ಕಾನ್ಲೆ ಹೈಸ್ಕೂಲಿನಲ್ಲಿ ಕಲಿಸಿದ ವಿನೋದಾ ನಾಯ್ಕ್ ಹಾಗೂ ಸುಜಾತಾ ಮೇಡಮ್ ಬಗ್ಗೆ ಬರೆಯಲೇಬೇಕು. ಇಬ್ಬರೂ ಅಷ್ಟೇನೂ ಸ್ಟ್ರಿಕ್ಟ್ ಇರಲಿಲ್ಲ ಬಿಡಿ. ಆದರೆ ಅವರ ವಿಶಿಷ್ಟ ಹಾವ ಭಾವದಿಂದಾಗಿ ನಮ್ಮಲ್ಲಿ ಅಚ್ಚಳಿಯದೇ ಉಳಿದು ಹೋಗಿದ್ದಾರೆ. ಸುಜಾತಾ ಮೇಡಮ್ ಹಿಂದಿ ಕಲಿಸುತ್ತಿದ್ದರು. ವಿನೋದಾ ನಾಯ್ಕ್ ಮೇಡಮ್ ಹೊಲಿಗೆ ಕಲಿಸಲು ಬರುತ್ತಿದ್ದರು. ಅವರ ಕ್ಲಾಸಿನಲ್ಲಿ ಕೂರುವುದು ಅಂದರೆ ಮಜವೇ ಮಜಾ ಬಿಡಿ
ವಿನೋದಾ ನಾಯ್ಕ್ :
ವಿ.ಎಸ್.ಎನ್ ಎಂಬ ಶಾರ್ಟ್ ಫಾರ್ಮಿನಿಂದ ಕರೆಸಿಕೊಳ್ಳುತ್ತಿದ್ದ ವಿನೋದಾ ನಾಯ್ಕ ಮೇಡಮ್ ನಾನು ಎಂಟನೇ ಕ್ಲಾಸಿನಲ್ಲಿದ್ದಾಗ ಕೊನೆ ಕೊನೆಯಲ್ಲಿ ಶಾಲೆಗೆ ವರ್ಗವಾಗಿ ಬಂದಿದ್ದರು. ಮೂಲತಃ ಉತ್ತರ ಕನ್ನಡದವರಾಗಿದ್ದ ವಿನೋದಾ ನಾಯ್ಕ ಅವರ ಯಜಮಾನರೂ ಹೈಸ್ಕೂಲು ಶಿಕ್ಷಕರಾಗಿದ್ದರು. ಹೊಲಿಗೆ ಶಿಕ್ಷಕಿಯಾಗಿ ಬಂದಿದ್ದ ಮೇಡಂ ಏನು ಕಲಿಸಿದರೋ. ನಾವೇನು ಕಲಿತೆವೋ ಗೊತ್ತಿಲ್ಲ ನೋಡಿ. ನಾಲ್ಕೈದು ದಿನ ಕಾನಲೆಯ ನನ್ನ ದೊಡ್ಡಪ್ಪನ ಮನೆಯಿಂದ ದೊಡ್ಡಮ್ಮನಿಗೆ ಭಾಗಿನಕ್ಕೆಂದು ಬಂದಿದ್ದ ಒಂದೆರಡು ವಾರುಗಳನ್ನು, ಶರ್ಟ್ ಫೀಸುಗಳನ್ನು ಹೈಸ್ಕೂಲಿಗೆ ಒಯ್ದಿದ್ದೆ. ದಾರದುಂಡೆ, ಸೂಜಿಗಳನ್ನು ಹಿಡಿದು ಹೋಗುತ್ತಿದ್ದೆವು. ತೋಳಿಲ್ಲದ ಝಬಲಾ, ಚೈನ್ ಹೊಲಿಗೆ ಈ ಮುಂತಾದ ಕೆಲವು ಹೊಲಿಗೆ ಪದ್ಧತಿಗಳನ್ನು ನಮಗೆ ಕಲಿಸಿದ್ದು ನೆನಪಿನಲ್ಲಿದೆ. ಆದರೆ ಹೊಲಿಗೆಗೆ ಸಂಬಂಧಿಸಿದಂತೆ ಯಾವುದೇ ಪರೀಕ್ಷೆಗಳನ್ನು ವಿನೋದಾ ಮೇಡಂ ನಡೆಸಲಿಲ್ಲ.
ಒಂಭತ್ತನೇ ಕ್ಲಾಸಿನಲ್ಲಿ ನಾನು ಓದುತ್ತಿದ್ದಾಗ ವಿನೋದಾ ಮೇಡಂ ಕೆಲ ಕಾಲ ಇಂಗ್ಲೀಷ್ ಹಾಗೂ ಮತ್ತೆ ಕೆಲ ಕಾಲ ಸಮಾಜ ವಿಜ್ಞಾನಗಳನ್ನು ಕಲಿಸಲು ಬರುತ್ತಿದ್ದರು. ಇಂಗ್ಲೀಷ್ ಶಿಕ್ಷಕರಾಗಿದ್ದ ಬಿ. ಆರ್. ಲಕ್ಷ್ಮೀನಾರಾಯಣ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾಗಿದ್ದ ವನಮಾಲಾ ಮೇಡಂ ದೀರ್ಘಕಾಲದ ರಜೆ ಹಾಕಿದಾಗ ವಿನೋದಾ ಮೇಡಂ ಇವೆರಡೂ ವಿಷಯಗಳನ್ನು ಕಲಿಸಲು ಬರುತ್ತಿದ್ದರು. ಒಂದು ದಿನ ವಿದ್ಯಾರ್ಥಿಗಳೆಲ್ಲ ಸೇರಿ ಗ್ಲೋಬ್ ನೋಡುತ್ತಿದ್ದೆವು. ವಿನೋದಾ ಮೇಡಂ ಸಮಾಜ ವಿಜ್ಞಾನ ಕಲಿಸುತ್ತಿದ್ದವರು ಸಖತ್ ಜೋಶ್ ನಲ್ಲಿದ್ದರು. ಆ ದಿನಗಳಲ್ಲಿ ನಾನು ಕ್ಲಾಸಿಗೆ ಅತ್ಯಂತ ಇಂಟಲಿಜೆಂಟ್ ವಿದ್ಯಾರ್ಥಿ. ವಿನೋದಾ ಮೇಡಂ ಗ್ಲೋಬಿನಲ್ಲಿ ವಿವಿಧ ದೇಶಗಳನ್ನು ತೋರಿಸುತ್ತಿದ್ದರು. ನಾನು ಪ್ರೈಮರಿ ಶಾಲೆಯಲ್ಲಿದ್ದಾಗಲೇ ಗ್ಲೋಬ್ ಗಳನ್ನು ನೋಡಿ ದೇಶಗಳನ್ನು ಹುಡುಕಿ, ಅವುಗಳ ರಾಜಧಾನಿಗಳ ಹೆಸರನ್ನು ಬಾಯಲ್ಲಿ ಉರುಹೊಡೆದುಕೊಳ್ಳುತ್ತಿದ್ದೆ. ಅಮೇರಿಕಾ, ಕೆನಡಾ, ಬ್ರಿಟನ್ ಸೇರಿದಂತೆ ಹಲವಾರು ಖ್ಯಾತನಾಮ ದೇಶಗಳನ್ನು ವಿನೋದಾ ಮೇಡಂ ಹುಡುಕಲು ಕೇಳಿದರು. ನಮ್ಮದೇ ಕ್ಲಾಸಿನ ಹಲವು ವಿದ್ಯಾರ್ಥಿಗಳು ಅವುಗಳನ್ನು ತೋರಿಸಿದರು. ಆಮೇಲೆ ದಕ್ಷಿಣ ಕೋರಿಯಾ ಹಾಗೂ ಉತ್ತರ ಕೋರಿಯಾ ಯಾವ ಖಂಡದಲ್ಲಿ ಬರುತ್ತದೆ. ಅದನ್ನು ತೋರಿಸಿ ಎಂದರು. ಯಾರೊಬ್ಬರೂ ಇದಕ್ಕೆ ಮುಂದಾಗಲೇ ಇಲ್ಲ. ಕೊನೆಗೆ ನಾನು ಎದ್ದು ನಿಂತು `ಈ ಎರಡೂ ದೇಶಗಳು ಏಷ್ಯಾ ಖಂಡದಲ್ಲಿ ಬರುತ್ತದೆ. ಜಪಾನ್ ಪಕ್ಕಕ್ಕಿವೆ' ಎಂದೆ. `ನಿನ್ ತಲೆ.. ನೀ ಜೋರಿದ್ದೆ ಅನ್ನೊದು ನಂಗೊತ್ತು. ಹಾಗಂತ ಬಾಯಿಗೆ ಬಂದ ಹಾಗೆ ಹೇಳಬೇಡ. ಇವೆರಡೂ ದೇಶಗಳು ಅಮೆರಿಕಾ ಖಂಡದಲ್ಲಿವೆ..' ಎಂದರು.
ನಾನು ಎದ್ದು ನಿಂತವನೇ `ಗ್ಲೋಬ್ ಕೊಡಿ.. ತೋರಿಸುತ್ತೇನೆ..' ಎಂದೆ. ಅವರು ಕೊಡಲು ಒಪ್ಪಲಿಲ್ಲ. ಗ್ಲೋಬ್ ಕಿತ್ತುಕೊಂಡು ಸೀದಾ ಚೀನಾದ ಪಕ್ಕಕ್ಕಿದ್ದ ಆ ಎರಡು ದೇಶಗಳನ್ನು ಹುಡುಕಿ ತೋರಿಸಿದೆ. ಮೇಡಂ ಮುಖ ಸಪ್ಪಗಾಗಿತ್ತು. ನಮ್ಮ ಕ್ಲಾಸಿನ ಹುಡುಗರು ಒಮ್ಮೆ ಹೋ ಎಂದಿದ್ದರು. ಏನೋ ಖುಷಿ ನನ್ನ ಮನಸ್ಸಿನಲ್ಲಿ ಮೂಡಿತ್ತು. ಆಮೇಲಿಂದ ನನ್ನ ಮೇಲೆ ಮೇಡಮ್ಮಿಗೆ ಎಲ್ಲಿಲ್ಲದ ದ್ವೇಷ ಬೆಳೆದಿತ್ತು ನೋಡಿ. ನಂತರದ ದಿನಗಳಲ್ಲಿ ಮೇಡಂ ಯಾವುದಾದರೂ ಕ್ಲಾಸನ್ನು ಕಲಿಸಲು ಬಂದರೆ ಸುಮ್ಮ ಸುಮ್ಮನೆ ಬೈಯುವುದು, ಪರೀಕ್ಷೆಗಳಲ್ಲಿ ಅಂಕಗಳನ್ನು ಕತ್ತರಿಸುವುದು ಇತ್ಯಾದಿ ಮಾಡುತ್ತಿದ್ದರು. ಒಂಭತ್ತನೇ ಕ್ಲಾಸು ಮುಗಿಯುವ ವೇಳೆಗೆ ಅವರಿಗೆ ಇದ್ದಕ್ಕಿದ್ದಂತೆ ದ್ವೇಷವೂ ಕಡಿಮೆಯಾಗಿತ್ತು ಬಿಡಿ.
ವಿನೋದಾ ಮೇಡಂ ಅವರ ಗಂಡ ಪ್ರತಿದಿನ ಹೈಸ್ಕೂಲು ಬಿಡುವ ಸಮಯಕ್ಕೆ ಬಂದು ಮೇಡಂ ಅವರನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀರೋಹೊಂಡಾ ಸ್ಪ್ಲೆಂಡರ್ ಬೈಕ್ ಅವರದ್ದು. ಆದರೆ ಅವರು ಎಷ್ಟು ಕುಳ್ಳಗಿದ್ದರು ಎಂದರೆ ಬೈಕಿನ ಮೇಲೆ ಅವರು ಕುಳಿತರೆ ಕಾಲು ನೆಲಕ್ಕೆ ಮುಟ್ಟುತ್ತಿರಲಿಲ್ಲ. ನಾವು ಹುಡುಗರೆಲ್ಲ ಸೇರಿ ಕುಳ್ಳ-ಕುಳ್ಳಿ ಸವಾರಿ ಹೊರಟಿದೆ ನೋಡ್ರೋ ಎಂದು ತಮಾಷೆ ಮಾಡಿದ್ದೂ ಇದೆ. ಒಂಭತ್ತನೇ ತರಗತಿ ಕೊನೆ ಕೊನೆಯಲ್ಲಿ ವಿನೋದಾ ನಾಯ್ಕ್ ಅವರು ಹೈಸ್ಕೂಲಿಗೆ ಕಲಿಸಲು ಬರುತ್ತಿರಲಿಲ್ಲ. ಅವರು ಗರ್ಭಿಣಿಯಾಗಿದ್ದರು. ಹತ್ತನೇ ಕ್ಲಾಸಿನಲ್ಲಿ ನಾವು ಇದ್ದ ಸಂದರ್ಭದಲ್ಲಿ ವಿನೋದಾ ಮೇಡಮ್ಮಿಗೆ ಗಂಡು ಮಗುವಾಗಿದೆ ಎನ್ನುವ ವಿಷಯವೂ ತಿಳಿಯಿತು. ನಂತರ ಕೆಲವು ತಿಂಗಳುಗಳ ನಂತರ ಹೈಸ್ಕೂಲಿಗೆ ಬಂದು ಸ್ವೀಟ್ ಕೊಟ್ಟಿದ್ದರು. ಮಜಾ ಎಂದರೆ ನಮ್ಮ ದೈಹಿಕ ಶಿಕ್ಷಕರಾಗಿದ್ದ ಸಿ. ಆರ್. ಲಿಂಗರಾಜು ಅವರು ವಿನೋದಾ ಮೇಡಂ ಜೊತೆಗೂ ಸಿಕ್ಕಾಪಟ್ಟೆ ಜಗಳ ಮಾಡಿದ್ದರು. ಹೈಸ್ಕೂಲಿನ ಗ್ರೌಂಡಿನಲ್ಲಿ ಒಮ್ಮೆ ಸಿಕ್ಕಾಪಟ್ಟೆ ಕೂಗಾಡಿಕೊಂಡಿದ್ದರು. ಆಮೇಲೆ ಆ ಮೇಡಮ್ಮಿಗೆ ವರ್ಗವಾಯಿತೋ ಅಥವಾ ದೀರ್ಘಕಾಲದ ರಜಾ ತೆಗೆದುಕೊಂಡರೋ ಗೊತ್ತಿಲ್ಲ ನೋಡಿ. ನಾನು ಎಸ್ ಎಸ್ ಎಲ್ ಸಿ ಮುಗಿಯುವ ವೇಲೆಗೆ ಅವರು ಇರಲಿಲ್ಲ.
ಸುಜಾತಾ ಮೇಡಂ :
`ಏನೋ.. ಧನವೇ... ಗೊತ್ತಾಗದಿಲ್ಲೇನೋ ನಿಂಗೆ..' `ಏನೇನೂ ಇಲ್ಲ.. ಈ ಸಾರಿ ನಮ್ ಹುಡುಗ್ರು ಏನೇನೂ ಇಲ್ಲ..' ಎಂದು ರಾಗವಾಗಿ ಹೇಳುತ್ತಿದ್ದ ಸುಜಾತಾ ಮೇಡಂ ಹೈಸ್ಕೈಲಿನಲ್ಲೆಲ್ಲ ಹೆಚ್.ಎಸ್.ಎಸ್. ಎಂದೇ ಖ್ಯಾತಿ ಪಡೆದಿದ್ದವರು. ಹಿಂದಿ ವಿಷಯವನ್ನು ಕಲಿಸುತ್ತಿದ್ದ ಸುಜಾತಾ ಮೇಡಂ ಅದೆಷ್ಟು ಎತ್ತರ ಇದ್ದರು ಅಂದರೆ ಆರು ಅಡಿಗಿಂತ ಜಾಸ್ತಿ ಇರಬೇಕು. ಮೇಡಂ ಮುಂದಿನ ನಾಲ್ಕು ಹಲ್ಲುಗಳು ಸಿಕ್ಕಾಪಟ್ಟೆ ಹೊರಕ್ಕೆ ಬಂದಿದ್ದವು. ಪಾಪ ಮೇಡಂ ನಮಗೆ ಪಾಠ ಮಾಡುವಾಗ ಒಂದು ಕೈಯಲ್ಲಿ ಬಾಯಿ ಮುಚ್ಚಿಕೊಂಡು ಪಾಟ ಮಾಡುತ್ತಿದ್ದರು. ನಾವೆಲ್ಲ ನಗುತ್ತಿದ್ದೆವು.
ಆ ದಿನಗಳಲ್ಲಿ ನಾನು ಹೋಂ ವರ್ಕ್ ಮಾಡದೇ ಕಳ್ಳ ಬೀಳುತ್ತಿದ್ದೆ. ಒಂದು ದಿನ ಹೋಂ ವರ್ಕ ಮಾಡದೇ ಇರುವ ಕಾರಣ ಹಲವು ವಿದ್ಯಾರ್ಥಿಗಳನ್ನು ಕ್ಲಾಸಿನಿಂದ ಹೊರಕ್ಕೆ ಹಾಕಿದ್ದರು. ನಾನೂ ಕೂಡ ಹೊರಕ್ಕೆ ಹೋಗಿದ್ದೆ. ಆ ದಿನಗಳಲ್ಲಿ ನನಗೆ ಹಿಂದಿ ಗೆ 25 ಕ್ಕೆ 24 ಮಾರ್ಕ್ಸುಗಳು ಬೀಳುವಷ್ಟು ಬುದ್ಧಿವಂತ. ನನ್ನನ್ನು ಹೊರಕ್ಕೆ ಕಳಿಸಿದ್ದ ಮೇಡಂ `ವಿನಯನ ಹೊರಕ್ಕೆ ಕಳಿಸಿದ್ನಾ ನಾನು.. ಏ ವಿನಯಾ.. ಬಾ ಒಳಕ್ಕೆ..' ಅಂದರು. ನಾನು ಹೋದೆ. `ನೀನು ಹೋಂ ವರ್ಕ್ ಮಾಡಿದ್ದೆ ಅಲ್ಲವಾ..?' ಎಂದರು. ನಾನು `ಇಲ್ಲ ಅಂದೆ...' `ಏನೋ.. ಧನವೇ... ಏನೋ ಅಂದಕಂಡಿದ್ದೆ ನಿನ್ನಾ.. ಹೋಗು.. ಹೋಗು ಹೊರಗೆ.. ನೆಡಿ..' ಎಂದು ಮತ್ತೆ ಬೆನ್ನಟ್ಟಿದ್ದರು.
ಈ ಮೇಡಂ ಹೊಡೆಯುತ್ತಿದ್ದರು. ಆ ಹೊಡೆತ ಮಾತ್ರ ಯಾರಿಗೂ ತಾಗುತ್ತಲೇ ಇರಲಿಲ್ಲ. ಅವರು ಹೊಡೆಯುತ್ತಿದ್ದಾಗ ಮಾತ್ರ ನಾವು ನೋವಾದಂತೆ ನಟಿಸಬೇಕಿತ್ತು. ನಾವು ಹಾಗೆ ನಟಿಸುತ್ತಿದ್ದೆವು ಕೂಡ. ಆದರೆ ಒಳಗೊಳಗೆ ನಗು. ಇಂತಹ ಮೇಡಂ ಹಿಂದಿ ಕಲಿಸಿದ ಪರಿಣಾಮ ಎಸ್.ಎಸ್.ಎಲ್.ಸಿ ಪ್ರಿಪ್ರೆಟರಿ ಪರೀಕ್ಷೆಯಲ್ಲಿ ನನಗೆ 100ಕ್ಕೆ 97 ಅಂಕಗಳು ಬಂದಿದ್ದವು. ಪಬ್ಲಿಕ್ ಪರೀಕ್ಷೆಯಲ್ಲಿ 88 ಅಂಕಗಳು ಬಂದಿದ್ದವು ಬಿಡಿ. ಪ್ರತಿ ವರ್ಷ ಹೈಸ್ಕೂಲಿನಲ್ಲಿ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದವು. ಅದರಲ್ಲಿ ಕಂಠಪಾಠ ಸ್ಪರ್ಧೆಯೂ ಒಂದು. ನಾನು 8, 9 ಹಾಗೂ 10 ಈ ಮೂರೂ ವರ್ಷ ಕಂಠಪಾಠ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿಕೊಂಡಿದ್ದೆ. ನನಗಿಂತ ಚಂದ ಮಾಡಿ ಹಿಂದಿ ಹಾಡುಗಳನ್ನು ಹಾಡುವವರು ನನ್ನ ಕ್ಲಾಸಿನಲ್ಲಿದ್ದರು. ರಾಗವಾಗಿ ಹಾಡುವವರೂ ಇದ್ದರು. ಆದರೆ ಯಾರೊಬ್ಬರೂ ಪೂರ್ತಿ ಹೇಳುತ್ತಿರಲಿಲ್ಲ. ಅಲ್ಲದೇ ಹಾಡಿನ ಮಧ್ಯ ಸುಮ್ಮ ಸುಮ್ಮನೆ ನಗುವುದು, ಮರೆತು ಹೋಗಿ ನಿಲ್ಲುವುದು ಇವನ್ನೆಲ್ಲ ಮಾಡುತ್ತಿದ್ದರು. ನಾನು ಉರು ಹೊಡೆದುಕೊಳ್ಳುತ್ತಿದ್ದ ಹಿಂದಿ ಕವಿತೆಯನ್ನು ಸ್ಫುಟವಾಗಿ ಹೇಳುತ್ತಿದ್ದೆ. ಹೀಗಾಗಿ ನನಗೆ ಮೊದಲ ಸ್ಥಾನ ಬರುತ್ತಿತ್ತು.
ಇಂತಹ ಸುಜಾತಾ ಮೇಡಮ್ಮಿಗೆ ನನ್ನದೇ ಕ್ಲಾಸಿನ ಹುಡುಗರು ಕೊಕ್ಕರೆ ಎನ್ನುವ ಹೆಸರನ್ನೂ ಇಟ್ಟಿದ್ದರು. ಉದ್ದವಿದ್ದ ಅವರಿಗೆ ಈ ಹೆಸರನ್ನು ಇಟ್ಟಿದ್ದಾರೆ ಎನ್ನುವುದು ನಂತರದ ದಿನಗಳಲ್ಲಿ ನನಗೆ ತಿಳಿದಿತ್ತು. ನನಗೆ ಈಗ ಸ್ವಲ್ಪವಾದರೂ ಹಿಂದಿ ಓದಲು, ಮಾತನಾಡಲು ಬರುತ್ತದೆ ಎಂದರೆ ಅದಕ್ಕೆ ಸುಜಾತಾ ಮೇಡಂ ಕಾರಣ. ಅವರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು ಬಿಡಿ. ಬಹುಶಃ ಸುಜಾತಾ ಮೇಡಂ ಈಗ ನಿವೃತ್ತಿಯಾಗಿರಬೇಕು ಎನ್ನಿಸುತ್ತದೆ. ಎಲ್ಲಿದ್ದಾರೋ ಗೊತ್ತಿಲ್ಲ. ಅವರು ಚನ್ನಾಗಿರಲಿ.
(ಮುಂದುವರಿಯುತ್ತದೆ)

No comments:
Post a Comment