ಅಘನಾಶಿನಿಯ ಕುರಿತು ನಾನು ಚಿಕ್ಕಂದಿನಲ್ಲಿ ಒಂದು ಕವನ ಬರೆದಿದ್ದೆ. ಯಾಕೋ ನಿಮ್ಮ ಮುಂದೆ ಹೇಳಿಕೋ ಬೇಕು ಅನ್ನಿಸ್ತಿದೆ. ಓದಿ ...
ಅಘನಾಶಿನಿ
ಅಘನಾಶಿನಿ ಅಘನಾಶಿನಿ ಪಾಪಗಳ ನಾಶಿನಿ
ಸರ್ವ ಜನರ ಪಾಪಗಳನು ತೊಳೆಯುವ ವಾಹಿನಿ..|
ದಟ್ಟ ಕಾನನದಲ್ಲಿ ಜನಿಸಿ ಅರಬ್ಬಿ ಜಲದಿ ಸೇರಲು
ದಿಟ್ಟತನದಿ ಹರಿಯುವ ಜೀವದ ವಾಹಿನಿ ..|
ತೆಂಗು ಅಡಿಕೆ ಬಾಳೆಗಳಿಗೆ ಮಾವು ಅಪ್ಪೆ ಮರಗಳಿಗೆ
ತಂಪುನೀರು ನೀಡುವ ಅಮರ ಅಮರ ವಾಹಿನಿ|
ಬರಡನ್ನು ಹಸಿರು ಮಾಡಿ ಸಾವಿಗೆ ಅಮೃತವ ನೀಡಿ
ಜನರ ಬದುಕು ಹಸನು ಮಾಡುವ ಜೀವ ಜನದ ವಾಹಿನಿ..||
ಉಂಚಳ್ಳಿಯ ಘಟ್ಟದಲಿ ಹೆಮ್ಮೆಯಿಂದ ಇಳಿದುಬಂದು
ಜಲಪಾತವ ಸೃಷ್ಟಿಸಿರುವ ಸಕಲ ಸಮ್ಮೋಹಿನಿ..||
ಋಷಿಗಳಿಗೆ ನೆರಳಾಗಿ ಕವಿಗಳಿಗೆ ಸ್ಪೂರ್ತಿಯಾಗಿ
ರೈತರಿಗೆ ಉಸಿರಾಗುವ ಎಲ್ಲರ ಅಘನಾಶಿನಿ..||
ತನ್ನ ಒಡಲು ಬರಿದು ಮಾಡಿ ಜೀವ ಜಲವ ಖಾಲಿ ಮಾಡಿ
ಶಿರಸಿಗೆ ನೀರು ಕೊಡುವ ಮಹಾತ್ಯಾಗದಾಯಿನಿ..||
ಅಘನಾಶಿನಿ ಅಘನಾಶಿನಿ ನಿನಗಿದೋ ವಂದನೆ
ಲೋಕೋತ್ತಮ ಕಾರ್ಯಗಳಿಂದ ವಿಶ್ವದ ಅಭಿನಂದನೆ..||
+ ಚಿಕ್ಕಂದಿನ ಹುರುಪಲ್ವ ಹಾಗಾಗಿ ಬಹಳ ಮಜಾ ಅನುಭವಿಸಿ ಬರೆದಿದ್ದೆ.. ಬಹಳ ದಿನಗಳ ನಂತರ ಈ ಕವನ ಅದೆಲ್ಲೋ ಮೂಲೆಯಲ್ಲಿ ಬಿದ್ದುಕೊಂಡಿತ್ತು.. ಸಿಕ್ಕಿತು.. ನಿಮ್ಮ ಮುಂದೆ ಇಡೋಣ ಅಂತ.. ಬಹುತೇಕ ದಶಕಗಳ ಹಿಂದೆ ನನ್ನಲ್ಲಿನ್ನೂ ಕವನ ಹುಟ್ಟುವ ಸಮಯ.. ಆಗ ಬರೆದಿದ್ದ ಈ ಕವನ ನಿಮಗೆ ಬಾಲಿಶ ಅನ್ನಿಸಬಹುದು..ಆದರೂ ಓದಿ.. ಹೇಗಿದೆ ಹೇಳಿ..

ಹ್ಮ್..ಚೆನ್ನಾಗಿದೆ :)
ReplyDelete