ಯುವಕರ ಕ್ರೀಡೆ ಕ್ರಿಕೆಟ್ ಎನ್ನುವ ಮಾತಿದೆ. 19-20 ವರ್ಷದ ಆಟಗಾರರಿಂದ ಹಿಡಿದು 36-37 ವರ್ಷ ವಯಸ್ಸಿನ ವರೆಗೆ ಕ್ರಿಕೆಟ್ ಆಡುವವರೇ ಹೆಚ್ಚು. 19-20 ವರ್ಷ ವಯಸ್ಸಿನ ಒಳಗಿನ ಕ್ರಿಕೆಟಿಗರ ಸಂಖ್ಯೆ ಬೆರಳೆಣಿಕೆಯಷ್ಟು. ಅದೇ ರೀತಿ 37 ವರ್ಷ ವಯಸ್ಸಿನ ನಂತರ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.
ಕ್ರಿಕೆಟ್ ಅಂಗಣದಲ್ಲಿ 20 ವರ್ಷದೊಳಗಿನ ಆಟಗಾರರನ್ನು ಅನನುಭವಿ, ಇನ್ನೂ ಎಳಸು ಎಂದು ಕರೆದರೆ, 35 ವರ್ಷ ಆದಂತೆಲ್ಲ ವಯಸ್ಸಾಯಿತು, ಇನ್ನು ನಿವೃತ್ತಿಯ ಕಡೆಗೆ ಗಮನ ಹರಿಸಲಿ ಎಂಬ ಮಾತುಗಳು ಕೇಳಿ ಬರಲು ಆರಂಭವಾಗುತ್ತದೆ. ಉತ್ತಮ ಫಾರ್ಮಿನಲ್ಲಿದ್ದರೂ ಆಟಗಾರರ ನಿವೃತ್ತಿಯ ಕುರಿತು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಲು ಶುರುಮಾಡುತ್ತಾರೆ. ಹಾಗಾದರೆ ಕ್ರಿಕೆಟ್ ರಂಗಕ್ಕೆ ಕಾಲಿರಿಸಿದ ಅತ್ಯಂತ ಕಿರಿಯ ವ್ಯಕ್ತಿಯ ವಯಸ್ಸೆಷ್ಟಿರಬಹುದು? ಕ್ರಿಕೆಟ್ ಆಡಿ ನಿವೃತ್ತಿಯಾದ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು ಎನ್ನುವ ಕುತೂಹಲ ಹಲವರಲ್ಲಿ ಇರಬಹುದು. ಇಂತಹ ಹಿರಿಯ ಹಾಗೂ ಕಿರಿಯ ವ್ಯಕ್ತಿಗಳ ಕುರಿತು ಕಿರು ಮಾಹಿತಿ ಇಲ್ಲಿದೆ.
ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಕಿರಿಯ ವ್ಯಕ್ತಿ
ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಪಾಕಿಸ್ತಾನದ ಹಸನ್ ರಾಜಾ. 1996ರಲ್ಲಿ ಜಿಂಬಾಬ್ವೆಯ ವಿರುದ್ಧ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದಾಗ ಹಸನ್ ರಾಜಾಗೆ ಕೇವಲ 14 ವರ್ಷ, 227 ದಿವಸವಾಗಿತ್ತು.
ಈ ಯಾದಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಟಗಾರ ಮುಷ್ತಾಕ್ ಮೊಹಮ್ಮದ್. ವಿಂಡೀಸ್ ವಿರುದ್ಧ 1959ರಲ್ಲಿ ಕ್ರಿಕೆಟ್ ಆಡಿದಾಗ ಈತನ ವಯಸ್ಸು 15 ವರ್ಷ 124 ದಿನಗಳಾಗಿತ್ತು. ಪಾಕಿಸ್ತಾನದವನೇ ಆದ ಅಕೀಬ್ ಜಾವೆದ್ ಕ್ರಿಕೆಟ್ ಜೀವನ ಆರಂಭಿಸಿದಾಗ ಆತನಿಗೆ 16 ವರ್ಷ 189 ದಿನಗಳಾಗಿತ್ತು. 1989ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆತ ತನ್ನ ಕ್ರಿಕೆಟ್ ಬದುಕು ಆರಂಭಿಸಿದ. ಇದೇ ಸಾಲಿನಲ್ಲಿ ನಾಲ್ಕನೇ ಸ್ಥಾನ ಗಳಿಸಿರುವ ಆಟಗಾರ ಭಾರತದ ಸಚಿನ್ ತೆಂಡೂಲಕ್ರ್. ಪಾಕಿಸ್ತಾನದ ವಿರುದ್ಧ 1989ರಲ್ಲಿ ಕ್ರಿಕೆಟ್ ಆಡಿದ ಸಚಿನ್ಗೆ ಆಗ 16 ವರ್ಷ 205 ದಿನವಾಗಿತ್ತಷ್ಟೇ. 1969ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಪಾಕಿಸ್ತಾನದ ಆಪ್ಹ್ತಾಬ್ ಬಲೂಚ್ಗೆ ಆಗ 16 ವರ್ಷದ 223 ದಿನಗಳಾಗಿತ್ತು.
ಹಿರಿಯ ಆಟಗಾರರು
ಕ್ರಿಕೆಟ್ನಲ್ಲಿ 35-36 ವರ್ಷಗಳಿಗೆಲ್ಲ ನಿವೃತ್ತಿ ಹೇಳುವ ಆಟಗಾರರೇ ಹೆಚ್ಚು. ಅಬ್ಬಬ್ಬಾ ಎಂದರೆ 40, ಅಲ್ಲೊಬ್ಬ ಇಲ್ಲೊಬ್ಬರು 41-42 ವರ್ಷಗಳ ತನಕ ಕ್ರಿಕೆಟ್ ಆಡಿದವರಿದ್ದಾರೆ. ಆದರೆ ಇಂಗ್ಲೆೆಂಡ್ ಪರ ಕ್ರಿಕೆಟ್ ಆಡಿದ ವಿಲ್ರೆಡ್ ರೋಡ್ಸ್ ತಾನು ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದಾಗ ಆತನ ವಯಸ್ಸು 52 ವರ್ಷ 165 ದಿನಗಳಾಗಿತ್ತು. ಆಸ್ಟ್ರೇಲಿಯಾದ ಬೆರ್ಟ್ ಐರನ್ಮ್ಯಾಾಂಗರ್ ಟೆಸ್ಟ್ಗೆ ವಿದಾಯ ಹೇಳಿದಾಗ ಆತನ ವಯಸ್ಸೂ ಕೂಡ ಅರ್ಧಶತಕ ದಾಟಿತ್ತು ಬಿಡಿ. ಕ್ರಿಕೆಟ್ಗೆ ವಿದಾಯ ಹೇಳುವಾಗ ಆತನಿಗೆ ಆಗಿದ್ದ ವಯಸ್ಸು 50 ವರ್ಷದ 327 ದಿನ. ಕ್ರಿಕೆಟ್ ಪಿತಾಮಹ ಡಬ್ಲೂ. ಜಿ. ಗ್ರೇಸ್ ಕೂಡ ಹಿರಿಯರ ಯಾದಿಯಲ್ಲಿದ್ದಾರೆ. ಇವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದಾಗ ಆಗಿದ್ದ ವಯಸ್ಸು 50 ವರ್ಷದ 320 ದಿನಗಳು. ಇಂಗ್ಲೆೆಂಡಿನ ಜಾರ್ಜ್ ಗನ್ 50 ವರ್ಷದ 303, ಜೇಮ್ಸ್ ಸದರ್ಟನ್ 49 ವರ್ಷದ 139 ದಿನಗಳಾದಾಗ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದ್ದರು.
ವಿವಿದ ದೇಶಗಳ ಹಿರಿಯ ಕ್ರಿಕೆಟ್ ಆಟಗಾರರು
ಆಸ್ಟ್ರೇಲಿಯಾ -ಬೆರ್ಟ್ ಐರನ್ಮ್ಯಾಾಂಗರ್ -50 ವರ್ಷದ 327 ದಿನಗಳು
ಬಾಂಗ್ಲಾದೇಶ - ಮೊಹಮ್ಮದ್ ರಫೀಕ್ -37 ವರ್ಷದ 180 ದಿನಗಳು
ಇಂಗ್ಲೆೆಂಡ್ -ವಿಲ್ರೆೆಡ್ ರೋಡ್ಸ್ -52 ವರ್ಷದ 165 ದಿನಗಳು
ಭಾರತ - ವಿನೂ ಮಂಕಡ್ -41 ವರ್ಷ 305 ದಿನಗಳು
ನ್ಯೂಜಿಲೆಂಡ್ -ಜ್ಯಾಕ್ ಅಲಾಬಸ್ಟಾಾರ್ -41 ವರ್ಷ 247 ದಿನಗಳು
ಪಾಕಿಸ್ತಾಾನ -ಮಿರಾನ್ ಭಕ್ಷ್ -47 ವರ್ಷ 307 ದಿನಗಳು
ದಕ್ಷಿಣ ಆಫ್ರಿಕಾ -ಡೇವ್ ನರ್ಸ್ -45 ವರ್ಷ 207 ದಿನಗಳು
ಶ್ರೀಲಂಕಾ -ಸೋಮಚಂದ್ರ ಡಿ. ಸಿಲ್ವಾ -42ವರ್ಷ 78 ದಿನಗಳು
ವೆಸ್ಟ್ ಇಂಡೀಸ್ - ಜಾರ್ಜ್ ಹೆಡ್ಲೀ -44 ವರ್ಷ 236 ದಿನಗಳು
ಜಿಂಬಾಬ್ವೆೆ -ಜಾನ್ ಟ್ರೈಕೋಸ್ -45 ವರ್ಷ 304 ದಿನಗಳು
ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಹಿರಿಯರು
ಕಿರಿಯ ವಯಸ್ಸಿನಲ್ಲಿ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದನ್ನು ಕೇಳಿರುತ್ತೀರಿ. ಅದೇ ಹಿರಿಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು ಎಷ್ಟಿರಬಹುದು ಎನ್ನುವ ಕುತೂಹಲ ಇರಬಹುದು. ಇಂಗ್ಲೆೆಂಡಿನ ಜೇಮ್ಸ್ ಸದರ್ಲೆಂಡ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು 49 ವರ್ಷದ 119 ದಿನಗಳಾಗಿದ್ದವು. ಪಾಕಿಸ್ತಾನದ ಮಿರಾನ್ಭಕ್ಷ್ ಗೆ 47 ವರ್ಷದ 284 ದಿನಗಳಾಗಿದ್ದವು. ಆಸ್ಟ್ರೇಲಿಯಾದ ಡಾನ್ ಬ್ಲೇಕ್ಗೆ 46 ವರ್ಷದ 253 ದಿನಗಳಾಗಿದ್ದವು. ಭಾರತದ ರುಸ್ತುಮ್ ಜೇಮ್ಶೆಟ್ಜಿಗೆ 41 ವರ್ಷದ 27 ದಿನಗಳಾಗಿದ್ದವು. ಈಗ ಹೇಳಿ ಕ್ರಿಕೆಟ್ ಕೇವಲ ಯುವಕರ ಕ್ರೀಡೆಯೇ?