ಎದೆಯ ಬೃಂದಾವನದ
ಹಸಿರು ಹೂಗಿಡ ನೀನು,
ನನ್ನೊಳಗೆ ನೀನಿರಲು
ಬಾಳಿಗದು ಶೋಭೆ ||
ನನ್ನ ಬಯಕೆಯ ಮನದ
ಕಣ್ಣರೆಪ್ಪೆಯು ನೀನು,
ನನ್ನುಳಿಸೆ ನೀನಿರಲು
ಬಾಳಿಗದು ರಕ್ಷೆ ||
ನನ್ನ ಅಕ್ಷಿ ಆಳದೊಳು
ಕಿಡಿ ಕಾಂತಿ ನೀನು,
ಬದುಕೊಳಗೆ ನೀನಿರಲು
ಕಡೆಗೋಲು ಛಲ ||
ಒಡಲ ತಿಳಿ ನೀರಿನಲಿ
ಹಸಿರು ಹಾವಸೆ ನೀನು,
ನೀರೊಳಗೆ ನೀನಿರಲು
ಅಲ್ಲಹುದು ಸೃಷ್ಟಿ ||
-ವಿನಯ್ ದಂಟಕಲ್
ಹಾಯ್ ವಿನಯ್. ನಿಮ್ಮ ಬ್ಲಾಗ್ ಅಡ್ರೆಸ್ ನಾನು ಮತ್ತೆ ಮೂರ್ತಿ ಅಣ್ಣ ರಚಿಸಿದ ಹವ್ಯಕ ಬ್ಲಾಗಿಗರು ಕಮ್ಯೂನಿಟಿಯಲಿ ಕಂಡೆ.ಹಳೇ ಪೋಸ್ಟ ನೋಡಿದೆ, ಬ್ಲಾಗ್ ಚನ್ನಾಗಿದೆ. ಬರಿತಾ ಇರಿ.
ReplyDelete