Wednesday, March 17, 2010

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು ದಿನ-೧

 ದಿನ-೧..
ಮೈಸೂರು ಮಾರ್ಗವಾಗಿ ಗುಂಡ್ಲುಪೇಟೆಗೆ...

ಕೆಲವು ದಿನಗಳ ಹಿಂದೆ ನಾವು ಮಿತ್ರರು ಸೇರಿ ಊಟಿಗೆ ಹೋಗೋಣ ಎಂಬ ಪ್ಲಾನ್ ಹಾಕಿಕೊಂಡೆವು..
ಆ ಪ್ರಕಾರವಾಗಿ ಪೆಬ್ರವರಿ ೧೮ ರಂದು ಸಂಜೆಯ ವೇಳೆಗೆ ರಾಘವ ನ ಜೊತೆ ನಾನು ಹೊರಟೆ..
ನಮ್ಮ ತಂಡದ ಸದಸ್ಯರಾದ ಕಿಟ್ಟು ಹಾಗು ಮೋಹನ ಮೊದಲೇ ಮೈಸೂರು ತಲ್ಲುಪಿದ್ದರು...
ನಾವು ಬೆಂಗಳೂರನ್ನು ಬಿಡುವ ವೇಳೆಗೆ ಬಾನಲ್ಲಿ ಸೂರ್ಯ ಇಳಿಯುತ್ತಿದ್ದ.. ಸಂಜೆ ೫ ಮೀರಿತ್ತು..
ರಾಘವನ ಮೋಟರ್ ಸೈಕಲ್ ಏರಿ ಹೊರಟೆವು.. ಮೈಸೂರಿನ ಕಡೆ ನಮ್ಮ ಪಯಣ ಬಲು ನಿಧಾನವಾಗಿ ಸಾಗಿತು.
ಬಿಡದಿ ಬಳಿ ಏಳನೀರು ಕುಡಿದು ಹೊರಟೆವು.. ಬಾಯಿಯಲ್ಲಿ ಹಳೆಯ ಹಾಡುಗಳಿದ್ದವು..
ಕೆಳವು ಕಡೆ ರಾಘು, ಹಲವು ಕಡೆ  ನಾನು ವಾಹನ ಚಲಾಯಿಸಿದೆ..
ಮೈಸೂರು ರಸ್ತೆಯಂತೂ ವಾಹನಗಳ ಭರಾಟೆಯಿಂದ ಕೂಡಿತ್ತು..
ಅಂತು ಇಂತೂ ಮೈಸೂರು ತಲುಪಿದಾಗ ಸಂಜೆ ೮ ಗಂಟೆ..
ಅಲ್ಲಿನ ಹುಣಸೂರು ಸರ್ಕಲ್ನಲ್ಲಿ ಮಿರ್ತರಿಗಾಗಿ ಕಾದೆವು..
ಕೆಳವು ಸಮಯದ ನಂತರ ಅವರು ಬಂದರು..
ನಂತರ ಕೊಂಚ ಮಾತುಕತೆ ನಡೆಯಿತು..
ಆ ಪ್ರಕಾರವಾಗಿ ನಾವು ರಾತ್ರಿ ಉಳಿಯುವುದು ಗುಂಡ್ಲುಪೇಟೆಯಲ್ಲಿ ಎಂಬ ನಿರ್ಧಾರವಾಯಿತು..
ಇಲ್ಲಿಂದ ನಾವು ಬದಲಾವಣೆ ಮಾಡಿ ಹೊರಟೆವು..
ನಾನು ಮೋಹನನ ಬೈಕ್ ಏರಿದೆ..ರಾಘು ಬೈಕ್ಗೆ ಕಿಟ್ಟು ಬಂದ..
 ರೇಸ್ ಬಾಬಾ ರೇಸ್
ಇಲ್ಲಿ ಮಿತ್ರರು ರೇಸ್ ಗೆ ಬಿದ್ದರು..
ಒಬ್ಬರಿಗಿಂತ ಮತ್ತೊಬ್ಬರು ವೇಗವಾಗಿ ಹೋಗಬೇಕೆಂಬ ತವಕ..
ಅದೆಸ್ತು ವೇಗವಾಗಿ ಸಾಗಿದರೋ..?
ಕೊನೆಗೆ ನಂಜನಗೂಡಿನಲ್ಲಿ ಊಟ ಮಾಡಿದೆವು..
ನಂತರ ಮತ್ತೆ ಮುಂದೆ ಹೊರಟೆವು..
ಇಲ್ಲೂ ಮತ್ತೆ ರೇಸ್..!!!
ಕೊನೆಗೆ ಗುಂಡ್ಲುಪೇಟೆ ತಲುಪುವ ವೇಳೆಗೆ ಆಗಲೇ ಸಮಯ ೧೧ ಆಗಿತ್ತು..
ಎಲ್ಲಿ ಉಳಿಯೋದು ಎಂದು ಚಿಂತಿಸಿದೆವು..
ಕೊನೆಗೆ ಉಳಿಯಲು ಲಾಡ್ಜ್ ಹುಡುಕಿದೆವು..
ಸಿಕ್ಕಿತು.. ಕಡಿಮೆ ಬೆಲೆಗೆ..
ಅಲ್ಲಿ ಸ್ನಾನ ಮಾಡಿ ಮಲಗಿದೆವು..
ಮರುದಿನದ ಪಯಣದ ಕನಸು ಕಣ್ಣಿನಲ್ಲಿತ್ತು....

(ಮುಂದುವರಿಯುತ್ತದೆ...)

Monday, March 15, 2010

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು

ಅಲ್ಲಿಗೆ ಹೋಗಿ ಬಂದೆ..
ಮಿತ್ರರ ಜೊತೆಗೆ.. ಬಹು ದಿನಗಳ ಆಸೆ ಇತ್ತು..
ಅಂತೂ ಕೈಗೂಡಿತು..
ನಮ್ಮ ಪ್ರಯಾಣ ಬಹಳ ಚನ್ನಾಗಿತ್ತು..
ಮೊದಲು ಬೆಂಗಳೂರಿನಿಂದ ಮೈಸೂರು, ನಂತರ ಬಂಡೀಪುರ, ಊಟಿ, ಗುದಳುರಿಗೆ ತೆರಳಿದೆವು...
ನಂತರ ಸುಲ್ತಾನ್ ಬತ್ತೇರಿ ಹಾಗು ಎಡಕ್ಕಲ್ ಗುಡ್ಡಕ್ಕೆ ಸಹ ಹೋಗಿ ಬಂದೆವು...
ಅದರ ವಿವರ ಇನ್ನೊಮ್ಮೆ........

Sunday, March 14, 2010

Yugaadi ...

ಯುಗ ಯುಗಾದಿ ಕಳೆದರು...
ಯುಗಾದಿ ಮರಳಿ ಬರುತಿದೆ...
ನವ ವಸಂತದ ಸಂತಸದ ಯುಗಾದಿ ಮತ್ತೆ ಬಂದಿದೆ..
ನಿಮಗೆಲ್ಲರಿಗೂ ಯುಗಾದಿಯ ಶುಭಾಶಯಗಳು...

ಜೀವನದಲ್ಲಿ ಸಿಹಿ-ಕಹಿ ಎರಡು ಸಮನಾಗಿ ಇರಬೇಕು ಎಂಬ ತತ್ವ ಸಾರುವ ಯುಗಾದಿ ಮನುಷ್ಯನ ಬದುಕಿನ ಪ್ರಪುಲ್ಲತೆಯ ಸಂಕೇತ...
ಈ ದಿನದ ನೆನಪಿನಲ್ಲಿ ಬದುಕಿನಲ್ಲಿ ಹೊಸ ಹೆಜ್ಜೆ ಇಡೋಣ ಬನ್ನಿ...

ಈ ಖುಷಿ ಗೆ ಒಂದು ಹನಿ ಚುಟುಕ...


8) ಯುಗಾದಿ..

ಯುಗಾದಿ ಎಂದ ಕೂಡಲೇ
ನನಗೆ ನೆನಪಾಗುವುದು 
you ಮತ್ತು ಗಾದಿ...!!!

ಮತ್ತೆ ಸಿಗೋಣ...
ಮತ್ತಸ್ಟು ಹೊಸ ಹುರುಪಿನ ಜೊತೆಗೆ...

Thursday, February 4, 2010

ಕೆಲವು ಹನಿ ಚುಟುಕಗಳು...

 ಇವು ಅಪರೂಪಕ್ಕೆ ಬರೆದ ಹನಿಗಳು..
 ಸುಮ್ಮನೆ ನಿಮ್ಮ ಮುಂದೆ...

6) ಮೊಡವೆ

ಮೊಡವೆ ಎಂದರೆ
ಹೆಣ್ಣು ಹುಡುಗಿಯ ಮೊಗದ ಭಾವನೆಗಳು
ಹೊರ ಹೋಗುವ ಒಂದು
way...!!!


7) ತಾಳಿ..

ಹರೆಯಕ್ಕೆ.,
ಯವ್ವನದೊದಲಿಗೆ
ಸಿಕ್ಕ ಒಂದು ಕಡಿವಾಣ ..
ಗಂಡಿನ ಲಗಾಮು..!!

Thursday, November 26, 2009

ಎರಡು ಚಿಕ್ಕ ಚುಟುಕ

ಒಂದು ಚಿಕ್ಕ ಚುಟುಕ ಬರೆದಿದ್ದೇನೆ .. ಹೀಗೆ ಸುಮ್ಮನೆ ನಿಮ್ಮ ಮುಂದೆ ಇಡುತ್ತಿದ್ದೇನೆ..
ಅದು ಅರ್ಥ ಆಗದೆ ಇದ್ರೆ ನಾನು ಹೊಣೆಗಾರನಲ್ಲ..
ಅದರ ತಲೆಬರಹ

4) ವಿಸ್ಮಯ
ಎಂಥ  ವಿಚಿತ್ರ ಅಲ್ವ
ಬಿದಿರಿನ ತಮ್ಮ ದುರ್ವೆ ಅಂತೆ..!!!!

ಮತ್ತೊಂದು ಹನಿ..  ಚುಟುಕ..

5)ಹನಿಕವಿ

ಅವಳನ್ನು ಕಂಡಾಗಲೆಲ್ಲ
ನಾನಾಗುತ್ತೇನೆ..,,
ಹನಿ ಕವಿ..honey ಕವಿ..
ಮತ್ತು...
ಹನಿ ಹನಿ ಕವಿ..!!