೇಕೆಂಬ ಹುಚ್ಚು ಆಸೆ..
ಜಲಪಾತದ ಗುಂಡಿಯ ತಳ ಕಾಣಲಿಲ್ಲ.ಆಳವೋ ಆಳ.

ಮುಳುಗು ಹಾಕಿದೆವು.. ಸೆಳವೂ ಇತ್ತು. ತೊಂದರೆ ಏನು ಆಗಲಿಲ್ಲ.
ಇನ್ನು ಹುಡುಗೀರಂತು ಜಲಪಾತದ ನೀರಿಗೆ ತಲೆ ಕೊಟ್ಟಿದ್ದರು.. ಜಲಪಾತವನ್ನು ಏರೋಣವೇ..?
ಪ್ರಶ್ನೆ ಮೂಡಿದರೂ ದುಸ್ಸಾಹಸ ಬ್ಯಾಡ ಕಣ್ಲಾ ಎಂದು ನಮ್ಮ ಸಿಕ್ಸ್ತ್ ಸೆನ್ಸ್ ಗಮಟೆ ಹೊಡೆಯಿತು.. ಬಿಟ್ಟೆವು..

ಕೊನೆಗೆ ವಿಜಯ ಜಲಪಾತವನ್ನು ನೀರು ಬೀಳುವಲ್ಲಿ ಹತ್ತಲು ಪ್ರಯತ್ನಿಸಿದ.
ಆಗಲಿಲ್ಲ.. ಸುಸ್ತಾಗಿ ವಾಪಸ್ಸಾದ. ನಾವು ನಕ್ಕೆವು.
ಅಸ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿತ್ತು.. ಒಯ್ದಿದ್ದ ಬುತ್ತಿಯನ್ನು ಬಾಯಿಗಿತ್ತೆವು.

ಮನವರಳಿತು... ನಡುವೆ ಆ ಕಣಿವೆಯಾಳದಲ್ಲಿ ಹುಡುಗೀರು ಅನ್ತ್ಯಾಕ್ಕ್ಷರಿ ಶುರು ಮಾಡಿದ್ರು.
ನಮ್ಮ ಗುಂಪಿಗೆ ಮತ್ತೆ ಎಲ್ಲಿಯದೋ ಹಲವರ ಗುಂಪು ಜಮ ಆಯಿತು..
ನಕ್ಕು ನಲಿದು ಅಲ್ಲಿಂದ.. ವಾಪಸ್ಸ್ಸಗುವ ಹೊತ್ತಿಗೆ ಮನ ಭಾರ .. ಭಾರ...