Monday, August 31, 2009

ಮೂರು ಹನಿಕವನಗಳು

ನನ್ನವೆರಡು ಹನಿಕವನಗಳು ಇದೋ ನಿಮ್ಮ ಮುಂದೆ ...

1)ಸ್ವಗತ

ಗೆಳತಿ.....
ಸ್ವಗತದಲ್ಲೇ,
ನಿನ್ನ ನೆನಪು ಮಾಡಿಕೊಂಡು
ಕೊರಗಿ , ಸೊರಗಿ
ಇಂಚಿಂಚೆ ..
ಸ್ವ -ಗತಿಸುತ್ತಿದ್ದೀನೆ

ಹಾಗೆ ಮತ್ತೊಂದು ಕವನ ಇದೋ ನಿಮ್ಮೆದುರು.. ಓದಿ ಆನಂದಿಸಿ
 
2)ಒಳ್ಳೆಯವನಲ್ಲ ...
ಗೆಳತಿ...
ನಿನ್ನ ಪ್ರೀತಿಗೆ
ನಾನು ಒಳ್ಳೆಯವನಲ್ಲ..
ಖಂಡಿತ
ನಿಜ ಗೆಳತಿ..,
ಒಳ್ಳೆಯವ - ನಲ್ಲ..!!!!!

3) ಅದಲು-ಬದಲು
ನನ್ನನ್ನು ಬದಲಿಸಿದಳು
ಅವಳು ಬದಲಾದಳು |

ಅಪರೂಪಕ್ಕೆ ಬರೆದಂತಹ ಹನಿಗವಿತೆಗಳು.. ಕಾಲೇಜಿನ ಬೋರ್ಡಿನ ಮೇಲೆ  ಬರೆದಿಡುತ್ತಿದ್ದೆ.. ಹೀಗೆ ಬರೆದಿಟ್ಟಾಗ ಒಮ್ಮೆ ನಮ್ಮ ಕನ್ನಡ ಲೆಕ್ಚರ್ ವಸುಮತಿ ಮೇಡ್ಂ ಅವರು ಈ ಕವಿತೆ ಬರೆದದ್ದು ನಾನು ಅಂತ ಗೊತ್ತಿಲ್ಲದೆ.. ಚನ್ನಾಗಿದೆ.. ಆದರೆ ಬೋರ್ಡಿನ ಮೇಲೆ ಬರೆಯದಿದ್ದರೆ ಚನ್ನಾಗಿರ್ತಿತ್ತು.. ಅಂತ ಕಮೆಂಟಿಸಿದ್ದರು..  ಮಜಾ ಅನ್ನಿಸಿತ್ತು..

Saturday, August 29, 2009

ಅಘನಾಶಿನಿ

ಅಘನಾಶಿನಿಯ ಕುರಿತು ನಾನು ಚಿಕ್ಕಂದಿನಲ್ಲಿ ಒಂದು ಕವನ ಬರೆದಿದ್ದೆ. ಯಾಕೋ ನಿಮ್ಮ ಮುಂದೆ ಹೇಳಿಕೋ ಬೇಕು ಅನ್ನಿಸ್ತಿದೆ. ಓದಿ ...

ಅಘನಾಶಿನಿ
ಅಘನಾಶಿನಿ ಅಘನಾಶಿನಿ ಪಾಪಗಳ ನಾಶಿನಿ
ಸರ್ವ ಜನರ ಪಾಪಗಳನು ತೊಳೆಯುವ ವಾಹಿನಿ..|

 ದಟ್ಟ ಕಾನನದಲ್ಲಿ ಜನಿಸಿ ಅರಬ್ಬಿ ಜಲದಿ ಸೇರಲು
ದಿಟ್ಟತನದಿ ಹರಿಯುವ ಜೀವದ ವಾಹಿನಿ ..|

ತೆಂಗು ಅಡಿಕೆ ಬಾಳೆಗಳಿಗೆ ಮಾವು ಅಪ್ಪೆ ಮರಗಳಿಗೆ

ತಂಪುನೀರು ನೀಡುವ  ಅಮರ ಅಮರ ವಾಹಿನಿ|

ಬರಡನ್ನು ಹಸಿರು ಮಾಡಿ ಸಾವಿಗೆ ಅಮೃತವ ನೀಡಿ
ಜನರ ಬದುಕು ಹಸನು ಮಾಡುವ ಜೀವ ಜನದ ವಾಹಿನಿ..||

ಉಂಚಳ್ಳಿಯ ಘಟ್ಟದಲಿ ಹೆಮ್ಮೆಯಿಂದ ಇಳಿದುಬಂದು
ಜಲಪಾತವ ಸೃಷ್ಟಿಸಿರುವ ಸಕಲ ಸಮ್ಮೋಹಿನಿ..||

ಋಷಿಗಳಿಗೆ ನೆರಳಾಗಿ ಕವಿಗಳಿಗೆ ಸ್ಪೂರ್ತಿಯಾಗಿ
ರೈತರಿಗೆ ಉಸಿರಾಗುವ ಎಲ್ಲರ ಅಘನಾಶಿನಿ..||

ತನ್ನ ಒಡಲು ಬರಿದು ಮಾಡಿ  ಜೀವ ಜಲವ ಖಾಲಿ ಮಾಡಿ
ಶಿರಸಿಗೆ ನೀರು ಕೊಡುವ ಮಹಾತ್ಯಾಗದಾಯಿನಿ..||

ಅಘನಾಶಿನಿ ಅಘನಾಶಿನಿ ನಿನಗಿದೋ ವಂದನೆ

ಲೋಕೋತ್ತಮ ಕಾರ್ಯಗಳಿಂದ ವಿಶ್ವದ ಅಭಿನಂದನೆ..||


+ ಚಿಕ್ಕಂದಿನ ಹುರುಪಲ್ವ ಹಾಗಾಗಿ ಬಹಳ ಮಜಾ ಅನುಭವಿಸಿ ಬರೆದಿದ್ದೆ.. ಬಹಳ ದಿನಗಳ ನಂತರ ಈ ಕವನ ಅದೆಲ್ಲೋ ಮೂಲೆಯಲ್ಲಿ ಬಿದ್ದುಕೊಂಡಿತ್ತು.. ಸಿಕ್ಕಿತು.. ನಿಮ್ಮ ಮುಂದೆ ಇಡೋಣ ಅಂತ.. ಬಹುತೇಕ ದಶಕಗಳ ಹಿಂದೆ  ನನ್ನಲ್ಲಿನ್ನೂ ಕವನ ಹುಟ್ಟುವ ಸಮಯ.. ಆಗ ಬರೆದಿದ್ದ ಈ ಕವನ ನಿಮಗೆ ಬಾಲಿಶ  ಅನ್ನಿಸಬಹುದು..ಆದರೂ ಓದಿ.. ಹೇಗಿದೆ ಹೇಳಿ..