ಕಾಲೇಜು ಎನ್ನುವುದೊಂದು ನಾಲೇಜಿನ ಜಗತ್ತು. ಎಲ್ಲ ವಿಷಯಗಳನ್ನು ಅರಿತುಕೊಳ್ಳುವ ಪ್ರಪಂಚ. ಇಂತಹ ಕಾಲೇಜು ಕೇವಲ ಓದಿಗೆ ಮಾತ್ರ ಸೀಮಿತವಾಗದಿರಲಿ. ರಚನಾತ್ಮಕ ಕಾರ್ಯಗಳು, ಸೃಜನಶೀಲತೆಯನ್ನು ಪ್ರಚುರಪಡಿಸಿಕೊಳ್ಳುವಲ್ಲಿ ಕಾಲೇಜು ವೇದಿಕೆಯಾಗಲಿ.
ಕಾಲೇಜು ಎಂದ ಮೇಲೆ ಓದು ಎಷ್ಟು ಮುಖ್ಯವೋ, ಅದರ ಜತೆ ಜತೆಯಲ್ಲಿಯೇ ನಾವು ಕೈಗೊಳ್ಳುವ ವಿವಿಧ ಕಾರ್ಯಗಳು, ರಚನಾತ್ಮಕ ಕೆಲಸಗಳು ಕೂಡ ಅಷ್ಟೇ ಮುಖ್ಯವಾಗುತ್ತವೆ. ಬರೀ ಓದು, ಮಾರ್ಕ್ಸ್, ರ್ಯಾಂಕ್ ಎಂದು ಬದುಕಿದವರಿಗಿಂತ, ಆವರೇಜ್ ಮಾರ್ಕ್ಸ್ ತೆಗೆದವರು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗಬಲ್ಲರು.
ಬರೀ ಓದಿ ಓದಿ ಪುಸ್ತಕದ ಹುಳುವಾಗಿ, ಸಮಾಜದ ನಡುವೆ ಫಸ್ಟ್ ರ್ಯಾಂಕ್ ರಾಜು ಆಗುವುದರ ಬದಲು, ಲಾಸ್ಟ ಬೇಂಚ್ ಹುಡುಗನಾಗಿ, ಕಾಲೇಜಿನ ರಸ ನಿಮಿಷಗಳನ್ನು, ಆ ದಿನಗಳ ಎಲ್ಲ ಸಂತಸಗಳನ್ನು ಸವಿಯುವವನು ಖುಷ್ ಖುಷಿಯಾಗಿ ಬದುಕುತ್ತಾನೆ. ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾನೆ.
ಹಾಗಾದರೆ ಓದು ಹೊರತು ಪಡಿಸಿ ಕಾಲೇಜು ಟೈಮಲ್ಲಿ ಏನೇನು ಮಾಡಬಹುದು? ಆಟೋಟವೋ, ಸಾಂಸ್ಕೃತಿಕ ಕಾರ್ಯಕ್ರಮಗಳೋ ಅಥವಾ ಇನ್ಯಾವುದೋ ಅಂಶಗಳು ಥಟ್ಟನೆ ನಿಮ್ಮ ಮನಸ್ಸಿನಲ್ಲಿ ಹಾದು ಹೋಗಬಹುದು. ಅವು ಮಾತ್ರವಲ್ಲ ಇನ್ನೂ ಹಲವು ಅಂಶಗಳಲ್ಲಿ ಕಾಲೇಜು ಹುಡುಗರು ತಮ್ಮನ್ನು ತಾವು ತೊಡಗಿಸಿಕೊಂಡು, ಪ್ರತಿಭೆಯನ್ನು, ವ್ಯಕ್ತಿತ್ವವನ್ನು ಪ್ರದರ್ಶಿಸಬಹುದು. ರೂಪಿಸಿಕೊಳ್ಳಬಹುದು. ಅಂತಹ ಕೆಲವು ಸಂಗತಿಗಳ ಬಗ್ಗೆ ಕಣ್ಣು ಹಾಯಿಸೋಣ ಬನ್ನಿ.
ಪಠ್ಯಕ್ಕೆ ಅಂಟಿಕೊಳ್ಳುವುದರಿಂದ ಆಗುವ ಅಪಾಯಗಳು
ಕೇವಲ ಪಠ್ಯಕ್ಕೆ, ಓದಿಗೆ ಅಂಟಿಕೊಂಡರೆ ಬದುಕಿನಲ್ಲಿ ಪಾಯ ಉಂಟಾಗುವುದೇ ಅಧಿಕ. ಕೇವಲ ಪಠ್ಯಕ್ಕೆ ಅಂಟಿಕೊಂಡವರಲ್ಲಿ ಹೆಚ್ಚಿನ ಜನರು ನಂತರ ಬದುಕಿನಲ್ಲಿ ಕಳೆದೇ ಹೋಗಿದ್ದಾರೆ. ಜೀವನವನ್ನು ಸಮರ್ಪಕವಾಗಿ ಕಟ್ಟಿಕೊಳ್ಳಲು ಎಡವಿದ್ದಾರೆ. ಸಮಾಜದ ನಡುವೆ ಬಾಳಿ ಬದುಕಲು ಒದ್ದಾಡಿ, ಬದುಕನ್ನು ಅಂತ್ಯಗೊಳಿಸಿಕೊಂಡವರೂ ಇದ್ದಾರೆ. ಕೇವಲ ಪಠ್ಯಕ್ಕೆ ಅಂಟಿಕೊಂಡವರು ಫಸ್ಟ್ ರ್ಯಾಂಕ್ ರಾಜುಗಳಾಗಿ ಬದುಕನ್ನು ಕಾಮೆಡಿ ಮಾಡಿಕೊಂಡವರೂ ಅನೇಕರು ನಮ್ಮ ಮುಂದೆಯೇ ನಿದರ್ಶನಗಳಾಗಿದ್ದಾರೆ. ಪಠ್ಯದ ಹುಳುಗಳು ನಾಲ್ಕು ಜನರ ನಡುವೆ ಬೆರೆಯುವುದಕ್ಕೆ ಸಾಧ್ಯ ವಾಗದೇ ಬವಣೆ ಪಡುವುದನ್ನು ನೋಡಿದ್ದೇವೆ. ಅಷ್ಟೇ ಅಲ್ಲದೇ ಬದುಕಿನಲ್ಲಿ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ಅದಕ್ಕೆ ಇತರರ ನೆರವಿಲ್ಲದೆಯೇ, ಸ್ವತಂತ್ರವಾಗಿ ತೆಗೆದುಕೊಂಡಿದ್ದಂತೂ ಇಲ್ಲವೇ ಇಲ್ಲ ಬಿಡಿ. ಬರೀ ಪಠ್ಯದ ಹುಳುವಾಗುವುದು ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಹೀಗಾಗಿ ಪಠ್ಯದಿಂದ ಆಚೆಗೂ ಇಣುಕುವ ಪ್ರಯತ್ನ ಮಾಡಿದಾಗ ಬದುಕು ಸುಂದರವಾಗಬಲ್ಲದರು.
ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ
ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಪ್ರತಿಯೊಬ್ಬರ ಬದುಕಿನಲ್ಲಿ ಪಠ್ಯದಷ್ಟೇ ಬಹಳ ಮುಖ್ಯ. ಆಟೋಟ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮೈಮನಗಳನ್ನು ತಿಳಿಯಾಗಿಸಬಲ್ಲದು. ಆಟೋಟಗಳು ದೇಹಕ್ಕೆ ಹಿತಕಾರಿ, ಆರೋಗ್ಯಕಾರಿ. ಆಟೋಟಗಳಲ್ಲಿ ಪಾಲ್ಗೊಳ್ಳದೇ ಇರುವುದು, ದೇಹಕ್ಕೆ ವ್ಯಾಾಯಾಮಗಳನ್ನು ನೀಡದೇ ಇರುವುದು ಅನಾರೋಗ್ಯಗಳಿಗೆ ಅವಕಾಶ ನೀಡದಂತೆ. ಕ್ರಿಕೆಟ್, ಓಟ, ಷಟಲ್ ಬ್ಯಾಡ್ಮಿಿಂಟನ್ ಹೀಗೆ ಹಲವು ಕ್ರೀಡೆಗಳಲ್ಲಿ ಭಾಗವಹಿಸಿದರೆ ದೇಹಗಳಿಗೆ ರೀಲ್ಯಾಕ್ಸ್ ಸಿಗುತ್ತದೆ. ಇನ್ನು ಚದುರಂಗ (ಚೆಸ್) ನಂತರ ಮೈಂಡ್ ಗೇಮುಗಳು ನಮ್ಮ ಮನಸ್ಸನ್ನು ಚುರುಕಾಗಿಸುತ್ತದೆ. ಕಾಲೇಜು ದಿನಗಳಲ್ಲಿ ಓದು ಎಷ್ಟು ಅಗತ್ಯವೋ, ಇಂತಹ ಆಟೋಟಗಳಲ್ಲಿ ಭಾಗವಹಿಸುವುದೂ ಕೂಡ ಅಷ್ಟೇ ಮುಖ್ಯ.
ಇನ್ನು ವಿವಿಧ ಆಟಗಳಲ್ಲಿ, ಓಟದಂತಹ ಸ್ಪರ್ಧೆಗಳಲ್ಲಿ ಕಾಲೇಜುಗಳನ್ನು ಪ್ರತಿನಿಸುವುದೂ ಕೂಡ ಬಹಳ ಹೆಮ್ಮೆಯ ಸಂಗತಿಯೇ ಸರಿ. ಯಾವ್ಯಾವುದೋ ಕಾಲೇಜುಗಳಿಗೆ ಸ್ಪರ್ಧೆಗಳಿಗಾಗಿ ತೆರಳಿ, ಆ ಕಾಲೇಜಿನ ಅಂಗಳದಲ್ಲಿ ನಮ್ಮ ಕಾಲೇಜನ್ನು ಪ್ರತಿನಿಸಿ ಗೆಲುವು ಸಾಸುವ ಸಂದರ್ಭದಲ್ಲಿ ನೀಡುವಂತಹ ಖುಷಿ ಓದಿ ರ್ಯಾಂಕ್ ಪಡೆದಾಗ ನೀಡುವ ಖುಷಿಗಿಂತ ಹೆಚ್ಚು. ಇನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಬ್ಲೂ ಆಗಿ ಹೊರಹೊಮ್ಮಿದಾಗಲಂತೂ ಆಗುವ ಸಂತಸ, ಸಂಭ್ರಮಕ್ಕೆ ಪಾರವೇ ಇಲ್ಲ ಬಿಡಿ.
ಸಾಂಸ್ಕೃತಿಕ ರಂಗದಲ್ಲಿ ತೊಡಗಿಸಿಕೊಳ್ಳುವಿಕೆ
ಕ್ರೀಡೆಗಳಷ್ಟೇ ಕಾಲೇಜು ದಿನಗಳಲ್ಲಿ ಬಹು ಮುಖ್ಯವಾಗುದು ಸಾಂಸ್ಕೃತಿಕ ರಂಗ. ಕಾಲೇಜಿನ ಮಟ್ಟದಲ್ಲಿ ಯಾವುದೋ ನಾಟಕವೋ, ಹಾಡೋ, ನೃತ್ಯದಲ್ಲೋ ಪಾಲ್ಗೊಳ್ಳುವ ಮೂಲಕ ನಮ್ಮೊಳಗಿನ ಸಾಂಸ್ಕೃತಿಕ ಪ್ರತಿಭೆಯನ್ನು ಒರೆಗೆ ಹಚ್ಚುವುದೂ ಕೂಡ ಬಹುಮುಖ್ಯ. ಕಾಲೇಜು ದಿನಗಳಲ್ಲಿಯೇ ತಮ್ಮ ಸಾಂಸ್ಕೃತಿಕ ಶಕ್ತಿಯನ್ನು ನಾಲ್ಕು ಜನರ ಮುಂದೆ ಪ್ರದರ್ಶನ ಮಾಡುವ ಮೂಲಕ, ಬದುಕನ್ನು ಬದಲಿಸಿಕೊಂಡವರು ಹಲವರು. ಸಾಂಸ್ಕೃತಿಕ ರಂಗದಲ್ಲಿ ಕಣ್ಮಣಿಯಾಗಿ ಮೆರೆದವರೂ ಅನೇಕ ಜನರಿದ್ದಾರೆ. ಇಂತಹ ಸಾಂಸ್ಕೃತಿಕ ವಲಯದಲ್ಲಿ ಕಾಲೇಜು ವಿದ್ಯಾಾರ್ಥಿಗಳು ಮಿಂಚುವ ಮೂಲಕ ಕಾಲೇಜನ್ನು, ವಿಶ್ವವಿದ್ಯಾಲಯವನ್ನು ಪ್ರತಿನಿಸಿದಾಗಲೂ ಸಿಗುವ ಸಂತಸ, ಸಂಭ್ರಮ ಅನಿರ್ವಚನೀಯವಾದುದು.
ಸಾಮಾಜಿಕ ಕಾರ್ಯಗಳು
ಓದು, ಕ್ರೀಡೆ, ಸಾಂಸ್ಕೃತಿಕ ರಂಗದಲ್ಲಿ ಪಾಲ್ಗೊಳ್ಳುವುದರ ನಡುವೆ ಸಾಮಾಜಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಅವಕಾಶ ಬಹಳ ಇದೆ. ಇಂತಹ ಸಾಮಾಜಿಕ ಕಾರ್ಯಗಳು, ಮುಂದಿನ ಬದುಕಿನಲ್ಲಿ ಬಹುದೊಡ್ಡ ತಿರುವನ್ನು ನೀಡುತ್ತವೆ. ಜತೆಗೆ ವ್ಯಕ್ತಿತ್ವವನ್ನು ನಿರೂಪಿಸುತ್ತವೆ. ಎನ್‌ಸಿಸಿ, ಎನ್‌ಎಸ್‌ಎಸ್‌ನಂತಹ ಕಾರ್ಯಗಳು ಕಾಲೇಜು ದಿನಗಳಲ್ಲಿ ಇಂತಹ ಸಾಮಾಜಿಕ ಕಾರ್ಯಗಳಿಗಾಗಿಯೇ ಮೀಸಲಾಗಿದೆ. ಎನ್‌ಸಿಸಿಯು ಮುಂದಿನ ಬದುಕಿನಲ್ಲಿ ದೇಶಸೇವೆ, ಸೈನ್ಯ ಸೇರುವಿಕೆಯಂತಹ ಹಲವು ಅವಕಾಶಗಳನ್ನು ತೆರೆದಿಡುತ್ತದೆ. ಅಲ್ಲದೇ ನಾಯಕತ್ವ ಗುಣವನ್ನೂ ಕೂಡ ಬೆಳೆಸುತ್ತದೆ. ಎನ್‌ಎಸ್‌ಎಸ್ ಕೂಡ ಬದುಕನ್ನು ವಿಭಿನ್ನ ರೀತಿಯಲ್ಲಿ, ವಿಶಿಷ್ಟವಾಗಿ ಕಟ್ಟಿಕೊಡುತ್ತದೆ. ಸಮಾಜವನ್ನು ಬದಲಾಯಿಸುವ ಅವಕಾಶವನ್ನು ನೀಡುತ್ತದೆ. ಎನ್‌ಸಿಸಿ ಕ್ಯಾಾಂಪುಗಳಂತೂ ನಾಯಕತ್ವ ಗುಣವನ್ನು ಬೆಳೆಸುವುದರ ಜತೆಗೆ ಸಮಾಜದ ನಡುವೆ ನಮ್ಮ ಬೆಲೆಯನ್ನು ಹೆಚ್ಚಿಸುತ್ತವೆ. ಗ್ರಾಮಾಭ್ಯುದಯ , ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ಹೀಗೆ ವಿವಿಧ ರಂಗದಲ್ಲಿ ಬೆಳವಣಿಗೆಗೂ ಎನ್‌ಎಸ್‌ಎಸ್ ಕಾರಣವಾಗುತ್ತದೆ.
ಕಾಲೇಜು ದಿನಗಳಲ್ಲಿ ಓದುವುದರ ಜತೆ ಜತೆಯಲ್ಲಿಯೇ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡಬಹುದು. ಕಿರುಚಿತ್ರಗಳನ್ನು ನಿರ್ಮಿಸಬಹುದು, ಪತ್ರಿಕೆಗಳಿಗೆ ಬರಹಗಳನ್ನು ಬರೆಯಬಹುದು. ಸದೃಢ ಆರೋಗ್ಯಕ್ಕಾಗಿ ಯೋಗದಂತಹ ತರಗತಿಗಳನ್ನು ನಡೆಸಬಹುದು. ಸ್ವತಃ ನಾವೂ ಕೂಡ ಯೋಗಾಸನಗಳನ್ನು ನಡೆಸಿ ನಮ್ಮ ಮೈಮನಗಳನ್ನು ತಿಳಿಯಾಗಿರಿಸಿಕೊಳ್ಳಬಹುದು. ಯಾವುದೋ ವಾಹಿನಿಗಳಲ್ಲಿ ಆಂಕರ್ ಆಗಬಹುದು. ಅಷ್ಟೇ ಏಕೆ ಕಾಲೇಜು ಕಾರ್ಯಕ್ರಮಗಳಲ್ಲಿಯೂ ಉತ್ತಮ ನಿರೂಪಕರಾಗಿ ಎಲ್ಲರ ಮನವನ್ನು ಗೆಲ್ಲಬಹುದು.
ಪಾರ್ಟ್ ಟೈಂ ಕಾರ್ಯಗಳು
ಕಾಲೇಜು ಓದಿನ ಜತೆ ಜತೆಯಲ್ಲಿಯೇ ಪಾರ್ಟ್ ಟೈಂ ಕೆಲಸ ಮಾಡಿಕೊಂಡು ಬದುಕು ನಡೆಸಿದವರು ಹಲವರಿದ್ದಾರೆ. ತಮ್ಮ ಬದುಕಿನ ಅನ್ನವನ್ನು ತಾವೇ ಕಂಡುಕೊಂಡವರೂ ಇದ್ದಾರೆ. ಬಿಡುವಿನ ವೇಳೆಯಲ್ಲಿ ಯಾವುದೋ ಕಾರ್ಯಗಳನ್ನು ನಡೆಸಿ ಪಾಕೆಟ್ ಮನಿಯನ್ನು ಮಾಡಿಕೊಂಡವರಿದ್ದಾರೆ. ಇಂತಹ ವ್ಯಕ್ತಿಗಳು ಮನಿ ಮ್ಯಾನೇಜ್‌ಮೆಂಟನ್ನು ಹೆಚ್ಚು ತಿಳಿದುಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳು ಬದುಕಿನಲ್ಲಿ ಸಾಕಷ್ಟು ಯಶಸ್ವಿಯಾಗಬಲ್ಲರು.
ಲವ್ ಮಾಡಿ ನೋಡು..
ಕಾಲೇಜು ಬದುಕಿನಲ್ಲಿ ಪ್ರೀತಿ-ಪ್ರೇಮ-ಪ್ರಣಯ ಸಹಜ. ಪ್ರತಿಯೊಬ್ಬನಿಗೂ, ಪ್ರತಿಯೊಬ್ಬಳಿಗೂ ಕೂಡ ಪ್ರೀತಿ ಎಂಬುದು ಚಿಗುರೊಡೆದೇ ಇರುತ್ತದೆ. ಯಾರೋ ಒಬ್ಬರು ಅವನ/ಳ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡೇ ಇರುತ್ತಾಾರೆ. ಅವರವರಿಗೆ ಅರಿವಿಲ್ಲದಂತೆಯೇ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡು ಭದ್ರವಾಗಿ ನೆಲೆಯೂರಿ ನಿಂತಿರುತ್ತಾರೆ. ಕೆಲವರು ತಮ್ಮೊಳಗಿನ ಸುಪ್ತ ಪ್ರೀತಿಯನ್ನು ಅವನ/ಳ ಬಳಿ ಹೇಳಿಕೊಂಡರೆ ಇನ್ನೂ ಹಲವರು ಹೇಳಿಕೊಳ್ಳದೇ ತೊಳಲಾಡುತ್ತಿರುತ್ತಾರೆ. ಹಲವರಿಗೆ ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮ ಎನ್ನುವುದು ತಪ್ಪು. ಆದರೆ ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮದಲ್ಲಿ ಇದ್ದೂ ಬದುಕನ್ನು ಸುಂದರವಾಗಿ ಕಟ್ಟಿಕೊಂಡವರು ನಮ್ಮ ನಡುವೆಯೇ ಉದಾಹರಣೆಯಾಗಿ ನಿಂತಿದ್ದಾರೆ.
ಲಾಸ್ಟ ಲೈನ್ಸ್
ಕಾಲೇಜು ಹುಡುಗ್ರಾ. . . ಹುಡುಗೀರ್ರಾ . . . ಬರೀ ಓದು ಓದು ಎಂದು ಓದುಗುಳಿಯಾಗಬೇಡಿ. ಓದಿನ ಜತೆಗೆ ಇತರ ಹಲವು ಸಂಗತಿಗಳು ಜಗತ್ತಿನಲ್ಲಿ ಸುಂದರವಾಗಿದೆ. ಅದರ ಕಡೆಗೂ ಗಮನ ಹರಿಸಿ. ಕಾಲೇಜು ದಿನಗಳಲ್ಲಿ ಓದಿನ ಜತೆ ಜತೆಯಲ್ಲಿಯೇ ಪಡೆದುಕೊಳ್ಳುವ ಇತರ ಖುಷಿಗಳು ಬದುಕಿನಾದ್ಯಂತ ನೆನಪಿನಲ್ಲಿ ಇರುತ್ತವೆ. ಇವನ್ನು ಒಮ್ಮೆ ತಪ್ಪಿಸಿಕೊಂಡರೆ ಮತ್ತೆ ಎಷ್ಟು ಪರಿತಪಿಸಿದರೂ ಸಿಗಲಾರದು. ಹೀಗಾಗಿ ಹೇಳೋದಿಷ್ಟೆ.. . ಜಸ್ಟ್ ಹ್ಯಾಪಿಯಾಗಿರಿ..