ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಭಾವೈಕ್ಯತೆ
ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಅನೇಕ ನಿದರ್ಶನಗಳು ಸಿಗುತ್ತಲೇ ಇರುತ್ತವೆ. ಅನೇಕ ಕಡೆಗಳಲ್ಲಿ ಹಬ್ಬದ ಸಂದರ್ಭಗಳಲ್ಲಿ ಹಿಂದೂ-ಮುಸ್ಲೀಮರು ಹಲವಾರು ಸಂದರ್ಭಗಳಲ್ಲಿ ಒಟ್ಟಾಗಿ ಪಾಲ್ಗೊಳ್ಳುತ್ತಾರೆ. ಇಂತಹದ್ದೊಂದು ಭಾವೈಕ್ಯತೆಗೆ ಸೋಂದಾ ಸ್ವರ್ಣವಲ್ಲಿ ಮಠದ ರಥೋತ್ಸವ ಕೂಡ ಸಾಕ್ಷಿಯಾಗುತ್ತ ಬಂದಿದೆ.ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಪ್ರತಿವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಚತುದಶರ್ಿಯ ದಿನದಂದು ಲಕ್ಷ್ಮೀನೃಸಿಂಹ ದೇವರ ರಥೋತ್ಸವ ನಡೆಯುತ್ತದೆ. ಈ ರಥೋತ್ಸವದಲ್ಲಿ ಎಳೆಯಲ್ಪಡುವ ರಥವನ್ನು ಮುಸ್ಲೀಮರೇ ಕಟ್ಟುತ್ತಾರೆ. ಹಿಂದೂಗಳ ಮಠವಾದ ಸ್ವರ್ಣವಲ್ಲಿ ಮುಸ್ಲೀಮರು ರಥ ನಿಮರ್ಾಣ ಮಾಡುತ್ತಾರೆ. ಶತ ಶತಮಾನಗಳಿಂದಲೂ ಈ ಆಚರಣೆ ನಡೆಯುತ್ತಲೇ ಬಂದಿರುವುದು ಸ್ವರ್ಣವಲ್ಲಿ ಮಠದ ಹಾಗೂ ಲಕ್ಷ್ಮೀನೃಸಿಂಹ ದೇವರ ರಥೋತ್ಸವದ ವೈಶಿಷ್ಟ್ಯವಾಗಿದೆ.
ಪ್ರಾಚೀನ ಕಾಲದಿಂದಲೂ ಸ್ವರ್ಣವಲ್ಲಿಯಲ್ಲಿ ಸೋದೆ ಪೇಟೆಯ ಖಾಜಿ ಕುಟುಂಬವು ರಥವನ್ನು ಕಟ್ಟುವ ಕೆಲಸವನ್ನು ಶೃದ್ಧೆಯಿಂದ ಮಾಡಿಕೊಂಡು ಬರುತ್ತಿದೆ. ರಥ ಕಟ್ಟುವ ಕೆಲಸ ಮಾತ್ರವಲ್ಲದೇ ಹಬ್ಬ ಹರಿದಿನಗಳ ನಗಾರಿ ಬಾರಿಸುವ ಕೆಲಸವನ್ನೂ ಈ ಕುಟುಂಬಕ್ಕೆ ಸೇರಿದ ಮುಸ್ಲೀಮರು ಮಾಡಿಕೊಂಡು ಬರುತ್ತಿದ್ದಾರೆ. ಈ ಕುರಿತಂತೆ ಸ್ವರ್ಣವಲ್ಲಿ ಮಠದಲ್ಲಿ ವಿಚಾರಿಸಿದಾಗ ಸ್ವರ್ಣವಲ್ಲಿ ಮಠದ ಸುತ್ತಮುತ್ತಲ ಎಲ್ಲಾ ಮಠಗಳಲ್ಲಿಯೂ ಮುಸ್ಲೀಮರೇ ರಥವನ್ನು ಕಟ್ಟುತ್ತಿದ್ದರು. ಆದರೆ ಈಗ ಸ್ವರ್ಣವಲ್ಲಿ ಮಠದಲ್ಲಿ ಮಠದಲ್ಲಿ ಮಾತ್ರ ಮುಸ್ಲೀಮರು ರಥ ಕಟ್ಟುವ ಕಾರ್ಯ ನಡೆಯುತ್ತಿದೆ.
ಹೊನ್ನಳ್ಳಿ ಎಂದು ಜನರ ಆಡುಮಾತಿನಲ್ಲಿ ಕರೆಸಿಕೊಳ್ಳುವ ಸ್ವರ್ಣವಲ್ಲಿ ಮಠದಲ್ಲಿ ನಡೆಯುವ ರಥೋತ್ಸವವು ವರ್ಷದ ಕೊಟ್ಟಕೊನೆಯ ರಥೋತ್ಸವ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದೆ. ರಥೋತ್ಸವಕ್ಕೂ 15 ದಿನ ಮೊದಲು ಅಂದರೆ ಅಕ್ಷಯ ತೃತೀಯಾದ ದಿನ ರಥವನ್ನು ತೆಗೆದು ಅದಕ್ಕೆ ಸೋದೆ ಪೇಟೆಯ ಅಬ್ದುಲ್ ಕರೀಬ್ ಖಾಸಾಬ್ (ಬಾಬು) ತಂಡವು ರಥವನ್ನು ವ್ಯವಸ್ಥಿತವಾಗಿ ಕಟ್ಟಲು ಆರಂಭಿಸುತ್ತದೆ. ಹಿಂದೆ ರಥವನ್ನು ಕಟ್ಟಲು ಅಬ್ದುಲ್ ಕರೀಂ ಖಾ ಸಾಬ್, ಅಬ್ದುಲ್ ರಜಾಕ್ ಅಬ್ದುಲ್ ರಸೀದ್, ಖಾಸೀಮ್ ಉಸ್ಮಾನ್ ಖಾನ್ ಹಾಗೂ ಇಬ್ರಾಹೀಮ್ ಉಸ್ಮಾನ್ ಖಾನ್ ಈ ನಾಲ್ಕು ಕುಟುಂಬಕ್ಕೆ ಸೇರಿದ ಸದಸ್ಯರುಗಳು ರಥ ಕಟ್ಟಲು ಶೃದ್ಧೆಯಿಂದ ಶ್ರಮಿಸುತ್ತಿದ್ದರು. ಇದಲ್ಲದೇ ಮಠದ ಇನ್ನಿತರ ಧಾಮರ್ಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈ ಕುಟುಂಬದಲ್ಲಿ ಅದೆಷ್ಟೋ ಜನರು ಉದ್ಯೋಗದ ನಿಮಿತ್ತ ಬೇರೆಡೆಗೆ ತೆರಳಿದ್ದಾರೆ. ಈಗ ಅಬ್ದುಲ್ ಕರೀಮ್ ಖಾ ಸಾಬ್ ಕುಟುಂಬ ಮಾತ್ರ ರಥ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದೆ.
ರಥ ನಿಮರ್ಾಣಕ್ಕಾಗಿ ಪ್ರತಿ ವರ್ಷವೂ ಹೊನ್ನಾವರ ತಾಲೂಕಿನ ಹಳ್ಳಲಿಯೊಂದರಿಂ ಅಜಮಾಸು 8000 ರು. ಮೌಲ್ಯದ ವಿಶಿಷ್ಟವಾದ ಕತ್ತವನ್ನು ತರಲಾಗುತ್ತದೆ. ಹೊಸ ಕತ್ತವನ್ನು ರಥದ ಆರಂಭಿಕ ಕೆಲಸಕ್ಕೆ ಬಳಕೆ ಮಾಡಿದರೆ ಹಳೆಯದಾಗಿರುವ ಕತ್ತವನ್ನು ಮರುವರ್ಷ ಎರಡನೆಯ ಹಂತದ ರಥ ಕಟ್ಟಲು ಬಳಕೆ ಮಾಡಲಾಗುತ್ತದೆ. ಒಮ್ಮೆ ಕತ್ತವನ್ನು ತೆಗೆದುಕೊಂಡು ಬಂದರೆ ಅದನ್ನು ಐದು ವರ್ಷಗಳ ಕಾಲ ಬಳಕೆ ಮಾಡಲಾಗುತ್ತದೆ. 15 ದಿನಗಳ ಅಂತರದಲ್ಲಿ ಖಾಜಿ ಕುಟುಂಬವು ರಥದ ಸಂಪೂರ್ಣ ನಿಮರ್ಾಣದ ಕಾರ್ಯಗಳನ್ನು ನಡೆಸುತ್ತದೆ. ರಥದ ಪತಾಕೆ ಕಟ್ಟುವವರೆಗೂ ನಿರಂತರವಾಗಿ ಈ ತಂಡದ ಕೆಲಸಗಳು ನಡೆಯುತ್ತವೆ. ಇದಲ್ಲದೇ ರಥೋತ್ಸವದ ದಿನ ರಥ ಸಾಗುವ ದಾರಿಯುದ್ದಕ್ಕೂ ರಥದ ನಿಯಂತ್ರಣಕ್ಕಾಗಿ ಸನ್ನೆಯನ್ನು ಹಾಕುವುದು, ರಥೋತ್ಸವದ ನಂತರದಲ್ಲಿ ರಥಕ್ಕೆ ಕಟ್ಟಲಾದ ಪರಿಕರಗಳನ್ನು ಬಿಚ್ಚುವುದು, ಅವುಗಳನ್ನು ಸ್ವಸ್ಥಾನದಲ್ಲಿ ಇಡುವುದು ಸೇರಿದಂತೆ ಅಗತ್ಯವಿರುವ ಎಲ್ಲಾ ಜವಾಬ್ದಾರಿಗಳನ್ನೂ ಕೈಗೊಳ್ಳುತ್ತದೆ. ರಥವನ್ನು ಕಟ್ಟಿಕೊಮಡು ಬರುತ್ತಿರುವ ಖಾಜಿ ಕುಟುಂಬಕ್ಕೆ ಪ್ರತಿ ವರ್ಷ ರಥ ನಿಮರ್ಾಣ ಮಾಡಿದ್ದಕ್ಕೆ ಪ್ರತಿಯಾಗಿ ದವಸ-ಧಾನ್ಯಗಳನ್ನು ಗೌರವಧನವಾಗಿ ನೀಡಲಾಗುತ್ತದೆ.
ಹವ್ಯಕರ ಮಠವಾಗಿರುವ ಸ್ವರ್ಣವಲ್ಲಿಯ ರಥೋತ್ಸವದ ರಥವನ್ನು ಮುಸ್ಲೀಮರೇ ಕಟ್ಟುವ ಮೂಲಕ ಭಾವೈಕ್ಯತೆ, ಧರ್ಮ ಸಾಮರಸ್ಯವನ್ನು ಜಗತ್ತಿಗೆ ಸಾರಲಾಗುತ್ತಿದೆ. ಹಿಂದೂ-ಮುಸ್ಲಿಮರ ಅಪರೂಪದ ಭಾವೈಕ್ಯ ಕಾರ್ಯಕ್ಕೆ ಇದೊಂದು ನಿದರ್ಶನವಾಗಿದೆ.
No comments:
Post a Comment